ಟಿಫಿನ್ ಕ್ಯಾರಿಯರ್‌ಗಳು, ನೀರು, ಛತ್ರಿಗಳು ಮತ್ತು ಚಪ್ಪಲಿಗಳು. ನೀವು ಮಾಲೀಕರನ್ನು ನೋಡದಿದ್ದರೂ ಸಹ ನೀವು ಅವರನ್ನು ಗ್ರಹಿಸಿಬಿಡಬಹುದು ಮತ್ತು ಕೃಷಿ ಕೂಲಿಕಾರರ ಗುಂಪು ಹತ್ತಿರದ ಕೆಲಸದಲ್ಲಿದೆ ಎಂದು ನಿಮಗೆ ತಿಳಿಯುತ್ತದೆ. ಇದು ಒಡಿಶಾದ ಕೊರಾಪುಟ್ ಜಿಲ್ಲೆಯ ಸಿಂದೇಹಿ ಗ್ರಾಮದಲ್ಲಿ ಕಂಡು ಬಂದ ದೃಶ್ಯ. ಕಾರ್ಮಿಕರು, ಬಹುತೇಕ ಮಹಿಳೆಯರು ಮತ್ತು ಯುವತಿಯರು, ಪೊಟ್ಟಂಗಿ ಬ್ಲಾಕ್‌ನಾದ್ಯಂತ ತಮ್ಮ ಕೆಲಸದ ಸ್ಥಳವನ್ನು ತಲುಪಲು, ಆ ಎಲ್ಲಾ ಅಗತ್ಯ ವಸ್ತುಗಳನ್ನು (ಮತ್ತು ಹೆಚ್ಚು ಚಿತ್ರದಲ್ಲಿಲ್ಲ) ಹೊತ್ತೊಯ್ಯುತ್ತಿದ್ದರು. ಅದು ಜುಲೈ 2014 ಮತ್ತು ಅಂದು ಮಳೆ ಪ್ರಾರಂಭವಾಗಿತ್ತು. ಈ ಕಾರಣದಿಂದಾಗಿ ಛತ್ರಿಗಳು ಮತ್ತು ರಬ್ಬರ್ ಚಪ್ಪಲಿಗಳು ಧರಿಸದೆ ಸುತ್ತಲೂ ಬಿದ್ದಿದ್ದವು ಏಕೆಂದರೆ ಬಡ ಕಾರ್ಮಿಕರು ತಮ್ಮ ಪಾದರಕ್ಷೆಗಳನ್ನು ಗೌರವಿಸುತ್ತಾರೆ ಮತ್ತು ಸಾಮಾನ್ಯವಾಗಿ ಕೆಲಸದಲ್ಲಿ ಮಣ್ಣು ತಾಗುತ್ತದೆ ಎಂದು ಅವುಗಳನ್ನು ಧರಿಸಲು ಹಿಂಜರಿಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಕ್ಯಾರಿಯರ್‌ʼನಲ್ಲಿರುವ ಆಹಾರವನ್ನು ಮೂರು ಅಥವಾ ನಾಲ್ಕು ಜನರು ಹಂಚಿಕೊಳ್ಳುತ್ತಾರೆ ಮತ್ತು ಯೋಗ್ಯವಾದ ಕುಡಿಯುವ ನೀರು ಯಾವಾಗಲೂ ಕೆಲಸದ ಸ್ಥಳದಲ್ಲಿ ಲಭ್ಯವಿರುವುದಿಲ್ಲ - ಈ ಸಂದರ್ಭದಲ್ಲಿ ಖಾಸಗಿ ಫಾರ್ಮ್ ಮತ್ತು ಅಲ್ಲಿಂದಲೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ತೆಗೆದುಕೊಂಡು ಬಂದಿರುತ್ತಾರೆ. ಅಂದು ಮುಂಗಾರು ಬಿತ್ತನೆಯ ಕಾಲ ಆರಂಭವಾಗಿತ್ತು.

ಅನುವಾದ: ಅಶ್ವಿನಿ ಬಿ.

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Ashwini B. Vaddinagadde

Ashwini B. is a Bengaluru based accountant and translator and writer by passion.

کے ذریعہ دیگر اسٹوریز Ashwini B. Vaddinagadde