ಸೆಪ್ಟೆಂಬರ್ ಆರಂಭದಲ್ಲಿ ಘೋಡಾಮಾರ ದ್ವೀಪದ ಹಡಗಿನ ಬಂದರಿನಲ್ಲಿ ಚಟುವಟಿಕೆಗಳು ತೀವ್ರಗೊಳ್ಳುತ್ತವೆ. ಪುರುಷರು, ಮಹಿಳೆಯರು, ಮಕ್ಕಳು ಮತ್ತು ದನಕರುಗಳು ಸಹ ದೋಣಿಯಿಂದ ಇಳಿದು ದಿನದ ಕೆಲಸಕ್ಕೆ ಹೋಗಲು ಹಾತೊರೆಯುತ್ತಾರೆ.ಉಬ್ಬರವಿಳಿತದ ಸಮಯದಲ್ಲಿ ಬೇರೆಡೆ ಆಶ್ರಯ ಪಡೆಯುವ ಅವರು, ನೀರು ಕಡಿಮೆಯಾದ ನಂತರ ನಿಧಾನವಾಗಿ ಸಂಬಂಧಿಕರೊಂದಿಗೆ ದ್ವೀಪಕ್ಕೆ ಮರಳುತ್ತಾರೆ.ಮುಖ್ಯ ಭೂಭಾಗವಾದ ಕಾಕ್‌ಡ್ವಿಪ್‌ನಿಂದ ಸುಂದರಬನ್ಸ್ ನದಿ ಮುಖಜ ಭೂಮಿಯಲ್ಲಿರುವ ದ್ವೀಪವನ್ನು ದೋಣಿ ಮೂಲಕ ತಲುಪಲು ಸುಮಾರು 40 ನಿಮಿಷಗಳು ಹಿಡಿಯುತ್ತದೆ, ಅಂತಹ ಪ್ರಯಾಣಿಕರನ್ನು ತಿಂಗಳಿಗೆ ಎರಡು ಬಾರಿಯಾದರೂ ಮುಖ್ಯ ಭೂಭಾಗದಿಂದ ದ್ವೀಪದ ಪ್ರದೇಶದವರೆಗೆ ಸಾಗಿಸಲಾಗುತ್ತದೆ. ಆದಾಗ್ಯೂ, ಈ ದಿನಚರಿಯು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿರುವ ಸಣ್ಣ ದ್ವೀಪದಲ್ಲಿನ ಘೋರಮಾರ ಗ್ರಾಮಸ್ಥರ ಸುದೀರ್ಘ ಹೋರಾಟವನ್ನು ಹುಸಿಗೊಳಿಸಿದೆ.
ಪದೇ ಪದೇ ಉಂಟಾಗುವ ಚಂಡಮಾರುತಗಳು, ಹೆಚ್ಚುತ್ತಿರುವ ಸಮುದ್ರ ಮಟ್ಟಗಳು ಮತ್ತು ಅತಿವೃಷ್ಟಿ - ಇವೆಲ್ಲವುಗಳು ಕೂಡ ಹವಾಮಾನದ ಬದಲಾವಣೆಯಲ್ಲಾಗಿರುವ ಸೂಚನೆಗಳನ್ನು ನೀಡುತ್ತವೆ. ಇದರಿಂದಾಗಿ ಈಗ ಘೋಡಾಮಾರದ ಜನಜೀವನವನ್ನು ಅಸ್ತ್ಯವಸ್ಥಗೊಳಿಸಿದೆ. ಇನ್ನೂ ದಶಕಗಳಿಂದ ಸಂಭವಿಸುತ್ತಿರುವ ಪ್ರವಾಹಗಳು ಮತ್ತು ಅದರಿಂದಾದ ಮಣ್ಣಿನ ಸವಕಳಿಯಿಂದಾಗಿ ಹೂಗ್ಲಿ ನದಿ ಮುಖಜದಲ್ಲಿರುವ ಅವರ ಪ್ರತ್ಯೇಕ ಭೂಪ್ರದೇಶವು ಒಂದು ರೀತಿ ತೇಲುವ ಭೂಮಿಯಾಗಿ ಮಾರ್ಪಟ್ಟಿದೆ.
ಯಾಸ್ ಚಂಡಮಾರುತವು ಮೇ ತಿಂಗಳಲ್ಲಿ ಭೂಮಿಗೆ ಅಪ್ಪಳಿಸಿದಾಗ, ಸಾಗರ್ ಬ್ಲಾಕ್‌ನಲ್ಲಿರುವ ಘೋರಮಾರ ಪ್ರದೇಶವು, ಸುಂದರಬನ್ಸ್‌ನಲ್ಲಿಯೇ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ. ಮೇ 26ರಂದು, ಹೆಚ್ಚಿನ ಉಬ್ಬರವಿಳಿತದ ಜೊತೆಗೆ ಚಂಡಮಾರುತವು ದ್ವೀಪದ ಏರುಪ್ರದೇಶಗಳಿಗೆ ನುಗ್ಗಿ ಕೇವಲ 15-20 ನಿಮಿಷಗಳಲ್ಲಿ ಅದನ್ನು ಮುಳುಗಿಸಿದೆ. ಈ ಹಿಂದೆ ಅಂಫಾನ್ (2020) ಮತ್ತು ಬುಲ್‌ಬುಲ್ (2019) ಚಂಡಮಾರುತದ ಪ್ರಭಾವವನ್ನು ಎದುರಿಸಿದ್ದ ದ್ವೀಪದ ವಾಸಿಗಳು ಈಗ ಮತ್ತೊಮ್ಮೆ ಅಂತಹ ವಿನಾಶದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.ಅವರ ಮನೆಗಳು ಕಿತ್ತು ಹೋಗಿವೆ ಮತ್ತು ಭತ್ತದ ಉಗ್ರಾಣಗಳು, ವೀಳ್ಯದೆಲೆ ಬೆಳೆಗಳು ಮತ್ತು ಸೂರ್ಯಕಾಂತಿ ಹೊಲಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ.
ಚಂಡಮಾರುತದ ರಭಸಕ್ಕೆ ಖಾಸಿಮರ ಘಾಟ್ ಬಳಿಯ ಅಬ್ದುಲ್ ರೌಫ್ ಅವರ ಮನೆ ಧ್ವಂಸಗೊಂಡಿದೆ. "ನಮಗೆ ಆ ಮೂರು ದಿನಗಳವರೆಗೆ ಆಹಾರವಿದ್ದಿರಲಿಲ್ಲ ಮತ್ತು ಮಳೆನೀರಿನ ಮೇಲೆ ಬದುಕಿದ್ದೇವೆ ಮತ್ತು ಕೇವಲ ಪ್ಲಾಸ್ಟಿಕ್ ಹಾಳೆಗಳಿಂದ ರಕ್ಷಿಸಲ್ಪಟ್ಟಿದ್ದೇವೆ" ಎಂದು 90 ಕಿಲೋಮೀಟರ್ ದೂರದಲ್ಲಿರುವ ಕೋಲ್ಕತ್ತಾದಲ್ಲಿ ಕೆಲಸ ಮಾಡುವ ಟೈಲರ್ ರೌಫ್ ಹೇಳುತ್ತಿದ್ದರು. ಅವರು ಮತ್ತು ಅವರ ಹೆಂಡತಿ ಅನಾರೋಗ್ಯಕ್ಕೆ ಒಳಗಾದಾಗ “ಎಲ್ಲರೂ ನಮಗೆ ಕೋವಿಡ್ ಇದೆ ಎಂದು ಶಂಕಿಸಿದ್ದರು, ಹಲವರು ಹಳ್ಳಿಯನ್ನು ತೊರೆದರು” ಎಂದು ರೌಫ್ ಹೇಳಿದರು. "ನಾವು ಅಲ್ಲಿಯೇ ಮಲಗಿದ್ದೇವೆ, ಸುರಕ್ಷಿತವಾಗಿ ನಮಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ." ರೌಫ್ ಮತ್ತು ಅವರ ಪತ್ನಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಬಗ್ಗೆ ನಿಗಾವಹಿಸಬೇಕೆಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ ದೂರು ಬಂದಾಗ. “ಬಿಡಿಒ ನಮಗೆ ಹೇಗಾದರೂ ಮಾಡಿ ಕಾಕದ್ವೀಪ್ ತಲುಪಲು ವಿನಂತಿಸಿಕೊಂಡರು. ಅಲ್ಲಿಂದ ಅವರು ನಮಗೆ ಆಂಬ್ಯುಲೆನ್ಸ್‌ಗೆ ವ್ಯವಸ್ಥೆ ಮಾಡಿದರು. ನಾವು ವೈದ್ಯಕೀಯ ಆರೈಕೆಗಾಗಿ ಸುಮಾರು 22,000 ರೂಪಾಯಿಗಳನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ಬಂತು” ಎಂದು ಅವರು ಹೇಳಿದರು. ಅಂದಿನಿಂದ ರೌಫ್ ಮತ್ತು ಅವರ ಕುಟುಂಬವು ದ್ವೀಪದಲ್ಲಿರುವ ಆಶ್ರಯದಲ್ಲಿ ವಾಸಿಸುತ್ತಿದೆ.
ಹಲವಾರು ಮನೆಗಳು ನಾಶವಾದ ನಂತರ ಅಲ್ಲಿನ ಅನೇಕ ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ. ಮಂದಿರ್ತಾಲಾ ಗ್ರಾಮದ ನಿವಾಸಿಗಳು ದ್ವೀಪದ ಅತಿ ಎತ್ತರದ ಸ್ಥಳವಾದ ಮಂದಿರ್ತಾಲ ಬಜಾರ್ (ಬಜಾರ್) ಬಳಿಯ ಟ್ಯಾಂಕ್ ಗ್ರೌಂಡ್‌ನಲ್ಲಿರುವ ಆಶ್ರಯದಲ್ಲಿ ನೆಲೆಸಿದ್ದಾರೆ. ಅವರಲ್ಲಿ ಕೆಲವರು ಹತ್ತಿರದ ಕಿರಿದಾದ ರಸ್ತೆಯಲ್ಲಿ ಬಿಡಾರ ಹೂಡಿದ್ದಾರೆ. ದ್ವೀಪದ ಹತ್ಖೋಲಾ, ಚುನ್‌ಪುರಿ ಮತ್ತು ಖಾಸಿಮಾರಾ ಪ್ರದೇಶಗಳಲ್ಲಿನ 30 ಕುಟುಂಬಗಳು ಘೋರಮಾರದ ದಕ್ಷಿಣ ಭಾಗದಲ್ಲಿರುವ ಸಾಗರ್ ದ್ವೀಪದಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿವೆ. ಅವರಿಗೆ ಸ್ಥಳಾಂತರಗೊಳ್ಳಲು ಅಲ್ಲಿ ಭೂಮಿಯನ್ನು ಮಂಜೂರು ಮಾಡಲಾಗಿದೆ.



























