"ಈ ಕಾಡಿನಲ್ಲಿ ಎಷ್ಟು ತಲೆಮಾರುಗಳು ತಮ್ಮ ಬದುಕನ್ನು ಕಳೆದಿವೆಯೆನ್ನುವುದು ನನಗೆ ತಿಳಿದಿಲ್ಲ" ಎಂದು ಮಾಸ್ತು ಹೇಳುತ್ತಾರೆ (ಅವರು ಈ ಹೆಸರನ್ನು ಮಾತ್ರ ಬಳಸುತ್ತಾರೆ). ವನ್ ಗುಜ್ಜರ್ ಸಮುದಾಯಕ್ಕೆ ಸೇರಿದ ಈ ದನಗಾಹಿ ಸಹರಣ್ಪುರ ಜಿಲ್ಲೆಯ ಬೆಹತ್ ಗ್ರಾಮದ ಶಾಕುಂಭರಿ ಶ್ರೇಣಿಯ ಬಳಿ ವಾಸಿಸುತ್ತಿದ್ದಾರೆ.

ವನ ಗುಜ್ಜರ ಸಮುದಾಯದ ಜನರು ಉತ್ತರ ಭಾರತದ ಬಯಲು ಪ್ರದೇಶಗಳು ಮತ್ತು ಹಿಮಾಲಯ ಪರ್ವತಗಳ ನಡುವೆ ಕಾಲೋಚಿತವಾಗಿ ವಲಸೆ ಹೋಗುವ ಅಲೆಮಾರಿ ಪಶುಪಾಲಕ ಸಮುದಾಯದ ಭಾಗ. ಮಾಸ್ತು ಮತ್ತು ಅವರ ಗುಂಪು ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿರುವ ಶಿವಾಲಿಕ್ ಶ್ರೇಣಿಯ ಮೂಲಕ ಉತ್ತರಕಾಶಿ ಜಿಲ್ಲೆಯ ಬುಗ್ಯಾಲ್ಗಳಿಗೆ ಹೋಗಲು ಪ್ರಯಾಣಿಸುತ್ತಿದ್ದಾರೆ. ಚಳಿಗಾಲ ಸಮೀಪಿಸುತ್ತಿದ್ದಂತೆ ಅವರು ಶಿವಾಲಿಕ್‌ಗೆ ಮರಳಲಿದ್ದಾರೆ.

ಅರಣ್ಯ ಹಕ್ಕುಗಳ ಕಾಯ್ದೆ (ಎಫ್ ಆರ್ ಎ) 2006 ಕಾಡುಗಳಲ್ಲಿ ವಾಸಿಸುವ ಅಥವಾ ತಮ್ಮ ಜೀವನೋಪಾಯಕ್ಕಾಗಿ ಅವುಗಳನ್ನು ಅವಲಂಬಿಸಿರುವ ಜನರ ಹಕ್ಕುಗಳನ್ನು ರಕ್ಷಿಸುತ್ತದೆ. ಈ ಸಮುದಾಯಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳು ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿರುವ ಸಂಪನ್ಮೂಲಗಳ ಹಕ್ಕುಗಳನ್ನು ಇದು ಗುರುತಿಸುತ್ತದೆ. ಇದರ ಹೊರತಾಗಿಯೂ, ವನ್ ಗುಜ್ಜರ್ ಸಮುದಾಯಕ್ಕೆ ಕಾನೂನಿನಿಂದ ಸಿಗಬೇಕಾದ ಹಕ್ಕುಗಳನ್ನು ಪಡೆಯುವುದು ಬಹುತೇಕ ಅಸಾಧ್ಯವಾಗಿದೆ.

ಹವಾಮಾನ ಬಿಕ್ಕಟ್ಟಿನ ಪರಿಣಾಮಗಳು ಕಾಡುಗಳ ಸ್ಥಿತಿಯನ್ನು ಹದಗೆಡಿಸುತ್ತಿವೆ. "ಪರ್ವತಗಳ ಪರಿಸರವು ಬದಲಾಗುತ್ತಿದೆ, ಇದರಿಂದಾಗಿ ತಿನ್ನಲಾಗದ ಸಸ್ಯಗಳು ಬೆಳೆಯುತ್ತಿವೆ, ಮತ್ತು ಹುಲ್ಲುಗಾವಲುಗಳು ಹೆಚ್ಚು ಹೆಚ್ಚು ವಿರಳವಾಗುತ್ತಿವೆ" ಎಂದು ಸೊಸೈಟಿ ಫಾರ್ ಪ್ರಮೋಷನ್ ಆಫ್ ಹಿಮಾಲಯನ್ ಇಂಡಿಜಿನಸ್ ಆಕ್ಟಿವಿಟೀಸ್‌ ಸಂಸ್ಥೆಯ ಸಹಾಯಕ ನಿರ್ದೇಶಕ ಮುನೇಶ್ ಶರ್ಮಾ ಹೇಳುತ್ತಾರೆ.

"ಕಾಡುಗಳು ಇಲ್ಲವಾದರೆ, ನಾವು ಜಾನುವಾರುಗಳನ್ನು ಸಾಕುವುದನ್ನು ಹೇಗೆ ಮುಂದುವರಿಸಲು ಸಾಧ್ಯ?" ಎಂದು ಸಹನ್ ಬೀಬಿ ಕೇಳುತ್ತಾರೆ. ಅವರು ತಮ್ಮ ಮಗ ಗುಲಾಮ್ ನಬಿ ಜೊತೆ ಮಾಸ್ತು ಅವರ ಗುಂಪಿನೊಂದಿಗೆ ಉತ್ತರಾಖಂಡಕ್ಕೆ ಪ್ರಯಾಣಿಸುತ್ತಿದ್ದಾರೆ.

ಈ ಚಿತ್ರವು ಅವರ ಗುಂಪನ್ನು ಮತ್ತು ಪ್ರತಿವರ್ಷ ತಮ್ಮ ಪ್ರಯಾಣವನ್ನು ಮುಂದುವರಿಸುವಾಗ ಅವರು ಎದುರಿಸುತ್ತಿರುವ ಸವಾಲುಗಳನ್ನು ಅನುಸರಿಸುತ್ತದೆ.

ವೀಡಿಯೊ ನೋಡಿ: 'ಕಾಡು ಮತ್ತು ರಸ್ತೆಯ ನಡುವೆ'

ಅನುವಾದ: ಶಂಕರ. ಎನ್. ಕೆಂಚನೂರು

Shashwati Talukdar

Shashwati Talukdar is a filmmaker who makes documentary, fiction and experimental films. Her films have screened at festivals and galleries all over the world.

Other stories by Shashwati Talukdar
Text Editor : Archana Shukla

Archana Shukla is a Content Editor at the People’s Archive of Rural India and works in the publishing team.

Other stories by Archana Shukla
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru