
SANGUR, PUNJAB
|MON, MAY 18, 2026
ಭಾರತದ ಸಂಗೀತ ವಾದ್ಯಗಳ ಜಗತ್ತು
ಗ್ರಾಮೀಣ ಭಾರತದಲ್ಲಿ ಬಳಸಲಾಗುವ ಸಂಗೀತ ವಾದ್ಯಗಳು ನಮ್ಮ ಗ್ರಾಮೀಣ ಪ್ರದೇಶಗಳಷ್ಟೇ ವೈವಿಧ್ಯಮಯವಾಗಿವೆ – ಹಿಮಾಚಲ ಪ್ರದೇಶದ ತಂತಿ ವಾದ್ಯ ರುಬಾಬ್ ಮತ್ತು ತಂಬೂರಿಯಂತಹ ಖಂಜರಿ, ಪಶ್ಚಿಮ ಬಂಗಾಳದ ಬನಾಮ್ ಮತ್ತು ಗಬ್ಗುಬಿ, ಮಹಾರಾಷ್ಟ್ರದ ದೊಡ್ಡ ಕೊಂಬಿನಂತಹ ಟಾರ್ಪಾ, ಛತ್ತೀಸ್ಗಢದ ತೂಗಾಡುವ ಕೊಳಲು ಮತ್ತು ಬಾನ್ಸ್ ಬಾಜಾ, ವಿವಿಧ ರಾಜ್ಯಗಳ ಧುಮ್ಸಿ, ಢೋಲ್, ಢೋಲಕ್, ಧಪ್ ಮತ್ತು ಡೊಳ್ಳು. ಕೆಲವೊಮ್ಮೆ, ಇವು ಮತ್ತು ಇತರ ಅನೇಕ ವಾದ್ಯಗಳನ್ನು ತಯಾರಿಸುವುದನ್ನು ಅನುವಂಶಿಕವಾಗಿ ಮುಂದುವರೆಸಿಕೊಂಡು ಬಂದಿರುವ ಅತ್ಯಂತ ಕೌಶಲಪೂರ್ಣ ಕುಶಲಕರ್ಮಿಗಳು ಇವುಗಳನ್ನು ಕರಕುಶಲ ಕಲೆಯಾಗಿ ರೂಢಿಸಿಕೊಂಡು ಬಂದಿದ್ದಾರೆ – ನರಸಿಂಗಪೇಟ್ಟೈಯ ನಾದಸ್ವರಂ ತಯಾರಕರು, ಮೈಲಾಪುರದ ಮೃದಂಗಂ ತಯಾರಕರು, ಕಾಸರಗೋಡಿನ ಬಿದಿರಿನ ಡೋಲುಗಳ ಸೃಷ್ಟಿಕರ್ತರು ಮತ್ತು ಪೆರುವೆಂಬದ ತಾಳವಾದ್ಯಗಳ ತಯಾರಕರು. ಈ ಅನೇಕ ಸಂಗೀತ ಸಂಪ್ರದಾಯಗಳು ಕ್ಷೀಣಿಸುತ್ತಿರುವಂತೆ ಕಂಡರೂ, ಪರಿ ವರದಿಗಳು ಅವು ಈಗಲೂ ಸ್ಪಷ್ಟವಾಗಿ ದೊಡ್ಡ ದನಿಯಲ್ಲಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸ್ವರ ಹೊರಡಿಸುತ್ತಿರುವುದನ್ನು ಹೇಳುತ್ತವೆ
Author
Translation
24. ಸರಲಾ ಗ್ರಾಮದ ಬಡಗಿ-ಗಾಯಕ
ತ್ರಿಪುರಾದ ಸರಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾನಪದ ಕಲಾವಿದರೊಬ್ಬರು ತನ್ನ ಹವ್ಯಾಸವನ್ನೇ ಆದಾಯದ ಮೂಲವನ್ನಾಗಿಸಿಕೊಂಡು ತನ್ನ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ
23. ಪ್ರೇಮದ ಸಿಹಿ ಸದ್ದು
ವಾಹ್ ಯಾ ಎನ್ನುವುದು ನಾಗಾಲ್ಯಾಂಡ್ ರಾಜ್ಯದ ಕೊನ್ಯಾಕ್ ಸಮುದಾಯದ ಸಂಗೀತ ವಾದ್ಯ. ಇದನ್ನು ಸಂಗಾತಿಗೆ ತನ್ನ ಪ್ರೇಮವನ್ನು ವ್ಯಕ್ತಪಡಿಸುವಾಗ ಬಳಸಲಾಗುತ್ತದೆ. ಇಲ್ಲಿ ವಾರ್ಷಿಕವಾಗಿ ನಡೆಯುವ ಅಯೋಲಿಯಾಂಗ್ ಹೆಸರಿನ ವಸಂತದ ಹಬ್ಬದಲ್ಲೂ ಈ ವಾದ್ಯವನ್ನು ನುಡಿಸಲಾಗುತ್ತದೆ. ಈ ವರದಿಯೊಂದಿಗೆ ಅದರ ತುಣುಕನ್ನು ನೀವು ಆಲಿಸಬಹುದು
22. ಗದ್ದಲದ ನಗರದಲ್ಲೊಂದು ನಾದದ ಅಂಗಡಿ
ಇರ್ಫಾನ್ ಶೆಖ್ ಹಾಗೂ ಅವರ ಸಮುದಾಯ ವಾಸವಿರುವುದು ಮುಂಬಯಿ ನಗರದ ದಹಿಸರ್ ಪ್ರದೇಶದ ಗಲ್ಲಿಗಳಲ್ಲಿ. ಅವರು ಆಧುನಿಕತೆಯು ತಂದೊಡ್ಡುತ್ತಿರುವ ಸವಾಲುಗಳ ನಡುವೆಯೂ ತಮ್ಮ ಹಳೆಯ ಢೋಲಕ್ ತಯಾರಿಕೆಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಕಾಲದ ಪರೀಕ್ಷೆಯನ್ನು ಮೆಟ್ಟಿನಿಂತ ಕೌಶಲದ ಕುರಿತು ಮಾತನಾಡುವ ಒಂದು ಚಿತ್ರವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ
21. ಬೋಡೋ ನೃತ್ಯಗಾರರು ಮತ್ತು ಸಂಗೀತಗಾರರ ಕಲರವ
ಸಿಫಂಗ್ (ಉದ್ದನೆಯ ಕೊಳಲು), ಖಾಮ್ (ಡ್ರಮ್) ಮತ್ತು ಸೆರ್ಜಾ (ಪಿಟೀಲು) ವಾದನದ ಜೊತೆಗೆ ಅಸ್ಸಾಂನ ಬೋಡೋ ಸಮುದಾಯದ ಸುಬುನ್ಶ್ರೀ ಮತ್ತು ಬಗುರುಂಬಾ ನೃತ್ಯಗಳನ್ನು ನೋಡಿ
20. 'ಅವರೂ ಖರ್ತಾಲ್ ತಯಾರಿಸುತ್ತಿರಬಹುದು ಎನ್ನುವುದು ನನ್ನ ನಂಬಿಕೆ'
ಅನೋಪರಾಮ್ ಸುತಾರ್ ರಾಜಸ್ಥಾನದಲ್ಲಿ ಪ್ರಖ್ಯಾತವಾಗಿರುವ ಖರತಾಲ್ ಎನ್ನುವ ಪಕ್ಕವಾದ್ಯ ತಯಾರಕರಲ್ಲಿ ಒಬ್ಬರು. ಈ ತಾಳವನ್ನು ತಯಾರಿಸುವ ಕಲೆ ಈಗ ಅಳಿವಿನಂಚಿನಲ್ಲಿದೆ. ಇದನ್ನು ತಯಾರಿಸುವ ಕುಶಲಕರ್ಮಿಗಳು ಹೆಚ್ಚಿನ ಸಂಪಾದನೆ ಹುಡುಕಿಕೊಂಡು ನಗರಗಳಿಗೆ ಹೋಗಿ ಅಲ್ಲಿ ಮರಗೆಲಸ ಮಾಡುತ್ತಿದ್ದಾರೆ
19. ಮೋರ್ಚಾಂಗ್ ತಯಾರಿಕೆಯ ಐವತ್ತು ವರ್ಷಗಳು
ಮೋಹನ್ಲಾಲ್ ಲೋಹರ್ ಅವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲವನ್ನು ಮೋರ್ಚಾಂಗ್ಗಳ ತಯಾರಿಕೆಯಲ್ಲಿ ಕಳೆದಿದ್ದಾರೆ. ಈ ಪಕ್ಕವಾದ್ಯಗಳ ದನಿಯನ್ನು ರಾಜಸ್ಥಾನದ ಮರಳುಗಾಡಿನಾದ್ಯಂತ ಆಲಿಸಬಹುದು
18. ತಾಳ ತಪ್ಪಿದ ಮಜುಲಿ ಬಾದ್ಯೊಕಾರರ ಬದುಕು
ವರ್ಷವಿಡೀ ಆಚರಿಸಲಾಗುವ ಅಸ್ಸಾಮಿ ಹಬ್ಬಗಳಲ್ಲಿ ತಾಳವಾದ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಡೋಲುಗಳು, ಖೋಲ್ಗಳು ಮತ್ತು ಇನ್ನಿತರ ಸಂಗೀತ ಉಪಕರಣಗಳನ್ನು ತಯಾರಿಸುವ ಹಾಗೂ ದುರಸ್ತಿ ಮಾಡುವ ನುರಿತ ಕುಶಲಕರ್ಮಿಗಳಿಗೆ ಹೊಸ ಗೋಹತ್ಯೆ-ನಿಷೇಧ ಕಾನೂನು ಬೆಲೆ ಏರಿಕೆಯ ಸಮಸ್ಯೆಯನ್ನುಂಟುಮಾಡಿ, ಕಿರುಕುಳವನ್ನು ನೀಡಿದೆ
17. ನಾದ ಹೊಮ್ಮಿಸದ ಮೀರಜ್ನ ಸಿತಾರ್ಮೇಕರ್ಗಳ ಸಿತಾರ್
ಮಹಾರಾಷ್ಟ್ರದ ಮೀರಜ್ನಲ್ಲಿ ವಾಸಿಸುವ ಕುಟುಂಬಗಳು ಸಿತಾರ್ ಮತ್ತು ತಾನ್ಪುರದಂತಹ ತಂತಿ ವಾದ್ಯಗಳನ್ನು ತಯಾರಿಸುತ್ತವೆ. ಯುವ ಪೀಳಿಗೆ ಈ ಕರಕುಶಲ ವೃತ್ತಿಯಿಂದ ದೂರ ಸರಿಯುತ್ತಾ, ಅವುಗಳನ್ನು ನುಡಿಸುವುದನ್ನು ಕಲಿಯುತ್ತಿದೆ
16. ಹಲಸಿನ ಮರದ ಮಧುರ ಸಂಗೀತ
ಭಾರತದ ಅನೇಕ ಅಪ್ರತಿಮ ಸಂಗೀತ ವಾದ್ಯಗಳನ್ನು ತಮಿಳುನಾಡಿನಾದ್ಯಂತ ಬೆಳೆಯುವ ಹಲಸಿನ ಮರದ ಮರದಿಂದ ತಯಾರಿಸಲಾಗುತ್ತದೆ. ಪನ್ರುಟ್ಟಿ ಮತ್ತು ತಂಜಾವೂರಿನ ಉತ್ತಮ ನುರಿತ ತಯಾರಕರು ಈ ಮರದಿಂದ ರಾಗ ಮತ್ತು ಲಯವನ್ನು ಹೊರತೆಗೆಯುತ್ತಾರೆ
15. 'ನನ್ನ ಟಾಡ್ಪಾ ನನ್ನ ದೇವರು'
ಭಿಕ್ಳ್ಯಾ ಲಾಡ್ಕ್ಯಾ ಧಿಂಡಾ ಓರ್ವ ವರ್ಲಿ ಆದಿವಾಸಿ. ಈ 89 ವರ್ಷದ ಸಂಗೀತ ಕಲಾವಿದೆ ವಾಲ್ವಾಂಡೆಯ ನಿವಾಸಿ. ಇವರು ಬಿದಿರು ಮತ್ತು ಸೋರೆ ಬುರುಡೆ ಬಳಸಿ ತಯಾರಿಸಲಾಗುವ ತಾಡ್ಪಾ ಎನ್ನುವ ಸಾಂಪ್ರದಾಯಿಕ ಗಾಳಿ ವಾದ್ಯವನ್ನು ನುಡಿಸುತ್ತಾರೆ. ಈ ಲೇಖನದಲ್ಲಿ ಅವರು ತಮ್ಮ ಸಂಗೀತ ಮತ್ತು ಅದರ ಹಿಂದಿನ ನಂಬಿಕೆಯ ಕುರಿತು ಮಾತನಾಡಿದ್ದಾರೆ
14. ನಾರಾಯಣ ದೇಸಾಯಿಯವರ ಶಹನಾಯಿ ಮತ್ತು ಕಲೆಗಾರಿಕೆ
ಈಗೀಗ ಕೈಯಿಂದ ತಯಾರಿಸಲಾದ ಶಹನಾಯಿಗಳು ಕಾಣುವುದು ಅಪರೂಪವಾಗಿದೆಯಾದರೂ ಕರ್ನಾಟಕದ ಮಾಣಕಪುರದ ನುರಿತ ಕುಶಲಕರ್ಮಿ ನಾರಾಯಣ ದೇಸಾಯಿಯವರು (65) ಹಲವು ಬಗೆಯ ತಂತ್ರಗಳನ್ನು ಬಳಸುತ್ತಾ ಈ ಕಲೆಯನ್ನು ಜೀವಂತವಾಗಿರಿಸಿದ್ದಾರೆ
13. ಮುಂಬಯಿ ಲೋಕಲ್ ರೈಲುಗಳು ಮತ್ತು ಬದುಕಿನ ಸ್ವರ ಹೊರಡಿಸದ ತಂತಿಗಳು
ತಮ್ಮ ತಂದೆಯಿಂದ ಪಾರಂಪರಿಕ ಉಡುಗೊರೆಯಾಗಿ ಪಡೆದ ಸಾರಂಗಿಯನ್ನು ಮುಂಬಯಿ ನಗರದ ಲೋಕಲ್ ರೈಲುಗಳಲ್ಲಿ ನುಡಿಸುವ ಕಿಶನ್ ಜೋಗಿಯವರಿಗೆ ಈ ಉಪಕರಣದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ
12. ಮಧುರೈ: ಮೌನ ರಾಗ ನುಡಿಸುತ್ತಿರುವ ಕೊಂಬುಗಳು
ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ದೇವಾಲಯದ ಉತ್ಸವಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಂದ ಬರುತ್ತಿದ್ದ ಆದಾಯಗಳಿಲ್ಲದೆ ತಮಿಳುನಾಡಿನ ಕೊಂಬು ಕಲಾವಿದರು ಹೆಣಗಾಡುತ್ತಿದ್ದಾರೆ. ಆದರೆ ಅವರನ್ನು ಹೆಚ್ಚು ಕಾಡುತ್ತಿರುವುದು ತಮ್ಮ ಕಲೆ ನಶಿಸುತ್ತಿರುವ ಚಿಂತೆ
11. ಒಂದೇ ಮಾಲೆಯ ಹೂಗಳಂತೆ ಕುಣಿದಾಟ
ಚಳಿಯ ದಿನಗಳ ಸಮಾರಂಭಗಳು ಮತ್ತು ಆಚರಣೆಗಳ ಸಂದರ್ಭದಲ್ಲಿ ಛತ್ತೀಸ್ಗಢದ ಯುವಕ-ಯುವತಿಯರು ಹಲ್ಕಿ ಮಂದಾರಿ ಮತ್ತು ಕೊಲಾಂಗ್ ನೃತ್ಯ ಹಾಗೂ ರೈಲಾ ಹಾಡುಗಳಿಗಾಗಿ ಒಟ್ಟಿಗೆ ಪ್ರಯಾಣಿಸುತ್ತಾರೆ
10. ದಿನಕರ್ ಐವಳೆ: ಸಂಕಷ್ಟಗಳ ನಡುವೆ ಬದುಕಿಗೆ ಮಾಧುರ್ಯ ತುಂಬಿದ ಕೊಳಲು
ದಿನಕರ ಐವಳೆ, ಮಹಾರಾಷ್ಟ್ರದ ಕೊಡೋಲಿ ಗ್ರಾಮದ ಹಿರಿಯ ನುರಿತ ಕುಶಲಕರ್ಮಿ ಮತ್ತು ಸಂಗೀತಗಾರ, ತಮ್ಮ ಜೀವನದ 1.5 ಲಕ್ಷ ಗಂಟೆಗಳನ್ನು ಕೊಳಲು ತಯಾರಿಕೆಯಲ್ಲಿ ತಯಾರಿಕೆಯಲ್ಲಿ ಕಳೆದಿದ್ದಾರೆ; ಆದರೆ, ಲಾಕ್ಡೌನ್ ಮತ್ತು ಇತರ ತೊಂದರೆಗಳಿಂದ ಕರಕುಶಲ ಕೆಲಸ ಮತ್ತು ಸಂಗೀತ ಎರಡೂ ಸವಾಲುಗಳನ್ನು ಎದುರಿಸುತ್ತಿವೆ
9. ಮರೆಯಾಗುತ್ತಿದೆ: ಮಣಿರಾಮ್ ಅವರ ಕೊಳಲುಗಳು, ಓರ್ಚಾದ ಕಾಡುಗಳು
ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯ ಗೊಂಡ ಆದಿವಾಸಿ ಸಮುದಾಯದ ಕೊಳಲು ತಯಾರಕರಾದ ಮಣಿರಾಮ್ ಮಾಂಡವಿ ಅವರು ಮರಗಳು ಮತ್ತು ಬಿದಿರುಗಳಿಂದ ಕಾಡುಗಳು ಸಮೃದ್ಧವಾಗಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತಾರೆ. ಅವರು ತಾವು 'ತಿರುಗುವ ಕೊಳಲು' ತಯಾರಿಸುವಾಗ ಪ್ರಾಣಿಗಳು, ಮರಗಳು ಮತ್ತು ಬಿದಿರು ಇವುಗಳನ್ನು ತಮ್ಮ ಚಿಹ್ನೆಯಾಗಿ ಬಳಸಿಕೊಂಡ ದಿನಗಳನ್ನು ಕೂಡ ನೆನಪಿಸಿಕೊಳ್ಳುತ್ತಾರೆ
8. “ಮುಂಬೈನಲ್ಲಿನ ರೈತರ ಧರಣಿ ಸತ್ಯಾಗ್ರಹಕ್ಕೆ ಲಯ ಬಂದಾಗ”
ಜನವರಿ ಅಂತ್ಯದಲ್ಲಿ ಮುಂಬಯಿಯ ಆಜಾದ್ ಮೈದಾನದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ, ಮಹಾರಾಷ್ಟ್ರದ ದಹನು ತಾಲ್ಲೂಕಿನ ಆದಿವಾಸಿ ಸಮುದಾಯಗಳ ಧುಮ್ಸಿ ಮತ್ತು ಟಾರ್ಪಾ ಜನರು ಹಾಡು ಮತ್ತು ನೃತ್ಯದ ಮೂಲಕ ನೂತನ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದರು.
7. ಪೆರುವೆಂಬ: ಲಯವನ್ನು ಉಳಿಸಿಕೊಳ್ಳುವ ಸಂಘರ್ಷ
ಕೋವಿಡ್-19 ಲಾಕ್ಡೌನ್ನಲ್ಲಿ ಯಾವುದೇ ಮಾರಾಟವಿಲ್ಲದ ಕಾರಣ ಮತ್ತು ಗ್ರಾಹಕರ ಇಚ್ಛೆಗೆ ಅನುಗುಣವಾಗಿ ತಯಾರಿಸಲ್ಪಟ್ಟ ತಮ್ಮ ತಾಳವಾದ್ಯಗಳಿಗೆ ಕಚ್ಚಾ ಚರ್ಮವನ್ನು ದೊರಕಿಸಿಕೊಳ್ಳುವಲ್ಲಿನ ತೊಂದರೆಯಿಂದಾಗಿ, ಕೇರಳದ ಪೆರುವೆಂಬ ಹಳ್ಳಿಯ ಕಡಚಿ ಕೊಲ್ಲನ್ ಕುಶಲಕರ್ಮಿಗಳು ಸುಸ್ಥಿರ ಆದಾಯವನ್ನು ಕಳೆದುಕೊಳ್ಳುತ್ತಿದ್ದಾರೆ
6. ʼದೆಹಲಿಯ ತನಕ ನಾವು ನುಡಿಸುತ್ತಾ, ಕುಣಿಯುತ್ತ ಹೋಗುತ್ತೇವೆʼ
ಮಹಾರಾಷ್ಟ್ರದ ವಿವಿಧ ಜಿಲ್ಲೆಗಳ ಸುಮಾರು 1,000 ರೈತರು, (ಅವರಲ್ಲಿ ಹೆಚ್ಚಿನವರು ಆದಿವಾಸಿಗಳು) ವ್ಯಾನ್, ಟೆಂಪೊ, ಜೀಪ್ ಮತ್ತು ಕಾರುಗಳಲ್ಲಿ ದೆಹಲಿಯಲ್ಲಿರುವ ಪ್ರತಿಭಟನಾಕಾರರನ್ನು ಸೇರಲು ಪ್ರಯತ್ನಿಸುತ್ತಿದ್ದಾರೆ. ಇದೊಂದು ವರ್ಣರಂಜಿತ ಮತ್ತು ದೃಢ ನಿಶ್ಚಯದೊಂದಿಗೆ ಹೊರಟಿರುವ ತಂಡವಾಗಿದೆ
5. ಬಿರ್ಭಮ್ನಲ್ಲಿ ಮರೆಯಾಗುತ್ತಿರುವ ನೀರು, ಕಾನು, ಭೂಮಿಯ ಮಧುರ ಸ್ವರ
ಪಶ್ಚಿಮ ಬಂಗಾಳದ ಬಿರ್ಭಮ್ನಲ್ಲಿ ಆದಿವಾಸಿ ಸಮುದಾಯಗಳ ನಡುವೆ ಜನಪ್ರಿಯವಾಗಿರುವ ಸಂಗೀತ ವಾದ್ಯವೊಂದು ಜನರ ನಡುವಿನಿಂದ ಕಣ್ಮರೆಯಾಗುತ್ತಿದೆ. ಇದಕ್ಕೆ ಸಾಂಸ್ಕೃತಿಕ ಕಾರಣಗಳ ಆಚೆ ಬೇರೆ ಕಾರಣಗಳೂ ಇವೆ
4. ಹಿಮಾಚಲದ ಬೆಟ್ಟದಂಚಿನಲ್ಲಿ ಸಿಕ್ಕ ರಾಜಸ್ಥಾನಿ ಸಂಗೀತಗಾರರು
ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ, ರಾಜಸ್ಥಾನದ ಕೃಷಿ ಕಾರ್ಮಿಕರು ಹಿಮಾಚಲ ಪ್ರದೇಶದ ಧರ್ಮಶಾಲಾಕ್ಕೆ ಹೋಗಿ ಶತಮಾನಗಳಷ್ಟು ಹಳೆಯದಾದ ಜಾನಪದ ವಾದ್ಯ ರಾವಣ್ಹಠ್ಠಾ ನುಡಿಸಿ ಅದರ ಮೂಲಕ ತಮ್ಮ ಹೊಟ್ಟೆಪಾಡನ್ನು ನೋಡಿಕೊಳ್ಳುತ್ತಾರೆ
3. ಹೇಸರಘಟ್ಟದಲ್ಲಿ ಡೋಲಿನೊಂದಿಗೆ ಕುಣಿತ
ಕೇವಲ ಬಲಿಷ್ಠ ಗಂಡಸರಿಗಷ್ಟೇ ಮೀಸಲೆಂಬಂತೆ ಇದ್ದ ಕನ್ನಡದ ಡೊಳ್ಳುಕುಣಿತವನ್ನು ಬೆಂಗಳೂರಿನ ಹೊರಭಾಗದಲ್ಲಿರುವ ಕೆಲ ಉತ್ಸಾಹಿ ಬಾಲಕಿಯರು ನುರಿತ ನರ್ತಕರಂತೆ ಪ್ರದರ್ಶಿಸಬಲ್ಲರು. ಅಸಾಮಾನ್ಯ ಉತ್ಸಾಹ ಮತ್ತು ಶಕ್ತಿಯೊಂದಿಗೆ ಬಾಲಕಿಯರಿಂದ ಪ್ರಸ್ತುತಪಡಿಸಲಾಗುತ್ತಿರುವ ಡೊಳ್ಳುಕುಣಿತದ ಒಂದು ಅದ್ಭುತವಾದ ಪ್ರದರ್ಶನವನ್ನು ನೀವು ಇಲ್ಲಿಯ ವೀಡಿಯೋದಲ್ಲಿ ವೀಕ್ಷಿಸಬಹುದು.
2. ಉಪ್ಪಿನಕಾಯಿ ಮತ್ತು ಹಪ್ಪಳದಾಚೆಗಿರುವ ಡೋಲು ಮತ್ತು ಕನಸುಗಳು
ಗ್ರಾಮಸ್ಥರ ಕೊಂಕು, ಗಂಡಂದಿರ ಕಿರುಕುಳ, ಶತಮಾನಗಳಿಂದ ನಡೆದುಕೊಂಡು ಬಂದ ಜಾತಿಯ ನಂಬಿಕೆಗಳು... ಹೀಗೆ ಇವೆಲ್ಲವುಗಳೊಂದಿಗೆ ಸೆಣಸಾಡುತ್ತಿರುವ ಬಿಹಾರದ ಢಿಬ್ರಾ ನಿವಾಸಿಗಳಾದ ಹತ್ತು ದಲಿತ ಮಹಿಳೆಯರು ಹೊಸ ಮಹಿಳಾ ಬ್ಯಾಂಡ್ ಒಂದನ್ನು ಶುರು ಮಾಡಿದ್ದಾರೆ. ಸದ್ಯ ಈ ಮಹಿಳೆಯರ ತಾಳಕ್ಕೆ ತಕ್ಕಂತೆ ಬಹಳಷ್ಟು ಮಂದಿ ಲಯಬದ್ಧವಾಗಿ ಹೆಜ್ಜೆಯನ್ನೂ ಹಾಕುತ್ತಿದ್ದಾರೆ.
1. ಬಾಸುದೇಬ್ ಬೌಲ್: ಬಂಗಾಲದ ಜನಪದ ಜೋಗಿ
ಬೌಲ್ ಸಂಸ್ಕøತಿಯು ಜೀವನದ ವಿವಿಧ ಆಯಾಮಗಳ ತತ್ವವನ್ನು ಬಿಂಬಿಸುವಂತಹ ಸಂಗೀತ ಪ್ರಕಾರವಾಗಿ ವಿಭಿನ್ನವಾಗಿ ನಿಲ್ಲುವಂಥದ್ದು. ಇಲ್ಲಿ ಪ್ರಸ್ತುತಪಡಿಸಲಾಗಿರುವ ಸಾಕ್ಷ್ಯಚಿತ್ರದಲ್ಲಿ ಬಿರ್ಹಮ್ ಜಿಲ್ಲೆಯ ಬೋಲ್ಪುರ್ ಮೂಲದವರಾಗಿರುವ, ವೃತ್ತಿಯಲ್ಲಿ ಶಿಕ್ಷಕರೂ ಆಗಿರುವ ಬಾಸುದೇಬ್ ದಾಸ್ ಬೌಲ್ ಈ ಪ್ರಕಾರದ ಸಂಗೀತ ಮತ್ತು ಜೀವನವಿಧಾನವನ್ನು ನಮ್ಮ ಮುಂದಿಡುತ್ತಿದ್ದಾರೆ.
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/tuning-into-indias-many-musical-instruments-kn

























