ಗಾಳಿಯಿಂದ ಕೂಡಿದ ಒಂದು ಅಪರಾಹ್ನ ಉಷಾ ಶಿಂಧೆ ಅವರು ತಮ್ಮ ಮೊಮ್ಮಗನನ್ನು ಸೊಂಟದಲ್ಲಿರಿಸಿಕೊಂಡು ನದಿಯನ್ನು ದಾಟಲು ತೆಪ್ಪವನ್ನು ಏರಿದರು. ಅವರು ನಿರೀಕ್ಷಿಸಿರುವಷ್ಟು ದೋಣಿ ನಿಯಂತ್ರಣದಲ್ಲಿರಲಿಲ್ಲ, ಉಷಾ ಅವರ ಕಾಲಿನ ನಿಯಂತ್ರಣ ತಪ್ಪಿತು. ಮಗುವಿನೊಂದಿಗೆ ನೀರಿಗೆ ಬಿದ್ದ ಅವರನ್ನು ಜೀವದ ಭಯ ಆವರಿಸಿತು.

ದೇಶದಲ್ಲಿ ಕೋವಿಡ್‌19 ಎರಡನೇ ಅಲೆ ಹಬ್ಬಿರುವಾಗ ಅಂದರೆ ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಈ ಘಟನೆ ನಡೆದಿತ್ತು. ಉಷಾ ಅವರ ನಾಲ್ಕು ವರ್ಷದ ಮೊಮ್ಮಗ ಶಂಭು ಜ್ವರದಿಂದ ಬಳಲುತ್ತಿದ್ದ. “ಆತನಿಗೆ ಕೋರೋನಾ [ವೈರಸ್] ತಗಲಿರಬಹುದು ಎಂಬ ಆತಂಕ ನನ್ನನ್ನು ಕಾಡಿತ್ತು,” ಎನ್ನುತ್ತಾರೆ 65 ವರ್ಷದ ಉಷಾ. “ಆತನ ಹೆತ್ತವರು ಪಶ್ಚಿಮ ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ನಾನು ಇವನನ್ನು ಆಸ್ಪತ್ರೆಗೆ ತುರ್ತಾಗಿ ಕೊಂಡೊಯ್ಯಲು ತೀರ್ಮಾನಿಸಿದೆ”

ಆದರೆ ತಾತ್ಕಾಲಿಕವಾಗಿ ನಿರ್ಮಿಸಿದ ತೆಪ್ಪದಲ್ಲಿಯೇ ಅವರ ಗ್ರಾಮದ ಜನರು ನದಿಯನ್ನು ದಾಟಬೇಕಾದ ಅನಿವಾರ್ಯತೆ. “ನನಗೆ ನಿಯಂತ್ರಣದಲ್ಲಿರಲು ಆಗಲಿಲ್ಲ, ಶಂಭು ಜತೆಯಲ್ಲೇ ಬಿದ್ದೆ,” ಎಂದ ಉಷಾ, “ನನಗೆ ಈಜಲು ಬರುವುದಿಲ್ಲ, ಅದೃಷ್ಟವಶಾತ್‌, ನನ್ನ ಸೋದರಳಿಯ ಹತ್ತಿರದಲ್ಲಿಯೇ ಇದ್ದ. ಆತ ನದಿಗೆ ಹಾರಿ ನಮ್ಮನ್ನು ಮೇಲಕ್ಕೆತ್ತಲು ಸಹಕರಿಸಿದ. ನಾನು ಆತಂಕದಲ್ಲಿದ್ದೆ, ನನ್ನಿಂದಾಗಿ ನನ್ನ ಮೊಮ್ಮಗನಿಗೆ ಏನಾದರೂ ಆಗುವುದನ್ನು ನಾನು ಬಯಸುವುದಿಲ್ಲ,”

ಉಷಾ ಅವರ ಸೌತಡಾ ಗ್ರಾಮವು ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ವಿಂಚರ್ಣಾ ನದಿಯ ದಡದ ಮೇಲಿದೆ, ರಮಣೀಯವಾದ ರಾಮೇಶ್ವರ ಜಲಪಾತವು 225 ಅಡಿ ಎತ್ತರದಿಂದ ದುಮುಕುತ್ತಿದ್ದು, ಇದು ಸೌತಡಾದಿಂದ 1.5 ಕಿಮೀ ದೂರದಲ್ಲಿದ್ದು, ಪಟೋಡಾ ತಾಲೂಕಿನಲ್ಲಿದೆ. ನದಿಯು ಸೌತಡಾ ಗ್ರಾಮವನ್ನು ಎರಡು ಭಾಗವನ್ನಾಗಿ ಮಾಡಿದ್ದು, ಗ್ರಾಮದ ಪ್ರಮುಖ ಭಾಗದಿಂದ ಒಂದು ಭಾಗವನ್ನು ಪ್ರತ್ಯೇಕಿಸಿದೆ. ಪ್ರತ್ಯೇಕಗೊಂಡ ಗ್ರಾಮವಾದ ಶಿಂದೇ ವಾಸ್ತಿಯ ನಿವಾಸಿಗಳು ಸೇತುವೆ ಇಲ್ಲದ ಕಾರಣ ಅಂಗಡಿ ಮತ್ತು ಆಸ್ಪತ್ರೆಗಳಿಗೆ ಹೋಗಲು ನದಿಯನ್ನು ದಾಟಬೇಕಾಗುತ್ತದೆ.

Left: Usha Shinde with her grandsons, Shambhu (in her lap) and Rajveer. Right: Indubai Shinde and the old thermocol raft of Sautada
PHOTO • Parth M.N.
Left: Usha Shinde with her grandsons, Shambhu (in her lap) and Rajveer. Right: Indubai Shinde and the old thermocol raft of Sautada
PHOTO • Parth M.N.

ಎಡ: ಉಷಾ ಶಿಂಧೆ ಅವರು ತಮ್ಮ ಮೊಮ್ಮಕ್ಕಳೊಂದಿಗೆ, ಶಂಭು (ಮಡಿಲಿನಲ್ಲಿ) ಮತ್ತು ರಾಜ್ವೀರ್.‌ ಬಲ: ಇಂಧೂಬಾಯಿ ಶಿಂಧೆ ಮತ್ತು ಹಳೆಯ ಥರ್ಮಾಕೊಲ್‌ನಿಂದ ಮಾಡಿದ ಸೌತಡಾದ ದೋಣಿ

ನದಿಯನ್ನು ದಾಟುವುದು ಸುಲಭವಾಗಲೆಂದು ಗ್ರಾಮಸ್ಥರು ನದಿಗೆ ದಪ್ಪನೆಯ ಹಗ್ಗವನ್ನು ಸಾಲಾಗಿ ಕಟ್ಟಿರುತ್ತಾರೆ. ಹಗ್ಗದ ಮಧ್ಯದಲ್ಲಿ ತೆಪ್ಪ ಸಾಗುವುದರಿಂದ ಸಾಲಿನಲ್ಲೇ ಚಲಿಸುತ್ತದೆ ಮಾತ್ರವಲ್ಲ, ಪ್ರಯಾಣಿಕರು ಪ್ರವಾಹಕ್ಕೆ ಸಿಲುಕುವುದನ್ನು ತಪ್ಪಿಸುತ್ತದೆ. ಮೂರು ತೆಪ್ಪಗಳನ್ನು ನದಿಯ ದಡದಲ್ಲಿ ಇರಿಸಲಾಗಿದ್ದು, ಪಕ್ಕದಲ್ಲೇ ಒಂದು ಪುಟ್ಟ ಬೆಟ್ಟವಿದೆ. ಸುತ್ತಲೂ ಬೆಟ್ಟಗಳಿಂದ ಆವರಿಸಲ್ಪಟ್ಟ ನದಿಯ ರಮಣೀಯ ದೃಶ್ಯ ಮತ್ತು ಹಸಿರು ಗದ್ದೆ ಪ್ರಯಾಣದ ನೋವನ್ನು ತಣಿಸಲಿದೆ. ದೋಣಿಯನ್ನು ಏರುವ ವ್ಯಕ್ತಿ ಮೊದಲು ಕಲ್ಲಿನ ಮೇಲೆ ಕಾಲಿಡಬೇಕು, ನಂತರ ದೇಹದ ಸಮತೋಲನವನ್ನು ಕಾಯ್ದುಕೊಂಡು ಅಲುಗಾಡುವ ತೆಪ್ಪವನ್ನು ಏರಬೇಕಾಗುತ್ತದೆ, ಹಗ್ಗವನ್ನು ಎಳೆಯುವುದರಿಂದ ಅದು ಮುಂದಕ್ಕೆ ಸಾಗುತ್ತದೆ. ತೆಪ್ಪವು ಇನ್ನೊಂದು ತುದಿಯನ್ನು ತಲುಪಲು 5-7ನಿಮಿಷ ಬೇಕಾಗುತ್ತದೆ.

“ಬಹಳ ವರ್ಷಗಳಿಂದ ನಾವು ಒಂದು ಸೇತುವೆಗಾಗಿ ಮನವಿ ಮಾಡುತ್ತಿದ್ದೇವೆ,” ಎನ್ನುತ್ತಾರೆ ಶಿಂಧೆ ವಾಸ್ತಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ 46 ವರ್ಷದ ಬಾಳಾಸಾಹೇಬ್‌ ಶಿಂಧೆ, “ಇಲ್ಲಿಂದ ತಲುಪಲು ಇನ್ನೊಂದು ಮಾರ್ಗವಿದೆ, ಆದರೆ ಅದು ಬಹಳ ದೂರವಾಗುತ್ತದೆ. ಅದು ಗದ್ದೆ ಮೂಲಕ ಸಾಗುತ್ತದೆ, ಆದರೆ ಕೃಷಿಕರು ನಮಗೆ ಅಲ್ಲಿಂದ ಹೋಗಲು ಬಿಡುವುದಿಲ್ಲ. ಇದಿರಿಂದಾಗಿ ನಾವು ಪ್ರತಿ ಬಾರಿಯೂ ಹೊರಗೆ ಹೊರಟಾಗ ಜೀವವನ್ನು ಅಪಾಯಕ್ಕೆ ಒಡ್ಡುತ್ತೇವೆ,”

ಸೌತಡಾದ ಭಾಗಕ್ಕೆ ಪ್ರವೇಶ ನಿರ್ಬಂಧಿತವಾಗಿರುವುದು ಶಿಂಧೇ ವಾಸ್ತಿಯ 500 ಅಥವಾ ಅದಕ್ಕಿಂತ ಹೆಚ್ಚಿರುವ ನಿವಾಸಿಗಳಲ್ಲಿ ಬಹುತೇಕ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರಿದೆ. ಇದರಿಂದಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಬಹಳ ಕಷ್ಟವಾಗಿದೆ. “ಗರ್ಭಿಣಿಯರು ಕೂಡ ಅಲುಗಾಡುವ ತೆಪ್ಪದಲ್ಲಿ ಪ್ರಯಾಣಿಸಬೇಕಾಗಿದೆ. ಇದು ಎಷ್ಟು ಅಪಾಯಕಾರಿ ಎಂಬುದನ್ನು ಊಹಿಸಬಲ್ಲೀರಾ?  ಹೆರಿಗೆಯ ಕೊನೆಯ ಎರಡು ತಿಂಗಳಲ್ಲಿ ಗರ್ಭಿಣಿಯನ್ನು ಅವರ ಸಂಬಂಧಿಕರ ಮನೆಗೆ ಕಳುಹಿಸಿಕೊಡಬೇಕಾಗುತ್ತದೆ,” ಎನ್ನುತ್ತಾರೆ ಗ್ರಾಮದಲ್ಲಿ 10 ಎಕರೆ ಭೂಮಿಯನ್ನು ಹೊಂದಿರುವ 40 ವರ್ಷ ಪ್ರಾಯದ ಇಂದುಬಾಯಿ ಶಿಂಧೆ. “ನಾವು ನದಿಯ ಇನ್ನೊಂದು ಭಾಗಕ್ಕೂ ಸ್ಥಳಾಂತರಗೊಳ್ಳಲು ಸಾಧ್ಯವಿಲ್ಲ, ಏಕೆಂದರೆ ನಮ್ಮ ಕೃಷಿ ಭೂಮಿ ಇರುವುದು ಇಲ್ಲಿ,”

ಇಂಧುಬಾಯಿ ಅವರ 22 ವರ್ಷದ ಮಗಳು ರೇಖಾ ಗರ್ಭವತಿಯಾಗಿದ್ದಾಗ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯುವ ಮಹಿಳೆಗೆ ನದಿ ದಾಟುವ ಭಯದಿಂದಾಗಿ ತನ್ನ ತಾಯಿಯನ್ನು ನೋಡುವ ಅವಕಾಶ ಸಿಗಲಿಲ್ಲ. “ಸಾಮಾನ್ಯವಾಗಿ ಗರ್ಭಿಣಿಯರು ಆ ಅವಧಿಯಲ್ಲಿ ತಮ್ಮ ತಾಯಿಯ ಮನೆಗೆ ಹೋಗುವುದು ಸಾಮಾನ್ಯ. ಆದರೆ ನನ್ನ ಮಗಳ ಆರೈಕೆ ಮಾಡಲು ನನ್ನಿಂದಾಗಲಿಲ್ಲ. ಆ ಬಗ್ಗೆ ನನಗೆ ನೋವಿದೆ. “ಅವಳಿಗೆ ಹೆರಿಗೆ ಸಮಯ ಬಂದಾಗ, ನಾವು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಕರೆದೊಯ್ಯದಿದ್ದರೆ ಏನಾಗಬಹುದು? ನಮಗೆ ಆ ತೊಂದರೆಯನ್ನು ಎದುರಿಸಲು ಸಾಧ್ಯವಿಲ್ಲ. ಸಾಮಾನ್ಯ ಆರೋಗ್ಯದ ವಿಚಾರದಲ್ಲೂ ಹೋಗಲು ನಾವು ಎರಡೆರಡು ಬಾರಿ ಯೋಚಿಸುತ್ತೇವೆ,”

Left: Residents of Shinde Wasti waiting to reach the other side of Sautada village. Right: They carefully balance themselves on rocks to climb into the unsteady rafts
PHOTO • Parth M.N.
Left: Residents of Shinde Wasti waiting to reach the other side of Sautada village. Right: They carefully balance themselves on rocks to climb into the unsteady rafts
PHOTO • Parth M.N.

ಎಡ: ಸೌತಡಾ ಗ್ರಾಮದ ಇನ್ನೊಂದು ಬದಿ ತಲುಪಲು ಶಿಂಧೆ ವಾಸ್ತಿಯ ನಿವಾಸಿಗಳು ಕಾಯುತ್ತಿರುವುದು. ಬಲ: ಕಲ್ಲಿನ ಮೇಲೆ ತಾವು ತಮ್ಮ ಸಮತೋಲನವನ್ನು ಕಾಯ್ದುಕೊಳ್ಳುತ್ತ ನಿಯಂತ್ರಣವಿಲ್ಲದ ತೆಪ್ಪವನ್ನು ಏರಲು ಯತ್ನಿಸುತ್ತಿರುವುದು

2020ರ ಮಾರ್ಚ್‌ನಲ್ಲಿ ಕೋವಿಡ್‌ 19 ಉಲ್ಬಣಗೊಂಡಾಗ ಗ್ರಾಮಸ್ಥರನ್ನು ಪ್ರತ್ಯೇಕಿಸುವುದು ದೊಡ್ಡ ಸವಾಲಿನ ಸಂಗತಿಯಾಗಿತ್ತು. “ಅದೃಷ್ಟವಶಾತ್‌, ಕೋವಿಡ್‌ನಿಂದ ಇಲ್ಲಿ ಯಾರೂ ಜೀವ ಹಾನಿಗೊಳಗಾಗಿಲ್ಲ,” ಎನ್ನುತ್ತಾರೆ, ಬಾಳಾಸಾಹೇಬ್‌. “ನಮ್ಮಲ್ಲಿ ಕೆಲವರು ಅನಾರೋಗ್ಯಕ್ಕೆ ಒಳಗಾದಾಗ ನಮಗೆ ಯಾರೂ ಚಿಕಿತ್ಸೆ ನೀಡಲಿಲ್ಲ, ಇಲ್ಲಿಂದ ಯಾರಾದರೊಬ್ಬರು [ನದಿಯನ್ನು ದಾಟಿ] ಪ್ಯಾರಾಸಿಟಮಾಲ್‌ ತರುತ್ತಿದ್ದರು,”

ಕೊರೋನಾ ಸೋಂಕು ಎಲ್ಲೆಡೆ ಹರಡಿದ ನಂತರ ಪಕ್ಕದ ಲಿಂಬಗಣೇಶ್‌ ಗ್ರಾಮದಿಂದ ಆರೋಗ್ಯ ಕಾರ್ಯಕರ್ತ ಗಣೇಶ್‌ ಧಾವ್ಳೆ ಶಿಂಧೆ ವಾಸ್ತಿಗೆ ಎರಡು ಬಾರಿ ಭೇಟಿ ನೀಡುತ್ತಿದ್ದರು. “ಅನೇಕ ಜನರು ಮೈಕೈ ನೋವು, ತಲೆ ನೋವು ಮತ್ತು ಕೋವಿಡ್‌ ರೋಗ ಲಕ್ಷಣ  ಇರುವ ಬಗ್ಗೆ ಹೇಳಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂತು. ನಾನು ಅದಕ್ಕೆ ಚಿಕಿತ್ಸೆ ನೀಡಿರುವೆ,” ಎಂದು ಹೇಳಿದ ಅವರು, ನನ್ನಿಂದ ಎಷ್ಟು ಸಾಧ್ಯವೋ ಅಷ್ಟನ್ನು ಮಾಡಿರುವೆ ಎಂದರು. “ಇದಕ್ಕೊಂದು ಕಾಯಂ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಚುಚ್ಚುಮದ್ದು ನೀಡಿಕೆಯಲ್ಲಿಯೂ ಸೌತಡಾ ಹಿಂದೆ ಬಿದ್ದಿದೆ. 21ನೇ ಶತಮಾನದಲ್ಲೂ ಗ್ರಾಮವೊಂದು ತಾತ್ಕಾಲಿಕ ಹುಟ್ಟಿನಲ್ಲಿ ನದಿಯನ್ನು ದಾಟುತ್ತಿರುವುದನ್ನು ಕಾಣಲು ಸಾಧ್ಯವಿಲ್ಲ,”

ಈಗ ಗ್ರಾಮಸ್ಥರನ್ನು ಸಾಗಿಸುತ್ತಿರುವ ತೆಪ್ಪಗಳು ಬಹಳ ಸಮಯದಿಂದ ಬಳಸುತ್ತಿದ್ದವುಗಳಿಗಿಂತ ಈಗಲೂ ಗಟ್ಟಿಮುಟ್ಟಾಗಿವೆ. ಈ ವರ್ಷದ ಆರಂಭದಲ್ಲಿ ಮುಂಬಯಿಯ ಹಿತೈಷಿಗಳು ನಿರ್ಮಿಸಿದ ತೆಪ್ಪ ಕಬ್ಬಿಣದ ಕಂಬಿ ಮತ್ತು ರಬ್ಬರ್‌ ರಿಂಗ್‌ಗಳಿಂದ ಕೂಡಿದೆ. “ಇದಕ್ಕಿಂತ ಮೊದಲು ನಾವು ಟ್ರಕ್‌ನ ಟಯರ್‌ ಅಥವಾ ಥರ್ಮಾಕೊಲ್‌ ಬಳಸಿ ನದಿಯನ್ನು ದಾಟುತ್ತಿದ್ದೆವು,” ಎಂದು ಶಿಂಧೆ ವಾಸ್ತಿಯಲ್ಲಿ ಮೂರು ಎಕರೆ ಭೂಮಿಯನ್ನು ಹೊಂದಿರುವ 70ವರ್ಷ ಪ್ರಾಯದ ಕೃಷಿಕರಾದ ವತ್ಸಲಾ ಶಿಂಧೆ ಹೇಳುತ್ತಾರೆ. “ಅವುಗಳನ್ನು ನಿರ್ವಹಿಸುವುದು ಬಹಳ ಕಠಿಣ ಮತ್ತು ಅಪಾಯಕಾರಿ, ಥರ್ಮೊಕೊಲ್‌ ಶೀಟ್‌ಗಳು ಬೇಗನೇ ಒಡೆಯುತ್ತವೆ,”

It takes 5-7 minutes for the rafts to cross the Vincharna. The journey is more risky in the monsoons, when the river water rises high
PHOTO • Parth M.N.

ವಿಂಚರಣಾ ನದಿಯನ್ನು ದಾಟಲು 5-7 ನಿಮಿಷಗಳು ತಗಲುತ್ತದೆ. ಮಳೆಗಾಲದಲ್ಲಿ ನದಿಯ ನೀರಿನ ಪ್ರಮಾಣ ಏರಿಕೆಯಾಗುವುದರಿಂದ ನದಿಯನ್ನು ದಾಟುವುದು ಕಷ್ಟ

ಈ ಕಾರಣಕ್ಕಾಗಿಯೇ ಶಿಂಧೆ ವಾಸ್ತಿಯ ಮಕ್ಕಳು 4ನೇ ತರಗತಿಯಾಚೆ ಓದನ್ನು ಮುಂದುವರಿಸಿಲ್ಲ. “ಇಲ್ಲಿಯ ಪ್ರಾಥಮಿಕ ಶಾಲೆಯಲ್ಲಿ ಇರುವುದು ಕೇವಲ ನಾಲ್ಕನೇ ತರಗತಿವರೆಗೆ ಮಾತ್ರ,” ಎನ್ನುತ್ತಾರೆ ಇಂಧುಬಾಯಿ. “10ವರ್ಷದ ಮಕ್ಕಳು ಟಯರ್‌ ಟ್ಯೂಬ್‌ ಅಥವಾ ಥರ್ಮೊಕೊಲ್‌ನಲ್ಲಿ ನದಿಯನ್ನು ದಾಟುತ್ತಾರೆ ಎಂದು ನಂಬುವುದು ಹೇಗೆ?, ನಮ್ಮಲ್ಲಿ ಹೆಚ್ಚಿನವರು ಬದುಕಿಗಾಗಿ ಗದ್ದೆಯಲ್ಲಿ ಕೆಲಸ ಮಾಡುತ್ತಿರುತ್ತೇವೆ. ಆದ್ದರಿಂದ ಪ್ರತಿದಿನ ಅವರನ್ನು ಶಾಲೆಗೆ ಬಿಟ್ಟು ಬರಲಾಗುವುದಿಲ್ಲ,”

ಹೊಸ ತೆಪ್ಪ ಬಂದರೆ ನದಿಯ ಇನ್ನೊಂದು ಬದಿಯಲ್ಲಿರುವ ಮಾಧ್ಯಮಿಕ ಶಾಲೆಗೆ ಮಕ್ಕಳನ್ನು ಕಳುಹಿಸಬಹುದು ಎಂಬ ಭರವಸೆ ಇಂಧುಬಾಯಿ ಅವರದ್ದು. ಆದರೆ ಮಳೆಗಾಲದಲ್ಲಿ ನೀರಿನ ಮಟ್ಟ ಏರುವುದರಿಂದ ಯಾರಿಗಾದರೂ ನದಿಯನ್ನು ದಾಟುವುದು ಅಪಾಯಕಾರಿ. “ಅದೃಷ್ಟವೆಂದರೆ ಇದುವರೆಗೂ ಯಾರೂ ನದಿಯಲ್ಲಿ ಮುಳುಗಲಿಲ್ಲ. ನಮ್ಮಲ್ಲಿ ಹೆಚ್ಚಿನವರು ಒಂದಲ್ಲಾ ಒಂದು ಬಾರಿ ನದಿಗೆ ಬಿದ್ದಿರುತ್ತಾರೆ," ಎಂದರು ಇಂದುಭಾಯಿ.

ಪ್ರತಿಯೊಂದು ತೆಪ್ಪದಲ್ಲಿ 4-6 ಜನರು ಪ್ರಯಾಣಿಸಬಹುದು. ಭಾರ ಹೆಚ್ಚಾದರೆ ತೆಪ್ಪ ಬುಡಮೇಲಾಗುತ್ತದೆ. ಆದ್ದರಿಂದ ಇದು ಅಪಾಯದ ಪರಿಸ್ಥಿತಿ. ನಿವಾಸಿಗಳು ಸಾಮಾನು ಖರೀದಿಸಲು ನದಿಯನ್ನು ದಾಟಿದಾಗ ಪುನಃ ಪುನಃ ದಾಟುವ ಪ್ರಮೇಯ ಬೇಡವೆಂದು ಸಾಕಾಗುಚಷ್ಟು ಸಾಮಾನು ತರುತ್ತಾರೆ, ಆದರೆ ತೆಪ್ಪದ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಮಾನುಗಳನ್ನು ಅವರು ತರುವಂತಿಲ್ಲ.

ಗ್ರಾಮಸ್ಥರು ಎಲ್ಲಾ ಸಂದರ್ಭಗಳಲ್ಲೂ ನಿಖರವಾದ ಸಮತೋಲನವನ್ನು ಕಾಯ್ದುಕೊಳ್ಳುವುದಿಲ್ಲ. “ನಾನು ಕೆಲವು ಬಾರಿ ಬೇಳೆಕಾಳು, ಹಾಲು ಹಾಗೂ ಇತರ ಸಾಮಾನುಗಳೊಂದಿಗೆ ನದಿಗೆ ಬಿದ್ದಿದ್ದೇನೆ,” ಎನ್ನುತ್ತಾರೆ ವತ್ಸಲಾ. “ವಯಸ್ಸಾದ ಕಾರಣ ನಾನು ಮಾರುಕಟ್ಟೆಗೆ ಹೋಗುವುದನ್ನು ನಿಲ್ಲಿಸಿದ್ದೇನೆ. ಊರಿನಲ್ಲಿರುವ ಹೆಚ್ಚಿನ ಮಹಿಳೆಯರಿಗೆ ಈಜಲು ಬರುವುದಿಲ್ಲ. ಮಹಿಳೆಯರಿಗೆ ಸೀರೆ ಧರಿಸಿ ತೆಪ್ಪವನ್ನು ಚಲಾಯಿಸುವುದು ಕಷ್ಟ. ಇದರಿಂದಾಗಿ ಮಹಿಳೆಯರು ಗ್ರಾಮದಲ್ಲೇ ಉಳಿಯುತ್ತಾರೆ, ಏನಾದರೂ ದುರಂತ ಆದಾಗ ನಮ್ಮ ಊರಿನಲ್ಲಿ ಇರುವುದು ದುಃಸ್ವಪ್ನ ಕಂಡಂತೆ,”

Left: Vatsala Shinde says she has fallen into the river quite a few times while climbing into the rafts. Right: Getting off from a raft is as difficult as getting on it
PHOTO • Parth M.N.
Left: Vatsala Shinde says she has fallen into the river quite a few times while climbing into the rafts. Right: Getting off from a raft is as difficult as getting on it
PHOTO • Parth M.N.

ಎಡ: ತೆಪ್ಪ ಹತ್ತುವಾಗಿ ಹಲವು ಬಾರಿ ಜಾರಿ ನದಿಗೆ ಬಿದ್ದಿರುವೆ ಎನ್ನುತ್ತಾರೆ ವತ್ಸಲಾ ಶಿಂಧೆ, ಬಲ: ತೆಪ್ಪವೇರುವುದಕ್ಕಿಂತ ತೆಪ್ಪದಿಂದ ಇಳಿಯುವುದೇ ಕಷ್ಟ

ವತ್ಸಲಾ ಅವರು ಒಂದು ದಶಕಕ್ಕಿಂತಲೂ ಹಿಂದಿನ ಉದಾಹರಣೆಯೊಂದನ್ನು ವಿವರಿಸುತ್ತಾರೆ,: ಅವರ ಸೊಸೆ ಜೀಬಾಬಾಯಿ ಅವರು ಆಹಾರ ವಿಷವಾದ ಕಾರಣ ಅನಾರೋಗ್ಯಪೀಡಿತರಾದರು. ಆರೋಗ್ಯ ಕ್ಷೀಣಿಸಿದ ಕಾರಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. “ಆದರೆ ಅವರು ಥರ್ಮಕೊಲ್‌ ಶೀಟ್‌ ಏರಲು ಆಗುತ್ತಿಲ್ಲ. ಅವರು ನಿಜವಾಗಿಯೂ ಅನಾರೋಗ್ಯದಿಂದಿದ್ದ ಕಾರಣ ಅವರೇ ಏರಲಿ ಎಂದು ಕಾಯಬೇಕಾಯಿತು. ಇದರಿಂದಾಗಿ ಅವರಿಗೆ ನದಿ ದಾಟಲು ಬಹಳ ಸಮಯ ಬೇಕಾಯಿತು,”

ಆ ವಿಳಂಬವು ಆಕೆಯ ಸಾವಿಗೆ ಕಾರಣವಾಯಿತು- ಆಸ್ಪತ್ರೆ ತಲಪುತ್ತಿದ್ದಂತೆ ಜೀಜಾಬಾಯಿ ಸಾವನ್ನಪ್ಪಿದರು. “ಆಕೆ ಬೇಗನೇ ಆಸ್ಪತ್ರೆ ತಲುಪಿರುತ್ತಿದ್ದರೆ ಬದುಕಿ ಉಳಿಯುತ್ತಿದ್ದರು ಎಂಬುದು ವಿಷಯವಲ್ಲ,” ಎಂದಿರುವ ಧಾವ್ಳೆ, “ಸೂಕ್ತ ಸಮಯದಲ್ಲಿ ಅವರನ್ನು ಕೊಡೊಂಯ್ದಿರುತ್ತದೆ ಬದುಕುಳಿಯುತ್ತಿದ್ದರು ಎಂದು ಅವರ ಬಂಧುಗಳಲ್ಲಿ ಯಾರೂ ಅಚ್ಚರಿ ಸೂಚಿಸಲಿಲ್ಲ,” ಅವರ ಪ್ರಯತ್ನದಿಂದ ವಿಷಯ ಜಿಲ್ಲಾಧಿಕಾರಿಯವರ ಕಚೇರಿ ತಲುಪಿದರೂ ಯಾವುದೇ ಸಹಾಯ ದೊರೆಯಲಿಲ್ಲ, ಎಂದು ಅವರು ಹೇಳಿದರು.

ಸೌತಡಾದ ಈ ಒಂಟಿತನ, ಇಲ್ಲಿಯ ಯುವಕರ ಮದುವೆಯ ಮೇಲೂ ಪರಿಣಾಮ ಬೀರಿತು. “ನಮ್ಮ ಹುಡುಗರಿಗೆ ಮದುವೆ ಮಾಡಿಸಲು ನಾವು ಹರ ಸಾಹಸಪಡುತ್ತಿದ್ದೇವೆ. ತಮ್ಮ ಮಗಳು ಈ ಊರಿನಲ್ಲೇ ಉಳಿಯಬೇಕಾಗುತ್ತದೆ ಎಂಬುದು ಹೆತ್ತವರ ಚಿಂತೆ.,” ಎನ್ನುತ್ತಾರೆ ಬಾಳಾಸಾಹೇಬ್‌. “ಅವರ ಮಗಳನ್ನು ಇಲ್ಲಿಗೆ ಕಳಹುಸಿಸಲು ಹಿಂಜರಿಯುತ್ತಿದ್ದಾರೆ ಎಂದು ನಾನು ಆರೋಪ ಮಾಡುತ್ತಿಲ್ಲ. ನಮ್ಮ ಬಂಧುಗಳು ಕೂಡ ನಮ್ಮನ್ನು ಅಷ್ಟಾಗಿ ಭೇಟಿ ಮಾಡುತ್ತಿಲ್ಲ,”

ಸ್ವತಂತ್ರ ಪತ್ರಿಕೋದ್ಯಮದಲ್ಲಿ ನಿರತ ವರದಿಗಾರರಿಗೆ ಪುಲಿಟ್ಜರ್‌ ಸೆಂಟರ್ ನೀಡುವ ನೆರವಿನಲ್ಲಿ ಸಿದ್ಧಗೊಂಡ ಸರಣಿ ವರದಿಗಳಲ್ಲಿ ಇದೂ ಒಂದು ಭಾಗ.

ಅನುವಾದ: ಸೋಮಶೇಖರ ಪಡುಕರೆ

Parth M.N.

पार्थ एम एन हे पारीचे २०१७ चे फेलो आहेत. ते अनेक ऑनलाइन वृत्तवाहिन्या व वेबसाइट्ससाठी वार्तांकन करणारे मुक्त पत्रकार आहेत. क्रिकेट आणि प्रवास या दोन्हींची त्यांना आवड आहे.

यांचे इतर लिखाण Parth M.N.
Translator : Somashekar Padukare

Somashekar Padukare is a Udupi based sports journalist. From last 25 years he is working as a sports journalist in different Kannada Daily.

यांचे इतर लिखाण Somashekar Padukare