"ವೀರ್ ನಾರಾಯಣ್ ಸಿಂಗ್?" ಎಂದು ಛತ್ತೀಸ್‌ಗ h ದ ಸೋನ್‌ಖಾನ್ ಗ್ರಾಮದ ಸಹಸ್ ರಾಮ್ ಕಂವರ್ ಹೇಳುತ್ತಾರೆ. "ಅವನು ದರೋಡೆಕೋರನಾಗಿದ್ದ, ಲೂಟಿಕೋರ. ಕೆಲವರು ಅವನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡಿದ್ದಾರೆ. ನಾವು ಮಾಡಲಿಲ್ಲ. "ಸುತ್ತಲೂ ಕುಳಿತಿದ್ದವರಲ್ಲಿ ಮೂರ್ನಾಲ್ಕು ಜನರು ಹೌದು ಎಂದು ತಲೆಯಾಡಿಸಿದರು. ಆದರೆ ಉಳಿದವರ ಆಲೋಚನೆಯು ಸಹಸ್ ರಾಮ್ ಯೋಚನಂತೆಯೇ ಇರುತ್ತದೆ.
ಅದನ್ನು ಕೇಳಿ ನಮಗೆ ಬಹಳ ನೋವಾಯಿತು. ಸೋನಾಖಾನ್ ಗ್ರಾಮವನ್ನು ಹುಡುಕುತ್ತಾ ನಾವು ಬಹಳ ದೂರ ಪ್ರಯಾಣಿಸಿದ್ದೆವು. ಈ ಗ್ರಾಮವು 1850ರ ದಶಕದ ಮಧ್ಯಭಾಗದ ಛತ್ತೀಸ್‌ಗಢ ಬುಡಕಟ್ಟು ದಂಗೆಯ ಕೇಂದ್ರವಾಗಿತ್ತು. ಇದು 1857ರ ಮಿಲಿಟರಿ ದಂಗೆಯ ಮೊದಲೇ ಪ್ರಾರಂಭವಾಗಿತ್ತು. ಒಬ್ಬ ನಿಜವಾದ ದೇಶದ ವೀರನನ್ನು ಇದು ಮುನ್ನೆಲೆಗೆ ತಂದಿತು.
ಈ ಗ್ರಾಮದಲ್ಲಿಯೇ ವೀರ್ ನಾರಾಯಣ್ ಸಿಂಗ್ ಬ್ರಿಟಿಷರನ್ನು ಎದುರಿಸಿದ್ದರು.
1850ರ ದಶಕದಲ್ಲಿ ಬರಗಾಲದ ಅಂಚಿಗೆ ತಲುಪಿದ ದೀನ ಸ್ಥಿತಿ ಈ ಕ್ರಾಂತಿಗೆ ಕಾರಣವಾಯಿತು. ಜನರ ದೈನಂದಿನ ಜೀವನವು ಹೆಚ್ಚು ಕಷ್ಟಕರವಾಗಿದ್ದರಿಂದ ಸೋನಾಖಾನಿನ ನಾರಾಯಣ್ ಸಿಂಗ್ ಈ ಪ್ರದೇಶದ ಭೂಮಾಲೀಕರನ್ನು ಧಿಕ್ಕರಿಸಿ ನಿಂತರು. "ಅವರು ಎಂದಿಗೂ ಭಿಕ್ಷೆ ಕೇಳಲಿಲ್ಲ" ಎಂದು ಹಳ್ಳಿಯ ಬುಡಕಟ್ಟು ಜನಾಂಗದ ಅತ್ಯಂತ ಹಿರಿಯ ವ್ಯಕ್ತಿ ಚರಣ್ ಸಿಂಗ್ ಹೇಳಿದರು. ನಾರಾಯಣ್ ಸಿಂಗ್ ಅವರ ಬಗ್ಗೆ ಅವರಿಗೆ ಒಂದಷ್ಟು ಸದಾಭಿಪ್ರಾಯ ಇರುವಂತೆ ಕಾಣುತ್ತಿತ್ತು.
"ಅವರು ವ್ಯಾಪಾರಿಗಳಿಗೆ ಮತ್ತು ಭೂಮಾಲೀಕರಿಗೆ ಗೋದಾಮುಗಳನ್ನು ತೆರೆದು ಧಾನ್ಯವನ್ನು ವಿತರಿಸಿ ಬಡವರ ಹಸಿವನ್ನು ನೀಗಿಸುವಂತೆ ಕೇಳಿಕೊಂಡರು." ಬರಗಾಲದ ಸಮಯದಲ್ಲಿ ಯಾವಾಗಲೂ ಇದ್ದಂತೆ, ಆಗಲೂ ಗೋದಾಮುಗಳು ಧಾನ್ಯದಿಂದ ತುಂಬಿದ್ದವು. "ಈಗ ಧಾನ್ಯ ನೀಡಿದಲ್ಲಿ ಮೊದಲ ಬೆಳೆ ಬಂದ ನಂತರ ಜನರು ತೆಗೆದುಕೊಂಡ ಧಾನ್ಯವನ್ನು ಹಿಂದಿರುಗಿಸಲಿರುವುದಾಗಿ ವ್ಯಾಪಾರಿಗಳಿಗೆ ಮತ್ತು ಭೂಮಾಲೀಕರಿಗೆ ಹೇಳಿದರು. ಭೂಮಾಲೀಕರು ಅದನ್ನು ಒಪ್ಪದಿದ್ದಾಗ, ಅವರು ಬಡ ಜನರೊಂದಿಗೆ ಸೇರಿಕೊಂಡರು ಮತ್ತು ಧಾನ್ಯವನ್ನು ಮುಟ್ಟುಗೋಲು ಹಾಕಿಕೊಂಡು ಎಲ್ಲರಿಗೂ ವಿತರಿಸಲು ದಾರಿ ಮಾಡಿಕೊಟ್ಟರು."








