ಇದು ಭಾರತದೆಲ್ಲೆಡೆಯಿಂದ ವರದಿ ಮಾಡಲ್ಪಟ್ಟ ಸರಣಿಯಾಗಿದ್ದು, ಇದು ಗ್ರಾಮೀಣ ಮಹಿಳೆಯರ ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯದ ವ್ಯಾಪಕ ವ್ಯಾಪ್ತಿಯನ್ನು ಒಳಗೊಂಡಿದೆ. ಬಂಜೆತನ, ಬಲವಂತದ ಸ್ತ್ರೀ ಸಂತಾನಶಕ್ತಿ ಹರಣ, ಕುಟುಂಬ ಯೋಜನೆಯಲ್ಲಿ 'ಪುರುಷರ ತೊಡಗಿಸಿಕೊಳ್ಳುವಿಕೆ'ಯ ಕೊರತೆ ಮತ್ತು ಅನೇಕರಿಗೆ ತಲುಪದ ಅಸಮರ್ಪಕ ಗ್ರಾಮೀಣ ಆರೋಗ್ಯ ವ್ಯವಸ್ಥೆಗಳ ಸುತ್ತಲಿನ ಕಳಂಕದ ಬಗ್ಗೆ ಇಲ್ಲಿನ ಹಲವಾರು ಕಥೆಗಳು ಬೆಳಕು ಚೆಲ್ಲುತ್ತವೆ. ಅನರ್ಹ ವೈದ್ಯರು ಮತ್ತು ಅಪಾಯಕಾರಿ ಹೆರಿಗೆಗಳು, ಮುಟ್ಟಿನ ಕಾರಣದಿಂದಾಗಿ ತಾರತಮ್ಯ, ಗಂಡುಮಕ್ಕಳಿಗೆ ಆದ್ಯತೆ - ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುವ ವರದಿಗಳೂ ಈ ಸರಣಿಯಲ್ಲಿವೆ.
ಈ ಕಥೆಗಳಲ್ಲಿ ಅನೇಕವು ದೈನಂದಿನ ಹೋರಾಟಗಳ ಬಗ್ಗೆ ವರದಿ ಮಾಡುತ್ತಿದ್ದರೆ, ಅಲ್ಲಲ್ಲಿ ಗ್ರಾಮೀಣ ಭಾರತದಲ್ಲಿ ಮಹಿಳೆಯರ ಸಾಂದರ್ಭಿಕ ಸಣ್ಣ ಸಣ್ಣ ವಿಜಯಗಳನ್ನು ದಾಖಲಿಸುವ ಕಥೆಗಳೂ ಇವೆ.
ಸರಣಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನೀವು ಕೆಳಗಿನ ವೀಡಿಯೊವನ್ನು ವೀಕ್ಷಿಸಬಹುದು ಮತ್ತು ಪೂರ್ಣ ಸರಣಿಯನ್ನು ಇಲ್ಲಿ ಓದಬಹುದು.
ಪರಿ ಹಾಗೂ ಕೌಂಟರ್ ಮೀಡಿಯ ಟ್ರಸ್ಟ್ನ ವತಿಯಿಂದ ದೇಶಾದ್ಯಂತ ಗ್ರಾಮೀಣ ಭಾರತದ ಕಿಶೋರಿಯರು ಹಾಗೂ ಯುವತಿಯರ ಪರಿಸ್ಥಿತಿಗಳನ್ನು ಕುರಿತಂತೆ ವರದಿಯನ್ನು ತಯಾರಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ. ಸದರಿ ಯೋಜನೆಯು ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯ ಬೆಂಬಲಿತ ಉಪಕ್ರಮದ ಒಂದು ಭಾಗವಾಗಿದ್ದು, ಸಾಮಾನ್ಯ ಜನರ ಅನುಭವ ಹಾಗೂ ಹೇಳಿಕೆಗಳ ಹಿನ್ನೆಲೆಯಲ್ಲಿ ಅಂಚಿಗೆ ತಳ್ಳಲ್ಪಟ್ಟ ಈ ಪ್ರಮುಖ ಸಮುದಾಯಗಳ ಪರಿಸ್ಥಿತಿಗಳನ್ನು ಅನ್ವೇಷಿಸಲಾಗುತ್ತಿದೆ.
ಅನುವಾದ: ಶಂಕರ. ಎನ್. ಕೆಂಚನೂರು