
SANGUR, PUNJAB
|SAT, JUN 21, 2025
ಹಬ್ಬಗಳು ಮತ್ತು ಅವುಗಳನ್ನು ರೂಪಿಸುವ ಜನರು
ಪುರಾಣ, ಪ್ರಕೃತಿ ಮತ್ತು ದೈವತ್ವದ ಆಚರಣೆ, ಋತುಗಳ ಬದಲಾವಣೆ, ಉತ್ತಮ ಬೆಳೆಯ ಸಂಭ್ರಮ – ಭಾರತೀಯ ಹಬ್ಬಗಳು ಇವೆಲ್ಲವನ್ನೂ ಒಳಗೊಂಡಿವೆ. ಸಮುದಾಯಗಳನ್ನು ಒಟ್ಟುಗೂಡಿಸುವ ಇವು, ಧಾರ್ಮಿಕ ವಿಭಜನೆಗಳನ್ನು ವಿಚಿತ್ರ ರೀತಿಯಲ್ಲಿ ಜೋಡಿಸುತ್ತವೆ ಮತ್ತು ಲಿಂಗ ಮತ್ತು ಜಾತಿಯ ಗಡಿಗಳನ್ನು ಮೀರಿರುತ್ತವೆ. ಇವು ಸಾಂಪ್ರದಾಯಿಕತೆಗೆಷ್ಟೇ ಮೀಸಲಾಗದೆ ದೈನಂದಿನ ಬದುಕು ಮತ್ತು ಶ್ರಮದ ಏಕತಾನತೆಯಿಂದ ವಿರಾಮವನ್ನು ಒದಗಿಸುತ್ತವೆ. ವೈವಿಧ್ಯಮಯ ಸಮುದಾಯಗಳ ಕುಶಲಕರ್ಮಿಗಳ ಕೆಲಸ ಮತ್ತು ಕಲೆಯಿಲ್ಲದೆ ಔತಣಕೂಟಗಳು, ಸಂಗೀತ, ನೃತ್ಯ ಮತ್ತು ಪೂಜೆಯು ಸಾಧ್ಯವಿಲ್ಲ. ಇಲ್ಲಿರುವ ಕಥಾನಕಗಳು ನಮ್ಮ ದೇಶದ ವೈವಿಧ್ಯಮಯ ಹಬ್ಬಗಳು ಮತ್ತು ಆಚರಣೆಗಳನ್ನು ದಾಖಲಿಸಿವೆ
Author
Translation
24. ಪಟ್ಟಣ್ ಕೊಡೋಲಿಯಲ್ಲಿ ಹಳದಿ ಮೋಡಗಳ ಬೆನ್ನತ್ತಿ
ಪ್ರತಿ ವರ್ಷ ಅಕ್ಟೋಬರ್ ತಿಂಗಳ ಸುಮಾರಿಗೆ ಧನಗರ್ ಹಾಗೂ ಕುರುಬ ಸಮುದಾಯದ ಪಶುಪಾಲಕರು ವಿಠ್ಠಲ ಬೀರದೇವ್ ದೇವರ ಜಾತ್ರೆಯ ಸಲುವಾಗಿ ಒಟ್ಟುಗೂಡುತ್ತಾರೆ. ನಂಬಿಕೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಈ ಜಾತ್ರೆಯ ಕುರಿತಾದ ಫೋಟೋಗಳು
23. ʼಅಮ್ಮ ಕೋಪ ಮಾಡಿಕೊಂಡು ಸಮುದ್ರದ ಕಡೆ ಹೋಗುತ್ತಾಳೆʼ
ಇರುಳ ಸಮುದಾಯವು ಮಾಸಿ (ತಮಿಳು ತಿಂಗಳು) ಮಾಸದಲ್ಲಿ ಚೆನ್ನೈ ಬಳಿಯ ಮಾಮಲ್ಲಪುರಂನ ಕಡಲತೀರದಲ್ಲಿ ಒಟ್ಟುಗೂಡುತ್ತದೆ. ಈ ಸಂದರ್ಭದಲ್ಲಿ ಅವರು ತಮ್ಮ ದೇವರಾದ ಕನ್ನಿಯಮ್ಮನನ್ನು ಸಮಾಧಾನಪಡಿಸಿ ತಮ್ಮ ಮನೆಗೆ ಬಂದು ಪೂಜೆ ಸ್ವೀಕರಿಸುವಂತೆ ವಿನಂತಿಸುತ್ತಾರೆ. ಈ ಆಚರಣೆಯ ಭಾಗವಾಗಿ ಕಡಲ ತೀರದಲ್ಲಿ ಪುರೋಹಿತರು ಮದುವೆಗಳನ್ನು ನಡೆಸುವುದು ಮತ್ತು ಮಕ್ಕಳಿಗೆ ನಾಮಕರಣ, ಅವರನ್ನು ಆಶೀರ್ವದಿಸುವುದನ್ನು ಸಹ ಮಾಡುತ್ತಾರೆ
22. ಗಂಗ್ರೇಲ್: ಗುಳೆಹೋದ ದೇವತೆಯ ನರ್ತನ
ಗಂಗ್ರೇಲ್ ಮಾದಾಯಿ, ರಾಜ್ಯದಾದ್ಯಂತ ಇರುವ ಗೊಂಡ ಆದಿವಾಸಿಗಳು ದಕ್ಷಿಣ ಛತ್ತೀಸ್ಗಢದಲ್ಲಿ ಆಚರಿಸುವ ಒಂದು ದಿನದ ಹಬ್ಬ
21. ಬಲ ಮತ್ತು ಅಸ್ಮಿತೆಯ ಯುಗಾದಿ ಆಚರಣೆ
ಆಂಧ್ರಪ್ರದೇಶದ ಮೇದಪುರಂನಲ್ಲಿ ಯುಗಾದಿ ಹಬ್ಬವನ್ನು ಪ್ರತಿವರ್ಷವೂ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಮಾದಿಗ ಸಮುದಾಯ ಆಯೋಜಿಸುವ ಈ ಹಬ್ಬದಲ್ಲಿ ಅವರು ತಮ್ಮ ದೇವರ ಮೂರ್ತಿಯನ್ನು ಈ ಪಟ್ಟಣಕ್ಕೆ ತರುತ್ತಾರೆ
20. ಮೀನುಗಾರರ ಸುರಕ್ಷತೆಗಾಗಿ ದುಡಿಯುವ ಅತ್ತಿಪಟ್ಟುವಿನ ದಿಲ್ಲಿಯಣ್ಣ
ತಿರುವಳ್ಳೂರ್ ಜಿಲ್ಲೆ ಉತ್ತರ ಚೆನ್ನೈಯ ಮೀನುಗಾರ ಸಮುದಾಯಗಳನ್ನು ಕಾಪಾಡುವ ದೇವರಾದ ಕಣಿಸಾಮಿಗೆ ದಿಲ್ಲಿ ಅಣ್ಣ ಜೀವ ತುಂಬುತ್ತಾರೆ. ಜೇಡಿ ಮಣ್ಣು ಮತ್ತು ಭತ್ತದ ಹೊಟ್ಟು ಬಳಸಿ ಈ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಆದರೆ ನಗರೀಕರಣದ ವೇಗವು ಈ ಕಲೆಯನ್ನು ಉಳಿಸಿಕೊಳ್ಳುವಲ್ಲಿ ಸಮಸ್ಯೆಯಾಗಿ ಕಾಡುತ್ತಿದೆ
19. 'ನಮ್ಮ ಮಣ್ಣಿನ ಮೂರ್ತಿಯ ಜಾಗದಲ್ಲಿ ಈಗ ಕಲ್ಲಿನ ಮೂರ್ತಿ ಇರಿಸಲಾಗಿದೆ'
ತಮಿಳುನಾಡಿನ ಬಂಗಳಮೇಡು ಗ್ರಾಮದ ಇರುಳ ಸಮುದಾಯದ ಜನರು ತಮ್ಮ ಪ್ರೀತಿಯ ದೇವರುಗಳ ಪೂಜೆ ಹಾಗೂ ಆಚರಣೆಗಳಲ್ಲಿ ಮೆಲ್ಲನೆ ಉಂಟಾಗುತ್ತಿರುವ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದ್ದಾರೆ
18. ತುಳುನಾಡಿನ ಸಿಡಿಮದ್ದು ತಯಾರಿಸುವ ಕಲೆಗಾರರು
ಕರ್ನಾಟಕದ ಸೌಹಾರ್ದ ಪರಂಪರೆಯೊಂದರಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಸಲ್ಮಾನ ವ್ಯಕ್ತಿಯೋರ್ವರು ಸಿಡಿಮದ್ದನ್ನು ತಯಾರಿಸಿ, ಸಿಡಿಸುವ ಆಚರಣೆಯೊಂದಿದೆ. ಗರ್ನಲ್ ಸಾಯಿಬೆರ್ ಮತ್ತು ಅವರ ಅಸಾಮಾನ್ಯ ಕಲೆಯ ಬಗ್ಗೆ ಇಲ್ಲೊಂದು ಸಾಕ್ಷ್ಯಚಿತ್ರ
17. ಸಂತಾಲ್ ಹಬ್ಬದಲ್ಲಿನ ಚಾದೊರ್ ಬಾದನಿ ಗೊಂಬೆಗಳು
ತಪನ್ ಮುರ್ಮು ಬಿರ್ಭುಮ್ ಜಿಲ್ಲೆಯ ಯುವ ಸಂತಾಲ್ ಆದಿವಾಸಿ ರೈತರಾಗಿದ್ದು, ಸುಗ್ಗಿ ಹಬ್ಬದ ಸಮಯದಲ್ಲಿ ಬೊಂಬೆಯಾಟದ ಪ್ರದರ್ಶನ ನೀಡುತ್ತಾರೆ – ತಮ್ಮ ಪೀಳಿಗೆಯವರು ಈ ಕಲೆಯತ್ತ ನಿರ್ಲಕ್ಷ್ಯ ತೋರುತ್ತಿದ್ದಾರೆನ್ನುವುದು ಅವರ ಚಿಂತೆ
16. ರಾಸ್ ಮಹೋತ್ಸವ ಮತ್ತು ಮಜುಲಿಯ ಸತ್ರಗಳು
ಅಸ್ಸಾಂನಲ್ಲಿ ನಡೆಯುವ ಈ ವಾರ್ಷಿಕ ಉತ್ಸವವು ಬಹು ನಿರೀಕ್ಷಿತ ಕಾರ್ಯಕ್ರಮವಾಗಿದ್ದು, ಅನೇಕ ಸ್ಥಳಗಳಲ್ಲಿ ಪ್ರದರ್ಶನಗಳು ನಡೆಯುತ್ತವೆ. ಯುವ ಪೀಳಿಗೆಯ ವಲಸೆ ಮತ್ತು ಆಸಕ್ತಿ ಕ್ಷೀಣಿಸುವಿಕೆಯ ಕಾರಣ ಈಗೀಗ ಪ್ರದರ್ಶಕರನ್ನು ಹುಡುಕುವುದು ಕಷ್ಟಕರವಾಗಿದೆ
15. ತುಳುನಾಡಿನ ಭೂತಗಳು: ಸಾಮರಸ್ಯ ಸಂಪ್ರದಾಯದ ಚೈತನ್ಯ
ಅರಬ್ಬಿ ಸಮುದ್ರ ತೀರದ ಕರ್ನಾಟಕದ ಕರಾವಳಿಯ ಈ ಭಾಗದಲ್ಲಿ ಭೂತದ ಪೂಜೆಗಾಗಿ ವಿವಿಧ ಸಮುದಾಯಗಳು ಒಂದಾಗುತ್ತವೆ. ಈ ಆಚರಣೆಯಲ್ಲಿ ಪ್ರದರ್ಶನ ನೀಡುವ ಸೈಯದ್ ನಾಸಿರ್ ಅವರ ಪರಿಚಯ ಈ ಕಿರುಚಿತ್ರದಲ್ಲಿದೆ
14. ಲಡಾಖ್: ಸಗಾ ದಾವಾ ಆಚರಣೆ
ಹಾನ್ಲೆ ನದಿ ಕಣಿವೆಯಲ್ಲಿನ ಟಿಬೆಟಿಯನ್ ಬೌದ್ಧರ ಪಾಲಿಗೆ ಇದೊಂದು ಪ್ರಮುಖ ಹಬ್ಬ. ಸಾಂಕ್ರಾಮಿಕ ಪಿಡುಗಿನ ನಂತರದ ಮೊದಲ ಆಚರಣೆಯಲ್ಲಿ, ಆರು ಸುತ್ತಮುತ್ತಲಿನ ಊರುಗಳು ಡೋಲು ಮತ್ತು ಕಹಳೆಗಳನ್ನು ಬಾರಿಸುವ ಮೂಲಕ ಒಟ್ಟಿಗೆ ಆಚರಿಸಿದವು
13. ಬಸ್ತಾರ್: ಬಿದಿರಿನ 'ಗನ್' ಬಳಸಿ ದೇವರಿಗೆ ನಮಸ್ಕಾರ
ಛತ್ತೀಸ್ ಗಢದ ವಾರ್ಷಿಕ ಗೊಂಚಾ ಉತ್ಸವದಲ್ಲಿ, ಸ್ಥಳೀಯ ಆದಿವಾಸಿ ಸಮುದಾಯಗಳು ದೇವರಿಗೆ ವಿಶಿಷ್ಟ ರೀತಿಯಲ್ಲಿ ನಮಸ್ಕರಿಸುತ್ತವೆ
12. ಸಾಯಿನಗರ ದರ್ಗಾದ ಬಳಿಯಲ್ಲೊಬ್ಬ ಪುಟ್ಟ ವಿನಾಯಕ
ಆಂಧ್ರ ಪ್ರದೇಶದ ಅನಂತಪುರ ಪಟ್ಟಣದಲ್ಲಿ ಮಕ್ಕಳ ಅಚ್ಚು ಮೆಚ್ಚಿನ ಹಬ್ಬ ವಿನಾಯಕ ಚತುರ್ಥಿಯ ಆಚರಣೆ ಹಬ್ಬ ಮುಗಿದ ಬಳಿಕವೂ ಒಂದಿಷ್ಟು ದಿನ ಮುಂದುವರಿಯುತ್ತದೆ
11. ವೈಜಾಗ್: ಎಂಟು ದಶಕಗಳಿಂದ ದೀಪಗಳ ತಯಾರಿಸುತ್ತಿರುವ ಪರದೇಸಂ
ಎಸ್. ಪರದೇಸಂ ಅವರು ದೀಪಾವಳಿಯಂದು ಹಲವು ಮನೆಗಳನ್ನು ಬೆಳಗುವ ಲಕ್ಷಾಂತರ ದೀಪಗಳನ್ನು ತಯಾರಿಸಿದ್ದಾರೆ. ವಿಶಾಖಪಟ್ಟಣಮ್ನ ಕುಮ್ಮಾರಿ ವೀಧಿಯ ಕೊನೆಯ ದೀಪ ತಯಾರಕರಿವರು
10. ಸುರು ಕಣಿವೆಯ ಮೊಹರಮ್ ಆಚರಣೆ
ಲಡಾಖ್ನ ಕಾರ್ಗಿಲ್ ಜಿಲ್ಲೆಯ ತಾಯ್ ಸುರು ಗ್ರಾಮದಲ್ಲಿ ಶಿಯಾ ಮುಸ್ಲಿಮರು ಆಚರಿಸುವ ಮೊಹರಂ ಆಚರಣೆಗಳು ಹಲವು ದಿನಗಳವರೆಗೆ ನಡೆಯುತ್ತವೆ. ಮಕ್ಕಳಿಗೆ, ವಿಶೇಷವಾಗಿ ಹೆಣ್ಣುಮಕ್ಕಳ ಪಾಲಿಗೆ, ಇದು ಸ್ನೇಹಿತರನ್ನು ಭೇಟಿಯಾಗಲು ಮತ್ತು ಹಲವು ಗಂಟೆಗಳ ಕಾಲ ಒಟ್ಟಿಗೆ ಸಮಯ ಕಳೆಯಲು ಇದೊಂದು ಅವಕಾಶವಾಗಿದೆ
9. ಸಂಕ್ರಾಂತಿಯ ಆಗಸ ಸಿಂಗರಿಸುವ ಗುಜರಾತಿನ ಗಾಳಿಪಟ ಕುಸುರಿ ಕೆಲಸಗಾರರು
ಖಂಬಟ್ ಮತ್ತು ಅಹಮದಾಬಾದ್ನ ಮಹಿಳಾ ಗಾಳಿಪಟ ತಯಾರಕರ ಶ್ರಮದಾಯಕ ಜೀವನವು ಅವರು ತಮ್ಮ ಶ್ರಮದಿಂದ ಆಕಾಶಕ್ಕೆ ತುಂಬುವ ರಂಗಿಗೆ ವ್ಯತಿರಿಕ್ತವಾಗಿದೆ
8. ದುರ್ಗೆಯನ್ನು ಕುಣಿಸುವ ದಾಕ್ ಕಲಾವಿದರು
ಅಗರ್ತಲಾದ ದಾಕಿಗಳ ಡೋಲು ಈಗಾಗಲೇ ಸದ್ದು ಮಾಡಲಾರಂಭಿಸಿವೆ. ಈ ಬಾರಿಯ ದುರ್ಗಾ ಪೂಜೆ ಅಕ್ಟೋಬರ್ 11ರಿಂದ ಪ್ರಾರಂಭವಾಗುತ್ತದೆ, ಈ ಉತ್ಸವದ ಸಮಯದಲ್ಲಿ ದಾಕ್ ಎನ್ನುವ ಡೊಳ್ಳಿನ ವಾದ್ಯವನ್ನು ಬಾರಿಸುವ ಇವರು ಉಳಿದ ದಿನಗಳಲ್ಲಿ ಸೈಕಲ್ ರಿಕ್ಷಾಗಳನ್ನು ಓಡಿಸುವುದು, ಏನಾದರೂ ವ್ಯಾಪಾರ, ಬೇಸಾಯ, ಕೊಳಾಯಿ ಕೆಲಸ, ಎಲೆಕ್ಟ್ರಿಷಿಯನ್ ಹೀಗೆ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ
7. ಒಂದೇ ಮಾಲೆಯ ಹೂಗಳಂತೆ ಕುಣಿದಾಟ
ಚಳಿಯ ದಿನಗಳ ಸಮಾರಂಭಗಳು ಮತ್ತು ಆಚರಣೆಗಳ ಸಂದರ್ಭದಲ್ಲಿ ಛತ್ತೀಸ್ಗಢದ ಯುವಕ-ಯುವತಿಯರು ಹಲ್ಕಿ ಮಂದಾರಿ ಮತ್ತು ಕೊಲಾಂಗ್ ನೃತ್ಯ ಹಾಗೂ ರೈಲಾ ಹಾಡುಗಳಿಗಾಗಿ ಒಟ್ಟಿಗೆ ಪ್ರಯಾಣಿಸುತ್ತಾರೆ
6. ವೈಜ಼ಾಗ್ನ ಕುಂಬಾರರು: ಜೇಡಿಮಣ್ಣಿನ ವಿಗ್ರಹಗಳು, ಸಾಲದ ಸಂಕೋಲೆ
ಆಂಧ್ರ ಪ್ರದೇಶದಲ್ಲಿನ ಈ ಜಿಲ್ಲೆಯ ಕುಶಲಕರ್ಮಿಗಳು ಗಣೇಶ ಚತುರ್ಥಿಯಿಂದ ಪ್ರಾರಂಭಗೊಳ್ಳುವ ಹಬ್ಬದ ಸಾಲಿನಲ್ಲಿ ಹೆಚ್ಚಿನ ಸಂಪಾದನೆಯನ್ನು ಗಳಿಸುತ್ತಾರೆ. ಆದರೆ ಈ ವರ್ಷದಲ್ಲಿ ಅವರಿಗೆ ಇದುವರೆಗೂ ಗಣೇಶನ ಮೂರ್ತಿಗಳು ಹಾಗೂ ಇತರೆ ಉತ್ಪನ್ನಗಳಿಗಾಗಿ ಒಂದಾದರೂ ದೊಡ್ಡ ಪ್ರಮಾಣದ ಆರ್ಡರು ದೊರೆತಿರುವುದಿಲ್ಲ
5. ಧೂಳ್ ಪೇಟೆಯ ದೇವರುಗಳ ಶಿಲ್ಪಿಗಳು
ಗಣಪತಿ ಹಬ್ಬದ ಹಂಗಾಮಿನಲ್ಲಿ ವಲಸೆ ಕುಶಲಕರ್ಮಿಗಳ ಗುಂಪು ಹಬ್ಬಕ್ಕೂ ಮೊದಲೇ ಹೈದರಾಬಾದ್ ನಗರಕ್ಕೆ ಬಂದು ಸೇರಿಕೊಳ್ಳುತ್ತಾರೆ. ಹಬ್ಬಕ್ಕೆ ಬೇಕಾದ ಗಣಪತಿ ಮೂರ್ತಿಗಳನ್ನು ತಯಾರಿಸುವ ಇವರಿಗೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಅಗ್ಗದ ವಿಗ್ರಹಗಳು ತೀವ್ರ ಪೈಪೋಟಿಯನ್ನು ನೀಡುತ್ತಿವೆ. ಇದರಿಂದಾಗಿ ತಮಗೆ ಕೆಲಸ ಸರಿಯಾಗಿ ಸಿಗುತ್ತಿಲ್ಲ ಎಂದು ಅವರು ಹೇಳುತ್ತಾರೆ
4. ದೇವರ ಉಡುಪುಗಳ ತಯಾರಕರು - ಮಧುರೈ
ಇಂದು, ಏಪ್ರಿಲ್ 22. ಮಧುರೈನಲ್ಲಿ ನಡೆಯುವ ಐತಿಹಾಸಿಕ ಅLಗರ್ ಉತ್ಸವದ ಕೊನೆಯ ದಿನ. ಕೆಲವು ಭಕ್ತರು ವರ್ಣರಂಜಿತ ವೇಷಭೂಷಣಗಳನ್ನು ಧರಿಸಿ ಬೃಹತ್ ಮೆರವಣಿಗೆಯನ್ನು ನಡೆಸುತ್ತಾರೆ. ಅವರ ಉಡುಪುಗಳ ತಯಾರಕರು ಯಾರು ಎಂಬುದು ಹೆಚ್ಚು ಆಸಕ್ತಿಕರವಾದುದು
3. ವಾರ್ಲಿ ಕುಗ್ರಾಮದ ದೀಪಾವಳಿಯ ಸವಿ ನೆನಪುಗಳು
ಪಟಾಕಿ ಮತ್ತು ಸಿಟಿ ಲೈಟ್ಗಳಿಲ್ಲದೆ, ಮುಂಬೈನ ಹೊರಗಿನ ಆದಿವಾಸಿ ಪಾಡದಲ್ಲಿರುವ ನನ್ನ ಕುಟುಂಬವು ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿಯನ್ನು ಸಾಂಪ್ರದಾಯಿಕ ಅಡುಗೆ, ಸಮುದಾಯದ ಆಚರಣೆಗಳು, ಭೂಮಿ ಪೂಜೆ ಮಾಡಿ ಸಂತೋಷದೊಂದಿಗೆ ಆಚರಿಸಿತು
2. ಸೊಹ್ರಾಯಿ ಹಾಡು
ಕಟಾವಿನ ಹಬ್ಬದ ಸಮಯದಲ್ಲಿ ಬಿಹಾರದ ಚಿರ್ಚಿರ್ಯಾದಲ್ಲಿರುವ ಸಂತಾಲ್ ಮಹಿಳೆಯರು ತಮ್ಮ ಜೀವನಶೈಲಿಯ ಕಥನಗಳನ್ನು ವರ್ಣಿಸುತ್ತಿರುವ ಹಾಡನ್ನು ಹಾಡುತ್ತಿದ್ದರೆ ಗಂಡಸರು ಈ ಹಾಡಿಗೆ ಲಯಬದ್ಧವಾಗಿ ವಾದ್ಯಗಳನ್ನು ನುಡಿಸುತ್ತಿರುತ್ತಾರೆ. ಭೋಜನ ಮತ್ತು ಮುಹುವಾಗಳೂ ಕೂಡ ಈ ಹಬ್ಬದ ಆಚರಣೆಯ ಭಾಗಗಳು.
1. ಕುಮೋರ್ತುಲಿಗೊಂದು ಪಯಣ
ಕೋಲ್ಕತ್ತಾದ ಶತಮಾನಗಳಷ್ಟು ಹಳೆಯದಾದ ಕುಂಬಾರರ ಕೇರಿಯ ಕುಶಲಕರ್ಮಿಗಳು ಹಗಲು ರಾತ್ರಿ ಕೆಲಸ ಮಾಡಿ ಮಣ್ಣಿನ ವಿಗ್ರಹಗಳನ್ನುತಯಾರಿಸಿ ದುರ್ಗಾ ಪೂಜೆಗಾಗಿ ಇಡೀ ನಗರಕ್ಕೆ ಕಳುಹಿಸುತ್ತಾರೆ
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/festivals-and-the-folks-who-fashion-them-kn

























