ವಜೀರಿಥಾಲ್: ಕತ್ತಲೆ ಕೂಪದಲ್ಲಿ ಆರೋಗ್ಯ ಸೇವೆ
ಜಮ್ಮು ಮತ್ತು ಕಾಶ್ಮೀರದ ಬಂಡೀಪೋರ್ ಜಿಲ್ಲೆಯ ನಿರ್ಜನ ಹಳ್ಳಿಯಲ್ಲಿ ಗರ್ಭಿಣಿಯರು ಅನಿಯಮಿತ ವಿದ್ಯುತ್ ಪೂರೈಕೆ ಮತ್ತು ಕಳಪೆ ಸಾರ್ವಜನಿಕ ಆರೋಗ್ಯ ಸೌಲಭ್ಯಗಳೊಂದಿಗೆ ಹೆಣಗಾಡುತ್ತಿದ್ದಾರೆ. ಅವರಿಗಿರುವಏಕೈಕ ಭರವಸೆಯೆಂದರೆ ಹಳ್ಳಿಯ ಹಿರಿಯ ದಾಯಿ



ಜಮ್ಮು ಮತ್ತು ಕಾಶ್ಮೀರದ ಬಂಡೀಪೋರ್ ಜಿಲ್ಲೆಯ ನಿರ್ಜನ ಹಳ್ಳಿಯಲ್ಲಿ ಗರ್ಭಿಣಿಯರು ಅನಿಯಮಿತ ವಿದ್ಯುತ್ ಪೂರೈಕೆ ಮತ್ತು ಕಳಪೆ ಸಾರ್ವಜನಿಕ ಆರೋಗ್ಯ ಸೌಲಭ್ಯಗಳೊಂದಿಗೆ ಹೆಣಗಾಡುತ್ತಿದ್ದಾರೆ. ಅವರಿಗಿರುವಏಕೈಕ ಭರವಸೆಯೆಂದರೆ ಹಳ್ಳಿಯ ಹಿರಿಯ ದಾಯಿ
ಮುರ್ಷಿದಾಬಾದ್ ಜಿಲ್ಲೆಯ ಬೀಡಿ ಕಟ್ಟುವ ಕಡು ಬಡ ಮಹಿಳೆಯರು ಅತ್ಯಲ್ಪ ಸಂಬಳದ ಕೆಲಸಕ್ಕಾಗಿ ತಮ್ಮ ಆರೋಗ್ಯವನ್ನೇ ಬಲಿ ನೀಡುತ್ತಿದ್ದಾರೆ. ತಂಬಾಕಿನೊಡನೆ ನಿರಂತರ ಸಂಪರ್ಕದಲ್ಲಿರುವುದು ಅವರ ಸಾಮಾನ್ಯ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ
ಉತ್ತರಾಖಂಡದ ಉಧಮ್ ಸಿಂಗ್ ನಗರ್ ಜಿಲ್ಲೆಯಲ್ಲಿ, ಋತುಸ್ರಾವ ಮತ್ತು ಹೆರಿಗೆಯ ಸಮಯದಲ್ಲಿ ತಮ್ಮ ಮೇಲೆ ಹೇರಲಾಗುವ ಆಳವಾದ ಪೂರ್ವಾಗ್ರಹಗಳು ಮತ್ತು ಕಷ್ಟಗಳ ಬಗ್ಗೆ ಮಹಿಳೆಯರು ಮಾತನಾಡುತ್ತಾರೆ
ಹಿಮಾಚಲ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟುಕುವ ವೈದ್ಯಕೀಯ ಸೇವೆಗಳು ಮತ್ತು ಕಾರ್ಯಸಮರ್ಥ ಸಮುದಾಯ ಆರೋಗ್ಯ ಕೇಂದ್ರಗಳ ಅನುಪಸ್ಥಿತಿಯಲ್ಲಿ ಇಲ್ಲಿನ ಮಹಿಳೆಯರು ಗರ್ಭಿಣಿ ಆರೋಗ್ಯ ಮತ್ತು ಆರೋಗ್ಯಸಂಬಂಧಿ ಚಿಕಿತ್ಸೆಗಳಿಲ್ಲದೆ ಪರದಾಡುತ್ತಿದ್ದಾರೆ
ಕಡಿಮೆ ವೇತನ ಮತ್ತು ́ಹಸಿದುಳಿಯುವಂತೆ ಮಾಡುವ ಆಹಾರ ಪದ್ಧತಿಯʼಯು ಹಾವೇರಿ ಜಿಲ್ಲೆಯ ಈ ಗ್ರಾಮದಲ್ಲಿ ಮಹಿಳೆಯರ ಯೋಗಕ್ಷೇಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಜೊತೆಗೆ ಸರಿಯಾದ ಶೌಚ ವ್ಯವಸ್ಥೆಗಳಿಲ್ಲದಿರುವುದು ಮುಟ್ಟು ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಹಿಳೆಯರಿಗೆ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ
ಉದಯಪುರ ಜಿಲ್ಲೆಯ ಗಮೇತಿ ಸಮುದಾಯದ ಮನೆಯ ಗಂಡಸರು ಕಾರ್ಮಿಕರಾಗಿ ದೂರದ ಸೂರತ್, ಮುಂಬಯಿ ಮತ್ತು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದು, ಅವರು ಮನೆಯಲ್ಲೇ ಬಿಟ್ಟು ಹೋದ ಮಹಿಳೆಯರು ಸ್ವತಃ ತಾವೇ ಗರ್ಭನಿರೋಧಕ ಮತ್ತು ಮತ್ತು ಆರೋಗ್ಯ ರಕ್ಷಣೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ
ಹೆಚ್ಚು ಮಕ್ಕಳನ್ನು ಹೊಂದುವುದನ್ನು ತಡೆಯುವ ಸಲುವಾಗಿ ಸುನಿತಾ ದೇವಿ ಸುರಕ್ಷಿತ ಮತ್ತು ಸುಲಭ ಮಾರ್ಗವನ್ನು ಬಯಸಿದ್ದರು, ಆದರೆ ಕಾಪರ್-ಟಿ ವಿಫಲವಾದ ನಂತರ, ಗರ್ಭಪಾತವನ್ನು ಮಾಡಿಸಲು ಅವರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಖಾಸಗಿ ಆಸ್ಪತ್ರೆಗೆ ದೆಹಲಿ ಮತ್ತು ಬಿಹಾರದ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಕಾಯಿತು
ಗರ್ಭನಿರೋಧಕಗಳು ಮತ್ತು ಇತರ ಅಗತ್ಯ ವಸ್ತುಗಳ ಚೀಲದೊಂದಿಗೆ ಸದಾ ಸನ್ನದ್ಧರಿರುವ ಕಲಾವತಿ ಸೋನಿ ತನ್ನ ಸಮುದಾಯದ ಅನೇಕರಿಗೆ ವಿಶ್ವಾಸಾರ್ಹ ಸಹೇಲಿಯಾಗಿ (ಗೆಳತಿ) ಒದಗುತ್ತಾರೆ. ಅವರು ತನ್ನ ಅನೌಪಚಾರಿಕ ಸಂಭಾಷಣೆಗಳ ಮೂಲಕ ಅಮೇಥಿ ಜಿಲ್ಲೆಯ ಟಿಕಾರಿ ಗ್ರಾಮದ ಮಹಿಳೆಯರ ನಡುವೆ ಸಂತಾನೋತ್ಪತ್ತಿ ಹಕ್ಕುಗಳ ಸಂದೇಶವನ್ನು ಜೀವಂತವಾಗಿರಿಸಿದ್ದಾರೆ
ಬೀಡ್ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಿಸ್ಟೆರೆಕ್ಟಮಿಗೆ ಚಿಕಿತ್ಸೆಗೆ ಒಳಗಾಗಿರುವ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಶಸ್ತ್ರಚಿಕಿತ್ಸೆಯ ನಂತರದ ಆತಂಕ, ಖಿನ್ನತೆ, ದೈಹಿಕ ಕಾಯಿಲೆಗಳು ಮತ್ತು ಹಳಸಿದ ವೈವಾಹಿಕ ಸಂಬಂಧವನ್ನು ಸದ್ದಿಲ್ಲದೆ ನಿಭಾಯಿಸುತ್ತಿದ್ದಾರೆ
ಆ ಊರಿನಲ್ಲಿ ಹೊಳೆಯ ನೀರು ಹೆಚ್ಚು ಉಪ್ಪುಪ್ಪು, ಬಿರುಬಿಸಿಲಿನ ಬೇಸಿಗೆ, ಮತ್ತು ಇನ್ನು ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೆನ್ನುವುದು ಕನಸಿನ ಮಾತು. ಇವೆಲ್ಲವೂ ಸೇರಿ ಇಲ್ಲಿನ ಮಹಿಳೆಯರ ಬದುಕನ್ನು ಅನಾರೋಗ್ಯದ ಸುಳಿಯಲ್ಲಿ ಸಿಲುಕುವಂತೆ ಮಾಡಿವೆ
ಆಸ್ಪತ್ರೆಯ ಸಿಬ್ಬಂದಿಗಳಿಂದ ಶೋಷಣೆ ಮತ್ತು ಅವಮಾನಕ್ಕೊಳಗಾಗಿ, ಅವರ ಗೌಪ್ಯತೆಯನ್ನು ಉಲ್ಲಂಘಿಸಿದರು, ಲೈಂಗಿಕ ಕಾರ್ಯಕರ್ತೆಯರ ಅಸಮಾನ್ಯ ಕಳಂಕ ಅವರಿಗೆ ರಾಜಧಾನಿಯಲ್ಲೂ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಮಿತಿಯನ್ನು ಹೇರಿದೆ. ಈಗ ಈ ಮಹಾಮಾರಿಯು ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡಿದೆ
ಪಶ್ಚಿಮಿ ಸಿಂಗ್ ಭುಮ್ ಜಿಲ್ಲೆಯ ಒಳನಾಡಿನ ಹಳ್ಳಿಗಳಲ್ಲಿ ಮೂಲಸೌಕರ್ಯದ ಕೊರತೆ ಮತ್ತು ಕಳಪೆಯಾದ ಆರೋಗ್ಯ ವ್ಯವಸ್ಥೆಯು ಅಲ್ಲಿನ ಜನರನ್ನು ʼಗ್ರಾಮೀಣ ಮೆಡಿಕಲ್ ಪ್ರಾಕ್ಟೀಷನರ್ಗಳʼ ಮೊರೆಹೋಗುವಂತೆ ಮಾಡುತ್ತದೆ. ಮತ್ತು ಆರೋಗ್ಯವನ್ನು ನಂಬಿಕೆಯನ್ನಾಧರಿಸಿದ ವಿಷಯವನ್ನಾಗಿಸಿದೆ
ಮಹಾರಾಷ್ಟ್ರದ ಮೇಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲಿನ ಬುಡಕಟ್ಟು ನೆಲೆಗಳಲ್ಲಿ, ಸಾಂಪ್ರದಾಯಿಕ ಸೂಲಗಿತ್ತಿಯರಾದ ರೋಪಿ ಮತ್ತು ಚಾರ್ಕು ದಶಕಗಳಿಂದ ಇಲ್ಲಿನ ಮನೆಗಳಲ್ಲಿ ಹೆಂಗಸರಿಗೆ ಹೆರಿಗೆ ಮಾಡಿಸಿದ್ದಾರೆ. ಆದರೆ, ಈಗ ಇಬ್ಬರಿಗೂ ವಯಸ್ಸಾಗಿದ್ದು, ಅವರ ಪರಂಪರೆಯನ್ನು ಮುಂದೆ ಸಾಗಿಸಬಲ್ಲ ದೀಪಧಾರಿಗಳು ಕಾಣುತ್ತಿಲ್ಲ
ಉತ್ತರ ಪ್ರದೇಶ ವಾರಾಣಸಿ ಜಿಲ್ಲೆಯ ಮುಸಹರ್ ಮಹಿಳೆಯರ ಬದುಕನ್ನು ಹದಗೆಡಿಸುತ್ತಿರುವುದು ಕೇವಲ ಆರೋಗ್ಯ ಸೇವೆಗಳ ಪ್ರವೇಶದ ಕೊರತೆ ಮಾತ್ರವಲ್ಲ, ಅವರ ಆಯ್ಕೆಗಳನ್ನು ನಿರ್ಬಂಧಿಸುವ ಕಳಂಕ ಹೊರಿಸಲಾದ ಇತಿಹಾಸವೂ ಇದರಲ್ಲಿ ಪಾಲು ಪಡೆದಿದೆ
ಬಿಹಾರದ ಮಧುಬನಿ ಜಿಲ್ಲೆಯ ಬಡ ಕುಟುಂಬಗಳ ಮಹಿಳೆಯರು ತೀರಾ ಅಗತ್ಯದ ಸಮಯದಲ್ಲಿ ಆರೋಗ್ಯ ಸೇವೆಗಳನ್ನು ಪಡೆಯುವಾಗ ಅಡೆತಡೆಗಳನ್ನು ಎದುರಿಸುತ್ತಾರೆ. ಅವರಿಗೆ ಸೇವೆ ನೀಡುವ ಕೆಲವು ವ್ಯವಸ್ಥೆಗಳಲ್ಲಿನ ಸಣ್ಣ ಭ್ರಷ್ಟಾಚಾರವು ಅವರನ್ನು ಅಸಹಾಯಕ ಸ್ಥಿತಿಗೆದೂಡುತ್ತದೆ
ಇಲ್ಲಿ ಹೇಳಲಾಗಿರುವ ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಲಿರುವ ಸೋನು ಮತ್ತು ಮೀನಾರ ಕಥೆಯು ಪ್ರಯಾಗ್ ರಾಜ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ದಲಿತರ ಕಾಲೋನಿಗಳಲ್ಲಿ ಬದುಕುತ್ತಿರುವ ಎಲ್ಲಾ ಹದಿಹರೆಯದ ಹೆಣ್ಣುಮಕ್ಕಳ ಕಥೆಯೂ ಹೌದು
ಬಡತನ, ಅನಕ್ಷರತೆ ಮತ್ತು ತಮ್ಮ ಬದುಕಿನ ಮೇಲಿನ ನಿಯಂತ್ರಣದ ಕೊರತೆಯಿಂದಾಗಿ, ಬಿಹಾರದ ಗಯಾ ಜಿಲ್ಲೆಯ ವಿವಿಧ ವರ್ಗಗಳ ಮಹಿಳೆಯರ ಆರೋಗ್ಯವು ಅಪಾಯದಲ್ಲಿದೆ
ಹೆರಿಗೆಯ ನಂತರ ದೀಪಾ ದೆಹಲಿಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ, ಅವರಿಗೆ ತನ್ನ ದೇಹದೊಳಗೆ ಕಾಪರ್-ಟಿ ಆಳವಡಿಸಲಾಗಿದೆಯೆನ್ನುವುದು ತಿಳಿದಿರಲಿಲ್ಲ. ಎರಡು ವರ್ಷಗಳ ನಂತರ, ನೋವು ಮತ್ತು ರಕ್ತಸ್ರಾವ ಆರಂಭವಾದಾಗ, ವೈದ್ಯರಲ್ಲಿಗೆ ಹೋದರೆ ಅಲ್ಲಿ ಅವರಿಗೆ ತಿಂಗಳುಗಳ ಕಾಲ ಸಾಧನವನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ
ಮುಚ್ಚಿರುವ ಸಾರ್ವಜನಿಕ ಶೌಚಾಲಯಗಳು, ದೂರದಲ್ಲಿರುವ ಬ್ಲಾಕ್ಗಳು, ಪರದೆಗಳಿಂದ ಮುಚ್ಚಿದ ಸಣ್ಣ ಕೊಠಡಿಯಂತಹ ಶೌಚಾಲಯಗಳು, ಸ್ನಾನ ಮತ್ತು ಸ್ಯಾನಿಟರಿ ಪ್ಯಾಡ್ಗಳ ಬಳಕೆ ಮತ್ತು ವಿಲೇವಾರಿಗೆ ಗೌಪ್ಯತೆಯ ಕೊರತೆ, ಶೌಚಕ್ಕೆ, ಪ್ಯಾಡ್ ಬದಲಾಯಿಸಲು ರಾತ್ರಿ ರೈಲ್ವೆ ಹಳಿಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ: ಇವೆಲ್ಲವೂ ಪಾಟ್ನಾದ ಕೊಳೆಗೇರಿಗಳಲ್ಲಿನ ವಲಸೆ ಕುಟುಂಬಗಳ ಹುಡುಗಿಯರು ಎದುರಿಸುತ್ತಿರುವ ಕೆಲವು ದೈನಂದಿನ ಸಮಸ್ಯೆಗಳು
ಅಂತರ್ಜಲದಲ್ಲಿ ಆರ್ಸೆನಿಕ್ ಅಂಶವನ್ನು ಹೊಂದಿರುವ ಬಿಹಾರದ ಹಳ್ಳಿಗಳಲ್ಲಿ, ಪ್ರೀತಿಯವರಂತಹ ಕುಟುಂಬಗಳ ಪುರುಷರು ಮತ್ತು ಮಹಿಳೆಯರು ಇಬ್ಬರನ್ನೂ ಕ್ಯಾನ್ಸರ್ನಿಂದಾಗಿ ಕಳೆದುಕೊಂಡಿವೆ, ಮತ್ತು ಅವರಿಗೂ ಸ್ತನದಲ್ಲಿ ಗಡ್ಡೆಯಾಗಿದೆ. ಆದರೆ ಇಲ್ಲಿನ ಮಹಿಳೆಯರು ಚಿಕಿತ್ಸೆ ಪಡೆಯುವಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಾರೆ
ಶಾಂತಿ ಮಾಂಝಿ ಬಿಹಾರದ ಶಿಯೋಹರ್ ಜಿಲ್ಲೆಯ ತನ್ನ ಮುಸಹರ್ ಸಮುದಾಯದ ಹಾಡಿಯಲ್ಲಿನ ಮನೆಯಲ್ಲೇ ಏಳು ಮಕ್ಕಳಿಗೆ ಜನ್ಮ ನೀಡಿದ್ದಾರೆ, ಇಲ್ಲಿ ಕೆಲವರಿಗಷ್ಟೇ ಆರೋಗ್ಯ ಸೇವೆಗಳಿಗೆ ಪ್ರವೇಶವಿದೆ ಮತ್ತು ಇಲ್ಲಿ ಹೆರಿಗೆಗೆ ಸಹಾಯ ಮಾಡಬಲ್ಲ ಪಿಎಚ್ಸಿ ಇದೆಯೋ - ಇಲ್ಲವೋ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ
ಬಿಹಾರದ ಪಾಟ್ನಾ ಜಿಲ್ಲೆಯ ವಿವಾಹಿತ ಬಾಲಕಿಯರು ಮತ್ತು ಯುವತಿಯರಿಗೆ ಗಂಡು ಮಗು ಹುಟ್ಟುವ ತನಕವೂ ಮಕ್ಕಳನ್ನು ಹೆರುತ್ತಲೇ ಇರಬೇಕಾಗುತ್ತದೆ. ಅವರಿಗೆ ಇದರಿಂದ ಹೊರಬರುವ ದಾರಿಗಳೇ ಇಲ್ಲ. ಇಲ್ಲಿನ ಸಾಮಾಜಿಕ ರೂಢಿಗಳು ಮತ್ತು ಪೂರ್ವಗ್ರಹಗಳು ಕಾನೂನು ಮತ್ತು ನಿಯಮಗಳ ಮೇಲೇರಿ ಸವಾರಿ ಮಾಡುತ್ತಿವೆ
ದೇವರಿಗೆ ಅಪಚಾರವಾಗುವ ಭಯ ಮತ್ತು ಸಾಮಾಜಿಕ ಕಳಂಕದ ಭಯ ಕರ್ನಾಟದ ಕಾಡುಗೊಲ್ಲ ಸಮುದಾಯದ ಮಹಿಳೆಯರು ತಮ್ಮ ಮುಟ್ಟಿನ ದಿನಗಳು ಮತ್ತು ಹೆರಿಗೆಯ ನಂತರದ ದಿನಗಳನ್ನು ಮರಗಳಡಿ ಮತ್ತು ಗುಡಿಸಲಿನಲ್ಲಿ ಕಳೆಯುವ ಹಾಗೆ ಮಾಡಿವೆ. ಕಾನೂನು, ಅಭಿಯಾನಗಳು ಮತ್ತು ವೈಯಕ್ತಿಕ ಪ್ರತಿರೋಧದ ಹೊರತಾಗಿಯೂ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ
ತಮ್ಮ ‘ಶಾಶ್ವತ’ ಗ್ರಾಹಕರನ್ನು ಮೆಚ್ಚಿಸುವ ಸಲುವಾಗಿ ಚಿಕ್ಕ ವಯಸ್ಸಿನಲ್ಲಿಯೇ ಗರ್ಭಿಣಿಯರಾಗುವ ಬಿಹಾರದ ಮುಜಾಫರಪುರ ಜಿಲ್ಲೆಯ ಚತುರ್ಭುಜ್ ಸ್ತಾನ್ ವೇಶ್ಯಾಗೃಹದ ಲೈಂಗಿಕ ಕಾರ್ಯಕರ್ತೆಯರು ಕೋವಿಡ್ -19 ಲಾಕ್ಡೌನ್ಗಳಿಂದ ಬಹಳ ತೊಂದರೆಗೀಡಾಗಿದ್ದಾರೆ
ಒಡಿಶಾದ ಮಲ್ಕನ್ಗಿರಿ ಜಲಾಶಯ ಪ್ರದೇಶದ ಆದಿವಾಸಿ ಹಾಡಿಗಳಲ್ಲಿ, ದಟ್ಟವಾದ ಕಾಡುಗಳು, ಎತ್ತರದ ಬೆಟ್ಟಗಳು ಮತ್ತು ಸರ್ಕಾರ-ಬಂಡುಕೋರರ ಸಂಘರ್ಷ ಒಂದೆಡೆಯಾದರೆ, ಅನಿಯಮಿತ ದೋಣಿ ಸೇವೆಗಳು ಮತ್ತು ಕಚ್ಚಾ ರಸ್ತೆಗಳಲ್ಲೇ ಅಲ್ಲಿನ ಜನರು ಲಭ್ಯವಿರುವ ಅಲ್ಪ ಆರೋಗ್ಯ ಸೇವೆಯನ್ನು ತಲುಪಬೇಕಾಗಿದೆ
ಕಳೆದ ವರ್ಷದ ಲಾಕ್ಡೌನ್ ಸಮಯದಲ್ಲಿ ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ, ಅನೇಕ ಹದಿಹರೆಯದ ಹುಡುಗಿಯರನ್ನು ಹಳ್ಳಿಗೆ ಮರಳಿದ ವಲಸೆ ಕಾರ್ಮಿಕರಿಗೆ ಮದುವೆ ಮಾಡಿಕೊಡಲಾಯಿತು. ಅವರಲ್ಲಿ ಹಲವರು ಈಗ ಗರ್ಭಿಣಿಯಾಗಿದ್ದಾರೆ ಹಾಗೂ ಮುಂದೇನು ಎನ್ನುವ ಚಿಂತೆಯಲ್ಲಿದ್ದಾರೆ
ಒಂದು ದಶಕದ ಹಿಂದೆ, ಬಿಹಾರದ ಹಸನ್ ಪುರ ಗ್ರಾಮದಲ್ಲಿ ಕುಟುಂಬ ಯೋಜನೆ ಕುರಿತು ಅಲ್ಲಿನ ಜನರು ನಿರ್ಲಕ್ಷ್ಯ ತೋರುತ್ತಿದ್ದರು. ಆದರೆ ಈಗ ಇಲ್ಲಿನ ಮಹಿಳೆಯರು ಗರ್ಭನಿರೋಧಕ ಚುಚ್ಚುಮದ್ದು ಪಡೆಯಲು ಸಲ್ಹಾ ಮತ್ತು ಶಮಾ ಎನ್ನುವ ಹೆಸರಿನ ಅಲ್ಲಿನ ಆರೋಗ್ಯ ಕಾರ್ಯಕರ್ತರ ಬಳಿಗೆ ಬರುತ್ತಿದ್ದಾರೆ. ಹಾಗಿದ್ದರೆ ಈ ಬದಲಾವಣೆ ಹೇಗೆ ಸಾಧ್ಯವಾಯಿತು?
ಬಿಹಾರದ ಕಿಶನ್ ಗಂಜ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಸ್ತ್ರೀರೋಗತಜ್ಞೆಯರ ಪಾಲಿಗೆ ದಿನಗಳು ದೀರ್ಘವಾಗಿರುತ್ತವೆ ಮತ್ತು ವೈದ್ಯಕೀಯ ಅವಶ್ಯಕತೆಗಳ ಪೂರೈಕೆಯ ಕೊರತೆಯಿರುತ್ತವೆ. ಇವೆರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅವರಿಗೆ ಕಷ್ಟಕರ ಕೆಲಸವಾಗಿದೆ, ಜೊತೆಗೆ ಅಲ್ಲಿಗೆ ಬರುವ ರೋಗಿಗಳು ನಿರಂತರ ಗರ್ಭಧಾರಣೆಗಳು ಮತ್ತು ಗರ್ಭನಿರೋಧಕಗಳನ್ನು ಬಳಕೆಗೆ ತೋರುವ ಹಿಂಜರಿಕೆಯನ್ನು ಸಹ ನಿಭಾಯಿಸಬೇಕು
ಗುಜರಾತ್ನ ಧೋಲ್ಕಾ ತಾಲ್ಲೂಕಿನ ಭರ್ವಾಡ್ ಪಶುಪಾಲನಾ ಸಮುದಾಯದ ಮಹಿಳೆಯರಿಗೆ, ಕುಟುಂಬದಲ್ಲಿ ಗಂಡು ಮಕ್ಕಳನ್ನು ಹೆರುವಂತೆ ಒತ್ತಡ ಹೇರಲಾಗುತ್ತದೆ ಮತ್ತು ಕೆಲವು ಕುಟುಂಬ ಯೋಜನೆ ಆಯ್ಕೆಗಳಾದ ಗರ್ಭನಿರೋಧಕ ಆಯ್ಕೆಗಳು ಮತ್ತು ಸಂತಾನೋತ್ಪತ್ತಿ ಹಕ್ಕುಗಳು ಇಲ್ಲಿ ಕೇವಲ ಪದಗಳಿಗೆ ಸೀಮಿತವಾಗಿವೆ
ಬಿಹಾರದ ಸಮಸ್ತಿಪುರ ಜಿಲ್ಲೆಯ ಮಹಾದಲಿತ್ ಸಮುದಾಯದ ಹದಿಹರೆಯದ ಹುಡುಗಿಯರು ಶಿಕ್ಷಣ ಪಡೆಯಲು ಹಲವು ಬಗೆಯ ಸಾಮಾಜಿಕ ನಿಂದನೆಗಳನ್ನು ಕೇಳಬೇಕಾಗುತ್ತದೆ, ಕೆಲವೊಮ್ಮೆ ದೈಹಿಕ ಹಿಂಸೆಯನ್ನೂ ಎದುರಿಸಬೇಕಾಗುತ್ತದೆ. ಕೆಲವು ಹುಡುಗಿಯರು ಇದೆಲ್ಲದರ ವಿರುದ್ಧ ತಿರುಗಿಬಿದ್ದು ತಮ್ಮ ಓದನ್ನು ಮುಂದುವರೆಸುತ್ತಾರೆ. ಆದರೆ ಉಳಿದವರು ಕೈಚೆಲ್ಲಿಬಿಡುತ್ತಾರೆ
ಬಿಹಾರದ ದರ್ಭಂಗಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಳ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ, ಅಲ್ಲಿನ ಆರೋಗ್ಯ ಕಾರ್ಯಕರ್ತರು ಕಚೇರಿಯಲ್ಲಿ, ವಾರ್ಡ್ನ ಹಾಸಿಗೆಯ ಮೇಲೆ ಮತ್ತು ಕೆಲವೊಮ್ಮೆ ನೆಲದ ಮೇಲೂ ಮಲಗಬೇಕಾದ ಪರಿಸ್ಥಿತಿಯಲ್ಲಿದ್ದಾರೆ
ವೈಶಾಲಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಅಲ್ಟ್ರಾಸೌಂಡ್ ಯಂತ್ರದಲ್ಲಿ ಜೇಡಗಳು ಬಲೆ ಹೆಣೆದಿವೆ, ಹಣ ನೀಡದೆ ಸಿಬ್ಬಂದಿ ಕೆಲಸ ಮಾಡುವುದಿಲ್ಲ, ಹುಟ್ಟಬೇಕಿರುವ ಮಗು ಹೊಟ್ಟೆಯಲ್ಲಿಯೇ ಸತ್ತಿದೆ ಎಂದು ಹೇಳುತ್ತಾರೆ - ಖಾಸಗಿ ಕ್ಲಿನಿಕ್ಗೆ ಹೋಗುವ ಅನಿವಾರ್ಯತೆಯನ್ನು ಸೃಷ್ಟಿಸಿ ಹೆರಿಗೆ ವೆಚ್ಚವನ್ನು ಹೆಚ್ಚಿಸುತ್ತಾರೆ
ಸದಾ ಕಾಡು ಪ್ರಾಣಿಗಳು ಅಲೆದಾಡುವ, ಕಡಿಮೆ ಸಿಬ್ಬಂದಿ ಹೊಂದಿರುವ ಪಿಎಚ್ ಸಿ, ಆಸ್ಪತ್ರೆಗಳ ಕುರಿತಾದ ಭಯ, ಕಳಪೆ ಫೋನ್ ಸಂಪರ್ಕ - ಇವೆಲ್ಲವೂ ಬಿಹಾರದ ಬರಗಾಂವ್ ಖುರ್ದ್ ಗ್ರಾಮದ ಗರ್ಭಿಣಿ ಮಹಿಳೆಯರು ತಪ್ಪದೆ ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವಂತೆ ನೋಡಿಕೊಳ್ಳುತ್ತವೆ
ಕಳೆದ ವರ್ಷ, ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರಾನೋ ಸಿಂಗ್ ಅವರು ಆಸ್ಪತ್ರೆ ಹೋಗುತ್ತಿರುವಾಗ ಅರ್ಧದಷ್ಟು ದೂರದಲ್ಲಿ ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿದರು, ಈ ಪ್ರದೇಶದಲ್ಲಿ ಭೂಪ್ರದೇಶ ಮತ್ತು ವೆಚ್ಚಗಳು ಪರ್ವತದಲ್ಲಿನ ಹಳ್ಳಿಗಳ ಅನೇಕರನ್ನು ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವ ಅನಿವಾರ್ಯತೆಗೆ ದೂಡುತ್ತಿವೆ
ರಾಜಸ್ಥಾನದ ಬನ್ಸಿ ಗ್ರಾಮದ ಭಾವನಾ ಸುತಾರ್ ಕಳೆದ ವರ್ಷ ಕ್ಯಾಂಪ್ ಒಂದರಲ್ಲಿ ನಡೆದ ಸಂತಾನ ಹರಣ ಚಿಕಿತ್ಸೆ ಪ್ರಕ್ರಿಯೆಯ ನಂತರ ನಿಧನರಾದರು. ಈ ಸಂತಾನ ಹರಣ ಚಿಕಿತ್ಸೆಗೂ ಮೊದಲು ಅದಕ್ಕೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ ಮತ್ತು ಭಾವನಾ ಅವರಿಗೆ ಗರ್ಭನಿರೋಧಕದ ವಿಷಯದಲ್ಲಿ ಲಭ್ಯವಿರುವ ಆಯ್ಕೆಗಳನ್ನು ಪರಿಗಣಿಸಲು ಸಾಕಷ್ಟು ಸಮಯವನ್ನೂ ನೀಡಿರಲಿಲ್ಲ. ಇತ್ತ ಅವರ ಪತಿ ದಿನೇಶ್ ಈಗಲೂ ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ
ನಾಲ್ಕು ಗರ್ಭಪಾತಗಳು, ಕುಡುಕ ಪತಿ ಮತ್ತು ಕಾರ್ಖಾನೆಯ ಕೆಲಸ ಕಳೆದುಕೊಂಡಿದ್ದರಿಂದ, ದೆಹಲಿ ಮೂಲದ ʼಹನಿʼ ತಾನು ಐದನೇ ಬಾರಿಗೆ ಗರ್ಭಿಣಿಯಾಗಿದ್ದಾಗ ಲೈಂಗಿಕ ವೃತ್ತಿಗೆ ಇಳಿದರು ಮತ್ತು ಅಂದಿನಿಂದ ಎಸ್ಟಿಡಿಯೊಂದಿಗೆ ಬದುಕುತ್ತಿದ್ದಾರೆ. ಈಗ, ಲಾಕ್ಡೌನ್ನಲ್ಲಿ, ಅವರು ದುಡಿಮೆಗಾಗಿ ಹೆಣಗಾಡುತ್ತಿದ್ದಾರೆ
ಸಂತಾನ ಹರಣ ಚಿಕಿತ್ಸೆಯ ನಂತರದ ಸೋಂಕಿನಿಂದಾಗಿ, ರಾಜಸ್ಥಾನದ ದೌಸಾ ಜಿಲ್ಲೆಯ 27 ವರ್ಷದ ಸುಶೀಲಾ ದೇವಿ ಮೂರು ವರ್ಷ ನೋವನ್ನು ಅನುಭವಿಸುತ್ತಾ ಆಸ್ಪತ್ರೆಗಳಿಗೆ ಅಲೆಯಬೇಕಾಯಿತು, ಇದರಿಂದಾಗಿ ಸಾಲ ಹೆಚ್ಚಾಗಿದ್ದಲ್ಲದೆ ಕೊನೆಗೆ ಅವರ ಗರ್ಭಕೋಶವನ್ನೇ ತೆಗೆದುಹಾಕಬೇಕಾಯಿತು
ಗರ್ಭಕೋಶ ತೆಗೆಯುವುದು ಸೇರಿದಂತೆ ಜೀವಿತಾವಧಿಯ ಅನಾರೋಗ್ಯ ಮತ್ತು ಶಸ್ತ್ರಚಿಕಿತ್ಸೆಗಳ ನಂತರ, ಪುಣೆ ಜಿಲ್ಲೆಯ ಹದಶಿ ಗ್ರಾಮದ ಬೀಬಾಬಾಯಿ ಲೊಯರೆ ಬಾಗಿ ಹೋಗಿದ್ದಾರೆ. ಈಗಲೂ, ಅವರು ಕೃಷಿ ಕೆಲಸವನ್ನು ಮಾಡುತ್ತಾರೆ ಮತ್ತು ಪಾರ್ಶ್ವವಾಯು ಪೀಡಿತ ಗಂಡನನ್ನು ನೋಡಿಕೊಳ್ಳುತ್ತಾರೆ
ಗರ್ಭಕೋಶ ಕೆಳೆಗೆ ಬರುವ ತೊಂದರೆ ಹೊಂದಿರುವ ಭಿಲ್ ಮಹಿಳೆಯರು ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲಿ ಯಾವುದೇ ರಸ್ತೆ ಮತ್ತು ಮೊಬೈಲ್ ಸಂಪರ್ಕ ಕೂಡ ಇಲ್ಲ. ಇದರಿಂದಾಗಿ ಅವರು ಹೆರಿಗೆ ಸಮಯದಲ್ಲಿ ವಿಪರೀತ ನೋವು, ಸಂಕಟಗಳನ್ನು ಅನುಭವಿಸುತ್ತಿದ್ದಾರೆ
ಮಾನಸಿಕವಾಗಿ ಅಶಕ್ತರಾದ ಮಹಿಳೆಯರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳನ್ನು ಬಲವಂತವಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮೂಲಕ ಕಸಿಯಲಾಗುತ್ತಿದೆ. ಆದರೆ ಮಹಾರಾಷ್ಟ್ರದ ವಾಡಿ ಗ್ರಾಮದ ಮಲನ್ ಮೋರ್ ಈ ವಿಷಯದಲ್ಲಿ ಅದೃಷ್ಟವಂತೆ, ಅವರಿಗೆ ಬೆಂಬಲವಾಗಿ ಆಕೆಯ ತಾಯಿ ನಿಂತಿದ್ದಾರೆ
ಹರಿಯಾಣದ ಬಿವಾನ್ ಗ್ರಾಮದಲ್ಲಿ ಸಾಂಸ್ಕೃತಿಕ ಅಂಶಗಳು, ಲಭ್ಯವಿಲ್ಲದ ಆರೋಗ್ಯ ಸೇವೆಗಳು ಮತ್ತು ಪೂರೈಕೆದಾರರ ಅಸಡ್ಡೆ ಇವೆಲ್ಲವುಗಳಿಂದಾಗಿ ಇಲ್ಲಿನ ಮಿಯೋ ಮುಸ್ಲಿಮ್ ಮಹಿಳೆಯರಿಗೆ ಗರ್ಭನಿರೋಧಕಗಳ ಲಭ್ಯತೆ ಇಲ್ಲದಂತಾಗಿದೆ. ಇದು ಇಲ್ಲಿನ ಮಹಿಳೆಯರನ್ನು ನಿರಂತರ ಹೆರಿಗೆಯ ಬಲೆಯಲ್ಲಿ ಸಿಕ್ಕಿಕೊಳ್ಳುವಂತೆ ಮಾಡಿದೆ
ಶಾಲೆಗಳು ಮುಚ್ಚುವುದರೊಂದಿಗೆ, ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಬಡ ಕುಟುಂಬಗಳ ಹುಡುಗಿಯರು ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಸೌಲಭ್ಯವನ್ನು ಕಳೆದುಕೊಂಡಿದ್ದಾರೆ ಮತ್ತು ಅಪಾಯಕಾರಿಯಾದ ಇತರ ಆಯ್ಕೆಗಳತ್ತ ಮುಖ ಮಾಡುತ್ತಿದ್ದಾರೆ. ಉತ್ತರ ಪ್ರದೇಶವೊಂದರಲ್ಲೇ ಇಂತಹ ಲಕ್ಷಾಂತರ ಹುಡುಗಿಯರಿದ್ದಾರೆ
ಮುಗಿಯದ ಸಮೀಕ್ಷೆಗಳು, ವರದಿಗಳು ಮತ್ತು ಕೆಲಸಗಳ ಹೊರೆ ಮತ್ತು ಕಡಿಮೆ ಸಂಬಳದ ನಡುವೆಯೂ ಹರಿಯಾಣದ ಸೋನಿಪತ್ ಜಿಲ್ಲೆಯ ಸುನೀತಾ ರಾಣಿ ಮತ್ತು ಆಶಾ ಕಾರ್ಮಿಕರು ಗ್ರಾಮೀಣ ಕುಟುಂಬಗಳ ಸಂತಾನಾಭಿವೃದ್ಧಿಯ ಆರೋಗ್ಯ ಸಂಬಂಧಿ ಅಗತ್ಯಗಳನ್ನು ಪೂರೈಸಲು ಹೋರಾಡುತ್ತಿದ್ದಾರೆ
ಅತಿಯಾದ ಹಿಮೋಗ್ಲೋಬಿನ್ ಕೊರತೆ ಎದುರಿಸುತ್ತಿರುವ ತಾಯಂದಿರು, 7 ಕಿಲೋ ತೂಕದ ಎರಡು ವರ್ಷ ವಯಸ್ಸಿನ ಮಕ್ಕಳು, ಮದ್ಯಪಾನ, ಕಡಿಮೆ ಆದಾಯ ಮತ್ತು ಅರಣ್ಯಕ್ಕೆ ಪ್ರವೇಶ ಕಡಿಮೆಯಾಗಿರುವುದು ಇವೆಲ್ಲವೂ ತಮಿಳುನಾಡಿನ ಗುಡಲೂರಿನಲ್ಲಿ ಆದಿವಾಸಿ ಮಹಿಳೆಯರಲ್ಲಿ ತೀವ್ರ ಅಪೌಷ್ಟಿಕತೆಗೆ ಕಾರಣವಾಗಿದೆ.
ದೆಹಲಿಯಿಂದ 40 ಕಿ.ಮೀ ದೂರದಲ್ಲಿರುವ ಹರಿಯಾಣದ ಹರ್ಸಾನ ಕಲಾನ್ ಗ್ರಾಮದ ಮಹಿಳೆಯರು ಪುರುಷರ ದ್ವೇಷದ ನಡುವೆ ತಮ್ಮ ಜೀವನ ಮತ್ತು ಸಂತಾನೋತ್ಪತ್ತಿ ಆಯ್ಕೆಗಳ ಮೇಲೆ ಒಂದಿಷ್ಟು ನಿಯಂತ್ರಣ ಸಾಧಿಸಲು ಎಷ್ಟು ಕಷ್ಟಪಡಬೇಕೆನ್ನುವುದನ್ನು ವಿವರಿಸಿದ್ದಾರೆ
ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಧಡ್ಗಾಂವ್ ಪ್ರದೇಶದ ಭಿಲ್ ಮಹಿಳೆಯರು ಕಳಂಕ, ಸಾಮಾಜಿಕ ಬಹಿಷ್ಕಾರ ಮತ್ತು ಬಂಜೆತನಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡಲು ವಿಫಲವಾದ ಗ್ರಾಮೀಣ ಆರೋಗ್ಯ ವ್ಯವಸ್ಥೆಯೊಂದಿಗೆ ಬಡಿದಾಡುತ್ತಿದ್ದಾರೆ
'ಪುರುಷರ ಬದ್ಧತೆ' ಎನ್ನುವುದು ಕುಟುಂಬ ಯೋಜನೆಗೆ ಸಂಬಂಧಿಸಿದಂತೆ ಪ್ರಸಿದ್ಧವಾದ ಪದವಾಗಿದೆ, ಆದರೆ ಬಿಹಾರದ ವಿಕಾಸ್ ಮಿತ್ರ ಮತ್ತು ಆಶಾ ಕಾರ್ಮಿಕರು ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಒಳಗಾಗುವಂತೆ ಪುರುಷರನ್ನು ಮನವೊಲಿಸುವಲ್ಲಿ ಒಂದಿಷ್ಟು ಕಡಿಮೆ ಯಶಸ್ಸನ್ನು ಕಂಡಿದ್ದಾರೆ ಮತ್ತು ಗರ್ಭನಿರೋಧಕಗಳು ಮಹಿಳೆಯರಿಗೆ ಮಾತ್ರ ಸೀಮಿತವಾಗಿದೆ
ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿನ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಸೌಲಭ್ಯಗಳು ಅನೇಕ ಆದಿವಾಸಿ ಮಹಿಳೆಯರಿಗೆ ಸಿಗುತ್ತಿಲ್ಲ. ಇದರಿಂದಾಗಿ ಅವರು ಅನಧಿಕೃತ ವೈದ್ಯರಲ್ಲಿ ಗರ್ಭಪಾತ ಮತ್ತು ಹೆರಿಗೆಗಾಗಿ ಹೋಗುವ ಮೂಲಕ ಅಪಾಯಕ್ಕೆ ಒಳಗಾಗುತ್ತಿದ್ದಾರೆ.
2016ರ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ನಂತರ ಸಂತಾನಶಕ್ತಿ ಹರಣ ಶಿಬಿರಗಳ ಬದಲಾಗಿ, ‘ನಸ್ಬಂದಿ ದಿನವನ್ನು’ಆರಂಭಿಸಲಾಯಿತು. ಆದರೆ ಈಗಲೂ ಮಹಿಳೆಯರೇ ಮುಖ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಉತ್ತರಪ್ರದೇಶದಲ್ಲಿನ ಅನೇಕರು ಇತರೆ ಆಧುನಿಕ ಗರ್ಭನಿಯಂತ್ರಣದ ಆಯ್ಕೆಗಳಿಲ್ಲದ ಕಾರಣ, ಇದನ್ನೇ ಅವಲಂಬಿಸುತ್ತಿದ್ದಾರೆ
ಮಧುರೈ ಜಿಲ್ಲೆಯ ಕೂವಲಪುರಂ ಮತ್ತು ಇತರೆ ನಾಲ್ಕು ಹಳ್ಳಿಗಳಲ್ಲಿ ಋತುಮತಿಯಾದ ಹೆಂಗಸರನ್ನು, ‘ಗೆಸ್ಟ್ ಹೌಸ್ ಗಳಲ್ಲಿ’ ಪ್ರತ್ಯೇಕವಾಗಿರಿಸುವ ಪದ್ಧತಿಯು ಮುಂದುವರಿದಿದೆ. ದೇವರು ಹಾಗೂ ಜನರ ಕೋಪಕ್ಕೆ ಹೆದರಿ ಯಾರೂ ಈ ತಾರತಮ್ಯವನ್ನು ಆಕ್ಷೇಪಿಸುವುದಿಲ್ಲ.
Want to republish this article? Please write to [email protected] with a cc to [email protected]
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/ಪರಿ-ಮಹಿಳಾ-ಆರೋಗ್ಯ-ಸರಣಿ