ನೈನ್ ರಾಮ್ ಬಜೆಲಾ ಅವರು ಮುನ್ಸಿಯಾರಿ ತೆಹಸಿಲ್‌ನ ಜೈತಿ ಗ್ರಾಮದಲ್ಲಿ ತಮ್ಮ ಮನೆಯ ಛಾವಣಿಯ ಮೇಲೆ ಕುಳಿತು, ತಂಡಿ ಚಳಿಗಾಲದ ಬೆಳಿಗ್ಗೆ ಬುಟ್ಟಿಗಳನ್ನು ನೇಯುತ್ತಿದ್ದಾರೆ. ಅವರ ಹಿಂದೆ ಬಟ್ಟೆಯ ಸಾಲು, ಮೇಲೆ ತೆಳುವಾದ ಮೋಡಗಳು ಮತ್ತು ದೂರದಲ್ಲಿ ಪಂಚಚೂಲಿ ಪರ್ವತಗಳು. ಅವರು ಹಿಮಾಲಯನ್ ಬಿದಿರಿನ ರಿಂಗಲ್ ಅಥವಾ ಪಹಾಡಿ ರಿಂಗಲ್ ಅನ್ನು ಬಾಗಿದ ಚಾಕುವಿನಿಂದ ತೆಳುವಾದ ಪಟ್ಟಿಗಳಾಗಿ ಕತ್ತರಿಸುತ್ತಾರೆ, ಅದನ್ನು ಅವರು ತನ್ನ ಪಹಾಡಿ ಭಾಷೆಯಲ್ಲಿ 'ಬರಾಂಶ್' ಎಂದು ಕರೆಯುತ್ತಾರೇ. ಈ ಮೈನಸ್ ಡಿಗ್ರಿ ತಾಪಮಾನದಲ್ಲಿ ಚರ್ಮ ಚುಚ್ಚುವ ತಂಡಿ ಗಾಳಿಯಲ್ಲಿಯೂ ಸಹ ಯಾವುದೇ ಕೈಗವಸುಗಳು ಅಥವಾ ಸಾಕ್ಸ್‌ಗಳನ್ನು ಧರಿಸಿಲ್ಲ.  ನೈನ್ ರಾಮ್ ಇದ್ಯಾವುದ್ದನ್ನು ಲೆಕ್ಕಿಸದೆ ಶ್ರಮಿಸುತ್ತಿದ್ದಾರೆ.

“ನಾನು ನಿನ್ನೆ ಈ ರಿಂಗಲ್ ಅನ್ನು ಕಾಡಿನಿಂದ ಸಂಗ್ರಹಿಸಿದೆ. ಎರಡು ಬುಟ್ಟಿಗಳನ್ನು ಮಾಡಲು ಈ ಬಿದಿರು ಸಾಕು” ಎಂದು ಅವರು ನನ್ನತ್ತ ಮತ್ತು ಕ್ಯಾಮೆರಾ ಕಡೆ ನೋಡದೆ ಹೇಳಿದರು. ನೈನ್ ರಾಮ್ ಅವರು 12 ನೇ ವಯಸ್ಸಿನಿಂದ ಬಿದಿರಿನ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ; ಅವರು ತನ್ನ ತಂದೆಯಿಂದ ಈ ಕೌಶಲ್ಯವನ್ನು ಕಲಿತರು, ಆದಾಯವಿಲ್ಲದ ಕಾರಣದಿಂದಾಗಿ ತನ್ನ ಮಗನಿಗೆ ಈ ಕೆಲಸವನ್ನು ಮಾಡಲು ಅನುಮತಿ ನೀಡಲು ಹಿಂಜರಿಯುತ್ತಾರೆ. ಅವರು ಹೇಳುತ್ತಾರೆ, "ನಾನು ಬಾಲ್ಯದಲ್ಲಿ ಜನರ ಭೂಮಿಯಿಂದ ರಿಂಗಲ್ ಕದ್ದು ಬುಟ್ಟಿಗಳು, ಹೂವಿನ ಹೂದಾನಿಗಳು, ಡಸ್ಟ್‌ಬಿನ್‌ಗಳು, ಪೆನ್ ಸ್ಟ್ಯಾಂಡ್‌ಗಳು ಮತ್ತು ಬಿಸಿ ಚಪಾತಿ ಬಾಕ್ಸ್‌ಗಳನ್ನು ತಯಾರಿಸುತ್ತಿದ್ದೆ."

ಪ್ರಸ್ತುತ 54 ವರ್ಷ ಪ್ರಾಯದ ನೈನ್‌ ರಾಮ್‌ ಕೇವಲ ಕೈ ಮತ್ತು ಚಾಕು ಬಳಸಿ ರಿಂಗಲ್‌ ಮೂಲಕ ಏನನ್ನೂ ಬೇಕಿದ್ದರೂ ಸೃಷ್ಟಿಸಬಲ್ಲರು. “ಇದು ನನ್ನ ಪಾಲಿಗೆ ಜೇಡಿ ಮಣ್ಣಿದ್ದಂತೆ. ಇದನ್ನು ನನಗೆ ಬೇಕಾದ ಆಕಾರಕ್ಕೆ ತಿರುಗಿಸಬಲ್ಲೆ” ಎಂದು ಅವರು ತೆಳು ಮತ್ತು ದಪ್ಪ ಪಟ್ಟಿಗಳನ್ನು ನೇಯುತ್ತಾ ಹೇಳುತ್ತಾರೆ. “ಇದೊಂದು ಹೊಟ್ಟೆಪಾಡಿನ ಕೆಲಸವಲ್ಲ. ಇದೊಂದು ಕೌಶಲ. ಇದಕ್ಕೆ ಇತರ ಕಲೆಗಳೆಂತೆಯೇ ತಾಳ್ಮೆ ಬೇಕು, ತರಬೇತಿ ಬೇಕು.”

A man sitting on the terrace of his house and weaving bamboo baskets
PHOTO • Arpita Chakrabarty

ನೈನ್ ರಾಮ್ ತನ್ನ ಬುಟ್ಟಿಗೆ ಬಲವಾದ ಅಡಿಪಾಯವನ್ನು ಮಾಡಲು ಬಿದಿರಿನ ತೆಳುವಾದ ಪಟ್ಟಿಗಳನ್ನು ಹೆಣೆದುಕೊಳ್ಳುತಾರೆ, ನಂತರ ಶ್ರಮವಹಿಸಿ ಅದಕ್ಕೆ ಬೇಕಾದ ಆಕಾರ ನೀಡುತ್ತಾರೆ

ರಿಂಗಲ್ ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ ಸುಮಾರು 1,000-2,000 ಮೀಟರ್ ಎತ್ತರದಲ್ಲಿ ಬೆಳೆಯುತ್ತದೆ. ಮುನ್ಸಿಯಾರಿ ಪಟ್ಟಣವು 2,200 ಮೀಟರ್ ಎತ್ತರದಲ್ಲಿದೆ ಮತ್ತು ಜೈತಿ ಗ್ರಾಮವು ಸುಮಾರು ಆರು ಕಿಲೋಮೀಟರ್ ದೂರದಲ್ಲಿದೆ - ಆದ್ದರಿಂದ ಬಿದಿರನ್ನು ಸಂಗ್ರಹಿಸಲು ರಿಂಗಲ್ ಲಭ್ಯತೆಯ ಆಧಾರದ ಮೇಲೆ ಗುಡ್ಡ ಹತ್ತುವುದು ಅಥವಾ ಇಳಿಜಾರಿನ ಅಗತ್ಯವಿರುತ್ತದೆ. ಉತ್ತರಾಖಂಡದ ಪಿಥೋರಘಾರ್ಹ್ ಜಿಲ್ಲೆಯ ಈ ಪರ್ವತಗಳಲ್ಲಿ ಜೀವನವು ಕಠಿಣವಾಗಿದೆ ಮತ್ತು ಜನರು ಸೀಮಿತ ಜೀವನೋಪಾಯದ ಆಯ್ಕೆಗಳನ್ನು ಹೊಂದಿದ್ದಾರೆ. ಬಿದಿರಿನ ಉತ್ಪನ್ನಗಳನ್ನು ತಯಾರಿಸುವುದು ಇಲ್ಲಿನ ಬಜೆಲಾ ಜಾತಿಯ ಪುರುಷರ ಸಾಂಪ್ರದಾಯಿಕ ಉದ್ಯೋಗವಾಗಿದೆ - ಆದರೆ ಜೈತಿಯ 580 ಜನರಲ್ಲಿ ಉಳಿದಿರುವ ಕೊನೆಯ ಬಿದಿರು ನೇಕಾರ ನೈನ್ ರಾಮ್.

ಮುನ್ಸಿಯಾರಿಯ ದೂರದ ಸ್ಥಳಗಳ ಜನರು ನೈನ್ ರಾಮ್ ಅವರನ್ನು ತಮ್ಮ ಮನೆಗಳಿಗೆ ಆಹ್ವಾನಿಸುತ್ತಾರೆ ಮತ್ತು ಅವರು ಅಲ್ಲಿ ಹಗಲು, ಕೆಲವೊಮ್ಮೆ ರಾತ್ರಿಗಳನ್ನು ಕಳೆಯುತ್ತಾರೆ. ಬೆಟ್ಟಗಳಲ್ಲಿ ಭಾರೀ ಹೊರೆಗಳನ್ನು ಸ್ಥಳದಿಂದ ಸ್ಥಳಕ್ಕೆ ಕೊಂಡೊಯ್ಯುವುದು ಕಷ್ಟ, ಆದ್ದರಿಂದ ಅವರು ಅವರ ಮನೆಗಳ ಹತ್ತಿರದಿಂದ ಬಿದಿರನ್ನು ಸಂಗ್ರಹಿಸುತ್ತಾರೆ ಮತ್ತು ಅಲ್ಲಿಯೇ ನೇಯ್ಗೆಯ ಕೆಲಸ ಮಾಡುತ್ತಾರೆ. ಪ್ರತಿಯಾಗಿ, ಅವರಿಗೆ ಕೆಲಸ ಮಾಡಲು ಸ್ಥಳ ಮತ್ತು ತಿನ್ನಲು ಆಹಾರ ಸಿಗುತ್ತದೆ. ಅವರಿಗೆ ದಿನಕ್ಕೆ Rs.300 ಸಂಬಳ ಸಿಗುತ್ತತೆ, ಮತ್ತು ಅವರು ಆ ಸಮಯದಲ್ಲಿ ಒಂದು ಬುಟ್ಟಿ ಅಥವಾ ನಾಲ್ಕು ಮಾಡಿದರು ಆದಾಯವು ಬದಲಾಗದು. ಅವರಿಗೆ ತಿಂಗಳಿಗೆ ಸುಮಾರು 10 ದಿನಗಳ ಕೆಲಸ ಸಿಗುತ್ತದೆ, ಬಹಳ ಅಪರೂಪವಾಗಿ, 15 ದಿನ.

ಅದೃಷ್ಟವಶಾತ್, ಮುನ್ಸಿಯಾರಿ ಬ್ಲಾಕ್‌ನಲ್ಲಿ ಅವರ ಉತ್ಪನ್ನಗಳಿಗೆ ಸ್ವಲ್ಪ ಬೇಡಿಕೆ ಇದೆ, ವಿಶೇಷವಾಗಿ ಮಹಿಳೆಯರು ಸೌದೆ ಮತ್ತು ಮೇವನ್ನು ಸಾಗಿಸಲು ಬಳಸುವ ಬಾಳಿಕೆ ಬರುವ ಮತ್ತು ಹಗುರವಾದ ಬುಟ್ಟಿಗಳಿಗೆ. ಕೆಲವು, ಹಿಡಿಕೆಗಳು ಮತ್ತು ಮುಚ್ಚಳಗಳೊಂದಿಗೆ, ಆಹಾರವನ್ನು ಸಾಗಿಸಲು ಸಹ ಬಳಸಲಾಗುತ್ತದೆ, ವಿಶೇಷವಾಗಿ ಯುವತಿಯರು ತಮ್ಮ ವೈವಾಹಿಕ ಮನೆಗಳಿಗೆ ತೆರಳುವಾಗ.

A man is sitting on the floor inside his house and weaving bamboo strips into a basket
PHOTO • Arpita Chakrabarty
The man has finished weaving his basket
PHOTO • Arpita Chakrabarty
Different types of woven bamboo baskets
PHOTO • Arpita Chakrabarty

ನೈನ್ ರಾಮ್ ಅವರು 12ನೇ ವಯಸ್ಸಿನಿಂದ ಬುಟ್ಟಿಗಳನ್ನು ನೇಯುತ್ತಿದ್ದಾರೆ. 'ಇದು ಕೂಲಿ ಕೆಲಸವಲ್ಲ - ಇದು ಕೌಶಲ್ಯ. ತರಬೇತಿ ಬೇಕು ಮತ್ತು ಎಲ್ಲ ಕಲೆಗಳಂತೆ ತಾಳ್ಮೆಯೂ ಬೇಕು' ಎನ್ನುತ್ತಾರೆ ಅವರು

ನೈನ್ ರಾಮ್ ರಿಂಗಲ್‌ಗಾಗಿ ಕಾಡಿಗೆ ಹೋದ ದಿನಗಳಲ್ಲಿ ಅವರಿಗೆ ಹಣ ಸಿಗುವುದಿಲ್ಲ. "ಜನರು ನನಗೆ ಕರೆ ಮಾಡಿ ಗೃಹೋಪಯೋಗಿ ವಸ್ತುಗಳನ್ನು ಮಾಡಲು ಕೇಳಿದಾಗ ಮಾತ್ರ ನಾನು ಹಣವನ್ನು ಕೇಳುತ್ತೇನೆ" ಎಂದು ಅವರು ಹೇಳುತ್ತಾರೆ. ರಾಜ್ಯದಿಂದ ಅನುಮತಿಯಿಲ್ಲದೆ ಅರಣ್ಯ ಬಿದಿರನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ (ಅರಣ್ಯ ಸಂರಕ್ಷಣಾ ಕಾಯಿದೆ 1980 ರ ಅಡಿಯಲ್ಲಿ), ನೈನ್ ರಾಮ್ ಅವರು ಸ್ಥಳೀಯ ಜನರು ಮತ್ತು ರಾಜ್ಯವು ಜಂಟಿಯಾಗಿ ನಿಯಂತ್ರಿಸುವ ವನ್ ಪಂಚಾಯತ್ ಪ್ರದೇಶಗಳು ಅಥವಾ ಕಮ್ಯೂನಿಟಿ ಅರಣ್ಯಗಳಿಗೆ ಭೇಟಿ ನೀಡುವ ಕಾರಣ ರಿಂಗಲ್‌ ತರಲು ಅನುಮತಿಯ ಅಗತ್ಯವಿಲ್ಲ.

ಜೈತಿ ಗ್ರಾಮದ ಛಾವಣಿಯ ಮೇಲೆ ಕುಳಿತು, ನೈನ್ ರಾಮ್ ವಿರಮಿಸುತ್ತಾರೆ, ತನ್ನ ಕೋಟ್ ಜೇಬಿನಿಂದ ಬೀಡಿಯನ್ನು ಹೊರತೆಗೆದು ತನ್ನ ಮಫ್ಲರ್ ಮತ್ತು ಬೂಟುಗಳನ್ನು ತೆಗೆಯುತ್ತಾರೆ. ಬೀಡಿ ಉರಿಸುವಾಗ, ಅತಿಯಾಗಿ ವಿರಾಮ ವಿಶ್ರಾಂತಿ ವೇಳೆ ತನಗೆ ಇಷ್ಟವಿಲ್ಲ ಎನ್ನುತ್ತಾರೆ. "ನನ್ನನ್ನು ಕೆಲಸಕ್ಕೆ ಕರೆಯದಿದ್ದರೆ, ನಾನು ಸ್ವಲ್ಪ ರಿಂಗಲ್ ಅನ್ನು [ಕಾಡಿನಿಂದ] ತರುತ್ತೇನೆ ಮತ್ತು ಮನೆಯಲ್ಲಿ ಉತ್ಪನ್ನಗಳನ್ನು ತಯಾರಿಸುತ್ತೇನೆ" ಎಂದು ಅವರು ಹೇಳುತ್ತಾರೆ. "ಕೆಲವೊಮ್ಮೆ, ಅವುಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿನ ಟೂರಿಸ್ಟ್ಸ್ಅಂಗಡಿಗೆ ನಾನು ಅವುಗಳನ್ನು ಮಾರುತ್ತೇನೆ. ನಾನು ಒಂದು ಬುಟ್ಟಿಗೆ ಸುಮಾರು 150 ರೂಪಾಯಿ ಮಾಡುತ್ತೇನೆ ಆದರೆ ಅಂಗಡಿಯವನು ಅದನ್ನು 200-250ಕ್ಕೆ ಮಾರುತ್ತಾನೆ. ಪ್ರಕ್ರಿಯೆಯಲ್ಲಿ ನಾನು ಹಣವನ್ನು ಕಳೆದುಕೊಳ್ಳುತ್ತೇನೆ, ಆದರೆ ನನಗೆ ಬೇರೆ ಏನೂ ತಿಳಿದಿಲ್ಲ. ನಾನು ಹೆಚ್ಚು ಅಧ್ಯಯನವು ಮಾಡಿಲ್ಲ. ನನ್ನ ಹೆಸರು ಸಹಿ ಹಾಕುವುದು ಮಾತ್ರ ನನಗೆ ಗೊತ್ತು.”

A man sitting on top of the terrace of his house amidst bamboo strips
PHOTO • Arpita Chakrabarty
A man standing inside a house
PHOTO • Arpita Chakrabarty
A woman standing outside her house holding two woven bamboo vases filled with plastic flowers
PHOTO • Arpita Chakrabarty

ನೈನ್ ರಾಮ್ (ಎಡ) ಜೈತಿ ಗ್ರಾಮದ ತನ್ನ ಮನೆಯ ಚಾವಣಿ ಮೇಲೆ ಕುಳಿತು ಬುಟ್ಟಿಗಳನ್ನು ನೇಯುತ್ತಾರೆ. ಅವರ ಮಗ ಮನೋಜ್ (ಮಧ್ಯದಲ್ಲಿ), ತನ್ನ ತಂದೆಯ ವೃತ್ತಿಯಿಂದ ದೂರವಿದ್ದು, ಭೋಜನಾಲಯ ಅಥವಾ ಸಣ್ಣ ಹೋಟೆಲ್ ನಡೆಸುತ್ತಿದ್ದಾರೆ. ದೇವಕಿ ದೇವಿ (ಬಲ) ತನ್ನ ಪತಿ ನೇಯ್ದ ಎರಡು ಹೂವಿನ ಹೂದಾನಿಗಳೊಂದಿಗೆ ನಿಂತಿರುವುದು; ಅವರು ತನ್ನ ಗಂಡನ ಕ್ರಿಯಾಶೀಲತೆಯ ಬಗ್ಗೆ ಹೆಮ್ಮೆಪಡುತ್ತಾರೆ

ನೈನ್ ರಾಮ್ ಸ್ಥಳೀಯ ಸಂಸ್ಥೆಯಲ್ಲಿ ಮಹಿಳೆಯರು ಸೇರಿದಂತೆ ಇತರರಿಗೆ ರಿಂಗಲ್ ಉತ್ಪನ್ನಗಳನ್ನು ತಯಾರಿಸಲು ತರಬೇತಿ ನೀಡಿದ್ದರೂ, ರಿಂಗಲ್ ಬಿದಿರಿನ ಉತ್ಪನ್ನಗಳನ್ನು ಉತ್ತೇಜಿಸಲು ಸರ್ಕಾರವು ಹೆಚ್ಚಿನದನ ಕೆಲಸ ಮಾಡಿಲ್ಲ. ಸಭ್ಯವಾದ ಲಾಭವನ್ನು ಖಚಿತಪಡಿಸಿಕೊಳ್ಳಲು ಇದು ಕನಿಷ್ಠ ಮಾರಾಟ ಬೆಲೆಯನ್ನು ಸಹ ನಿಗದಿಪಡಿಸಿಲ್ಲ ಮತ್ತು ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ರಚಿಸಲು ರಾಜ್ಯವು ಯಾವುದೇ ಸಹಾಯ ಮಾಡಿಲ್ಲ. ಇದರಿಂದ ನೈನ್ ರಾಮ್ ಅವರ ಮಕ್ಕಳನ್ನುತನ್ನ ಕಲೆಯ ಕಲಿಕೆಯಿಂದ ದೂರಹುಳಿಯುವಂತೆ ಮಾಡಿದೆ. ಅವರು ಈಗ ಅವರ ಕುಟುಂಬದಲ್ಲಿ ಕೊನೆಯ ರಿಂಗಲ್ ನೇಕಾರರಾಗಿದ್ದಾರೆ. ಅವರ ಮಕ್ಕಳಾದ ಮನೋಜ್ ಮತ್ತು ಪುರನ್ ರಾಮ್ ಅವರು ಮುನ್ಸಿಯಾರಿ ತಹಸಿಲ್‌ನ ಕನ್ಸ್ಟ್ರಕ್ಷನ್ ಸೈಟ್ ಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.

ಜೈತಿ ಬಳಿ ಢಾಬಾವನ್ನು ನಡೆಸುತ್ತಿರುವ ಮನೋಜ್, "ಈ ಉತ್ಪನ್ನಗಳ ಮಹತ್ವವೇನು? ಮುನ್ಸಿಯಾರಿಯನ್ನು ಮೀರಿ ಯಾರೂ ಅವುಗಳನ್ನು ಖರೀದಿಸುವುದಿಲ್ಲ. ಸಾಂದರ್ಭಿಕವಾಗಿ, ಪ್ರವಾಸಿಗರು ಅವುಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ನೀವು ಜೀವನೋಪಾಯಕ್ಕಾಗಿ ಅದನ್ನು ಅವಲಂಬಿಸಲು ಸಾಧ್ಯವಿಲ್ಲ. ಅವು ನಮಗೆ ಸ್ಥಿರ ಆದಾಯವನ್ನು ನೀಡುವುದಿಲ್ಲ. ಇದಲ್ಲದೆ, ಈ ಕೌಶಲ್ಯವನ್ನು ಕಲಿಯಲು ನನಗೆ ತುಂಬಾ ವಯಸ್ಸಾಗಿದೆ ". ಅವರಿಗೆ 24 ವರ್ಷ. ಕುಟುಂಬದ ಸಣ್ಣ ಜಮೀನಿನಲ್ಲಿ ಆಲೂಗಡ್ಡೆ ಬೆಳೆಯುವ ನೈನ್ ರಾಮ್ ಅವರ ಪತ್ನಿ ದೇವ್ಕಿ ದೇವಿ (45), ತನ್ನ ಪತಿ ತಯಾರಿಸುವ ಉತ್ಪನ್ನಗಳು ಮಾರಾಟವಾಗುತ್ತವೆ ಎಂದು ಹೇಳುತ್ತಾರೆ. ಅವರು ಹೆಮ್ಮೆಯಿಂದ ಕೆಲವು ಬುಟ್ಟಿಗಳು ಮತ್ತು ಹೂದಾನಿಗಳನ್ನು ಪ್ರದರ್ಶಿಸಿದ್ದಾರೆ.

ಮಧ್ಯಾಹ್ನದ ಹೊತ್ತಿಗೆ ಮೂಡ ಕವಿದ ವಾತಾವರಣ, ನೈನ್ ರಾಮ್ ಜೈತಿ ಗ್ರಾಮದ ತನ್ನ ಮನೆಯ ಮೇಲ್ಛಾವಣಿಯ ಮೇಲೆ ನೇಯ್ಗೆಯನ್ನು ಮುಂದುವರಿಸುತ್ತಿದ್ದರು . "ಮಳೆಯಾಗಬಹುದು," ಅವರು ಹೇಳುತ್ತಾ ತನ್ನ ದಿನದ ಮೊದಲ ರಿಂಗಲ್ ಬುಟ್ಟಿಯನ್ನು ಮುಗಿಸಿ, ತನ್ನ ಬೂಟುಗಳು ಮತ್ತು ಉಣ್ಣೆಯ ಕ್ಯಾಪ್ ಅನ್ನು ಹಾಕಿಕೊಂಡು ಮನೆಯೊಳಗೆ ನಡೆದರು. ದಿನದ ಅಂತ್ಯದ ವೇಳೆಗೆ, ಈ ಕಲಾವಿದನ ಕೌಶಲ್ಯಪೂರ್ಣ ಕೈಗಳಿಂದ ಮತ್ತೊಂದು ಬುಟ್ಟಿ, ಬಹುಶಃ ಮೂರನೇಯ ಬುಟ್ಟಿಯನ್ನು ನೇಯಲಾಗಿತ್ತು.

ಅನುವಾದಕರು: ಏಕತಾ ಹರ್ತಿ ಹಿರಿಯೂರು

Arpita Chakrabarty

Arpita Chakrabarty is a Kumaon-based freelance journalist and a 2017 PARI fellow.

Other stories by Arpita Chakrabarty
Translator : Ekatha Harthi Hiriyur

Ekatha Harthi H Y is from Hiriyur, Karnataka. Currently she is studying at the College of Social Work Nirmala Niketan, Mumbai. Having worked with MNC's and NGO's for two and a half years, she is now keen to work with women, Dalits and unorganised workers.

Other stories by Ekatha Harthi Hiriyur