“ಪ್ರತಿಯೊಬ್ಬರೂ ಪ್ರತಿಭಟನಾ ಸ್ಥಳಕ್ಕೆ ಕಳುಹಿಸುವ ಸಲುವಾಗಿ ತಮ್ಮಿಂದ ಸಾಧ್ಯವಿರುವುದನ್ನು ಸಹಾಯವಾಗಿ ನೀಡಬೇಕೆಂದು ಕೋರಿಕೆ ಸಲ್ಲಿಸುತ್ತಾ ಟ್ರಾಕ್ಟರ್ ಗಾಡಿ ಇಡೀ ಹಳ್ಳಿಯುದ್ದಕ್ಕೂ ಸಂಚರಿಸಿತು. ನಾನು 500 ರೂಪಾಯಿ ಮೂರು ಲೀಟರ್ ಹಾಲು ಮತ್ತು ಒಂದು ಬಟ್ಟಲು ಸಕ್ಕರೆಯನ್ನು ನೀಡಿದ್ದೇನೆ” ಎಂದು ಹರಿಯಾಣದ ಹಿಸಾರ್ ಜಿಲ್ಲೆಯ ಪೆತ್ವಾರ್ ಗ್ರಾಮದ 34 ವರ್ಷದ ಸೋನಿಯಾ ಪೆತ್ವಾರ್ ಹೇಳುತ್ತಾರೆ.

ಇದು 2020ರ ಡಿಸೆಂಬರ್ ಮಧ್ಯಭಾಗದಲ್ಲಿ ಮೊದಲ ಬಾರಿಗೆ ನರ್ನಾಂಡ್ ತಾಲೂಕಿನಲ್ಲಿರುವ ಅವರ ಹಳ್ಳಿಯಲ್ಲಿ ಪಡಿತರವನ್ನು ಸಂಗ್ರಹಿಸಿದ ಸಂದರ್ಭದಲ್ಲಿ ನಡೆದದ್ದು. ಈ ಸಂಗ್ರಹವನ್ನು ನವೆಂಬರ್ 26ರಿಂದ ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳ ವಿರೋಧಿಸಿ ದೆಹಲಿ-ಹರಿಯಾಣ ಗಡಿಯಲ್ಲಿ ಪೆತ್ವಾರ್ ನಿಂದ ಸುಮಾರು 105 ಕಿಲೋಮೀಟರ್ ದೂರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಟಿಕ್ರಿಯಲ್ಲಿನ ರೈತರಿಗೆ ಕಳುಹಿಸಲಾಗಿದೆ.

ನನ್ನ ಬಳಿ ಸಾಕಷ್ಟು ಹಣವಿರಲಿಲ್ಲ. ಹಾಗಾಗಿ ನಾನು ಕಟ್ಟಿಗೆ ತುಂಡುಗಳನ್ನು ನೀಡಿದ್ದೇನೆ,” ಎಂದು ಸೋನಿಯಾ ಅವರ ಕುಟುಂಬದ ಸದಸ್ಯೆ 60 ವರ್ಷದ ಶಾಂತಿ ದೇವಿ ಹೇಳಿದರು. ”ಆಗ ಚಳಿ ಇದ್ದಿದ್ದರಿಂದಾಗಿ ಅಲ್ಲಿ ಪ್ರತಿಭಟನೆ ಮಾಡುವವರು ಬೆಚ್ಚಗಿರಲು ಈ ಕಟ್ಟಿಗೆ ನೆರವಾಗಬಹುದು ಎಂದು ನಾನು ಯೋಚಿಸಿದೆ."

ಜನವರಿ ಆರಂಭದಲ್ಲಿ ಪೆತ್ವಾರ್ ಗೆ ಎರಡನೇ ಬಾರಿಗೆ ಟ್ರಾಕ್ಟರ್ ಗಾಡಿ ಬಂದಾಗ, ”ಪ್ರತಿಯೊಬ್ಬ ಮಹಿಳೆಯೂ ಪ್ರತಿಭಟನಾ ಸ್ಥಳಕ್ಕೆ ಹೋಗುವ ವ್ಯಕ್ತಿಗೆ ಏನನ್ನಾದರೂ ನೀಡುತ್ತಿದ್ದರು” ಎಂದು ಸೋನಿಯಾ ಹೇಳುತ್ತಾರೆ. ಪಶುಗಳನ್ನು ಸಾಕುವ ಮಹಿಳೆಯರು ಹಾಲನ್ನು ನೀಡುತ್ತಿದ್ದರು. ಇದೊಂದು ರೀತಿ ತೆರೆಮರೆಯಲ್ಲಿ ರೈತರ ಚಳವಳಿಯನ್ನು ಬೆಂಬಲಿಸುವ ನಡೆಯಾಗಿದೆ.

ರೈತರ ಪ್ರತಿಭಟನೆ ಈಗ ಮೂರನೇ ತಿಂಗಳಿಗೆ ಕಾಲಿಟ್ಟಿದೆ ಮತ್ತು ಇನ್ನೂ ಹತ್ತಾರು ಸಾವಿರ ಪುರುಷ ಹಾಗೂ ಮಹಿಳಾ ಚಳವಳಿಗಾರರು ಮುಖ್ಯವಾಗಿ ದೆಹಲಿಯ ಗಡಿ ಪ್ರದೇಶಗಳಾದ ಟಿಕ್ರಿ ಮತ್ತು ಸಿಂಗು (ದೆಹಲಿ-ಹರಿಯಾಣ ಗಡಿ) ಮತ್ತು ಗಾಜಿಪುರದಲ್ಲಿ (ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ) ಸೇರಿದ್ದಾರೆ.

ನಾನು ಫೆಬ್ರವರಿ 3ರ ಮಧ್ಯಾಹ್ನ ಟಿಕ್ರಿಯಲ್ಲಿ ಸೋನಿಯಾರನ್ನು ಭೇಟಿಯಾದೆ. 2011ರ ಜನಗಣತಿ ಪ್ರಕಾರ ಸುಮಾರು 10,000 ಜನಸಂಖ್ಯೆಯನ್ನು ಹೊಂದಿರುವ ಪೆತ್ವಾರ್ ಗ್ರಾಮದಿಂದ ಚಳವಳಿಯಲ್ಲಿ ಪಾಲ್ಗೊಳ್ಳಲು ಬಂದಿರುವ 150 ಮಹಿಳೆಯರನ್ನೊಳಗೊಂಡ ಗುಂಪಿನೊಂದಿಗೆ ಇದ್ದರು, ಆದರೆ ಅವರು ಆಗಲೇ ಹಿಂತಿರುಗಲು ಸಿದ್ದರಾಗಿದ್ದರು. ಆನಂತರ ನಾನು ಆಕೆಯನ್ನು ಫೆಬ್ರುವರಿ 7 ರಂದು ಭೇಟಿಯಾದಾಗ “ಈ ಚಳುವಳಿಗಳನ್ನು ನೋಡುತ್ತಿದ್ದರೆ ಯಾರಿಗಾದರೂ ಕೂಡ ಸ್ಫೂರ್ತಿ ಬರುತ್ತೆ” ಎಂದು ಹೇಳಿದಳು.

Sonia (left) and her family give their share of land in Petwar village (right) to their relatives on rent. They mainly grow wheat and rice there
PHOTO • Sanskriti Talwar
Sonia (left) and her family give their share of land in Petwar village (right) to their relatives on rent. They mainly grow wheat and rice there
PHOTO • Sanskriti Talwar

ಸೋನಿಯಾ (ಎಡಕ್ಕೆ) ಮತ್ತು ಅವರ ಕುಟುಂಬವು ಪೆಟ್ವಾರ್ ಗ್ರಾಮದಲ್ಲಿ (ಬಲಕ್ಕೆ) ತಮ್ಮ ಪಾಲಿನ ಭೂಮಿಯನ್ನು ತಮ್ಮ ಸಂಬಂಧಿಕರಿಗೆ ಬಾಡಿಗೆಗೆ ನೀಡುತ್ತಾರೆ. ಅವರು ಮುಖ್ಯವಾಗಿ ಅಲ್ಲಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಾರೆ .

"ನಾವು ಈಗ ವಿಭಿನ್ನ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ , ಇದು ಈ ಹಿಂದೆ ಮಹಿಳೆಯರಿಗೆ ವಿಧಿಸುತ್ತಿದ್ದಂತಹ ನಿರ್ಬಂಧಕ್ಕಿಂತ ಭಿನ್ನವಾಗಿದೆ. ಈ ಹೋರಾಟಕ್ಕೆ ನಾವೀಗ ಧುಮಕಲೇಬೇಕಾಗಿದೆ. ಒಂದು ವೇಳೆ ಮಹಿಳೆಯರು ಇದರಿಂದ ಹಿಂದೆ ಸರಿದರೆ ಈ ಚಳವಳಿ ಮುಂದುವರೆಯುವುದಾದರು ಹೇಗೆ?” ಎಂದು ಸೋನಿಯಾ ಪ್ರಶ್ನಿಸುತ್ತಾರೆ.

ಈ ಚಳವಳಿಯಲ್ಲಿ ಮಹಿಳೆಯರು ಮುಕ್ತ ಮನಸ್ಸಿನಿಂದ ಭಾಗವಹಿಸುತ್ತಿದ್ದಾರೆ. ”ಹಳ್ಳಿಗಳಿಂದ ಪಿನ್ನಿಸ್ [ಸಿಹಿತಿಂಡಿ] ಕಳಿಸುವುದಾಗಿರಲಿ ಅಥವಾ ಇಲ್ಲಿರುವವರಿಗೆ ರೇಷನ್ ಸಂಗ್ರಹಿಸುವುದಾಗಲಿ ಮಹಿಳೆಯರು ಎಲ್ಲ ರೀತಿಯಿಂದಲೂ ಚಳುವಳಿಗೆ ಕೊಡುಗೆ ನೀಡುತ್ತಿದ್ದಾರೆ." ಎಂದು ಪಂಜಾಬ್ ಕಿಸಾನ್ ಯೂನಿಯನ್ ರಾಜ್ಯ ಸಮಿತಿ ಸದಸ್ಯೆ ಜಸ್ಬೀರ್ ಕೌರ್ ನಾಟ್ ಹೇಳುತ್ತಾರೆ.

ಸೋನಿಯಾ ಮತ್ತು ಅವರ 43 ವರ್ಷದ ಪತಿ ವೀರೇಂದ್ರ ಹರಿಯಾಣದಲ್ಲಿನ ಭೂಮಾಲೀಕ ಜಾಟ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವೀರೇಂದ್ರ ಅವರ ತಂದೆ ಮತ್ತು ಅವರ ಐವರು ಸಹೋದರರು ಪೆತ್ವಾರ್‌ನಲ್ಲಿ ತಲಾ 1.5 ಎಕರೆ ಭೂಮಿಯನ್ನು ಹೊಂದಿದ್ದಾರೆ. ಸೋನಿಯಾ ಅವರ ಮಾವ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಅವರ ಭೂಮಿಯನ್ನು ಈಗ ಅವರ ಪುತ್ರರಿಗೆ ಹಸ್ತಾಂತರಿಸಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ವೀರೇಂದರ್ ಮತ್ತು ಅವರ ಸಹೋದರ ಈಗ ಜಂಟಿಯಾಗಿ ತಮ್ಮ ತಂದೆಯ ಜಮೀನನ್ನು ನೋಡಿಕೊಳ್ಳುತ್ತಿದ್ದಾರೆ.

14ನೇ ವಯಸ್ಸಿನಲ್ಲಿ ಮದುವೆಯಾಗಿದ್ದ ವೀರೇಂದ್ರರ ಚಿಕ್ಕಪ್ಪನ ಪತ್ನಿ ವಿಧವೆ ಶಾಂತಿ “ನಾನು 20 ವರ್ಷದವನಿದ್ದಾಗ ನನ್ನ ಪತಿ ತೀರಿಕೊಂಡರು. ಅಂದಿನಿಂದ , ನಾನು ನಮ್ಮ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆ." ಎನ್ನುತ್ತಾರೆ. ಸೋನಿಯಾರ ಮನೆಯ ಹತ್ತಿರ ವಾಸಿಸುವ ಶಾಂತಿ , ನಾನು ಅಲ್ಲಿದ್ದಾಗ ಅವಳನ್ನು ಭೇಟಿ ಮಾಡುತ್ತಿದ್ದೆ. ಶೀಘ್ರದಲ್ಲೇ , ಸೋನಿಯಾ ಅವರ ಕುಟುಂಬದ ಇತರ ಮಹಿಳೆಯರು ಸಹ ನಮ್ಮೊಂದಿಗೆ ಕೂಡಿಕೊಂಡರು” ಎಂದು ಹೇಳುತ್ತಾರೆ.

ಸೋನಿಯಾ ಅವರ ಮಾವನ ಇನ್ನೊಬ್ಬ ಸಹೋದರನ ವಿಧವೆ ವಿದ್ಯಾದೇವಿ ನಾವು ಮೊದಲು ಎಲ್ಲವನ್ನೂ ಕೈಯಿಂದ ಮಾಡಿದ್ದೇವೆ. ಈಗ ಹೆಚ್ಚಿನ ಕೆಲಸಗಳನ್ನು ವಿದ್ಯುತ್ ನೆರವಿನಿಂದ ಮಾಡಲಾಗುತ್ತದೆ” ಎಂದರು. 60 ವರ್ಷದ ವಿದ್ಯಾ , ಬೆಳಿಗ್ಗೆ 4 ಗಂಟೆಗೆ ತಮ್ಮ ದಿನಗಳು ಹೇಗೆ ಪ್ರಾರಂಭವಾಗುತ್ತವೆ ಎಂಬುದನ್ನು ನೆನಪಿಸಿಕೊಳ್ಳುತ್ತಾ.”ನಾವು ಗೋಧಿಯನ್ನು ಪುಡಿಮಾಡಿ ಹಿಟ್ಟು ತಯಾರಿಸುತ್ತೇವೆ , ನಂತರ ದನಕರುಗಳಿಗೆ ಆಹಾರವನ್ನು ನೀಡುತ್ತೇವೆ ಮತ್ತು ಹಸುಗಳ ಕಾಲು ಕರೆಯುತ್ತೇವೆ. ನಂತರ ಇಡೀ ಕುಟುಂಬಕ್ಕೆ ನಾವು ಆಹಾರವನ್ನು ತಯಾರಿಸುತ್ತೇವೆ” ಎಂದು ವಿವರಿಸಿದರು.

Left: Vidya Devi does not farm anymore, but supports the farmers' protests. Right: Shanti Devi started working on her family's land when she was 20 years old
PHOTO • Sanskriti Talwar
Left: Vidya Devi does not farm anymore, but supports the farmers' protests. Right: Shanti Devi started working on her family's land when she was 20 years old
PHOTO • Sanskriti Talwar

ಎಡಕ್ಕೆ: ವಿದ್ಯಾ ದೇವಿ ಇನ್ನು ಮುಂದೆ ಕೃಷಿ ಮಾಡುವುದಿಲ್ಲ , ಆದರೂ ರೈತರ ಚಳವಳಿಯನ್ನು ಬೆಂಬಲಿಸುತ್ತಾರೆ. ಬಲಕ್ಕೆ: ಶಾಂತಿದೇವಿ ಅವರು 20 ವರ್ಷದವರಿದ್ದಾಗ ತಮ್ಮ ಕುಟುಂಬದ ಜಮೀನಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.

ಬೆಳಿಗ್ಗೆ 8 ಗಂಟೆಗೆ ತಮ್ಮ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಗದ್ದೆಗಳಿಗೆ ಹೋಗುವುದಾಗಿ ವಿದ್ಯಾದೇವಿ ಹೇಳುತ್ತಾರೆ."ನಾವು ಅಲ್ಲಿ ಕಳೆ ಕೀಳುವುದು, ಬಿತ್ತನೆ ಮಾಡುವುದು ಮತ್ತು ಅದರ ಜೊತೆಗೆ ಕಟಾವಿನ ಕೆಲಸವನ್ನು ಮಾಡುತ್ತೇವೆ ಮತ್ತು ಸಂಜೆ 6 ಗಂಟೆಯ ವೇಳೆಗೆ ಮನೆಗೆ ಹಿಂತಿರುಗುತ್ತೇವೆ."ನಂತರ ಮಹಿಳೆಯರೆಲ್ಲರು ದನಕರುಗಳಿಗೆ ಆಹಾರ ನೀಡುವುದು ಹಾಗೂ ಭೋಜನ ಸಿದ್ಧಪಡಿಸುವ ಕೆಲಸವನ್ನು ಮುಗಿಸಿ ರಾತ್ರಿ 10 ಗಂಟೆಯ ಹೊತ್ತಿಗೆ ಮಲಗುತ್ತಾರೆ."ಮರುದಿನ, ಎಂದಿನಂತೆ ಅದೇ ಕಾಲಚಕ್ರವು ಪುನರಾವರ್ತನೆಯಾಗುತ್ತದೆ" ಎಂದು ಅವರು ಹೇಳುತ್ತಾರೆ.

"ಅವರು ಇಳಿಹೊತ್ತಿಗೂ ಮೊದಲು ತಮ್ಮ ಗದ್ದೆಗಳಿಂದ ಹಿಂದಿರುವುದಿಲ್ಲ, ಎಂದು ಸೋನಿಯಾ ಹೇಳುತ್ತಾರೆ. ಈಗ ಮಹಿಳಾ ರೈತರಿಗೆ ಇದು ಸುಲಭವಾಗಿದೆ. “ಈಗ ಬೆಳೆಗಳನ್ನು ಕತ್ತರಿಸಲು, ಕೀಟನಾಶಕ ಮತ್ತು ಕೀಟನಾಶಕವನ್ನು ಸಿಂಪಡಿಸಲು ಒಂದು ಯಂತ್ರವಿದೆ, ಮತ್ತು ಟ್ರಾಕ್ಟರುಗಳು ಸಹ ಸಾಕಷ್ಟು ಕೆಲಸ ಮಾಡುತ್ತವೆ. ಆದರೆ ನೀವು ಇನ್ನೂ ಎಲ್ಲದಕ್ಕೂ ಹಣವನ್ನು ವ್ಯಯ ಮಾಡಬೇಕು” ಎನ್ನುತ್ತಾರೆ.

ವಿದ್ಯಾ ಅವರ ಕುಟುಂಬವು ತಮ್ಮ 1.5 ಎಕರೆ ಭೂಮಿಯಲ್ಲಿ ಕೃಷಿ ಮಾಡುವುದಿಲ್ಲ. “ನಾವು 23 ವರ್ಷಗಳ ಹಿಂದೆಯೇ ಇದನ್ನು ನಿಲ್ಲಿಸಿದ್ದೇವೆ. ನನ್ನ ಪತಿ ತೀರಿಕೊಂಡರು ಮತ್ತು ನನ್ನ ಆರೋಗ್ಯ ಕೂಡಾ ಚೆನ್ನಾಗಿಲ್ಲ. ನನ್ನ ಮಗ ತನ್ನ ಶಿಕ್ಷಣವನ್ನು ಮುಗಿಸಿದ ನಂತರ ಶಾಲೆಯಲ್ಲಿ ತಂದೆ ನಿರ್ವಹಿಸುತ್ತಿದ್ದ ಶಿಕ್ಷಕನ ಕೆಲಸವನ್ನು ಮಾಡುತ್ತಿದ್ದಾನೆ,” ಎಂದು ಅವರು ಹೇಳಿದರು.

ವಿದ್ಯಾ ಅವರ ಕುಟುಂಬದ ಒಡೆತನದ ಭೂಮಿಯನ್ನು ಶಾಂತಿ ಮತ್ತು ಅವರ 39 ವರ್ಷದ ಮಗ ಪವನ್ ಕುಮಾರ್ ಬಾಡಿಗೆಗೆ ಪಡೆದಿದ್ದಾರೆ. ಕಳೆದ ಎರಡು ವರ್ಷಗಳಿಂದ, ಸೋನಿಯಾ ಅವರ ಕುಟುಂಬವು ತಮ್ಮ 1.5 ಎಕರೆಗಳನ್ನು ಶಾಂತಿ ಮತ್ತು ಪವನ್ ಅವರಿಗೆ ವರ್ಷಕ್ಕೆ 60,000 ರೂಪಾಯಿಗಳಂತೆ ಬಾಡಿಗೆಗೆ ನೀಡುತ್ತಿದೆ. ಇದರಿಂದ ಬರುವ ಆದಾಯವನ್ನು ವೀರೇಂದ್ರ ಮತ್ತು ಅವರ ಸಹೋದರ ಹಂಚಿಕೊಳ್ಳುತ್ತಾರೆ. ಈ ಬಾಡಿಗೆ ಪಡೆದ ಜಮೀನಿನ ಸಣ್ಣ ಭಾಗಗಳಲ್ಲಿ ಶಾಂತಿ ಮತ್ತು ಪವನ್ ಅವರು ತಮ್ಮ ಕುಟುಂಬದ ಬಳಕೆಗಾಗಿ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ ಮತ್ತು ಅದರಲ್ಲಿ ಕೆಲವಷ್ಟನ್ನು ಕುಟುಂಬಕ್ಕೂ ನೀಡುತ್ತಾರೆ.

ಭತ್ತವನ್ನು ಬೆಳೆಯುವುದರಿಂದ ಉತ್ತಮ ಲಾಭ ಸಿಗುವುದಿಲ್ಲ. ”ಸುಮಾರು ಒಂದು ಎಕರೆಯಲ್ಲಿ ಭತ್ತ ಬೆಳೆಯಲು ನಾವು 25,000 ರೂ ಖರ್ಚು ಮಾಡಿದ್ದೇವೆ” ಎಂದು ಶಾಂತಿ ಹೇಳುತ್ತಾರೆ. ಗೋದಿ ಮೇಲಿನ ಖರ್ಚು ತುಂಬಾ ಕಡಿಮೆ. “ ಗೋದಿಗೆ ಭತ್ತದಷ್ಟು ನೀರು, ಗೊಬ್ಬರ ಮತ್ತು ಕೀಟನಾಶಕಗಳು ಅಗತ್ಯವಿಲ್ಲ. ಒಂದು ಎಕರೆ ಭೂಮಿಯನ್ನು 10,000 ರೂಪಾಯಿಗಳಲ್ಲಿ ಸಿದ್ಧಗೊಳಿಸಬಹುದು. ಒಂದು ವೇಳೆ ಮಳೆಯಿಂದಾಗಿ ಬೆಳೆ ಹಾನಿಯಾಗದಿದ್ದರೆ, ನಾವು ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು, ಹರಿಯಾಣದ ರೈತರು 2020 ರಲ್ಲಿ ಕ್ವಿಂಟಾಲ್ ಗೋಧಿಯನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) 1,840 ರೂ.ಗೆ ಮಾರಾಟ ಮಾಡುತ್ತಿದ್ದರು ಎಂದು ಅವರು ಹೇಳಿದರು.

Sunita (left) hasn't been to Tikri yet. She gets news about the protests on her phone. Her mother-in-law, Shanti (right), went to Tikri in mid-January
PHOTO • Sanskriti Talwar
Sunita (left) hasn't been to Tikri yet. She gets news about the protests on her phone. Her mother-in-law, Shanti (right), went to Tikri in mid-January
PHOTO • Sanskriti Talwar

ಸುನೀತಾ (ಎಡ) ಇನ್ನೂ ಟಿಕ್ರಿಗೆ ಹೋಗಿಲ್ಲ. ಆಕೆ ತನ್ನ ಫೋನ್‌ನಲ್ಲಿ ಚಳವಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯುತ್ತಾರೆ. ಆಕೆಯ ಅತ್ತೆ ಶಾಂತಿ (ಬಲ) ಜನವರಿ ಮಧ್ಯದಲ್ಲಿ ಟಿಕ್ರಿ ಗಡಿಗೆ ಹೋಗಿದ್ದರು.

ಜನವರಿ 18 ರಂದು ಪ್ರತಿಭಟನಾ ಸ್ಥಳದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಶಾಂತಿ , ವಿದ್ಯಾ ಮತ್ತು ಸೋನಿಯಾ ಮೊದಲ ಬಾರಿಗೆ ಬಾಡಿಗೆ ಬಸ್‌ ಮೂಲಕ ಟಿಕ್ರಿಗೆ ತೆರಳಿದರು.

"ನಾವು ರೈತರನ್ನು ಬೆಂಬಲಿಸಲು ಹೋಗಿದ್ದೆವು, ಏಕೆಂದರೆ ಒಂದೆಡೆ ಬೆಳೆಗಳ ಬೆಲೆ ಕುಂಠಿತಗೊಳ್ಳುತ್ತಿವೆ. ಬೆಳೆಗಳನ್ನು ನಿಗದಿತ ಬೆಲೆಗೆ ಮಾರಾಟ ಮಾಡಲು ನಮಗೆ ಸಾಧ್ಯವಾಗುವುದಿಲ್ಲ. ನಮ್ಮನ್ನು ಗುಲಾಮರನ್ನಾಗಿ ಮಾಡಲಾಗುತ್ತಿದೆ. ಅದಕ್ಕಾಗಿಯೇ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ನಾವು ಈಗ ಕೃಷಿ ಮಾಡದೇ ಇರಬಹುದು , ಆದರೆ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು” ಎಂದು ವಿದ್ಯಾ ಹೇಳುತ್ತಾರೆ.

ಸೋನಿಯಾ ಸಣ್ಣ ರೈತರ ಸಮಸ್ಯೆಗಳನ್ನು ಎತ್ತಿ ತೋರಿಸಲು ಬಯಸಿದ್ದರು. ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಹೊಂದಿರುವವರು ತಮ್ಮ ಬೆಳೆಯನ್ನು ಒಂದು ಅಥವಾ ಎರಡು ವರ್ಷಗಳವರೆಗೆ ಸಂಗ್ರಹಿಸಬಹುದು , ಅಥವಾ ಬೆಲೆಗಳು ಉತ್ತಮವಾಗಿದ್ದಾಗ ಮಾರಾಟ ಮಾಡಬಹುದು. ಆದರೆ ಸಣ್ಣ ಭೂಹಿಡುವಳಿದಾರರು ಬೆಳೆಯನ್ನು ಮಾರಾಟ ಮಾಡುವ ಮೊದಲೇ ಮುಂದಿನ ಋತುವಿನ ಖರ್ಚಿನ ಬಗ್ಗೆ ಚಿಂತೆ ಮಾಡಲು ಪ್ರಾರಂಭಿಸುತ್ತಾರೆ ,” ಎಂದು ಸೋನಿಯಾ ಹೇಳುತ್ತಾರೆ." ಈ ಸರ್ಕಾರ ಎಲ್ಲಿಯವರೆಗೆ ಕೃಷಿ ಕಾನೂನುಗಳ ಸಮಸ್ಯೆಯನ್ನು ಇತ್ಯರ್ಥಗೊಳಿಸದೇ ನಮ್ಮನ್ನು ಗಲ್ಲಿಗೇರಿಸುತ್ತಿರುತ್ತದೆ?” ಎಂದು ಪ್ರಶ್ನಿಸುತ್ತಾರೆ.

ಈ ಕೃಷಿ ಕಾನೂನುಗಳನ್ನು ಮೊದಲು ಜೂನ್ 5, 2020 ರಂದು ಸುಗ್ರೀವಾಜ್ಞೆಗಳಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14 ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಲಾಯಿತು ಮತ್ತು ಆ ತಿಂಗಳ 20 ರ ಹೊತ್ತಿಗೆ ಕಾಯಿದೆಗಳನ್ನಾಗಿ ಪರಿಚಯಿಸಲಾಯಿತು. ರೈತರು ವಿರೋಧಿಸುತ್ತಿರುವ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.

Vegetables and fruits, planted by Shanti in small patches of the family lands, are plucked by the women for consumption at home
PHOTO • Sanskriti Talwar
Vegetables and fruits, planted by Shanti in small patches of the family lands, are plucked by the women for consumption at home
PHOTO • Sanskriti Talwar

ಕುಟುಂಬದ ಜಮೀನುಗಳ ಸಣ್ಣ ಭಾಗಗಳಲ್ಲಿ ಶಾಂತಿ ನೆಟ್ಟ ತರಕಾರಿಗಳು ಮತ್ತು ಹಣ್ಣುಗಳನ್ನು ಮಹಿಳೆಯರು ಮನೆ ಬಳಕೆಗಾಗಿ ಕೀಳುತ್ತಿರುವುದು.

ರೈತರು ಈ ಕೃಷಿ ಕಾನೂನುಗಳನ್ನು ತಮ್ಮ ಜೀವನೋಪಾಯಕ್ಕೆ ವಿನಾಶಕಾರಿ ಎಂದು ಪರಿಗಣಿಸಿದ್ದಾರೆ.ಏಕೆಂದರೆ ಇದರಿಂದಾಗಿ ಬೃಹತ್ ಕಾರ್ಪೊರೇಟ್‌ ಕಂಪನಿಗಳು ಈಗ ರೈತರು ಹಾಗೂ ಕೃಷಿ ವಲಯದ ಮೇಲೆ ಇನ್ನೂ ಹೆಚ್ಚಿನ ಪ್ರಾಬಲ್ಯವನ್ನು ಸಾಧಿಸುತ್ತವೆ. ಈ ನೂತನ ಕೃಷಿ ಕಾನೂನುಗಳು ರೈತರಿಗೆ ಇರುವ ಪ್ರಮುಖ ಆಧಾರದ ಮೂಲಗಳನ್ನು ನಾಶಪಡಿಸುತ್ತವೆ . ಇವುಗಳಲ್ಲಿ ಪ್ರಮುಖವಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) , ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ) , ಉತ್ಪನ್ನಗಳನ್ನು ಸರ್ಕಾರವೇ ಖರೀದಿಸುವುದು, ಇಂತಹ ಇನ್ನೂ ಹಲವು ಆಧಾರದ ಮೂಲಗಳು ಇದರಲ್ಲಿ ಸೇರಿವೆ. ಇದರ ಜೊತೆಗೆ ಭಾರತೀಯ ಸಂವಿಧಾನದ 32 ನೇ ವಿಧಿಯನ್ನು ದುರ್ಬಲಗೊಳಿಸಿ , ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ನಿಷ್ಕ್ರಿಯಗೊಳಿಸುವ ನಡೆ ಪ್ರತಿಯೊಬ್ಬ ಭಾರತೀಯನ ಮೇಲೂ ಪರಿಣಾಮ ಬೀರುತ್ತದೆ ಎಂದು ಟೀಕಿಸಲಾಗುತ್ತದೆ.

ಪವನ್ ಅವರ 32 ವರ್ಷದ ಪತ್ನಿ ಸುನೀತಾ , ಗೃಹಿಣಿಯಾಗಿದ್ದು , ಅವರ ಇಬ್ಬರು ಗಂಡು ಮಕ್ಕಳು ಚಿಕ್ಕವರಾಗಿರುವುದರಿಂದ ಇನ್ನೂ ಟಿಕ್ರಿಗೆ ಹೋಗಲು ಸಾಧ್ಯವಾಗಿಲ್ಲ. ಅವರು ಒಮ್ಮೆಯಾದರೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲು ಬಯಸುತ್ತಾರೆ. “ಅಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳು ನನಗೆ ತಿಳಿದಿದೆ. ನಾನು ಸುದ್ದಿ ಮೂಲಕ ಎಲ್ಲವನ್ನೂ ತಿಳಿದುಕೊಂಡಿದ್ದೇನೆ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕವೂ ನೋಡಿದ್ದೇನೆ” ಎಂದು ಅವರು ನನಗೆ ಹೇಳಿದರು. ಜನವರಿ 26 ರಂದು , ರೈತರ ಗಣರಾಜ್ಯೋತ್ಸವದ ಟ್ರಾಕ್ಟರ್ ಮೆರವಣಿಗೆಯಲ್ಲಿ ದೆಹಲಿಯಲ್ಲಿ ನಡೆದ ಘರ್ಷಣೆಯ ವರದಿಗಳನ್ನು ಅವರು ತಮ್ಮ ಫೋನ್‌ನಲ್ಲಿ ವೀಕ್ಷಿಸಿದ್ದಾರೆ.

ಗಣರಾಜ್ಯೋತ್ಸವದ ನಂತರ , ಪ್ರತಿಭಟನಾ ನಿರತ ರೈತರಿಗೆ ಗ್ರಾಮದ ಬೆಂಬಲ ಮುಂದುವರೆಸುವುದು ಹೇಗೆ ಎಂಬುದನ್ನು ಚರ್ಚಿಸಲು ಮತ್ತು ನಿರ್ಧರಿಸಲು ಪೆತ್ವಾರ್ ನಲ್ಲಿ ಸಾರ್ವಜನಿಕ ಸಭೆಯನ್ನು ಕರೆಯಲಾಯಿತು. “ಈಗ ಅವರು ಪ್ರತಿಭಟನಾ ಸ್ಥಳಗಳಲ್ಲಿ ಎಲ್ಲವನ್ನು ಕಿತ್ತು ಹಾಕಿದ್ದಾರೆ. ಇದು ಪ್ರತಿಭಟನೆ ನಡೆಸುತ್ತಿರುವ ಜನರನ್ನು ನಡೆಸಿಕೊಳ್ಳುವ ವಿಧಾನವೇ? ಎಂದು ವಿದ್ಯಾ ನನ್ನನ್ನು ಪ್ರಶ್ನಿಸುತ್ತಾ ಈ ಘಟನೆಗಳ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಹಳ್ಳಿಯ ಅನೇಕ ಮಹಿಳೆಯರು ಪ್ರತಿಭಟನಾ ಸ್ಥಳದಲ್ಲಿ ಉಳಿಯಲು ಬಯಸುತ್ತಾರೆ. ಆದರೆ ನಮಗೆ ಇಲ್ಲಿ ಜವಾಬ್ದಾರಿಗಳಿವೆ. ನಮ್ಮ ಮಕ್ಕಳು ಬೆಳೆಯುತ್ತಿದ್ದಾರೆ. ನಾವು ಅವರಿಗೆ ಊಟವನ್ನು ತಯಾರಿಸಿ ಶಾಲೆಗೆ ಕಳುಹಿಸಬೇಕು ಎಂದು ಸೋನಿಯಾ ಹೇಳಿದರು. ಅವರ ಮೂವರು ಹೆಣ್ಣುಮಕ್ಕಳು ಹದಿಹರೆಯದವರಾಗಿದ್ದಾರೆ ಮತ್ತು ಮಗ ಏಳು ವರ್ಷದವನಿದ್ದಾನೆ.” ಅಗತ್ಯವಿದ್ದರೆ , ನಾವು ನಮ್ಮ ಮಕ್ಕಳನ್ನು ನಮ್ಮೊಂದಿಗೆ ಕರೆದೊಯ್ಯುತ್ತೇವೆ" ಎಂದು ಸುನೀತಾ ಹೇಳುತ್ತಾರೆ.

ರೈತರ ಪ್ರತಿಭಟನೆಯಲ್ಲಿ ಅವರ ಪಾತ್ರ ಮುಖ್ಯ ಎಂದು ಸೋನಿಯಾ ನಂಬಿದ್ದಾರೆ. ಇದು ಒಬ್ಬ ವ್ಯಕ್ತಿಯ ಹೋರಾಟವಷ್ಟೇ ಅಲ್ಲ.ಪ್ರತಿಯೊಬ್ಬರೂ ಅದನ್ನು ಮುಂದಕ್ಕೆ ತಳ್ಳುತ್ತಾ ಬಲಪಡಿಸಬೇಕು”.

ಅನುವಾದ: ಎನ್.ಮಂಜುನಾಥ್

Sanskriti Talwar

Sanskriti Talwar is an independent journalist based in New Delhi, and a PARI MMF Fellow for 2023.

Other stories by Sanskriti Talwar
Translator : N. Manjunath