ಅವನೂ ನಮ್ಮಷ್ಟೇ ಚಕಿತನಾಗಿದ್ದ

ನಾವು ಒಂದು ಜಿಜ್ಞಾಸೆಯ ಪ್ರಶ್ನೆಯನ್ನು ಎದುರಿಸಿತ್ತಿದ್ದೆವು: ಒಣಹುಲ್ಲಿನ ರಾಶಿಯ ಅಷ್ಟು ಎತ್ತರದಲ್ಲಿ ಅವನು ತನ್ನ ಬೈಸಿಕಲ್ ಅನ್ನು ಹೇಗೆ ನೇತುಹಾಕಿದ? ಬಹುಶಃ, ಅವನಿಗೆ ಮೂಡಿದ ಪ್ರಶ್ನೆ ಹೀಗಿದ್ದಿರಬಹುದು: (ಐಫೋನ್ 3S ನಿಂದ) ತನ್ನ ಅರ್ಧದಷ್ಟು ದೇಹವನ್ನು ಕಾರಿನ ಕಿಟಕಿಯಿಂದ ದೇಹವನ್ನು ಹೊರಹಾಕಿ ಚಿತ್ರವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಈ ಹುಚ್ಚ ಯಾರಿರಬಹುದು ಎಂದು.

ಅದು ಅಕ್ಟೋಬರ್ 2009, ನಾವು ಆಂಧ್ರಪ್ರದೇಶದ ಕೃಷ್ಣ ಮತ್ತು ಗುಂಟೂರು ಜಿಲ್ಲೆಗಳ ನಡುವೆ ಎಲ್ಲೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು. ಅವನನ್ನು ಮೊದಲು ದೂರದಿಂದ ನೋಡಿದಾಗ, ಅದು ಸ್ವಲ್ಪ ವಿಚಿತ್ರವೆನಿಸಿತು. ಒಂದು ಸೈಕಲ್ ಮೇಲಕ್ಕೆ ನೇತಾಡುತ್ತಿತ್ತು ಮತ್ತು ಅದರ ಮೇಲೆ ಒಬ್ಬ ವ್ಯಕ್ತಿ ಕುಳಿತಿದ್ದ. ಒಣಹುಲ್ಲಿನ ರಾಶಿಯು ಎಷ್ಟು ದೊಡ್ಡದಾಗಿದೆ ಎಂದರೆ ಅವನು ಯಾವ ವಾಹನದಲ್ಲಿ ಕುಳಿತಿದ್ದಾನೆ ಎಂದು ತಿಳಿಯುತ್ತಿರಲಿಲ್ಲ. ನಂತರ ಅದು ಟ್ರ್ಯಾಕ್ಟರ್ ಟ್ರಾಲಿ ಎಂಬುದು ಗೊತ್ತಾಯಿತು.

ಮತ್ತು ನಾವು ಹತ್ತಿರಕ್ಕೆ ಬಂದಂತೆ, ನೀವು ಚಿತ್ರದಲ್ಲಿ ಕಾಣುವಂತೆ, ಬಲವಾದ ಬಿದಿರಿನ ಕಂಬದ ಒಂದು ಸಣ್ಣ ಭಾಗ ಒಣಹುಲ್ಲಿನ ರಾಶಿಯಿಂದ ಹೊರಗೆ ಬಂದಿದೆ, ಅದರ ಮೇಲೆ ಸೈಕಲ್ಲನ್ನು ಹೇಗೋ ನೇತಾಡಿಸಲಾಗಿದೆ ಅಥವಾ ಕಟ್ಟಲಾಗಿದೆ - ನಮಗೆ ಹಗ್ಗವನ್ನು ನೋಡಲಾಗಲಿಲ್ಲ. ವಾಹನವು ಯಾವುದಾದರೂ ಹಳ್ಳಿಯ ರಸ್ತೆಗೆ ತಿರುಗುವ ಮೊದಲು ಇದರ ಚಿತ್ರವನ್ನು ತೆಗೆಯಲು ಇದ್ದ ಏಕೈಕ ಮಾರ್ಗವೆಂದರೆ ಕಿಟಕಿಯಿಂದ ದೇಹವನ್ನು ಹೊರಹಾಕಿ ಕ್ಲಿಕ್ ಮಾಡುವುದು. ನಂತರ ನಾವು ಸೇತುವೆಯನ್ನು ದಾಟಿದೆವು ಮತ್ತು ಎರಡೂ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಹೋದವು - ನಾವು ಫೋಟೋ ಸರಿಯಾಗಿ ಬಂದಿದೆಯೇ ಎಂದು ನೋಡುತ್ತಿದ್ದೆವು ಮತ್ತು ಅವನು ಬಹುಶಃ ಹುಲ್ಲಿನ ಕಟ್ಟನ್ನು ಹಿಡಿದುಕೊಂಡಿರಬಹುದು - ಅವನ ಸೈಕಲ್‌ನಲ್ಲಿ ಅಲ್ಲದಿದ್ದರೂ, ಟ್ರಾಕ್ಟರ್ ನೆಗೆಯುವ ತಿರುವು ಪಡೆದಿದ್ದರಿಂದ.

ಅನುವಾದ: ಶಂಕರ. ಎನ್. ಕೆಂಚನೂರು

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru