"ಜನವರಿ 24ರಂದು ಬೆಳಿಗ್ಗೆ ಮೂರು ಟ್ರಾಕ್ಟರುಗಳು, ಆರು ಟ್ರ್ಯಾಕ್ಟರ್ ಟ್ರಾಲಿಗಳು ಮತ್ತು 2ರಿಂದ 3 ಕಾರುಗಳು ನಮ್ಮ ಗ್ರಾಮದಿಂದ ದೆಹಲಿಗೆ ಹೊರಡಲಿವೆ" ಎಂದು ಹರಿಯಾಣದ ಕಂದ್ರೌಲಿ ಗ್ರಾಮದ ಚಿಕು ಧಂಡಾ ತಿಳಿಸಿದರು. “ನಾವು ಟ್ರಾಕ್ಟರ್ ರ‍್ಯಾಲಿಯಲ್ಲಿ ಭಾಗವಹಿಸಲಿದ್ದೇವೆ. ನಾನು ನನ್ನ ಟ್ರ್ಯಾಕ್ಟರನ್ನು ದೆಹಲಿಗೆ ಓಡಿಸಿಕೊಂಡು ಹೋಗುತ್ತೇನೆ” ಎಂದು 28 ವರ್ಷದ ರೈತ ಹೇಳಿದರು.

ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘುವಿಗೆ ಇದು ಚೀಕು ಅವರ ಆರನೇ ಭೇಟಿಯಾಗಿದೆ - ಅಲ್ಲಿ 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಸತ್ತು ಅಂಗೀಕರಿಸಿದ ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕಾಗಿ ಅವರು ಯಮುನಾನಗರ ಜಿಲ್ಲೆಯ ಕಂದ್ರೌಲಿಯಿಂದ 150 ಕಿಲೋಮೀಟರ್ ಪ್ರಯಾಣಿಸುತ್ತಾರೆ, ಪ್ರತಿ ಬಾರಿಯೂ ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆಯಲ್ಲಿ ಪ್ರಯಾಣಿಸುತ್ತಾರೆ. ಪ್ರತಿ ಬಾರಿಯೂ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಲು ಅವರು ಕನಿಷ್ಠ ಮೂರು ರಾತ್ರಿಗಳನ್ನು ಸಿಂಘುವಿನಲ್ಲಿ ಕಳೆದಿದ್ದಾರೆ.

ಪ್ರತಿ ಪ್ರಯಾಣದಲ್ಲೂ ಅವರಿಗೆ ಜೊತೆಯಾಗಿ ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಕಲಿಯುತ್ತಿರುವ ಅವರ 22 ವರ್ಷದ ಸೋದರಸಂಬಂಧಿ ಮೋನಿಂದರ್ ಧಂಡಾ ಇದ್ದರು. ಅವರ ಕುಟುಂಬ ಸದಸ್ಯರಾದ ಅವರು ಹರಿಯಾಣದ ಬಹುಪಾಲು ಕೃಷಿಕರಾಗಿರುವ ಜಾಟ್ ಸಮುದಾಯಕ್ಕೆ ಸೇರಿದವರು. ಅವರ ಕೂಡು ಕುಟುಂಬ 16 ಎಕರೆ ಭೂಮಿಯನ್ನು ಹೊಂದಿದ್ದು ಅದರಲ್ಲಿ ತರಕಾರಿಗಳು, ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಾರೆ.

"ಸ್ಥಳೀಯ ಎಪಿಎಂಸಿ ಮಂಡಿಗಳಲ್ಲಿ ನಮ್ಮ ಬೆಳೆಗಳನ್ನು ಮಾರಾಟ ಮಾಡುವ ಮೂಲಕ ನಾವು ಪ್ರತಿವರ್ಷ ಎಕರೆಗೆ 40,000 ರಿಂದ 50,000 ರೂಪಾಯಿಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಉತ್ಪಾದನಾ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ, ಆದರೆ ಎಂಎಸ್‌ಪಿ [ಕನಿಷ್ಠ ಬೆಂಬಲ ಬೆಲೆ] ಏರಿಕೆಯಾಗುತ್ತಿಲ್ಲ" ಎಂದು ಮೋನಿಂದರ್ ಹೇಳಿದರು. ಈ ಗಳಿಕೆ ಅವರ ಎಂಟು‌ ಜನರ ಕುಟುಂಬವನ್ನು ಪೋಷಿಸುತ್ತದೆ.

ಈ ಸೋದರಸಂಬಂಧಿ ಕುಟುಂಬಗಳಂತೆಯೇ, ಕಂದ್ರೌಲಿ ಗ್ರಾಮದ 1,314 ನಿವಾಸಿಗಳು ಬಹುತೇಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜನವರಿ ಮಧ್ಯದಲ್ಲಿ, ಅವರಲ್ಲಿ ಕೆಲವರು ಕೃಷಿ ಪ್ರತಿಭಟನೆಗೆ ಸಂಬಂಧಿಸಿದ ವಿಷಯಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಂಘಟಿಸಲು ಸಮಿತಿಯನ್ನು ಅನೌಪಚಾರಿಕವಾಗಿ ಸಂಘಟಿಸಿದರು. ಇದು ಭಾರತೀಯ ಕಿಸಾನ್ ಒಕ್ಕೂಟದ ವಲಯ ಉಪಸಮಿತಿಗಳ (ಹಳ್ಳಿಯ ಅನೇಕ ರೈತರು ಇದರೊಂದಿಗೆ ಸಂಪರ್ಕ ಹೊಂದಿದ್ದಾರೆ) ವ್ಯಾಪಕ ವ್ಯಾಪ್ತಿಯಂತಲ್ಲದೆ ಸ್ಥಳೀಯ ಮಟ್ಟದ ನಿರ್ಧಾರಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. "ಪ್ರತಿಭಟಿಸಲು ಹೋದವರ ಹೊಲಗಳನ್ನು ನೋಡಿಕೊಳ್ಳುವುದು ಯಾರ ಸರದಿ ಎಂದು ಗ್ರಾಮ ಸಮಿತಿ ನಿರ್ಧರಿಸುತ್ತದೆ" ಎಂದು ಚೀಕು ಹೇಳಿದರು. "ಅವರು ಸಿಂಘುವಿನಲ್ಲಿ ಜನರಿಗೆ ಆಹಾರ ಪೂರೈಕೆಯನ್ನು ಸಹ ನಿರ್ವಹಿಸುತ್ತಾರೆ."

Left: Cheeku Dhanda, on the way to Singhu border for the tractor rally on January 26. Right: A photo from Cheeku’s last trip to Singhu
PHOTO • Courtesy: Cheeku Dhanda
Left: Cheeku Dhanda, on the way to Singhu border for the tractor rally on January 26. Right: A photo from Cheeku’s last trip to Singhu
PHOTO • Cheeku Dhanda
Left: Cheeku Dhanda, on the way to Singhu border for the tractor rally on January 26. Right: A photo from Cheeku’s last trip to Singhu
PHOTO • Courtesy: Cheeku Dhanda

ಎಡ: ಚೀಕು ಧಂಡಾ, ಜನವರಿ 26ರಂದು ನಡೆಯಲಿರುವ ಟ್ರಾಕ್ಟರ್ ರ‍್ಯಾಲಿಗಾಗಿ ಸಿಂಘು ಗಡಿಗೆ ಹೋಗುವ ದಾರಿಯಲ್ಲಿ. ಬಲ: ಚೀಕು ಅವರ ಹಿಂದಿನ ಪ್ರಯಾಣದ ಫೋಟೋ

ಪ್ರತಿಭಟನೆಯನ್ನು ಬೆಂಬಲಿಸಲು ಕಂದ್ರೌಲಿಯಿಂದ ಇದುವರೆಗೆ 2 ಲಕ್ಷ ರೂ ಹಣವನ್ನು ದೆಹಲಿಯ ಗಡಿಗೆ ಭೇಟಿ ನೀಡುವ ಜನರ ಮೂಲಕ ಕಳುಹಿಸಲಾಗಿದೆ, ಅವರು ಅದನ್ನು ರಾಜಧಾನಿಯ ಸುತ್ತಮುತ್ತಲಿನ ವಿವಿಧ ಪ್ರತಿಭಟನಾ ಸ್ಥಳಗಳಲ್ಲಿರುವ ಯೂನಿಯನ್ ಪ್ರತಿನಿಧಿಗಳಿಗೆ ಹಸ್ತಾಂತರಿಸುತ್ತಾರೆ. ಜನವರಿ 24ರಂದು, ಕಂದ್ರೌಲಿಯ ಗುಂಪು ಇನ್ನೂ ಒಂದು ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿತು, ಮತ್ತು ಗ್ರಾಮದ ಕೆಲವರು ಪ್ರತಿಭಟನಾ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಂಗರ್ (ಸಮುದಾಯ ಅಡಿಗೆ)ಗೆ ಮಸೂರ್‌ ದಾಲ್, ಸಕ್ಕರೆ, ಹಾಲು ಮತ್ತು ಗೋಧಿಯನ್ನು ಸಹ ದಾನ ಮಾಡಿದ್ದಾರೆ.

ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತರಲಾಯಿತು. ಕಾನೂನುಗಳು ಹೀಗಿವೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ.  ಈ ಕಾನೂನುಗಳ ವಿರುದ್ಧ ದೆಹಲಿಯ ಹಲವೆಡೆ ಹೋರಾಟಗಳು ನಡೆಯುತ್ತಿವೆ.

ರೈತರು ಈ ಕಾನೂನುಗಳು ತಮ್ಮ ಜೀವನೋಪಾಯಕ್ಕೆ ವಿನಾಶಕಾರಿ ಎಂದು ಹೇಳುತ್ತಾರೆ ಏಕೆಂದರೆ ಅವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಜಾಗವನ್ನು ಇನ್ನಷ್ಟು ವಿಸ್ತರಿಸುತ್ತವೆ ಮತ್ತು ರೈತರು ಮತ್ತು ಕೃಷಿಯ ಮೇಲೆ ಇನ್ನೂ ಹೆಚ್ಚಿನ ನಿಯಂತ್ರಣವನ್ನು ನೀಡುತ್ತವೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಸರಕಾರಿ ಖರೀದಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಈ ಕಾನೂನುಗಳು ಕೃಷಿಕರಿಗೆ ನೀಡುವ ಬೆಂಬಲದ ಮುಖ್ಯ ರೂಪಗಳನ್ನು ಹಾನಿಗೊಳಿಸುತ್ತವೆ.  ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ರೈತರು ಜನವರಿ 26 ಗಣರಾಜ್ಯೋತ್ಸವದಂದು ರಾಜಧಾನಿಯಲ್ಲಿ ಅಭೂತಪೂರ್ವ ಟ್ರ್ಯಾಕ್ಟರ್ ರ‍್ಯಾಲಿಯನ್ನು ಯೋಜಿಸಿದ್ದಾರೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಚೀಕು ಮತ್ತು ಮೋನಿಂದರ್ ಕೂಡ ಭಾಗವಹಿಸುತ್ತಿದ್ದಾರೆ. "ಪ್ರಸ್ತುತ ವ್ಯವಸ್ಥೆಯು ಸರಿಯಾಗಿದೆ ಎಂದಲ್ಲ ಆದರೆ ಈ ಕಾನೂನುಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ." ಎಂದು ಮೋನಿಂದರ್ ಕೋಪದಿಂದ ಹೇಳುತ್ತಾರೆ.

ಅನುವಾದ - ಶಂಕರ ಎನ್. ಕೆಂಚನೂರು

Gagandeep

Gagandeep (he prefers to use only this name) is a first year student of Law at Kurukshetra University, Haryana.

Other stories by Gagandeep
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru