ಆಮ್ಟಾ ಪ್ರದೇಶದಲ್ಲಿ ದಾಮೋದರ್ ನದಿಯುದ್ದಕ್ಕೂ ಇರುವ ಜನರ ಮುಖ್ಯ ಜೀಪನೋಪಾಯಗಳೆಂದರೆ ಕೃಷಿ ಮತ್ತು ಮೀನುಗಾರಿಕೆ. ಇಲ್ಲಿಯ ಮಹಿಳೆಯರು ಶಿಫಾನ್ ಮತ್ತು ಜ್ಯೋರ್ಜೆಟ್ ಸೀರೆಗಳ ಆಲಂಕಾರಿಕ ಬಿಡಿ ಕೆಲಸಗಳನ್ನೂ ಕೂಡ ಮಾಡುತ್ತಾರೆ. ಪುಟ್ಟ ಪುಟ್ಟ ಹೊಳಪಿನ ಕಲ್ಲುಗಳಿಂದ ಖಾಲಿ ಸೀರೆಗಳನ್ನು ಸುಂದರವಾಗಿ ಅಲಂಕರಿಸುವ ಇವರುಗಳು ಈ ಕಲ್ಲುಗಳಿಂದ ಸೀರೆಯನ್ನು ಒಂದು ಕಲಾಕೃತಿಯೇ ಎಂಬಂತೆ ರೂಪಾಂತರಗೊಳಿಸುವ ಪರಿಯು ಅನನ್ಯ.

ಪಶ್ಚಿಮಬಂಗಾಳದಾದ್ಯಂತ ಅದೆಷ್ಟೋ ಹೆಂಗಸರು ಈ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದು ಅವರಿಗೆ ಆದಾಯವನ್ನು ನೀಡಿ ಮನೆಯ ಖರ್ಚುಗಳನ್ನು ತೂಗಿಸಲು ಭಾಗೀದಾರರನ್ನಾಗಿ ಮಾಡುತ್ತಿರುವುದಲ್ಲದೆ ಈ ಮಹಿಳೆಯರಿಗೆ ಸ್ವಾವಲಂಬನೆಯ ಭಾವವನ್ನೂ ಕೂಡ ತರುತ್ತಿದೆ.

ಹೊಳಪಿನ ಕಲ್ಲುಗಳಿಂದ ಸಾಲಂಕೃತಗೊಂಡು ಮಾರುಕಟ್ಟೆಯನ್ನು ತಲುಪುವ ಸೀರೆಗಳು ಪಶ್ಚಿಮಬಂಗಾಳದ ಮಾರುಕಟ್ಟೆಯಲ್ಲಿ 2000 ರೂಪಾಯಿಗಳವರೆಗೂ ಬೆಲೆ ಬಾಳುತ್ತವೆ. ಆದರೆ ಸಾಮಾನ್ಯ ಸೀರೆಗಳನ್ನು ಇಷ್ಟು ಸುಂದರ ಕಲಾಕೃತಿಗಳಂತೆ ಮಾರ್ಪಡಿಸುವ ಈ ಮಹಿಳೆಯರಿಗೆ ಸಿಗುವುದು ಈ ಮೊತ್ತದ ಒಂದು ಚಿಕ್ಕಪಾಲಷ್ಟೇ. ಅದೆಷ್ಟೆಂದರೆ ಒಂದು ಸೀರೆಗೆ 20 ರೂಪಾಯಿಗಳು ಮಾತ್ರ.

ಸೀರೆಗಳನ್ನು ಅಲಂಕಾರದ ಪುಟ್ಟ ಕಲ್ಲುಗಳೊಂದಿಗೆ ಸಿಂಗರಿಸುತ್ತಿರುವ ಆಮ್ಟಾದ ಉದ್ಯೋಗಿ ಮೌಸಮಿ ಪಾತ್ರಾ

ಈ ವೀಡಿಯೋ ಮತ್ತು ವರದಿಯನ್ನು ಸಿಂಚಿತಾ ಮಾಜಿಯವರ 2015-16 ಫೆಲೋಷಿಪ್ ಗಾಗಿ ಸಿದ್ಧಪಡಿಸಲಾಗಿತ್ತು.

ಅನುವಾದ: ಪ್ರಸಾದ್ ನಾಯ್ಕ

Sinchita Parbat

ಸಿಂಚಿತಾ ಪರ್ಬತ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಹಿರಿಯ ವೀಡಿಯೊ ಸಂಪಾದಕರು ಮತ್ತು ಸ್ವತಂತ್ರ ಛಾಯಾಗ್ರಾಹಕರು ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕರು. ಅವರ ಹಿಂದಿನ ವರದಿಗಳು ಸಿಂಚಿತಾ ಮಾಜಿ ಎಂಬ ಹೆಸರಿನಲ್ಲಿವೆ.

Other stories by Sinchita Parbat
Translator : Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Other stories by Prasad Naik