“ನಾವು ಕೇವಲ ಲೈಂಗಿಕ ಕಾರ್ಯಕರ್ತೆಯರು ಎಂಬ ಕಾರಣಕ್ಕಾಗಿಯೇ ಎಲ್ಲದಕ್ಕೂ ಅವರು ನಮ್ಮ ದೇಹವನ್ನು ಹಣವೆಂದು ತಿಳಿದಿದ್ದರು,” ಎನ್ನುತ್ತಾರೆ, 2012ರಲ್ಲಿ ಉತ್ತರಪ್ರದೇಶದ ಫಾರುಖಾಬಾದ್‌ನಿಂದ ದಿಲ್ಲಿಗೆ ಆಗಮಿಸಿದ 30 ವರ್ಷ ಪ್ರಾಯದ ಮೀರಾ ಹೇಳುತ್ತಾರೆ. ಪತಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಬಲಿಯಾದ ನಂತರ ತನ್ನ ಮೂರು ಮಕ್ಕಳೊಂದಿಗೆ ಬದುಕುತ್ತಿದ್ದಾರೆ. ಅವರಲ್ಲಿ ಈಗ ಸಿಟ್ಟು ಮತ್ತು ಅಸಾಹಯಕತೆ ಸಮಾನವಾಗಿ ಮನೆಮಾಡಿದೆ.

“ನನಗೆ ನನ್ನ ಔಷಧ ನೀಡಬೇಕಾದರೆ ಅವರು ಇದನ್ನೆಲ್ಲ ಮಾಡುತ್ತಾರೆ,” ಎಂದು 39 ವರ್ಷದ ಅಮಿತಾ ತನ್ನ ಮುಖವನ್ನು ಜಿಗುಪ್ಸೆಯಿಂದ ತಿರುಗಿಸಿಕೊಂಡರು. ಆಸ್ಪತ್ರೆಯಲ್ಲಿರುವ ಪುರುಷ ಸಹಾಯಕರು ಮತ್ತು ವಾರ್ಡ್‌ ಸಹಾಯಕರು ಚುಂಬಿಸಿದ್ದು, ಆಕೆಯ ದೇಹವನ್ನು ಅಂಗೈ ಅವರಿಸಿದ್ದು ಎಲ್ಲವನ್ನು ನೆನಪಿಸಿಕೊಂಡರು. ಅವರು ಅವಮಾದಿಂದ ಭೀತಿಗೊಂಡರು, ಆದರೆ ಆರೋಗ್ಯ ತಪಾಸಣೆ ಮತ್ತು ಔ಼ಷಧಕ್ಕಾಗಿ ಮತ್ತೆ ಸಾರ್ವಜನಿಕ ಆಸ್ಪತ್ರೆಗೆ ಬರಬೇಕಾಗುತ್ತದೆ.

“ನಾವು ನಮ್ಮ ಎಚ್‌ಐವಿ ಪರೀಕ್ಷೆಗೆಂದು ಹೋದಾಗ, ನಾವು ಲೈಂಗಿಕ ಕಾರ್ಯಕರ್ತೆಯರು ಎಂಬುದು ಗೊತ್ತಾದ ಕೂಡಲೇ ನಮ್ಮ ಸಹಾಯಕ್ಕೆ ಬರುತ್ತಾರೆ. [ಹಿಂದಿನ ಬಾಗಿಲಿನಿಂದ  ಬಾ, ನಿನಗೆ ಔಷಧ ಕೊಡುತ್ತೇನೆ,]” ಆ ನಂತರ ಅವರು ಅವಕಾಶವನ್ನು ಸದುಪಯೋಗಪಡಿಸಿಕೊಂಡು, ನಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಎಂದು 45 ವರ್ಷದ ಕುಸುಮ  ಅಖಿಲ ಭಾರತ ಲೈಂಗಿಕ ಕಾರ್ಯಕರ್ತೆಯರ ಕಾರ್ಯಜಾಲ (ಎಐಎನ್‌ಎಸ್‌ಡಬ್ಲ್ಯು) ಇದರ ಮಾಜಿ ಅಧ್ಯಕ್ಷೆರೊಂದಿಗೆ ಹಲವಾರು ಒಪ್ಪಂದಗಳಿಗೆ ತಲೆಯಲ್ಲಾಡಿಸಿ ಹೇಳಿದರು. ಈ ಸಂಸ್ಥೆಯು  16 ರಾಜ್ಯಗಳ ಸಮುದಾಯದ ಸಂಸ್ಥೆಯಾಗಿದ್ದು, 4.5 ಲಕ್ಷ ಲೈಂಗಿಕ ಕಾರ್ಯಕರ್ತೆಯರನ್ನು ಪ್ರತಿನಿಧಿಸುತ್ತದೆ.

ವಾಯುವ್ಯ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿರುವ ಸಮುದಾಯದ ವಿವಾಸದಲ್ಲರುವ ಲೈಂಗಿಕ ಕಾರ್ಯಕರ್ತೆಯರ ಗುಂಪನ್ನು ಪಿಎಆರ್‌ಐ ಸಂಪರ್ಕಿಸಿತು, ಅದರಲ್ಲಿ ಹೆಚ್ಚಿನವರಿಗೆ ಸಾಂಕ್ರಾಮಿಕದ ಕಾರಣ ಕೆಲಸವಿರಲಿಲ್ಲ. ಚಳಿಗಾಲದ ಅಪರಾಹ್ನದಲ್ಲಿ ಬಿಸಿಗಾಗಿ ಮುದುಡಿಕೊಂಡು ಕುಳಿತಿದ್ದ ಅವರು ಮನೆಯಲ್ಲೇ ಬೇಯಿಸಿದ ತರಕಾರಿ, ದಾಲ್‌ ಮತ್ತು ರೋಟಿಯನ್ನು ಬುತ್ತಿಯಲ್ಲಿ ಕಟ್ಟಿಕೊಂಡು ಹಂಚಿ ತಿನ್ನುತ್ತಿದ್ದರು.

Sex workers sharing a meal at a community shelter in Delhi's North West district. Many have been out of work due to the pandemic
PHOTO • Shalini Singh

ದಿಲ್ಲಿಯ ವಾಯುವ್ಯ ಜಿಲ್ಲೆಯಲ್ಲಿರುವ ಸಮುದಾಯ ನಿವಾಸದಲ್ಲಿ ಲೈಂಗಿಕ ಕಾರ್ಯಕರ್ತೆಯರು ಊಟವನ್ನು ಹಂಚಿಕೊಳ್ಳುತ್ತಿರುವುದು. ಸಾಂಕ್ರಾಮಿಕದ ಕಾರಣ ಅನೇಕರಿಗೆ ಕೆಲಸವಿಲ್ಲ

ಒಂಟಿ ಲೈಂಗಿಕ ಕಾರ್ಯಕರ್ತೆಯರಿಗೆ ಆರೋಗ್ಯ ಸೌಲಭ್ಯಗಳನ್ನು ಪಡೆಯುವುದು ಕಷ್ಟ ಎನ್ನುತ್ತಾರೆ ಮೀರಾ

“ಈ ಗಂಡಸರು ನನಗೆ ಮಧ್ಯಾಹ್ನ 2 ಗಂಟೆಯ ನಂತರ ಆಸ್ಪತ್ರೆಗೆ ಹಿಂದಿರುಗಲು ಹೇಳುತ್ತಾರೆ. ʼನಿನ್ನ ಕೆಲಸವನ್ನು ಮಾಡಿ ಮುಗಿಸುತ್ತೇನೆ,ʼ ಎನ್ನುತ್ತಾರೆ. ಅದರಿಂದ ಏನೂ ಪ್ರಯೋಜನವಿಲ್ಲ, ವಾರ್ಡ್‌ ಸಹಾಯಕರನ್ನು ವೈದ್ಯರೆಂದು ತಪ್ಪಾಗಿ ಗ್ರಹಿಸಿ ಅವರೊಂದಿಗೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದೆ, ಏಕೆಂದರೆ ನನಗೆ ಔಷಧ ಸಿಗಲಿ ಎಂದು” ಕೆಲವೊಮ್ಮೆ ನಮಗೆ ಬೇರೆ ಆಯ್ಕೆಯೇ ಇರುವುದಿಲ್ಲ, ಮತ್ತು ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಉದ್ದದ ಸಾಲಿನಲ್ಲಿ ನಿಲ್ಲಲು ನಮಗೆ ಯಾವಾಗಲೂ ಸಾಧ್ಯವಾಗುವುದಿಲ್ಲ. ವಿಶೇಷವಾಗಿ ಗಿರಾಕಿಗಳನ್ನು ಅವರಿಗೆ ಅನುಕೂಲವಾದ ಸಮಯದಲ್ಲಿ ಸಂಪರ್ಕಿಸಬೇಕಾಗಿರುವಾಗ ನಮ್ಮಲ್ಲಿ ಸಾಕಷ್ಟು ಸಮಯವೇ ಇರುವುದಿಲ್ಲ. ಒಂದೇ ನಾವು ಚಿಕಿತ್ಸೆ ತೆಗೆದುಕೊಳ್ಳಬೇಕು, ಇಲ್ಲ ಹಸಿವಿನಿಂದ ಸಾಯಬೇಕು,” ಎಂದು ಮಾತು ಮುಂದುವರಿಸಿದ ಮೀರಾ ಅವರ ಕಣ್ಣುಗಳು ಮಿನುಗತೊಡಗಿದವು, ಅವರ ಧ್ವನಿಯಲ್ಲಿ ಅಣಕವಿದ್ದಿತ್ತು. ”ಒಂದು ವೇಳೆ ನಾನು ಏನಾದರೂ ಹೇಳಿದರೆ ಅಥವಾ ಧ್ವನಿ ಎತ್ತಿದರೆ, ನಮ್ಮ ಮೇಲೆ ಕಳಂಕ ಬರುತ್ತದೆ, ಅದು ನಾನೊಬ್ಬ ಲೈಂಗಿಕ ಕಾರ್ಯಕರ್ತೆ ಎಂದು. [ನಮ್ಮ ವೃತ್ತಿಯಿಂದಾಗಿ ನಮ್ಮನ್ನು ಕಳಂಕಿತರೆಂದು ಪರಿಗಣಿಸಲಾಗಿದೆ] ನಂತರ ಹೆಚ್ಚಿನ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ,”

ಸ್ಥಳೀಯ ಪ್ರದೇಶದಲ್ಲಿರುವ ಎರಡು ಸರಕಾರಿ ಆಸ್ಪತ್ರೆಗಳು ಲೈಂಗಿಕ ಕಾರ್ಯಕರ್ತೆಯರಿಗಾಗಿ ಮಧ್ಯಾಹ್ನ 12:30 ರಿಂದ 1;30 ರವರೆಗೆ 60 ನಿಮಿಷಗಳ ಸಮಯವನ್ನು ಕಾಯ್ದಿರಿಸಿವೆ. ಈ ಅವಧಿಯನ್ನು ಲೈಂಗಿಕ ಕಾರ್ಯಕರ್ತೆಯರು ಎಚ್‌ಐವಿ ಮತ್ತು ಇತರ ಲೈಂಗಿಕ ಸಂಪರ್ಕದ ಸೋಂಕಿನಿಂದ (ಎಸ್‌ಟಿಐ) ಹರಡುವ ರೋಗಗಳ ಪರೀಕ್ಷೆ ಮಾಡಿಸಿಕೊಳ್ಳಲು ಕಾಯ್ದಿರಿಸಲಾಗಿದೆ. ಎನ್‌ಜಿಒ ಕೆಲಸಗಾರರು ಮಾಡಿಕೊಂಡಿರುವ ಮನವಿಯ ಮೇರೆಗೆ ಈ ಸೇವೆಯನ್ನು ಎರಡು ಆಸ್ಪತ್ರೆಗಳನ್ನು ಮುಂದುವರಿಸಲಾಗಿದೆ.

“ಸಾಮಾನ್ಯ ಜನರೊಂದಿಗೆ ಲೈಂಗಿಕ ಕಾರ್ಯಕರ್ತೆಯರು ಉದ್ದದ ಸಾಲಿನಲ್ಲಿ ಸರದಿ ನಿಲ್ಲುವುದಿಲ್ಲ, ಏಕೆಂದರೆ ಉದ್ದನೆಯ ಸಾಲು ಮತ್ತು ಅವರನ್ನು ಪರೀಕ್ಷೆ ಮಾಡಲು ಅಥವಾ ಆರೈಕೆ ನೀಡಲು ಹೆಚ್ಚು ಸಮಯ ತಗಲುತ್ತದೆ,” ಎಂದು ಲೈಂಗಿಕ ಕಾರ್ಯಕರ್ತೆಯರಿಗಾಗಿ ಕೆಲಸ ಮಾಡುತ್ತಿರುವ ದೆಹಲಿ ಮೂಲದ ಎನ್‌ಜಿಒ ಸ್ವಯಂಸೇವಕಿ ರಜನಿ ತಿವಾರಿ ಹೇಳುತ್ತಾರೆ. ಸರದಿಯಲ್ಲಿ ನಿಂತಿದ್ದಾಗ, ಗ್ರಾಹಕರೊಬ್ಬರು ಕರೆದರೆ ಅವರು ಸರದಿಯನ್ನು ಬಿಟ್ಟು ಹೋಗಬೇಕಾಗುತ್ತದೆ.

ವಿಶೇಷವಾಗಿ ಕಾಯ್ದಿರಿಸಿದ ಒಂದು ಗಂಟೆಯ ಅವಧಿಯಲ್ಲಿ ನುಗ್ಗಿಕೊಂಡು ವೈದ್ಯರನ್ನು ಕಾಣುವುದು ಕೂಡ ಕೆಲವು ಸಂದರ್ಭಗಳಲ್ಲಿ ಕಷ್ಟವಾಗುತ್ತದೆ ಎನ್ನುತ್ತಾರೆ ತಿವಾರಿ, ಮತ್ತು ಇದು ಅವರ ಆರೋಗ್ಯ ಸೌಲಭ್ಯ ಪಡೆಯವಲ್ಲಿ ಎದುರಿಸುವ ಮೊದಲ ಸವಾಲಾಗಿದೆ.

ಸರಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರುಗಳು ಪರೀಕ್ಷೆ ಮಾಡಿ ಬರೆದುಕೊಟ್ಟ ಔಷಧಗಳನ್ನು ಮಾತ್ರ  ನೀಡುತ್ತಾರೆ, ಅದು ಕೂಡ ಔಷಧ ಹೊಂದಿರುವ ಎಸ್‌ಟಿಐ ಕಿಟ್‌. ಎಚ್‌ಐವಿ ಮತ್ತು ಮೇಹರೋಗ ಪರೀಕ್ಷಾ ಕಿಟ್‌ಗಳನ್ನು ಲೈಂಗಿಕ ಕಾರ್ಯಕರ್ತೆಯರಿಗಾಗಿ ಸೆವೆರಾ  ರೀತಿಯ ಎನ್‌ಜಿಒಗಳು ದಿಲ್ಲಿ ಸರಕಾರದ ಏಡ್ಸ್‌ ನಿಯಂತ್ರಣ ಸೊಸೈಟಿಯ ಹಣಕಾಸಿನ ನೆರವಿನಿಂದ ಪಡೆಯುತ್ತವೆ.

A room at the office of an NGO, where a visiting doctor gives sex workers medical advice and information about safe sex practices
PHOTO • Shalini Singh
A room at the office of an NGO, where a visiting doctor gives sex workers medical advice and information about safe sex practices
PHOTO • Shalini Singh

ಎನ್‌ಜಿಒ ಕಚೇರಿಯೊಂದರ ಕೊಠಡಿಯಲ್ಲಿ ವೈದ್ಯರು ಲೈಂಗಿಕ ಕಾರ್ಯಕರ್ತೆಯರಿಗೆ ವೈದ್ಯಕೀಯ ಸಲಹೆ ಮತ್ತು ಸುರಕ್ಷಿತ ಲೈಂಗಿಕತೆಯ ಬಗ್ಗೆ ಮಾಹಿತಿ ನೀಡುತ್ತಿರುವುದು

“ಲೈಂಗಿಕ ಕಾರ್ಯಕರ್ತೆಯರಿಗೆ ಜ್ವರ, ಎದೆನೋವು ಮತ್ತು ಮದುಮೇಹ ಕಾಯಿಲೆಗಳು ಕಾಣಿಸಿಕೊಂಡಾಗ ಇತರರಿಗಿಂತ  ಅಪಾಯವನ್ನು ಎದುರಿಸಬೇಕಾಗುತ್ತದೆ,” ಎನ್ನುತ್ತಾರೆ ಅವರು. “ಅವರು ಲೈಂಗಿಕ ಕಾರ್ಯಕರ್ತೆಯರು ಎಂದು ವಾರ್ಡ್‌ ಹುಡುಗರಿಗೆ ಗೊತ್ತಾದರೆ ಅವರನ್ನು ಶೋಷಣೆ ಮಾಡುವುದು ಸಾಮಾನ್ಯವಾಗಿರುತ್ತದೆ,” ಎಂದು ಲೈಂಗಿಕ ಕಾರ್ಯಕರ್ತೆಯರು ಹೇಳಿರುವುದನ್ನು ಖಚಿತಪಡಿಸಿ ವಿವರಿಸಿದರು.

ಪುರುಷ ಸಿಬ್ಬಂದಿಗಳಿಗೆ ಮಹಿಳಾ ರೋಗಿಗಳಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸುವುದು ಸುಲಭ.

ಮಹಿಳೆಯರು ಸೇರುವ ಸಮುದಾಯ ಗುಡಿಸಲು ಆಸ್ಪತ್ರೆಯಿಂದ ಅಲ್ಪ ದೂರದಲ್ಲಿವೆ. ಸಾಂಕ್ರಾಮಿಕ ಬರುವುದಕ್ಕೆ ಮುನ್ನ ಅಮಿತಾ ಸಿದ್ಧಳಾಗಿದ್ದಾಗ, ಗ್ರಾಹಕರು ಆಸ್ಪತ್ರೆ ಗೇಟ್‌ ಹತ್ತಿರ ಬಂದು ಕೆಲವು ಪುರುಷ ಸಿಬ್ಬಂದಿಯ ಕಣ್ಣುತಪ್ಪಿಸಿ  ಕರೆದೊಯ್ಯುತ್ತಿದ್ದರು,

ಕಾವಲುಗಾರರು ಕೂಡ ಎಚ್‌ಐವಿ ಪರೀಕ್ಷೆಗಾಗಿ ನೀಡಿದ ಚೀಟಿ ನೋಡಿಯೇ ಲೈಂಗಿಕ ಕಾರ್ಯಕರ್ತೆಯರು ಯಾರೆಂಬುದನ್ನು ತಿಳಿಯುತ್ತಿದ್ದರು. ನಂತರ ನಾವು ಪರೀಕ್ಷೆಗೆ ಹೋದಾಗ ನಮ್ಮನ್ನು ಗುರುತಿಸಿ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು. ಆಗ ನಮಗೆ ಸರದಿಯಲ್ಲಿ ನಿಲ್ಲದೆ ವೈದ್ಯರನ್ನು ಕಾಣಲು ನೆರವಾಗಲು ನಮಗೆ ಒಬ್ಬ ಗಿರಾಕಿಯ ಅಗತ್ಯ ಬರಬಹುದು,” ಎನ್ನುತ್ತಾರೆ ಅಮಿತಾ. ವಾಸ್ತವವಾಗಿ ಅಲ್ಲಿ ಸಲಹೆ, ಚಿಕಿತ್ಸೆ ಮತ್ತು ಔಷಧಕ್ಕಾಗಿ ಪ್ರತ್ಯೇಕ ಸರದಿ ಇರುತ್ತಿತ್ತು.

ಎರಡು ದಶಕಗಳ ಹಿಂದೆ ಪತಿ ಬಿಟ್ಟು ಹೋದ ನಂತರ ಅಮಿತಾ ಪಾಟ್ನಾದಿಂದ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳೊಂದಿಗೆ ದಿಲ್ಲಿಗೆ ಆಗಮಿಸಿದರು. ಫ್ಯಾಕ್ಟರಿಯೊಂದರಲ್ಲಿ ದಿನಗೂಲಿ ನೌಕರಳಾಗಿ ಸೇರಿ, ಅಲ್ಲಿ ವೇತನ ಸಿಗದಿದ್ದಾಗ ಗೆಳೆಯರೊಬ್ಬರ ಮೂಲಕ ಲೈಂಗಿಕ ಕೆಲಸಕ್ಕೆ ಮುಂದಾದರು, “ಈ ಕೆಲಸ ಮಾಡಲು ನನಗೆ ಸಾಧ್ಯವಿಲ್ಲವೆಂದು ದಿನಗಳ ಕಾಲ ಅತ್ತಿದ್ದೆ, ಆದರೆ 2007ರಲ್ಲಿ ದಿನಕ್ಕೆ 600 ರೂ ಎಂದರೆ ದೊಡ್ಡ ಮೊತ್ತ - ನಾನು ಅದರಲ್ಲಿ 10 ದಿನಗಳ ಕಾಲ ತಿನ್ನಬಹುದು,”

ಅಮಿತಾ, ಮೀರಾ ಹಾಗೂ ಇತರ ಲೈಂಗಿಕ ಕಾರ್ಯಕರ್ತೆಯರ ವೃತ್ತಾಂತ ನಿರೂಪಣೆ ನೋಡಲು ಬಹಳ ಸುಲಭ, ಆ ಲೈಂಗಿಕ ಕಾರ್ಯಕರ್ತೆಯರ ಅನುಭವ ಅನನ್ಯ ಕಳಂಕವೆನಿಸಿ ಅವರಿಗೆ ಆರೋಗ್ಯ ಸೌಲಭ್ಯ ಪಡೆಯುವ ಸಾಮರ್ಥ್ಯವನ್ನು ಮಿತಿಗೊಳಿಸಿತು. 2014ರ ವರದಿಯ ಪ್ರಕಾರ , ಆಸ್ಪತ್ರೆಗಳಲ್ಲಿ ಅವರು ತಮ್ಮ ಹೆಸರನ್ನು ಬಹಿರಂಗಪಡಿಸುವಂತಿಲ್ಲ. “ಮಹಿಳಾ ಲೈಂಗಿಕ ಕಾರ್ಯಕರ್ತೆಯರನ್ನು ಅವಮಾನಿಸಲಾಗಿದೆ ಮತ್ತು ಟೀಕಿಸಲಾಗಿದೆ, ಸರದಿಯಲ್ಲಿ ಅವರನ್ನು ಬಹಳ ಸಯದವರೆಗೆ ಸಂಯಮವಿಲ್ಲದೆ ನಿಲ್ಲಿಸಲಾಗಿದೆ, ಸರಿಯಾಗಿ ಪರೀಕ್ಷೆ ಮಾಡಲಿಲ್ಲ, ಎಚ್‌ಐವಿ ಪರೀಕ್ಷೆಗಳನ್ನು ಒತ್ತಾಯದಲ್ಲಿ ಮಾಡಿಲಾಯಿತು, ಖಾಸಗಿ ಆಸ್ಪತ್ರೆಗಳಲ್ಲಿ ಸೇವೆಗಾಗಿ ಅತಿಯಾದ ಶುಲ್ಕ, ವೈದ್ಯಕೀಯ ಸೇವೆ ನೀಡಲು ನಿರಾಕರಣೆ, ಹೆರಿಗೆ ಆರೈಕೆ ಮತ್ತು ಗೌಪ್ಯತೆಯನ್ನು ಉಲ್ಲಂಘಿಸಿರುವುದು,” ಎಂದು ವರದಿ ತಿಳಿಸಿದೆ. ರಾಷ್ಟ್ರೀಯ ಲೈಂಗಿಕ ಕಾರ್ಯಕರ್ತೆಯರ ಕಾರ್ಯಜಾಲದಡಿ ವಕೀಲರ ಗುಂಪುಗಳು ಮತ್ತು ಲೈಂಗಿಕ ಕಾರ್ಯಕರ್ತೆಯರು ಸಮಗ್ರವಾಗಿ ಸಂಗ್ರಹಿಸಿದ ವರದಿ ಇದಾಗಿದೆ.

Left: An informative chart for sex workers. Right: At the community shelter, an illustrated handmade poster of their experiences
PHOTO • Shalini Singh
Right: At the community shelter, an illustrated handmade poster of their experiences
PHOTO • Shalini Singh

ಎಡ: ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಮಾಹಿತಿ ಇರುವ ಪಟ್ಟಿ ಬಲ: ಸಮುದಾಯದ ಮನೆಯಲ್ಲಿ ಮಹಿಳೆಯರ ಅನುಭವ ಹೇಳುವ ಕೈಯಿಂದ ಮಾಡಲಾದ ಪೋಸ್ಟರ್‌

ಅಮಿತಾ ಅವರ ಅನುಭವವು ವರದಿಯಲ್ಲಿ ಕಂಡ ಅಂಶಗಳ ಪ್ರತಿಬಿಂಬವಾಗಿದೆ. “ಕೇವಲ ದೊಡ್ಡ ಕಾಯಿಲೆಗಳಾದ ಎಚ್‌ಐವಿ ಅಥವಾ ಗರ್ಭಪಾತಗಳು, ಅಥವಾ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಬಳಲಿ ದೊಡ್ಡ ಆಸ್ಪತ್ರೆಗೆ ಹೋಗಲು ಮನಸ್ಸು ಮಾಡಿದರೆ ಮಾತ್ರ ನಮಗೆ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತದೆ. ಇತರ ಸಂದರ್ಭಗಳಲ್ಲಿ ಜೋಲಾ ಛಾಪ್‌ (ಪರವಾನಗಿ ಇಲ್ಲದೆ ಔಷಧ ಕೊಡುವವರು) ಅವರಲ್ಲಿಗೆ ಹೋಗಬೇಕು. ನಾವು ಧಂಧಾ (ಲೈಂಗಿಕ ಕಾರ್ಯಕರ್ತೆಯರ ಕೆಲಸ) ಮಾಡುವವರು ಎಂಬುದು ಅವರಿಗೂ ಗೊತ್ತಾದರೆ ಆಮಿಷವೊಡ್ಡಲು ಆರಂಭಿಸುತ್ತಾರೆ,” ಎಂದು ಅವರು ಹೇಳಿದರು.

ಯಾರನ್ನೆಲ್ಲ ಅವರು ಎದುರಿಸಿದ್ದಾರೋ ಅವರಲ್ಲಿ ಯಾರೂ ಯಾವುದೇ ರೀತಿಯ ಗೌರವ ತೋರಲಿಲ್ಲ, ಎಂದು ಕುಸುಮಾ ಹೇಳಿದರು. ಅವರ ವೃತ್ತಿಯು ಬಹಿರಂಗವಾಗುತ್ತಿದ್ದಂತೆ ಶೋಷಣೆ ಆರಂಭವಾಗುತ್ತದೆ. ಲೈಂಗಿಕತೆಗೆ ಅವಕಾಶ ನೀಡದಿದ್ದರೆ, ಅವರು ಕ್ಷಣಿಕ ತೃಪ್ತಿ, ಅಥವಾ, ಉದ್ದೇಶಪೂರ್ವಕವಾಗಿ ಅವರನ್ನು ಅವಮಾನಗೊಳಿಸಿ ಖುಷಿಪಡುತ್ತಾರೆ. ”ಬಸ್‌ ಕಿಸೀ ತರಹ ಬಾಡಿ ಟಚ್‌ ಕರ್ನಾ ಹೆ ಉನ್ಕೊ,” [ಹೇಗಾದೂ ಮಾಡಿ ಅವರಿಗೆ ನಮ್ಮ ದೇಹವನ್ನು ಸ್ಪರ್ಷಿಸಬೇಕು]

ಇದರ ಪರಿಣಾಮವಾಗಿ, ಲೈಂಗಿಕ ಕಾರ್ಯಕರ್ತೆಯರು ವೈದ್ಯಕೀಯ ನೆರವು ಬೇಕಾಗಿದ್ದರೆ ಪುಸಲಾಯಿಸಬೇಕಾದ ಅನಿವಾರ್ಯತೆ ನಿರ್ಮಾಣವಾಯಿತು, ಎನ್ನುತ್ತಾರೆ ರೋಹಿಣಿ ಮೂಲದ ವೈದ್ಯರಾದ ಸುಮನ್‌ ಕುಮಾರ್‌ ಬಿಸ್ವಾಸ್‌. ಇವರು ಎನ್‌ಜಿಒ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ಇವರು ನಿರೋಧಗಳನ್ನು ಹಂಚುತ್ತಾರೆ ಮತ್ತು ಮಹಿಳಾ ವೈದ್ಯಕೀಯ ಸಹಲೆ ನೀಡುತ್ತಾರೆ.

ಕೋವಿಡ್‌-19 ಸಾಂಕ್ರಾಮಿಕವು ಲೈಂಗಿಕ ಕಾರ್ಯಕರ್ತೆಯರ ವಿರುದ್ಧದ ತಾರತಮ್ಯವನ್ನು ಮತ್ತಷ್ಟು ತೀಕ್ಷಣಗೊಳಿಸಿತು. ಅವರನ್ನು ಮತ್ತಷ್ಟು ಶೋಷಣೆಗೆ ಗುರಿಮಾಡಿತು.

“ಲೈಂಗಿಕ ಕಾರ್ಯಕರ್ತೆಯರನ್ನು ಅಸ್ಪೃಶ್ಯರಂತೆ ನೋಡಿಕೊಳ್ಳಲಾಗುತ್ತಿದೆ,” ಎನ್ನುತ್ತಾರೆ ಎಐಎನ್‌ಎಸ್‌ಡಬ್ಲ್ಯುನ ಪ್ರಸಕ್ತ ಅಧ್ಯಕ್ಷ ಪುತುಲ್‌ ಸಿಂಗ್‌. “ನಮ್ಮನ್ನು ನ್ಯಾಯಬೆಲೆ ಅಂಗಡಿಯ ಸರದಿಯಿಂದ ತೆಗೆದುಹಾಕಲಾಯಿತು ಅಥವಾ ಆಧಾರ್‌ ಕಾರ್ಡ್‌ಗಾಗಿ ಕಾಡಲಾಯಿತು…ನಮ್ಮ ಒಬ್ಬ ಸಹೋದರಿ ಜಟಿಲ ಗರ್ಭಧರಿಸಿರು, ಆದರೆ ಕಡಿಮೆ ಕಿಲೋ ಮೀಟರ್‌ ಇದ್ದರೂ 5,000 ರೂ, ನೀಡದೆ ಆಂಬ್ಯುಲೆನ್ಸ್‌ ಸೇವೆ ನೀಡಲು ನಿರಾಕರಿಸಿದರು. ಹೇಗಾದರೂ ಮಾಡಿ ಅವರನ್ನು ನಾವು ಆಸ್ಪತ್ರೆಗೆ ಕೊಂಡೊಯ್ದೆವು, ಆದರೆ ಸಿಬ್ಬಂದಿ ಅಸ್ಪಷ್ಟ ಕಾರಣಗಳನ್ನು ನೀಡಿ, ಅವರಿಗೆ ಚಿಕಿತ್ಸೆ ನೀಡಲು ನಿರಾಕರಿದರು. ಒಬ್ಬ ವೈದ್ಯರು ಚಿಕಿತ್ಸೆ ನೀಡಲು ಒಪ್ಪಿದರು, ಆದರೆ ರೋಗಿಯಿಂದ ಅಂತರ ಕಾಯ್ದುಕೊಳ್ಳವುದಾಗಿ ಹೇಳಿದರು,” ಎನ್ನುತ್ತಾರೆ ಸಿಂಗ್‌, ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ.

****

Pinki was left with a scar after a client-turned-lover tried to slit her throat. She didn't seek medical attention for fear of bringing on a police case.
PHOTO • Shalini Singh
A poster demanding social schemes and government identification documents for sex workers
PHOTO • Shalini Singh

ಎಡ: ಒಬ್ಬ ಪ್ರಿಯಕರನಾಗಿ ಬದಲಾದ ಗಿರಾಕಿ ಗಂಟಲನ್ನೇ ಸೀಳಲು ಯತ್ನಿಸಿದಾಗ ಪಿಂಕಿ ಆತಂಕದಲ್ಲಿ ಅಲ್ಲಿಂದ ಹೊರಟು ಬಂದಳು, ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗುತ್ತದೆ ಎಂದು ಹೆದರಿ ಅವರು ಚಿಕಿತ್ಸೆಯನ್ನೂ ತೆಗೆದುಕೊಳ್ಳಲಿಲ್ಲ.  ಬಲ: ಲೈಂಗಿಕ ಕಾರ್ಯಕರ್ತೆಯರಿಗಾಗಿ ಇರುವ ಸರಕಾರದ ಯೋಜನೆಗಳು ಮತ್ತು ಸರಕಾರದ ಗುರುತಿನ ದಾಖಲೆಗಳ ಮಾಹಿತಿ ನೀಡುವ ಪೋಸ್ಟರ್‌

ಖಾಸಗಿ ಮತ್ತು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ, ಮಹಿಳೆಯರು ಹೇಳುತ್ತಾರೆ ಇದೊಂದು ಸಂಕೀರ್ಣ ಆಯ್ಕೆ. “ಸರಕಾರಿ ಆಸ್ಪತ್ರೆಯಲ್ಲಿ ನಾವು ನಮ್ಮ ಇಜ್ಜತ್‌ [ಮಾನ]ವನ್ನು ನೀಡದೆ ವೈದ್ಯರನ್ನು ನೋಡಬಹುದು,” ಎನ್ನುತ್ತಾರೆ ಅಮಿತಾ. ಆದರೆ ಈ ಕ್ಲಿನಿಕ್‌ಗಳು ವಿರೋಧಿಸುವಷ್ಟು ದುಬಾರಿಯಾಗಿವೆ. ಉದಾಹರಣೆಗೆ ಗರ್ಭಪಾತಕ್ಕೆ ಮೂರುಪಟ್ಟು ಬೆಲೆ ತೆರಬೇಕಾಗುತ್ತದೆ. ಅಥವಾ ಖಾಸಗಿ ಕ್ಲಿನಿಕ್‌ನಲ್ಲಿ ಕನಿಷ್ಠ 15,000 ರೂ. ನೀಡಬೇಕಾಗುತ್ತದೆ.

ಸರ್ಕಾರಿ ಆಸ್ಪತ್ರೆಗಳ ಮತ್ತೊಂದು ಸಮಸ್ಯೆಯೆಂದರೆ ಕಾಗದಪತ್ರಗಳಿಗೆ ಒತ್ತು ನೀಡುವುದು.

28 ವರ್ಷದ ಪಿಂಕಿ ತನ್ನ ಮುಖದ ಸೆರಗನ್ನು ಸರಿಸಿ ಕುತ್ತಿಗೆಯಲ್ಲಿ ನೋಡಲು ಅಸಾಧ್ಯವಾದ, ದಿಗ್ಭ್ರಮೆ ಮೂಡಿಸುವ ಗಾಯವೊಂದನ್ನು ತೋರಿಸಲು ಮುಂದಾದರು. ಪ್ರಿಯಕರನಾಗಿ ಬದಲಾದ ಗಿರಾಕಿಯು ಹೊಟ್ಟೆಕಿಚ್ಚಿನಲ್ಲಿ ಆಕೆಯ ಕತ್ತನ್ನು ಸೀಳಲು ಯತ್ನಿಸಿದ್ದ. “ಲಕ್ಷಾಂತರ ಪ್ರಶ್ನೆಗಳನ್ನು ಕೇಳುತ್ತಾರೆ, ಗುರುತುಗಳನ್ನು ಬಯಲುಗೊಳಿಸಿದರು, ಸಾಧ್ಯತೆ ಇರುವ ಎಲ್ಲ ರೀತಿಯ ಪೊಲೀಸ್‌ ದೂರುಗಳನ್ನು ದಾಖಲಿಸಿದರು, ನಾವು ಗ್ರಾಮದಲ್ಲಿ ಮನೆಯನ್ನು ಬಿಟ್ಟು ಹೊರಗಡೆ ಹೋಗುವಾಗ ಯಾವಾಗಲೂ ಪಡಿತರ ಚೀಟಿಯನ್ನು ಅಥವಾ ಇನ್ನಿತರ ದಾಖಲೆಗಳೊಂದಿಗೆ ಹೋಗುವುದಿಲ್ಲ,” ಎಂದ ಅವರು, ತಾವು ಯಾವ ಕಾರಣಕ್ಕಾಗಿ ಸರಕಾರಿ ಆಸ್ಪತ್ರೆಗೆ ಹೋಗುವುದಿಲ್ಲ ಎಂದು ತಿಳಿಸಿದರು.

2007ರ ಭಾರತೀಯ ಮಹಿಳಾ ಆರೋಗ್ಯ ಸನ್ನದು ಲೈಂಗಿಕ ಕಾರ್ಯಕರ್ತೆಯರು “ಸಾರ್ವಜನಿಕ ಆರೋಗ್ಯದ ಆತಂಕ” ಎಂದು ಹೇಳಿದೆ. ದಶಕಗಳ ನಂತರ ರಾಜಧಾನಿಯಲ್ಲಿಯೂ ಬದಲಾವಣೆಯಾದದ್ದು ಸ್ವಲ್ಪಮಟ್ಟಿನದ್ದು. ಮತ್ತೆ ಸಾಂಕ್ರಾಮಿಕವು ಲೈಂಗಿಕ ಕಾರ್ಯಕರ್ತೆಯರನ್ನು ಮತ್ತಷ್ಟು ಅಂಚಿಗೆ ನೂಕಿತು.

2020ರ ಅಕ್ಟೋಬರ್‌ ನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೋವಿಡ್‌-19ಗೆ ಸಂಬಂಧಪಟ್ಟಂತೆ ಮಹಿಳೆಯರ ಹಕ್ಕುಗಳ ಬಗ್ಗೆ ಸಲಹೆಯನ್ನು ಹೊರಡಿಸಿತ್ತು . ಅದರಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಗಣನೀಯ ಪ್ರಮಾಣದಲ್ಲಿ ನೋಯಿಸಲಾಗುತ್ತಿದೆ ಎಂದು ಹೇಳಲಾಗಿದೆ-ಅವರ ಜೀವನೋಪಾಯವೇ ಸಂಕಷ್ಟಕ್ಕೆ ಸಿಲುಕಿದೆ, ಎಚ್‌ಐವಿ ಪಾಸಿಟಿನ್‌ ಹೊಂದಿರುವವರು ಆಂಟಿ-ರೆಟ್ರೋವೈರಲ್‌ ಪರೀಕ್ಷೆ ಪಡೆಯುವಲ್ಲಿಯೂ ವಿಫಲರಾದರು. ಅವರಲ್ಲಿ ದಾಖಲೆಗಳು ಇಲ್ಲದ ಕಾರಣ ಸರಕಾರದ ಯೋಗಕ್ಷೇಮದ ಯೋಜನೆಗಳನ್ನು ಪಡೆಯುವಲ್ಲಿಯೂ ವಿಫಲರಾದರು. ಅಂತಿಮವಾಗಿ ಎನ್‌ಎಚ್‌ಆರ್‌ಸಿ ಲೈಂಗಿಕ ಕಾರ್ಯಕರ್ತರ ಬಗ್ಗೆ ಹೊರಡಿಸಿದ ಹೇಳಿಕೆಯನ್ನು ಪರಿಷ್ಕೃತಗೊಳಿಸಿ, ಅವರನ್ನು ಔಪಚಾರಿಕ ಕೆಲಸಗಾರರು ಎಂದು ಗುರುತಿಸುವುದಕ್ಕಾಗಿ ಪ್ರಮುಖ ಸಲಹೆಗಳನ್ನು ಕೈಬಿಟ್ಟಿತು. ಇದರಿಂದಾಗಿ ಅವರಿಗೆ ಕೆಲಸಗಾರರಿಗೆ ಸರಕಾರದ ಸೌಲಭ್ಯಗಳು ಮತ್ತು ಕಲ್ಯಾಣಕಾರಕ ಪರಿಹಾರಗಳು ಸಿಗುವಂತೆ ಮಾಡಿತು. ಲೈಂಗಿಕ ಕಾರ್ಯಕರ್ತೆಯರು ಮಾನವೀಯ ನೆಲೆಯಲ್ಲಿ ಪರಿಹಾರಗಳನ್ನು ಪಡೆಯುವಂತಾಗಬೇಕು ಎಂದು ಸಲಹೆ ನೀಡಿತು.

At the NGO office, posters and charts provide information to the women. Condoms are also distributed there
PHOTO • Shalini Singh
At the NGO office, posters and charts provide information to the women. Condoms are also distributed there
PHOTO • Shalini Singh

ಮಹಿಳೆಯರ ಮಾಹಿತಿಗಾಗಿ ಎನ್‌ಜಿಒ ಕಚೇರಿಯಲ್ಲಿ ಪೋಸ್ಟರ್‌ ಮತ್ತು ಪಟ್ಟಿಗಳನ್ನು ಹಾಕಿರುವುದು. ಇಲ್ಲಿ ನಿರೋಧ್‌ಗಳನ್ನೂ ಹಂಚಲಾಗುತ್ತದೆ

“ಕೋವಿಡ್‌ ಸಂದರ್ಭದಲ್ಲಿ ಲೈಂಗಿಕ ಕಾರ್ಯಕರ್ತೆಯರ ಬದುಕು ಮತ್ತಷ್ಟು ಬಿಗಡಾಯಿಸಿತು, ಸರಕಾರಿ ಆಸ್ಪತ್ರೆಗಳಲ್ಲಿ ʼನೀವು ಸೋಂಕನ್ನು ಹರಡಬಹುದು ಆದ್ದರಿಂದ ನಾವು ನಿಮ್ಮನ್ನು ಮುಟ್ಟುವುದಿಲ್ಲ, ಎಂದು ಲೈಂಗಿಕ ಕಾರ್ಯಕರ್ತೆಯರಿಗೆ ಹೇಳಿದವು,” ಎಂದು ದಿಲ್ಲಿಯಲ್ಲಿರುವ  ಮಾನವ ಹಕ್ಕುಗಳ ಕಾನೂನು ಕಾರ್ಯಜಾಲ ಇದರ ವಕೀಲರಾದ ಸ್ನೇಹಾ ಮುಖರ್ಜಿ ಹೇಳಿದ್ದಾರೆ. 2021 ಮಾನವ ಕಳ್ಳಸಾಗಣಿಕೆಯ ಮಸೂದೆ ಪ್ರಕಾರ ಎಲ್ಲ ಲೈಂಗಿಕ ಕಾರ್ಯಕರ್ತರನ್ನು ಕಳ್ಳಸಾಗಣಿಕೆಯ ಬಲಿಪಶುಗಳು, ಮತ್ತು ಒಮ್ಮೆ ಕಾನೂನಿನ ವ್ಯಾಪ್ತಿಯಲ್ಲಿ ತಂದರೆ, ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ನಿರ್ವಹಿಸುವುದು ಕಠಿಣ, ಎನ್ನುತ್ತಾರೆ ಮುಖರ್ಜಿ. ಇದು ಲೈಂಗಿಕ ಕಾರ್ಯಕರ್ತೆಯರಿಗೆ ಮತ್ತೆ ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗುವಂತೆ ಮಾಡುತ್ತದೆ ಎಂದು ಎಚ್ಚರಿಸಿದರು.

2020ಕ್ಕೆ ಮೊದಲು ದಿನದ ಒಬ್ಬ ಅಥವಾ ಇಬ್ಬರು ಗಿರಾಕಿಗಳು 200 ರಿಂದ 400 ರೂ. ವರೆಗೆ ನೀಡುತ್ತಿದ್ದು, ತಿಂಗಳಿಗೆ 6,000-8,000 ರೂ. ವರೆಗೆ ಗಳಿಸಬಹುದಾಗಿತ್ತು. ದೇಶಾದ್ಯಂತ ಕೋವಿಡ್‌-19 ಮೊದಲ ಲಾಕ್‌ಡೌನ್‌ ಘೋಷಿಸಿದಾಗಿನಿಂದ ತಿಂಗಳಗಟ್ಟಲೆ ಗಿರಾಕಿಗಳೇ ಇರಲಿಲ್ಲ, ಲೈಂಗಿಕ ಕಾರ್ಯಕರ್ತೆಯರ ರೀತಿ ಅನೇಕ ಅನೌಪಚಾರಿಕ ಕೆಲಸಗಾರರು ದಾನವನ್ನೇ ಅವಲಂಬಿಸಬೇಕಾಯಿತು. ಅಲ್ಪ ಪ್ರಮಾಣದ ಆಹಾರ ವಸ್ತುಗಳು ಸಿಕ್ಕರೂ, ಔಷಧದ ವಿಷಯ ಕೇಳುವಂತಿಲ್ಲ.

“ಮಾರ್ಚ್‌ 2021ರಲ್ಲಿ ಆಹಾರ ಸಾಮಗ್ರಿಗಳನ್ನು ನಿಲ್ಲಿಸಲಾಯಿತು. ಲೈಂಗಿಕ ಕಾರ್ಯಕರ್ತೆಯರಿಗೆ ನೆರವಾಗಲು ಸರಕಾರ ಯಾವುದೇ ರೀತಿಯ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಸಾಂಕ್ರಮಿಕದಲ್ಲಿ ಎರಡು ವರ್ಷ ಕಳೆಯಿತು, ಲೈಂಗಿಕ ಕಾರ್ಯಕರ್ತೆಯರು ಈಗಲೂ ಗಿರಾಕಿಗಳಿಗಾಗಿ ಹರಸಾಹಸಪಡುತ್ತಿದ್ದಾರೆ. ಆಹಾರದ ಕೊರತೆಯ ಜೊತೆಯಲ್ಲಿ ಜೀವನೋಪಾಯಕ್ಕೂ ಏನೂ ಇಲ್ಲದೆ ಮಾನಸಿಕ ಆರೋಗ್ಯವೂ ಹದಗೆಟ್ಟಿತು ಮತ್ತು ಕುಟುಂಬಗಳು ಏನು ಮಾಡಬೇಕೆಂದು ಯೋಚಿಸತೊಡಗಿದರು,” ಎಂದು ಎಐಎನ್‌ಎಸ್‌ಡಬ್ಲ್ಯುನಲ್ಲಿ ಸಮನ್ವಯಕಾರರಾಗಿರುವ ಅಮಿತ್‌ ಕುಮಾರ್‌ ಹೇಳುತ್ತಾರೆ.

2014ರ ವರದಿಯ ಪ್ರಕಾರ ಭಾರತದಲ್ಲಿ 8,00,000 ಲೈಂಗಿಕ ಕಾರ್ಯಕರ್ತೆಯರು ಇದ್ದರು. ತಿವಾರಿ ಅವರ ಪ್ರಕಾರ ದಿಲ್ಲಿಯಲ್ಲಿ 30,000 ಇದ್ದಾರೆ- ಸುಮಾರು 30 ಎನ್‌ಜಿಒಗಳು ಅವರೊಂದಿಗೆ ಕೆಲಸ ಮಾಡುತ್ತಿವೆ. ಪ್ರತಿಯೊಂದಕ್ಕೂ 1,000 ಅಥವಾ ಅದಕ್ಕಿಂತ ಹೆಚ್ಚು ಲೈಂಗಿಕ ಕಾರ್ಯಕರತೆಯರುನ್ನು ಪರೀಕ್ಷೆ ಮಾಡುವ ಗುರಿ ನೀಡಲಾಗಿದೆ. ಮಹಿಳೆಯರು ದಿನಗೂಲಿ ನೌಕರರಂತೆ ಕಾಣಿಸಿಕೊಳ್ಳುತ್ತಾರೆ. “ನಾವು ಅದನ್ನು ಲೈಂಗಿಕ ಕೆಲಸ ಎಂದು ಕರೆಯುತ್ತೇವೆ ಹೊರತು ವೇಶ್ಯೆಗಾರಿಕೆ ಎಂದಲ್ಲ. ನಾನು ದಿನವೂ ಗಳಿಸುತ್ತೇನೆ ಮತ್ತು ದಿನವೂ ತಿನ್ನುತ್ತೇನೆ, ನನಗೆ ಒಂದು ನಿಗದಿತವಾದ ಸ್ಥಳ ಇದೆ. ನಾನು ದಿನಕ್ಕೆ ಒಬ್ಬರು ಅಥವಾ ಇಬ್ಬರು ಗಿರಾಕಿಗಳನ್ನು ಕೊಂಡೊಯ್ಯುತ್ತೇನೆ, ಪ್ರತಿಯೊಬ್ಬರು 200 ರಿಂದ 300 ರೂ, ನೀಡುತ್ತಾರೆ,” ಎನ್ನುತ್ತಾರೆ ಯುಪಿಯ ಬುದಾವುನ್‌ ಜಿಲ್ಲೆಯಿಂದ ಆಗಮಿಸಿರುವ 34 ವರ್ಷದ ವಿಧವೆ ರಾಣಿ ಹೇಳುತ್ತಾರೆ.

There are nearly 30,000 sex workers in Delhi, and about 30 not-for-profit organisations provide them with information and support
PHOTO • Shalini Singh
PHOTO • Shalini Singh

ದಿಲ್ಲಿಯಲ್ಲಿ ಸುಮಾರು 30,000 ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಸುಮಾರು 30 ಎನ್‌ಜಿಒಗಳು ಅವರಿಗೆ ಮಾಹಿತಿ ಮತ್ತು ನೆರವನ್ನು ನೀಡುತ್ತಿವೆ

ಆದಾಯದ ಮಾರ್ಗ ಆದರೆ ಒಂದು ಭಾಗ ಅವರ ಗುರುತು. “ಲೈಂಗಿಕ ಕಾರ್ಯಕರ್ತೆಯರು ಒಬ್ಬಂಟಿ ಮಹಿಳೆ, ಒಂಟಿ ತಾಯಿ, ದಲಿತ ಮಹಿಳೆ, ವಲಸೆ ಬಂದ ಮಹಿಳೆ ಇತ್ಯಾದಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇತರ ಗುರುತುಗಳು ಅವರ ಬದುಕಿನ ಮಾರ್ಗವನ್ನು ನಿರ್ಧರಿಸುತ್ತವೆ,” ಎನ್ನುತ್ತಾರೆ ಮುಂಬೈ ಮೂಲದ ಮಂಜಿಮಾ ಭಟ್ಟಾಚಾರ್ಯ. ಇವರು ಹೋರಾಟಗಾರ್ತಿ, ಮಹಿಳಾವಾದಿ ಅಲ್ಲದೆ ಜಾಗತೀಕರಣ ಮತ್ತು ತಂತ್ರಜ್ಞಾನ ಯಾವ ರೀತಿಯಲ್ಲಿ ಲೈಂಗಿಕ ವಾಣಿಜ್ಯದ ಮೇಲೆ ಪರಿಣಾಮಬೀರಿತು ಅವರು ʼಇಂಟಿಮೇಟ್‌ ಸಿಟಿʼ ಎಂಬ ಕೃತಿಯನ್ನು ರಚಿಸಿದ್ದಾರೆ. “ತನ್ನ ಬದುಕನ್ನು ರೂಪಿಸಿಕೊಳ್ಳಲು ಮಹಿಳೆಯು ಹಲವಾರು ರೀತಿಯ ಅನೌಪಚಾರಿಕ ಕೆಲಸಗಳನ್ನು ಮಾಡಬೇಕಾಗುತ್ತದೆ; ಎಂದು ಹಂತದಲ್ಲಿ ಮನೆಯ ಕೆಲಸ, ಇನ್ನೊಂದು ಸಂದರ್ಭದಲ್ಲಿ ಲೈಂಗಿಕ ಕೆಲಸ, ಮೂರನೆಯದಾಗಿ ಕಟ್ಟಡ ನಿರ್ಮಾಣ ಕಾರ್ಯ ಅಥವಾ ಫ್ಯಾಕ್ಟರಿ ಕೆಲಸ,” ಎಂದರು.

ಲೈಂಗಿಕ ಕಾರ್ಯಕರ್ತೆಯರ ಕೆಲಸವೆಂಬುದು ಅನಿಶ್ಚಿತತೆಯಿಂದ ಬಂದದ್ದು. “ನಾವು ಈ ಕೆಲಸಕ್ಕಾಗಿ ಯಾರದ್ದಾದರೂ ಮನೆಯನ್ನು ಬಳಸಿದರೆ, ಆತನಿಗೂ ಕಮಿಷನ್‌ ನೀಡಬೇಕಾಗುತ್ತದೆ. ಗಿರಾಕಿ ನನ್ನದಾಗಿದ್ದಲ್ಲಿ ನಾನು ತಿಂಗಳಿಗೆ 200 ರಿಂದ 300 ರೂ ಬಾಡಿಗೆ ನೀಡುತ್ತೇನೆ. ಒಂದು ವೇಳೆ ಅದು ದೀದಿ [ಮನೆಯ ಮಾಲೀಕರ] ಗಿರಾಕಿಯಾಗಿದ್ದರೆ, ನಾನು ನಿರ್ದಿಷ್ಟವಾದ ಮೊತ್ತವನ್ನು ನೀಡಬೇಕು.,” ಎನ್ನುತ್ತಾರೆ ರಾಣಿ.

ಗರುತನ್ನು ಬಯಲು ಮಾಡಿ ಗಂಡಾಂತರಕ್ಕೆ ಸಿಲುಕಿಸುವುದಿಲ್ಲ ಎಂಬುದನ್ನು ಖಚಿತಪಡಿಸಿದ ನಂತರ ಅವರು ನನ್ನನ್ನು ಮಾಲೀಕರಿರುವ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು, ಅವರಿಗೆ ನೀಡಲಾದ ಕೊಠಡಿಯನ್ನು ತೋರಿಸಿದರು. ಅದು ಅಲ್ಪ ಪೀಠೋಪಕರಣಗಳಿಂದ ಕೂಡಿದ ಕೊಠಡಿಯಾಗಿದ್ದು, ಒಂದು ಬೆಡ್‌, ಕನ್ನಡಿ, ಭಾರತದ ದೇವರುಗಳ ಫೊಟೋಗಳು, ಬೇಸಿಗೆಗಾಗಿ ಒಂದು ಹಳೇಯ ಕೂಲರ್‌ ಇದ್ದಿತ್ತು. ಇಬ್ಬರು ಯುವ ಮಹಿಳೆಯರು ಅಲ್ಲಿ ಕುಳಿತಿದ್ದು ಮೊಬೈಲ್‌ ನೋಡುವುದರಲ್ಲಿ ತಲ್ಲೀನರಾಗಿದ್ದರು. ಬಾಲ್ಕಾನಿಯಲ್ಲಿ ಇಬ್ಬರು ಪುರುಷರು ಸಿಗರೇಟು ಸೇದುತ್ತಿದ್ದು, ಕಣ್ಣು ಹೊರಳಿಸಿ ನೋಡಿದರು.

ʼಜಗತ್ತಿನ ಅತ್ಯಂತ ಪುರಾತನ ವೃತ್ತಿ,ʼಯ ಆಯ್ಕೆಯಲ್ಲಿನ ಪ್ರಶ್ನೆ- ದೇಹವು ಆರ್ಥಿಕತೆಯ ಮೂಲ-ಇದಕ್ಕೆ ಉತ್ತರ ನೀಡುವುದು ಐತಿಹಾಸಿಕವಾಗಿ ಜಟಿಲವಾದುದು. ಆಯ್ಕೆಯು ಉತ್ತಮ ಅಥವಾ ನೈತಿಕವಾಗಿಲ್ಲದಿರುವಾಗ ಆ ಆಯ್ಕೆಯನ್ನು ಸಮರ್ಥಿಸಿಕೊಳ್ಳುವುದು ಕಷ್ಟ ಎನ್ನುತ್ತಾರೆ ಭಟ್ಟಾಚಾರ್ಯ. “ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರಯವ ಯಾವ ಮಹಿಳೆ ತಾನು ಅಂತ ಕೆಲಸ ಮಾಡುತ್ತಿದ್ದೇನೆ ಎಂದು ಗುರುತಿಸಿಕೊಳ್ಳಲು ಬಯಸುತ್ತಾರೆ? ಇದಕ್ಕೆ ಸಮಾನಾಂತರವಾಗಿ ಹುಡುಗಿಯೊಬ್ಬಳು ತನ್ನ ಪ್ರಿಯಕರ ಅಥವಾ ಜತೆಗಾರನೊಂದಿಗೆ ಸಮ್ಮತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದನ್ನು ಮುಚ್ಚುಮರೆ ಇಲ್ಲದೆ ಹೇಳುವುದು ಕಷ್ಟ, ಏಕೆಂದರೆ ಅಂಥ ಹೆಣ್ಣುಮಕ್ಕಳು ʼಕೆಟ್ಟʼ ಹುಡುಗಿಯರು ಎಂದೆನಿಸಿಕೊಳ್ಳುತ್ತಾರೆ.”

ತನ್ನ ಮಕ್ಕಳ ಆಹಾರ, ವಸತಿ, ಶಾಲಾ ಶುಲ್ಕ ಮತ್ತು ಅವರ ಔಷಧಿಗಾಗಿ ತಮ್ಮ ತಾಯಿ ಏನು ಮಾಡುತ್ತಿದ್ದಾಳೆ ಎಂದು ಬೆಳೆಯುತ್ತಿರುವ ಮಕ್ಕಳು ಕೇಳಿದರೆ ಏನೆಂದು ಉತ್ತರಿಸಲಿ ಎಂದು ರಾಣಿ ಅಚ್ಚರಿಪಡುತ್ತಾರೆ.

ಲೈಂಗಿಕ ಕಾರ್ಯಕರ್ತೆಯರ ಖಾಸಗಿತನವನ್ನು ರಕ್ಷಿಸುವುದಕ್ಕಾಗಿ ಅವರ ಹೆಸರನ್ನು ಬದಲಾಯಿಸಲಾಗಿದೆ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳುಹಿಸಿ

ಅನುವಾದ: ಸೋಮಶೇಖರ ಪಡುಕರೆ

Shalini Singh

Shalini Singh is a founding trustee of the CounterMedia Trust that publishes PARI. A journalist based in Delhi, she writes on environment, gender and culture, and was a Nieman fellow for journalism at Harvard University, 2017-2018.

Other stories by Shalini Singh
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

Other stories by Priyanka Borar
Translator : Somashekar Padukare

Somashekar Padukare is a Udupi based sports journalist. From last 25 years he is working as a sports journalist in different Kannada Daily.

Other stories by Somashekar Padukare