ಪರಿ ಲೈಬ್ರರಿ 2024ರ ವರ್ಷದಲ್ಲಿ ಒಂದು ಮೈಲಿಗಲ್ಲನ್ನೇ ಸಾಧಿಸಿದೆ. ನಾವು ಈ ವರ್ಷ ದಾಖಲೆ ಸಂಖ್ಯೆಯ ಸಂಪನ್ಮೂಲಗಳನ್ನು ಸಂಗ್ರಹಿಸಿ ಆರ್ಕೈವ್ ಮಾಡಿದ್ದೇವೆ. ಇವುಗಳಲ್ಲಿ ಕಾಯಿದೆಗಳು ಮತ್ತು ಕಾನೂನುಗಳು, ಪುಸ್ತಕಗಳು, ಸಮಾವೇಶಗಳು, ಪ್ರಬಂಧಗಳು, ಸಂಕಲನಗಳು, ಶಬ್ದಕೋಶಗಳು, ಸರ್ಕಾರಿ ವರದಿಗಳು, ಕರಪತ್ರಗಳು, ಸಮೀಕ್ಷೆಗಳು ಮತ್ತು ಲೇಖನಗಳು ಸೇರಿವೆ.
ಈ ನಡುವೆ 2024ರ ವರ್ಷವು ದಾಖಲೆಯ ಉಷ್ಣತೆಯನ್ನು ದಾಖಲಿಸಲಿದೆ. ಇದು 2023ನೇ ಇಸವಿಯ ಅತ್ಯಧಿಕ ಉಷ್ಣತೆಯ ದಾಖಲೆಯನ್ನು ಹಿಂದಿಕ್ಕಿ ಈ ದಾಖಲೆಯನ್ನು ಸೃಷ್ಟಿಸಲಿದೆ. ಬದಲಾಗುತ್ತಿರುವ ಹವಾಗುಣವು ವಲಸೆ ಪ್ರಭೇದಗಳ ಮೇಲೆ ಪರಿಣಾಮ ಬೀರಿದೆ, ಅವುಗಳಲ್ಲಿ ಐದರಲ್ಲಿ ಒಂದು ಈಗ ಅಳಿವಿನ ಅಂಚಿನಲ್ಲಿದೆ. ಮತ್ತು ಭಾರತದ ತರಿ ಭೂಮಿ, ಸರೋವರ, ಕೆರೆ, ಕೊಳ, ಹಳ್ಳ ನದಿ ಎಲ್ಲವೂ ಅಪಾಯದಲ್ಲಿವೆ.
ಮಾಲಿನ್ಯ ಮತ್ತು ಉಷ್ಣತೆಯ ನಡುವಿನ ಸಂಬಂಧವನ್ನು ಇಲ್ಲಿನ ದಾಖಲೆಗಳಲ್ಲಿ ಅತ್ಯುತ್ತಮವಾಗಿ ದಾಖಲಿಸಲಾಗಿದೆ. ಧೂಳಿನ ಕಣಗಳಿಂದಾಗಿ ಉಂಟಾಗುವ ಗಾಳಿ ಮಾಲಿನ್ಯವು ದಕ್ಷಿಣ ಏಷ್ಯಾದಲ್ಲಿ ವಿಶೇಷವಾಗಿ ದಾಖಲೆ ಮಟ್ಟದಲ್ಲಿದೆ. ಭಾರತದಲ್ಲಿ ಇದರ ಸಾಂದ್ರತೆ ಪ್ರತಿ ಘನ ಮೀಟರಿಗೆ 54.4 ಮೈಕ್ರೋಗ್ರಾಂ. ಇದು ದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಮಿತಿಗಿಂತ 11 ಪಟ್ಟು ಹೆಚ್ಚು. ಹೊಸದೆಹಲಿಯಲ್ಲಿ ಈ ಸಾಂದ್ರತೆಯ ಮಟ್ಟ ಪ್ರತಿ ಘನ ಮೀಟರಿಗೆ 102.1 ಮೈಕ್ರೋಗ್ರಾಂಗಳಷ್ಟಿತ್ತು, ಇದು ಇನ್ನೂ ಆತಂಕಕಾರಿ ಮಟ್ಟ. ಈ ಒಂದು ಘಟನೆಯು ರೈಡ್ - ಸೋರ್ಸಿಂಗ್ ಸೇವೆ ನೀಡುವ ಗಿಗ್ ಕೆಲಸಗಾರರ ಅನುಭವವನ್ನು ಕಟ್ಟಿಕೊಕೊಡುವ ಕಾಮಿಕ್ ಪುಸ್ತಕವೊಂದರ ಪ್ರಕಟಣೆಗೆ ಕಾರಣವಾಯಿತು.







