ಸರ್ಕಾರ್‌ ಬಹದ್ದೂರ್ ಅವರಿಗೆ ಅನ್ನದಾತ ಎಂದು ಹೆಸರಿಟ್ಟಿದೆ. ಅವರು ಕೂಡಾ ಅದರೊಳಗೆ ಸಿಲುಕಿಕೊಂಡಿದ್ದಾರೆ. ಸರ್ಕಾರ್‌ ಬೀಜ ಬಿತ್ತಿ ಎಂದಾಗ ಅವರು ಬೀಜ ಬಿತ್ತುತ್ತಿದ್ದರು. ಗೊಬ್ಬರ ಹಾಕಿ ಎಂದಾಗ ಗೊಬ್ಬರ ಹಾಕುತ್ತಿದ್ದರು. ಬೆಳೆ ಬಂದಾಗ ಅದನ್ನು ಸರ್ಕಾರ್‌ ಹೇಳಿದ ಬೆಲೆಗೆ ಮಾರುತ್ತಿದ್ದರು. ನಂಥರ ಸರ್ಕಾರ ತನ್ನ ಮಣ್ಣಿನ ಉತ್ಪಾದಕ ಶಕ್ತಿಯ ಕುರಿತು ಟಾಂ ಟಾಂ ಹೊಡೆಯುತ್ತಿತ್ತು. ಆದರೆ ಅನ್ನದಾತ ತನ್ನ ಹೊಟ್ಟೆ ತುಂಬ್ಸಿಕೊಳ್ಳಲು ಅದೇ ಮಾರುಕಟ್ಟೆಯಿಂದ ಖರೀದಿಸುತ್ತಾನೆ. ಅವನದು ವರ್ಷವಿಡೀ ಅರೆಹೊಟ್ಟೆ. ಅವನಿಗೆ ಇದರ ಹೊರತು ಇನ್ನೊಂದು ಆಯ್ಕೆಯಿಲ್ಲ. ಇದು ಹೀಗೆ ನಡೆಯುತ್ತಿರುವಾಗ ಅವನು ಸಾಲದ ಸುಳಿಯಲ್ಲಿ ಸಿಲುಕಿದ. ಅವನ ಕಾಲ ಕೆಳಗಿನ ನೆಲ ಕುಸಿದು ಗುಹೆಯಾಯಿತು. ಅವನ ಹೊಲ ಅವನ ಪಂಜರವಾಯಿತು. ಅವನು ಈ ಪಂಜರದಿಂದ ಹೊರಬರಬಹುದು ಎಂದುಕೊಂಡಿದ್ದ ಆದರೆ ಅವನ ಆತ್ಮವೂ ಸರ್ಕಾರ್‌ ಬಹದ್ದೂರ್‌ನ ಗುಲಾಮನಾಗಿತ್ತು. ಮತ್ತು ಅವನ ಅಸ್ತಿತ್ವವನ್ನು ಹೊಳೆಯುವ ನಾಣ್ಯಗಳ ಸಮ್ಮಾನ್‌ ನಿಧಿಯಲ್ಲಿ ಹೂಳಲಾಗಿತ್ತು.

ದೇವೇಶ್‌ ಅವರ ದನಿಯಲ್ಲಿ ಕನ್ನಡ ಕವಿತೆಯ ವಾಚನವನ್ನು ಕೇಳಿ

ಪ್ರತಿಷ್ಠಾ ಪಾಂಡ್ಯ ಅವರ ದನಿಯಲ್ಲಿ ಕವಿತೆಯ ಇಂಗ್ಲಿಷ್‌ ಅವತರಣಿಕೆಯನ್ನು ಆಲಿಸಿ


मौत के बाद उन्हें कौन गिनता

ख़ुद के खेत में
ख़ुद का आलू
फिर भी सोचूं
क्या मैं खालूं

कौन सुनेगा
किसे मना लूं
फ़सल के बदले
नकदी पा लूं

अपने मन की
किसे बता लूं
अपना रोना
किधर को गा लूं

ज़मीन पट्टे पर थी
हज़ारों ख़र्च किए थे बीज पर
खाद जब मिला
बुआई का टाइम निकल गया था
लेकिन, खेती की.
खेती की और फ़सल काटी
फ़सल के बदले मिला चेक इतना हल्का था
कि साहूकार ने भरे बाज़ार गिरेबान थाम लिया.

इस गुंडई को रोकने
कोई बुलडोज़र नहीं आया
रपट में पुलिस ने आत्महत्या का कारण
बीवी से झगड़े को बताया.

उसका होना
खेतों में निराई का होना था
उसका होना
बैलों सी जुताई का होना था
उसके होने से
मिट्टी में बीज फूटते थे
कर्जे की रोटी में बच्चे पलते थे
उसका होना
खेतों में मेड़ का होना था
शहराती दुनिया में पेड़ का होना था

पर जब उसकी बारी आई
हैसियत इतनी नहीं थी
कि किसान कही जाती.

जिनकी गिनती न रैलियों में थी
न मुफ़्त की थैलियों में
न होर्डिंगों में
न बिल्डिंगों में
न विज्ञापनों के ठेलों में
न मॉल में लगी सेलों में
न संसद की सीढ़ियों पर
न गाड़ियों में
न काग़ज़ी पेड़ों में
न रुपए के ढेरों में
न आसमान के तारों में
न साहेब के कुमारों में

मौत के बाद
उन्हें कौन गिनता

हे नाथ!
श्लोक पढूं या निर्गुण सुनाऊं
सुंदरकांड का पाठ करूं
तुलसी की चौपाई गाऊं
या फिर मैं हठ योग करूं
गोरख के दर पर खिचड़ी चढ़ाऊं
हिन्दी बोलूं या भोजपुरी
कैसे कहूं
जो आपको सुनाई दे महाराज…

मैं इसी सूबे का किसान हूं
जिसके आप महंत हैं
और मेरे बाप ने फांसी लगाकर जान दे दी है.

ಅವರ ಸಾವಿನ ಲೆಕ್ಕ ಹಾಕುವವರು ಯಾರು

ಹೊಲ ನನ್ನದು
ಬೆಳದೆ ಬೆಳೆ ನನ್ನದು
ಆದರೂ ಇಲ್ಲ
ನನ್ನ ತಟ್ಟೆಯಲ್ಲಿ ಅನ್ನ

ಯಾರು ಕೇಳುತ್ತಾರೆ?
ಯಾರು ನಂಬುತ್ತಾರೆ?
ಬೆಳೆದ ಚಿನ್ನದ ಬೆಳೆಗೆ
ಹಣವನ್ನು ಹೇಗೆ ಪಡೆಯಲಿ?

ಯಾರು ಹಂಚಿಕೊಳ್ಳುತ್ತಾರೆ
ನನ್ನ ದುರಂತ ಕಥೆ
ಎಲ್ಲಿ ಹರಿಸಲಿ
ನನ್ನ ದುಃಖದ ಕಡಲನ್ನು?

ಹೊಲವನ್ನು ಗುತ್ತಿಗೆ ಕೊಡಲಾಯಿತು
ಬೀಜಕ್ಕಾಗಿ ಖರ್ಚಾದವು ಲಕ್ಷಗಳು
ಗೊಬ್ಬರ ಬಂತು
ಆದರೆ ಬಿತ್ತನೆ ಕಾಲ ಮುಗಿದಿತ್ತು
ಆದರೂ ದುಡಿದೆವು, ಉಳುಮೆ ಮಾಡಿದೆವು
ಬಿತ್ತನೆ, ಕೊಯ್ಲು, ಬೆಳೆ ಮಾರಾಟ
ಕೈಯಲ್ಲಿ ಉಳಿದಿದ್ದು ಅಲ್ಪ
ಮಾರುಕಟ್ಟೆಯೆನ್ನುವುದು
ಲೇವಾದೇವಿದಾರರ ತಲ್ಪ.

ಯಾರೂ ಬರಲಿಲ್ಲ
ಈ ದುಷ್ಟರ ಮೇಲೆ ಬುಲ್ಡೋಜರ್‌ ಹತ್ತಿಸಲು
ʼಹೆಂಡತಿಯೊಂದಿಗಿನ ಜಗಳʼ
ಆತ್ಮಹತ್ಯೆಗೆ ಕಾರಣವೆಂದು ಬರೆದರು ಪೊಲೀಸರು.

ಅವಳು
ಹೊಲದಲ್ಲಿ ಕಳೆ ಕಿತ್ತವಳು
ಮಣ್ಣು ಹದಗೊಳಿಸಿದವಳು
ಬೀಜಗಳಿಗೆ ಜೀವ ತುಂಬಿದವಳು
ನಾವು ಸಾಲದಲ್ಲಿರುವಾಗಲೂ
ಮಕ್ಕಳಿಗೆ ಹೊಟ್ಟೆ ತುಂಬಿಸಿದವಳು
ಅವಳು ಹೊಲದ ನಡುವೆ ಬೆಟ್ಟದಂತಿದ್ದವಳು
ಅವಳು ನಳನಳಿಸುವ ಮರ, ಹಸಿರು
ನಗರ ಮಧ್ಯದಲ್ಲಿ

ಆದರೆ ಅವಳನ್ನು
ರೈತಳೆಂದು ಕರೆಯಲು
ಯಾರೂ ಸಿದ್ಧರಿಲ್ಲ

ಅವರ ಕುರಿತು ಯಾರೂ ತಲೆಕೆಡಿಸಿಕೊಂಡಿಲ್ಲ
ಮೆರವಣಿಗೆಗಳಲ್ಲಿ
ಉಚಿತ ಪಡಿತರ ಚೀಲಗಳಲ್ಲಿ
ಜಾಹೀರಾತು ಫಲಕಗಳಲ್ಲಿ
ಅಥವಾ ಜಾಹೀರಾತು ಮಳಿಗೆಗಳಲ್ಲಿ
ದೊಡ್ಡ ಮಾಲ್‌ಗಳ ಮಾರಾಟದಲ್ಲಿ
ಸಂಸತ್‌ ಭವನದ ಮೆಟ್ಟಿಲ ಮೇಲೆ
ಕಾರುಗಳಲ್ಲಿ
ಕಾಗದ ಮರಗಳಲ್ಲಿ
ರೂಪಾಯಿಯ ನೋಟುಗಳಲ್ಲಿ
ಅಥವಾ ಆಕಾಶದ ನಕ್ಷತ್ರಗಳಲ್ಲಿ
ಸಾಹೇಬರ ಗಂಡು ಮಕ್ಕಳಲ್ಲಿ
ಅವರ ಕುರಿತು ತಲೆ ಕೆಡಿಸಿಕೊಂಡವರಿಲ್ಲ

ಅವರೀಗ ಸತ್ತಿದ್ದಾರೆ
ಇನ್ಯಾರು ಲೆಕ್ಕ ಹಾಕುತ್ತಾರೆ ಅವರನ್ನು?

ಹೇ ನಾಥ! ನನ್ನ ಪ್ರಭುವೇ!
ನಾನು ಮಂತ್ರಗಳ ಹೇಳಲೇ
ಅಥವಾ ನಿರ್ಗುಣನ ಪೂಜಿಸಲೇ?
ಸುಂದರಕಾಂಡವನ್ನು ಓದಲೇ?
ಅಥವಾ ತುಳಸಿ ದಾಸರ ಚೌಪಾಯಿ ಹಾಡಲೇ?
ಹಠ ಯೋಗ ಮಾಡಲೇ?
ಗೋರಖನ ಪಾದಕ್ಕೆ ಖಿಚಡಿ ಅರ್ಪಿಸಲೇ?
ಹಿಂದಿಯಲ್ಲಿ ಮಾತಾಡಲೇ, ಭೋಜಪುರಿಯಲ್ಲಿ ಮಾತಾಡಲೇ?
ನಾನು ಹೇಗೆ ಹೇಳಲಿ
ಹೇಗೆ ಹೇಳಿದರೆ ನನ್ನ ನೋವು ನಿಮ್ಮ ಅರಿವಿಗೆ ಬರುವುದು ಮಹಾರಾಜ?

ನೀವು ಮಹಾಂತರಾಗಿರುವ ಪ್ರಾಂತ್ಯದ ರೈತ ನಾನು
ಅದೇ ಪ್ರಾಂತ್ಯದಲ್ಲಿ ನನ್ನ ತಂದೆ ಆತ್ಮಹತ್ಯೆಗೈದರು.


ನೀವು ಆತ್ಮಹತ್ಯೆಯ ಯೋಚನೆಯಲ್ಲಿದ್ದರೆ ಅಥವಾ ಅಂತಹ ಸಂಕಷ್ಟದಲ್ಲಿರುವವರ ಕುರಿತು ನಿಮಗೆ ತಿಳಿದಿದ್ದರೆ ದಯವಿಟ್ಟು ದಯವಿಟ್ಟು ರಾಷ್ಟ್ರೀಯ ಸಹಾಯವಾಣಿ ಯಾದ ಕಿರಣ್ ‌ ಅನ್ನು 1800-599-0019 (24/7 ಟೋಲ್ ಫ್ರೀ ) ಸಂಖ್ಯೆಯ ಮೂಲಕ ತಲುಪಿ ಅಥವಾ ನಿಮ್ಮ ಹತ್ತಿರದ ಯಾವುದಾದರೂ ಸಹಾಯವಾಣಿಗೆ ಕರೆ ಮಾಡಿ. ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಸೇವೆಗಳ ಬಗ್ಗೆ ಮಾಹಿತಿ ಪಡೆಯಲು, ದಯವಿಟ್ಟು SPIF ನ ಮಾನಸಿಕ ಆರೋಗ್ಯ ಡೈರೆಕ್ಟರಿಗೆ ಭೇಟಿ ನೀಡಿ.

ಅನುವಾದ: ಶಂಕರ. ಎನ್. ಕೆಂಚನೂರು

Poem and Text : Devesh

Devesh is a poet, journalist, filmmaker and translator. He is the Translations Editor, Hindi, at the People’s Archive of Rural India.

Other stories by Devesh
Editor : Pratishtha Pandya

Pratishtha Pandya is a Senior Editor at PARI where she leads PARI's creative writing section. She is also a member of the PARIBhasha team and translates and edits stories in Gujarati. Pratishtha is a published poet working in Gujarati and English.

Other stories by Pratishtha Pandya
Illustration : Shreya Katyayini

Shreya Katyayini is a filmmaker and Senior Video Editor at the People's Archive of Rural India. She also illustrates for PARI.

Other stories by Shreya Katyayini
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru