ಲಕ್ಷಾಂತರ ಜನರ ಪಾಲಿಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದು, ಅದನ್ನು ಮಾಡುವುದರೊಂದಿಗೆ ಅವರ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವುದು, ಪೊಲೀಸ್ ಮತ್ತು ಅರೆಸೈನಿಕ ಪಡೆಗಳಿಂದ ಬ್ಯಾರಿಕೇಡ್ ಮಾಡಿಸುವ ಮೂಲಕ ಅವರ ಮೇಲೆ ಅಪಾಯಕಾರಿ ಪರಿಸ್ಥಿತಿಗಳನ್ನು ಹೇರುವುದು, ಪತ್ರಕರ್ತರ ಪಾಲಿಗೆ ಪ್ರತಿಭಟನಾಕಾರ ರೈತರನ್ನು ತಲುಪುವುದು ಬಹುತೇಕ ಅಸಾಧ್ಯವಾಗುವುದು, ಕಳೆದ ಎರಡು ತಿಂಗಳುಗಳಲ್ಲಿ ಈಗಾಗಲೇ ಬಹುತೇಕ ಹೈಪೋ ಥರ್ಮಿಯಾ (ದೇಹದ ಉಷ್ಣತೆ ಕಡಿಮೆಯಾಗುವುದು) ಮತ್ತು ಇತರ ಕಾರಣಗಳಿಂದಾಗಿ ಬಹುತೇಕ 200 ಮಂದಿಯ ಸಾವನ್ನು ಕಂಡಿರುವ ಗುಂಪನ್ನು ಇನ್ನಷ್ಟು ಶಿಕ್ಷಿಸುವುದು. ಜಗತ್ತಿನ ಇತರೆಡೆ ಎಲ್ಲಿಯೇ ಇಂತಹ ಘಟನೆ ನಡೆದಿದ್ದರೂ ಅದನ್ನು ನಾಗರಿಕ ಹಕ್ಕು ಮತ್ತು ಘನತೆಯ ಮೇಲೆ ಮಾಡಲಾದ ಅಮಾನವೀಯವಾದ ಹಲ್ಲೆಯೆಂದು ಪರಿಗಣಿಸಲಾಗುತ್ತಿತ್ತು.

ಆದರೆ ನಾವು, ನಮ್ಮ ಸರ್ಕಾರ ಮತ್ತು ಆಡಳಿತದ ಗಣ್ಯರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವುದು ಈ ವಿಶ್ವದ ಅತಿದೊಡ್ಡ ದೇಶವನ್ನು ಅಪಖ್ಯಾತಿಗೀಡಾಗಿಸುವ ಮತ್ತು ಅವಮಾನಿಸುವ ಗುರಿಯನ್ನು ಹೊಂದಿರುವ ವಿಶ್ವದ ಅತ್ಯಂತ ಅಪಾಯಕಾರಿ ಭಯೋತ್ಪಾದಕರಾದ ರಿಹಾನ್ನಾ ಮತ್ತು ಗ್ರೇಟಾ ಥನ್ಬರ್ಗ್ ಅವರ ಒಳಸಂಚುಗಳನ್ನು ಹೇಗೆ ತಡೆಯುವುದು ಎನ್ನುವುದರ ಕುರಿತು.

ಕಾಲ್ಪನಿಕವಾಗಿ ಇದು ಸಂಪೂರ್ಣ ತಮಾಷೆಯೆನ್ನಿಸಬಹುದು ಆದರೆ ವಾಸ್ತವದಲ್ಲಿ ಇದೊಂದು ಹುಚ್ಚುತನ.

ಇದು ಆಘಾತಕಾರಿ ವಿಷಯವೇ ಹೌದಾದರೂ, ಇದರಲ್ಲಿ ಅಚ್ಚರಿಗೊಳಿಸುವಂತಹ ಅಂಶವೇನೂ ಇಲ್ಲ. “ಕನಿಷ್ಟ ಸರಕಾರ, ಗರಿಷ್ಟ ಆಡಳಿತ” ಎನ್ನುವ ಘೋಷಣೆಗಳಿಗೆ ಮರುಳಾದವರಿಗೂ ಈಗ ಅರ್ಥವಾಗಿರಬಹುದು. ಅವರು ನೀಡಿದ ನಿಜವಾದ ಭರವಸೆಯೆಂದರೆ ಸರ್ಕಾರದ ಅಧಿಕಾರದ ಗರಿಷ್ಠ ಬಳಕೆ ಮತ್ತು ಗರಿಷ್ಠ ರಕ್ತಸಿಕ್ತ ನಿಯಮ ಎನ್ನುವುದಾಗಿತ್ತು. ಗಟ್ಟಿಯಾಗಿ ಮಾತನಾಡಬಲ್ಲ ಅನೇಕ ಜನರು ಮೌನವಾಗಿದ್ದಾರೆ, ಅವರಲ್ಲಿ ಕೆಲವರು ಅಧಿಕಾರವನ್ನು ಸಮರ್ಥಿಸಿಕೊಳ್ಳುವುದು ಮತ್ತು ಅಂತಹ ಎಲ್ಲ ಕಾನೂನುಗಳನ್ನು ಹೊಗಳುವುದನ್ನು ಎಂದಿಗೂ ತಪ್ಪಿಸಿಲ್ಲ ಎಂಬುದು ಆತಂಕದ ವಿಷಯ. ದಿನೇ ದಿನೇ ಪ್ರಜಾಪ್ರಭುತ್ವವು ಕ್ಷೀಣಗೊಳ್ಳುತ್ತಿರುವುದನ್ನು ಕೂಡ ಅವರು ಒಪ್ಪಿಕೊಳ್ಳುವುದಿಲ್ಲವೆಂದು ಕೂಡ ನೀವು ಭಾವಿಸಬಹುದು.

ನಡೆಯುತ್ತಿರುವ ರೈತರ ಪ್ರತಿಭಟನೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಇರುವ ನಿಜವಾದ ಅಡಚಣೆ ಏನೆನ್ನುವುದು ಕೇಂದ್ರ ಸಚಿವ ಸಂಪುಟದ ಪ್ರತಿಯೊಬ್ಬ ಸದಸ್ಯರಿಗೂ ತಿಳಿದಿದೆ.

PHOTO • Q. Naqvi
PHOTO • Labani Jangi

ಮೂರು ಕಾನೂನುಗಳ ಕುರಿತಾಗಿ ರೈತರೊಂದಿಗೆ ಇಂದಿನವರೆಗೂ ಸಮಾಲೋಚನೆ ನಡೆಸಲಾಗಿಲ್ಲವೆನ್ನುವುದು ಅವರಿಗೆ ತಿಳಿದಿದೆ - ರೈತರು ಇದನ್ನು ಸುಗ್ರೀವಾಜ್ಞೆಯ ರೂಪದಲ್ಲಿ ತರಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆಂದು ತಿಳಿದ ದಿನದಿಂದಲೂ ಸರಕಾರವು ತಮ್ಮೊಂದಿಗೆ ಸಮಾಲೋಚನೆ ನಡೆಸಬಹುದೆಂದು ಎದುರು ನೋಡುತ್ತಿದ್ದರು.

ಸಂವಿಧಾನದಲ್ಲಿ ಕೃಷಿಯನ್ನು ರಾಜ್ಯ ವಿಷಯವೆಂದು ಪಟ್ಟಿ ಮಾಡಲಾಗಿದ್ದರೂ ಈ ಕಾನೂನುಗಳನ್ನು ರೂಪಿಸುವ ಸಮಯದಲ್ಲಿ ರಾಜ್ಯಗಳನ್ನು ಸಂಪರ್ಕಿಸಿಲ್ಲ. ಪ್ರತಿಪಕ್ಷದವರೊಂದಿಗಾಗಲಿ, ಸಂಸತ್ತಿನೊಳಗಾಗಲಿ ಈ ಕುರಿತು ಸಮಾಲೋಚನೆ ನಡೆದಿಲ್ಲ.

ಬಿಜೆಪಿ ನಾಯಕರು ಮತ್ತು ಸಚಿವರಿಗಂತೂ ಯಾವುದೇ ಸಮಾಲೋಚನೆ ನಡೆಯುವುದಿಲ್ಲವವೆನ್ನುವುದು ತಿಳಿದೇ ಇದೆ. ಏಕೆಂದರೆ ಅವರುಗಳೊಡನೆ ಈ ವಿಷಯವೆಂದಲ್ಲ ಇದುವರೆಗೂ ಯಾವ ವಿಷಯದ ಕುರಿತಾಗಿಯೂ ಚರ್ಚೆ ನಡೆಸಲಾಗಿಲ್ಲ. ಅವರ ಕೆಲಸವೇನಿದ್ದರೂ ತಮ್ಮ ನಾಯಕ ಆದೇಶ ನೀಡಿದಾಗ ಎದ್ದು ಬರುವ ಕಡಲ ಅಲೆಗಳನ್ನು ತಡೆದು ಹಿಂದೆ ಕಳಿಸುವುದು ಮಾತ್ರ.

ಇದುವರೆಗೆ, ಹೊಗಳು ಭಟರಿಗಿಂತಲೂ ಅಲೆಗಳೇ ಜೋರಾಗಿವೆ. ಉತ್ತರ ಪ್ರದೇಶದಲ್ಲಿನ ಬೃಹತ್‌ ಪ್ರತಿಭಟನೆ ಅದರ ಒಂದು ನಿದರ್ಶನವಾಗಿದೆ. ಪಶ್ಚಿಮ ಯೂಪಿಯಲ್ಲಿ ಸರಕಾರ ರೈತ ನಾಯಕ ರಾಕೇಶ್‌ ಟಿಕಾಯತ್‌ ಅವರನ್ನು ಹಣಿಯಲು ಹೋಗಿ ಇಂದಿಗೆ ಅವರನ್ನು ಪ್ರಭಾವಶಾಲಿ ನಾಯಕನನ್ನಾಗಿ ಪರಿವರ್ತಿಸಿದೆ. ಜನವರಿ 25ನೇ ತಾರೀಖು ಮಹಾರಾಷ್ಟ್ರದಲ್ಲಿ ದೊಡ್ಡ ಹೋರಾಟಕ್ಕೆ ಸಾಕ್ಷಿಯಾಯಿತು. ರಾಜಸ್ಥಾನ ಮತ್ತು ಕರ್ನಾಟಕದಲ್ಲೂ ಗಮನಾರ್ಹವಾದ ಹೋರಾಟಗಳು ನಡೆದವು. ಕರ್ನಾಟಕದಲ್ಲಿ ಟ್ರ್ಯಾಕ್ಟರ್‌ಗಳು ಬೆಂಗಳೂರು ನಗರ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು. ಆಂಧ್ರ ಮತ್ತು ಇತರೆಡೆಯಲ್ಲೂ ಹೋರಾಟಗಳು ನಡೆಯುತ್ತಿವೆ. ಹರಿಯಾಣದಲ್ಲಿ ಆಡಳಿತ ನಡೆಸಲು ಸರಕಾರ ಪರದಾಡುತ್ತಿದೆ. ಅಲ್ಲಿನ ಮುಖ್ಯಮಂತ್ರಿಗೆ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವುದೂ ಕಷ್ಟವಾಗಿರುವಂತೆ ಕಾಣುತ್ತದೆ.

ಪಂಜಾಬಿನ ಪ್ರತಿಯೊಂದು ಮನೆಯೂ ಪ್ರತಿಭಟನಾಕಾರರ ಪರವಾಗಿದೆ - ಅವರಲ್ಲಿ ಹಲವರು ಅವರೊಂದಿಗೆ ಸೇರಲು ತಯಾರಿ ನಡೆಸುತ್ತಿದ್ದಾರೆ, ಕೆಲವರು ಈಗಾಗಲೇ ಹೋರಾಟದಲ್ಲಿ ಸೇರಿಯಾಗಿದೆ. ಫೆಬ್ರವರಿ 14ರಂದು ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಹುಡುಕಲು ಹೆಣಗಾಡಿತು. ಈಗಾಗಲೇ ಪಕ್ಷದಲ್ಲಿರುವ ಹಳೆಯ ನಿಷ್ಠಾವಂತರು ಅವರ ಪಕ್ಷದ ಚಿಹ್ನೆಯನ್ನು ಬಳಸುವುದರ ಬಗ್ಗೆಯೂ ಬಹಳ ಎಚ್ಚರವಹಿಸುತ್ತಿದ್ದಾರೆ. ಏತನ್ಮಧ್ಯೆ, ರಾಜ್ಯದ ಇಡೀ ಯುವ ಪೀಳಿಗೆಯನ್ನು ಬೇರ್ಪಡಿಸಲಾಗಿದೆ, ಅವರ ಭವಿಷ್ಯವು ಅಪಾಯದಲ್ಲಿದೆ.
PHOTO • Shraddha Agarwal ,  Sanket Jain ,  Almaas Masood

ಕೆಲವು ಸಾಂಪ್ರದಾಯಿಕ ವಿರೋಧಿಗಳಾದ ರೈತರು ಮತ್ತು ಆರ್ಥಿಯರು (ಕಮಿಷನ್ ಏಜೆಂಟರು) ಸೇರಿದಂತೆ ಸಾಮಾಜಿಕ ಶಕ್ತಿಗಳ ಒಂದು ದೊಡ್ಡ ಮತ್ತು ಸಂಘಟಿಸಲು ಸಾಧ್ಯವೇ ಇಲ್ಲದಿದ್ದ ಗುಂಪುಗಳನ್ನು ಇದು ಒಂದುಗೂಡಿಸಿದೆಯೆನ್ನುವುದು ಈ ಸರ್ಕಾರದ ಆಶ್ಚರ್ಯಕರ ಸಾಧನೆಯಾಗಿದೆ. ಅದರಾಚೆಗೆ, ಇದು ಸಿಖ್ಖರು, ಹಿಂದೂಗಳು, ಮುಸ್ಲಿಮರು, ಜಾಟ್‌ಗಳು ಮತ್ತು ಜಾಟ್-ಅಲ್ಲದವರು, ಕಾಪ್‌ಗಳು ಮತ್ತು ಖಾನ್ ಮಾರುಕಟ್ಟೆಯ ಜನರನ್ನು ಕೂಡ ಒಂದುಗೂಡಿಸಿದೆ. ಇದು ಅದ್ಭುತ.

ಆದರೆ ಈಗ ಶಾಂತವಾಗಿರುವ ದನಿಗಳು ಎರಡು ತಿಂಗಳುಗಳನ್ನು ಕಳೆದಿದ್ದು, ಇದು “ಕೇವಲ ಪಂಜಾಬ್ ಮತ್ತು ಹರಿಯಾಣದ ವಿಷಯ” ಎಂದು ನಮಗೆ ಭರವಸೆ ನೀಡುತ್ತಾ. ಬೇರೆ ಯಾರಿಗೂ ಇದರಿಂದ ತೊಂದರೆಯಾಗಿಲ್ಲ. ಇದು ಅಂತಹ ವಿಷಯವೇನಲ್ಲ ಎನ್ನಲಾಗುತ್ತಿತ್ತು.

ತಮಾಷೆಯಾಗಿದೆ. ಸುಪ್ರೀಂ ಕೋರ್ಟ್ ನೇಮಕ ಮಾಡದ ಸಮಿತಿಯು ಕೊನೆಯದಾಗಿ ಪರಿಶೀಲಿಸಿದಾಗ ಪಂಜಾಬ್ ಮತ್ತು ಹರಿಯಾಣ ಎರಡೂ ಭಾರತೀಯ ಒಕ್ಕೂಟದ ಭಾಗವಾಗಿತ್ತು. ಅಲ್ಲಿ ಏನು ನಡೆಯುತ್ತಿದೆ ಎಂಬುದು ನಮ್ಮೆಲ್ಲರಿಗೂ ಮುಖ್ಯ ಎಂದು ನೀವು ಭಾವಿಸುತ್ತೀರಿ.

ಒಂದು ಕಾಲದಲ್ಲಿ ಏರುದನಿಯಲ್ಲಿ ಮಾತಾಡುತ್ತಿದ್ದ ದನಿಗಳು ಇವರೆಲ್ಲರೂ ಸುಧಾರಣೆಗಳನ್ನು ವಿರೋಧಿಸುವ “ಶ್ರೀಮಂತ ರೈತರು” ಎಂದು ನಮ್ಮ ಬಳಿ ಹೇಳುತ್ತಿದ್ದವು. ಈಗಲೂ ಸುಮ್ಮನಾಗಿಸುವ ದನಿಯಲ್ಲಿ ಅದನ್ನೇ ಹೇಳುತ್ತಿವೆ.

ಕಳೆದ ಎನ್‌ಎಸ್‌ಎಸ್ ಸಮೀಕ್ಷೆಯ ಪ್ರಕಾರ, ಪಂಜಾಬ್‌ನಲ್ಲಿನ ಕೃಷಿ ಕುಟುಂಬವೊಂದರ ಸರಾಸರಿ ಮಾಸಿಕ ಆದಾಯ 18,059 ರೂ. ಪ್ರತಿ ರೈತ ಕುಟುಂಬದಲ್ಲಿ ಸರಾಸರಿಜನರ ಸಂಖ್ಯೆ 5.24 ಇತ್ತು.  ಈ ಲೆಕ್ಕದಲ್ಲಿ, ಅಲ್ಲಿನ ರೈತರ ತಲಾ ಮಾಸಿಕ ಆದಾಯವು ಸುಮಾರು 3,450 ರೂ. ಇದು ಸಂಘಟಿತ ವಲಯದಲ್ಲಿ ಕಡಿಮೆ ಸಂಬಳ ಪಡೆಯುವ ಉದ್ಯೋಗಿಯ ಸಂಬಳಕ್ಕಿಂತಲೂ ಕಡಿಮೆ. ಇದು ಆಸಕ್ತಿದಾಯಕವಾಗಿದೆ.

ಅದ್ಭುತ! ಎಷ್ಟೊಂದು ಆಸ್ತಿ. ಆದರೆ ಅರ್ಧದಷ್ಟು ವಿಷಯವನ್ನು ನಮಗೆ ತಿಳಿಸಲಾಗಿಲ್ಲ. ಹರಿಯಾಣದ ಅಂಕಿ ಅಂಶಗಳ ಪ್ರಕಾರ ಅಲ್ಲಿನ ರೈತನ ಸರಾಸರಿ ಮಾಸಿಕ ಆದಾಯ 14,434 ರೂ. ಮತ್ತು ತಲಾ ಮಾಸಿಕ ಆದಾಯ ಸುಮಾರು 2,450 ರೂ (ರೈತ ಕುಟುಂಬ ಗಾತ್ರ 5.9 ವ್ಯಕ್ತಿಗಳು). ನಿಸ್ಸಂಶಯವಾಗಿ, ಈ ಸಂಕ್ಷಿಪ್ತ ಸಂಖ್ಯೆಗಳು ಅವನನ್ನು ಇತರ ಭಾರತೀಯ ರೈತರಿಗಿಂತ ಮುಂದಿರಿಸಿವೆ. ಉದಾಹರಣೆಗೆ, ಗುಜರಾತ್, ಇಲ್ಲಿನ ಕೃಷಿ ಕುಟುಂಬದ ಸರಾಸರಿ ಮಾಸಿಕ ಆದಾಯ 7,926 ರೂ. ಆಗಿದ್ದರೆ, ಪ್ರತಿ ತಲಾ ಮಾಸಿಕ ಆದಾಯವು 1,524 ರೂ. ಆಗಿದ್ದು, ಪ್ರತಿ ಕೃಷಿ ಕುಟುಂಬದಲ್ಲಿ ಸರಾಸರಿ 5.2 ಜನರು ಇದ್ದಾರೆ.

ಭಾರತದಲ್ಲಿ ರೈತ ಕುಟುಂಬವೊಂದರ ಸರಾಸರಿ ಮಾಸಿಕ ಆದಾಯ 6,426 ರೂ. (ಪ್ರತಿ ವ್ಯಕ್ತಿಗೆ ಸುಮಾರು 1,300 ರೂ.). ಅಂದ ಹಾಗೆ, ಈ ಸರಾಸರಿ ಮಾಸಿಕ ಅಂಕಿಅಂಶಗಳು ಎಲ್ಲಾ ಮೂಲಗಳಿಂದ ಬರುವ ಆದಾಯವನ್ನು ಒಳಗೊಂಡಿವೆ. ಕೃಷಿ ಮಾತ್ರವಲ್ಲ, ಜಾನುವಾರುಗಳು, ಕೃಷಿಯೇತರ ವ್ಯಾಪಾರ ಮತ್ತು ವೇತನ ಮತ್ತು ಸಂಬಳದಿಂದ ಬರುವ ಆದಾಯ ಇವೆಲ್ಲವೂ.

ರಾಷ್ಟ್ರೀಯ ಮಾದರಿ ಸಮೀಕ್ಷೆಯ 70 ನೇ ಸುತ್ತಿನಲ್ಲಿ 'ಭಾರತದ ಕೃಷಿ ಕುಟುಂಬಗಳ ಸ್ಥಿತಿಯ ಪ್ರಮುಖ ಸೂಚಕಗಳು' (2013) ನಲ್ಲಿ ದಾಖಲಾಗಿರುವಂತೆ ಇದು ಭಾರತದ ರೈತರ ಸ್ಥಿತಿ. ಮುಂದಿನ 12 ತಿಂಗಳಲ್ಲಿ ಈ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿದೆ, ಅಂದರೆ 2022 ರ ವೇಳೆಗೆ. ಕಠಿಣ ಕಾರ್ಯ, ಇದು ರಿಹಾನ್ನಾ ಮತ್ತು ಥನ್‌ಬರ್ಗ್‌ರ ವಿಚ್ಛಿದ್ರಕಾರಕ ಮೂಗು ತೂರಿಸುವಿಕೆಗಿಂತಲೂ ಹೆಚ್ಚು ಕಿರಿಕಿರಿಗೊಳಿಸುತ್ತದೆ.

ಓಹ್‌, ದೆಹಲಿ ಗಡಿಗಳಲ್ಲಿರುವ ಆ ಶ್ರೀಮಂತ ರೈತರುಗಳು, ಎಷ್ಟೊಂದು ಸರಳವಾಗಿದ್ದಾರೆ! ಪಾಪ! ನಾನು ಶ್ರೀಮಂತರ ಕುರಿತು ಇನ್ನಷ್ಟು ಮೃದುವಾಗಬೇಕಿದೆ ಎನ್ನಿಸುತ್ತಿದೆ ಅವರನ್ನು ನೋಡಿದರೆ! ಅವರು 2 ಡಿಗ್ರಿಗಳಿಗಿಂತಲೂ ಕಡಿಮೆ ತಾಪಮಾನದ ಚಳಿಯಲ್ಲಿ ತಣ್ಣಗಿನ ಲೋಹದ ಟ್ರಾಲಿಗಳಲ್ಲಿ ಮಲಗುತ್ತಿದ್ದಾರೆ. ಐದಾರು ಡಿಗ್ರಿ ತಾಪಮಾನದಲ್ಲಿ ತೆರೆದ ಸ್ಥಳಗಳಲ್ಲಿ ಸ್ನಾನ ಮಾಡುತ್ತಾರೆ. ಓಹ್!‌ ಎಷ್ಟೊಂದು ಸರಳ ಈ ಶ್ರೀಮಂತರು!

ಏತನ್ಮಧ್ಯೆ, ರೈತರೊಂದಿಗೆ ಸಂವಹನ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಗೆ ಪರಸ್ಪರ ಅವರಲ್ಲೇ ಮಾತನಾಡಲು ಸಾಧ್ಯವಾಗುತ್ತಿದ್ದಂತಿಲ್ಲ - ನಾಲ್ವರು ಸದಸ್ಯರಲ್ಲಿ ಒಬ್ಬರು ಸಮಿತಿಯ ಮೊದಲ ಸಭೆಗೂ ಮೊದಲೇ ರಾಜೀನಾಮೆ ನೀಡಿದರು. ಮತ್ತು ಪ್ರತಿಭಟನಾಕಾರರೊಂದಿಗೆ ಮಾತುಕತೆಯೆನ್ನುವುದು ದೂರದ ಮಾತು.

ಮಾರ್ಚ್ 12 ರಂದು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಗೆ ನೀಡಿದ ಎರಡು ತಿಂಗಳ ಅವಧಿ (ಕೃಷಿಗೆ ಅಗತ್ಯವಾದ ಪರಾಗಸ್ಪರ್ಶ ನಡೆಸುವ ಕೀಟಗಳ ಗರಿಷ್ಠ ಜೀವಿತಾವಧಿಯೂ ಇಷ್ಟೇ ದಿನಗಳು!)  ಈ ಅವಧಿಯ ಕೊನೆಗೆ ಸಮಿತಿಯು ತಲುಪಲು ಸಾಧ್ಯವಾಗದವರ ಸುದೀರ್ಘ ಪಟ್ಟಿಯೊಂದನ್ನು ಮತ್ತು ಅವರೊಂದಿಗೆ ಮಾತನಾಡಲು ನಿರಾಕರಿಸಿದವರ ಇನ್ನೊಂದು ದೊಡ್ಡ ಪಟ್ಟಿಯನ್ನು ಹೊಂದಿರುತ್ತದೆ.ಜೊತೆಗೊಂದು ಅವರು ನಿಜವಾಗಿಯೂ ಮಾತನಾಡಬಾರದಾಗಿದ್ದ ಜನರ ಕಿರು ಪಟ್ಟಿಯೂ ಇರಲಿದೆ.

ಪ್ರತಿಭಟನಾ ನಿರತ ರೈತರನ್ನು ಬೆದರಿಸುವ ಎಲ್ಲ ಪ್ರಯತ್ನಗಳ ನಂತರವವೂ ಅವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಅವರನ್ನು ಅಪಖ್ಯಾತಿಗೊಳಿಸುವ ಪ್ರತಿಯೊಂದು ನಡೆಯೂ ಆಡಳಿತ ಪರ ಮಾಧ್ಯಮಗಳಿಂದ ಹೆಚ್ಚಿನ ಬೆಂಬಲವನ್ನು ಪಡೆದಿರಬಹುದು - ಆದರೆ ಅದು ಹೋರಾಟ ಕಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಭಯಾನಕವೆನ್ನಿಸುವ ಸಂಗತಿಯೆಂದರೆ, ಈ ಸರ್ಕಾರವು ಹೆಚ್ಚು ಸರ್ವಾಧಿಕಾರಿ, ದೈಹಿಕ ಮತ್ತು ದಬ್ಬಾಳಿಕೆಯ ತನ್ನ ಪ್ರಯತ್ನಗಳನ್ನು ಹೆಚ್ಚಿಸುವುದನ್ನು ನಿಲ್ಲಿಸುವುದಿಲ್ಲ.

PHOTO • Kanika Gupta ,  Shraddha Agarwal ,  Anustup Roy

PHOTO • Satyraj Singh
PHOTO • Anustup Roy

ಈ ವಿವಾದವನ್ನು ನಿವಾರಿಸಲು ಇರುವ ದೊಡ್ಡ ಅಡಚಣೆಯೆಂದರೆ ವೈಯಕ್ತಿಕ ಅಹಂ. ಇದು ಕಾರ್ಪೊರೇಟ್ ಮಾಧ್ಯಮಗಳಲ್ಲಿರುವವರಿಗೆ ಮತ್ತು ಬಿಜೆಪಿಯಲ್ಲಿನ ಹಲವರಿಗೆ ಚೆನ್ನಾಗಿ ತಿಳಿದಿದೆ ಕೂಡ. ನೀತಿಗಳು, ಶ್ರೀಮಂತ ಕಂಪನಿಗಳಿಗೆ ನೀಡಿದ ಭರವಸೆಗಳು (ಈ ಭರವಸೆ ಕೆಲವು ಹಂತದಲ್ಲಿ ನಿಜವಾಗಿದ್ದರೂ ಸಹ). ಕಾನೂನುಗಳ ಪಾವಿತ್ರ್ಯ(ಏಕೆಂದರೆ ಈ ಕಾನೂನುಗಳಿಗೆ ಅನೇಕ ತಿದ್ದುಪಡಿಗಳನ್ನು ಮಾಡಬಹುದೆಂದು ಸರ್ಕಾರವೇ ಒಪ್ಪಿಕೊಂಡಿದೆ) ಇವ್ಯಾವುದೂ ಸರಕಾರದ ಹಠಮಾರಿತನಕ್ಕೆ ಕಾರಣವಲ್ಲ. ಇಲ್ಲಿರುವುದು ಒಂದೇ ಕಾರಣ, ಅದೆಂದರೆ ರಾಜನು ಎಂದಿಗೂ ತಪ್ಪು ಮಾಡುವುದಿಲ್ಲ ಎನ್ನುವ ಧೋರಣೆ. ಒಂದು ವೇಳೆ ತಪ್ಪು ಒಪ್ಪಿಕೊಂಡರೆ ರಾಜ ಒಂದು ಹೆಜ್ಜೆ ಹಿಂದಕ್ಕಿಟ್ಟಂತೆ ಎನ್ನುವುದು ಅವರ ನಂಬಿಕೆ. ಅವರು ಯಾವುದೇ ಕಾರಣಕ್ಕೂ ಹಿಂದಡಿಯಿಡುವುದಿಲ್ಲ, ಅದು ದೇಶದ ಪ್ರತಿಯೊಬ್ಬ ರೈತನೂ ಅವರಿಂದ ದೂರ ಸರಿದರೂ ಸರಿಯೇ. ರಾಜ ತಪ್ಪು ಮಾಡಲಾರ ತನ್ನ ಮುಖವನ್ನು ಕೆಳಗೆ ಹಾಕಲಾರ. ಈ ಸತ್ಯವೆಲ್ಲ ತಮಗೆ ತಿಳಿದಿದ್ದರೂ ಇದುವರೆಗೆ ದೇಶದ ಒಂದೇ ಒಂದು ಪತ್ರಿಕೆಯ ಸಂಪಾದಕೀಯವೂ ಈ ಕುರಿತು ಪಿಸುಮಾತುಗಳಲ್ಲಿ ಕೂಡ ಬರೆದಿಲ್ಲ.

ಈ ಅವ್ಯವಸ್ಥೆಯಲ್ಲಿ ಅಹಂ ಎಷ್ಟು ಮುಖ್ಯವಾದುದು? ದೆಹಲಿಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದ ಕುರಿತು ರಿದಮ್-ಮತ್ತು-ಬ್ಲೂಸ್ ಕಲಾವಿದೆಯ ಸರಳ ಟ್ವೀಟ್ - "ನಾವು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ?" ಎನ್ನುವುದಾಗಿತ್ತು - ಕುರಿತು ಪ್ರತಿಕ್ರಿಯೆ ನೋಡಿ. 'ಮೋದಿಯವರಿಗೆ ಟ್ವಿಟರ್‌ನಲ್ಲಿ ಅನುಯಾಯಿಗಳು ರಿಹಾನ್ನಾ ಅವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ' ಎಂದು. ಇಂತಹ ಚರ್ಚೆಗಳ ಅರ್ಥ ಚರ್ಚೆಯ ಸಂದರ್ಭದಲ್ಲಿ ನಾವು ದಾರಿ ತಪ್ಪಿದ್ದೇವೆ ಎಂದು. ವಾಸ್ತವವಾಗಿ, ಈ ದಿನದಂದು ವಿದೇಶಾಂಗ ಸಚಿವಾಲಯವು ವೀರರ ಭಯೋತ್ಪಾದನಾ-ವಿರೋಧಿ ಆತ್ಮಹತ್ಯಾ ದಾಳಿಯನ್ನು ನಡೆಸಿತು ಟ್ವಿಟರಿನಲ್ಲಿ ನಡೆಸಿತು, ಅದು ದೇಶಪ್ರೇಮಿ ಸೆಲೆಬ್ರಿಟಿ ಲೈಟ್ ಬ್ರಿಗೇಡ್ ಅನ್ನು ತನ್ನ ಪರವಾಗಿ ಸೈಬರ್ ದಾಳಿ ನಡೆಸಲು ಪ್ರೇರೇಪಿಸಿತು. (ಡಿಜಿಟಲ್‌ ಕಣಿವೆಯಲ್ಲಿ ಮಿಂಚು ಗುಡುಗುಗಳೊಂದಿಗೆ ದಾಳಿ ಮಾಡಿಸುವ ಮೂಲಕ ಅದರ ಬೆಳಕಿನಡಿ ಎಲ್ಲರನ್ನೂ ಕುರುಡರನ್ನಾಗಿಸಿ ಕಣಿವೆಯಾಳಕ್ಕೆ ಬೀಳಿಸಲಾಯಿತು).

ಮೂಲ ಅವಹೇಳನಕಾರಿ ಟ್ವೀಟ್, ನಾವು ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ, ಸ್ಪಷ್ಟ ನಿಲುವು ಅಥವಾ ಒಂದರ ಪರವಾಗಿ ನಿಂತಿಲ್ಲ ಎಂಬ ಬಗ್ಗೆ ಮಾತ್ರ ಕಳವಳ ವ್ಯಕ್ತಪಡಿಸುತ್ತಿದ್ದೇವೆ. ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಸಂವಹನ ನಿರ್ದೇಶಕರ ಹೇಳಿಕೆಗಳಿಗೆ ವಿರುದ್ಧವಾಗಿ, ಕೃಷಿಯನ್ನು ಸಾರ್ವಜನಿಕವಾಗಿ ಅವರು ಶಾಸನಗಳನ್ನು ಶ್ಲಾಘಿಸಿದ್ದಾರೆ (ಹಾಗೆ ಹೇಳುವಾಗ 'ರಕ್ಷಣಾತ್ಮಕ ಕ್ರಮಗಳ' ಬಗ್ಗೆ 'ಎಚ್ಚರಿಕೆ'ಯನ್ನು ನಿಕೋಟಿನ್ ಮಾರಾಟಗಾರರು ತಮ್ಮ ಸಿಗರೆಟ್ ಪೆಟ್ಟಿಗೆಗಳಲ್ಲಿ ಶಾಸನಬದ್ಧ ಎಚ್ಚರಿಕೆಗಳನ್ನು ಪ್ರಾಮಾಣಿಕವಾಗಿ ಬರೆಯುವಂತೆಯೇ ಹೇಳಿದ್ದಾರೆ).

ಇಲ್ಲ, ಆರ್-ಎಂಡ್-ಬಿ ಕಲಾವಿದರು ಮತ್ತು 18 ವರ್ಷದ ಹವಾಮಾನ ಕಾರ್ಯಕರ್ತೆ ಸ್ಪಷ್ಟವಾಗಿ ಅಪಾಯಕಾರಿ, ಅವರನ್ನು ಯಾವುದೇ ಮುಲಾಜಿಲ್ಲದೆ ಎದುರಿಸಬೇಕಾಗಿದೆ. ಈ ಕೆಲಸವನ್ನು ದೆಹಲಿ ಪೊಲೀಸರು ಮಾಡುತ್ತಿದ್ದಾರೆನ್ನುವುದು ಸಂತಸದ ಸಂಗತಿ. ಮತ್ತು ಅವರು ಈ ಪ್ರಪಂಚವನ್ನು ಮೀರಿ ಈ ಎಲ್ಲಾ ಪಿತೂರಿಯ ಹಿಂದೆ ಅನ್ಯ ಗ್ರಹದ ಕೈವಾಡವಿದೆಯೆಂದು ಭಾವಿಸಿದರೆ ಆಗ ನಾನು ಅವರನ್ನು ಗೇಲಿ ಮಾಡುವುದಿಲ್ಲ. ಅಂತರ್ಜಾಲದಲ್ಲಿ ಜನಪ್ರಿಯವಾಗಿರುವ ನನ್ನ ನೆಚ್ಚಿನ ಹೇಳಿಕೆಗಳಲ್ಲಿ ಒಂದಾದ: "ಅನ್ಯ ಗ್ರಹದಲ್ಲಿ ಬುದ್ಧಿವಂತ ಜೀವಿಗಳಿವೆ ಎಂಬುದಕ್ಕೆ ಬಲವಾದ ಪುರಾವೆಯೆಂದರೆ ಅವರು ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟಿರುವುದು." ಎನ್ನುವದನ್ನು ನೆನಪಿಸಿಕೊಂಡು ಸುಮ್ಮನಾಗುತ್ತೇನೆ.

ಈ ಲೇಖನವು ಮೊದಲು ʼದಿ ವೈರ್‌ ʼನಲ್ಲಿ ಪ್ರಕಟವಾಗಿತ್ತು.

ಇಲಸ್ಟ್ರೇಷನ್:‌ ಲಬಾನಿ ಜಂಗಿ, ಮೂಲತಃ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ  ಸಣ್ಣ ಪಟ್ಟಣದವರಾದ ಇವರು ಸೆಂಟರ್‌ ಫಾರ್‌ ಸ್ಟಡೀಸ್‌ ಇನ್‌ ಸೋಷಿಯಲ್‌ ಸೈನ್ಸ್‌ ಕೋಲ್ಕತಾ. ಇಲ್ಲಿ ಬೆಂಗಾಲಿ ವಲಸೆ ಕಾರ್ಮಿಕರ ಕುರಿತು ಪಿಎಚ್‌ಡಿ ಮಾಡುತ್ತಿದ್ದಾರೆ. ಅಭಿಜಾತ ಕಲಾವಿದೆಯಾಗಿರುವ ಇವರಿಗೆ ಪ್ರಯಾಣವೆಂದರೆ ಪ್ರೀತಿ.

ಅನುವಾದ: ಶಂಕರ ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru