ನನ್ನ ಮನೆಯ ಅಂಗಳ ನೆನಪಾಗಲಿದೆ; ನಿನ್ನ ದಾರಿ ನೆನಪಾಗಲಿದೆ
ಪರದೇಶಿ, ಅತಿಥಿ ನಾನಾದೆ, ಓ ತಾಯಿ, ಈ ಊರಿನ ನೆನಪು ನನ್ನನ್ನು ಕಾಡಲಿದೆ

ಮದುವೆಯಾಗಿ ಮಾವನ ಮನೆಗೆ ಹೊರಟ ಹೆಣ್ಣು ಮಗಳೊಬ್ಬಳು ದಾರಿಯುದ್ದಕ್ಕೂ ನೋವಿನ ಹಾಡನ್ನು ಹಾಡುತ್ತಾ ಹೊರಟಿದ್ದಾಳೆ. ಈ ಹಾಡಿನಲ್ಲಿ ಕುಟುಂಬದಿಂದ ಹಾಗೂ ಸ್ನೇಹಿತರಿಂದ ದೂರವಾಗುತ್ತಿರುವ ನೋವು ಮಡುಗಟ್ಟಿದೆ. ಇಂತಹ ಹಾಡುಗಳನ್ನು ನಾವು ದೇಶದೆಲ್ಲೆಡೆ ಕಾಣಬಹುದು. ಮದುವೆಯ ಸಮಯದಲ್ಲಿ ಹಾಡಲಾಗುವ ಈ ಹಾಡುಗಳು  ಮೌಖಿಕ ಸಂಪ್ರದಾಯಗಳ ಶ್ರೀಮಂತ ಸಂಗ್ರಹದ ಪ್ರಮುಖ ಅಂಶವಾಗಿವೆ.

ಹಾಡುಗಳು, ಅವುಗಳ ರೂಪ ಮತ್ತು ವಿಷಯಗಳಲ್ಲಿ ಸರಳವೆಂದು ತೋರುತ್ತವೆ, ಅವು ತಲೆಮಾರಿನಿಂದ ತಲೆಮಾರಿಗೆ ಸಾಗುವ ಈ ಹಾಡುಗಳು ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಸಹ ಆಳವಡಿಸಿಕೊಳ್ಳುತ್ತವೆ, ಸಾಮಾಜಿಕ ಅಸ್ಮಿತೆಯ ಇವು ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಪಿತೃಪ್ರಧಾನ ಸಮಾಜದಲ್ಲಿ ವಿವಾಹವು ಮಹಿಳೆಯ ಜೀವನದಲ್ಲಿ ಕೇವಲ ಒಂದು ವಿಶೇಷ ಘಟನೆಯಲ್ಲ, ಅದು  ಅವಳ ಗುರುತನ್ನು ರೂಪಿಸುವಲ್ಲಿ ಒಂದು ಪ್ರಮುಖ ಹೆಗ್ಗುರುತಾಗಿದೆ. ಅದುವರೆಗೂ ಅವಳದಾಗಿದ್ದ ನೆನಪುಗಳು, ಕುಟುಂಬಗಳು, ಸ್ನೇಹ ಮತ್ತು ಸ್ವಾತಂತ್ರ್ಯವನ್ನು ಪ್ರತಿನಿಧಿಸುವ ಅಂಗಳಗಳು ಈ ಹಂತದಿಂದ ಅಪರಿಚಿತವಾಗಿ ಅವಳಿಂದ ದೂರವಾಗುತ್ತವೆ. ಈ ಅಂಶಗಳು ಆಕೆಯೊಳಗೆ ಸಂಕೀರ್ಣ ಭಾವಗಳ ಹುಟ್ಟಿಗೆ ಕಾರಣವಾಗುತ್ತವೆ.

ಮುಂದ್ರಾ ತಾಲೂಕಿನ ಭದ್ರೇಸರ ಗ್ರಾಮದ ಮುಸ್ಲಿಂ ಸಮುದಾಯದ ಜುಮಾ ವಾಘರ್ ಎಂಬ ಮೀನುಗಾರ ವ್ಯಕ್ತಿಯೊಬ್ಬರು ಪ್ರಸ್ತುತಪಡಿಸಿದ ಹಾಡು, 2008ರಲ್ಲಿ ಪ್ರಾರಂಭವಾದ ಸಮುದಾಯ-ಚಾಲಿತ ರೇಡಿಯೋ ಕೇಂದ್ರವಾದ ಸೂರ್ವಾಣಿ ರೆಕಾರ್ಡ್ ಮಾಡಿದ 341 ಹಾಡುಗಳಲ್ಲಿ ಒಂದಾಗಿದೆ. ಈ ಹಾಡುಗಳು ಪ್ರದೇಶದ ಅಪಾರ ಸಾಂಸ್ಕೃತಿಕ, ಭಾಷಾ ಮತ್ತು ಸಂಗೀತದ ವೈವಿಧ್ಯತೆಯನ್ನು ತಮ್ಮೊಳಗೆ ಅಡಗಿಸಿಕೊಂಡಿವೆ. ಈ ಸಂಗ್ರಹವು ಕಛ್‌ನ ಸಂಗೀತ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ, ಈ ಸಂಗೀತ ಪರಂಪರೆಯು ಅವನತಿಯತ್ತ ಸಾಗುತ್ತಿದ್ದು ಮರುಭೂಮಿಯ ಮರಳಿನಲ್ಲಿ ಅದರ ಮಾಧುರ್ಯ ಮರೆಯಾಗುತ್ತಿದೆ.

ಅವಳು ತನ್ನ ಆತಂಕಗಳು ಮತ್ತು ಭಯಗಳನ್ನು ಹಾಡುಗಳ ಮೂಲಕವಷ್ಟೇ ವ್ಯಕ್ತಪಡಿಸಲು ಸಾಧ್ಯ. ಏಕೆಂದರೆ ಇಂತಹ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದು ಅವಳಿಗೆ ಸುರಕ್ಷಿತವಲ್ಲ.

ಭದ್ರೇಸರ್‌ನ ಜುಮಾ ವಾಘೇರ್ ಹಾಡಿರುವ ಜಾನಪದ ಹಾಡನ್ನು ಕೇಳಿ

કરછી

અંઙણ જાધ પોંધા મૂકે વલણ જાધ પોંધા (૨)
આંઊ ત પરડેસણ ઐયા મેમાણ. જીજલ મૂકે અંઙણ જાધ પોંધા
અંઙણ જાધ પોંધા,મિઠડા ડાડા જાધ પોંધા (૨)
આઊ ત પરડેસણ ઐયા મેમાણ, માડી મૂકે અંઙણ જાધ પોંધા
આઊ ત વિલાતી ઐયા મેમાણ, માડી મૂકે અંઙણ જાધ પોંધા
અંઙણ જાધ પોંધા મિઠડા બાવા જાધ પોંધા (૨)
આઊ તા રે પરડેસણ બાવા મેમાણ, માડી મૂકે અંઙણ જાધ પોંધા
આઊ તા વિલાતી ઐયા મેમાણ, જીજલ મૂકે અંઙણ જાધ પોંધા
અંઙણ જાધ પોંધા મિઠડા કાકા જાધ પોંધા (૨)
આઊ તા પરડેસણ કાકા મેમાણ,માડી મૂકે અંઙણ જાધ પોંધા
અંઙણ જાધ પોંધા મિઠડા મામા જાધ પોંધા (૨)
આઊ તા રે ઘડી જી મામા મેમાણ, માડી મૂકે અંઙણ જાધ પોંધા (૨)
આઊ તા વિલાતી ઐયા મેમાણ, માડી મૂકે અંઙણ જાધ પોંધા
અંઙણ જાધ પોંધા મિઠડા વીરા જાધ પોંધા (૨)
આઊ તા રે પરડેસી મેમાણ, વીરા મૂકે અંઙણ જાધ પોંધા
અંઙણ જાધ પોંધા મૂકે વલણ જાધ પોંધા (૨)
આઊ તા રે પરડેસણ ઐયા મેમાણ, માડી મૂકે અંઙણ જાધ પોંધા
આઊ તા વિલાતી ઐયા મેમાણ, જીજલ મૂકે અંઙણ જાધ પોંધા
આઊ તા રે ઘડી જી ઐયા મેમાણ,માડી મૂકે અંઙણ જાધ પોંધા (૨)
અંગણ યાદ પોધા મુકે વલણ યાદ પોધ

ಕನ್ನಡ

ಇನ್ನು ಈ ಅಂಗಳ ನನ್ನದಲ್ಲ;  ನಿಮ್ಮ ಬರವನ್ನು ಇನ್ನು ಕಾಣಲಾಗದು ನನಗೆ
ನಾನಿನ್ನು ಪರದೇಶಿ, ಅತಿಥಿ, ಓ ಅಮ್ಮಾ ಈ ಊರಿನ್ನು ನೆನಪಾಗಿ ಕಾಡಲಿದೆ
ಇನ್ನು ಈ ಅಂಗಳ ನನ್ನದಲ್ಲ;  ಅಪ್ಪ, ಅಜ್ಜನ ನೆನಪು ಕಾಡಲಿದೆ ಇನ್ನು ನನಗೆ
ಅಯ್ಯೋ ನಾನಿನ್ನು ಪರದೇಶಿ, ಓ ಅಕ್ಕ ನಾನಿನ್ನು ಇಲ್ಲಿಗೆ ಅತಿಥಿ, ಓ ಅಮ್ಮಾ ಈ ಅಂಗಳ ನನಗೆ ನೆನಪಾಗಿ ಕಾಡಲಿದೆ (2)
ನಾನಿನ್ನು ಹೊರಗಿನವಳು ಇಲ್ಲಿಗೆ, ಓ ಅಮ್ಮ ನೆನಪಾಗಿ ಕಾಡಲಿದೆ ಈ ಊರು ನನಗೆ
ಅಯ್ಯೋ ನಾನಿನ್ನು ಪರದೇಶಿ, ನನ್ನ ಪ್ರೀತಿಯ ಬಾವನ ಕಾಣಲಾಗದು ಇನ್ನು; ತಂದೆಯ ನೆನಪು ಕಾಡಲಿದೆ ಇನ್ನು
ಇನ್ನು ಪರದೇಶಿಯಾದೆ ನಾನು, ಓ ಜೀಜಲ್‌, ಓ ಅಮ್ಮಾ ಈ ಊರು ನೆನಪಾಗಿ ಕಾಡಲಿದೆ ನನಗೆ
ಈ ಅಂಗಳ ಮತ್ತು ನನ್ನ ಚಿಕ್ಕಪ್ಪಂದಿರು ನೆನಪಾಗಿ ಕಾಡಲಿರುವರು ನನಗೆ ಕೇಳಮ್ಮ(2)
ಇನ್ನು ಪರದೇಶಿಯಾದೆ ನಾನು, ಮಾಮಾ ಅತಿಥಿ ಇನ್ನು ನಾನಿಲ್ಲಿಗೆ, ಓ ಅಮ್ಮಾ ಈ ಊರು ನೆನಪಾಗಿ ಕಾಡಲಿದೆ ನನಗೆ(2)
ಈ ಅಂಗಳ, ಪ್ರೀತಿಯ ಮಾಮಾ, ಈ ಅಂಗಳ ನೆನಪಾಗಿ ಕಾಡಲಿದೆ ನನಗೆ
ಇನ್ನು ಪರದೇಶಿಯಾದೆ ನಾನು, ಇನ್ನು ನಾನಿಲ್ಲಿಗೆ ಓ ಅಮ್ಮ, ಈ ಊರು ನೆನಪಾಗಿ ಕಾಡಲಿದೆ ನನಗೆ
ಈ ಅಂಗಳ, ಪ್ರೀತಿಯ ಅಮ್ಮ, ಈ ಊರು ನೆನಪಾಗಿ ಕಾಡಲಿದೆ ನನಗೆ (2)
ಈ ಅಂಗಳ, ನನ್ನ ಪ್ರೀತಿಯ ವೀರ. ನನ್ನಣ್ಣನ ನೆನಪು ಕಾಡಲಿದೆ ಇನ್ನು
ಇನ್ನು ಪರದೇಶಿಯಾದೆ ನಾನು, ಇನ್ನು ನಾನಿಲ್ಲಿಗೆ ಓ ಅಣ್ಣ, ಈ ಊರು ನೆನಪಾಗಿ ಕಾಡಲಿದೆ ನನಗೆ
ಪರದೇಸಿಯಾಗಿ, ಅತಿಥಿಯಾಗಿ ಅಣ್ಣ ಈ ಊರಿಗೆ ಬರುವೆ ನಾನಿನ್ನು
ಈ ಅಂಗಳ. ಈ ದಾರಿ ಎಲ್ಲವೂ ನೆನಪಾಗಿ ಕಾಡಲಿದೆ ಇನ್ನು(2)
ಇನ್ನು ಪರದೇಶಿಯಾದೆ ನಾನು, ಓ ಜೀಜಲ್‌, ಓ ಅಮ್ಮಾ ಈ ಊರು ನೆನಪಾಗಿ ಕಾಡಲಿದೆ ನನಗೆ
ಈ ಅಂಗಳ ಮತ್ತು ನನ್ನ ಚಿಕ್ಕಪ್ಪಂದಿರು ನೆನಪಾಗಿ ಕಾಡಲಿರುವರು ನನಗೆ ಕೇಳಮ್ಮ
ಒಂದಷ್ಟು ಕಾಲ ಇಲ್ಲಿರುವೆ ನಾನು ಅಮ್ಮ ಈ ನೆನಪಾಗಿ ಕಾಡಲಿದೆ ಇನ್ನು(2)
ಈ ಅಂಗಳ ಮತ್ತು ನೀವು ಬರುವ ದಾರಿ, ಈ ಊರು ನೆನಪಾಗಿ ಕಾಡಲಿದೆ ಇನ್ನು

PHOTO • Priyanka Borar

ಹಾಡಿನ ಪ್ರಕಾರ: ಸಾಂಪ್ರದಾಯಿಕ ಜಾನಪದ ಗೀತೆ

ಕ್ಲಸ್ಟರ್: ಮದುವೆ ಹಾಡುಗಳು

ಹಾಡು: 4

ಹಾಡಿನ ಶೀರ್ಷಿಕೆ: ಆಂಗಣ್ ಯಾದ್ ಪೋಧಾ ಮೂಕೆ, ವಾಲಣ್ ಯಾದ್ ಪೋಧಾ

ಸಂಗೀತ: ದೇವಲ್ ಮೆಹ್ತಾ

ಗಾಯಕ ರು : ಮುಂದ್ರಾ ಭದ್ರೇಸರ್ ನ ಜುಮಾ ವಾಘೇರ್. 40 ವರ್ಷದ ಮೀನುಗಾರ.

ಬಳಸಿದ ವಾದ್ಯಗಳು: ಹಾರ್ಮೋನಿಯಂ, ಡ್ರಮ್, ಬ್ಯಾಂಜೊ

ರೆಕಾರ್ಡಿಂಗ್ ವರ್ಷ: 2012, ಕೆಎಂವಿಎಸ್ ಸ್ಟುಡಿಯೋ

ಗುಜರಾತಿ ಅನುವಾದ: ಅಮದ್ ಸಮೇಜಾ, ಭಾರತಿ ಗೋರ್


ಪ್ರೀತಿ ಸೋನಿ, ಕೆಎಂವಿಎಸ್ ಕಾರ್ಯದರ್ಶಿ ಅರುಣಾ ಧೋಲಾಕಿಯಾ, ಕೆಎಂವಿಎಸ್ ಯೋಜನಾ ಸಂಯೋಜಕ ಅಮದ್ ಸಮೇಜಾ ಮತ್ತು ಗುಜರಾತಿ ಅನುವಾದದ ಅಮೂಲ್ಯ ಸಹಾಯಕ್ಕಾಗಿ ಭಾರತಿಬೆನ್ ಗೋರ್ ಅವರಿಗೆ ವಿಶೇಷ ಧನ್ಯವಾದಗಳು.

ಅನುವಾದ: ಶಂಕರ. ಎನ್. ಕೆಂಚನೂರು

Pratishtha Pandya

কবি এবং অনুবাদক প্রতিষ্ঠা পান্ডিয়া গুজরাতি ও ইংরেজি ভাষায় লেখালেখি করেন। বর্তমানে তিনি লেখক এবং অনুবাদক হিসেবে পারি-র সঙ্গে যুক্ত।

Other stories by Pratishtha Pandya
Illustration : Priyanka Borar

নিউ-মিডিয়া শিল্পী প্রিয়াঙ্কা বোরার নতুন প্রযুক্তির সাহায্যে ভাব এবং অভিব্যক্তিকে নতুন রূপে আবিষ্কার করার কাজে নিয়োজিত আছেন । তিনি শেখা তথা খেলার জন্য নতুন নতুন অভিজ্ঞতা তৈরি করছেন; ইন্টারেক্টিভ মিডিয়ায় তাঁর সমান বিচরণ এবং সেই সঙ্গে কলম আর কাগজের চিরাচরিত মাধ্যমেও তিনি একই রকম দক্ষ ।

Other stories by Priyanka Borar
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru