ಪೀಪಲ್ಸ್ ಆರ್ಕೈವ್ಸ್ ಆಫ್ ರೂರಲ್ ಇಂಡಿಯಾ (ಪರಿ) ಪತ್ರಿಕೋದ್ಯಮಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರೇಮ್ ಭಾಟಿಯಾ ಪ್ರಶಸ್ತಿ -2020 ಅನ್ನು ನೀಡಲಾಗಿದೆ. ಭಾಟಿಯಾ ಮೆಮೋರಿಯಲ್ ಟ್ರಸ್ಟ್ ಈ ಪ್ರಶಸ್ತಿಯನ್ನು ತಂಡಕ್ಕೆ ಪ್ರದಾನ ಮಾಡಿತು, "ಹವಾಮಾನ ಬದಲಾವಣೆ ಮತ್ತು ಗ್ರಾಮೀಣ ಭಾರತದಲ್ಲಿ ಸಾಂಕ್ರಾಮಿಕ ಮಹಾಮಾರಿಯ ಪ್ರಭಾವ ಸೇರಿದಂತೆ ಪ್ರಾದೇಶಿಕ ಸುದ್ದಿಗಳ ಸರಣಿಯನ್ನು ಒಳಗೊಂಡಿದ್ದಕ್ಕಾಗಿ" ಪರಿ ತಂಡಕ್ಕೆ ಪ್ರಶಸ್ತಿಯನ್ನು ನೀಡಲಾಗಿದೆ. "ಪ್ರಾದೇಶಿಕ ಪತ್ರಕರ್ತರು, ಸ್ವಯಂಸೇವಕರು ಮತ್ತು ಸಮರ್ಪಿತ ತಂಡದ ಒಟ್ಟು ಪ್ರಯತ್ನದ ಫಲವಾಗಿ, ಪ್ರಶಸ್ತಿಯನ್ನು ಪರಿಗೆ ನೀಡಲಾಗಿದೆ”ಯೆಂದು ಟ್ರಸ್ಟ್‌ ಹೇಳಿದೆ.

ಪರಿಯ ಹೆಗ್ಗುರುತಾಗಿರುವ ಮತ್ತು ಪ್ರಸ್ತುತ ಪ್ರಕಟವಾಗುತ್ತಿರುವ ಹವಾಮಾನ ಬದಲಾವಣೆಯ ಕುರಿತ ಸರಣಿಯು ಇಲ್ಲಿಯವರೆಗೆ 11 ವಿವಿಧ ರಾಜ್ಯಗಳಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದೆ. ಅವರ ಕಥೆಗಳನ್ನು ದಿನನಿತ್ಯದ ಸಮಗ್ರ ಮತ್ತು ಅವಿಸ್ಮರಣೀಯ ರೀತಿಯಲ್ಲಿ ದೈನಂದಿನ ಜೀವನದಲ್ಲಿ ಜನರ ಅನುಭವಗಳನ್ನು ಆಧರಿಸಿ ಸಾರ್ವಜನಿಕ ಮತ್ತು ಸಮುದಾಯದ ಭಾಷೆಯಲ್ಲಿ ಪ್ರಕಟಿಸಲಾಗುತ್ತಿದೆ

ಪರಿ ತನ್ನ ಸಾಟಿಯಿಲ್ಲದ ಕವರೇಜ್‌ ಮೂಲಕ 20  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 30ಕ್ಕೂ ಹೆಚ್ಚು ಪ್ರದೇಶಗಳಲ್ಲಿನ ಸಾಂಕ್ರಾಮಿಕ ಪಿಡುಗು ಮತ್ತು ಲಾಕ್‌ಡೌನ್ ಪರಿಸ್ಥಿತಿ‌ ಕುರಿತು100ಕ್ಕೂ ಹೆಚ್ಚು ಲೇಖನಗಳು ಮತ್ತು ದಾಖಲೆಗಳನ್ನು ಇದುವರೆಗೆ ಪ್ರಕಟಿಸಿದೆ . ಈ ವರದಿಗಳಲ್ಲಿ ವಲಸೆ ಕಾರ್ಮಿಕರು, ಹಾಗೂ ಗ್ರಾಮೀಣ ಭಾರತದಲ್ಲಿ ಆರ್ಥಿಕತೆಯೊಂದಿಗೆ ಸೂಕ್ಷ್ಮವಾಗಿ ಬೆರೆತಿರುವ - ರೈತರು, ದೋಣಿಯವರು, ನಗರ ಮತ್ತು ಗ್ರಾಮೀಣ ಕಾರ್ಮಿಕರು, ಕಬ್ಬು ಕತ್ತರಿಸುವವರು, ನೇಕಾರರು, ಆಟಿಕೆ ತಯಾರಕರು, ಇತರ ಸ್ಥಳೀಯ ಕಲೆಗಾರರು ಮತ್ತು ಕುಶಲಕರ್ಮಿಗಳು, ನೈರ್ಮಲ್ಯ ಕಾರ್ಮಿಕರು, ಸ್ಥಳಾಂತರಗೊಂಡ ಕಾರ್ಮಿಕರು, ಮುಂಬಯಿಯ ಪ್ರಮುಖ ಆಸ್ಪತ್ರೆಗಳ ಹೊರಗಿನ ಫುಟ್‌ಪಾತ್‌ಗಳಲ್ಲಿ ಕಾಯುತ್ತಿರುವ ಗ್ರಾಮೀಣ ಪ್ರದೇಶದ ಕ್ಯಾನ್ಸರ್ ರೋಗಿಗಳು, ಅಲೆಮಾರಿ ಪಾದ್ರಿಗಳು, ದಿನಗೂಲಿಗಳು, ಜಾನಪದ ಕಲಾವಿದರು, ಮೀನುಗಾರರು, ಕ್ಷೌರಿಕರು, ಇಟ್ಟಿಗೆ ಗೂಡು ಕಾರ್ಮಿಕರು, ಹಾರ್ಮೋನಿಯಂ ರಿಪೇರಿ ಮಾಡುವವರು ಮತ್ತು ದಲಿತರು ಮತ್ತು ಆದಿವಾಸಿಗಳು ವಿವಿಧ ಉದ್ಯೋಗಗಳು ಹೀಗೆ ಜನಸಾಮಾನ್ಯರ ಬದುಕಿಗೆ ಸಂಬಂಧಿಸಿ ಪ್ರತಿಯೊಂದು ಉದ್ಯೋಗ ಸೇರಿದೆ.

ಖ್ಯಾತ ಪತ್ರಕರ್ತ ಪ್ರೇಮ್ ಭಾಟಿಯಾ (1911-1995) ಅವರ ನೆನಪಿಗಾಗಿ 1995ರಲ್ಲಿ ಪ್ರೇಮ್ ಭಾಟಿಯಾ ಪ್ರಶಸ್ತಿಗಳನ್ನು ಸ್ಥಾಪಿಸಲಾಯಿತು, ಅವರು ಪ್ರತಿನಿಧಿಸುತ್ತಿದ್ದ ಮೌಲ್ಯಗಳನ್ನು ಪ್ರಚಾರ ಮಾಡಲು: ವಸ್ತುನಿಷ್ಠ ವರದಿಗಾರಿಕೆ, ಸತ್ಯದ ನಿರ್ಭೀತ ಅನ್ವೇಷಣೆ ಮತ್ತು ಭಾರತದಲ್ಲಿ ಪತ್ರಿಕೋದ್ಯಮದ ಗುಣಮಟ್ಟವನ್ನು ಸುಧಾರಿಸುವ ಬದ್ಧತೆಯಿರುವವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ರಾಜಕೀಯ ವಿಷಯಗಳ ಬಗ್ಗೆ ವರದಿಗಾಗಿ ಈ ವರ್ಷದ ಪ್ರಶಸ್ತಿಯನ್ನು ಇಂಡಿಯನ್ ಎಕ್ಸ್‌ಪ್ರೆಸ್‌ನ ದೀಪಂಕರ್ ಘೋಸ್ ಅವರಿಗೆ ನೀಡಲಾಯಿತು. ಅವರಿಗೆ ನಮ್ಮ ಅಭಿನಂದನೆಗಳು.

2014ರಲ್ಲಿ ಸ್ಥಾಪನೆಯಾದ ನಂತರ ಇದು ಪರಿ ಪಡೆಯುತ್ತಿರುವ 24ನೇ ಪ್ರಶಸ್ತಿ. ನಮಗೆ ಇದುವರೆಗೆ ಲಭಿಸಿದ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ:

ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ): 2015ರಿಂದ 2020ರವರೆಗೆ ಪಡೆದ ಪ್ರಶಸ್ತಿಗಳು

24. ಪ್ರೇಮ್ ಭಾಟಿಯಾ ಮೆಮೋರಿಯಲ್ ಟ್ರಸ್ಟ್, ನವದೆಹಲಿ, 2020
ಪರಿಸರ ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಮಾಧ್ಯಮಗಳ ಪಾತ್ರಕ್ಕಾಗಿ ಪರಿ ತಂಡ ಪ್ರೇಮ್ ಭಾಟಿಯಾ ಪ್ರಶಸ್ತಿಯನ್ನು ಗೆದ್ದುಕೊಂಡಿತು. "ಗ್ರಾಮೀಣ ಭಾರತದಲ್ಲಿ ಲಾಕ್‌ಡೌನ್ ಪರಿಣಾಮ, ಸಾಂಕ್ರಾಮಿಕ ಪಿಡುಗಿನ ಪರಿಣಾಮದ ಕುರಿತು ವ್ಯಾಪಕ ಕ್ಷೇತ್ರ ವರದಿಗಳಿಗಾಗಿ" ಈ ಪ್ರಶಸ್ತಿಯನ್ನು ನೀಡಲಾಗಿದೆ.

23. ಪಬ್ಲಿಕ್‌ ರಿಲೇಷನ್‌ ಕೌನ್ಸಿಲ್‌ ಆಫ್‌ ಇಂಡಿಯಾ, ಬೆಂಗಳೂರು, 2020
ತಮಿಳುನಾಡಿನ ಆಳ ಸಮುದ್ರ ಪ್ರದೇಶಗಳಲ್ಲಿ ಸಮುದ್ರ ಜೊಂಡು ಆರಿಸುವವರ ಬಗ್ಗೆ ವರದಿ ಮಾಡಿದ ನಮ್ಮ ಪರಿ ಫೆಲೊ/ವರದಿಗಾರ ಪಳನಿಕುಮಾರ್ ವರ್ಷದ ಅತ್ಯುತ್ತಮ ವರದಿಗಾರ ಪ್ರಶಸ್ತಿ ಪಡೆದರು. ಸಚಿತ್ರ ವರದಿಯಾಗಿ ಪ್ರಕಟವಾದ ಈ ಲೇಖನವು ತಮಿಳುನಾಡಿನ ಭಾರತಿ ನಗರದಲ್ಲಿರುವ ಮಹಿಳಾ ಮೀನುಗಾರರ ಅಸಾಧಾರಣ ಕಾರ್ಯಗಳ ಬಗ್ಗೆ ಹೇಳುತ್ತದೆ. ಹವಾಮಾನ ಬದಲಾವಣೆ, ಸಮುದ್ರ ಸಂಪನ್ಮೂಲಗಳ ಅತಿಯಾದ ಶೋಷಣೆ ಮತ್ತು ಅವರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದನ್ನು ವರದಿಯಲ್ಲಿ ಚರ್ಚಿಸಲಾಗಿತ್ತು.

22. ಪಬ್ಲಿಕ್‌ ರಿಲೇಷನ್‌ ಕೌನ್ಸಿಲ್‌ ಆಫ್‌ ಇಂಡಿಯಾ, ಬೆಂಗಳೂರು, 2020
ಪರಿ ರಿಪೋರ್ಟರ್‌ ಜ್ಯೋತಿ ಶಿನೋಲಿ ಅವರಿಗೆ ಕಮ್ಯುನಿಕೇಟರ್ ಆಫ್‌ ದಿ ಇಯರ್‌ - ವರ್ಷದ ಅತ್ಯುತ್ತಮ ವರದಿ ವಿಷಯಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ವರದಿಯು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಶಾಲೆಯೊಂದರ ಕುರಿತಾಗಿದ್ದು , ಅಲ್ಲಿನ ದೀರ್ಘ ಕಾಲದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಸಮುದಾಯದ ಬಡ ಮಕ್ಕಳಿಗಾಗಿ ಫಾನ್ಸೆ ಪಾರ್ಧಿಯ ಶಿಕ್ಷಕರೊಬ್ಬರು ಶಾಲೆಯೊಂದನ್ನು ಪ್ರಾರಂಭಿಸಿದ್ದರು. ಇದನ್ನು 2019ರ ಜೂನ್ 6ರಂದು ನೆಲಸಮಗೊಳಿಸಲಾಯಿತು, ಇದು ಅಲ್ಲಿನ ಜನರನ್ನು ಆತಂಕ ಮತ್ತು ಅನಿಶ್ಚಿತತೆಗೆ ಈಡು ಮಾಡಿತ್ತು.

21. ಪ್ರೆಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಇಂಟರ್ನ್ಯಾಷನಲ್ ರೆಡ್ ಕ್ರಾಸ್, ನವದೆಹಲಿ, 2019
ಪರಿ ಫೆಲೊ ಊರ್ವಶಿ ಸರ್ಕಾರ್ ಅವರ ಲೇಖನ ‘ ನಮ್ಮ ಮನೆಗಳು ಕಣ್ಮರೆಯಾಗುತ್ತಿವೆ. ಯಾರೂ ಕಾಳಜಿ ವಹಿಸುತ್ತಿಲ್ಲ ' ಅತ್ಯುತ್ತಮ ಪ್ರಬಂಧ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಗೆದ್ದಿದೆ. ಈ ಲೇಖನವು ಹವಾಮಾನ ಬದಲಾವಣೆಯ ಕಾರಣ ಸ್ಥಳಾಂತರ, ಪಶ್ಚಿಮ ಬಂಗಾಳದ ಸಾಗರ್ ಮತ್ತು ಕೋರಮರ ದ್ವೀಪಗಳ ನಡುವೆ ಜನರ ವಲಸೆ, ಮುಳುಗುತ್ತಿರುವ ದ್ವೀಪಗಳು, ಮನೆಗಳು ಮತ್ತು ಜೀವನೋಪಾಯಗಳ ಬಗ್ಗೆ ಹೇಳುತ್ತದೆ.

20. ಜಿಯೋ ಮಾಮಿ ಮುಂಬೈ ಚಲನಚಿತ್ರೋತ್ಸವ 2019 (ಅಕ್ಟೋಬರ್ 17-24)
ಪರಿ ಫೆಲೋ ಯಶಸ್ವಿನಿ ರಘುನಂದನ್ ಅವರ ಚಲನಚಿತ್ರ ದಟ್ ಕ್ಲೌಡ್ ನೆವರ್ ಲೆಫ್ಟ್ ಉತ್ಸವದಲ್ಲಿ ಇಂಡಿಯಾ ಗೋಲ್ಡ್ ವಿಭಾಗಕ್ಕೆ ಆಯ್ಕೆ ಮಾಡಲಾಯಿತು.

19. FILAF ಚಲನಚಿತ್ರೋತ್ಸವ, ಪರ್ಪಿಗ್ನಾನ್, ಫ್ರಾನ್ಸ್: ಫೆಸ್ಟಿವಲ್ ಇಂಟರ್ನ್ಯಾಷನಲ್ ಡು ಲಿವ್ರೆ ಡಿ ಆರ್ಟ್ ಎಟ್ ಡು ಫಿಲ್ಮ್, 2019
ಪರಿ ಫೆಲೋ ಯಶಸ್ವಿನಿ ರಘುನಂದನ್ ಫ್ರಾನ್ಸಿನಲ್ಲಿ ನಡೆದ FILAF ಚಲನಚಿತ್ರೋತ್ಸವದಲ್ಲಿ (ಫೆಸ್ಟಿವಲ್ ಇಂಟರ್ನ್ಯಾಷನಲ್ ಡು ಲಿವ್ರೆ ಡಿ ಆರ್ಟ್ ಎಟ್ ಡು ಫಿಲ್ಮ್) ತನ್ನ ಚಿತ್ರ 'ದಟ್ ಕ್ಲೌಡ್ ನೆವರ್ ಲೆಫ್ಟ್' ಚಿತ್ರಕ್ಕಾಗಿ ಗೋಲ್ಡ್ FILAF ಅನ್ನು ಗೆದ್ದಿದ್ದಾರೆ.

18. ಟುಟ್ಟಿ ಐ ಪ್ರೀಮಿ ಡೆಲ್ ಪೆಸಾರೊ ಫಿಲ್ಮ್ ಫೆಸ್ಟ್, ಪೆಸಾರೊ, ಇಟಲಿ 2019
ಇಟಲಿಯ ಪೆಸಾರೊದಲ್ಲಿ ನಡೆದ ಈ ಉತ್ಸವದಲ್ಲಿ ಪರಿ ಫೆಲೋ ಯಶಸ್ವಿನಿ ರಘುನಂದನ್ ದಟ್ ಕ್ಲೌಡ್ ನೆವರ್ ಲೆಫ್ಟ್ ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು.

17. ಮುಂಬೈ ಪ್ರೆಸ್ ಕ್ಲಬ್, 2019
ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆ ವಿಭಾಗದಲ್ಲಿ, ಬ್ಯಾರಿ ಪತ್ರಕರ್ತೆ ಜ್ಯೋತಿ ಶಿನೋಲಿ ಅವರು ಮೇ 3, 2018 ರಂದು ಪರಿಯಲ್ಲಿ ಪ್ರಕಟವಾದ ‘ ದಿನಕ್ಕೆ 6000 ಎಲೆಗಳನ್ನು ಸಂಗ್ರಹಿಸುವುದು ’ ಎಂಬ ವರದಿಗಾಗಿ ರೆಡ್‌ ಇಂಕ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

16. ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್, ನವದೆಹಲಿ, 2019
ಪರಿಯಲ್ಲಿ ಪ್ರಕಟವಾದ ಮರಾಠವಾಡ ಕುರಿತ ಲೇಖನಗಳ ಸರಣಿಗಾಗಿ ರಾಮ್‌ನಾಥ್ ಗೋಯೆಂಕಾ ಪ್ರಶಸ್ತಿಯನ್ನು (ಅನ್‌ಕವರಿಂಗ್ ಇಂಡಿಯಾ ಇನ್ವಿಸಿಬಲ್ ವಿಭಾಗದಲ್ಲಿ) ಪರಿ ಫೆಲೋ ಪಾರ್ತ್ ಎಂ. ಎನ್‌ ಪಡೆದಿದ್ದಾರೆ.

15. ಸ್ಟೇಟ್ಸ್‌ಮನ್, ಕೋಲ್ಕತಾ, 2018
ಪರಿಯ ಲೇಖಕಿ ಪೂಜಾ ಅವಸ್ಥಿ ಅವರು ಜುಲೈ 5 ಮತ್ತು ಆಗಸ್ಟ್ 3, 2017ರಂದು ಪರಿಯಲ್ಲಿ ಪ್ರಕಟವಾದ ಎರಡು ಲೇಖನಗಳಿಗೆ ಗ್ರಾಮೀಣ ವರದಿಗಾಗಿ ನೀಡುವ ಸ್ಟೇಟ್ಸ್‌ಮನ್ ಪ್ರಶಸ್ತಿಯನ್ನು ಗೆದ್ದರು: ಸೋಲಿಸಲ್ಪಟ್ಟರು ಆದರೆ ತಲೆ ಬಾಗಿಲ್ಲ - ಸುನಂದ ಸಾಹೂ ಅವರ ಹೋರಾಟ ಹಾಗೂ ಉಪ್ಪಿನಕಾಯಿ ಮತ್ತು ಹಪ್ಪಳದಾಚೆಗಿರುವ ಡೋಲು ಮತ್ತು ಕನಸುಗಳು - ಇವೆರಡು ಪ್ರಶಸ್ತಿ ಪಡೆದ ಲೇಖನ ವರದಿಗಳು.

14. ಪಾಪುಲೇಷನ್‌ ಫಸ್ಟ್, ನವದೆಹಲಿ, 2018
ಪರಿ ಫೆಲೊ ಊರ್ವಶಿ ಸರ್ಕಾರ್‌ ಅವರಿಗೆ ಜೆಂಡರ್‌ ಸೆನ್ಸಿಟಿವಿಟಿ ವಿಷಯಕ್ಕಾಗಿ ಲಾಡ್ಲಿ ಮೀಡಿಯಾ ಮತ್ತು ಅಡ್ವರ್ಟೈಸ್ ಪ್ರಶಸ್ತಿಯನ್ನು‌ ಪ್ರಶಸ್ತಿಯನ್ನು 2017ರ ಫೀಚರ್‌ಗಳ ವಿಭಾಗದಲ್ಲಿ ಪಡೆದರು. ಅವರ ಪ್ರಶಸ್ತಿ ವಿಜೇತ ಲೇಖನ ʼಹುಲಿಗಳಿಂದ ವಿಧವೆಯಾದರು, ಸರ್ಕಾರದಿಂದ ತಿರಸ್ಕೃರಾದರುʼ ಪರಿಯಲ್ಲಿ ಅಕ್ಟೋಬರ್ 12, 2017ರಂದು ಪ್ರಕಟವಾಯಿತು.

13. ಯುರೋಪಿಯನ್ ಕಮಿಷನ್, ಬ್ರಸೆಲ್ಸ್, ಬೆಲ್ಜಿಯಂ, 2018
ಪರಿ ಫೆಲೋ ಆಗಿರುವ ಪಾರ್ಥ್‌ ಎಮ್‌.ಎನ್‌. ಅವರು ಫೆಬ್ರವರಿ 6, 2018ರಂದು ಪರಿಯಲ್ಲಿ ಪ್ರಕಟವಾದ 2000 ಗಂಟೆಗಳ ಕಾಲ ಕಬ್ಬು ಕತ್ತರಿಸುವಿಕೆ ಎನ್ನುವ ವರದಿಗಾಗಿ ಲೊರೆಂಜೊ ನಟಾಲಿ ಮಾಧ್ಯಮ ಪ್ರಶಸ್ತಿಯನ್ನು ಪಡೆದರು

12. ದಕ್ಷಿಣ ಏಷ್ಯಾ ಕಿರುಚಿತ್ರೋತ್ಸವ, ಕೋಲ್ಕತಾ, 2018
ಪರಿಯ 15 ವೀಡಿಯೊ ಫಿಲ್ಮ್‌ಗಳನ್ನು ಎಸ್‌ಎಎಸ್‌ಎಫ್‌ಎಫ್‌-2018ಕ್ಕೆ ಆಯ್ಕೆ ಮಾಡಲಾಗಿದೆ: ಸ್ಪರ್ಧಾತ್ಮಕ ಸಾಕ್ಷ್ಯಚಿತ್ರ ವಿಭಾಗದಲ್ಲಿ 13 ಮತ್ತು ಅಧಿಕೃತ ಪನೋರಮಾ ವಿಭಾಗದಲ್ಲಿ 2 ಫಿಲ್ಮ್‌ಗಳು. (ಫಿಲ್ಮ್‌ಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.)

11. ಪರಿಗಿ ಹನುಮಂತ ರಾವ್ ಫೌಂಡೇಷನ್, ಆಂಧ್ರಪ್ರದೇಶ, 2018
ಪರಿಯಲ್ಲಿ ಪ್ರಕಟವಾದ ಲೇಖನಗಳಿಗಾಗಿ ಪರಿಯ ರಾಹುಲ್ ಎಂ 2017-2018ರ ಪರಿಗಿ ಹನುಮಂತ ರಾವ್ ಪತ್ರಕರ್ತ ಪ್ರಶಸ್ತಿಯನ್ನು ಗೆದ್ದಿದ್ದಾರೆ.

10. ವಸಂತ್ ವ್ಯಾಖ್ಯಾನ್‌ಮಾಲಾ, ಪುಣೆ, ಮಹಾರಾಷ್ಟ್ರ, 2018
ಪ್ರಥಮ ನ್ಯಾಯಮೂರ್ತಿ ಎಂ.ಜಿ. ರಾನಡೆ ಪ್ರಶಸ್ತಿ (ಉದ್ಘಾಟನಾ ವರ್ಷ), ಹೊಸ ಪತ್ರಿಕೋದ್ಯಮದ ವಿಶಿಷ್ಟ ಸ್ವರೂಪವನ್ನು ಗುರುತಿಸಿ “ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಎಂಬ ಉಪಕ್ರಮಕ್ಕಾಗಿ.”

9. ಶ್ರೀ ಮುರುಘಾಮಠ, ಚಿತ್ರದುರ್ಗ, ಕರ್ನಾಟಕ, 2017
"ಪತ್ರಿಕೋದ್ಯಮ ಚಳವಳಿಯ ರೂಪದಲ್ಲಿ ಗ್ರಾಮೀಣ ಜನರಿಗೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮೂಲಕ ಸಲ್ಲಿಸಿದ ಸೇವೆಗಾಗಿ" ಬಸವಶ್ರೀ ಪ್ರಶಸ್ತಿ.

8. ಅಪ್ಪನ್ ಮೆನನ್ ಸ್ಮಾರಕ ಸಮಿತಿ, ನವದೆಹಲಿ, 2017
ಅಪ್ಪನ್ ಮೆನನ್ ಸ್ಮಾರಕ ಪ್ರಶಸ್ತಿ “ಗ್ರಾಮೀಣ ಭಾರತದ ಜೀವನವನ್ನು ದಾಖಲಿಸಲು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಿಂದ ಮಾಡುತ್ತಿರುವ ಕೆಲಸಗಳಿಗಾಗಿ.”

7. ಸಿ-ಶೆಲ್ ಮೀಡಿಯಾ ಮತ್ತು ಸಾಹಿತ್ಯ ಪ್ರಶಸ್ತಿಗಳು, ದುಬೈ, 2017
ಸಿ-ಶೆಲ್ ಮೀಡಿಯಾ ಪ್ರಶಸ್ತಿ "ಗ್ರಾಮೀಣ ಭಾರತದ ಅಸಾಧಾರಣ ಮತ್ತು ಮತ್ತು ಆಳವಾದ ವರದಿಗಳ ಪರಿಯ ಅತ್ಯುತ್ತಮ ಸಾಧನೆಗಾಗಿ".

6. ಕೇಸರಿ ಮಹಾರತ್ತ ಟ್ರಸ್ಟ್ ಮತ್ತು ತಿಲಕ್ ಮಹಾರಾಷ್ಟ್ರ ವಿದ್ಯಾಪೀಠ, ಪುಣೆ, 2017
ಪಿ. ಸಾಯಿನಾಥ್/ಪರಿಗೆ ಪತ್ರಿಕೋದ್ಯಮದಲ್ಲಿನ ಶ್ರೇಷ್ಠತೆಗಾಗಿ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಪ್ರಶಸ್ತಿ (ಅವರ ಪರಿ ಸ್ಥಾಪನೆಯನ್ನು ಗುರುತಿಸಿ)

5. ಅನಂತ್ ಭಾಲೇರಾವ್ ಸ್ಮೃತಿ ಫೌಂಡೇಶನ್, ಔರಂಗಾಬಾದ್, 2016
"ಗ್ರಾಮೀಣ ಭಾರತದಲ್ಲಿ ವ್ಯಾಪಕವಾದ ಸುದ್ದಿ ಸಂಗ್ರಹ,  ಪೀಪಲ್ಸ್ ಆರ್ಕೈವ್ಸ್ ಆಫ್‌ ರೂರಲ್‌ ಇಂಡಿಯಾ ಮತ್ತು ಭಾರತೀಯ ಭಾಷೆಯಲ್ಲಿ ಪತ್ರಿಕೋದ್ಯಮವನ್ನು ಉತ್ತೇಜಿಸುವ ವಿಧಾನ"ಕ್ಕಾಗಿ ಅನಂತ್ ಭಾಲೇರಾವ್ ಸ್ಮೃತಿ ಪುರಸ್ಕಾರ್.‌

4. ಕ್ರಾಂತಿಸಿಂಹ ನಾನಾ ಪಾಟೀಲ್ ಫೌಂಡೇಷನ್, ಸಾಂಗ್ಲಿ, ಮಹಾರಾಷ್ಟ್ರ, 2016
ಪಿ. ಸಾಯಿನಾಥ್ ಅವರಿಗೆ (ಪರಿಯ ಮಹತ್ವವನ್ನು ಗೌರವಿಸಿ) ಕ್ರಾಂತಿಸಿಂಹ ನಾನಾ ಪಾಟೀಲ್ ಸ್ಮಾರಕ ಪ್ರಶಸ್ತಿ.

3. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಭಾರತ ಸರ್ಕಾರ, ನವದೆಹಲಿ, 2016
ಮೇ 2, 2016ರಂದು ಪರಿಯಲ್ಲಿ ಬಿಡುಗಡೆಯಾದ ವೀವ್‌ಸ್‌ ಆಫ್‌ ಮಹೇಶ್ವರ್ ಚಿತ್ರಕ್ಕಾಗಿ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದಲ್ಲಿ 2016ರ ಅತ್ಯುತ್ತಮ ಜಾಹೀರಾತು ಚಿತ್ರಕ್ಕಾಗಿ ರಜತ ಕಮಲ ಪ್ರಶಸ್ತಿಯನ್ನು ಪರಿಯ ಫೆಲೋಗಳಾದ ನೀತಿ ಕಾಮತ್ ಮತ್ತು ಕೇಯಾ ವಾಸ್ವಾನಿ ಗೆದ್ದಿದ್ದಾರೆ.

2. ಪ್ರಫುಲ್ ಬಿದ್ವಾಯ್ ಸ್ಮಾರಕ ಸಮಿತಿ, ನವದೆಹಲಿ, 2016
“ಪರಿ ರೈತರ ಸಮಸ್ಯೆಗಳ ವರದಿ, ಚರ್ಚೆಯ ವಿಷಯದಲ್ಲಿ ಸ್ಫೂರ್ತಿ ಮತ್ತು ಮಾಹಿತಿಯ ಆಗರವಾಗಿರುವ ಕಾರಣಕ್ಕಾಗಿ” ಪ್ರಥಮ ಪ್ರಫುಲ್ ಬಿದ್ವಾಯ್ ಸ್ಮಾರಕ ಪ್ರಶಸ್ತಿ

1. ಪಾಪುಲೇಷನ್‌ ಫಸ್ಟ್, ಮುಂಬೈ, 2015
ಪರಿ ಫೆಲೋ ಪುರುಷೋತ್ತಮ್ ಠಾಕೂರ್ ಅವರು ಲಾಡ್ಲಿ ಮೀಡಿಯಾ ಮತ್ತು ಅಡ್ವರ್ಟೈಸಿಂಗ್ ಪ್ರಶಸ್ತಿಯನ್ನು ಲಿಂಗ ಸಂವೇದನೆ‌ ವಿಷಯಕ್ಕಾಗಿ 2014-15ರಲ್ಲಿ ಅತ್ಯುತ್ತಮ ತನಿಖಾ ವರದಿ ವಿಭಾಗದಲ್ಲಿ‌ ನೀಡಲಾಯಿತು. ಪ್ರಶಸ್ತಿ ವಿಜೇತ ‘ ಮೇಕಿಂಗ್ ಹಿಸ್ಟರಿ, ಹೆಡ್ಡಿಂಗ್‌ ಫಾರ್ ಎ ಹಂಡ್ರೆಡ್’ , ಮಾರ್ಚ್ 20, 2015ರಂದು ಪರಿಯಲ್ಲಿ ಪ್ರಕಟವಾಯಿತು.

ವಿಶೇಷ ಉಲ್ಲೇಖ: ಏಪ್ರಿಲ್ 2020 ರಲ್ಲಿ, ಯುನೈಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್ ತಮ್ಮ ವೆಬ್ ಆರ್ಕೈವ್‌ಗಳಲ್ಲಿ ಸೇರಿಸಲು ಪರಿ ವೆಬ್‌ಸೈಟ್ ಅನ್ನು ಆಯ್ಕೆ ಮಾಡಿದ್ದಾರೆ ಎಂದು ನಮಗೆ ಮಾಹಿತಿ ನೀಡಿದರು: "ನಿಮ್ಮ ವೆಬ್‌ಸೈಟ್ ಈ ಸಂಗ್ರಹ ಮತ್ತು ಐತಿಹಾಸಿಕ ದಾಖಲೆಯ ಪ್ರಮುಖ ಭಾಗವೆಂದು ನಾವು ಪರಿಗಣಿಸುತ್ತೇವೆ."

ದಕ್ಷಿಣ ಏಷ್ಯಾ ಕಿರುಚಿತ್ರೋತ್ಸವ, ಮಾರ್ಚ್ 2018: ಪರಿ ವೀಡಿಯೊಗಳು/ಚಲನಚಿತ್ರಗಳ ಪಟ್ಟಿ

ಸ್ಪರ್ಧೆ: ಸಾಕ್ಷ್ಯಚಿತ್ರ

1. ಅರ್ಚನಾ ಫಡ್ಕೆ/ ಕ್ಯಾಪ್ಟನ್‌ ಎಲ್ಡರ್‌ ಬ್ರದರ್‌ʼ ಎಂಡ್‌ ವ್ಹಿರ್ಲ್‌ ವೈಂಡ್‌ ಆರ್ಮಿ /ಭಾರತ/ಮರಾಠಿ/06 ನಿಮಿಷಗಳು

2. ಶ್ರೇಯಾ ಕಾತ್ಯಾಯಿನಿ/‌ ತುಸ್ಸಾರ್: ದಿ ಕ್ರಂಬ್ಲಿಂಗ್‌ ಕುಕೂನ್ /‌ ಭಾರತ/ ಹಿಂದಿ/ 12 ನಿಮಿಷಗಳು
3. ಸಿಂಚಿತಾ ಮಾಜಿ/ ಹೆವಿ ಲಿಫ್ಟಿಂಗ್ ಇನ್‌ ದಿ ಹಿಲ್ಸ್ / ಭಾರತ/ ಮರಾಠಿ / 09‌ ನಿಮಿಷಗಳು
4. ಸಯಂತೋನಿ ಪಾಲ್‌ಚಧುರಿ/ ಜಹಾಂಗೀರ್ʼಸ್ ಸ್ಟೋರಿ / ಭಾರತ/ ಹಿಂದಿ / 08 ನಿಮಿಷಗಳು
5. ಸಯಂತೋನಿ ಪಾಲ್‌ಚಧುರಿ/ ವೋಟ್‌ ಫಾರ್‌ ಬೋಟ್ / ಭಾರತ / ಹಿಂದಿ / 08 ನಿಮಿಷಗಳು
6. ಸ್ಟ್ಯಾನ್ಜಿನ್ ಸಾಲ್ಡನ್ / ದಿ ಲೂಮ್‌ ಈಸ್‌ ಮೈ ಲವ್‌, ಮೈ ಲೆಗಸಿ / ಭಾರತ/ ಲಡಾಖಿ / 09 ನಿಮಿಷಗಳು
7. ಸಿಂಚಿತಾ ಮಾಜಿ/ ಬಸುದೇಬ್ ಬಾಲ್ / ಭಾರತ/ ಬಂಗಾಳಿ / 12 ನಿಮಿಷಗಳು
8. ಅಂಕನ್ ರಾಯ್/ ಬಹುರೂಪಿ: ಎ ಫ್ಯಾಮಿಲಿ ಆಫ್‌ ಮೆನಿ ಫೇಸಸ್ / ಭಾರತ/ ಬಂಗಾಳಿ/ 10 ನಿಮಿಷಗಳು
9. ಶ್ರೇಯಾ ಕಾತ್ಯಾಯಿನಿ / ವ್ಹೆನ್‌ ಕ್ವೀನ್‌ ಸ್ಟ್ರೈಕ್ಸ್ / ಭಾರತ/ ಹಿಂದಿ/ 15 ನಿಮಿಷಗಳು
10. ಅನುಭಾ ಭೋಂಸ್ಲೆ ಮತ್ತು ಇತರರು/ ಇಮಾ ಕೀಥೆಲ್: ಎವೆರಿ ಡೇ ಈಸ್ ವುಮೆನ್ಸ್‌ ಡೇ / ಭಾರತ/ ಮಣಿಪುರಿ/ 15 ನಿಮಿಷಗಳು
11. ಅಪರ್ಣ ಕಾರ್ತಿಕೇಯನ್/ ದಿ ಡ್ಯಾನ್ಸ್‌ ಆಫ್‌ ಫಾಲ್ಸ್‌ ಲೆಗ್ಗಡ್‌ ಹಾರ್ಸ್ / ಭಾರತ/ ತಮಿಳು/ 18 ನಿಮಿಷಗಳು
12. ವಿ.ಶಶಿಕುಮಾರ್/‌ ಮೆಂಡಿಂಗ್‌ ಬೋಟ್‌ ವಿತ್‌ ಮ್ಯೂಸಿಕ್ / ಭಾರತ/ ಮಲಯಾಳಂ / 15 ನಿಮಿಷಗಳು
13. ಪುರುಷೋತ್ತಂ ಠಾಕೂರ್/ ದಿ ಫೇಡಿಂಗ್‌ ವೇವ್ಸ್‌ ಆಫ್ ದುವಾಜರ್ / ಭಾರತ/ ಒಡಿಯಾ/ 16 ನಿಮಿಷಗಳು

ಅಧಿಕೃತ ಆಯ್ಕೆ: ಪನೋರಮಾ – ಸಾಕ್ಷ್ಯಚಿತ್ರ

14. ಸಿಂಚಿತಾ ಮಾಜಿ/ ಥ್ರೆಡ್ಬೇರ್ ಇನ್ ಸಂತೀಪುರ / ಭಾರತ/ ಬಂಗಾಳಿ /13 ನಿಮಿಷಗಳು
15. ಸಿಂಚಿತಾ ಮಾಜಿ/ ಧೋಲ್‌ ಆನ್ ವೀಲ್ಸ್ / ಭಾರತ/ ಬಂಗಾಳಿ / 06 ನಿಮಿಷಗಳು

ದಕ್ಷಿಣ ಏಷ್ಯಾ ಕಿರುಚಿತ್ರೋತ್ಸವ, ಮಾರ್ಚ್ 2019: ಪರಿ ವೀಡಿಯೊಗಳು/ಚಲನಚಿತ್ರಗಳ ಪಟ್ಟಿ

ಸ್ಪರ್ಧೆ: ಸಾಕ್ಷ್ಯಚಿತ್ರ

1. ಸಿಂಚಿತಾ ಮಾಜಿ/ ಗಣಪತಿ ಯಾದವ್ʼಸ್ ಗ್ರಿಪ್ಪಿಂಗ್‌ ಲೈಫ್‌ ಸೈಕಲ್ / ಭಾರತ/ ಮರಾಠಿ/ 17 ನಿಮಿಷಗಳು
2. ಅಂಕನ್ ರಾಯ್ ಮತ್ತು ಇತರರು/ ಪೊಸೆಸಡ್‌ ಬೈ ಹಿಸ್‌ ಆರ್ಟ್ಸ್, ಬಹುರೂಪಿ ಟ್ರಾನ್ಸ್‌ಫಾರ್ಮ್ಸ್ / ಭಾರತ/ ಬಂಗಾಳಿ/ 05 ನಿಮಿಷಗಳು
3. ವಿಶಾಕಾ ಜಾರ್ಜ್ ಮತ್ತು ಇತರರು/ ಐ ಫೀಲ್‌ ಸೋ ಹ್ಯಾಪಿ ಟು ಸೀ ದಿ ಪ್ಯಾಡ್ಡಿ ಗ್ರೋವಿಂಗ್ / ಭಾರತ/ ಮಲಯಾಳಂ/ 05 ನಿಮಿಷಗಳು
4. ಅನುಭಾ ಭೋಂಸ್ಲೆ ಮತ್ತು ಇತರರು/ ಇಂಟು ದಿ ಚಕ್ಸಾಂಗ್ಸ್‌ ಆಫ್ ಇಂಫಾಲ್ / ಭಾರತ/ ಮಣಿಪುರಿ, ಮೀಟೈ/ 05 ನಿಮಿಷಗಳು
5. ಸುಬುಹಿ ಜೀವಾನಿ/ ಫಾರ್ಮಿಂಗ್‌ ಡಸಂಟ್‌ ಗಿವ್‌ ಅಸ್‌ ಅವರ್‌ ಸಸ್ಟೆನೆನ್ಸ / ಭಾರತ/ ಹಿಂದಿ/ 04 ನಿಮಿಷಗಳು

ಅನುವಾದ: ಶಂಕರ ಎನ್. ಕೆಂಚನೂರು

PARI Team
Translator : Shankar N Kenchanuru

Shankar N Kenchanuru is a poet and freelance translator. He can be reached at [email protected]

کے ذریعہ دیگر اسٹوریز Shankar N Kenchanuru