ಪ್ರತಿದಿನ ಬೆಳಿಗ್ಗೆ ಶೇಖ್ ಕುಟುಂಬದ ಎಲ್ಲ ಸದಸ್ಯರೂ ಕೆಲಸಕ್ಕೆ‌ ಹೊರಡುತ್ತಾರೆ. ಫಾತಿಮಾ ಬೆಳಗ್ಗೆ 9 ಗಂಟೆಗೆ ಮಧ್ಯ ಶ್ರೀನಗರದ ಬಟಮಾಲೂ ಪ್ರದೇಶದ ಕೊಳೆಗೇರಿ ಕಾಲೋನಿಯಲ್ಲಿರುವ ತನ್ನ ಮನೆಯಿಂದ ಹೊರಟು, ನಗರದಲ್ಲಿ ಬಳಸಿ ಬಿಸಾಡಲಾಗಿರುವ ಬಾಟಲಿಗಳು ಮತ್ತು ರಟ್ಟಿನ ವಸ್ತುಗಳನ್ನು ಸುಮಾರು ಸಂಜೆ 5 ಗಂಟೆಯ ತನಕ ಸಂಗ್ರಹಿಸುತ್ತಾರೆ. ಅವರ ಪತಿ ಮೊಹಮ್ಮದ್ ಕುರ್ಬಾನ್ ಶೇಖ್ ಕೆಲವೊಮ್ಮೆ ಇನ್ನಷ್ಟು ಮುಂದಕ್ಕೂ ಹೋಗುತ್ತಾರೆ, ಕಸವನ್ನು ಎತ್ತಿಕೊಂಡು ನಗರದ ಗಡಿಯನ್ನು ದಾಟಿ 30 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಹೋಗುತ್ತಾರೆ. ಫಾತಿಮಾರಂತೆಯೇ, ಅವರು ಕೂಡಾ ಮೂರು ಚಕ್ರದ ಗಾಡಿಯನ್ನು ಬಳಸುತ್ತಾರೆ – ಅದರ ಹಿಂಭಾಗದಲ್ಲಿ ಟೆಂಪೋಗಳಲ್ಲಿ ಇರುವಂತೆ ತಾತ್ಕಾಲಿಕ ಕಂಟೇನರ್‌ನಂತೆ, ಅವನ ಮಕ್ಕಳು ಮತ್ತು ಹೆಣ್ಣುಮಕ್ಕಳು 17ರಿಂದ 21 ವರ್ಷ ವಯಸ್ಸಿನವರು ಶ್ರೀನಗರದಲ್ಲಿ ಚಿಂದಿ ಆಯುವವರಾಗಿ ಕೆಲಸ ಮಾಡುತ್ತಾರೆ.

ಶ್ರೀನಗರದ ಮನೆಗಳು, ಹೋಟೆಲ್‌ಗಳು, ನಿರ್ಮಾಣ ಸ್ಥಳಗಳು, ತರಕಾರಿ ಮಾರುಕಟ್ಟೆಗಳು ಮತ್ತು ಇತರ ಅನೇಕ ಸ್ಥಳಗಳಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಒಟ್ಟು 450-500 ಟನ್‌ಗಳಷ್ಟು ತ್ಯಾಜ್ಯದ ಒಂದು ಸಣ್ಣ ಭಾಗವನ್ನು ಐದು ಜನರು ಒಟ್ಟಾಗಿ ಸ್ವಚ್ಛಗೊಳಿಸುತ್ತಾರೆ. ಈ ಅಂಕಿ ಅಂಶವನ್ನು ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್ ನೀಡಿದೆ.

ಶೇಖ್ ಕುಟುಂಬದ ಸದಸ್ಯರು ಹಾಗೂ ಇತರೆ ಮರುಬಳಕೆಯಾಗಬಲ್ಲ ವಸ್ತುಗಳನ್ನು ಆಯುವವರನ್ನು ಪುರಸಭೆಯ ತ್ಯಾಜ್ಯ ನಿರ್ವಹಣೆ ಪ್ರಕ್ರಿಯೆಗೆ ಜೋಡಿಸುವ ಔಪಚಾರಿಕ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಪೌರಾಯುಕ್ತ ಅತ್ತರ್ ಅಮೀರ್ ಖಾನ್ ಪ್ರಕಾರ, ನಗರದ ಘನತ್ಯಾಜ್ಯವನ್ನು ಆಯ್ದು ಸಂಗ್ರಹಿಸಲು ಮತ್ತು ಒಂದೇ ಸ್ಥಳದಲ್ಲಿ ಅವುಗಳನ್ನು ದಾಸ್ತಾನು ಮಾಡಲು ಸುಮಾರು 4,000 ಜನರನ್ನು ಖಾಯಂ ಅಥವಾ ಗುತ್ತಿಗೆಯ‌ ಆಧಾರದ ಮೇಲೆ ನೈರ್ಮಲ್ಯ ಕಾರ್ಮಿಕರಾಗಿ ನೇಮಿಸಿಕೊಳ್ಳಲಾಗಿದೆ. ಶ್ರೀನಗರ ಮುನ್ಸಿಪಲ್ ಕಾರ್ಪೊರೇಶನ್‌ನ ಮುಖ್ಯ ನೈರ್ಮಲ್ಯ ಅಧಿಕಾರಿ ನಜೀರ್ ಅಹ್ಮದ್ ಹೇಳುತ್ತಾರೆ, “ಆದರೂ ಕಸದಲ್ಲಿನ ಮರುಬಳಕೆ ವಸ್ತುಗಳನ್ನು ಆಯುವ ಕೆಲಸ ಮಾಡುವ ಜನರೇ ನಮ್ಮ ಬೆಸ್ಟ್‌ ಫ್ರೆಂಡ್ಸ್.‌ ಅವರು ನೂರು ವರ್ಷಗಳಾದರೂ ಕೊಳೆಯದ ಪ್ಲಾಸ್ಟಿಕ್‌ ಕಸವನ್ನು ಕೊಂಡುಹೋಗುತ್ತಾರೆ.”

ಇವರು 'ಸ್ವಯಂ ಉದ್ಯೋಗಿಗಳು' ಮಾತ್ರವಲ್ಲ, ಅತ್ಯಂತ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಯಾವುದೇ ರಕ್ಷಣಾ ಸಾಧನಗಳಿಲ್ಲದೆ ಕೆಲಸ ಮಾಡುತ್ತಾರೆ - ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ಈಗ ಇನ್ನಷ್ಟು ಅಸುರಕ್ಷಿತರಾಗಿದ್ದಾರೆ. "ನಾನು (ಜನವರಿ 2021ರಲ್ಲಿ ಲಾಕ್ ಡೌನ್ ಸರಳಗೊಂಡ ನಂತರ) ದೇವರ ಮೇಲೆ ನಂಬಿಕೆ ಇರಿಸಿ ಕೆಲಸವನ್ನು ಪುನರಾರಂಭಿಸಿದೆ. ನಾನು ನನ್ನ ಕುಟುಂಬಕ್ಕೆ ಆಹಾರ ಸಂಪಾದಿಸುವ ಶುದ್ಧ ಉದ್ದೇಶದೊಂದಿಗೆ ಕೆಲಸ ಮಾಡುತ್ತೇನೆ ಮತ್ತು ನಾನು ಸೋಂಕಿಗೆ ಒಳಗಾಗುವುದಿಲ್ಲ ಎಂದು ನಂಬಿದ್ದೇನೆ..." ಎಂದು 40 ವರ್ಷದ ಫಾತಿಮಾ ಹೇಳುತ್ತಾರೆ.

PHOTO • Muzamil Bhat

ಬೆಳಗಿನ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಫಾತಿಮಾ ಶ್ರೀನಗರದೊಳಗೆ ಸುಮಾರು 20 ಕಿಲೋಮೀಟರ್ ದೂರದವರೆಗೆ ಸೈಕಲ್ಲಿನಲ್ಲಿ ಹೋಗಿ ಎಸೆಯಲ್ಪಟ್ಟಿರುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಗಟ್ಟಾ (ಕಾರ್ಡ್ ಬೋರ್ಡ್) ಸಂಗ್ರಹಿಸುತ್ತಾರೆ

ಅದೇ ಭಯ ಮತ್ತು ನಂಬಿಕೆಯು ಮಧ್ಯ ಶ್ರೀನಗರದ ಸೌರಾ ಪ್ರದೇಶದ ಕೊಳೆಗೇರಿ ಕಾಲೋನಿಯಲ್ಲಿ ವಾಸಿಸುವ 35 ವರ್ಷದ ಮೊಹಮ್ಮದ್ ಕಬೀರ್ ಅವರನ್ನು ಕೆಲಸಕ್ಕೆ ಹೋಗುವಂತೆ ಪ್ರೇರೇಪಿಸುತ್ತದೆ ಮತ್ತು ಅವರು 2002ರಿಂದ ಈ ಕೆಲಸದಲ್ಲಿದ್ದಾರೆ. "ನಾನು (ಕೋವಿಡ್) ಸೋಂಕಿಗೆ ಒಳಗಾದರೆ, ಅದು ನನ್ನ ಕುಟುಂಬಕ್ಕೂ ತಗುಲಬಹುದೆಂದು ಭಯವಾಗುತ್ತದೆ. ಹಾಗೆಂದು ಅವರನ್ನು ಉಪವಾಸ ಕೆಡವಲು ಸಾಧ್ಯವಿಲ್ಲ, ಜೊತೆಗೆ ಈ ಕೊರೊನಾ ಪ್ರಾರಂಭವಾದಾಗ, ನಾನು ನನ್ನ ಥೆಕಾಡರ್ (ಗುಜರಿ ವ್ಯಾಪಾರಿ)ನಿಂದ 50,000 ರೂಪಾಯಿ ಸಾಲವನ್ನು ತೆಗೆದುಕೊಂಡಿದ್ದೇನೆ. ಈಗ ಅದನ್ನು ಮರುಪಾವತಿ ಮಾಡಬೇಕಿದೆ. ಈ ಕಾರಣಗಳಿಂದಾಗಿಯೇ ನಾನು ಕೆಲಸಕ್ಕೆ ಮರಳಿದೆ." ಕಬೀರ್ ಅವರ ಕೆಲಸವು ಅವರ ಆರು ಸದಸ್ಯರ ಕುಟುಂಬವನ್ನು ಪೋಷಿಸುವ ಏಕೈಕ ಆದಾಯವಾಗಿದೆ - ಅವರ ಪತ್ನಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಪುತ್ರರು, 2ರಿಂದ 18 ವರ್ಷ ವಯಸ್ಸಿನವರು.

ಅವರು ಮತ್ತು ಅವರಂತಹ ಇತರ ಕಾರ್ಮಿಕರು ಹಲವು ಅಪಾಯಗಳನ್ನು ಎದುರಿಸಬೇಕಿರುತ್ತದೆ. “ಕಸದಲ್ಲಿ ಏನಿರುತ್ತದೆಂದು ನಮಗೆ ತಿಳಿದಿರುವುದಿಲ್ಲ, ಕೆಲವೊಮ್ಮೆ ಬ್ಲೇಡ್‌ನಿಂದ ಕೈ ಬೆರಳು ಗಾಯವಾಗುತ್ತದೆ, ಕೆಲವೊಮ್ಮೆ ಬಳಸಿ ಎಸೆದ ಚುಚ್ಚುಮದ್ದಿನ ಸೂಜಿ ಚುಚ್ಚುವುದೂ ಇರುತ್ತದೆ. ಎಂದು ಉತ್ತರ ಶ್ರೀನಗರದ ಎಚ್ ಎಂಟಿ ಪ್ರದೇಶದಲ್ಲಿ ವಾಸಿಸುವ 45 ವರ್ಷದ ಇಮಾನ್ ಅಲಿ ಹೇಳುತ್ತಾರೆ. ಈ ಗಾಯಗಳ ವಿರುದ್ಧ ಕನಿಷ್ಟ ರಕ್ಷಣೆಯಾಗಿ, ಅವರು ಸರ್ಕಾರಿ ಆಸ್ಪತ್ರೆ ಅಥವಾ ಕ್ಲಿನಿಕ್ಕಿನಲ್ಲಿ ಪ್ರತಿ ಕೆಲವು ತಿಂಗಳಿಗೊಮ್ಮೆ ಧನುರ್ವಾಯು ನಿರೋಧಕ (anti-tetanus) ಚುಚ್ಚುಮದ್ದನ್ನು ಹಾಕಿಸಿಕೊಳ್ಳುತ್ತಾರೆ.

ಪ್ರತಿದಿನ 50-80 ಕಿಲೋ ಕಸ ಸಂಗ್ರಹಿಸಿದ ನಂತರ, ಕಾರ್ಮಿಕರು ತಮ್ಮ ಗುಡಿಸಲುಗಳ ಬಳಿ ತೆರೆದ ಪ್ಲಾಟ್ಗಳಲ್ಲಿ ತ್ಯಜಿಸಿದ ವಸ್ತುಗಳನ್ನು ಬೇರ್ಪಡಿಸುತ್ತಾರೆ. ನಂತರ ಅವರು ಪ್ಲಾಸ್ಟಿಕ್, ಕಾರ್ಡ್ ಬೋರ್ಡ್, ಅಲ್ಯೂಮಿನಿಯಂ ಟಿನ್‌ಗಳು ಮತ್ತು ಇತರ ವಸ್ತುಗಳನ್ನು ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬುತ್ತಾರೆ. "ವಸ್ತುಗಳು ಟನ್‌ ಲೆಕ್ಕದಲ್ಲಿದ್ದರೆ, ಗುಜರಿ ವಿತರಕರು ತಮ್ಮ ವಾಹನವನ್ನು ಇಲ್ಲಿಗೆ ಕಳುಹಿಸುತ್ತಾರೆ. ಆದರೆ ಹೆಚ್ಚಾಗಿ ನಾವು ದಾಸ್ತಾನು ಮಾಡುವುದಿಲ್ಲ, ನಾವು ಸಂಗ್ರಹಿಸಿದದ್ದನ್ನು ಆಗಾಗ ಮಾರಾಟ ಮಾಡುತ್ತೇವೆ ಮತ್ತು ಅದಕ್ಕಾಗಿ ನಾವು 4-5 ಕಿಲೋಮೀಟರ್‌ ದೂರ ಸೈಕಲ್‌ ಹೊಡೆದುಕೊಂಡು ಹೋಗಬೇಕಿರುತ್ತದೆ" ಎಂದು ಮೊಹಮ್ಮದ್ ಕುರ್ಬಾನ್ ಶೇಖ್ ಹೇಳುತ್ತಾರೆ. ವ್ಯಾಪಾರಿಗಳು ಪ್ರತಿ ಕಿಲೋ ಪ್ಲಾಸ್ಟಿಕ್ ಗೆ 8 ರೂ. ಮತ್ತು ಪ್ರತಿ ಕಿಲೋ ಕಾರ್ಡ್ ಬೋರ್ಡ್ ಗೆ 5 ರೂ. ನೀಡುತ್ತಾರೆ.

ಚಿಂದಿ ಆಯುವವರು ಸಾಮಾನ್ಯವಾಗಿ ತಿಂಗಳಿಗೆ 15-20 ದಿನಗಳ ಕಾಲ ಕೆಲಸ ಮಾಡುತ್ತಾರೆ ಮತ್ತು ಉಳಿದ ದಿನಗಳನ್ನು ಅವರು ಸಂಗ್ರಹಿಸಿದ ವಸ್ತುಗಳನ್ನು ಬೇರ್ಪಡಿಸಲು ಕಳೆಯುತ್ತಾರೆ ಎಂದು ಶೇಖ್ ಹೇಳುತ್ತಾರೆ. ಅವರ ಐದು ಸದಸ್ಯರ ಕುಟುಂಬವು ಒಟ್ಟಿಗೆ ತ್ಯಾಜ್ಯ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ ಸುಮಾರು 20,000 ರೂ. ಗಳಿಸುತ್ತದೆ. "ಈ ಸಂಪಾದನೆಯಲ್ಲಿ ನಾವು ಮಾಸಿಕ [ಮನೆ] ಬಾಡಿಗೆ 5,000 ರೂಪಾಯಿಗಳನ್ನು ಪಾವತಿಸಬೇಕು, ಆಹಾರವನ್ನು ಖರೀದಿಸಬೇಕು, ಸೈಕಲ್ ನಿರ್ವಹಣೆಗೆ [ತ್ರಿಚಕ್ರ ವಾಹನ] ಕೊಡುವುದರ ಜೊತೆಗೆ ಇತರ ಮೂಲಭೂತ ಅಗತ್ಯಗಳನ್ನು ಸಹ ನೋಡಿಕೊಳ್ಳಬೇಕು" ಎಂದು ಫಾತಿಮಾ ಹೇಳುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಾವು ಸಂಪಾದಿಸಿದ ಅಷ್ಟನ್ನೂ ತಿನ್ನುವುದಕ್ಕೆ ಖರ್ಚು ಮಾಡುತ್ತೇವೆ, ನಮ್ಮದು ಹಣವನ್ನು ಉಳಿಸುವ ಕೆಲಸವಲ್ಲ."

PHOTO • Muzamil Bhat

ಮೊಹಮ್ಮದ್ ಕುರ್ಬಾನ್ ಶೇಖ್ ಪ್ಲಾಸ್ಟಿಕ್ ಬಾಟಲಿಗಳನ್ನು ಬೇರ್ಪಡಿಸುತ್ತಿರುವುದು, ನಂತರ ಅದನ್ನು ಗುಜರಿ ವ್ಯಾಪಾರಿಯ ಬಳಿ ಕೊಂಡೊಯ್ಯಲಾಗುತ್ತದೆ

ಫಾತಿಮಾರ ಕುಟುಂಬ ಮತ್ತು ಇತರ ಕೆಲಸಗಾರರು ಸಾಮಾನ್ಯವಾಗಿ ನಿರ್ದಿಷ್ಟ ಗುಜರಿ ವ್ಯಾಪಾರಿಯೊಡನೆ ಮಾರಾಟದ ವ್ಯವಸ್ಥೆಗಳನ್ನು ಹೊಂದಿರುತ್ತಾರೆ. ಶ್ರೀನಗರದಲ್ಲಿ ವಿವಿಧ ಭಾಗಗಳಲ್ಲಿ ಸುಮಾರು ಇಂತಹ 50-60 ಗುಜರಿ ವ್ಯಾಪಾರಸ್ಥರಿದ್ದಾರೆ ಎಂದು ನಗರದ ಉತ್ತರದ ಬೆಮಿನಾದ ಗುಜರಿ ವ್ಯಾಪಾರಿ 39 ವರ್ಷದ ವ್ಯಾಪಾರಿ ರಿಯಾಜ್ ಅಹ್ಮದ್ ಅಂದಾಜಿಸುತ್ತಾರೆ. "ಅವರು (ಚಿಂದಿ ಆಯುವವರು) ಪ್ರತಿದಿನ ಸುಮಾರು ಒಂದು ಟನ್ ಪ್ಲಾಸ್ಟಿಕ್ ಮತ್ತು ಸುಮಾರು 1.5 ಟನ್ ಕಾರ್ಡ್ ಬೋರ್ಡ್ ಸಂಗ್ರಹವನ್ನು  ನನ್ನ ಗುಜರಿ ಗೋದಾಮಿಗೆ ತರುತ್ತಾರೆ" ಎಂದು ಅವರು ಹೇಳುತ್ತಾರೆ.

ಕೆಲವೊಮ್ಮೆ, ಈ ಮರುಬಳಕೆ ಸರಪಳಿಯಲ್ಲಿ ಇಮಾನ್ ಹುಸೇನರಂತಹ ಮಧ್ಯವರ್ತಿಗಳು ಇರುತ್ತಾರೆ. ಉತ್ತರ ಶ್ರೀನಗರದ ಎಚ್ ಎಂಟಿ ಪ್ರದೇಶದ ತನ್ನ ಕೊಳೆಗೇರಿಯನ್ನು ಉಲ್ಲೇಖಿಸುತ್ತಾ, "ನಾನು ಅವರ (ಮರುಬಳಕೆ ವಸ್ತು ಸಂಗ್ರಾಹಕರು) ಮತ್ತು ಕಬಾಡಿವಾಲಾಗಳ (ಗುಜರಿ ವ್ಯಾಪಾರಿಗಳು) ನಡುವಿನ ಮಧ್ಯವರ್ತಿಯ ಕೆಲಸವನ್ನು ಈ ಇಡೀ ಕಾಲೋನಿಗಾಗಿ ಮಾಡುತ್ತೇನೆ" ಎಂದು 38 ವರ್ಷದ ಇಮಾನ್ ಹೇಳುತ್ತಾರೆ. "ಸಂಗ್ರಹಿಸಿದ ಪ್ಲಾಸ್ಟಿಕ್ ಮತ್ತು ರಟ್ಟಿನ ಗುಣಮಟ್ಟವನ್ನು ಅವಲಂಬಿಸಿ ಅವರಿಂದ (ಮರುಬಳಕೆ ವಸ್ತು ಸಂಗ್ರಾಹಕರು) ನಾನು ಕಿಲೋಗೆ 50 ಪೈಸೆಯಿಂದ 2 ರೂಪಾಯಿಗಳ ತನಕ ಕಮಿಷನ್‌ ರೂಪದಲ್ಲಿ ಪಡೆಯುತ್ತೇನೆ. ಸಾಮಾನ್ಯವಾಗಿ ತಿಂಗಳಿಗೆ 8,000-10,000 ರೂಪಾಯಿಗಳನ್ನು ಸಂಪಾದಿಸುತ್ತೇನೆ."

ಮರುಬಳಕೆ ಸಾಧ್ಯವಿಲ್ಲದ ತ್ಯಾಜ್ಯವನ್ನು ಸೆಂಟ್ರಲ್ ಶ್ರೀನಗರದ ಸೈದಪೋರಾ ಪ್ರದೇಶದಲ್ಲಿರುವ ಅಚನ್ ಸೌರ ಡಂಪಿಂಗ್ ಮೈದಾನಕ್ಕೆ (ಅದರ ಹೆಚ್ಚಿನ ಭಾಗವನ್ನು) ತಲುಪಿಸಲಾಗುತ್ತದೆ. ಇದನ್ನು 1986ರಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಸುಮಾರು 65 ಎಕರೆಗಳಲ್ಲಿ ಪ್ರಾರಂಭಿಸಿತು, ನಂತರ ಶ್ರೀನಗರದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯದ ಪ್ರಮಾಣ ಹೆಚ್ಚಾದ ಕಾರಣ ಅದನ್ನು 175 ಎಕರೆಗೆ ವಿಸ್ತರಿಸಲಾಯಿತು.

ಡಂಪಿಂಗ್ ಮೈದಾನದಲ್ಲಿ, ಸುಮಾರು 120 ಮರುಬಳಕೆಯಾಗಬಲ್ಲ ವಸ್ತುಗಳನ್ನು ಸಂಗ್ರಹಿಸುವ ಕೆಲಸ ಮಾಡುವವರನ್ನು ಮಹಾನಗರ ಪಾಲಿಕೆಯ ಕಡೆಯಿಂದ "ಅನಧಿಕೃತವಾಗಿ ನೋಂದಾಯಿಸಲಾಗಿದೆ", ಅಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಲು ಅನುಮತಿ ನೀಡಲಾಗಿದೆ ಎಂದು ಮುಖ್ಯ ನೈರ್ಮಲ್ಯ ಅಧಿಕಾರಿ ನಜೀರ್ ಅಹ್ಮದ್ ಹೇಳುತ್ತಾರೆ, "ಮತ್ತು ಅವರು ಪ್ರತಿದಿನ ಸುಮಾರು 10 ಟನ್ ಸಂಗ್ರಹಿಸುತ್ತಾರೆ."

ಬೆಳೆಯುತ್ತಿರುವ ನಗರವು ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯವನ್ನು ಅವಿರತವಾಗಿ ಉತ್ಪಾದಿಸುತ್ತಿರುವಾಗ, ಕಾಶ್ಮೀರದಲ್ಲಿ ಆಗಾಗ್ಗೆ ಉಂಟಾಗುವ ಅಡಚಣೆಗಳು ಮತ್ತು ಲಾಕ್ ಡೌನ್‌ಗಳು ಅನೇಕ ಮರುಬಳಕೆ ವಸ್ತು ಸಂಗ್ರಾಹಕರು ಗುಜರಿ ವ್ಯಾಪಾರಿಗಳಿಂದ ಸಾಲ ಪಡೆಯಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿವೆ, ಅಥವಾ ಏನೂ ಸಿಗದ ದಿನಗಳಲ್ಲಿ ಆಹಾರಕ್ಕಾಗಿ ಸ್ಥಳೀಯ ಮಸೀದಿಗಳನ್ನು ಅವಲಂಬಿಸುತ್ತಿದ್ದಾರೆ.

ಈ ಕಷ್ಟಗಳನ್ನು ಮೀರಿ, ಅವರನ್ನು ಹೆಚ್ಚು ಕಾಡುವ ಮತ್ತೊಂದು ಸಮಸ್ಯೆಯೆಂದರೆ: "ನಮ್ಮ ಕೆಲಸದಿಂದಾಗಿ ನಮಗೆ ಜನರು ಗೌರವ ನೀಡುವುದಿಲ್ಲ" ಎಂದು ಇಮಾನ್ ಹುಸೇನ್ ಹೇಳುತ್ತಾರೆ. " ಕೆಲವರು ನಮ್ಮ ಮೇಲೆ ಕಳ್ಳತನದ ಆರೋಪ ಹೊರಿಸುತ್ತಾರೆ, ಆದರೆ ನಾವು ಎಂದಿಗೂ ಕದಿಯುವುದಿಲ್ಲ, ಜನರು ಎಸೆಯುವ ಪ್ಲಾಸ್ಟಿಕ್ ಮತ್ತು ರಟ್ಟಿನ ಪೆಟ್ಟಿಗೆಗಳನ್ನಷ್ಟೇ  ನಾವು ಸಂಗ್ರಹಿಸುತ್ತೇವೆ. ಆದರೆ ಅದನ್ನು ಅವರಿಗೆ ಅರ್ಥ ಮಾಡಿಸುವುದು? ನಾವು ನಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತೇವೆಯೆನ್ನುವುದು ಮೇಲಿರುವ ದೇವರಿಗೆ ತಿಳಿದಿದೆ."

PHOTO • Muzamil Bhat

ಉತ್ತರ ಶ್ರೀನಗರದ ಎ ಚ್‌ ಎಂಟಿ ಪ್ರದೇಶದ ಕೊಳೆಗೇರಿ ವಲಯ , ಇದು ಆದಾಯಕ್ಕಾಗಿ ಚಿಂದಿ ಆಯುವ ಕೆಲಸದ ಮೇಲೆ ಅವಲಂಬಿತವಾಗಿರುವ ಕುಟುಂಬಗಳಿಗೆ ನೆಲೆಯಾಗಿದೆ


PHOTO • Muzamil Bhat

ಬರ್ಬರ್ ಷಾ ಪ್ರದೇಶದಲ್ಲಿ ವಾಸಿಸುವ 16 ವರ್ಷದ ಆರಿಫ್, ಮಖ್ದೂಮ್ ಸಾಹೇಬ್ ಪ್ರದೇಶದಲ್ಲಿ ಟ್ರ ಕ್‌ ನಿಂದ ಉಪಯುಕ್ತ ಕಸವ ನ್ನು ಹೆಕ್ಕುತ್ತಿರುವುದು , ಅಲ್ಲಿ ಅನೇಕರು ಕಸವನ್ನು ಎಸೆಯುತ್ತಾರೆ. "ನಾನು ಇಂದು ಕೆಲಸಕ್ಕೆ ತಡವಾಗಿಬಂದಿದ್ದೇನೆ" ಎಂದು ಅವರು ಹೇ ಳಿದರು . "ಸಾಮಾನ್ಯವಾಗಿ ನಾನು ಪೌರ ಕಾರ್ಮಿಕ ರಿಗಿಂತಲೂ ಮುಂ ಚೆ ಬರುತ್ತೇನೆ ಆದರೆ ಇಂದು ಅವರು ಈಗಾಗಲೇ ಕಸವನ್ನು ತೆಗೆದುಕೊಂ ಡು ಹೋಗಿದ್ದಾರೆ . ಈಗ ನಾನು ಬೇರೆಲ್ಲಿಯಾದರೂ ಸ್ವಲ್ಪ ಕಸವನ್ನು ಸಿಗಬ ಬಹುದೇ ಅಥವಾ ಖಾಲಿ ಸೈಕಲ್ಲಿನೊಂದಿಗೆ ಹಿಂತಿರುಗ ಬೇಕಾಗುತ್ತದೆಯೋ ನೋಡ ಬೇಕಿದೆ "


PHOTO • Muzamil Bhat

35 ವರ್ಷದ ಮೊಹಮ್ಮದ್ ರೋನಿ ಉತ್ತರ ಶ್ರೀನಗರದ ಬೆಮಿನಾ ಪ್ರದೇಶದ ಬೀದಿಯ ಬಳಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುತ್ತಿ ರುವುದು


PHOTO • Muzamil Bhat

32 ವರ್ಷದ ಆಶಾ, ಸೆಂಟ್ರಲ್ ಶ್ರೀನಗರದ ಮೈಸುಮಾ ಪ್ರದೇಶದಲ್ಲಿ ರಟ್ಟಿನಿಂದ ತುಂಬಿದ ಮೂಟೆಗಳನ್ನು ಜೋಡಿಸುತ್ತಿದ್ದ ರು , ಅದನ್ನು ಅವ ರು ಮತ್ತು ಅವ ಸಹೋದ್ಯೋಗಿಗಳು ಆ ದಿನ ಸಂಗ್ರಹಿಸಿ ರುವುದು . ಆಶಾ ಸಾಮಾನ್ಯವಾಗಿ ಲಾಲ್ ಚೌಕ್ ನ ಆಸುಪಾಸಿನಲ್ಲಿ ಕೆಲಸ ಮಾಡು ತ್ತಾರೆ - ಅ ಲ್ಲಿನ ಕಾರ್ಯನಿರತ ಮಾರುಕಟ್ಟೆ ಯಲ್ಲಿ ಬಳಸಿ ಎಸೆದ ಕಾರ್ಡ್ ಬೋರ್ಡ್ ಪೆಟ್ಟಿಗೆಗಳು ಸುಲಭವಾಗಿ ಲಭ್ಯವಿ ರುತ್ತದೆ


PHOTO • Muzamil Bhat

ಮುಜೀಬ್ ಉರ್ ರೆಹ್ಮಾನ್, 40, ಅವರು ತಾನು ಹಿಂದಿನ ದಿನ ಸಂಗ್ರಹಿಸಿದ ಪ್ಲಾಸ್ಟಿಕ್ ಮತ್ತು ರಟ್ಟುಗಳನ್ನು ಇಳಿಸುತ್ತಿ ರುವುದು


PHOTO • Muzamil Bhat

ಮೊಹಮ್ಮದ್ ಕಬೀರ್ ರಟ್ಟಿನ ಪೆಟ್ಟಿಗೆಗಳನ್ನು ಹೊತ್ತುಕೊಂಡು ಲೋಡ್ ಮಾಡು ತ್ತಿರು ವುದು . ಇದನ್ನು ಸೆಂಟ್ರಲ್ ಶ್ರೀನಗರದ ಸೌರಾ ಪ್ರದೇಶದ ಗುಜರಿ ಮಾರುಕಟ್ಟೆಯಲ್ಲಿ ತೂಕ ಮಾಡ ಲಾಗುತ್ತದೆ


PHOTO • Muzamil Bhat

ಪ್ಲಾಸ್ಟಿಕ್ ಬಾಟಲಿಗಳಿಂದ ತುಂಬಿದ ಚೀಲಗಳನ್ನು ಲೋಡ್ ಮಾಡು ತ್ತಿರುವ ಸಂಗ್ರಾಹಕರು - ಪ್ರತಿಯೊಂದೂ 40ರಿಂದ 70 ಕಿಲೋ ತೂಕವನ್ನು ಹೊಂದಿರುತ್ತದೆ - ಶ್ರೀನಗರದ ಎಚ್ ಎಂಟಿ ಪ್ರದೇಶದ ಗುಜರಿ ವ್ಯಾಪರಿಯ ಬಳಿ ಟ್ರಕ್ಕಿನಲ್ಲಿ ಕೊಂಡುಹೋಗಲು . "ನಾನು ಈ ವಾಹನದಲ್ಲಿ 10-12 ಚೀಲಪ್ಲಾಸ್ಟಿಕ್ ಬಾಟಲಿಗಳನ್ನು ಸಾಗಿಸಬಹುದು" ಎಂದು ಟ್ರಕ್ ಚಾಲನೆ ಮಾಡುವ 19 ವರ್ಷದ ಮೊಹಮ್ಮದ್ ಇಮ್ರಾನ್ ಹೇಳುತ್ತಾರೆ


PHOTO • Muzamil Bhat

"ನಾನು ಕೆಲಸ ಮಾಡಿದರೆ ಕೊರೋನಾ ಸೋಂಕಿಗೆ ಒಳಗಾಗ ಲೂ ಬಹುದು, ಆದರೆ ನಾನು ಕೆಲಸ ಮಾಡದಿದ್ದರೆ ನನ್ನ ಕುಟುಂಬಕ್ಕೆ ಆಹಾರ ಸಂಪಾದಿಸಲಾಗದ ಆತಂಕದಿಂದ ಖಂಡಿತವಾಗಿಯೂ ಅನಾರೋಗ್ಯಕ್ಕೆ ಒಳಗಾಗುತ್ತೇನೆ" ಎಂದು 32 ವರ್ಷದ ರಿಯಾಜ್ ಶೇಖ್ ಹೇಳುತ್ತಾರೆ, ಶ್ರೀನಗರದ ಬೀದಿಗಳಲ್ಲಿ ಗಂಟೆಗಳ ಕಠಿಣ ಪರಿಶ್ರಮದ ನಂತರ ತಮ್ಮ ದಿನದ ಸಂಗ್ರಹವನ್ನು ಒಟ್ಟುಗೂಡಿಸುತ್ತಿದ್ದಾರೆ


PHOTO • Muzamil Bhat

ಬೆಮಿನಾದಲ್ಲಿನ ಗುಜರಿ ವ್ಯಾಪಾರಿ ರಿಯಾಜ್ ಅಹ್ಮದ್ ಅವರ ಗುಜರಿ ಗೋದಾಮಿನಲ್ಲಿ ಟನ್ ಗಟ್ಟಲೆ ಪ್ಲಾಸ್ಟಿಕ್ ಮತ್ತು ರಟ್ಟುಗಳನ್ನು ಸಂಗ್ರಹಿಸಲಾಗಿದೆ


PHOTO • Muzamil Bhat

ಕೆಲಸದಿಂದ ಹಿಂದಿರುಗುತ್ತಿದ್ದ ಮೊಹಮ್ಮದ್ ಶಕೂರ್ ಅವರು ಕಾಶ್ಮೀರದಲ್ಲಿ ಚಳಿಗಾಲದ ಚಳಿ ದಿನದಂದು ಹೆಚ್ಚು ಗುಜರಿ ವಸ್ತುಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ ಎಂದು ನಿರಾಶೆಗೊಂ ಡಿದ್ದರು


PHOTO • Muzamil Bhat

ಮೊಹಮ್ಮದ್ ಶಕೂರ್ ಮತ್ತು ಸ್ನೇಹಿತ (ಹೆಸರು ಹೇಳಲು ಬಯಸದ) ಕಾಶ್ಮೀರದ ಚಳಿಯಲ್ಲಿ ಕೆಲಸ ಮಾಡಿ ಬಂದ ನಂತರ ಮೈ ಕಾಯಿಸಿಕೊಳ್ಳುತ್ತಿರುವುದು


PHOTO • Muzamil Bhat

ಸಹೋದರರಾದ ರಬುಲ್, ಏಳು ವರ್ಷ (ಮುಂಭಾಗ) ಮತ್ತು ಎಂಟು ವರ್ಷದ ರಹಾನ್ ತಮ್ಮ ತಂದೆಯ ಸೈಕಲ್ ರಿಕ್ಷಾದಲ್ಲಿ ಆಡುತ್ತಿದ್ದರು. "ಪಾಪಾ ಹತ್ತಿರ ಹಣವಿಲ್ಲ ದ ಕಾರಣ ನಮಗೆ ರಿಮೋಟ್‌ ಕಂಟ್ರೋಲ್‌ ಸೈಕಲ್‌ ಕೊಡಿಸಲಾಗಲಿಲ್ಲ, ಹಾಗಾಗಿ ನಾವು ಅವರ ಸೈಕಲ್ಲಿನಲ್ಲಿ ಆಡುತ್ತಿದ್ದೇವೆ " ಎಂದು ರಹಾನ್ ಹೇಳುತ್ತಾ ನೆ


PHOTO • Muzamil Bhat

"ನಾನು ನನ್ನ ಮಗಳಿಗೆ ಮೊಬೈಲ್ ಫೋನ್ ಖರೀದಿಸಬೇಕಾಗಿತ್ತು, ಫೋನ್‌ ಇದ್ದರೆ ಅವಳು ತನ್ನ ಶಿಕ್ಷಣವನ್ನು ಮುಂದುವರಿಸಬಹುದು. ಅವಳು ಚಿಂದಿ ಆಯುವವ ಳಾಗು ವುದನ್ನು ನಾನು ಬಯಸುವುದಿಲ್ಲ" ಎಂದು ಮೊಹಮ್ಮದ್ ಇಮಾನ್ ಹೇಳುತ್ತಾರೆ. ಅವರ 17 ವರ್ಷದ ಮಗಳು ಹತ್ತಿರದ ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾಳೆ


PHOTO • Muzamil Bhat

ಫಾತಿಮಾ ಮತ್ತು ಅವರ ನೆರೆಹೊರೆಯವರು ಹತ್ತಿರದ ಕಾಲುವೆಯಿಂದ ನೀರನ್ನು ತರು ತ್ತಾರೆ; ಅವರ ಕೊಳಗೇರಿಗಳಲ್ಲಿ ಅವಲಂಬಿಸಬಹುದಾದಂತಹ ನಲ್ಲಿ ನೀರಿನ ಸೌಲಭ್ಯವಿಲ್ಲ


PHOTO • Muzamil Bhat

ಬಟಮಾಲೂ ಕೊಳೆಗೇರಿ ಕಾಲೋನಿಯಲ್ಲಿ ವಾಸಿಸುತ್ತಿರುವ ಫಾತಿಮಾ ಒಂಬತ್ತು ವರ್ಷಗಳಿಂದ ಶ್ರೀನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. " ನಾವಿಲ್ಲಿ ಸುತ್ತಮುತ್ತ ಸುಮಾರು 20 ಕುಟುಂಬಗಳಿದ್ದೇವೆ ಮತ್ತು ನನಗೆ ತಿಳಿದಿರುವಂತೆ, ನಮ್ಮಲ್ಲಿ ಯಾರೂ ಈ ಕೊರೊನಾ ವೈರ ಸ್ಸಿ ನಿಂದ ಸೋಂಕಿಗೆ ಒಳಗಾಗಿಲ್ಲ, ನನಗೆ ಅಲ್ಲಾಹನ ಮೇಲೆ ನಂಬಿ ಕೆಯಿ ದೆ ಮತ್ತು ನಾನು ಅವನ ಹೆಸರು ಹೇಳಿ ಕೆಲಸಕ್ಕೆ ಹೋಗುತ್ತೇನೆ" ಎಂದು ಅವರು ಹೇಳುತ್ತಾರೆ


PHOTO • Muzamil Bhat

ಮೊದಲು ಕೋವಿಡ್ ಇತ್ತು, ನಂತರ ಕಠಿಣ ಚಳಿಗಾಲ. ಇಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನಾನು ಅಂತಹ ಚಳಿಯ ನ್ನು ನೋಡಿಲ್ಲ" ಎಂದು ಬಟಮಾಲೂ ಕೊಳೆಗೇರಿಯಲ್ಲಿ ವಾಸಿಸುತ್ತಿರುವ ಮತ್ತು ಮೂಲತಃ ಕೋಲ್ಕತ್ತಾದವರಾದ 24 ವರ್ಷದ ಮೊಹಮ್ಮದ್ ಸಾಗರ್ ಹೇಳುತ್ತಾರೆ. ಸಾಗರ್ ನಾಲ್ಕು ವರ್ಷಗಳಿಂದ ಚಿಂದಿ ಆಯುವ ಕೆಲಸ ಮಾಡುತ್ತಿದ್ದಾರೆ. "ನಾನು ನನ್ನ ಥೆಕಾದಾ ರ್‌ ನಿಂದ (ಲಾಕ್ ಡೌನ್ ಸಮಯದಲ್ಲಿ) 40,000 ಸಾಲವನ್ನು ತೆಗೆದುಕೊಂಡಿದ್ದೇನೆ, ಈಗ ನಾನು ಇದೆಲ್ಲವೂ ಸರಿಯಾಗಿ ಮತ್ತೆ ಕೆಲಸ ಮಾಡುವಂತಾಗಿ ನನ್ನ ಸಾಲ ತೀರಿಸಲು ಸಾಧ್ಯವಾಗುವ ಹಾಗೆ ಆಗಲಿಯೆಂದು ಆಶಿಸುವುದನ್ನು ಹೊರತುಪಡಿಸಿ ಇನ್ನೇನೂ ಮಾಡಲು ಸಾಧ್ಯವಿಲ್ಲ "


PHOTO • Muzamil Bhat

ಶ್ರೀನಗರ ಮುನ್ಸಿಪಲ್ ಕಾರ್ಪೊರೇಷ ನ್‌ ನ ಕಾರ್ಮಿಕರು ತ್ಯಾಜ್ಯವನ್ನು ಸಂಗ್ರಹಿಸುವ ಯಂತ್ರೋಪಕರಣಗಳೊಂದಿಗೆ. ಶೇಖ್ ಕುಟುಂಬದಂತಹ ಮರುಬಳಕೆ ವಸ್ತು ಸಂಗ್ರಾಹಕರು ನಿಗಮದ ತ್ಯಾಜ್ಯ ನಿರ್ವಹಣಾ ಪ್ರಕ್ರಿಯೆಗಳೊಂದಿಗೆ ಔಪಚಾರಿಕವಾಗಿ ಸಂಬಂಧ ಹೊಂದಿಲ್ಲ, ಇದು ನಗರದ ಘನ ತ್ಯಾಜ್ಯವನ್ನು ಸಂಗ್ರಹಿಸಲು ಮತ್ತು ವಿಲೇವಾರಿ ಮಾಡಲು ಸುಮಾರು 4,000 ನೈರ್ಮಲ್ಯ ಕಾರ್ಮಿಕರನ್ನು ಪೂರ್ಣಸಮಯ ಅಥವಾ ಒಪ್ಪಂದದ ಮೇಲೆ ನೇಮಿಸಿಕೊಂಡಿದೆ


PHOTO • Muzamil Bhat

ಅಚಾನ್ ಡಂಪಿಂಗ್ ಮೈದಾನದಲ್ಲಿ ಕಸದ ಪರ್ವತಗಳು


ಅನುವಾದ : ಶಂಕರ . ಎನ್ . ಕೆಂಚನೂರು

Muzamil Bhat

Muzamil Bhat is a Srinagar-based freelance photojournalist and filmmaker, and was a PARI Fellow in 2022.

Other stories by Muzamil Bhat
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru