ಹೆಸೆಲ್‌ಬ್ಲಾಡ್‌ ಪ್ರಶಸ್ತಿ ವಿಜೇತ ಛಾಯಾಗ್ರಾಹಕಾರದ ದಯಾನಿತ ಸಿಂಗ್‌ ಅವರು ʼಪರಿʼಯ ಸಹಭಾಗಿತ್ವದಲ್ಲಿ ದಯಾನಿತಾ ಸಿಂಗ್‌ -ಪರಿ ಡಾಕ್ಯುಮೆಂಟರಿ ಫೋಟೊಗ್ರಫಿ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ

2 ಲಕ್ಷ ರೂಪಾಯಿಗಳ ಮೌಲ್ಯದ ಚೊಚ್ಚಲ ದಯಾನಿತಾ ಸಿಂಗ್‌ -ಪರಿ ಡಾಕ್ಯುಮೆಂಟರಿ ಫೋಟೊಗ್ರಫಿ ಪ್ರಶಸ್ತಿ ಪೀಪಲ್ಸ್‌ ಆರ್ಕೈವ್‌ ಆಫ್‌ ರೂರಲ್‌ ಇಂಡಿಯಾದ ಎಮ್‌ ಪಳನಿ ಕುಮಾರ್‌ ಅವರಿಗೆ ದೊರಕಿದೆ.

ಜಗತ್ತಿನ ಅತ್ಯಂತ ಪ್ರತಿಷ್ಠಿತ ಛಾಯಾಗ್ರಹಣ ಪ್ರಶಸ್ತಿ ಎಂದು ಪರಿಗಣಿಸಲಾಗಿರುವ 2022ರ ಹಾಸೆಲ್‌ಬ್ಲಾಡ್ ಪ್ರಶಸ್ತಿ ಪಡೆದಾಗ ಅವರ ಮನಸಿನಲ್ಲಿ ಈ ಪ್ರಶಸ್ತಿಯ ಪರಿಕಲ್ಪನೆ ಮೂಡಿತು. ಯುವ ಛಾಯಗ್ರಾಹಕ ಪಳನಿ ಕುಮಾರ್ ಅವರ ಸ್ವಂತ ಶೈಲಿ ಛಾಯಾಗ್ರಹಣ, ಅದರಲ್ಲಿನ ವಿಷಯ, ಸ್ಫೂರ್ತಿ ಮತ್ತು ಸಾಕ್ಷ್ಯಚಿತ್ರ ಪ್ರತಿಭೆಯಿಂದ ದಯಾನಿತಾ ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದು ಘೋಷಿಸಿದ್ದರು.

ಅವರು ಈ ಪ್ರಶಸ್ತಿಯನ್ನು ಸ್ಥಾಪಿಸಲು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾವನ್ನು ಸಹಯೋಗದ ಪರಿಕ್ರಮವನ್ನಾಗಿ ಸಹ ಆಯ್ಕೆ ಮಾಡಿಕೊಂಡರು, ಪರಿ ಇಂದು ಸಾಕ್ಷ್ಯಚಿತ್ರ ಛಾಯಾಗ್ರಹಣದ ಕೆಲವೇ ಕೊಂಡಿಗಳಲ್ಲಿ ಒಂದಾಗಿ ಉಳಿದಿರುವುದು ಮತ್ತು ಸಮಾಜದ ಅಂಚಿನಲ್ಲಿರುವ ಜನರ ಬದುಕನ್ನು ಗಂಭೀರವಾಗಿ ದಾಖಲಿಸುತ್ತಿರುವುದು ಅವರ ಈ ಆಯ್ಕೆಗೆ ಕಾರಣವಾಗಿವೆ.

ಪಳನಿ ಕುಮಾರ್ ಪರಿಯ ಮೊದಲ ಪೂರ್ಣಕಾಲಿಕ ಛಾಯಾಗ್ರಾಹಕರಾಗಿದ್ದಾರೆ (ನಾವು ವಿವಿಧ ಸ್ಟೋರಿಗಳಿಗೆ ಛಾಯಾಚಿತ್ರಗಳನ್ನು ನೀಡಿದ ಸುಮಾರು 600 ಛಾಯಾಗ್ರಾಹಕರೊಂದಿಗೆ ಕೆಲಸ ಮಾಡಿದ್ದೇವೆ). ಪರಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿರುವ ಅವರ ಕೆಲಸವು, ಕಸಗುಡಿಸುವವರು, ಕಡಲಜೊಂಡು ತೆಗೆಯುವವರು, ಕೃಷಿ ಕಾರ್ಮಿಕರು ಮತ್ತು ಇತರ ಅನೇಕರನ್ನು ಒಳಗೊಂಡಂತೆ ಹಿಂದುಳಿದ ಸಮುದಾಯಗಳ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಿದೆ. ಛಾಯಾಗ್ರಹಣ ಕ್ಷೇತ್ರದಲ್ಲಿ ಕೆಲವೇ ಜನರು ಪಳನಿಯ ಕರಕುಶಲತೆ ಮತ್ತು ಆಳವಾದ ಸಾಮಾಜಿಕ ದೃಷ್ಟಿಯ ಸಂಯೋಜನೆಯನ್ನು ಹೊಂದಬಲ್ಲರು, ಜನರ ನೋವುಗಳಿಗೆ ಸಹಾನುಭೂತಿ ತೋರಿಸುವಲ್ಲಿ ಅವರು ಆಳವಾಗಿ ತೊಡಗಿಸಿಕೊಂಡಿದ್ದಾರೆ.

PHOTO • M. Palani Kumar

ದಕ್ಷಿಣ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ 25,000 ಎಕರೆಯಲ್ಲಿ ಹರಡಿರುವ ಉಪ್ಪಿ ನ ಆಗರಗಳಲ್ಲಿ ಅಲ್ಪ ಕೂಲಿಗಾಗಿ ದುಡಿದು ಬೆವರು ಸುರಿಸುತ್ತಿರುವ ಮಹಿಳಾ ಕಾರ್ಮಿಕರಲ್ಲಿ ರಾಣಿಯೂ ಒಬ್ಬರು. ವೀಕ್ಷಿಸಿ: ತೂತುಕುಡಿಯ ಉಪ್ಪಿನ ಆಗರಗಳ ರಾಣಿ


PHOTO • M. Palani Kumar

ಎ. ಮೂಕು ಪೊರಿ ಸುಮಾರು ಎಂಟು ವರ್ಷದವ ರಾ ಗಿದ್ದಾಗಿನಿಂದ ಕಡಲ ಜೊಂಡು ಸಂಗ್ರಹಿಸಲು ಕಡಲಿಗೆ ಇಳಿಯುತ್ತಿದ್ದಾರೆ . ತಮಿಳುನಾಡಿನ ಭಾರತೀನಗರದ ಅನೇಕ ಮೀನುಗಾರರು ಈ ಅಸಾಮಾನ್ಯ, ಸಾಂಪ್ರದಾಯಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ, ಅವರ ಬದುಕು ಹವಾಮಾನ ಬದಲಾವಣೆಯಿಂದ ನಾಶವಾಗಿದೆ. ವೀಕ್ಷಿಸಿ: ತಮಿಳುನಾಡು: ಸಮುದ್ರದ ಎದೆಯಿಂದ ಪಾಚಿ ಕೀಳುವ ಮಹಿಳೆಯರು


PHOTO • M. Palani Kumar

ವಯೋಮಾನದ ಪ್ರಕಾರ 70 ವರ್ಷ ದಾಟಿ ರುವ ಗೋವಿಂದಮ್ಮ ಬಕಿಂಗ್ ಹ್ಯಾಮ್ ಕಾಲುವೆಯಿಂದ ಸಿಗಡಿ ಹಿಡಿದು ಬಾಯಿ ಯಲ್ಲಿ ಕಚ್ಚಿಕೊಂಡಿರು ಬುಟ್ಟಿಯಲ್ಲಿ ಸಂಗ್ರಹಿಸುತ್ತಾರೆ. ಆಕೆಯ ಮೈಮೇಲಿನ ಗಾಯಗಳು ಮತ್ತು ದೃಷ್ಟಿ ನಷ್ಟದ ಹೊರತಾಗಿಯೂ, ಅವರು ಕುಟುಂಬ ನಡೆಸುವ ಕೆಲಸ ಮಾಡುತ್ತಾರೆ. ವೀಕ್ಷಿಸಿ: ಗೋವಿಂದಮ್ಮ: ಒಂದಿಡೀ ಬದುಕನ್ನು ನೀರಿನಲ್ಲಿ ಕಳೆದವರು


PHOTO • M. Palani Kumar

ಇವರು ತಮಿಳುನಾಡಿನ ಕರೂರ್ ಜಿಲ್ಲೆಯ ಕಾವೇರಿ ದಡದ ಕೊರೈ ಹೊಲಗಳಲ್ಲಿ ಕೆಲಸ ಮಾಡುವ ಅನೇಕ ಮಹಿಳೆಯರಲ್ಲಿ ಒಬ್ಬರಾದ ಎ. ಮರಿಯಾಯಿ. ಈ ಕೆಲಸವು ತುಂಬಾ ಕಷ್ಟಕರವಾ ದುದು, ವೇತನವು ಬಹಳ ಕಡಿಮೆ ಮತ್ತು ಇದು ಅವರ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ವೀಕ್ಷಿಸಿ: 'ಕೊರೈನಲ್ಲಿರುವ ಈ ಹೊಲಗಳು ನನ್ನ ಎರಡನೇ ಮನೆ'


PHOTO • M. Palani Kumar

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಉ ಪ್ಪಿನ ಆಗರದ ಕೆಲಸಗಾರರೊಬ್ಬರು ಸುಡುವ ಬಿಸಿಲಿನಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಿರುವುದು. ಇವರು ಪ್ರತಿಕೂಲ ವಾತಾವರಣವನ್ನೂ ಗಮನಿಸದೆ ನಮ್ಮ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಉಪ್ಪನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ವೀಕ್ಷಿಸಿ: ತೂತುಕುಡಿಯ ಉಪ್ಪಿನ ಆಗರಗಳ ರಾಣಿ


PHOTO • M. Palani Kumar

ಪಿ. ಮಗರಾಜನ್ ತಮಿಳುನಾಡಿನ ಕೆಲವೇ ಕೆಲವು ಕೊಂಬು ಕಲಾವಿದರಲ್ಲಿ ಒಬ್ಬರು. ಆನೆ ಸೊಂಡಿಲಿನ ಆಕಾರದ ಈ ಗಾಳಿ ವಾದ್ಯವನ್ನು ನುಡಿಸುವ ಕಲೆಯು ರಾಜ್ಯದಾದ್ಯಂತ ಅಳಿವಿನಂಚಿಗೆ ತಲುಪಿದೆ , ಇದು ಕಲಾವಿದರನ್ನು ಕೆಲಸ ಮತ್ತು ಹಣದಿಂದ ದೂರವಿಡು ತ್ತ ದೆ. ಈ ಲೇಖನ ಓದಿ : ಮಧುರೈ: ಮೌನವಾಗುತ್ತಿರುವ ಕೊಂಬಿನ ಸದ್ದು


PHOTO • M. Palani Kumar

ಕೊವಿಡ್-19 ಲಾಕ್‌ಡೌನ್ ಸಮಯದಲ್ಲಿ, ಚೆನ್ನೈನಲ್ಲಿರುವ ನೈರ್ಮಲ್ಯ ಕಾರ್ಮಿಕರು ಕೆಲಸಕ್ಕೆ ಹೋಗಲು ಬಹಳ ದೂರ ನಡೆಯಬೇಕಾಗಿತ್ತು, ಯಾವುದೇ ರಕ್ಷಣಾ ಸಾಧನಗಳಿಲ್ಲದೆ ನಗರವನ್ನು ಸ್ವಚ್ಛಗೊಳಿಸಬೇಕಾಗಿತ್ತು ಮತ್ತು ಅವರಿಗೆ ಆಗ ಒಂದು ದಿನದ ರಜೆಯನ್ನು ಸಹ ನಿರಾಕರಿಸಲಾ ಗಿತ್ತು . ನೋಡಿ: ಸಫಾಯಿ ಕರ್ಮಚಾರಿಗಳು: ಅಮಾನವೀಯ ಪರಿಸ್ಥಿತಿಗಳಲ್ಲಿನ ಕೆಲಸಕ್ಕೆ ಅಪಮಾನಕರ ಸಂಬಳ


PHOTO • M. Palani Kumar

ದೈಹಿಕ ಅಂಗವೈಕಲ್ಯದ ಸಂತ್ರಸ್ತರಾದ ರೀಟಾ ಅಕ್ಕ ಅವರು ಸ್ವೀಪರ್ ಆಗಿದ್ದು, ಚೆನ್ನೈ ಕೊಟ್ಟೂರುಪುರಂ ಪ್ರದೇಶದಲ್ಲಿ ಮುಂಜಾನೆ ಕಸವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಆದರೆ, ಸಾಯಂಕಾಲ ನಾಯಿಗಳಿಗೆ ಆಹಾರ ನೀಡಿ ಅವುಗಳೊಡನೆ ಮಾತನಾಡುತ್ತಾ ಕಾಲ ಕಳೆಯುತ್ತಾ ರೆ . ವೀಕ್ಷಿಸಿ: ನಾಯಿಗಳನ್ನೇ ನನ್ನವರೆಂದುಕೊಳ್ಳುವ ರೀಟಾ ಅಕ್ಕ


PHOTO • M. Palani Kumar

ಡಿ ಮುತ್ತುರಾಜ ಮತ್ತು ಅವರ ಪುತ್ರ ವಿಶಾಂತ್ ರಾಜಾ. ಬಡತನ, ಅನಾರೋಗ್ಯ ಮತ್ತು ದೈಹಿಕ ನ್ಯೂನತೆಗಳ ಹೊರತಾಗಿಯೂ, ಮುತ್ತುರಾಜ ಮತ್ತು ಅವರ ಪತ್ನಿ ಎಂ. ಚಿತ್ರಾ ಜೀವನವನ್ನು ಧೈರ್ಯ ಮತ್ತು ಭರವಸೆಯಿಂದ ಎದುರಿಸುತ್ತಾರೆ. ವೀಕ್ಷಿಸಿ: ಚಿತ್ರಾ ಮತ್ತು ಮುತ್ತುರಾಜ: ಭರವಸೆಯ ಬೆಳ್ಳಿಕಿರಣದಂತಹ ಬದುಕು


PHOTO • M. Palani Kumar

ಆರ್‌ ಎಳಿಲರಸನ್‌, ಓರ್ವ ಕಲಾವಿದ, ಇವರು ತಮ್ಮ ಕಲೆಯ ಮೂಲಕ ತಮಿಳುನಾಡಿನ ಲಕ್ಷಾಂತರ ಮಕ್ಕಳ ಬದುಕಿನಲ್ಲಿ ಬೆಳಕು ಮತ್ತು ಸಂತಸ ತಂದಿದ್ದಾರೆ. ಓದಿರಿ: ಎಳಿಲ್‌ ಅಣ್ಣ: ಮಣ್ಣಿನಿಂದ ನನ್ನ ನಿರ್ಮಿಸಿದವರು


PHOTO • M. Palani Kumar

ಪಳನಿಯವರ ತಾಯಿ, ತಿರುಮಾಯಿಯವರು ಅಪರೂಪಕ್ಕೊಮ್ಮೆ ಸಂತಸದಲ್ಲಿರುವುದು. ಆಕರ: ಬದುಕು ಕಟ್ಟಿಕೊಂಡ ಬೀದಿ ದೀಪದಡಿ ಕುಳಿತು ಅಮ್ಮನ ಬದುಕಿನ ಕತೆ ಧೇನಿಸುತ್ತಾ…

ಅನುವಾದ : ಶಂಕರ . ಎನ್ . ಕೆಂಚನೂರು

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru