
SANGUR, PUNJAB
|WED, SEP 10, 2025
ಭಾರತದಲ್ಲಿ ಅಂಗವೈಕಲ್ಯದೊಂದಿಗಿನ ಬದುಕು
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಅನೇಕರು ಅಂಗವೈಕಲ್ಯ ಅಥವಾ ವಿಭಿನ್ನ ಸಾಮರ್ಥ್ಯದೊಂದಿಗೆ ಬದುಕು ನಡೆಸುತ್ತಿದ್ದಾರೆ. ಜನ್ಮಜಾತ ಸಾಧ್ಯತೆಯನ್ನು ಹೊರತುಪಡಿಸಿ, ಅಂಗವೈಕಲ್ಯವು ಸಾಮಾಜಿಕ ಅಥವಾ ಸರ್ಕಾರದ ಕ್ರಿಯೆ ಅಥವಾ ನಿಷ್ಕ್ರಿಯತೆಯಿಂದಲೂ ಉಂಟಾಗಬಹುದು – ಉದಾಹರಣೆಗೆ, ಝಾರ್ಖಂಡ್ನ ಯುರೇನಿಯಂ ಗಣಿಗಳ ಕಾರಣದಿಂದಾಗಿ, ಅಥವಾ ಮರಾಠವಾಡದಲ್ಲಿ ಅನಿಯಂತ್ರಿತ ಬರಗಾಲದ ಕಾರಣಕ್ಕೆ ಜನರು ಫ್ಲೋರೈಡ್ ಕಲುಷಿತ ಅಂತರ್ಜಲವನ್ನು ಕುಡಿಯುವ ಅನಿವಾರ್ಯತೆಗೆ ಸಿಲುಕುವುದು. ಕೆಲವೊಮ್ಮೆ, ಅಂಗವೈಕಲ್ಯವು ರೋಗ ಅಥವಾ ವೈದ್ಯಕೀಯ ನಿರ್ಲಕ್ಷ್ಯದಿಂದ ಉಂಟಾಗುತ್ತದೆ – ಲಕ್ನೋದ ಕಸ ನಿರ್ವಹಣೆ ಕೆಲಸ ಮಾಡುವ ಪಾರ್ವತಿ ದೇವಿಯವರ ಬೆರಳುಗಳು ಕುಷ್ಠರೋಗದಿಂದ ಹಾನಿಗೊಳಗಾಗಿವೆ, ಮಿಝೋರಾಂನ ದೇಬಾಹಲ ಚಕ್ಮಾ ಚಿಕನ್ಪಾಕ್ಸ್ ಕಾಯಿಲೆಯಿಂದ ಕುರುಡಾಗಿದ್ದಾರೆ, ಮತ್ತು ಪಾಲ್ಘರ್ನ ಪ್ರತಿಭಾ ಹಿಲಿಮ್ ಗ್ಯಾಂಗ್ರೀನ್ ಸಮಸ್ಯೆಯಿಂದಾಗಿ ತಮ್ಮ ಎಲ್ಲ ಕೈಕಾಲುಗಳನ್ನು ಕಳೆದುಕೊಂಡಿದ್ದಾರೆ. ಕೆಲವರ ಪಾಲಿಗೆ, ಅಂಗವೈಕಲ್ಯವೆನ್ನುವುದು ಬೌದ್ಧಿಕ ರೂಪದಲ್ಲಿ ಕಾಡುತ್ತದೆ – ಶ್ರೀನಗರದ ಪುಟ್ಟ ಮೊಹ್ಸಿನ್ಗೆ ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿದೆ, ಆದರೆ ಮಹಾರಾಷ್ಟ್ರದ ಪ್ರತೀಕ್ಗೆ ಡೌನ್ಸ್ ಸಿಂಡ್ರೋಮ್ ಇದೆ ಎಂದು ವೈದ್ಯರು ಹೇಳಿದ್ದಾರೆ. ಅನೇಕ ಸಂದರ್ಭಗಳಲ್ಲಿ, ಬಡತನ, ಅಸಮಾನತೆ, ದುರ್ಬಲ ಆರೋಗ್ಯ ಸೇವೆಗಳು ಮತ್ತು ತಾರತಮ್ಯದಿಂದ ಈ ಸವಾಲುಗಳು ಇನ್ನಷ್ಟು ತೀವ್ರಗೊಳ್ಳುತ್ತವೆ. ಇವು ಪರಿ ವರದಿಗಾರರು ವಿವಿಧ ರಾಜ್ಯಗಳಿಂದ ವರದಿ ಮಾಡಿದ ಕಥೆಗಳಾಗಿದ್ದು, ಅಂಗವೈಕಲ್ಯದೊಂದಿಗೆ ಜೀವನ ನಡೆಸುತ್ತಿರುವ ಜನರ ಕುರಿತು ನಮ್ಮಲ್ಲಿ ಅರಿವು ಮೂಡಿಸುತ್ತವೆ
Author
Translator
14. ಬ್ರೈಲ್ ಮತ್ತು ಮತಪತ್ರ
ಅಂಗವಿಕಲ ವ್ಯಕ್ತಿಗಳಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಡಬೇಕೆನ್ನುವ ಸರ್ಕಾರಿ ನಿಯಮಗಳು ಜಾರಿಯಲ್ಲಿದ್ದರೂ ಬಬ್ಲು ಕೈಬ್ರತಾ ಅವರಂತಹ ಕೆಲವರಿಗೆ 2024ರ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುತ್ತದೆಯೆನ್ನುವ ಕುರಿತು ಯಾವ ಗ್ಯಾರಂಟಿಯೂ ಇಲ್ಲ
13. 'ಪ್ರೀತಿ ನಿಮ್ಮನ್ನು ಉತ್ತಮ ಶಿಕ್ಷಕರನ್ನಾಗಿ ರೂಪಿಸುತ್ತದೆ'
ಈ ಶಿಕ್ಷಕರ ದಿನಾಚರಣೆಯನ್ನು ಪರಿ ವಿಶೇಷ ಮಕ್ಕಳಿಗೆ ಕಲಿಸುವ ವಿಶೇಷ ಶಿಕ್ಷಕರೊಡನೆ ಆಚರಿಸುತ್ತಿದೆ. ವಿದ್ಯಾರ್ಥಿಗಳೆಡಿಗಿನ ಮಿತಿಯಿಲ್ಲದ ಪ್ರೀತಿಯೊಂದಿಗೆ ತಾಳ್ಮೆ ಮತ್ತು ಪರಿಶ್ರಮವು ಎಲ್ಲಾ ರೀತಿಯ ಶಿಕ್ಷಣದ ಅಡಿಗಲ್ಲು ಎನ್ನುವುದನ್ನು ಈ ಶಿಕ್ಷಕರು ಜಗತ್ತಿಗೆ ತೋರಿಸಿಕೊಡುತ್ತಿದ್ದಾರೆ
12. ವಿರಾಮದ ನಂತರ ಮೊದಲಿನಿಂದಲೇ ಕಲಿಯುವ ಸವಾಲು
ಎರಡು ವರ್ಷಗಳ ನಂತರ ಮತ್ತೆ ಶಾಲೆಗೆ ಮರಳಿರುವ ಬೌದ್ಧಿಕ ನ್ಯೂನತೆ ಇರುವ ವಿದ್ಯಾರ್ಥಿಗಳ ಕಲಿಕೆಯಲ್ಲಿ ನಷ್ಟವಾಗಿರುವ ಕಾರಣ ಹಳೆಯ ದಿನಚರಿಯನ್ನು ಮತ್ತೆ ರೂಢಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ
11. ಬದುಕಿನ ಆಕಾಶದಲ್ಲಿ ಬೆಳ್ಳಿ ಗೆರೆಯ ಹುಡುಕುತ್ತಿರುವ ಸರಣ್ಯ
ದೃಷ್ಟಿದೋಷವುಳ್ಳ ಮೂರು ಮಕ್ಕಳ ತಾಯಿಯಾದ ಸರಣ್ಯ ಆ ಮಕ್ಕಳ ಜೊತೆ ಶಾಲೆಗೆ ಹೋಗುತ್ತಾರೆ. ಒಂಟಿ ಪೋಷಕರಾದ ಇವರು ಗುಮ್ಮಿಡಿಪೂಂಡಿಯಿಂದ ಚೆನ್ನೈಗೆ ಮಾಡುವ 100 ಕಿಲೋಮೀಟರ್ಗಳ ಪ್ರಯಾಣ ದೈನಂದಿನ ಚಟುವಟಿಕೆಯ ಭಾಗವಾಗಿದೆ
10. ಚಿತ್ರಾ ಮತ್ತು ಮುತ್ತುರಾಜ: ಒಂದು ಅನನ್ಯ ಪ್ರೇಮಕತೆ
ಮುತ್ತುರಾಜರ ಕೈ ಚಿತ್ರಾರ ಭುಜದ ಮೇಲೆ ಮೇಲಿರುತ್ತದೆ, ಮತ್ತು ಚಿತ್ರಾ ಅವರ ದಾರಿಯನ್ನು ಮುನ್ನಡೆಸುತ್ತಾರೆ - ಮಧುರೈ ಜಿಲ್ಲೆಯ ಈ ಜೋಡಿ ಹೀಗೆ ಒಟ್ಟಾಗಿ ಬದುಕಿನ ಕಷ್ಟಗಳನ್ನು ಎದುರಿಸುತ್ತಾರೆ. ಆದರೆ ಬಡತನ, ದುರ್ಬಲ ಆರೋಗ್ಯ ಮತ್ತು ದೈಹಿಕ ನ್ಯೂನತೆಯು ಅವರ ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತಿದೆ
9. ಮೋಹ್ಸಿನ್ಗೆ ಇನ್ನೆಂದಿಗೂ ನಡೆದಾಡಲು, ಶಾಲೆಗೆ ಹೋಗಲು ಅಥವಾ ಆಟವಾಡಲು ಸಾಧ್ಯವಾಗದು
ಶ್ರೀನಗರದ ರಖ್-ಎ-ಅರ್ಥ್ ಎಂಬ ಪುನರ್ವಸತಿ ಕಾಲೋನಿಗೆ ಸ್ಥಳಾಂತರಗೊಂಡ ನಂತರ ಅಖೂನ್ ಕುಟುಂಬವು ಸೆರೆಬ್ರಲ್ ಪಾಲ್ಸಿಯಿಂದ ಪೀಡಿತನಾಗಿರುವ ತಮ್ಮ ಮಗನಿಗೆ ಆರೋಗ್ಯ ಸೇವೆಯನ್ನು ಪಡೆಯುವಲ್ಲಿ, ಹಾಗೂ ಕೂಲಿ ಕೆಲಸವನ್ನು ಹುಡುಕುವಲ್ಲಿ ತೀವ್ರ ಸವಾಲುಗಳನ್ನು ಎದುರಿಸಿತು
8. ವಿಶೇಷ ಮಕ್ಕಳು ಮತ್ತು ಶಿಕ್ಷಣದ ಹಿನ್ನಡೆ
ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ರೈತ ಕುಟುಂಬಗಳಲ್ಲಿ ಮಾನಸಿಕವಾಗಿ ಸಬಲರಲ್ಲದ ಮಕ್ಕಳಿಗೆ ಆನ್ಲೈನ್ ಶಿಕ್ಷಣದ ಆಯ್ಕೆಯ ಕೊರತೆಯು ಮಕ್ಕಳ ಬದುಕು ಪ್ರಪಾತಕ್ಕಿಳಿದಿದ್ದರೆ ಅವರ ಪೋಷಕರ ಆತಂಕದ ಪರ್ವತವು ಬೆಳೆಯುತ್ತಲೇ ಇದೆ
7. ʼರೈತರನ್ನು ಬೆಂಬಲಿಸುವ ವಿಷಯ ಬಂದಾಗ ನಿಮ್ಮಲ್ಲಿ ಇನ್ನೊಂದು ಯೋಚನೆ ಮಾಡುವುದಿಲ್ಲʼ
ಮೀನುಗಾರರಾಗಿರುವ ಪ್ರಕಾಶ್ ಭಗತ್ ಅವರು ತನ್ನ ಕಾಲು ಊನವಾಗಿದ್ದರೂ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಬೆಂಬಲಿಸಿ ನಾಸಿಕ್ನಿಂದ ದೆಹಲಿವರೆಗಿನ ವಾಹನ ಮೋರ್ಚಾದಲ್ಲಿ ಭಾಗವಹಿಸುತ್ತಿರುವ ತಮ್ಮ ಗ್ರಾಮ ಪರ್ಗಾಂವ್ನ ಜನರಿಗಾಗಿ ಅಡುಗೆ ಮಾಡುತ್ತಿದ್ದಾರೆ
6. ಅವಿಚ್ಛಿನ್ನ ಚೇತನದಿಂದ ಪಾಠ ಕಲಿಯುವುದು
ಕಳೆದ ವರ್ಷ ಗ್ಯಾಂಗ್ರೀನ್ಗೆ ಪ್ರತಿಭಾ ಹಿಲಿಮ್ ತನ್ನ ಎಲ್ಲ ಮುಂಗೈ ಮತ್ತು ಮುಂಗಾಲುಗಳನ್ನು ಬಲಿ ನೀಡಬೇಕಾಯಿತು. ಆದರೆ ಮಹಾರಾಷ್ಟ್ರದ ಪಾಲ್ಘರ್ನ ಈ ಆದಿವಾಸಿ ಶಿಕ್ಷಕಿ ತನ್ನ ಮನೆಯಲ್ಲಿಯೇ ‘ಆನ್ಲೈನ್ ಶಿಕ್ಷಣ’ದ ಅಷ್ಟೇನೂ ಅವಕಾಶವಿಲ್ಲದ ವಿದ್ಯಾರ್ಥಿಗಳಿಗೆ ಕಲಿಸುವುದನ್ನು ಮುಂದುವರೆಸಿದ್ದಾರೆ
5. ಸರ್ವವ್ಯಾಪಿ ವ್ಯಾಧಿಯ ಕಾಲಮಾನದಲ್ಲಿ ‘ಸ್ಪರ್ಶದ ಮೂಲಕ’ ಜಗತ್ತಿನ ಗ್ರಹಿಕೆ
ದೃಷ್ಟಿಮಾಂದ್ಯ ವಿಮಲ್ ಮತ್ತು ನರೇಶ್ ಥಾಕರೆ, ಮುಂಬೈ ಸ್ಥಳೀಯ ರೈಲುಗಳಲ್ಲಿ ಕರವಸ್ತ್ರಗಳನ್ನು ಮಾರುತ್ತಿದ್ದರು. ಲಾಕ್ಡೌನ್ ದೆಸೆಯಿಂದಾಗಿ ಅವರಿಗೆ ಹಾಗೂ ಇಂತಹ ಅನೇಕರಿಗೆ ಯಾವುದೇ ಆದಾಯ, ಬೆಂಬಲಗಳಿಲ್ಲದೆ, ಸಾಕಷ್ಟು ಅನಿಶ್ಚಿತ ಪರಿಸ್ಥಿತಿಗಳನ್ನು ಎದುರಿಸುವಂತಾಗಿದೆ
4. ‘ಡಾಕ್ಟರ್ ನನ್ನ ಮೂಳೆಗಳು ಟೊಳ್ಳಾಗಿವೆ ಎಂದು ಹೇಳುತ್ತಾರೆ’
ಗರ್ಭಕೋಶ ತೆಗೆಯುವುದು ಸೇರಿದಂತೆ ಜೀವಿತಾವಧಿಯ ಅನಾರೋಗ್ಯ ಮತ್ತು ಶಸ್ತ್ರಚಿಕಿತ್ಸೆಗಳ ನಂತರ, ಪುಣೆ ಜಿಲ್ಲೆಯ ಹದಶಿ ಗ್ರಾಮದ ಬೀಬಾಬಾಯಿ ಲೊಯರೆ ಬಾಗಿ ಹೋಗಿದ್ದಾರೆ. ಈಗಲೂ, ಅವರು ಕೃಷಿ ಕೆಲಸವನ್ನು ಮಾಡುತ್ತಾರೆ ಮತ್ತು ಪಾರ್ಶ್ವವಾಯು ಪೀಡಿತ ಗಂಡನನ್ನು ನೋಡಿಕೊಳ್ಳುತ್ತಾರೆ
3. ‘ವೈದ್ಯರು ಗರ್ಭಕೋಶ ತೆಗೆಸಲು ಹೇಳಿದ್ದರು’
ಮಾನಸಿಕವಾಗಿ ಅಶಕ್ತರಾದ ಮಹಿಳೆಯರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳನ್ನು ಬಲವಂತವಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮೂಲಕ ಕಸಿಯಲಾಗುತ್ತಿದೆ. ಆದರೆ ಮಹಾರಾಷ್ಟ್ರದ ವಾಡಿ ಗ್ರಾಮದ ಮಲನ್ ಮೋರ್ ಈ ವಿಷಯದಲ್ಲಿ ಅದೃಷ್ಟವಂತೆ, ಅವರಿಗೆ ಬೆಂಬಲವಾಗಿ ಆಕೆಯ ತಾಯಿ ನಿಂತಿದ್ದಾರೆ
2. ಪನ್ವೇಲ್ ದಿಂದ ಮಧ್ಯಪ್ರದೇಶದವರೆಗೆ: ಸ್ಕೂಟರ್ ನಲ್ಲಿ ನಾಲ್ಕು ಹಗಲು ರಾತ್ರಿಗಳು
ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡ ಬಿಮ್ಲೇಶ್ ಜೈಸ್ವಾಲ್, ಲಾಕ್ಡೌನ್ ಸಮಯದಲ್ಲಿ ತಮ್ಮ ಪತ್ನಿ ಮತ್ತು ಮೂರು ವರ್ಷದ ಮಗಳೊಂದಿಗೆ ಗೇರ್ ಇಲ್ಲದ ಸ್ಕೂಟರ್ ನಲ್ಲಿ ಮಹಾರಾಷ್ಟ್ರದ ಪನ್ವೇಲ್ ನಿಂದ ಮಧ್ಯಪ್ರದೇಶದ ರೇವಾಗೆ 1,200 ಕಿ.ಮೀ ಪ್ರಯಾಣಿಸಿದ್ದರು.
1. ಓಟಿಗೆ ಓಕೆ, ಆಧಾರಕ್ಕಿಲ್ಲ ಏಕೆ
ಪಾರ್ವತಿ ದೇವಿಯ ಬೆರಳುಗಳು ಕುಷ್ಠರೋಗದಿಂದಾಗಿ ಜರ್ಝರಿತಗೊಂಡಿವೆ. ಹೀಗಾಗಿ ತ್ಯಾಜ್ಯ ವಿಲೇವಾರಿಯ ವೃತ್ತಿಯಲ್ಲಿರುವ ಲಕ್ನೋದ ಈ ಕಾರ್ಮಿಕ ಮಹಿಳೆ ಮತ್ತು ಈಕೆಯದ್ದೇ ಸ್ಥಿತಿಯಲ್ಲಿರುವ ಅದೆಷ್ಟೋ ಮಂದಿ ಆಧಾರ್ ಕಾರ್ಡಿನ ಸೌಲಭ್ಯದಿಂದ ವಂಚಿತರಾಗಿದ್ದಾರೆ. ವಿಪರ್ಯಾಸವೆಂದರೆ ಇದರಿಂದಾಗಿ ವಿಕಲಚೇತನರಿಗೆ ಸಿಗಬೇಕಾಗಿರುವ ಪಿಂಚಣಿ ಮತ್ತು ಪಡಿತರ ಸೌಲಭ್ಯಗಳಿಂದಲೂ ಈ ನತದೃಷ್ಟರು ವಂಚಿತರಾಗಿ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/living-with-disability-in-rural-india-kn















