ಮಹಾರಾಷ್ಟ್ರದ ರೆಂಡಲ್ ಗ್ರಾಮದಲ್ಲಿ ಕೊನೆಯವರಾಗಿ ಉಳಿದಿರುವ ಹಿರಿಯ ಕಾಲಿನಿಂದ ನಡೆಸುವ ಕೈಮಗ್ಗ ತಯಾರಕರೊಬ್ಬರು ಅರವತ್ತು ವರ್ಷಗಳ ಹಿಂದಿನ ತಮ್ಮ ಕೈಮಗ್ಗದ ಚಿನ್ನದ ದಿನಗಳ ಕುರಿತು ಮಾತನಾಡಿದ್ದಾರೆ

ಅದು ಅವರಿಂದ ತಯಾರಾದ ಕೊನೆಯ ಮಗ್ಗವಲ್ಲದೆ ಹೋಗಿದ್ದರೆ ಅವರ ಪಾಲಿಗೆ ಈ ನೆನಪು ಬಹಳ ಖುಷಿಯನ್ನು ಕೊಡುತ್ತಿತ್ತು. ಅವರು ಆ ಮಗ್ಗವನ್ನು ಮಾಡಿಕೊಟ್ಟ ನಂತರ ಅವರು ಕೈಗಳಿಂದ ತಯಾರಿಸುತ್ತಿದ್ದ ಮಗ್ಗಗಳಿಗಾಗಿ ಬೇಡಿಕೆ ಬರುವುದು ನಿಂತುಹೋಯಿತು. “ತ್ಯಾವೇಲಿ ಸಗ್ಲಾ ಮೊಡ್ಲಾ [ಅಲ್ಲಿಗೆ ಎಲ್ಲವೂ ಕೊನೆಯಾಯಿತು],” ಎಂದು ಅವರು ನೆನಪಿಸಿಕೊ‍ಳ್ಳುತ್ತಾರೆ.

ಇಂದು, ಆರು ದಶಕಗಳ ನಂತರ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರೆಂಡಾಲ್‌ನಲ್ಲಿ ಕೆಲವೇ ಕೆಲವು ಜನರಿಗೆ ಬಾಪು ಹಳ್ಳಿಯಲ್ಲಿ ಉಳಿದಿರುವ ಕೊನೆಯ ಟ್ರೆಡ್ಲ್ ಮಗ್ಗ ತಯಾರಕ ಅಥವಾ ಒಂದು ಕಾಲದಲ್ಲಿ ಬಹುಬೇಡಿಕೆಯ ಕುಶಲಕರ್ಮಿಯಾಗಿದ್ದರು ಎಂದು ತಿಳಿದಿದೆ. "ರೆಂಡಲ್ ಮತ್ತು ಹತ್ತಿರದ ಹಳ್ಳಿಗಳ ಇತರ ಎಲ್ಲಾ ಕೈಮಗ್ಗ ತಯಾರಕರು ಸಾವನ್ನಪ್ಪಿದ್ದಾರೆ" ಎಂದು ಗ್ರಾಮದ ಅತ್ಯಂತ ಹಿರಿಯ ನೇಕಾರ 85 ವರ್ಷದ ವಸಂತ್ ತಾಂಬೆ ಹೇಳುತ್ತಾರೆ.

ಮರದಿಂದ ಕೈಮಗ್ಗಗಳನ್ನು ತಯಾರಿಸುವುದು ರೆಂಡಲ್ ಪಾಲಿಗೆ ಕಳೆದುಹೋದ ಸಂಪ್ರದಾಯವಾಗಿದೆ. "ಆ [ಕೊನೆಯ] ಕೈಮಗ್ಗವೂ ಸಹಅಸ್ತಿತ್ವದಲ್ಲಿಲ್ಲ" ಎಂದು ಬಾಪು ಹೇಳುತ್ತಾರೆ, ತಮ್ಮ ಸಾಧಾರಣ ಮನೆಯ ಸುತ್ತಲಿನ ಕಾರ್ಯಾಗಾರಗಳಲ್ಲಿ ವಿದ್ಯುತ್ ಮಗ್ಗಗಳ ಶಬ್ದದ ನಡುವೆ ಮಾತುಗಳನ್ನು ಕೇಳಲುಅವರು ಹೆಣಗಾಡುತ್ತಿದ್ದರು.

ಬಾಪು ಅವರ ಮನೆಯೊಳಗೆ ಇರುವ ಏಕ-ಕೋಣೆಯ ಸಾಂಪ್ರದಾಯಿಕ ಕಾರ್ಯಾಗಾರವು ಒಂದಿಡೀ ಯುಗಕ್ಕೆಸಾಕ್ಷಿಯಾಗಿದೆ. ಕಾರ್ಯಾಗಾರದಲ್ಲಿನ ಕಂದು ಬಣ್ಣಗಳ ಮಿಶ್ರಣ, ಡಾರ್ಕ್, ಸೆಪಿಯಾ, ರಸ್ಸೆಟ್, ಸ್ಯಾಡಲ್, ಸಿಯೆನ್ನಾ, ಮಹಾಗನಿ, ರುಫೌಸ್ ಇನ್ನೂ ಬಣ್ಣಗಳು ಈಗ ಮಸುಕಾಗುತ್ತಿವೆ.

Bapu's workshop is replete with different tools of his trade, such as try squares  (used to mark 90-degree angles on wood), wires, and motor rewinding instruments.
PHOTO • Sanket Jain
Among the array of traditional equipment and everyday objects at the workshop is a kerosene lamp from his childhood days
PHOTO • Sanket Jain

ಎಡ: ಬಾಪು ಅವರ ಕಾರ್ಯಾಗಾರವು ಅವರ ವ್ಯವಹಾರದ ವಿವಿಧ ಸಾಧನಗಳಿಂದ ತುಂಬಿದೆ, ಉದಾಹರಣೆಗೆ ಟ್ರೈ ಸ್ಕ್ವೇರ್ ಗಳು (ಮರದ ಮೇಲೆ 90-ಡಿಗ್ರಿ ಕೋನಗಳನ್ನು ಗುರುತಿಸಲು ಬಳಸಲಾಗುತ್ತದೆ), ತಂತಿಗಳು ಮತ್ತು ಮೋಟಾರ್ ರಿವೈಂಡಿಂಗ್ ಉಪಕರಣಗಳು. ಬಲ: ಕಾರ್ಯಾಗಾರದಲ್ಲಿ ಸಾಂಪ್ರದಾಯಿಕ ಸಲಕರಣೆಗಳು ಮತ್ತು ದೈನಂದಿನ ವಸ್ತುಗಳ ಶ್ರೇಣಿಯಲ್ಲಿ ಅವರ ಬಾಲ್ಯದ ದಿನಗಳ ಸೀಮೆಎಣ್ಣೆ ದೀಪಕ್ಕೂ ಸ್ಥಾನವಿದೆ

The humble workshop is almost a museum of the traditional craft of handmade wooden treadle looms, preserving the memories of a glorious chapter in Rendal's history
PHOTO • Sanket Jain

ಅವರ ಕಾರ್ಯಾಗಾರವು ಕೈಯಿಂದ ತಯಾರಿಸಿದ ಮರದ ಟ್ರೆಡಲ್ ಮಗ್ಗಗಳ ಸಾಂಪ್ರದಾಯಿಕ ಕರಕುಶಲತೆಯ ವಸ್ತುಸಂಗ್ರಹಾಲಯವಾಗಿದೆ, ಇದು ರೆಂಡಲ್‌ ಇತಿಹಾಸದಲ್ಲಿ ಒಂದು ಭವ್ಯವಾದ ಅಧ್ಯಾಯದ ನೆನಪುಗಳನ್ನು ಸಂರಕ್ಷಿಟ್ಟಿದೆ

*****

ಮಹಾರಾಷ್ಟ್ರದಕೊಲ್ಹಾಪುರ ಜಿಲ್ಲೆಯ ಜವಳಿ ಪಟ್ಟಣವಾದ ಇಚಲಕರಂಜಿಯಿಂದ 13 ಕಿಲೋಮೀಟರ್ ದೂರದಲ್ಲಿ ರೆಂಡಲ್ ಗ್ರಾಮವಿದೆ. 20ನೇ ಶತಮಾನದ ಆರಂಭಿಕ ದಶಕಗಳಲ್ಲಿ, ಹಲವಾರು ಕೈಮಗ್ಗಗಳುಇಲ್ಲಿಂದ ಇಚಲಕರಂಜಿ ಪಟ್ಟಣಕ್ಕೆ ತಲುಪಿದ್ದವು, ಇದು ರಾಜ್ಯದ ಮತ್ತು ಅಂತಿಮವಾಗಿ ಭಾರತದಲ್ಲಿ ಅತ್ಯಂತ ಪ್ರಸಿದ್ಧ ಜವಳಿ ಕೇಂದ್ರಗಳಲ್ಲಿ ಒಂದಾಗಿ ಮಾರ್ಪಟ್ಟಿತ್ತು. ಇಚಲಕರಂಜಿಗೆ ಸಾಮೀಪ್ಯವನ್ನು ಗಮನದಲ್ಲಿಟ್ಟುಕೊಂಡು ರೆಂಡಲ್ ಕೂಡ ಒಂದು ಸಣ್ಣ ಜವಳಿ ಉತ್ಪಾದನಾ ಕೇಂದ್ರವಾಯಿತು .

1928ರಲ್ಲಿ ಬಾಪು ಅವರ ತಂದೆ ದಿವಂಗತ ಕೃಷ್ಣ ಸುತಾರ್ ಅವರು 200 ಕಿಲೋ ತೂಕದ ದೈತ್ಯ ಮಗ್ಗಗಳನ್ನು ತಯಾರಿಸಲು ಕಲಿತರು. ಇಚಲಕರಂಜಿಯ ನುರಿತ ಕುಶಲಕರ್ಮಿಯಾಗಿದ್ದ ದಿವಂಗತ ಡಾಟೆ ಧುಲಪ್ಪ ಸುತಾರ್ ಅವರು ಈ ಮಗ್ಗಗಳನ್ನು ಹೇಗೆ ತಯಾರಿಸಬೇಕೆಂದು ಕೃಷ್ಣರಿಗೆ ಕಲಿಸಿಕೊಟ್ಟರು ಎಂದು ಬಾಪು ಹೇಳುತ್ತಾರೆ.

"1930 ರ ದಶಕದ ಆರಂಭದಲ್ಲಿ ಇಚಲಕರಂಜಿಯಲ್ಲಿ ಮೂರು ಕುಟುಂಬಗಳು ಕೈಮಗ್ಗಗಳನ್ನು ತಯಾರಿಸುತ್ತಿದ್ದವು" ಎಂದು ಬಾಪು ನೆನಪಿಸಿಕೊಳ್ಳುತ್ತಾರೆ, ಅವರ ನೆನಪು ಸೂಕ್ಷ್ಮವಾಗಿ ನೇಯ್ದ ದಾರದಷ್ಟು ತೀಕ್ಷ್ಣವಾಗಿದೆ. "ಆ ಸಮಯದಲ್ಲಿ ಕೈಮಗ್ಗಗಳು ಹೆಚ್ಚು ಬೇಡಿಕೆಯಲ್ಲಿದ್ದವು, ಹೀಗಾಗಿ ಅವುಗಳನ್ನುತಯಾರಿಕೆ ಕಲಿಯಲು ನನ್ನ ತಂದೆ ನಿರ್ಧರಿಸಿದರು." ಅವರ ತಾತ, ದಿವಂಗತ ಕಲ್ಲಪ್ಪ ಸುತಾರ್, ಕುಡುಗೋಲು, ಗುದ್ದಲಿ ಮತ್ತು ಕುಲವ್ (ಒಂದು ರೀತಿಯ ನೇಗಿಲು) ನಂತಹ ಕೃಷಿ ಉಪಕರಣಗಳನ್ನು ತಯಾರಿಸುತ್ತಿದ್ದರು, ಜೊತೆಗೆ ನೀರಾವರಿಗಾಗಿ ಸಾಂಪ್ರದಾಯಿಕ ಕಂದಕವನ್ನು (ಪುಲ್ಲಿ ವ್ಯವಸ್ಥೆ) ಜೋಡಿಸುತ್ತಿದ್ದರು.

ಬಾಲ್ಯದಲ್ಲಿ, ಬಾಪು ತನ್ನ ತಂದೆಯಕಾರ್ಯಾಗಾರದಲ್ಲಿ ಸಮಯ ಕಳೆಯಲು ಇಷ್ಟಪಡುತ್ತಿದ್ದರು. ಅವರು 1954ರಲ್ಲಿ ಎಂದರೆ ತಮ್ಮ 15ನೇ ವಯಸ್ಸಿನಲ್ಲಿ ತಮ್ಮ ಮೊದಲ ಮಗ್ಗವನ್ನು ಮಾಡಿದರು. "ನಾವು ಮೂವರು ಆರು ದಿನಗಳಲ್ಲಿ 72 ಗಂಟೆಗಳ ಕಾಲ ಕೆಲಸ ಮಾಡಿದ್ದೆವು" ಎಂದು ಅವರು ಮುಗುಳ್ನಕ್ಕರು. "ನಾವು ಅದನ್ನು ರೆಂಡಾಲ್‌ನ ನೇಕಾರನೊಬ್ಬನಿಗೆ 115 ರೂಪಾಯಿಗಳಿಗೆ ಮಾರಾಟ ಮಾಡಿದೆವು." 50 ಪೈಸೆಗೆ ಒಂದು ಕಿಲೋ ಅಕ್ಕಿ ಸಿಗುತ್ತಿದ್ದ ಆಗಿನ ಕಾಲಕ್ಕೆ ಅದು ದೊಡ್ಡ ಮೊತ್ತವಾಗಿತ್ತು.

60ರ ದಶಕದ ಆರಂಭದ ವೇಳೆಗೆ, ಕೈಯಿಂದ ತಯಾರಿಸಿದ ಮಗ್ಗದ ಬೆಲೆ 415 ರೂ.ಗೆ ಏರಿತ್ತು. "ನಾವು ಒಂದು ತಿಂಗಳಲ್ಲಿ ಕನಿಷ್ಠ ನಾಲ್ಕು ಕೈಮಗ್ಗಗಳನ್ನು ತಯಾರಿಸಿದ್ದೇವೆ." ಮಗ್ಗವನ್ನು ಎಂದೂ ಒಂದೇ ಘಟಕವಾಗಿ ಮಾರಾಟ ಮಾಡಲಿಲ್ಲ. "ನಾವು ವಿವಿಧ ಭಾಗಗಳನ್ನು ಎತ್ತಿನ ಬಂಡಿಯಲ್ಲಿ ಹೊತ್ತುಕೊಂಡು ನೇಕಾರನ ಕಾರ್ಯಾಗಾರದಲ್ಲಿ ಜೋಡಿಸುತ್ತಿದ್ದೆವು" ಎಂದು ಅವರು ವಿವರಿಸುತ್ತಾರೆ.

ಶೀಘ್ರದಲ್ಲೇ, ಬಾಪು ಮಗ್ಗದ ಮೇಲ್ಭಾಗಕ್ಕೆ ಬಾಹ್ಯವಾಗಿ ಜೋಡಿಸಲಾಗುವ ಡಾಬಿಯನ್ನು (ಮರಾಠಿಯಲ್ಲಿ ದಾಬಿ) ತಯಾರಿಸಲು ಕಲಿತರು, ಅದು ನೇಯ್ಗೆ ಮಾಡುತ್ತಿದ್ದ ಬಟ್ಟೆಯ ಮೇಲೆ ಸಂಕೀರ್ಣವಾದ ವಿನ್ಯಾಸಗಳು ಮತ್ತು ಮಾದರಿಗಳನ್ನು ಮಾಡಲು ಸಹಾಯ ಮಾಡುತ್ತದೆ. ತನ್ನ ಮೊದಲ ಸಾಗ್ವಾನ್ (ತೇಗದ ಮರ) ದಾಬಿಯನ್ನು ತಯಾರಿಸಲು ಅವರಿಗೆ ಮೂರು ದಿನಗಳಲ್ಲಿ 30 ಗಂಟೆಗಳು ಬೇಕಾಯಿತು. "ರೆಂಡಾಲ್‌ನ ನೇಕಾರ ಲಿಂಗಪ್ಪ ಮಹಾಜನ್ ಅವರಿಗೆ ಗುಣಮಟ್ಟ ಉತ್ತಮವಾಗಿದೆಯೇ ಎಂದು ಪರೀಕ್ಷಿಸಲು ನಾನು ಅದನ್ನು ಉಚಿತವಾಗಿ ನೀಡಿದ್ದೆ" ಎಂದು ಅವರು ನೆನಪಿಸಿಕೊಳ್ಳುತ್ತಾರೆ.

Sometime in the 1950s, Bapu made his first teakwood ‘dabi’ (dobby), a contraption that was used to create intricate patterns on cloth as it was being woven. He went on to make 800 dobbies within a decade
PHOTO • Sanket Jain
Sometime in the 1950s, Bapu made his first teakwood ‘dabi’ (dobby), a contraption that was used to create intricate patterns on cloth as it was being woven. He went on to make 800 dobbies within a decade
PHOTO • Sanket Jain

1950ರ ದಶಕದಲ್ಲಿ, ಬಾಪು ತನ್ನ ಮೊದಲ 'ಡಾಬಿ'ಯನ್ನು ತೇಗದ ಮರದಿಂದ ಮಾಡಿದರು, ಇದನ್ನು ಬಟ್ಟೆಯ ಮೇಲೆ ಸುಂದರವಾದ ವಿನ್ಯಾಸಗಳನ್ನು ರಚಿಸಲು ನೇಯ್ಗೆ ಸಮಯದಲ್ಲಿ ಬಳಸಲಾಗುತ್ತಿತ್ತು. ಒಂದು ದಶಕದೊಳಗೆ ಅವರು 800 ಡಾಬಿ ತಯಾರಿಸಿದ್ದರು

Bapu proudly shows off his collection of tools, a large part of which he inherited from his father, Krishna Sutar
PHOTO • Sanket Jain

ಬಾಪು ಹೆಮ್ಮೆಯಿಂದ ತನ್ನ ಸಂಗ್ರಹದಲ್ಲಿರುವ ಸಲಕರಣೆಗಳನ್ನು ತೋರಿಸುತ್ತಿರುವುದು. ಇದು ಅವರ ತಂದೆಯ ಬಳಿಯಿದ್ದ ದೊಡ್ಡ ಸಂಗ್ರಹದಿಂದ ಪಿತ್ರಾರ್ಜಿತವಾಗಿ ಪಾಲಿಗೆ ಬಂದಿರುವುದು

ಸುಮಾರು ಒಂದು ಅಡಿ ಎತ್ತರದ 10 ಕಿಲೋ ಡಾಬಿಯನ್ನು ರಚಿಸಲು ಇಬ್ಬರು ಕುಶಲಕರ್ಮಿಗಳು ಎರಡು ದಿನ ಕೆಲಸ ಮಾಡಬೇಕಾಗುತ್ತಿತ್ತು; ಒಂದು ದಶಕದಲ್ಲಿ ಬಾಪು ಅಂತಹ 800 ದಾಬಿಗಳನ್ನು ಮಾಡಿದರು. "1950ರ ದಶಕದಲ್ಲಿ ಒಂದು ಡಾಬಿ 18 ರೂಪಾಯಿಗಳಿಗೆ ಮಾರಾಟವಾಯಿತು, ಇದು 1960ರ ವೇಳೆಗೆ 35 ರೂಪಾಯಿಗಳಿಗೆ ಏರಿತು" ಎಂದು ಅವರು ಹೇಳುತ್ತಾರೆ.

1950ರ ದಶಕದ ಕೊನೆಯಲ್ಲಿ, ರೆಂಡಲ್ ಸುಮಾರು 5,000 ಕೈಮಗ್ಗಗಳನ್ನು ಹೊಂದಿತ್ತು ಎಂದು ನೇಕಾರ ವಸಂತ್ ಹೇಳುತ್ತಾರೆ. " ನೌವರಿ [ಒಂಬತ್ತು ಗಜ] ಸೀರೆಗಳನ್ನು ಈ ಮಗ್ಗಗಳಲ್ಲಿ ನೇಯಲಾಗುತ್ತಿತ್ತು" ಎಂದು ಅವರು ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹೇಳುತ್ತಾರೆ ಹೇಳುತ್ತಾರೆ,  60ರ ದಶಕದಲ್ಲಿ ಅವರು ವಾರಕ್ಕೆ 15ಕ್ಕೂ ಹೆಚ್ಚು ಸೀರೆಗಳನ್ನು ನೇಯುತ್ತಿದ್ದರು.

ಕೈಮಗ್ಗಗಳನ್ನು ಮುಖ್ಯವಾಗಿ ಸಾಗ್ವಾನ್ (ತೇಗದ ಮರ) ನಿಂದ ತಯಾರಿಸಲಾಗುತ್ತಿತ್ತು. ವ್ಯಾಪಾರಿಗಳು  ಕರ್ನಾಟಕದ ದಾಂಡೇಲಿ  ಪಟ್ಟಣದಿಂದ ಮರವ ನ್ನು ತಂದು ಇಚಲ ಕರಂಜಿಯಲ್ಲಿ ಮಾರಾಟ ಮಾಡುತ್ತಿದ್ದರು. "ತಿಂಗಳಿಗೆ ಎರಡು ಬಾರಿ, ನಾವು ಎತ್ತಿನ ಗಾಡಿಯನ್ನು ತೆಗೆದುಕೊಂಡು ಇಚಲಕರಂಜಿಯಿಂದ [ರೆಂಡಲ್‌ಗೆ] ತರುತ್ತಿದ್ದೆವು" ಎಂದು ಬಾಪು ಹೇಳುತ್ತಾರೆ, ಒಂದು ಬದಿಯ ಪ್ರಯಾಣವು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ಹೇಳಿದರು.

ಬಾಪು  1960ರ ದಶಕದಲ್ಲಿ 18 ರೂ.ಗೆ ಏರಿದ ಸಾಗ್ವಾನ್ ಮರದ ತುಂಡನ್ನು ಘನ್ ಫೂಟ್ (ಘನ ಅಡಿ)ಒಂದಕ್ಕೆ7 ರೂ.ಗಳಿಗೆ ಖರೀದಿಸುತ್ತಿದ್ದರು.  ಇಂದು ಇದರ ಬೆಲೆ3000 ರೂ. ಇದಲ್ಲದೆ, ಸಾಲಿ (ಕಬ್ಬಿಣದ ಬಾರ್), ಪಟ್ಯ (ಮರದ ಹಲಗೆಗಳು), ನಟ್ ಬೋಲ್ಟುಗಳು ಮತ್ತು ಸ್ಕ್ರೂಗಳನ್ನು ಸಹ ಬಳಸಲಾಗುತ್ತಿತ್ತು. "ಪ್ರತಿಯೊಂದು ಕೈಮಗ್ಗಕ್ಕೂ ಸರಿಸುಮಾರು ಆರು ಕಿಲೋ ಕಬ್ಬಿಣ ಮತ್ತು ಏಳು ಘನ್ ಫೂಟ್ ತೇಗದ ಅಗತ್ಯವಿತ್ತು" ಎಂದು ಅವರು ಹೇಳುತ್ತಾರೆ. 1940ರ ದಶಕದಲ್ಲಿ, ಕಬ್ಬಿಣದ ಬೆಲೆ ಕಿಲೋಗೆ ಸುಮಾರು 75 ಪೈಸೆಯಷ್ಟಿತ್ತು.

ಬಾಪೂ ಅವರ ಕುಟುಂಬವು ಕೊಲ್ಹಾಪುರದ ಹಟ್ಕನಂಗ್ಲೆ ತಾಲ್ಲೂಕಿನ ಹಳ್ಳಿಗಳಲ್ಲಿ ಮತ್ತು  ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಗಡಿಯಲ್ಲಿರುವ ಕಾರದಗಾ, ಕೊಗನೋಳಿ, ಬೋರಗಾಂವ್ ಗ್ರಾಮಗಳಲ್ಲಿನ ನೇಕಾರರಿಗೆ ತಮ್ಮ ಕೈಮಗ್ಗಗಳನ್ನು ಮಾರಾಟ ಮಾಡಿತು. ಈ ಕರಕುಶಲತೆಯು ಎಷ್ಟು ಸೂಕ್ಷ್ಮವಾಗಿತ್ತು ಎಂದರೆ ರಾಮು ಸುತಾರ್, ಬಾಪು ಬಲಿಸೋ ಸುತಾರ್ ಮತ್ತು ಕೃಷ್ಣ ಸುತಾರ್ (ಎಲ್ಲಾ ಸಂಬಂಧಿಕರು) ಎಂಬ ಮೂವರು ಕುಶಲಕರ್ಮಿಗಳು ಮಾತ್ರ 1940ರ ದಶಕದ ಆರಂಭದಲ್ಲಿ ರೆಂಡಲ್‌ನಲ್ಲಿ ಕೈಮಗ್ಗಗಳನ್ನು ತಯಾರಿಸುತ್ತಿದ್ದರು.

ಕೈಮಗ್ಗವನ್ನು ತಾಯಾರಿಸುವುದು ಜಾತಿ ಆಧಾರಿತ ಉದ್ಯೋಗವಾಗಿದ್ದು, ಮಹಾರಾಷ್ಟ್ರದಲ್ಲಿ ಇತರ ಹಿಂದುಳಿದ ವರ್ಗ ಎಂದು ಪಟ್ಟಿ ಮಾಡಲಾದ ಸುತಾರ್ ಜಾತಿಯವರು ಹೆಚ್ಚಾಗಿಇದನ್ನು ನಿರ್ವಹಿಸುತ್ತಿದ್ದರು. "ಪಾಂಚಾಲ್ ಸುತಾರ್ (ಉಪಜಾತಿ) ಮಾತ್ರ ಇದನ್ನು ತಯಾರಿಸುತ್ತಿದ್ದರು" ಎಂದು ಬಾಪು ಹೇಳುತ್ತಾರೆ.

Bapu and his wife, Lalita, a homemaker, go down the memory lane at his workshop. The women of  Rendal remember the handloom craft as a male-dominated space
PHOTO • Sanket Jain

ಮನೆಯನ್ನು ನೋಡಿಕೊಳ್ಳುವ ಬಾಪು ಮತ್ತು ಅವರ ಪತ್ನಿ ಲಲಿತಾ ತಮ್ಮ ವರ್ಕ್‌ಶಾಪ್‌ನಲ್ಲಿ ಕುಳಿತು ಹಳೆಯ ನೆನಪುಗಳಲ್ಲಿ ಕಳೆದುಹೋಗುತ್ತಾರೆ. ರೆಂಡಲ್‌ನ ಮಹಿಳೆಯರು ಕೈಮಗ್ಗವನ್ನು ಪುರುಷ ಪ್ರಧಾನ ಕಸುಬಾಗಿ ನೆನಪಿಸಿಕೊಳ್ಳುತ್ತಾರೆ

During the Covid-19 lockdown, Vasant sold this handloom to raise money to make ends meet
PHOTO • Sanket Jain

ಫ್ರೇಮ್ ಮಗ್ಗವನ್ನು ಒಂದು ಕಾಲದಲ್ಲಿ ರೆಂಡಲ್‌ನ ಹಳೆಯ ನೇಕಾರರಲ್ಲಿ ಒಬ್ಬರು ಮತ್ತು ಬಾಪು ಸುತಾರ್‌ ಸಮಕಾಲೀನರಾದ ವಸಂತ ತಾಂಬೆ ಬಳಸುತ್ತಿದ್ದರು. ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ, ವಸಂತ್ ತನ್ನ ಮನೆಯ ಅಗತ್ಯಗಳನ್ನು ಪೂರೈಸಲು ಹಣವನ್ನು ಸಂಗ್ರಹಿಸಲು ಈ ಕೈಮಗ್ಗವನ್ನು ಮಾರಾಟ ಮಾಡಬೇಕಾಯಿತು

ಇದೊಂದು ಪುರುಷ ಪ್ರಧಾನ ಉದ್ಯೋಗವೂ ಆಗಿತ್ತು. ಬಾಪು ಅವರ ತಾಯಿ ದಿವಂಗತ ಸೋನಾಬಾಯಿ ಒಬ್ಬ ರೈತಮಹಿಳೆ ಮತ್ತು ಗೃಹಿಣಿಯಾಗಿದ್ದರು. ಅವರ ಪತ್ನಿ ಲಲಿತಾ ಸುತಾರ್ ಅವರು 60ರ ದಶಕದ ಮಧ್ಯಭಾಗದಲ್ಲಿದ್ದು, ಗೃಹಿಣಿಯೂ ಹೌದು. "ರೆಂಡಲ್‌ನ ಹೆಂಗಸರು ಚರಕದ ಬಳಸಿ ದಾರವನ್ನು  ನೂಲುತ್ತಿದ್ದರು ಮತ್ತು ಅದನ್ನು ಪಿರ್ನ್ ಮೇಲೆ ಬೀಸುತ್ತಿದ್ದರು. ನಂತರ ಪುರುಷರು ಅದನ್ನು ನೇಯ್ಗೆ ಮಾಡುತ್ತಿದ್ದರು" ಎಂದು ವಸಂತ್ ಅವರಪತ್ನಿ 77 ವರ್ಷದ ವಿಮಲ್ ಹೇಳುತ್ತಾರೆ. ನಾಲ್ಕನೇ ಅಖಿಲ ಭಾರತ ಕೈಮಗ್ಗ ಗಣತಿ (2019-20) ಪ್ರಕಾರ, ಭಾರತದಲ್ಲಿ 2,546,285 ಕಾರ್ಮಿಕರು ಅಥವಾ 72.3 ಪ್ರತಿಶತದಷ್ಟು ಕೈಮಗ್ಗ  ಕಾರ್ಮಿಕರಲ್ಲಿ ಮಹಿಳೆಯರಿದ್ದಾರೆ.

ಇಂದಿಗೂ, 50 ರ ದಶಕದ ಶ್ರೇಷ್ಠ ಕುಶಲಕರ್ಮಿಗಳ ಬಗ್ಗೆ ಬಾಪು ವಿಸ್ಮಯದಿಂದ ಮಾತನಾಡುತ್ತಾರೆ. "ಕಬ್ನೂರು ಗ್ರಾಮದ (ಕೊಲ್ಹಾಪುರ ಜಿಲ್ಲೆ) ಕಲ್ಲಪ್ಪ ಸುತಾರ್ ಹೈದರಾಬಾದ್ ಮತ್ತು ಸೋಲಾಪುರದಿಂದ ಮಗ್ಗದ ಆದೇಶಗಳನ್ನು ಪಡೆಯುತ್ತಿದ್ದರು. ಅವರು [ಸಹ] ಒಂಬತ್ತು ಕಾರ್ಮಿಕರನ್ನು ಹೊಂದಿದ್ದರು," ಎಂದು ಅವರು ಹೇಳುತ್ತಾರೆ. ಕುಟುಂಬ ಸದಸ್ಯರು ಮಾತ್ರ ಮಗ್ಗ ತಯಾರಿಕೆಯಲ್ಲಿ ಸಹಾಯ ಮಾಡುತ್ತಿದ್ದ, ಮತ್ತು ಯಾರೂ ಕೆಲಸದವರನ್ನು ಇರಿಸಿಕೊಳ್ಳುವ ಸ್ಥಿತಿಯಲ್ಲಿಲ್ಲದ ಸಮಯದಲ್ಲಿ, ಕಲ್ಲಪ್ಪನ ಬಳಿ ಒಂಬತ್ತು ಕಾರ್ಮಿಕರು ಇದ್ದಿದ್ದು ಸಾಧಾರಣ ಸಾಧನೆಯಾಗಿರಲಿಲ್ಲ.

ಬಾಪು ಅವರುತಮ್ಮ ವರ್ಕ್‌ಶಾಪಿನಲ್ಲಿ ಬೀಗ ಹಾಕಿ ಇಟ್ಟಿರುವ, ಅವರು ತುಂಬಾ ಪ್ರೀತಿಸುವ 2 x 2.5 ಅಡಿ ಅಳತೆಯ ಸಾ ಗ್ವಾನ್ ಪೆಟ್ಟಿಗೆಯತ್ತ ತೋರಿಸುತ್ತಾ, "ಇದು 30ಕ್ಕೂ ಹೆಚ್ಚು ವಿವಿಧ ರೀತಿಯ ಸ್ಪ್ಯಾನರುಗಳು ಮತ್ತು ಇತರ ಲೋಹದ ಉಪಕರಣಗಳನ್ನು ಹೊಂದಿದೆ. ಅವು ಇತರರಿಗೆ ಸಾಮಾನ್ಯ ಸಾಧನಗಳಂತೆ ತೋರಬಹುದು, ಆದರೆ ನನಗೆ ಅವು ನನ್ನ ಕಲೆಯನ್ನು ನೆನಪಿಸುತ್ತವೆ" ಎಂದು ಅವರು ಸ್ಪಷ್ಟ ಭಾವಪರವಶರಾಗಿ ಹೇಳುತ್ತಾರೆ. ಬಾಪು ಮತ್ತು ಅವರ ಹಿರಿಯ ಸಹೋದರ ದಿವಂಗತ ವಸಂತ್ ಸುತಾರ್ ಅವರು ತಮ್ಮ ತಂದೆಯಿಂದ ತಲಾ 90 ಸ್ಪ್ಯಾನರ್ ಗಳನ್ನು ಆನುವಂಶಿಕವಾಗಿ ಪಡೆದಿದ್ದರು.

ಬಾಪುವಿನಷ್ಟು ಹಳೆಯದಾದ ಎರಡು ಮರದ ಸ್ಟಾಂಡುಗಳು, ಉಳಿ ಉಪಕರಣಗಳು, ಹ್ಯಾಂಡ್ ಪ್ಲೇನ್‌ಗಳು, ಹ್ಯಾಂಡ್ ಡ್ರಿಲ್‌ಗಳು ಮತ್ತು ಬ್ರೇಸ್‌ಗಳು, ಕೈಗರಗಸಗಳು, ವೈಸ್‌ಗಳು ಮತ್ತು ಕ್ಲ್ಯಾಂಪ್‌ಗಳು, ಮೊರ್ಟೈಸ್ ಉಳಿ, ತ್ರಿಕೋನ ಉಳಿ, ಚೌಕಾಕಾರದ, ಸಾಂಪ್ರದಾಯಿಕ ಲೋಹದ ವಿಭಜಕಗಳು ಮತ್ತು ಕಂಪಾಸ್, ಮಾರ್ಕಿಂಗ್ ಗೇಜ್, ಗುರುತು ಮಾಡುವ ಚಾಕು ಮತ್ತು ಇನ್ನೂ ಹೆಚ್ಚಿನವುಗಳ ಸಂಗ್ರಹದಲ್ಲಿದ್ದವು. "ಈ ಸಲಕರಣೆಗಳನ್ನು ನಾನು ನನ್ನ ಅಜ್ಜ ಮತ್ತು ತಂದೆಯಿಂದ ಆನುವಂಶಿಕವಾಗಿ ಪಡೆದಿದ್ದೇನೆ" ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

1950ರ ದಶಕದಲ್ಲಿ ರೆಂಡಲ್‌ನಲ್ಲಿ ಛಾಯಾಗ್ರಾಹಕರಿರಲಿಲ್ಲ- ಕೊಲ್ಹಾಪುರದ ಛಾಯಾಗ್ರಾಹಕರೊಬ್ಬರನ್ನು ಆಹ್ವಾನಿಸುತ್ತಿದ್ದ ಕಾಲವನ್ನು ಬಾಪು ನೆನಪಿಸಿಕೊಳ್ಳುತ್ತಾರೆ. ಶ್ಯಾಮ್ ಪಾಟೀಲ್ ಅವರು ಆರು ಛಾಯಾಚಿತ್ರಗಳು ಮತ್ತು ಪ್ರಯಾಣದ ವೆಚ್ಚವಾಗಿ ೧೦ ರೂ. ವಿಧಿಸುತ್ತಿದ್ದರು. "ರೆಂಡಲ್ ಇಂದು ಅನೇಕ ಛಾಯಾಗ್ರಾಹಕರನ್ನು ಹೊಂದಿದೆ, ಆದರೆ ಯಾವುದೇ ಸಾಂಪ್ರದಾಯಿಕ ಕಲಾವಿದರು ಛಾಯಾಗ್ರಹಣ ಮಾಡಲು ಜೀವಂತವಾಗಿಲ್ಲ" ಎಂದು ಅವರು ಹೇಳುತ್ತಾರೆ.

The pictures hung on the walls of Bapu's workshop date back to the 1950s when the Sutar family had a thriving handloom making business. Bapu is seen wearing a Nehru cap in both the photos
PHOTO • Sanket Jain
Bapu and his elder brother, the late Vasant Sutar, inherited 90 spanners each from their father
PHOTO • Sanket Jain

ಎಡ: ಬಾಪು ಅವರ ಕಾರ್ಯಾಗಾರದ ಗೋಡೆಗಳ ಮೇಲೆ ನೇತಾಡುವ ವರ್ಣಚಿತ್ರಗಳು ಸುತಾರ್ ಕುಟುಂಬದ ಕೈಮಗ್ಗ ತಯಾರಿಕೆಯು ಪ್ರವರ್ಧಮಾನಕ್ಕೆ ಬಂದ 1950ರ ದಶಕದ ಹಿಂದಿನದು. ಎರಡೂ ಚಿತ್ರಗಳಲ್ಲಿ, ಬಾಪು ನೆಹರೂ ಕ್ಯಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ. ಬಲ: ಬಾಪು ಮತ್ತು ಅವರ ಹಿರಿಯ ಸಹೋದರ, ದಿವಂಗತ ವಸಂತ ಸುತಾರ್ ಅವರು ತಮ್ಮ ತಂದೆಯಿಂದ 90 ಸ್ಪ್ಯಾನರ್‌ಗಳನ್ನು (ಪನಾಸ್) ಪಡೆದರು

Bapu now earns a small income rewinding motors, for which he uses these wooden frames.
PHOTO • Sanket Jain
A traditional wooden switchboard that serves as a reminder of Bapu's carpentry days
PHOTO • Sanket Jain

ಎಡ: ಬಾಪು ಈಗ ಮೋಟಾರ್ ಮೋಟರ್‌ ರಿವೈಂಡಿಂಗ್‌ ಮಾಡುವ ಮೂಲಕ ಒಂದಷ್ಟು ಸಂಪಾದಿಸುತ್ತಾರೆ, ಇದಕ್ಕಾಗಿ ಅವರು ಈ ಮರದ ಹಲಗೆಗಳನ್ನು ಬಳಸುತ್ತಾರೆ. ಬಲ: ಬಾಪು ಅವರ ಮರಗೆಲಸದ ದಿನಗಳನ್ನು ನೆನಪಿಸುವ ಸಾಂಪ್ರದಾಯಿಕ ಮರದ ಸ್ವಿಚ್‌ಬೋರ್ಡ್

*****

ಬಾಪು 1962ರಲ್ಲಿ ತಮ್ಮ ಕೊನೆಯ ಕೈಮಗ್ಗವನ್ನು ಮಾರಾಟ ಮಾಡಿದರು. ನಂತರದ ವರ್ಷಗಳು ಸವಾಲಿನದ್ದಾಗಿದ್ದವು – ಮತ್ತು ಅದು ಅವರಿಗೆ ಮಾತ್ರವಲ್ಲ.

ಆ ದಶಕದಲ್ಲಿ ರೆಂಡಲ್ ಸ್ವತಃ ಭಾರಿ ಬದಲಾವಣೆಗಳಿಗೆ ಸಾಕ್ಷಿಯಾಯಿತು. ಹತ್ತಿ ಸೀರೆಗಳ ಬೇಡಿಕೆಯು ತೀವ್ರವಾಗಿ ಕುಸಿಯಿತು, ಇದು ನೇಕಾರರು ಶರ್ಟಿಂಗ್ ಬಟ್ಟೆಯನ್ನು ನೇಯ್ಗೆ ಮಾಡಲು ಪ್ರಾರಂಭಿಸುವಂತೆ ಮಾಡಿತು. "ನಾವು ತಯಾರಿಸಿದ ಸೀರೆಗಳು ಸರಳವಾಗಿದ್ದವು. ಸಮಯ ಕಳೆದಂತೆ, ಈ ಸೀರೆಗಳಲ್ಲಿ ಏನೂ ಬದಲಾಗಲಿಲ್ಲ ಮತ್ತು ಅಂತಿಮವಾಗಿ, ಬೇಡಿಕೆ ಕುಸಿಯಿತು" ಎಂದು ವಸಂತ್ ತಾಂಬೆ ಹೇಳುತ್ತಾರೆ.

ಅದಷ್ಟೇಅಲ್ಲ. ವಿದ್ಯುತ್ ಮಗ್ಗಗಳು, ತ್ವರಿತ ಉತ್ಪಾದನೆ, ಹೆಚ್ಚಿನ ಲಾಭ ಮತ್ತು ಸುಲಭ ದುಡಿಮೆಯ ಭರವಸೆಯೊಂದಿಗೆ ಕೈಮಗ್ಗಗಳನ್ನು ಜಾಗದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ರೆಂಡಲ್‌ನ ಬಹುತೇಕ ಎಲ್ಲಾ ಕೈಮಗ್ಗಗಳು ಕೆಲಸ ಮಾಡುವುದನ್ನು ನಿಲ್ಲಿಸಿದವು . ಇಂದು, 75 ವರ್ಷದ ಸಿರಾಜ್ ಮೊಮಿನ್ ಮತ್ತು 73 ವರ್ಷದ ಬಾಬುಲಾಲ್ ಮೊಮಿನ್ ಎಂಬ ಇಬ್ಬರು ನೇಕಾರರು ಮಾತ್ರ ಕೈಮಗ್ಗವನ್ನು ಬಳಸುತ್ತಾರೆ. ಅವರು ಕೂಡ ಶೀಘ್ರದಲ್ಲೇ ಅದನ್ನು ತ್ಯಜಿಸಲು ಯೋಚಿಸುತ್ತಿದ್ದಾರೆ.

"ನಾನು ಕೈಮಗ್ಗಗಳನ್ನು ತಯಾರಿಸುವುದನ್ನು ಬಹಳ ಇಷ್ಟಪಡುತ್ತಿದ್ದೆ" ಎಂದು ಬಾಪು ಸಂತೋಷದಿಂದ ನೆನಪಿಸಿಕೊಳ್ಳುತ್ತಾರೆ, ಒಂದು ದಶಕಕ್ಕಿಂತ ಕಡಿಮೆ ಅವಧಿಯಲ್ಲಿ ಅವರು 400 ಕ್ಕೂ ಹೆಚ್ಚು ಫ್ರೇಮ್ ಮಗ್ಗಗಳನ್ನು ಮಾಡಿದ್ದಾಗಿ ಹೇಳಿದರು. ಎಲ್ಲಾ ಕೈಯಿಂದ, ಅನುಸರಿಸಲು ಯಾವುದೇ ಲಿಖಿತ ಸೂಚನೆಗಳಿಲ್ಲದೆ; ಅವರಾಗಲೀ ಅಥವಾ ಅವರ ತಂದೆಯಾಗಲೀ ಮಗ್ಗಗಳ ಅಳತೆಗಳನ್ನು ಅಥವಾ ವಿನ್ಯಾಸವನ್ನು ಎಂದಿಗೂ ಬರೆಯುತ್ತಿರಲಿಲ್ಲ. " ಮಾಪಾ ಡೋಕ್ಯತ್ ಬಸ್ಲೆಲಿ. ತೊಂಡ್ ಪಥ್ ಝಾಲಾ ಹೋತಾ (ಎಲ್ಲಾ ವಿನ್ಯಾಸಗಳು ನನ್ನ ತಲೆಯಲ್ಲಿದ್ದವು. ಎಲ್ಲಾ ಅಳತೆಗಳನ್ನು ನಾನು ಬಾಯಿಪಾಠ ಮಾಡಿಕೊಂಡಿದ್ದೇನೆ," ಎಂದು ಅವರು ಹೇಳುತ್ತಾರೆ.

ವಿದ್ಯುತ್ ಮಗ್ಗಗಳು ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಂಡರೂ, ಅವುಗಳನ್ನು ಖರೀದಿಸಲು ಸಾಧ್ಯವಾಗದ ಕೆಲವು ನೇಕಾರರು ಸೆಕೆಂಡ್ ಹ್ಯಾಂಡ್ ಕೈಮಗ್ಗಗಳನ್ನು ಖರೀದಿಸಲು ಪ್ರಾರಂಭಿಸಿದರು. 70ರ ದಶಕದಲ್ಲಿ, ಬಳಸಿದ ಕೈಮಗ್ಗಗಳ ಬೆಲೆ ತಲಾ 800 ರೂ.ಗಳವರೆಗೆ ಏರಿತು.

Bapu demonstrates how a manual hand drill was used; making wooden treadle handlooms by hand was an intense, laborious process
PHOTO • Sanket Jain

ಹಸ್ತಚಾಲಿತ ಹ್ಯಾಂಡ್ ಡ್ರಿಲ್ಲನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಬಾಪು ತೋರಿಸುತ್ತಿರುವುದು; ಮರದ ಕೈಮಗ್ಗವನ್ನು ಕೈಯಿಂದ ತಯಾರಿಸುವುದು ಸಂಕೀರ್ಣ ಮತ್ತು ಶ್ರಮದಾಯಕ ಕೆಲಸವಾಗಿತ್ತು

The workshop is a treasure trove of traditional tools and implements. The randa, block plane (left), served multiple purposes, including smoothing and trimming end grain, while the favdi was used for drawing parallel lines.
PHOTO • Sanket Jain
Old models of a manual hand drill with a drill bit
PHOTO • Sanket Jain

ಎಡ: ಈ ಕಾರ್ಯಾಗಾರವು ಸಾಂಪ್ರದಾಯಿಕ ಉಪಕರಣಗಳ ಖಜಾನೆಯಾಗಿದೆ. ಸ್ಪೇಡ್ (ಬ್ಲಾಕ್ ಪ್ಲೇನ್: ಎಡ) ಸರಾಗವಾಗಿಸುವ ಮತ್ತು ಅಂಚುಗಳನ್ನು ಚಿಪ್ಪಿಂಗ್‌ ಮಾಡುವುದು ಒಳಗೊಂಡಂತೆ ಹಲವಾರು ಉದ್ದೇಶಗಳನ್ನು ಪೂರೈಸುತ್ತದೆ, ಆದರೆ ಸಲಿಕೆ ಸಮಾನಾಂತರ ರೇಖೆಗಳನ್ನು ಎಳೆಯಲು ಬಳಸಲಾಗುತ್ತಿತ್ತು. ಬಲ: ಡ್ರಿಲ್ ಬಿಟ್‌ ಜೊತೆ ಹಸ್ತಚಾಲಿತ ಕೈ ಡ್ರಿಲ್ ಯಂತ್ರದ ಹಳೆಯ ಮಾದರಿ

"ಆಗ ಕೈಮಗ್ಗಗಳನ್ನು ತಯಾರಿಸಲು ಯಾರೂ ಇರಲಿಲ್ಲ. ಕಚ್ಚಾವಸ್ತುಗಳ ಬೆಲೆಯೂ ಹೆಚ್ಚಾಯಿತು, ಆದ್ದರಿಂದ [ಕೈಮಗ್ಗಗಳನ್ನು ತಯಾರಿಸುವ] ವೆಚ್ಚವು ಹೆಚ್ಚಾಯಿತು" ಎಂದು ಬಾಪು ವಿವರಿಸುತ್ತಾರೆ. "ಅಲ್ಲದೆ, ಹಲವಾರು ನೇಕಾರರು ತಮ್ಮ ಕೈಮಗ್ಗಗಳನ್ನು ಸೋಲಾಪುರ ಜಿಲ್ಲೆಯ ನೇಕಾರರಿಗೆ [ಮತ್ತೊಂದು ಪ್ರಮುಖ ಜವಳಿ ಕೇಂದ್ರ] ಮಾರಾಟ ಮಾಡಿದರು." ಒಳಸುರಿ ಮತ್ತು ಸಾರಿಗೆ ವೆಚ್ಚಗಳು ಹೆಚ್ಚುತ್ತಿದ್ದ ಕಾರಣ, ನಂತರಕೈಮಗ್ಗಗಳನ್ನು ತಯಾರಿಸುವುದು ಕಾರ್ಯಸಾಧ್ಯವಾಗಿರಲಿಲ್ಲ.

ಇಂದು ಕೈಮಗ್ಗವನ್ನು ತಯಾರಿಸಲು ಎಷ್ಟು ವೆಚ್ಚವಾಗುತ್ತದೆ ಎಂದು ಕೇಳಿದಾಗ ಬಾಪು ನಗುತ್ತಾರೆ. "ಈಗ ಯಾರಿಗಾದರೂ ಕೈಮಗ್ಗ ಏಕೆ ಬೇಕು?" ಎಂದು ಅವರು ಕೆಲವು ಲೆಕ್ಕಾಚಾರಗಳನ್ನು ಮಾಡುವ ಮೊದಲು ಪ್ರಶ್ನಿಸುತ್ತಾ, "ಕನಿಷ್ಠ 50,000 ರೂ.ಗಳು ಆಗಬಹುದು," ಎಂದರು.

1960ರ ದಶಕದ ಆರಂಭದವರೆಗೂ, ಬಾಪು ಕೈಮಗ್ಗಗಳನ್ನು ರಿಪೇರಿ ಮಾಡುವ ಮೂಲಕ ಮಗ್ಗಗಳನ್ನು ತಯಾರಿಸುವುದರಿಂದದೊರೆಯುತ್ತಿದ್ದ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರು, ಭೇಟಿಗಾಗಿ 5 ರೂ.ಗಳನ್ನು ವಿಧಿಸುತ್ತಿದ್ದರು. "ಸಮಸ್ಯೆಯನ್ನು ಅವಲಂಬಿಸಿ, ನಾವು ದರಗಳನ್ನು ಹೆಚ್ಚಿಸುತ್ತಿದ್ದೆವು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಹೊಸ ಕೈಮಗ್ಗಗಳ ಆದೇಶಗಳು ಬರುವುದುನಿಂತ ನಂತರ, 1960ರ ದಶಕದ ಮಧ್ಯಭಾಗದಲ್ಲಿ, ಬಾಪು ಮತ್ತು ಅವರ ಸಹೋದರ ವಸಂತ್, ಬದುಕನ್ನುನಡೆಸಲು ಇತರ ಮಾರ್ಗಗಳನ್ನು ಅನ್ವೇಷಿಸಲು ಪ್ರಾರಂಭಿಸಿದರು.

"ನಾವು ಕೊಲ್ಹಾಪುರಕ್ಕೆ ಹೋದೆವು, ಅಲ್ಲಿ ಮೆಕ್ಯಾನಿಕ್ ಸ್ನೇಹಿತರೊಬ್ಬರು ನಾಲ್ಕು ದಿನಗಳಲ್ಲಿ ಮೋಟರ್ ರಿವೈಂಡ್ ಮಾಡುವುದು ಮತ್ತು ರಿಪೇರಿ ಮಾಡುವುದು ಹೇಗೆಂದು ನಮಗೆ ಕಲಿಸಿದರು" ಎಂದು ಅವರು ಹೇಳುತ್ತಾರೆ. ಅವರು ವಿದ್ಯುತ್ ಮಗ್ಗಗಳನ್ನು ರಿಪೇರಿ ಮಾಡುವುದನ್ನು ಸಹ ಕಲಿತರು. ರಿವೈಂಡಿಂಗ್ ಎಂಬುದು ಮೋಟಾರ್ ಸುಟ್ಟ ನಂತರ ಮಾಡುವ ಆರ್ಮೇಚರ್ ವೈಂಡಿಂಗ್ ಪ್ರಕ್ರಿಯೆಯಾಗಿದೆ. 1970 ರ ದಶಕದಲ್ಲಿ, ಬಾಪು ಕರ್ನಾಟಕದ ಬೆಳಗಾವಿ ಜಿಲ್ಲೆಯ ಮಂಗೂರ್, ಜಂಗಮವಾಡಿ ಮತ್ತು ಬೋರಗಾಂವ್ ಗ್ರಾಮಗಳಿಗೆ ಮತ್ತು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಂಗೋಲಿ, ಇಚಲಕರಂಜಿ ಮತ್ತು ಹುಪಾರಿಗೆ ಮೋಟರುಗಳು, ಸಬ್ ಮರ್ಸಿಬಲ್ ಪಂಪುಗಳು ಮತ್ತು ಇತರ ಯಂತ್ರಗಳನ್ನು ರಿವೈಂಡ್ ಮಾಡಲು ಪ್ರಯಾಣಿಸುತ್ತಿದ್ದರು. "ರೆಂಡಲ್‌ನಲ್ಲಿ ಇದನ್ನು ಹೇಗೆ ಮಾಡಬೇಕೆಂದು ನನಗೆ ಮತ್ತು ನನ್ನ ಸಹೋದರನಿಗೆ ಮಾತ್ರ ತಿಳಿದಿತ್ತು, ಆದ್ದರಿಂದ ಆಗ ನಮಗೆ ಸಾಕಷ್ಟು ಕೆಲಸವಿತ್ತು."

ಅವರಿಗೆಸುಮಾರು 60 ವರ್ಷಗಳಾದ ನಂತರ, ಕೆಲಸವು ಹೆಚ್ಚು ಕಷ್ಟಕರವಾಗುತ್ತಿದ್ದಂತೆ, ದುರ್ಬಲ ಬಾಪು ಇಚಲಕರಂಜಿಗೆ ಮತ್ತು ರಂಗೋಲಿ ಗ್ರಾಮಕ್ಕೆ (ರೆಂಡಲ್ ಗ್ರಾಮದಿಂದ 5.2 ಕಿ.ಮೀ) ಮೋಟರ್ ರಿಪೇರಿ ಮಾಡಲು ಸೈಕಲ್ ಮೂಲಕಹೋಗತೊಡಗಿದರು. ಅವರು ಒಂದು ಮೋಟರ್ ರಿವೈಂಡ್ ಮಾಡಲು ಕನಿಷ್ಠ ಎರಡು ದಿನಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ತಿಂಗಳಿಗೆ ಸುಮಾರು 5,000 ರೂ.ಗಳನ್ನು ಗಳಿಸುತ್ತಾರೆ. "ನಾನು ಐಟಿಐ (ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್) ಪದವೀಧರನಲ್ಲ, ಆದರೆ ನಾನು ಮೋಟರುಗಳನ್ನು ರಿವೈಂಡ್ ಮಾಡಬಲ್ಲೆ" ಎಂದು ಅವರು ನಗುತ್ತಾರೆ.

Once a handloom maker of repute, Bapu now makes a living repairing and rewinding motors
PHOTO • Sanket Jain

ಒಂದು ಕಾಲದಲ್ಲಿ ಹೆಸರಾಂತ ಕೈಮಗ್ಗ ತಯಾರಕರಾಗಿದ್ದ ಬಾಪು ಈಗ ಮೋಟಾರ್ ರಿಪೇರಿ ಮತ್ತು ರಿವೈಂಡ್ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ

Bapu setting up the winding machine before rewinding it.
PHOTO • Sanket Jain
The 82-year-old's hands at work, holding a wire while rewinding a motor
PHOTO • Sanket Jain

ಎಡ: ಬಾಪು ರಿವೈಂಡ್ ಮಾಡುವ ಮೊದಲು ವೈಂಡಿಂಗ್ ಯಂತ್ರವನ್ನು ಹೊಂದಿಸುತ್ತಿದ್ದಾರೆ. ಬಲ: ಈ 82 ವರ್ಷದ ವ್ಯಕ್ತಿಯ ದುಡಿಯುವ ಕೈಗಳು; ಮೋಟರ್ ರಿವೈಂಡ್ ಮಾಡುವಾಗ ತಂತಿಯನ್ನು ಹಿಡಿದಿಟ್ಟುಕೊಂಡಿರುವುದು

ಅವರು ತಮ್ಮ 22 ಗುಂಟೆ (0.5 ಎಕರೆ) ಜಮೀನಿನಲ್ಲಿ ಕಬ್ಬು, ಜೊಂಡಾಲ (ವಿವಿಧ ರೀತಿಯ ಜೋಳ) ಮತ್ತು ಭುಯಿಮುಗ್ (ನೆಲಗಡಲೆ) ಬೆಳೆಯುವ ಮೂಲಕ ಒಂದಷ್ಟು ಹೆಚ್ಚುವರಿ ಹಣವನ್ನು ಗಳಿಸುತ್ತಾರೆ. ಆದರೆ ಅವರಿಗೆ ವಯಸ್ಸಾಗಿರುವ ಕಾರಣ, ಜಮೀನಿನಲ್ಲಿ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಆಗಾಗ್ಗೆ ನುಗ್ಗುವ ಪ್ರವಾಹವು ಅವರ ಭೂಮಿಯಿಂದ ಸಿಗುವ ಇಳುವರಿ ಮತ್ತು ಆದಾಯವು ಸಾಧಾರಣವಾಗಿ ಇರುವಂತೆ ನೋಡಿಕೊಳ್ಳಲು ಮರೆಯುವುದಿಲ್ಲ.

ಕೋವಿಡ್ -19 ಸಾಂಕ್ರಾಮಿಕ ಪಿಡುಗು ಮತ್ತು ಲಾಕ್‌ಡೌನ್‌ಗಳು ಕೆಲಸ ಮತ್ತು ಆದಾಯದ ಮೇಲೆ ಪರಿಣಾಮ ಬೀರುವುದರೊಂದಿಗೆ ಕಳೆದ ಎರಡು ವರ್ಷಗಳು ಬಾಪು ಅವರಿಗೆ ವಿಶೇಷವಾಗಿ ಕಠಿಣವಾಗಿದ್ದವು. "ಹಲವಾರು ತಿಂಗಳುಗಳವರೆಗೆ, ನನಗೆಯಾವುದೇ ಕೆಲಸಗಳು ಸಿಗಲಿಲ್ಲ" ಎಂದು ಅವರು ಹೇಳುತ್ತಾರೆ. ಅವರು ತಮ್ಮ ಹಳ್ಳಿಯಲ್ಲಿ ಹೆಚ್ಚುತ್ತಿರುವ ಐಟಿಐ ಪದವೀಧರರು ಮತ್ತು ಮೆಕ್ಯಾನಿಕ್‌ಗಳಿಂದ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಇದಲ್ಲದೆ, "ಈಗ ತಯಾರಿಸಲಾದ ಮೋಟಾರ್ ಗಳು ಉತ್ತಮ ಗುಣಮಟ್ಟದ್ದಾಗಿರುತ್ತವೆ ಮತ್ತು ಅವುಗಳಿಗೆ ಹೆಚ್ಚಿನ ರಿವೈಂಡಿಂಗ್ ಅಗತ್ಯವಿರುವುದಿಲ್ಲ."

ಕೈಮಗ್ಗ ಕ್ಷೇತ್ರದಲ್ಲೂ ವಿಷಯಗಳು ಉತ್ತಮವಾಗಿ ಕಾಣುತ್ತಿಲ್ಲ. ಕೈಮಗ್ಗ ಗಣತಿ 2019-20ರ ಪ್ರಕಾರ, ಮಹಾರಾಷ್ಟ್ರವು ಕೇವಲ 3,509 ಕೈಮಗ್ಗ ಕಾರ್ಮಿಕರನ್ನುಹೊಂದಿದೆ. 1987-88ರಲ್ಲಿ ಮೊದಲ ಕೈಮಗ್ಗ ಗಣತಿಯನ್ನು ನಡೆಸಿದಾಗ, ಭಾರತದಲ್ಲಿ 67.39 ಲಕ್ಷ ಕೈಮಗ್ಗ ಕಾರ್ಮಿಕರಿದ್ದರು. 2019-2020ರ ವೇಳೆಗೆ ಆ ಸಂಖ್ಯೆ 35.22 ಲಕ್ಷ ಕಾರ್ಮಿಕರಿಗೆ ಇಳಿದಿದೆ. ಭಾರತವು ಪ್ರತಿ ವರ್ಷ 100,000ಕ್ಕೂ ಹೆಚ್ಚು ಕೈಮಗ್ಗ ಕಾರ್ಮಿಕರನ್ನು ಕಳೆದುಕೊಳ್ಳುತ್ತಿದೆ.

ಭಾರತದ 31.44 ಲಕ್ಷ ಕೈಮಗ್ಗ ಕಾರ್ಮಿಕರ ಕುಟುಂಬಗಳಲ್ಲಿ  94,201 ಕುಟುಂಬಗಳು ವರ್ಷಕ್ಕೆ ಸರಾಸರಿ 206 ಕೆಲಸದ ದಿನಗಳನ್ನು ಪಡೆಯುತ್ತಿವೆ ಎಂದು ಗಣತಿಯು ಕಂಡುಕೊಂಡಿದೆ.

ವಿದ್ಯುತ್ ಮಗ್ಗಗಳ ಪ್ರಸರಣ ಮತ್ತು ಕೈಮಗ್ಗ ವಲಯದ ನಿರಂತರ ನಿರ್ಲಕ್ಷ್ಯವು ಕೈ ನೇಯ್ಗೆ ಮತ್ತು ಮಗ್ಗಗಳ ಕರಕುಶಲತೆ ಎರಡಕ್ಕೂ ತೀವ್ರ ಪೆಟ್ಟು ನೀಡಿದೆ. ಬಾಪು ಈ ಪರಿಸ್ಥಿತಿಯನ್ನು ಕಂಡು ದುಃಖಿತರಾಗಿದ್ದಾರೆ.

"ಯಾರೂ ಕೈ ನೇಯ್ಗೆಯನ್ನು ಕಲಿಯಲು ಬಯಸುವುದಿಲ್ಲ. ಹೀಗಾದರೆ ಉದ್ಯೋಗವು ಹೇಗೆ ಉಳಿಯುತ್ತದೆ?" ಎಂದು ಅವರು ಕೇಳುತ್ತಾರೆ. "ಸರ್ಕಾರವು ಕಿರಿಯ ವಿದ್ಯಾರ್ಥಿಗಳಿಗೆ [ಕೈಮಗ್ಗ] ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ದುರದೃಷ್ಟವಶಾತ್, ರೆಂಡಲ್ನಲ್ಲಿ ಯಾರೂ ಬಾಪು ಅವರಿಂದ ಮರದ ಕೈಮಗ್ಗಗಳನ್ನು ತಯಾರಿಸುವ ಕರಕುಶಲತೆಯನ್ನು ಕಲಿತಿಲ್ಲ.ಅವರು82ನೇ ವಯಸ್ಸಿನಲ್ಲಿ, ಆರು ದಶಕಗಳ ಹಿಂದೆ ಅಭ್ಯಾಸ ಮಾಡುವುದನ್ನು ನಿಲ್ಲಿಸಿದ ಕರಕುಶಲತೆಗೆ ಸಂಬಂಧಿಸಿದ ಎಲ್ಲಾ ಜ್ಞಾನದ ಏಕೈಕ ರಕ್ಷಕರಾಗಿದ್ದಾರೆ.

ಮುಂದೊಂದು ದಿನ ಅವರು ಇನ್ನೊಂದು ಕೈಮಗ್ಗವನ್ನು ತಯಾರಿಸಲು ಬಯಸುತ್ತಾರೆಯೇ ಎಂದು ನಾನು ಅವರನ್ನು ಕೇಳಿದೆ. "ಅವು [ಕೈಮಗ್ಗಗಳು] ಇಂದು ಮೌನವಾಗಿವೆ, ಆದರೆ ಸಾಂಪ್ರದಾಯಿಕ ಮರದ ಸಲಕರಣೆಗಳು ಮತ್ತು ನನ್ನ ಕೈಗಳಲ್ಲಿ ಇನ್ನೂ ಜೀವವಿದೆ" ಎಂದು ಅವರು ಹೇಳುತ್ತಾರೆ. ಅವರು ವಾಲ್‌ನಟ್ ಕಂದು ಬಣ್ಣದ ಮರದ ಪೆಟ್ಟಿಗೆಯನ್ನು ದಿಟ್ಟಿಸಿ ನೋಡುತ್ತ, ಕುತೂಹಲದಿಂದ ಮುಗುಳ್ನಕ್ಕರು, ಅವರ ನೋಟ ಮತ್ತು ನೆನಪುಗಳು ಕಂದು ಬಣ್ಣದ ಛಾಯೆಗಳಲ್ಲಿ ಮಸುಕಾಗುತ್ತಿವೆ.

Bapu's five-decade-old workshop carefully preserves woodworking and metallic tools that hark back to a time when Rendal was known for its handloom makers and weavers
PHOTO • Sanket Jain

ಬಾಪು ಅವರ ಐದು ದಶಕಗಳ ಹಳೆಯ ಕಾರ್ಯಾಗಾರವು ಮರದ ಮತ್ತು ಲೋಹದ ಉಪಕರಣಗಳನ್ನು ಸಂರಕ್ಷಿಸುತ್ತದೆ, ಅದು ರೆಂಡಲ್ ಕೈಮಗ್ಗ ತಯಾರಕರು ಮತ್ತು ನೇಕಾರರಿಗೆ ಹೆಸರುವಾಸಿಯಾಗಿದ್ದ ಕಾಲಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ

Metallic tools, such as dividers and compasses, that Bapu once used to craft his sought-after treadle looms
PHOTO • Sanket Jain

ವಿಭಾಜಕಗಳು ಮತ್ತು ದಿಕ್ಸೂಚಿಗಳಂತಹ ಲೋಹದ ಉಪಕರಣಗಳು, ಬಾಪು ಒಮ್ಮೆ ತಮ್ಮ ಪ್ರಸಿದ್ಧ ಮಗ್ಗಗಳನ್ನು ತಯಾರಿಸಲು ಬಳಸುತ್ತಿದ್ದರು

Bapu stores the various materials used for his rewinding work in meticulously labelled plastic jars
PHOTO • Sanket Jain

ಬಾಪು ಮೋಟಾರಿನ ರಿವೈಂಡಿಂಗ್ ಕೆಲಸಕ್ಕೆ ಬಳಸುವ ವಿವಿಧ ವಸ್ತುಗಳನ್ನು ಪ್ಲಾಸ್ಟಿಕ್ ಬಾಕ್ಸ್‌ಗಳಲ್ಲಿ ಗುರುತಿನ ಚೀಟಿಗಳನ್ನು ಅಂಟಿಸಿ ಸೂಕ್ಷ್ಮವಾಗಿ ಸಂಗ್ರಹಿಸುತ್ತಾರೆ

Old dobbies and other handloom parts owned by Babalal Momin, one of Rendal's last two weavers to still use handloom, now lie in ruins near his house
PHOTO • Sanket Jain

ರೆಂಡಲ್‌ನ ಕೊನೆಯ ಇಬ್ಬರು ನೇಕಾರರಲ್ಲಿ ಒಬ್ಬರಾದ, ಈಗಲೂ ಕೈಮಗ್ಗವನ್ನು ಬಳಸುತ್ತಿರುವ ಬಾಬಾಲಾಲ್ ಮೊಮಿನ್ ಅವರ ಮಾಲೀಕತ್ವದ ಹಳೆಯ ಡಾಬಿಗಳು ಮತ್ತು ಇತರ ಕೈಮಗ್ಗದ ಭಾಗಗಳು ಈಗ ಅವರ ಮನೆಯ ಸಮೀಪದಲ್ಲಿ ಹಾಳಾಗಿ ಬಿದ್ದಿವೆ

At 82, Bapu is the sole keeper of all knowledge related to a craft that Rendal stopped practising six decades ago
PHOTO • Sanket Jain

ಈಗ 82 ವರ್ಷ ವಯಸ್ಸಿನ ಬಾಪು ಅವರು ಆರು ದಶಕಗಳ ಹಿಂದೆ ರೆಂಡಲ್ ಗ್ರಾಮದಲ್ಲಿ ನಿಲ್ಲಿಸಲ್ಪಟ್ಟ ಕರಕುಶಲತೆಯ ಏಕೈಕ ಪಾಲಕ ಮತ್ತು ಅದರ ಜ್ಞಾನದ ಕೊಂಡಿಯಾಗಿ ಉಳಿದುಕೊಂಡಿದ್ದಾರೆ

ಈ ಕಥ ನ ರೂಪದ ವರದಿಯು ಸಂಕೇತ್ ಜೈನ್ ಅವರ ಗ್ರಾಮೀಣ ಕುಶಲ ಕರ್ಮಿಗಳ ಕುರಿತ ವರದಿ ಸರಣಿಯ ಭಾಗವಾಗಿದೆ, ಮತ್ತು ಇದು ಮೃಣಾಲಿನಿ ಮುಖರ್ಜಿ ಫೌಂಡೇಶನ್ ಇದರಿಂದಬೆಂಬಲಿತವಾಗಿದೆ.

ಅನುವಾದ : ಶಂಕರ . ಎನ್ . ಕೆಂಚನೂರು

Sanket Jain

Sanket Jain is a journalist based in Kolhapur, Maharashtra. He is a 2022 PARI Senior Fellow and a 2019 PARI Fellow.

Other stories by Sanket Jain
Editor : Sangeeta Menon

Sangeeta Menon is a Mumbai-based writer, editor and communications consultant.

Other stories by Sangeeta Menon
Photo Editor : Binaifer Bharucha

Binaifer Bharucha is a freelance photographer based in Mumbai, and Photo Editor at the People's Archive of Rural India.

Other stories by Binaifer Bharucha
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru