ಸಣ್ಣ ಡೋಲಿನ ಹಿನ್ನೆಲೆ ಸಂಗೀತದ ಸದ್ದು ಗಾಳಿಯಲ್ಲಿ ಹರಡುತ್ತಿದ್ದಂತೆ, ಅದರ ಹಿಂದೆ ದರ್ಗಾದ ಹೊರಗೆ ಕುಳಿತು ಭಕ್ತಿ ಸಂಗೀತ ಹಾಡುತ್ತಾ ಭಿಕ್ಷೆ ಬೇಡುತ್ತಿದ್ದ ಫಕೀರನ ಮಾದಕ ದನಿ ತೇಲಿ ಬರುತ್ತದೆ. ದೇವರನ್ನು ಹೊಗಳುವ ಈ ಹಾಡು ಆಶೀರ್ವಾದ ಮತ್ತು ಒಳಿತಿಗಾಗಿ ಪ್ರಾರ್ಥಿಸುತ್ತದೆ.
"ಒಂದೂಕಾಲು ತೊಲ ಚಿನ್ನ ನನ್ನ ಕೈಯಲ್ಲಿದೆ
ನನ್ನ ತಂಗಿಯ ಕೈಯಲ್ಲೂ ಅಷ್ಟೇ ಚಿನ್ನವಿದೆ
ಓ ದೇವರೇ ಉದಾರವಾಗಿ ನೀಡು, ನಮ್ಮನ್ನು ಹೆಚ್ಚು ಕಾಡದಿರು..."
ಇದು ಕಚ್ಛ್‌ನ ಶ್ರೇಷ್ಠ ಸೌಹಾರ್ದ ಸಂಪ್ರದಾಯಗಳ ಒಂದು ನೋಟವನ್ನು ನೀಡುವ ಹಾಡು. ಇದು ಅಲೆಮಾರಿ ಪಶುಪಾಲಕರ ಪ್ರದೇಶವಾಗಿದ್ದು, ಒಂದು ಕಾಲದಲ್ಲಿ ಇವರು ತಮ್ಮ ಜಾನುವಾರುಗಳನ್ನು ವಾರ್ಷಿಕ ವಲಸೆ ಮಾರ್ಗದಲ್ಲಿ ಗ್ರೇಟ್ ರಣ್ ಆಫ್ ಕಚ್ಛ್ ಮೂಲಕ ಈಗ ಪಾಕಿಸ್ತಾನದಲ್ಲಿರುವ ಸಿಂಧ್‌ಗೆ ಹೋಗಿ ಹಿಂತಿರುಗುತ್ತಿದ್ದರು. ವಿಭಜನೆಯ ನಂತರ ಎದುರಾದ ಹೊಸ ಗಡಿಗಳು ಆ ಪ್ರಯಾಣವನ್ನು ಕೊನೆಗೊಳಿಸಿದವು, ಆದರೆ ಕಚ್ಛ್ ಮತ್ತು ಸಿಂಧ್ ಗಡಿಯುದ್ದಕ್ಕೂ ಹಿಂದೂ ಮತ್ತು ಮುಸ್ಲಿಂ ಕುರುಬ ಸಮುದಾಯಗಳ ನಡುವೆ ಸಂಬಂಧಗಳು ಬಲವಾಗಿ ಉಳಿದಿವೆ.
ಸೂಫಿಸಂ, ಕಾವ್ಯ, ಜಾನಪದ, ಪುರಾಣಗಳು ಮತ್ತು ಆ ಸಂವಾದದಿಂದ ಹುಟ್ಟಿಕೊಂಡ ಭಾಷೆಗಳಂತಹ ಧಾರ್ಮಿಕ ಆಚರಣೆಗಳ ಶ್ರೀಮಂತ ಸಂಗಮವು ಈ ಪ್ರದೇಶದ ಸಮುದಾಯಗಳ ಜೀವನ, ಅವರ ಕಲೆ, ವಾಸ್ತುಶಿಲ್ಪ ಮತ್ತು ಧಾರ್ಮಿಕ ಆಚರಣೆಗಳನ್ನು ವ್ಯಾಖ್ಯಾನಿಸುತ್ತದೆ. ಸೂಫಿ ಪಂಥವನ್ನು ಆಧರಿಸಿದ ಈ ಹಂಚಿಕೆಯ ಸಂಸ್ಕೃತಿಗಳು ಮತ್ತು ಸೌಹಾರ್ದ ಸಂಗ್ರಹವು ಈಗ ಕ್ಷೀಣಿಸುತ್ತಿರುವ ಈ ಪ್ರದೇಶದ ಜಾನಪದ ಸಂಗೀತದ ಸಂಪ್ರದಾಯಗಳಲ್ಲಿ ಕಂಡುಬರುತ್ತದೆ.
ನಖ್ತ್ರಾನಾ ತಾಲ್ಲೂಕಿನ ಮೊರ್ಗರ್ ಗ್ರಾಮದ ಪಶುಪಾಲಕ ಕಿಶೋರ್ ರಾವರ್ (45) ಹಾಡಿದ ಈ ಹಾಡಿನಲ್ಲಿ ಪ್ರವಾದಿಯ ಮೇಲಿನ ಭಕ್ತಿ ಧಾರೆಯಾಗಿ ಹರಿಯುತ್ತದೆ.
કરછી
મુનારા મીર મામધ જા,મુનારા મીર સૈયધ જા.
ડિઠો રે પાંજો ડેસ ડૂંગર ડુરે,
ભન્યો રે મૂંજો ભાગ સોભે રે જાની.
મુનારા મીર અલાહ.. અલાહ...
મુનારા મીર મામધ જા મુનારા મીર સૈયધ જા
ડિઠો રે પાજો ડેસ ડૂંગર ડોલે,
ભન્યો રે મૂજો ભાગ સોભે રે જાની.
મુનારા મીર અલાહ.. અલાહ...
સવા તોલો મૂંજે હથમેં, સવા તોલો બાંયા જે હથમેં .
મ કર મોઈ સે જુલમ હેડો,(૨)
મુનારા મીર અલાહ.. અલાહ...
કિતે કોટડી કિતે કોટડો (૨)
મધીને જી ખાં ભરીયા રે સોયરો (૨)
મુનારા મીર અલાહ... અલાહ....
અંધારી રાત મીંય રે વસંધા (૨)
ગજણ ગજધી સજણ મિલધા (૨)
મુનારા મીર અલાહ....અલાહ
હીરોની છાં જે અંઈયા ભેણૂ (૨)
બધીયા રે બોય બાહૂ કરીયા રે ડાહૂ (૨)
મુનારા મીર અલાહ… અલાહ….
મુનારા મીર મામધ જા,મુનારા મીર સૈયધ જા.
ડિઠો રે પાજો ડેસ ડુરે
ભન્યો રે મૂજો ભાગ સોભે રે જાની
મુનારા મીર અલાહ અલાહ
ಕನ್ನಡ
ಮುಹಮ್ಮದರ ಮಿನಾರುಗಳು, ಸೈಯದರ ಮಿನಾರುಗಳು
ನಾನು ನನ್ನ ಊರಿನ ಬೆಟ್ಟಗಳನ್ನು ಕಂಡಿದ್ದೇನೆ
ಅವುಗಳೆದರು ತಲೆ ಬಾಗುತ್ತೇನೆ
ಭಾಗ್ಯವಂತ ನಾನು! ನನ್ನ ಹೃದಯ ಹೊಳೆಯುತ್ತಿದೆ ಅವರ ಮಹಿಮೆಯಿಂದ
ಮೀರ್ ಮುಹಮ್ಮದರ ಮಿನಾರುಗಳು ಅಲ್ಲಾ! ಅಲ್ಲಾ!
ಮುಹಮ್ಮದರ ಮಿನಾರುಗಳು ಸೈಯದರ ಮಿನಾರುಗಳು
ನಾನು ನನ್ನ ಊರಿನ ಬೆಟ್ಟಗಳನ್ನು ಕಂಡಿದ್ದೇನೆ
ಅವುಗಳೆದರು ತಲೆ ಬಾಗುತ್ತೇನೆ
ಭಾಗ್ಯವಂತ ನಾನು! ನನ್ನ ಹೃದಯ ಹೊಳೆಯುತ್ತಿದೆ ಅವರ ಮಹಿಮೆಯಿಂದ
ಮೀರ್ ಮುಹಮ್ಮದರ ಮಿನಾರುಗಳು ಅಲ್ಲಾ! ಅಲ್ಲಾ!
ಒಂದೂಕಾಲು ತೊಲ ಚಿನ್ನ ನನ್ನ ಕೈಯಲ್ಲಿದೆ
ಒಂದೂಕಾಲು ತೊಲ ಚಿನ್ನ ನನ್ನ ತಂಗಿಯ ಕೈಯಲ್ಲಿದೆ
ಹೆಚ್ಚು ಕಾಡದಿರು ನನ್ನ ದೇವರೇ, ಉದಾರವಾಗಿ ನೀಡು (2)
ಮೀರ್ ಮುಹಮ್ಮದರ ಮಿನಾರುಗಳು ಅಲ್ಲಾ! ಅಲ್ಲಾ!
ದೊಡ್ಡ ಕೋಣೆಯೂ ಅಲ್ಲ ಚಿಕ್ಕದೂ ಅಲ್ಲ (2)
ಮದೀನಾದಲ್ಲಿ ನೀವು ಸೊಯಾರೋ ಗಣಿಗಳನ್ನು ಹೊಂದುತ್ತೀರಿ
ಮದೀನಾದಲ್ಲಿ ನೀವು ಅವರ ಹೇರಳ ಅನುಗ್ರಹ ಹೊಂದುವಿರಿ
ಮೀರ್ ಮುಹಮ್ಮದರ ಮಿನಾರುಗಳು ಅಲ್ಲಾ! ಅಲ್ಲಾ!
ಇದು ರಾತ್ರಿಯ ಕತ್ತಲೆಯಲ್ಲಿ ಮಳೆಯಾಗಿ ಸುರಿಯುತ್ತದೆ
ಆಕಾಶ ಘರ್ಜಿಸುವಾಗ ನೀವು ನಿಮ್ಮ ಪ್ರೀತಿ ಸಂಗಾತಿಯೊಡನಿರುವಿರಿ
ಮೀರ್ ಮುಹಮ್ಮದರ ಮಿನಾರುಗಳು ಅಲ್ಲಾ! ಅಲ್ಲಾ!
ಭಯಭೀತ ಜಿಂಕೆಯಂತಾಗಿರುವೆ ನಾನು, ಕೈಗಳ ಮೇಲೆತ್ತಿ ಪ್ರಾರ್ಥಿಸುವೆ ನಾನು
ಮುಹಮ್ಮದರ ಮಿನಾರುಗಳು, ಸೈಯದರ ಮಿನಾರುಗಳು
ನಾನು ನನ್ನ ಊರಿನ ಬೆಟ್ಟಗಳನ್ನು ಕಂಡಿದ್ದೇನೆ
ಅವುಗಳೆದರು ತಲೆ ಬಾಗುತ್ತೇನೆ
ಭಾಗ್ಯವಂತ ನಾನು! ನನ್ನ ಹೃದಯ ಹೊಳೆಯುತ್ತಿದೆ ಅವರ ಮಹಿಮೆಯಿಂದ
ಮೀರ್ ಮುಹಮ್ಮದರ ಮಿನಾರುಗಳು ಅಲ್ಲಾ! ಅಲ್ಲಾ!
ಹಾಡಿನ ಪ್ರಕಾರ:
ಸಾಂಪ್ರದಾಯಿಕ
ಜಾನಪದ ಗೀತೆ
ಕ್ಲಸ್ಟರ್:
ಭಕ್ತಿ ಗೀತೆ
ಹಾಡು
:
5
ಹಾಡಿನ ಶೀರ್ಷಿಕೆ:
ಮುನಾರಾ
ಮೀ
ರ್ ಮಮಧ್ ಜಾ,
ಮುನಾರಾ
ಮೀ
ರ್ ಶಾಹಿದ್
ಜಾ
ಸಂಯೋಜಕ:
ಅಮದ್ ಸಮೇಜಾ
ಗಾಯಕ:
ನಖ್ತ್ರಾನಾ ತಾಲ್ಲೂಕಿನ ಮೊರ್ಗರ್ ಗ್ರಾಮದ 45 ವರ್ಷದ ಪಶುಪಾಲಕರಾದ
ಕಿಶೋರ್ ರಾವರ್.
ಬಳಸಿದ
ಸಂಗೀತ ಉಪಕರಣ
:
ಡೋಲು
ರೆಕಾರ್ಡಿಂಗ್ ವರ್ಷ:
2004, ಕೆಎಂವಿಎಸ್ ಸ್ಟುಡಿಯೋ
ಗುಜರಾತಿ ಅನುವಾದ:
ಅಮದ್ ಸಮೇಜಾ, ಭಾರತಿ ಗೋರ್
ಪ್ರೀತಿ ಸೋನಿ, ಕೆಎಂವಿಎಸ್ ಕಾರ್ಯದರ್ಶಿ ಅರುಣಾ ಧೋಲಾಕಿಯಾ, ಕೆಎಂವಿಎಸ್ ಯೋಜನಾ ಸಂಯೋಜಕ ಅಮದ್ ಸಮೇಜಾ ಮತ್ತು ಗುಜರಾತಿ ಅನುವಾದದ ಅಮೂಲ್ಯ ಸಹಾಯಕ್ಕಾಗಿ ಭಾರತಿಬೆನ್ ಗೋರ್ ಅವರಿಗೆ ವಿಶೇಷ ಧನ್ಯವಾದಗಳು.
ಅನುವಾದ: ಶಂಕರ. ಎನ್. ಕೆಂಚನೂರು