ಆಮ್ಟಾ ಪ್ರದೇಶದಲ್ಲಿ ದಾಮೋದರ್ ನದಿಯುದ್ದಕ್ಕೂ ಇರುವ ಜನರ ಮುಖ್ಯ ಜೀಪನೋಪಾಯಗಳೆಂದರೆ ಕೃಷಿ ಮತ್ತು ಮೀನುಗಾರಿಕೆ. ಇಲ್ಲಿಯ ಮಹಿಳೆಯರು ಶಿಫಾನ್ ಮತ್ತು ಜ್ಯೋರ್ಜೆಟ್ ಸೀರೆಗಳ ಆಲಂಕಾರಿಕ ಬಿಡಿ ಕೆಲಸಗಳನ್ನೂ ಕೂಡ ಮಾಡುತ್ತಾರೆ. ಪುಟ್ಟ ಪುಟ್ಟ ಹೊಳಪಿನ ಕಲ್ಲುಗಳಿಂದ ಖಾಲಿ ಸೀರೆಗಳನ್ನು ಸುಂದರವಾಗಿ ಅಲಂಕರಿಸುವ ಇವರುಗಳು ಈ ಕಲ್ಲುಗಳಿಂದ ಸೀರೆಯನ್ನು ಒಂದು ಕಲಾಕೃತಿಯೇ ಎಂಬಂತೆ ರೂಪಾಂತರಗೊಳಿಸುವ ಪರಿಯು ಅನನ್ಯ.

ಪಶ್ಚಿಮಬಂಗಾಳದಾದ್ಯಂತ ಅದೆಷ್ಟೋ ಹೆಂಗಸರು ಈ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದು ಅವರಿಗೆ ಆದಾಯವನ್ನು ನೀಡಿ ಮನೆಯ ಖರ್ಚುಗಳನ್ನು ತೂಗಿಸಲು ಭಾಗೀದಾರರನ್ನಾಗಿ ಮಾಡುತ್ತಿರುವುದಲ್ಲದೆ ಈ ಮಹಿಳೆಯರಿಗೆ ಸ್ವಾವಲಂಬನೆಯ ಭಾವವನ್ನೂ ಕೂಡ ತರುತ್ತಿದೆ.

ಹೊಳಪಿನ ಕಲ್ಲುಗಳಿಂದ ಸಾಲಂಕೃತಗೊಂಡು ಮಾರುಕಟ್ಟೆಯನ್ನು ತಲುಪುವ ಸೀರೆಗಳು ಪಶ್ಚಿಮಬಂಗಾಳದ ಮಾರುಕಟ್ಟೆಯಲ್ಲಿ 2000 ರೂಪಾಯಿಗಳವರೆಗೂ ಬೆಲೆ ಬಾಳುತ್ತವೆ. ಆದರೆ ಸಾಮಾನ್ಯ ಸೀರೆಗಳನ್ನು ಇಷ್ಟು ಸುಂದರ ಕಲಾಕೃತಿಗಳಂತೆ ಮಾರ್ಪಡಿಸುವ ಈ ಮಹಿಳೆಯರಿಗೆ ಸಿಗುವುದು ಈ ಮೊತ್ತದ ಒಂದು ಚಿಕ್ಕಪಾಲಷ್ಟೇ. ಅದೆಷ್ಟೆಂದರೆ ಒಂದು ಸೀರೆಗೆ 20 ರೂಪಾಯಿಗಳು ಮಾತ್ರ.

PHOTO • Sinchita Maji

ಸೀರೆಗಳನ್ನು ಅಲಂಕಾರದ ಪುಟ್ಟ ಕಲ್ಲುಗಳೊಂದಿಗೆ ಸಿಂಗರಿಸುತ್ತಿರುವ ಆಮ್ಟಾದ ಉದ್ಯೋಗಿ ಮೌಸಮಿ ಪಾತ್ರಾ

ಅನುವಾದ: ಪ್ರಸಾದ್ ನಾಯ್ಕ

ಕ್ರೇಜಿ ಫ್ರಾಗ್ ಮೀಡಿಯಾ ಫೀಚರ್ಸ್ ಈ ಅನುವಾದದ ರೂವಾರಿ. ಪ್ರಸ್ತುತ ರಿಪಬ್ಲಿಕ್ ಆಫ್ ಅಂಗೋಲಾದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು ಮತ್ತು ಅಂಕಣಕಾರರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

Sinchita Maji

ಪರಿ ತಂಡದಲ್ಲಿ ವೀಡಿಯೋ ಸಂಯೋಜಕರಾಗಿರುವ ಸಿಂಚಿತಾ ಮಾಜಿ ಫ್ರೀಲಾನ್ಸ್ ಛಾಯಾಚಿತ್ರಗ್ರಾಹಕರು ಮತ್ತು ಸಾಕ್ಷ್ಯಚಿತ್ರ ನಿರ್ದೇಶಕರು. ಈ ಲೇಖನವು ಅವರ 2015-16 ಪರಿ ಫೆಲೋಷಿಪ್ ನ ಸಮಯದಲ್ಲಿ ನಡೆಸಲಾಗಿದ್ದ ಪ್ರಾಜೆಕ್ಟ್ ನ ಒಂದು ಭಾಗ.

Other stories by Sinchita Maji