ಓಹ್! ಈ ಹಾಡು ಹೇಗೋ ಮಿಸ್ ಆಗಿತ್ತು. ಪರಿ ಓದುಗರು ಮತ್ತು ವೀಕ್ಷಕರು ನಮ್ಮನ್ನು ಕ್ಷಮಿಸಲಿ. ಎಲ್ಲಾ ಪರಿ ಓದುಗರು ಈಗ ಸೈಟ್‌ನಲ್ಲಿ ಅತ್ಯಂತ ಜನಪ್ರಿಯವಾಗಿರುವ ಪೊಟ್ಯಾಟೊ ಹಾಡನ್ನು ತಿಳಿದಿರುತ್ತಾರೆ. ಇಡುಕ್ಕಿ ಬೆಟ್ಟಗಳ ಮೇಲಿರುವ ಕುಗ್ರಾಮವಾದ ಎಡಮಲಕ್ಕುಡಿಯ ಏಕೈಕ ಬುಡಕಟ್ಟು ಪಂಚಾಯತ್ ಪ್ರದೇಶದಲ್ಲಿ ಬುಡಕಟ್ಟು ಅಭಿವೃದ್ಧಿ ಯೋಜನೆಯ ಶಾಲೆಯೊಂದು ಇದೆ. 1ರಿಂದ 4 ನೇ ತರಗತಿಯವರೆಗೆ ನಡೆಯುವ ಈ ಪ್ರಾಜೆಕ್ಟ್ ಶಾಲೆಯಲ್ಲಿ 8ರಿಂದ 11 ವರ್ಷದೊಳಗಿನ ಬಾಲಕಿಯರ ಗುಂಪು ಆಲೂಗಡ್ಡೆ ಹಾಡನ್ನು ಹಾಡುತ್ತದೆ.

ಅಲ್ಲಿಗೆ ತಲುಪಿದ ನಾವು ಎಂಟು ಮಂದಿ ಆ ವಿದ್ಯಾರ್ಥಿಗಳಿಗೆ ಅವರ ಆಯ್ಕೆಯ ವಿಷಯ ಯಾವುದು ಎಂದು ಕೇಳಿದ್ದೆವು. ಅವರ ಉತ್ತರ - "ಇಂಗ್ಲಿಷ್." ಯಾವುದೇ ಸೈನ್‌ಬೋರ್ಡ್‌ನಲ್ಲಿ ಇಂಗ್ಲಿಷ್‌ನ ಒಂದೇ ಒಂದು ಪದವನ್ನು ಬರೆದಿರುವುದನ್ನು ನಾವು ನೋಡದ ಪ್ರದೇಶದಲ್ಲಿ, ಅವರ ಉತ್ತರವನ್ನು ಕೇಳಿ ಆಘಾತವಾಯಿತು. ಅಲ್ಲಿನ ವಿದ್ಯಾರ್ಥಿಗಳು ಇಂಗ್ಲಿಷ್ ಅರ್ಥಮಾಡಿಕೊಂಡಿದ್ದಾರೆಂದು ಸಾಬೀತುಪಡಿಸುವ ಸವಾಲನ್ನು ಸ್ವೀಕರಿಸಿದರು ಮತ್ತು ಸಂತೋಷದಿಂದ ಹಾಡಲು ಪ್ರಾರಂಭಿಸಿದರು.

ಈ ಹಾಡು ನಂತರ ಪರಿಯ ಸಾರ್ವಕಾಲಿಕ ಮೆಚ್ಚಿನವಾಯಿತು. ಆದರೆ ಆ ಸಮಯದಲ್ಲಿ ನಾವು ಮರೆತಿದ್ದ ಇನ್ನೊಂದು ವಿಷಯವಿತ್ತು ಮತ್ತು ಅದನ್ನು ಈಗ ನಿಮ್ಮ ಮುಂದೆ ತರುತ್ತಿದ್ದೇವೆ. ಅಂದು ಹುಡುಗಿಯರು ತಮ್ಮ ಸುಂದರವಾದ ಮತ್ತು ಸುಮಧುರವಾದ 'ಆಲೂಗಡ್ಡೆ ಹಾಡು' ಹಾಡಿದಾಗ, ನಾವು ಹುಡುಗರ ಪ್ರತಿಭೆಯನ್ನು ಪ್ರಯತ್ನಿಸಲು ಯೋಚಿಸಿದೆವು. ನಾವು ಅವರ ಇಂಗ್ಲಿಷ್ ಪ್ರಾವೀಣ್ಯತೆಯನ್ನು ಪರೀಕ್ಷಿಸಲು ಪ್ರಯತ್ನಿಸಿದಾಗ, ಅವರ ತರಗತಿಯ ಹುಡುಗಿಯರಿಗಿಂತಲೂ ಸ್ಪಷ್ಟವಾಗಿ ಹಿಂದುಳಿದಿದ್ದಾರೆನ್ನುವುದು ನಮ್ಮ ಗಮನಕ್ಕೆ ಬಂತು.

ಆ ಐವರು ಹುಡುಗಿಯರ ಸುಂದರ ಶೈಲಿಯನ್ನು ಸೋಲಿಸುವುದು ಕಷ್ಟದ ಕೆಲಸ ಎಂದು ಅವರಿಗೆ ತಿಳಿದಿತ್ತು, ಹೀಗಾಗಿ ಅವರು ಅದನ್ನು ಆಟವಾಗಿ ಪರಿವರ್ತಿಸಿದರು. ಹಾಡಿನ ಗುಣಮಟ್ಟದಲ್ಲಿ ಅಥವಾ ಹಾಡಿನ ಪ್ರಸ್ತುತಿಯಲ್ಲಿ ಹುಡುಗಿಯರಿಗೆ ಹೋಲಿಸಿದರೆ ಅವರು ಎಲ್ಲಿಯೂ ನಿಲ್ಲಲಿಲ್ಲ. ಆದರೆ ಅವರ ವಿಚಿತ್ರವಾದ, ಬದಲಿಗೆ ಆಸಕ್ತಿದಾಯಕ ಪದಗಳಿಂದಾಗಿ, ಅವರು ಸಂಪೂರ್ಣವಾಗಿ ಎದ್ದು ಕಾಣುತ್ತಿದ್ದರು.

ಇಂಗ್ಲೀಷೇ ಬರದ ಹಳ್ಳಿಯಲ್ಲಿ ಹುಡುಗಿಯರು ತಾವು ತಿನ್ನದ ಆಲೂಗಡ್ಡೆಯ ಬಗ್ಗೆ ಹಾಡು ಹಾಡಿದರು. ಮತ್ತು, ಸಮಾನಾಂತರವಾಗಿ, ಹುಡುಗರು ಹಾಡಿದ ಅಥವಾ ಹಾಡಿದ ಹಾಡು ವೈದ್ಯರ ಕುರಿತಾಗಿತ್ತು. ಈ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಶಕಕ್ಕೂ ಹೆಚ್ಚು ಸಮಯದಿಂದ ಪೂರ್ಣಾವಧಿ ವೈದ್ಯರಿಲ್ಲದಿರುವುದು ಗಮನಾರ್ಹ. ಭಾರತದ ಬಹುತೇಕ ಭಾಗಗಳಲ್ಲಿ - ಗ್ರಾಮೀಣ ಅಥವಾ ನಗರ - 'ವೈದ್ಯ' ಪದವನ್ನು ವೈದ್ಯ ಮತ್ತು ಶಸ್ತ್ರಚಿಕಿತ್ಸಕ ಇಬ್ಬರಿಗೂ ಸಮಾನಾರ್ಥಕವಾಗಿ ಬಳಸಲಾಗುತ್ತದೆ, ಅಂದರೆ ಇಬ್ಬರನ್ನು ಸಾಮಾನ್ಯವಾಗಿ ಒಂದೇ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಆಧುನಿಕ ಅಲೋಪತಿ ವೈದ್ಯಕೀಯ ವಿಜ್ಞಾನದಲ್ಲಿ ಸ್ಪರ್ಶದ ನಂಬಿಕೆಯು ಹಾಡಿನಲ್ಲಿ ಪ್ರತಿಫಲಿಸುತ್ತದೆ.

ವೀಡಿಯೊ ನೋಡಿ: ಎಡಮಲಕುಡಿಯ ಪ್ರಾಥಮಿಕ ಶಾಲೆಯ ಹುಡುಗರ ಡಾಕ್ಟರ್‌ ಹಾಡು

ಗುಡ್ ಮಾರ್ನಿಂಗ್, ಡಾಕ್ಟರ್,
ನನ್ನ ಹೊಟ್ಟೆ ನೋಯುತ್ತಿದೆ, ಡಾಕ್ಟರ್
ನನ್ನ ಹೊಟ್ಟೆ ನೋಯುತ್ತಿದೆ, ಡಾಕ್ಟರ್
ಡಾಕ್ಟರ್, ನನ್ನನ್ನು ಹಿಡಿದುಕೊಳ್ಳಿ
ಡಾಕ್ಟರ್, ನನ್ನನ್ನು ಹಿಡಿದುಕೊಳ್ಳಿ
ಡಾಕ್ಟರ್, ನನ್ನನ್ನು ಹಿಡಿದುಕೊಳ್ಳಿ
ಆಪರೇಶನ್
ಆಪರೇಶನ್
ಆಪರೇಶನ್, ಡಾಕ್ಟರ್
ಧನ್ಯವಾದಗಳು, ಡಾಕ್ಟರ್
ಧನ್ಯವಾದಗಳು, ಡಾಕ್ಟರ್
ಧನ್ಯವಾದಗಳು, ಡಾಕ್ಟರ್
ಬೈ ಬೈ, ಡಾಕ್ಟರ್
ಬೈ ಬೈ, ಡಾಕ್ಟರ್
ಬೈ ಬೈ, ಡಾಕ್ಟರ್
ಬೈ ಬೈ, ಡಾಕ್ಟರ್

ಮರೆಯಲಾಗದ 'ಪೊಟ್ಯಾಟೊ ಗೀತೆ 'ಯಂತೆ, ಈ ಕಿರುಚಿತ್ರವನ್ನು ಪರಿಯ ತಾಂತ್ರಿಕ ಸಂಪಾದಕ ಸಿದ್ಧಾರ್ಥ್ ಅಡೇಲ್ಕರ್ ಅವರು ನೆಟ್‌ವರ್ಕ್ ಹೊರಗಿನ ಪ್ರದೇಶದಲ್ಲಿ ಸೆಲ್‌ಫೋನ್‌ ಬಳಸಿ ಚಿತ್ರೀಕರಿಸಿದ್ದಾರೆ. ಇದೊಂದು ಆಲೂಗಡ್ಡೆ ಬೆಳೆಯದ, ತಿನ್ನದ, ಇಂಗ್ಲಿಷ್ ಬರದ, ವೈದ್ಯರೇ ಗೈರು ಹಾಜರಾಗಿರುವ ಗ್ರಾಮ. ಆದರೆ ಭಾರತದ ಬಹುತೇಕ ಭಾಗಗಳಲ್ಲಿ ಇಂಗ್ಲಿಷ್ ಅನ್ನು ಈ ರೀತಿ ಕಲಿಸಲಾಗುತ್ತದೆ ಎಂಬುದಂತೂ ನಿಜ. ಬದಲಿಗೆ, ಭಾರತದ ಪರ್ಯಾಯ ದ್ವೀಪದ ಈ ದೂರದ ಮತ್ತು ದುರ್ಗಮ ಪಂಚಾಯತ್‌ನಲ್ಲಿ ಹುಡುಗರು ಮತ್ತು ಹುಡುಗಿಯರ ಎರಡು ಪ್ರತ್ಯೇಕ ಗುಂಪುಗಳು ತಮ್ಮ ಹಾಡುಗಳ ಸಾಹಿತ್ಯವನ್ನು ಎಲ್ಲಿಂದ ಕಂಡುಕೊಂಡಿರಬಹುದು ಎಂಬುದು ನಮಗೆ ತಿಳಿದಿಲ್ಲ.

ಅನುವಾದ: ಶಂಕರ. ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru