"ಸುಮಾರು 30 ವರ್ಷಗಳ ಹಿಂದೆ ಸ್ಪಿಟಿಯಲ್ಲಿ ಭಾರಿ ಹಿಮಪಾತವಾಗುತ್ತಿತ್ತು. ಅದು ಹಸಿರಿನಿಂದ ಕೂಡಿರುತ್ತಿತ್ತು ಮತ್ತು ಹುಲ್ಲು ಕೂಡ ಚೆನ್ನಾಗಿ ಬೆಳೆಯುತ್ತಿತ್ತು," ಎಂದು ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿಟಿ ಜಿಲ್ಲೆಯ ಪಶುಪಾಲಕ ಮತ್ತು ರೈತ ಚೆರಿಂಗ್ ಆಂಗ್ದುಯಿ ಹೇಳುತ್ತಾರೆ.

43 ವರ್ಷ ಪ್ರಾಯದ ಅವರು ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿರುವ ಮತ್ತು 158 ಜನರಿಗೆ ನೆಲೆಯಾಗಿರುವ ( ಜನಗಣತಿ 2011 ) ಲಾಂಗ್ಜಾ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ರಾಜ್ಯದಲ್ಲಿ ಪರಿಶಿಷ್ಟ ಪಂಗಡವೆಂದು ಪಟ್ಟಿ ಮಾಡಲಾದ ಭೋಟ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಳ್ಳಿಯ ನಿವಾಸಿಗಳು ಹೆಚ್ಚಾಗಿ ಕೃಷಿ, ಜಾನುವಾರು ಸಾಕಾಣಿಕೆ ಮತ್ತು ಸ್ಪಿಟಿಗೆ ಭೇಟಿ ನೀಡುವ ಪ್ರವಾಸಿಗರನ್ನು ನಿರ್ವಹಿಸುವಲ್ಲಿ ನಿರತರಾಗಿದ್ದಾರೆ.

ಜುಲೈ 2021ರ ಕೊನೆಯಲ್ಲಿ, ನಾವು ಚೆರಿಂಗ್ ಮತ್ತು ಲ್ಯಾಂಗ್ಜಾದಲ್ಲಿ ಕೆಲವು ಪಶುಪಾಲಕರನ್ನು ಭೇಟಿಯಾದೆವು, ಅವರು ತಮ್ಮ ಜಾನುವಾರುಗಳು, ಕುರಿಗಳು ಮತ್ತು ಆಡುಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ತಮ್ಮ ಜಾನುವಾರುಗಳಿಗೆ ಹುಲ್ಲನ್ನು ಹುಡುಕಲು ಹೆಚ್ಚು ದೂರ ಪ್ರಯಾಣಿಸಬೇಕಾದ ಬಗ್ಗೆ ಮಾತನಾಡಿದರು.

"ಈಗ ಇಲ್ಲಿನ ಪರ್ವತಗಳಲ್ಲಿ ಕಡಿಮೆ ಹಿಮ ಬೀಳುತ್ತಿದೆ. ಇಲ್ಲಿ ಹೆಚ್ಚು ಮಳೆಯೂ ಆಗುವುದಿಲ್ಲ. ಇದರಿಂದಾಗಿ ಈಗೀಗ ಹೆಚ್ಚು ಹುಲ್ಲು ಬೆಳೆಯುವುದಿಲ್ಲ," ಎಂದು ಚೆರಿಂಗ್ ಹೇಳುತ್ತಾರೆ, "ಅದಕ್ಕಾಗಿಯೇ ನಾವು ಜಾನುವಾರುಗಳನ್ನು ಮೇಯಲು ಮತ್ತಷ್ಟು ಎತ್ತರಕ್ಕೆ ಕರೆದೊಯ್ಯಬೇಕಾಗಿದೆ."

ವಿಡಿಯೋ ನೋಡಿ: ಹುಲ್ಲಿನ ಹುಡುಕಾಟದಲ್ಲಿ

ಸ್ಪಿಟಿ ಹಿಮಾಚಲ ಪ್ರದೇಶದ ಈಶಾನ್ಯ ಭಾಗದಲ್ಲಿದೆ. ಇದು ಹಲವಾರು ನದಿಗಳ ಎತ್ತರದ ಕಣಿವೆಗಳನ್ನು ಹೊಂದಿದೆ. ಈ ಪ್ರದೇಶವು ತಂಪಾದ ಮರುಭೂಮಿಯಂತಹ ಪರಿಸರವನ್ನು ಹೊಂದಿದ್ದು, ಭಾರತದ ಉಳಿದ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ - ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ. ಸಂದರ್ಶಕರು ಇಲ್ಲಿ ಸ್ಪಷ್ಟವಾದ ಆಕಾಶವಿರುವ ರಾತ್ರಿಗಳಲ್ಲಿ ಗೋಚರಿಸುವ ಆಕಾಶಗಂಗೆಯ ನೋಟವನ್ನು ಸಹ ನೋಡಬಹುದು.

ಈ ಚಿತ್ರದಲ್ಲಿ ಹೇಳಲಾದ ಪಶುಪಾಲಕರ ಕಥೆಯು ಅನಿಯಮಿತ ಹಿಮಪಾತದ ಮಾದರಿಗಳು ಚೆರಿಂಗ್ ಮತ್ತು ಅವರ ಊರಿನ ಪಶುಪಾಲಕ ಜನರ ಜೀವನ ಮತ್ತು ಜೀವನೋಪಾಯದ ಮೇಲೆ ಹೇಗೆ ಪರಿಣಾಮ ಬೀರಿವೆ ಎಂಬುದನ್ನು ನಮಗೆ ತೋರಿಸುತ್ತದೆ.

"ಮುಂಬರುವ ವರ್ಷಗಳಲ್ಲಿ ಏನಾದರೂ ಅನಾಹುತ ಸಂಭವಿಸುತ್ತದೆ ಮತ್ತು ಇಲ್ಲಿನ ಭೇಡ್ ಬಕ್ರಿಯಾ [ಕುರಿಗಳು ಮತ್ತು ಮೇಕೆಗಳು] ಅಳಿದುಹೋಗುತ್ತವೆ ಎಂದು ನಾವು [ಗ್ರಾಮಸ್ಥರು] ಚಿಂತಿಸುತ್ತಿದ್ದೇವೆ. ಏಕೆಂದರೆ ನಮ್ಮಲ್ಲಿ ಹೆಚ್ಚು ಹುಲ್ಲು ಉಳಿದಿಲ್ಲ. ನಾವು ಅದನ್ನು ಎಲ್ಲಿಂದ ತರಲು ಸಾಧ್ಯ?" ಎಂದು ಅವರು ಕೇಳುವ ಅವರ ಮುಖದಲ್ಲಿ ಚಿಂತೆಯ ಗೆರೆ ಎದ್ದು ಕಾಣುತ್ತಿತ್ತು.

Langza village is situated at an altitude of 14,500 ft above sea level in Lahaul-Spiti district of Himachal Pradesh. There are about 32 households in the village and 91 per cent of the people here belong to the Bhot community, listed as scheduled tribe in the state
PHOTO • Naveen Macro

ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿ ಟಿ ಜಿಲ್ಲೆಯಲ್ಲಿರುವ ಲ್ಯಾಂಗ್ಜಾ ಗ್ರಾಮವು ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿದೆ. ಈ ಗ್ರಾಮದಲ್ಲಿ ಸುಮಾರು 32 ಕುಟುಂಬಗಳಿವೆ ಮತ್ತು ಇಲ್ಲಿನ ಶೇಕಡಾ 91ರಷ್ಟು ಜನರು ಭೋಟ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಇದನ್ನು ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಎಂದು ಪಟ್ಟಿ ಮಾಡಲಾಗಿದೆ

All livestock in the village are gathered together to leave with Chhering and others to graze in the mountains
PHOTO • Naveen Macro

ಚೆರಿಂಗ್ ಮತ್ತು ಇತರ ರು ಹಳ್ಳಿಯಲ್ಲಿರುವ ಎಲ್ಲಾ ಜಾನುವಾರುಗಳನ್ನು ಪರ್ವತಗಳಲ್ಲಿ ಮೇಯಿಸುವ ಸಲುವಾಗಿ ಒಟ್ಟುಗೂಡಿಸುತ್ತಿರುವುದು

Chhering’s daughter Tanzin Lucky sometimes travels with the animals. “Lack of water causes the earth to dry and crack over time,” said Chhering
PHOTO • Sanskriti Talwar

ಚೆರಿಂಗ್ ಅವರ ಮಗಳು ತಾಂಜಿನ್ ಲಕ್ಕಿ ಕೆಲವೊಮ್ಮೆ ಜಾನುವಾರುಗಳೊಂದಿಗೆ ಪ್ರಯಾಣಿಸುತ್ತಾರೆ. 'ನೀರಿನ ಕೊರತೆಯು ಭೂಮಿ ಒಣಗಲು ಮತ್ತು ಕಾಲಾನಂತರದಲ್ಲಿಅದು  ಒಡೆಯಲು ಕಾರಣವಾಗುತ್ತದೆ,' ಎಂದು ಚೆರಿಂಗ್ ಹೇಳಿದರು

The village sheep, goats, cattle and donkeys moving towards high altitude areas in search of grazing grounds
PHOTO • Naveen Macro

ಹಳ್ಳಿಯ ಕುರಿಗಳು, ಮೇಕೆಗಳು, ದನಕರುಗಳು ಮತ್ತು ಕತ್ತೆಗಳು ಹುಲ್ಲುಗಾವಲುಗಳನ್ನು ಹುಡುಕುತ್ತಾ ಎತ್ತರದ ಪ್ರದೇಶಗಳ ಕಡೆಗೆ ಚಲಿಸುತ್ತವೆ

Chhering Angdui and other herders waiting for all the animals to gather to take them for grazing to higher pastures
PHOTO • Naveen Macro

ಚೆರಿಂಗ್ ಆಂಗ್ಡುಯಿ ಮತ್ತು ಇತರ ಪಶುಪಾಲಕರು ಎತ್ತರದ ಹುಲ್ಲುಗಾವಲುಗಳಿಗೆ ಮೇಯಿಸಲು ಕರೆದೊಯ್ಯುವುದಕ್ಕಾಗಿ ಎಲ್ಲಾ ಜಾನುವಾರುಗಳು ಒಟ್ಟುಗೂಡುವುದನ್ನು ಕಾಯುತ್ತಿದ್ದಾರೆ

Animals from Langza village grazing in the high altitude areas of Himachal Pradesh
PHOTO • Naveen Macro

ಹಿಮಾಚಲ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಮೇಯುತ್ತಿರುವ ಲ್ಯಾಂಗ್ಜಾ ಗ್ರಾಮದ ಜಾನುವಾರುಗಳು

Animals returning to the village in the evening after grazing
PHOTO • Naveen Macro

ಮೇಯಲು ಹೋಗಿ ಸಂಜೆ ಗ್ರಾಮಕ್ಕೆ ಮರಳು ತ್ತಿರುವ ಜಾನುವಾರುಗಳು

Chhering Angdui is a farmer and has two cows and a donkey. He worries that livestock will go extinct in Spiti due to global warming
PHOTO • Naveen Macro

ಚೆರಿಂಗ್ ಆಂಗ್ಡುಯಿ ಓರ್ವ ರೈತ ಮತ್ತು ಅವರು ಎರಡು ಹಸುಗಳು ಮತ್ತು ಒಂದು ಕತ್ತೆಯನ್ನು ಹೊಂದಿದ್ದಾರೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸ್ಪಿಟಿಯಲ್ಲಿ ಜಾನುವಾರುಗಳು ಅಳಿದುಹೋಗುತ್ತವೆ ಎನ್ನುವುದು ಅವರ ಚಿಂತೆ

A glimpse of the Milky Way galaxy visible in the clear night skies
PHOTO • Naveen Macro

ಸ್ಪಷ್ಟ ರಾತ್ರಿ ಯ ಆಕಾಶದಲ್ಲಿ ಗೋಚರಿಸುವ ಮಿಲ್ಕಿವೇ ಗ್ಯಾಲಕ್ಸಿಯ ಒಂದು ನೋಟ

ಅನುವಾದ : ಶಂಕರ. ಎನ್. ಕೆಂಚನೂರು

Sanskriti Talwar

Sanskriti Talwar is an independent journalist based in New Delhi, and a PARI MMF Fellow for 2023.

Other stories by Sanskriti Talwar
Photographs : Naveen Macro

Naveen Macro is a Delhi-based independent photojournalist and documentary filmmaker and a PARI MMF Fellow for 2023.

Other stories by Naveen Macro
Text Editor : Vishaka George

Vishaka George is Senior Editor at PARI. She reports on livelihoods and environmental issues. Vishaka heads PARI's Social Media functions and works in the Education team to take PARI's stories into the classroom and get students to document issues around them.

Other stories by Vishaka George
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru