ವಾಹ್ ಯಾ ಎನ್ನುವುದು ವಯಸ್ಕರ ಕೈಯಲ್ಲಿ ಸುಲಭವಾಗಿ ಕೂರುವ ವಾದ್ಯ. ಕೇವಲ ನಾಲ್ಕೂವರೆ ಇಂಚುಗಳಷ್ಟು ಉದ್ದವಿರುವ ಇದನ್ನು ವಾಹ್ (ಬಿದಿರು) ಬಳಸಿ ತಯಾರಿಸಲಾಗುತ್ತದೆ. “ಈ ವಾದ್ಯ ಪ್ರಣಯವನ್ನು ಪ್ರತಿನಿಧಿಸುತ್ತದೆ” ಎಂದು ಬಿದಿರಿನ ಸಣ್ಣ ಪಟ್ಟಿಯನ್ನು ತುಟಿಗಳತ್ತ ಒಯ್ಯುತ್ತಾ ಅಂಗ್ಯಾಪ್ ಲೋ ಹೇಳಿದರು.
ಅಂಗ್ಯಾಪ್ ಈ ಹಿಂದೆ ರೈತರಾಗಿದ್ದವರು. ನಮ್ಮೊಂದಿಗೆ ಮಾತನಾಡುತ್ತಾ ಅವರು ಅಂಗೈಯಗಲದ ಸಣ್ಣ ಸಂಗೀತ ವಾದ್ಯವೊಂದನ್ನು ಹೊರತೆಗೆದರು. ಅದನ್ನು ತನ್ನ ತುಟಿಗಳ ಬಳಿಗೆ ಕೊಂಡೊಯ್ದ ಅವರು ಅದರ ಬಲ ಭಾಗದಲ್ಲಿದ್ದ ದಾರವನ್ನು ಎಳೆದರು. ಅದರಲ್ಲಿ ಹಲವು ಬಣ್ಣಗಳ ದಾರ ನೇತಾಡುತ್ತಿದ್ದವು. ನಂತರ ಅವರು ಅದನ್ನು ನುಡಿಸಲು ಆರಂಭಿಸಿದರು.
ಅಂಗ್ಯಾಪ್ ಪಕ್ಕದಲ್ಲಿ ಅವರ ಬಾಲ್ಯ ಸ್ನೇಹಿತೆಯರಾದ ಯಿಂಗ್ ಲಿಹ್ ಹಾಗೂ ನೈಲಿ ಕುಳಿತಿದ್ದರು. ಇವರೆಲ್ಲರೂ ಅರವತ್ತರ ಆಸುಪಾಸಿನ ವಯಸ್ಸಿನವರು. ಮೋನ್ಗ್ರಾಮದಬ್ಯಾಪ್ಟಿಸ್ಟ್ ಚರ್ಚ್ ಪಕ್ಕದ ಮೈದಾನದಲ್ಲಿನಡೆಯುತ್ತಿರುವ ಅಯೋಲಿಯಾಂಗ್ ಹಬ್ಬಕ್ಕೆಂದು ಈ ಮೂವರು ಒಟ್ಟಿಗೆ ಬಂದಿದ್ದರು.






