ದಿನಗೂಲಿ ನೌಕರರು: ಇವರ ಬದುಕಿನಲ್ಲಿ ಅನಿಶ್ಚಿತ ಭವಿಷ್ಯವೊಂದೇ ನಿಶ್ಚಿತ

ಜೂನ್ 4, 2024ರಂದು, ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ಮರುದಿನವೇ ಜಾರ್ಖಂಡ್‌ ರಾಜ್ಯದ ಡಾಲ್ಟನ್‌ ಗಂಜ್‌ ಪ್ರದೇಶದ ಕಾರ್ಮಿಕರ ಮಾರುಕಟ್ಟೆಯಲ್ಲಿನ ಕೆಲಸಗಾರರು ಇಲ್ಲಿ ತಮಗೆ ಕೆಲಸ ಸಿಗುವುದು ಕಷ್ಟವಾಗುತ್ತಿದೆ ಎಂದು ದೂರುತ್ತಿದ್ದರು

ಜೂನ್ 11, 2024 | ಅಶ್ವಿನಿ ಕುಮಾರ್ ಶುಕ್ಲಾ

ರೋಹ್ಟಕ್: ಬದಲಾವಣೆಗಾಗಿ ಮತ ಚಲಾಯಿಸುತ್ತಿರುವ ಕಾರ್ಮಿಕರು

ಹರಿಯಾಣದ ಈ ತಹಸಿಲ್ ಒಂದು ಶತಮಾನದ ಹಿಂದೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮೈಲುಗಲ್ಲೊಂದನ್ನು ಸ್ಥಾಪಿಸಿತ್ತು. ಇಂದು ಈ ಪ್ರದೇಶದ ಕಾರ್ಮಿಕರು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಕಾಳಜಿಗಳೇನು ಎನ್ನುವ ಕುರಿತು ಮಾತನಾಡಿದ್ದಾರೆ

ಜೂನ್ 9, 2024 | ಅಮೀರ್ ಮಲಿಕ್

ಬದುಕಿನ ಅಡಕತ್ತರಿಯಲ್ಲಿ ಸಿಲುಕಿರುವ ಅಟ್ಟಾರಿ-ವಾಘಾ ಗಡಿ ಕೂಲಿ ಕೆಲಸಗಾರರು

ಇಲ್ಲಿನ ಎಲ್ಲ ಮತದಾರರೂ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ದೆಹಲಿಯ ತನಕ ಮುಟ್ಟಿಸಬಲ್ಲ ಪ್ರಬಲ ಸಂಸದರಿಗಾಗಿ ತುಡಿಯುತ್ತಿದ್ದಾರೆ. ಕೆಲಸದ ನಿಮಿತ್ತ ಭಾರತ ಪಾಕಿಸ್ತಾನದ ಸೂಕ್ಷ್ಮ ಗಡಿಯೊಂದರಲ್ಲಿ ದುಡಿಯುತ್ತಿದ್ದ ಇಲ್ಲಿನ ಕೂಲಿಗಳು 2024ರ ಚುನಾವಣೆಯಲ್ಲಿ ತಾವು ಚಲಾಯಿಸಲಿರುವ ಮತ ತಮ್ಮ ಬದುಕಿನಲ್ಲಿ ಬದಲಾವಣೆ ತರಬಹುದು ಎನ್ನುವ ನಂಬಿಕೆಯಲ್ಲಿದ್ದಾರೆ

ಜೂನ್ 7, 2024 | ಸಂಸ್ಕೃತಿ ತಲ್ವಾರ್

ʼಈ ಪ್ರತಿಭಟನೆಗಳು ನಮಗೆ ಶಾಲೆಯಿದ್ದಂತೆʼ

ಪಂಜಾಬ್‌ ರಾಜ್ಯದ ಮಾನ್ಸಾ ಜಿಲ್ಲೆಯ ಕಿಶನ್‌ಗಢ್‌ ಸೇಧಾ ಸಿಂಗ್‌ ವಾಲಾ ಎನ್ನುವ ಗ್ರಾಮದ ಹಿರಿಯ ಮಹಿಳೆಯರ ಪಾಲಿಗೆ 2020-2021ರ ಐತಿಹಾಸಿಕ ಕೃಷಿ ಪ್ರತಿಭಟನೆಗಳು ಪಾಠದಂತಿದ್ದವು. ಈ ಪ್ರತಿಭಟನೆಯೇ ಅವರಿಗೆ 2024ರ ಸಾರ್ವಜನಿಕ ಚುನಾವಣೆಯಲ್ಲಿ ಯಾರಿಗೆ ಮತ ಚಲಾಯಿಸಬೇಕೆನ್ನುವ ಸ್ಪಷ್ಟತೆಯನ್ನೂ ಕೊಟ್ಟಿತು

ಜೂನ್ 5, 2024 | ಅರ್ಷ್‌ದೀಪ್ ಅರ್ಶಿ

ಚುನಾವಣೆಯ ದೃಶ್ಯ ಮತ್ತು ಕಾವ್ಯ

ಪಶ್ಚಿಮ ಬಂಗಾಳದ ಕವಿಯೊಬ್ಬರು ಮತ್ತು ಇನ್ನೊಬ್ಬ ವರದಿಗಾರರು 2024ರ ಚುನಾವಣೆಯ ಸಂದರ್ಭದಲ್ಲಿ ತಾವು ಕಳೆದ ಐದು ವರ್ಷಗಳಲ್ಲಿ ರಾಜ್ಯದ ವಿವಿದೆಡೆ ಪ್ರಯಾಣಿಸುವಾಗ ಕಂಡ ದೃಶ್ಯಗಳನ್ನು ನಮ್ಮೆದುರು ದೃಶ್ಯ ಮತ್ತು ಕಾವ್ಯದ ರೂಪದಲ್ಲಿ ಇರಿಸಿದ್ದಾರೆ

ಜೂನ್ 2, 2024 | ಜೋಶುವಾ ಬೋಧಿನೇತ್ರ ಮತ್ತು ಸ್ಮಿತಾ ಖಾಟೋರ್

ವಾರಣಾಸಿಯಲ್ಲಿ ಮನರೇಗಾ ಯೋಜನೆಯೇ ನಾಪತ್ತೆ

ಈ ಲೋಕಸಭಾ ಕ್ಷೇತ್ರದಿಂದ ನರೇಂದ್ರ ಮೋದಿಯವರು ಎರಡು ಬಾರಿ ಚುನಾಯಿತರಾಗಿದ್ದಾರೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಯೋಜನೆಗೆ ಸಮರ್ಪಕವಾಗಿ ಸರ್ಕಾರಿ ಅನುದಾನ ಸಿಗದೆ ಇಲ್ಲಿನ ಮತದಾರರು ಭ್ರಮನಿರಸನಕ್ಕೊಳಗಾಗಿದ್ದಾರೆ

ಜೂನ್ 1, 2024 | ಆಕಾಂಕ್ಷಾ ಕುಮಾರ್

ʼರಾಜಕಾರಣಿಗಳು ವೋಟು ಕೇಳಲು ಬರುತ್ತಾರೆ… ಮತ್ತೆ ಇತ್ತ ತಲೆ ಹಾಕುವುದಿಲ್ಲʼ

ಜಾರ್ಖಂಡ್‌ ರಾಜ್ಯದ ದುಮ್ಕಾ ಪ್ರದೇಶದ ಬುಡಕಟ್ಟು ಹಳ್ಳಿಗಳು ಹೆಚ್ಚು ಹೆಚ್ಚು ಸರ್ಕಾರದ ಯೋಜನೆಗಳು ಮತ್ತು ಉದ್ಯೋಗಗಳಿಂದ ವಂಚಿತವಾಗಿವೆ. ಈ ಕುರಿತಾದ ಅಸಮಾಧಾನ 2024ರ ಸಾರ್ವತ್ರಿಕ ಚುನಾವಣೆಯ ಕೊನೆಯ ಹಂತಕ್ಕೆ ಮುಂಚಿತವಾಗಿ ಇಲ್ಲಿನ ಜನರಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು

ಜೂನ್ 1, 2024 | ಅಶ್ವಿನಿ ಕುಮಾರ್ ಶುಕ್ಲಾ

ಮಾದಕ ವ್ಯಸನ ಮುಕ್ತ ಗ್ರಾಮಕ್ಕಾಗಿ ನಂಗಲ್‌ನ ಮಹಿಳೆಯರ ಬೇಡಿಕೆ

ಹೆರಾಯಿನ್ ಮತ್ತು ಇತರ ಮಾದಕ ವಸ್ತುಗಳು ಪಂಜಾಬ್‌ನ ಮೋಗಾ ಜಿಲ್ಲೆಯ ಯುವಕರು ಮತ್ತು ಹಿರಿಯರ ಜೀವನವನ್ನು ಬಲಿ ತೆಗೆದುಕೊಳ್ಳುತ್ತಿವೆ. ಇದರಿಂದಾಗಿ ಮಹಿಳೆಯರು ಉದ್ಯೋಗ ಹುಡುಕಲು ಶುರು ಮಾಡಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಇದೊಂದು ಪ್ರಮುಖ ವಿಷಯವಾಗಿದೆ

ಮೇ 31, 2024 | ಸಂಸ್ಕೃತಿ ತಲ್ವಾರ್

ʼಹಿಂದೊಮ್ಮೆ ದೇಶವನ್ನು ಕಟ್ಟುವ ಸಲುವಾಗಿ ಮತ ಚಲಾಯಿಸಿದ್ದೆ… ಈ ಬಾರಿ ದೇಶವನ್ನು ಉಳಿಸುವ ಸಲುವಾಗಿ ಮತ ಚಲಾಯಿಸಲಿದ್ದೇನೆʼ

92 ವರ್ಷದ ಖ್ವಾಜಾ ಮೊಯಿನುದ್ದೀನ್ ಭಾರತದ ಮೊದಲ ಚುನಾವಣೆಯಲ್ಲಿ ಮತ ಚಲಾಯಿಸಿದ ದಿನವನ್ನು ನೆನಪಿಸಿಕೊಂಡಿದ್ದಾರೆ. ಅವರು 2024ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮತ ಚಲಾಯಿಸಿದ್ದಾರೆ. ಮಹಾರಾಷ್ಟ್ರದ ಬೀಡ್ ನಿವಾಸಿಯಾದ ಅವರು ನಮ್ಮ ಜಾತ್ಯತೀತ ಪ್ರಜಾಪ್ರಭುತ್ವದ ಭೂತ, ವರ್ತಮಾನ ಮತ್ತು ಭವಿಷ್ಯದ ಕುರಿತು ಮಾತನಾಡಿದ್ದಾರೆ

ಮೇ 30, 2024 | ಪಾರ್ಥ್ ಎಂ.ಎನ್.

'ನಾನು ನಿದ್ರೆಯಲ್ಲೂ [ಸಿಲಿಕಾ] ಧೂಳು ಉಸಿರಾಡಿದ್ದೆ'

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿ ಮತ್ತು ಮಿನಾಖಾನ್ ಬ್ಲಾಕುಗಳಿಂದ ವಲಸೆ ಕಾರ್ಮಿಕರು ರಾಜ್ಯದ ಇತರ ಭಾಗಗಳಿಗೆ ಕೆಲಸ ಮಾಡಲು ಗುಳೇ ಹೋಗಿದ್ದರು. ಕೆಲವೇ ವರ್ಷಗಳಲ್ಲಿ, ಅವರು ಸಿಲಿಕೋಸಿಸ್ ರೋಗಕ್ಕೆ ತುತ್ತಾದರು. 2024ರ ಸಾರ್ವತ್ರಿಕ ಚುನಾವಣೆಗಳು ತಮ್ಮ ಬದುಕಿನಲ್ಲಿ ಯಾವ ಬದಲಾವಣೆಯನ್ನೂ ತರುವುದಿಲ್ಲ ಎಂದು ಅವರು ಹೇಳುತ್ತಾರೆ

ಮೇ 29, 2024 | ರಿತಾಯನ್ ಮುಖರ್ಜಿ

'ನಾವೇಕೆ ಮತ ಚಲಾಯಿಸುತ್ತಿದ್ದೇವೆ?'

ನಮ್ಮ ಪ್ರಜಾಪ್ರಭುತ್ವದಲ್ಲಿ ಲೋಕಸಭಾ ಚುನಾವಣೆಯ ಬಗ್ಗೆ ಕವಿಯ ಅಭಿಪ್ರಾಯವು ಸಾಮಾನ್ಯ ಜನರ ಹಕ್ಕುಗಳನ್ನು ಹೊರತುಪಡಿಸಿ ಎಲ್ಲದರ ಬಗ್ಗೆ ಹೇಗೆ ಇರಬಹುದು ಎಂಬುದನ್ನು ತೋರಿಸುತ್ತದೆ

ಮೇ 28, 2024 | ಮೌಮಿತಾ ಆಲಂ

ಜಲ್‌ಗಾಂವ್‌: ಕೃಷ್ಣ ಭರಿತ್‌ ಹೋಟೆಲ್ಲಿನ ಚುನಾವಣಾ ತಾರೆಗಳು

ಮಹಾರಾಷ್ಟ್ರದ ಜಲಗಾಂವ್‌ನಲ್ಲಿ 2024ರ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಸಮಯದಲ್ಲಿ ಸ್ಥಳೀಯ ತಿನಿಸುಗಳು ಮತ್ತು ಅವುಗಳನ್ನು ತಯಾರಿಸುವ 14 ಮಹಿಳೆಯರು ಆಕರ್ಷಣೆಯ ಕೇಂದ್ರವಾಗಿದ್ದಾರೆ

ಮೇ 28, 2024 | ಕವಿತಾ ಅಯ್ಯರ್‌

ಪಂಜಾಬಿನಲ್ಲಿ ಇದು ಮರಳಿ ಕೊಡುವ ಕಾಲ

ಈಗ್ಗೆ ಸುಮಾರು ಮೂರು ಬೇಸಗೆಗಳ ಹಿಂದೆ ಪ್ರತಿಭಟನಾ ನಿರತ ರೈತರ ಮೇಲೆ ಆಡಳಿತವು ತನ್ನ ಮೃಗೀಯ ಬಲವನ್ನು ಬಳಸಿ ಅವರು ದೆಹಲಿ ಪ್ರವೇಶಿಸದಂತೆ ತಡೆದಿದ್ದನ್ನು ದೇಶವು ನೋಡಿತ್ತು. ಪ್ರಸ್ತುತ ಪಂಜಾಬ್‌ ರಾಜ್ಯದ ರೈತರು ಅಂದಿನ ಲೆಕ್ಕವನ್ನು ಅಹಿಂಸಾತ್ಮಕವಾಗಿ ಚುಕ್ತಾ ಮಾಡುತ್ತಿದ್ದಾರೆ

ಮೇ 26, 2024 | ವಿಶ್ವ ಭಾರತಿ

́ಅವರಿಗೆ [ಬಿಜೆಪಿಗೆ] ಹಕ್ಕಿಲ್ಲ...́

ರೈತರು ಮತ್ತು ಕಾರ್ಮಿಕರನ್ನು ಕೆಟ್ಟದಾಗಿ ನಡೆಸಿಕೊಂಡಿರುವ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಕೇಳುವ ಹಕ್ಕು ಇಲ್ಲ ಎಂದು ಪಂಜಾಬ್‌ನಾದ್ಯಂತ ಜನರು ಹೇಳುತ್ತಿದ್ದಾರೆ. ಇದು ಈ ವಾರ ಲುಧಿಯಾನದದಲ್ಲಿ ನಡೆದ ಕಿಸಾನ್-ಮಜ್ದೂರ್ ಮಹಾಪಂಚಾಯತ್‌ನ ಸಂದೇಶ

ಮೇ 25, 2024 | ಅರ್ಷದೀಪ್ ಅರ್ಶಿ

ಬ್ರೈಲ್ ಮತ್ತು ಮತಪತ್ರ

ಅಂಗವಿಕಲ ವ್ಯಕ್ತಿಗಳಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಡಬೇಕೆನ್ನುವ ಸರ್ಕಾರಿ ನಿಯಮಗಳು ಜಾರಿಯಲ್ಲಿದ್ದರೂ ಬಬ್ಲು ಕೈಬ್ರತಾ ಅವರಂತಹ ಕೆಲವರಿಗೆ 2024ರ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುತ್ತದೆಯೆನ್ನುವ ಕುರಿತು ಯಾವ ಗ್ಯಾರಂಟಿಯೂ ಇಲ್ಲ

ಮೇ 24, 2024 | ಸರ್ಬಜಯ ಭಟ್ಟಾಚಾರ್ಯ

ಸುಶಿಕ್ಷಿತ, ನಿರುದ್ಯೋಗಿ ಮತ್ತು ಅವಿವಾಹಿತ ಯುವ ರೈತರು

ಯವತ್ಮಾಲ್‌ ಸೇರಿದಂತೆ ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿ ಮದುವೆಯೇ ಒಂದು ಸಮಸ್ಯೆಯಾಗಿದೆ. ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಯುವತಿಯರು ಈ ಬಡ ರೈತರನ್ನು ಬಿಟ್ಟು ಸರ್ಕಾರಿ ನೌಕರಿ ಇರುವವರನ್ನು ವಿವಾಹವಾಗುತ್ತಿದ್ದಾರೆ. ಇದು ಕೃಷಿ ಆದಾಯದಲ್ಲಿ ಆಗಿರುವ ಕುಸಿತದ ಪರಿಣಾಮ. 2024 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆದಾಯದ ಕುಸಿತ ಮತ್ತು ಮದುವೆಯ ಬಗೆಗಿನ ನಿರೀಕ್ಷೆಗಳೇ ಇವರ ಮನಸ್ಸಿನ ತುಂಬಾ ಆವರಿಸಿವೆ

ಮೇ 22, 2024 | ಜೈದೀಪ್ ಹರ್ಡೀಕರ್

ಮುರ್ಷಿದಾಬಾದ್:‌ ಅನ್ನ ಮೊದಲು, ಭಾಷೆ, ಮತದಾನ ಇತ್ಯಾದಿ ನಂತರ…

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಈರುಳ್ಳಿ ಹೊಲಗಳಲ್ಲಿ ಕೆಲಸ ಮಾಡುವ ಮಾಲ್ ಪಹಾಡಿಯಾ ಆದಿವಾಸಿ ಮಹಿಳೆಯರು ತಮ್ಮ ಮೊದಲ ಆದ್ಯತೆ ಕೆಲಸ ಮತ್ತು ಆಹಾರ ನಂತರವೇನಿದ್ದರೂ ಮತ ಚಲಾಯಿಸುವುದು ಎನ್ನುತ್ತಾರೆ. ಈ ಕಾರ್ಮಿಕ ಮಹಿಳೆಯರೊಂದಿಗೆ ಪರಿ ಮಾತುಕತೆ ಇಲ್ಲಿದೆ

ಮೇ 21, 2024 | ಸ್ಮಿತಾ ಖಾಟೋರ್

2024ರ ಚುನಾವಣೆಯಲ್ಲಿ ಮತ ಚಲಾಯಿಸಿದ ಸ್ವಾತಂತ್ರ್ಯ ಹೋರಾಟಗಾರ್ತಿ ಭಬಾನಿ ಮಹತೋ

ಧೈರ್ಯಶಾಲಿ ಮತ್ತು ಅಪ್ರತಿಮ ವ್ಯಕ್ತಿತ್ವದವರಾದ ಭಬಾನಿ ಮಹತೋ ಭಾರತದ ಸ್ವಾತಂತ್ರ್ಯಕ್ಕಾಗಿ ದಶಕಗಳ ಐತಿಹಾಸಿಕ ಹೋರಾಡಿದವರು, ಮತ್ತು ಹಾಗೆ ಹೋರಾಡುತ್ತಲೇ ತನ್ನ ಕುಟುಂಬ ಮತ್ತು ಇತರ ಕ್ರಾಂತಿಕಾರಿಗಳನ್ನು ಸಾಕಿದವರು, ಅವರೆಲ್ಲರಿಗಾಗಿ ಅಡುಗೆ ಮಾಡಿ ಅವರನ್ನೆಲ್ಲ ಪೋಷಿಸಿದವರು. ಇಂತಹ ದಿಟ್ಟ ಹೋರಾಟದ ಮನೋಭಾವದ ಅವರು ಮೊನ್ನೆ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದರು. ಮತ್ತು ಆ ಮೂಲಕ ಸುಮಾರು 106 ವರ್ಷ ವಯಸ್ಸಿನ ಅವರು ತಮ್ಮ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಹೋರಾಟವನ್ನು ಮುಂದುವರಿಸಿದ್ದಾರೆ...

ಮೇ 20, 2024 | ಪಾರ್ಥ ಸಾರಥಿ ಮಹತೋ

ದಾಮು ನಗರ ಈ ಬಾರಿ ಪ್ರಜಾಪ್ರಭುತ್ವಕ್ಕಾಗಿ ಮತ ಚಲಾಯಿಸಲಿದೆ

ಮುಂಬೈ ಉತ್ತರ ಸಂಸದೀಯ ಕ್ಷೇತ್ರದ ದಾಮು ನಗರ ಕೊಳೆಗೇರಿಯ ನಿವಾಸಿಗಳು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಅಂಚಿನಲ್ಲಿರುವ ಜನರ ಹಕ್ಕುಗಳನ್ನು ರಕ್ಷಿಸುವವರ ಪರ ಮತ ಚಲಾಯಿಸಲು ನಿರ್ಧರಿಸಿದ್ದಾರೆ

ಮೇ 19, 2024 | ಜ್ಯೋತಿ ಶಿನೋಲಿ

ʼಪ್ರಜಾಪ್ರಭುತ್ವ ನಾಶವಾದರೆ, ಶೋಷಿತರೂ ನಾಶವಾಗುತ್ತಾರೆʼ

ಆಡಳಿತ ಪಕ್ಷದ ಬೆಂಬಲಿಗರು 2024ರ ಸಾರ್ವತ್ರಿಕ ಚುನಾವಣೆಯ ಪ್ರಚಾರಕ್ಕೆಂದು ಹೋಗಿದ್ದ ಕ್ವೀರ್‌ ಸಮುದಾಯದ ಜನರಿಗೆ ಹಾಗೂ ಅದನ್ನು ವರದಿ ಮಾಡಿದ ಪತ್ರಕರ್ತರೊಬ್ಬರಿಗೆ ಬೆದರಿಕೆಯೊಡ್ಡಿದ್ದಾರೆ

ಮೇ 16, 2024 | ಶ್ವೇತಾ ಡಾಗಾ

ಇಲ್ಲಿಯೂ ಸಲ್ಲದ, ಅಲ್ಲಿಯೂ ಸಲ್ಲದ 'ಅನುಮಾನಾಸ್ಪದ ಮತದಾರರು'

ಅನುಮಾನಾಸ್ಪದ-ಮತದಾರರ (ಡಿ-ವೋಟರ್ಸ್/ಡೌಟ್‌ಫುಲ್‌ ವೋಟರ್ಸ್) ವರ್ಗವು ಅಸ್ಸಾಂ ರಾಜ್ಯದಲ್ಲಿ ಮಾತ್ರವೇ ಕಂಡು ಬರುವ ವರ್ಗ, ಅಲ್ಲಿ ಅನೇಕ ಬಂಗಾಳಿ ಮಾತನಾಡುವ ಹಿಂದೂಗಳು ಮತ್ತು ಮುಸ್ಲಿಮರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗುತ್ತದೆ. ತನ್ನ ಇಡೀ ಜೀವಮಾನವನ್ನು ಅಸ್ಸಾಂನಲ್ಲಿ ಕಳೆದ ಮರ್ಜಿನಾ ಖಾತುನ್ ಅವರಿಗೆ 2024ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮತ ಚಲಾಯಿಸಲು ಸಾಧ್ಯವಾಗಲಿಲ್ಲ

ಮೇ 15, 2024 | ಮಹಿಬುಲ್ ಹಕ್

ನೂರಾ ಎಂಟು ಅಡಿ ಉದ್ದದ ಅಗರಬತ್ತಿ

ದೇವರು ಮತ್ತು ಆತನ ಮಂದಿರದ ಕುರಿತ ಆತನ ಅಭಿಮಾನಿಗಳ ಗದ್ದಲವು ಕಡಿಮೆಯಾದ ನಂತರ, ಕವಿಯ ತೀಕ್ಷ್ಣ ಹಾಸ್ಯಭರಿತ ಸಾಹಿತ್ಯವು ದೇಶದ ಬದಲಾಗುತ್ತಿರುವ ಚಿತ್ರಣವನ್ನು ಗಮನಿಸುವಂತೆ ನಮ್ಮನ್ನು ಒತ್ತಾಯಿಸುತ್ತದೆ

ಮೇ 12, 2024 | ಜೋಶುವಾ ಬೋಧಿನೇತ್ರ

ಯಾವ ರಾಜಕಾರಣಿಯೂ ಭೇಟಿ ನೀಡದ ಊರು

ಸತ್ಪುರದ ಕಲ್ಲಿನ ಬೆಟ್ಟಗಳ ನಡುವೆಯಿರುವ ಅಂಬಾಪಾನಿ ಎನ್ನುವ ಕುಗ್ರಾಮವು ಇಂದಿಗೂ ಪ್ರಜಾಪ್ರಭುತ್ವ ಎನ್ನುವ ಪರಿಕಲ್ಪನೆಗೆ ದೂರವಾಗಿಯೇ ಉಳಿದಿದೆ. ಇಲ್ಲಿನ ನಿವಾಸಿಗಳು 2024ರ ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಆದರೆ ಅವರ ಊರಿಗೆ ಇಂದಿಗೂ ರಸ್ತೆಗಳು, ವಿದ್ಯುತ್ ಅಥವಾ ಆರೋಗ್ಯ ಸೌಲಭ್ಯಗಳು ಇಂದಿಗೂ ದೊರೆತಿಲ್ಲ

ಮೇ 11, 2024 | ಕವಿತಾ ಅಯ್ಯರ್‌

‘ನಮ್ಮ ಊರಿಗೆ ಏನು ಮಾಡಿದ್ದೀರಿ?’

ಮನರೇಗಾ ಮತ್ತು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು, ರಸ್ತೆಗಳು ಮತ್ತು ಕೈಪಂಪುಗಳಂತಹ ಸರ್ಕಾರದ ಯೋಜನೆಗಳಿಂದ ಜಾರ್ಖಂಡ್‌ನ ಪಲಾಮು ಜಿಲ್ಲೆಯ ಚೆಚರಿಯಾ ಗ್ರಾಮದ ಬಹುಪಾಲು ದಲಿತ ನಿವಾಸಿಗಳು ವಂಚಿತರಾಗಿದ್ದಾರೆ. ತಮ್ಮ ಈ ಅವಸ್ಥೆಯಿಂದ ಅಸಮಧಾನಗೊಂಡಿರುವ ಇವರು, 2024ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಇವೆಲ್ಲವನ್ನೂ ಲೆಕ್ಕಹಾಕುವುದಾಗಿ ಹೇಳುತ್ತಾರೆ

ಮೇ 10, 2024 | ಅಶ್ವಿನಿ ಕುಮಾರ್ ಶುಕ್ಲಾ

'ನಮ್ಮ ಬೇಕು ಬೇಡಗಳ ಕುರಿತು ನಮ್ಮ ಬಳಿ ಕೇಳಿ'

ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿ, ಅರಣ್ಯ ಪ್ರದೇಶಗಳಲ್ಲಿನ ಕಬ್ಬಿಣದ ಅದಿರು ಗಣಿಗಳು ಬುಡಕಟ್ಟು ಜನರ ಆವಾಸಸ್ಥಾನಗಳು ಮತ್ತು ಸಂಸ್ಕೃತಿಯನ್ನು ನಾಶಪಡಿಸಿವೆ. ಹಲವು ವರ್ಷಗಳಿಂದ, ಈ ಪ್ರದೇಶವು ಸರ್ಕಾರಿ ಭದ್ರತಾ ಪಡೆಗಳು ಮತ್ತು ಸಿಪಿಐ (ಮಾವೋವಾದಿ) ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಈ ವರ್ಷ, ಈ ಬುಡಕಟ್ಟು ಪ್ರದೇಶದ ಸುಮಾರು 1,450 ಗ್ರಾಮ ಸಭೆಗಳು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಷರತ್ತುಬದ್ಧ ಬೆಂಬಲ ನೀಡಿವೆ. ಅದಕ್ಕೆ ಕಾರಣ ಇಲ್ಲಿದೆ...

ಮೇ 8, 2024 | ಜೈದೀಪ್ ಹರ್ಡೀಕರ್

ರಾಯ್ಪುರ: ಮತದಾನದಿಂದ ವಂಚಿತರಾಗುವ ಇಟ್ಟಿಗೆ ಕಾರ್ಮಿಕರು

ಮಧ್ಯಪ್ರದೇಶದಿಂದ ಬಂದು ಛತ್ತೀಸಗಢದಲ್ಲಿ ಕೆಲಸ ಮಾಡುತ್ತಿರುವ ಈ ಕಾರ್ಮಿಕರಿಗೆ ತಮ್ಮ ತವರು ಕ್ಷೇತ್ರಗಳಲ್ಲಿ ಮತದಾನದ ದಿನಾಂಕಗಳ ಬಗ್ಗೆ ತಿಳಿದಿಲ್ಲ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಮತ ಚಲಾಯಿಸುವ ಸಾಧ್ಯತೆ ಬಹಳ ಕಡಿಮೆಯಿದೆ

ಮೇ 7, 2024 | ಪುರುಷೋತ್ತಮ ಠಾಕೂರ್

ಧ್ರುವೀಕರಣ ಮೆಟ್ಟಿ ನಿಂತ ಮಳಗಾಂವ್‌

ಹಿಂದೂ ಮತಾಂಧ ಗುಂಪುಗಳು ಶತಮಾನಗಳಿಂದ ಅನೇಕ ಧರ್ಮಗಳ ಜನರು ಪೂಜಿಸುತ್ತಿರುವ ಪವಿತ್ರ ಸ್ಥಳಗಳ ಮೇಲೆ ದಾಳಿ ಎಸಗುತ್ತಿವೆ. ಆದರೆ ಕೋಮು ಸೌಹಾರ್ದತೆಗೆ ಬೆಲೆ ಕೊಡುವ ಈ ಊರು ಅಂತಹ ದಾಳಿಯ ಹೇಗೆ ಎದುರಿಸಿ ನಿಲ್ಲಬಹುದೆಂದು ತೋರಿಸಿಕೊಟ್ಟಿದೆ

ಏಪ್ರಿಲ್ 28, 2024 | ಪಾರ್ಥ್ ಎಂ.ಎನ್ .

ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗ್ರಾಮದಿಂದ ಚುನಾವಣಾ ಬಹಿಷ್ಕಾರ

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಖಡಿಮಲ್ ಗ್ರಾಮಕ್ಕೆ ಇದುವರೆಗೆ ನೀರಾಗಲಿ, ವಿದ್ಯುತ್‌ ಆಗಲಿ ಇರಲಿಲ್ಲ. ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಬಂದು ಪೊಳ್ಳು ಭರವಸೆಗಳನ್ನು ಕೊಟ್ಟು ಕಣ್ಮರೆಯಾಗುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ಕಾರಣಕ್ಕಾಗಿಯೇ ಒಟ್ಟಾಗಿ ಇವರು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ

ಏಪ್ರಿಲ್ 26, 2024 | ಸ್ವರಾ ಗಾರ್ಗೆ ಮತ್ತು ಪ್ರಖರ್ ದೋವಲ್

'ಮೊದಲು ಹಣದುಬ್ಬರ ಸಮಸ್ಯೆಯಾಗಿತ್ತು, ಈಗ ಆನೆಗಳ ಕಾಟವೇ ದೊಡ್ಡ ಸಮಸ್ಯೆಯಾಗಿದೆʼ

ಈ ಬೇಸಿಗೆಯಲ್ಲಿ, ಮಹಾರಾಷ್ಟ್ರದ ಆದಿವಾಸಿ ಗ್ರಾಮವಾದ ಪಲಾಸ್‌ಗಾಂವ್‌ನ ಜನರು ಅನಿರೀಕ್ಷಿತ ಅಪಾಯಕ್ಕೆ ಹೆದರಿ ಅರಣ್ಯ ಆಧಾರಿತ ಜೀವನೋಪಾಯವನ್ನು ಕೈಬಿಟ್ಟು ಮನೆಯೊಳಗೆ ಕೂತಿದ್ದಾರೆ. ಬದುಕಿನ ಬಗ್ಗೆ ಚಿಂತೆ ಹೆಚ್ಚಾಗಿರುವ ಈ ಗ್ರಾಮಸ್ಥರಲ್ಲಿ 2024 ರ ಸಾರ್ವತ್ರಿಕ ಚುನಾವಣೆಯ ಬಗ್ಗೆ ಯಾವುದೇ ಉತ್ಸಾಹವಿಲ್ಲ

ಏಪ್ರಿಲ್ 25, 2024 | ಜೈದೀಪ್ ಹರ್ಡೀಕರ್

ಭಂಡಾರ: ಸಾಲು ಸಾಲು ವಿಚಿತ್ರಕಾರಿ, ದುರದೃಷ್ಟಕರ ಘಟನೆಗಳು

ಮಹಾರಾಷ್ಟ್ರದ ಈ ಜಿಲ್ಲೆಯ ಯುವಕರು ಉದ್ಯೋಗವಿಲ್ಲದೆ ತಮ್ಮ ತಮ್ಮ ಹಳ್ಳಿಗಳಿಂದ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 2024 ರ ಸಾರ್ವತ್ರಿಕ ಚುನಾವಣೆ ಅವರ ಮನಸ್ಸಿನಲ್ಲಿರುವ ಕೊನೆಯ ಸಂಗತಿ

ಏಪ್ರಿಲ್ 23, 2024 | ಜೈದೀಪ್ ಹರ್ಡೀಕರ್

ಮಹುವಾ, ಮನರೇಗಾ, ವಲಸೆ: ಗೊಂಡಿಯಾದ ಬಡವರ ಜೀವನಾಧಾರ

ಇಂಡಿಯ ಬಡ ಮನೆಗಳ ಬದುಕು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎಂಜಿಎನ್‌ಆರ್‌ಇಜಿಎ) ಯೋಜನೆಯ ಜೊತೆಗೆ ಮಹುವಾ ಮತ್ತು ಟೆಂಡು ಎಲೆಗಳಂತಹ ಸಣ್ಣಪುಟ್ಟ ಕಾಡುತ್ಪನ್ನಗಳನ್ನು ಅವಲಂಬಿಸಿದೆ. 2024 ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ, ನಾಳೆ (ಏಪ್ರಿಲ್ 19) ಮತದಾನ ಮಾಡಲು ಸಿದ್ಧರಾಗಿರುವ ಅರತ್ತೊಂಡಿ ಗ್ರಾಮದ ಆದಿವಾಸಿ ಗ್ರಾಮಸ್ಥರು ಕಳೆದ 10 ವರ್ಷಗಳಿಂದ ತಮ್ಮ ಜೀವನ ಕಷ್ಟಕರವಾಗಿದೆ ಎಂದು ಹೇಳುತ್ತಾರೆ...

ಏಪ್ರಿಲ್ 18, 2024 | ಜೈದೀಪ್ ಹರ್ಡೀಕರ್

ಪಲಾಮು: 'ರೈತರ ಕುರಿತು ಯಾರು ತಲೆ ಕೆಡಿಸಿಕೊಳ್ಳುತ್ತಾರೆ?'

ಜಾರ್ಖಂಡ್‌ ರಾಜ್ಯದ ಈ ಜಿಲ್ಲೆಯ ಸಣ್ಣ ಮತ್ತು ಅತಿಸಣ್ಣ ರೈತರು ಸತತ ಬರಗಾಲದಿಂದ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಸಾಲಕ್ಕೆ ಕಾರಣ ನೀರಾವರಿ ಕೊರತೆ ಎನ್ನುತ್ತಾರೆ ಈ ರೈತರು

ಏಪ್ರಿಲ್ 17, 2024 | ಅಶ್ವಿನಿ ಕುಮಾರ್ ಶುಕ್ಲಾ

ಭಂಡಾರದ ಯುವಜನತೆ: ಚುನಾವಣೆಗಿಂತ ಉದ್ಯೋಗವೇ ಮುಖ್ಯ

2024ರ ಭಾರತದ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದಲ್ಲಿ ಭಂಡಾರಾ-ಗೊಂಡಿಯಾ ಲೋಕಸಭಾ ಕ್ಷೇತ್ರದ ಮತದಾನ ಏಪ್ರಿಲ್ 19 ರಂದು ನಡೆಯಲಿದೆ. ಈ ಕ್ಷೇತ್ರ ನಿರುದ್ಯೋಗ ಮತ್ತು ಸಂಕಷ್ಟಗಳ ಬೇಗುದಿಯಲ್ಲಿ ಬೇಯುತ್ತಿದೆ. ಇಲ್ಲಿನ ಶಿವಾಜಿ ಸ್ಟೇಡಿಯಂನಲ್ಲಿ ಗ್ರಾಮೀಣ ಭಾಗದ ಯುವಕರು ರಾಜ್ಯ ಮಟ್ಟದ ಉದ್ಯೋಗಗಳಿಗಾಗಿ ತರಬೇತಿಯನ್ನು ಪಡೆಯುವುದರಲ್ಲಿ ನಿರತರಾಗಿದ್ದಾರೆ. ಇದರಿಗೆ ಇದೇ ಮೊದಲ ಆದ್ಯತೆಯಾದರೆ, ಚುನಾವಣಾ ಭರವಸೆಗಳು ಎರಡನೆಯ ಸಾಲಿನಲ್ಲಿ ಬರುತ್ತವೆ. ಇಂದಿನ ಈ ವರದಿಯ ಮೂಲಕ ನಮ್ಮ - ಗ್ರಾಮೀಣ ಮತಪತ್ರ 2024- ಸರಣಿಯ ಆರಂಭವಾಗುತ್ತದೆ

ಏಪ್ರಿಲ್ 12, 2024 | ಜೈದೀಪ್ ಹರ್ಡೀಕರ್

ಪುಸೇಸಾವಲಿ: ಬದುಕನ್ನು ನಾಶಗೊಳಿಸುತ್ತಿರುವ ನಕಲಿ ಚಿತ್ರಗಳು

ಮಹಾರಾಷ್ಟ್ರದಲ್ಲಿನ ಬಹುಸಂಖ್ಯಾತ ಹಿಂದುತ್ವವಾದಿ ಗುಂಪುಗಳು ನಕಲಿ ಚಿತ್ರಗಳು ಮತ್ತು ವಿಡಿಯೋ ಸೃಷ್ಟಿಸಿ ಕೋಮು ಸಂಘರ್ಷವನ್ನು ಹುಟ್ಟು ಹಾಕುತ್ತಿವೆ. ಈ ಗಲಭೆಗಳು ಮುಸ್ಲಿಮರ ಪ್ರಾಣ ಮತ್ತು ಆಸ್ತಿಗೆ ಎರವಾಗುತ್ತಿವೆ

ಮಾರ್ಚ್ 27, 2024 | ಪಾರ್ಥ್ ಎಂ.ಎನ್.
Translator : PARI Translations, Kannada