“ಕ್ಯಾಮೆರಾ ಎನ್ನವುದು ಕೇವಲ ಒಂದು ರಂಧ್ರವನ್ನು ಹೊಂದಿರುವ ಲೋಹದ ತುಂಡು. ಚಿತ್ರ ನಿಮ್ಮ ಹೃದಯದಲ್ಲಿರುತ್ತದೆ. ನಮ್ಮ ಉದ್ದೇಶ ಚಿತ್ರ ಹೇಗಿರಬೇಕೆನ್ನುವುದನ್ನು ನಿರ್ಧರಿಸುತ್ತದೆ.”
ಪಿ. ಸಾಯಿನಾಥ್
ಬಾಗುವಿಕೆ, ಸಮತೋಲನಗೊಳಿಸುವುದು, ನಿರ್ಮಾಣ, ಭಾರ ಎತ್ತುವುದು, ಗುಡಿಸುವುದು, ಅಡುಗೆ ಮಾಡುವುದು, ಕುಟುಂಬವನ್ನು ನೋಡಿಕೊಳ್ಳುವುದು, ಜಾನುವಾರು ಮೇಯಿಸುವುದು, ಓದುವುದು, ಬರೆಯುವುದು, ನೇಯುವುದು, ಸಂಗೀತ ನುಡಿಸುವುದು, ಹಾಡುವುದು, ಕುಣಿಯುವುದು ಮತ್ತು ಆಚರಿಸುವುದು… ಹೀಗೆ ಗ್ರಾಮೀಣ ಜನರ ಬದುಕು ಮತ್ತು ಅವರ ಕೆಲಸಗಳ ಕುರಿತು ತಿಳಿಯುವಲ್ಲಿ, ತಿಳಿಸುವಲ್ಲಿ ಬರಹಗಳೊಡನೆ ಫೋಟೊಗಳು ಸಹ ತಮ್ಮದೇ ಆದ ಸ್ಥಾನವನ್ನು ಹೊಂದಿ ಅವುಗಳೊಡನೆ ಬೆಸೆದುಕೊಂಡಿರುತ್ತವೆ.
ಪರಿಯಲ್ಲಿ ಫೋಟೊಗಳು ಸಾಮೂಹಿಕ ಸ್ಮರಣೆಯ ದೃಶ್ಯ ರಕ್ಷಕರ ಪಾತ್ರವನ್ನು ವಹಿಸುತ್ತವೆ. ಅವು ಕೇವಲ ನಾವು ವಾಸಿಸುವ ಸ್ಥಳಗಳ ನಿಷ್ಪಕ್ಷಪಾತ ದಾಖಲೀಕರವಷ್ಟೇ ಅಲ್ಲ. ನಮ್ಮ ಸುತ್ತಲಿನ ಜಗತ್ತಿನೊಡನೆ ಸಂಪರ್ಕವನ್ನು ಸಾಧಿಸಿಕೊಡುವ ಹೆಬ್ಬಾಗಿಲು. ನಮ್ಮಲ್ಲಿರುವ ವಿಶಾಲ ವ್ಯಾಪ್ತಿಯ ಫೋಟೊ ಸಂಗ್ರಹಗಳು ಮುಖ್ಯವಾಹಿನಿ ಮಾಧ್ಯಮಗಳು ನಿಮಗೆ ಹೇಳದ ಕತೆಗಳನ್ನು ಹೇಳುತ್ತವೆ. ಇವು ಅಂಚಿನಲ್ಲಿರುವ ಜನರು, ಸ್ಥಳಗಳು, ಭೂಮಿ,ಜೀವನೋಪಾಯ ಮತ್ತು ಕಾರ್ಮಿಕರ ಕುರಿತು ಮಾತನಾಡುತ್ತವೆ.
ಈ ಚಿತ್ರಗಳು ಆ ಜನರ ಸೂಕ್ಷ್ಮತೆ ಮತ್ತು ದೌರ್ಬಲ್ಯದ ಜೊತೆಜೊತೆಯಲ್ಲೇ ಅವರ ಬದುಕಿನ ಸಂತೋಷ, ಸೌಂದರ್ಯ, ಸಂತೋಷ, ದುಃಖ, ದುಃಖ, ವಿಸ್ಮಯ ಮತ್ತು ಭಯಾನಕ ಸತ್ಯಗಳನ್ನು ತೆರೆದಿಡುತ್ತವೆ. ನಮ್ಮ ಚಿತ್ರಗಳಲ್ಲಿ ಕಂಡು ಬರುವ ಮನುಷ್ಯ ಕೇವಲ ಆ ಕತೆಯ ಸಬ್ಜೆಕ್ಟ್ ಅಷ್ಟೇ ಅಲ್ಲ. ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ನಮಗೆ ಆ ಕತೆ ಮತ್ತು ಚಿತ್ರದ ಅನುಭೂತಿಗೆ ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯ ಕತೆ ಹಲವು ದೊಡ್ಡ ಸತ್ಯಗಳ ಕುರಿತು ಮಾತನಾಡುತ್ತದೆ.
ಆದರೆ ಇಂತಹ ಚಿತ್ರವೊಂದನ್ನುತೆಗೆಯಬೇಕಿದ್ದರೆ ಫೋಟೊಗ್ರಾಫರ್ ಮತ್ತು ವ್ಯಕ್ತಿಯ ನಡುವೆ ಒಂದು ಸಹಯೋಗ ಬಹಳ ಮುಖ್ಯ. ಅವರು ಅಪಾರ ನೋವು ಮತ್ತು ವಿವರಿಸಲಾಗದ ಸಂಕಟವನ್ನು ಅನುಭವಿಸುತ್ತಿರುವ ಹೊತ್ತಿನಲ್ಲಿ ಅವರ ಫೋಟೊ ತೆಗಯಲು ನಮಗೆ ಅನುಮತಿಯಿದೆಯೇ ಎನ್ನುವುದು ಬಹಳ ಮುಖ್ಯ. ಹಾಗಿದ್ದರೆ ಸಮಾಜದ ಅತ್ಯಂತ ಅಂಚಿನಲ್ಲಿರುವ ಜನರ ಫೋಟೊ ಒಂದನ್ನು ನಾವು ಘನತೆಯಿಂದ ಹೇಗೆ ತೆಗೆಯುತ್ತೇವೆ? ವ್ಯಕ್ತಿ ಅಥವಾ ಜನರ ಫೋಟೊಗಳನ್ನು ಯಾವ ಸನ್ನಿವೇಶದಲ್ಲಿ ತೆಗೆಯುತ್ತೇವೆ? ಜನಸಾಮಾನ್ಯರ ದೈನಂದಿನ ಬದುಕಿನ ಚಿತ್ರಗಳ ಸರಣಿಯನ್ನು ರಚಿಸುವುದರ ಹಿಂದಿನ ಉದ್ದೇಶವೇನು?
ಇವು ನಮ್ಮ ಛಾಯಾಗ್ರಾಹಕರು ಈ ಕ್ಷೇತ್ರದಲ್ಲಿ ಎದುರಿಸುವ ಬಹಳ ನಿರ್ಣಾಯಕ ಪ್ರಶ್ನೆಗಳಿವು. ಅದು ಒಂದೇ ಕತೆಯನ್ನು ವರ್ಷಗಳ ಕಾಲ ಶೂಟ್ ಮಾಡುವುದಿರಬಹುದು, ಅಪ್ರತಿಮ ಪ್ರದರ್ಶನಕಾರರನ್ನು ಚಿತ್ರೀಕರಿಸುವುದಿರಬಹುದು, ಆದಿವಾಸಿಗಳ ಹಬ್ಬಗಳು, ರೈತರ ಪ್ರತಿಭಟನೆ ಚಿತ್ರಗಳಿರಬಹುದು ಇಲ್ಲೆಲ್ಲವೂ ಈ ಪ್ರಶ್ನೆ ಎದ್ದು ನಿಲ್ಲುತ್ತದೆ.
ವಿಶ್ವ ಛಾಯಾಗ್ರಹಣ ದಿನದಂದು ಪರಿಯಲ್ಲಿ ಪ್ರಕಟವಾದ ಫೋಟೊಗಳ ಸಂಗ್ರಹವನ್ನು ನಾವು ನಿಮ್ಮ ಮುಂದಿರಿಸುತ್ತಿದ್ದೇವೆ. ಕುರಿತು ಅವುಗಳ ಛಾಯಾಗ್ರಾಹಕರೇ ತಾವು ಫೋಟೊ ತೆಗೆಯುವಾಗಿನ ತಮ್ಮ ಅನುಭವಗಳ ಕುರಿತು ವಿವರಿಸಿದ್ದಾರೆ. ಅವುಗಳನ್ನು ಇಂಗ್ಲಿಷ್ ವರ್ಣಮಾಲೆಯ ಅನುಕ್ರಮದಲ್ಲಿ ಕೆಳಗೆ ಜೋಡಿಸಲಾಗಿದೆ:






















