ಔಚಿತ್ ಮಾತ್ರೆ ತರಗತಿಯಲ್ಲಿ ಒಬ್ಬನೇ ವಿದ್ಯಾರ್ಥಿಯಾಗಿದ್ದನು. ಆದರೆ ಈಗ ಇಡೀ ಶಾಲೆಯಲ್ಲಿ ಕೊನೆಯ ವಿದ್ಯಾರ್ಥಿಯಾಗಿ ಉಳಿದಿರುವುದು ಅವನಿಗೆ ಖಂಡಿತವಾಗಿಯೂ ಇದು ಹೊಸದು.

12 ವರ್ಷದ ಔಚಿತ್ ಕಳೆದ ವರ್ಷ ಅಕ್ಟೋಬರ್ 4ರಂದು ಸುಮಾರು 18 ತಿಂಗಳುಗಳಿಂದ ಕೊರೊನಾ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡ ನಂತರ ಸುಮಾರು 11 ಗಂಟೆಗೆ ತರಗತಿಗೆ ಕಾಲಿಟ್ಟಾಗ ಇದು ಅವನ ಅನುಭವಕ್ಕೆ ಬಂದಿತು. ಶಾಲೆಯ ಮೂರು ಕೊಠಡಿಗಳು ಖಾಲಿಯಾಗಿದ್ದವು. ಕುರ್ಚಿಯ ಮೇಲೆ ಇರಿಸಲಾದ ಪ್ರೇಮ್ ಹಾಕಿದ್ದ ಮಹಾತ್ಮ ಗಾಂಧಿಯವರ ಫೋಟೋದೊಟ್ಟಿಗೆ ಶಿಕ್ಷಕರು ಅವನಿಗಾಗಿ ಮಾತ್ರ ಕಾಯುತ್ತಿದ್ದರು.

ಔಚಿತ್ 2015ರಲ್ಲಿ 1ನೇ ತರಗತಿಗೆ ಸೇರಿದ ಸಮಯದಿಂದ, ಅವನು ಆರು ವರ್ಷದವನಾಗಿದ್ದಾಗ, ಅವನಿಗೆ ಬೇರೆ ಯಾವುದೇ ಸಹಪಾಠಿಗಳು ಇರಲಿಲ್ಲ. "ಫಕ್ತ್ ಮೀಚ್ ಹೋತೋ [ನಾನು ಮಾತ್ರ ಅಲ್ಲಿದ್ದೆ]," ಎಂದು ಅವನು ಹೇಳುತ್ತಾನೆ. ಅವನು ಆ ಶಾಲೆಗೆ ದಾಖಲಾದ ಕೊನೆಯ ವಿದ್ಯಾರ್ಥಿಯೂ ಆಗಿದ್ದನು -ಆಗ ಇನ್ನೂ ಸುಮಾರು 25 ಇತರ ವಿದ್ಯಾರ್ಥಿಗಳಿದ್ದರು. ಅವರು ಘರಪುರಿ ಗ್ರಾಮದ ಮೂರು ಕುಗ್ರಾಮಗಳಿಂದ ಬಂದವರು - ಮೊರಬಂದರ್, ರಾಜಬಂದರ್ ಮತ್ತು ಶೆಟ್ಬಂದರ್ ಹೀಗೆ ಇದು ಸುಮಾರು 1,100 ಜನರಿಗೆ ನೆಲೆಯಾಗಿದೆ. ಘರಪುರಿ ದ್ವೀಪವು ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಎಲಿಫೆಂಟಾ ಗುಹೆಗಳಿಗೆ ಹೆಸರುವಾಸಿಯಾದ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ.ದಕ್ಷಿಣ ಮುಂಬೈನ ಗೇಟ್‌ವೇ ಆಫ್ ಇಂಡಿಯಾದಿಂದ, ದೋಣಿಯಲ್ಲಿ ಸಾಗಿದರೆ ಒಂದು ಗಂಟೆ ಹಿಡಿಯುತ್ತದೆ.

ಔಚಿತ್‌ನ ಜಿಲ್ಲಾ ಪರಿಷತ್ ಶಾಲೆಯು 1ರಿಂದ 7ನೇ ತರಗತಿಗಳನ್ನು ಹೊಂದಿದ್ದು, ಈ ಶಾಲೆಯಲ್ಲಿ ಒಂದು ದಶಕದ ಹಿಂದೆ 55-60 ವಿದ್ಯಾರ್ಥಿಗಳು ಇರುತ್ತಿದ್ದರು. ಆದರೆ ವರ್ಷಗಳು ಕಳೆದಂತೆ ಸಂಖ್ಯೆಗಳು ಕಡಿಮೆಯಾಗಲು ಪ್ರಾರಂಭಿಸಿದವು ಮತ್ತು 2019ರ ಹೊತ್ತಿಗೆ ಕೇವಲ 13 ವಿದ್ಯಾರ್ಥಿಗಳು ಮಾತ್ರ ಉಳಿದಿದ್ದರು. ಮಾರ್ಚ್ 2020ರ ಹೊತ್ತಿಗೆ ಈ ಸಂಖ್ಯೆ ಏಳಕ್ಕೆ ಇಳಿಯಿತು. ಮತ್ತು 2020-21ರ ಶೈಕ್ಷಣಿಕ ವರ್ಷದಲ್ಲಿ, ಮೂವರು 7ನೇ ತರಗತಿಯನ್ನು ಪೂರ್ಣಗೊಳಿಸಿದಾಗ ಮತ್ತು ಇಬ್ಬರು ವಿದ್ಯಾರ್ಥಿಗಳು ಬಿಟ್ಟಿದ್ದರಿಂದಾಗಿ ಕೊನೆಗೆ ಶಾಲೆಯಲ್ಲಿ ಇಬ್ಬರೇ ವಿದ್ಯಾರ್ಥಿಗಳು ಉಳಿಯಬೇಕಾಯಿತು. 6ನೇ ತರಗತಿಯಲ್ಲಿ ಔಚಿತ್ ಮತ್ತು 7ನೇ ತರಗತಿಯಲ್ಲಿ ಗೌರಿ ಮಾತ್ರೆ. "ಇಲ್ಲಿ ಅಧ್ಯಯನಗಳು ಸರಿಯಾಗಿ ನಡೆಯುತ್ತಿಲ್ಲ, ಅದಕ್ಕಾಗಿಯೇ ಎಲ್ಲರೂ ಹೊರಡಲು ಪ್ರಾರಂಭಿಸಿದರು." ಎಂದು ಅವರು ಹೇಳುತ್ತಾರೆ.

For the residents of Gharapuri, the only way to go anywhere is by boat.
PHOTO • Aakanksha
For long, the village's  zilla parishad school tried to stay afloat
PHOTO • Aakanksha

ಎಡ: ಘರಪುರಿ ನಿವಾಸಿಗಳಿಗೆ ಎಲ್ಲಿಗಾದರೂ ಹೋಗಬೇಕಾದರೆ ದೋಣಿಯೊಂದೇ ಅವರಿಗಿರುವ ದಾರಿ. ಬಲ: ಗ್ರಾಮದ ಜಿಲ್ಲಾ ಪರಿಷತ್ ಶಾಲೆ ಬಹಳ ದಿನಗಳಿಂದ ಅಸ್ತಿತ್ವಕ್ಕಾಗಿ ಉಳಿಸಿಕೊಳ್ಳುವುದಕ್ಕಾಗಿ ಹೋರಾಡುತ್ತಿದೆ

ಈಗ ಈ ಚದುರುವಿಕೆಗೆ ಹಲವಾರು ಕಾರಣಗಳಿವೆ ಅದರಲ್ಲಿ ಪ್ರಮುಖವಾಗಿ ದೂರ ಮತ್ತು ಶಾಲೆಯ ಸ್ಥಳ, ದ್ವೀಪದಲ್ಲಿನ ಕಳಪೆ ಮೂಲಸೌಕರ್ಯ, ಕಡಿಮೆ ಆದಾಯ ಮತ್ತು ಸೀಮಿತ ಕೆಲಸದ ಆಯ್ಕೆಗಳೊಂದಿಗೆ ಹೆಣಗಾಡುತ್ತಿರುವ ಕುಟುಂಬಗಳು, ಇಂಗ್ಲಿಷ್ ಮಾಧ್ಯಮದಲ್ಲಿ ಶಾಲಾ ಶಿಕ್ಷಣದ ಅಗತ್ಯತೆಗಳಿಂದ ಅಸ್ಥಿರವಾದ ಶಿಕ್ಷಕರ ಹರಿವು ಎಂದು ಹೇಳಬಹುದು ಮತ್ತು ವಿದ್ಯಾರ್ಥಿಗಳು ತಮ್ಮ ಮರಾಠಿ-ಮಾಧ್ಯಮ ಘರಾಪುರಿ ಶಾಲೆಯಿಂದ ಹೊರಬಂದಾಗ ಹೆಚ್ಚಿನ ಅಧ್ಯಯನವನ್ನು ನಿಭಾಯಿಸಲು ಅದಕ್ಕೆ ಸಂಬಂಧಿಸಿದ ಸಂಕಷ್ಟಗಳು ಅವರಿಗೆ ಎದುರಾಗಿದ್ದವು.

ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಭರ್ತಿ ಇದ್ದಾಗಲೂ ಸಹ ಜಿಲ್ಲಾ ಪರಿಷತ್ ಶಾಲೆಗೆ ವಿದ್ಯುತ್‌, ನೀರಿನ ಸಂಪರ್ಕ ಇದ್ದಿರಲಿಲ್ಲ. ಸುಮಾರು 2000ನೇ ಇಸವಿಯಿಂದ, ಘರಪುರಿಯು ರಾತ್ರಿ 7 ಗಂಟೆಯಿಂದ 10 ಗಂಟೆವರೆಗೆ ಜನರೇಟರ್ ಆಧಾರಿತ ವಿದ್ಯುತ್ ಸಂಪರ್ಕವನ್ನು ಹೊಂದಿತ್ತು,  ಮತ್ತು 2018ರಲ್ಲಿ ಅದಕ್ಕೆ ಸ್ಥಿರವಾದ ವಿದ್ಯುತ್ ಪೂರೈಕೆಯನ್ನು ಕಲ್ಪಿಸಲಾಯಿತು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ (ಮತ್ತು 2019ರ ವೇಳೆಗೆ ನೀರಿನ ಮಾರ್ಗಗಳು ಸಹ ಸುಧಾರಿಸಿದವು )

ಆದರೂ, ಶಾಲೆಯು ದೀರ್ಘಕಾಲ ಚಾಲನೆಯಲ್ಲಿರಲು ಪ್ರಯತ್ನಿಸಿತು. 2014-15ರ ಸುಮಾರಿಗೆ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಅನ್ನು ಸ್ಥಾಪಿಸಲಾಗಿದೆ (ಇದನ್ನು ಸಂಜೆಯ ವಿದ್ಯುತ್ ಸಮಯದಲ್ಲಿ ಮಾತ್ರ ಚಾರ್ಜ್ ಮಾಡಬಹುದು). ಇವು ಈಗ ತರಗತಿಯಲ್ಲಿ ಬಳಕೆಯಾಗದೆ ಬಿದ್ದಿವೆ. ಔಚಿತ್ ಒಬ್ಬನೇ ವಿದ್ಯಾರ್ಥಿಯಾಗಿರುವ ತರಗತಿಯಲ್ಲಿ ಕುಳಿತು ಶಿಕ್ಷಕಿ ರಣ್ಯ ಕುವಾರ್, "ನಮ್ಮ ಫೋನ್‌ನ ಇಂಟರ್ನೆಟ್ ಬಳಸಿ ಯೂಟ್ಯೂಬ್ ಮೂಲಕ ಜಿಂಗಲ್ಸ್, ಗಣಿತವನ್ನು ಕಲಿಸಲು ನಾವು ಇದನ್ನು ಸ್ವಲ್ಪ ಸಮಯದವರೆಗೆ ಬಳಸಿದ್ದೇವೆ.” ಎಂದು ಹೇಳುತ್ತಾರೆ.

ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದಾಗಲೂ ಸಹ ಕೇವಲ ಮೂವರೇ ಶಿಕ್ಷಕರು 1ರಿಂದ 7 ನೇ ತರಗತಿಗಳನ್ನು ಹಾಗೋ ಹೀಗೋ ಎನ್ನುವಂತೆ ನಿರ್ವಹಿಸುತ್ತಿದ್ದರು, ಕೆಲವು ಬಾರಿ ಒಂದೇ ಕೊಠಡಿಯಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕಲಾಗುತ್ತಿತ್ತು, ಆದರೆ ಕೆಲವರು ತರಗತಿಯ ಹೊರಗೆ ಅಥವಾ ಹೊರಗಿನ ಸಣ್ಣ ತೆರೆದ ಮೈದಾನದಲ್ಲಿ ಕುಳಿತುಕೊಳ್ಳಬೇಕಾಗುತ್ತಿತ್ತು.

The ZP school had as many as 55-60 students (left) more than a decade ago
PHOTO • Aakanksha
By March 2020 only 7 students remained, and slowly this number dropped to one
PHOTO • Aakanksha

ಜಿಲ್ಲಾ ಪರಿಷತ್ ಶಾಲೆಯಲ್ಲಿ ಒಂದು ದಶಕದ ಹಿಂದೆ 55-60 ವಿದ್ಯಾರ್ಥಿಗಳು (ಎಡಕ್ಕೆ) ಇದ್ದರು. ಮಾರ್ಚ್ 2020ರ ಹೊತ್ತಿಗೆ ಕೇವಲ 7 ವಿದ್ಯಾರ್ಥಿಗಳು ಉಳಿದಿದ್ದರು ಮತ್ತು ನಿಧಾನವಾಗಿ ಈ ಸಂಖ್ಯೆ ಒಂದಕ್ಕೆ ಇಳಿಯಿತು

ಅನೇಕ ಶಿಕ್ಷಕರು ವರ್ಷಗಳಿಂದ ದ್ವೀಪಕ್ಕೆ ಮತ್ತು ಅಲ್ಲಿಂದ ಪ್ರಯಾಣಿಸಲು ಸಿದ್ಧರಿಲ್ಲ. ಅವರು ಪ್ರತಿದಿನ ಘರಾಪುರಿಗೆ ದೋಣಿಯ ಮೂಲಕ ಪ್ರಯಾಣಿಸಬೇಕು, ಉರಾನ್ ತಾಲೂಕಿನ ಇತರ ಹಳ್ಳಿಗಳಿಂದ ಪ್ರಯಾಣಿಸಲು ಸುಮಾರು 30 ನಿಮಿಷ ಹಿಡಿಯುತ್ತದೆ- ಅಲ್ಲಿಗೆ ತಲುಪಲು ಇರುವ ಏಕೈಕ ಮಾರ್ಗ ಇದಾಗಿದೆ. ಮಳೆಗಾಲದಲ್ಲಿ (ಜೂನ್‌ನಿಂದ ಸೆಪ್ಟೆಂಬರ್‌ವರೆಗೆ) ಭಾರೀ ಮಳೆ ಮತ್ತು ಉಬ್ಬರವಿಳಿತದ ಕಾರಣ ತರಗತಿಗಳಲ್ಲಿ ಇನ್ನಷ್ಟು ವ್ಯತ್ಯಾಸವಾಗುತ್ತದೆ. ಘರಪುರಿಯಲ್ಲಿ ಸೌಲಭ್ಯಗಳ ಕೊರತೆ ಅದರಲ್ಲೂ ಅಲ್ಲಿ ಪಡಿತರ ಅಂಗಡಿಗಳು, ಬ್ಯಾಂಕ್‌ಗಳು ಅಥವಾ ವೈದ್ಯಕೀಯ ಕೇಂದ್ರಗಳಿಲ್ಲ, ಹೀಗಾಗಿ ಇದು ಶಿಕ್ಷಕರ ಹಿಂಜರಿಕೆಯನ್ನು ಹೆಚ್ಚುವಂತೆ ಮಾಡಿದೆ. ಜೊತೆಗೆ ಮತ್ತು ವರ್ಗಾವಣೆಗಳು ಆಗಾಗ್ಗೆ ಆಗುತ್ತಲೇ ಇರುತ್ತವೆ.

14 ವರ್ಷದ ಗೌರಿ ಹೇಳುವಂತೆ “ಯಾವ ಶಿಕ್ಷಕರೂ ಕೆಲವು ತಿಂಗಳುಗಳಿಗಿಂತ ಹೆಚ್ಚು ಕಾಲ ಇಲ್ಲಿ ಉಳಿದುಕೊಂಡಿಲ್ಲ. ಪ್ರತಿಯೊಬ್ಬರೂ ವಿಭಿನ್ನ ರೀತಿಯ ಬೋಧನಾ ಕ್ರಮವನ್ನು ಹೊಂದಿದ್ದರು ಹಾಗಾಗಿ ಅವರ ಕಲಿಕಾ ವಿಧಾನಕ್ಕೆ ಹೊಂದಿಕೊಳ್ಳಲು ನಮಗೆ ಸಮಯ ಹಿಡಿಯಿತು” ಎನ್ನುತ್ತಾಳೆ.

52 ವರ್ಷದ ರನ್ಯಾ ಅವರಂತೆ ಕೆಲವರು ಹಳ್ಳಿಯಲ್ಲಿಯೇ ಇರಲು ನಿರ್ಧರಿಸಿದರು (ಅವರ ಪತ್ನಿ ಸುರೇಖಾ ಜೊತೆಗೆ), ಅವರು ತಿಂಗಳಿಗೆ ಬಾಡಿಗೆಗಾಗಿ 500 ರೂ.ಪಾವತಿಸುತ್ತಾರೆ. “ಇಷ್ಟು ದಿನ ನಾವು ಇಲ್ಲಿ ಇರುತ್ತೇವೆ ಎಂದು ಯೋಜಿಸಿರಲಿಲ್ಲ. ಒಂದು ವರ್ಷಕ್ಕೆ ಪೋಸ್ಟಿಂಗ್ ಎಂದು ನನಗೆ ತಿಳಿಸಲಾಯಿತು,” ಎಂದು ಮಹಾರಾಷ್ಟ್ರದ ಧುಲೆ ಜಿಲ್ಲೆಯವರಾದ ಮತ್ತು 2016ರ ಮಧ್ಯಭಾಗದಲ್ಲಿ ಘರಪುರಿಯಲ್ಲಿ ಕಲಿಸಲು ಪ್ರಾರಂಭಿಸಿದ ರನ್ಯಾ ಹೇಳುತ್ತಾರೆ. 2019ರ ದೀಪಾವಳಿಯ ಆಸುಪಾಸಿನಲ್ಲಿ, ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಹಾಗಾಗಿ ವೈದ್ಯಕೀಯ ಚಿಕಿತ್ಸೆಗೆ ತೆರಳಬೇಕಾಗಿ ಬಂದಿತು. ಶಾಲೆಯಲ್ಲಿ ಔಚಿತ್ ಮತ್ತು ಗೌರಿಯನ್ನು ಮಾತ್ರ ಕಾಣಲು ಅವರು ಆಗಸ್ಟ್ 2020ರಲ್ಲಿ ಹಿಂತಿರುಗಿದರು. ಆ ತಿಂಗಳು, ಕೇವಲ ರನ್ಯಾ ಕಲಿಸಲು ಉಳಿದಿರುವಾಗ, ಅರೆಕಾಲಿಕ ಕೆಲಸ ಮಾಡಲು ಜಿಲ್ಲಾ ಪರಿಷತ್ ಕಚೇರಿಯಿಂದ ಇನ್ನೊಬ್ಬ ಶಿಕ್ಷಕರನ್ನು ನೇಮಿಸಲಾಯಿತು.

ಸೆಪ್ಟೆಂಬರ್ 3, 2021ರಂದು, ರಾಯಗಢ ಜಿಲ್ಲಾ ಜಿಲ್ಲಾ ಪರಿಷತ್ತಿನ ಶಿಕ್ಷಣ ಇಲಾಖೆಯು ಘರಪುರಿ ಗ್ರಾಮದ ಸರಪಂಚ್ ಬಲಿರಾಮ್ ಠಾಕೂರ್ ಅವರಿಗೆ ಶಾಲೆಯನ್ನು ಮುಚ್ಚುವಂತೆ ಕೋರಿ ನೋಟಿಸ್ ಕಳುಹಿಸಿತು (ಏಕೆಂದರೆ ಆಗ ಇದ್ದಿದ್ದು ಕೇವಲ ಒಬ್ಬ ವಿದ್ಯಾರ್ಥಿ, ಔಚಿತ್) ಮತ್ತು ಉಳಿದಿರುವ ಯಾವುದೇ ವಿದ್ಯಾರ್ಥಿಗಳನ್ನು ಹತ್ತಿರದ ಉರಾನ್‌ನಲ್ಲಿನ ಶಾಲೆಗಳಿಗೆ ಸ್ಥಳಾಂತರಿಸಲಾಗುತ್ತದೆ.

Teacher Ranya Kuwar (and his wife Surekha) were among the few who chose to rent a place in Gharapuri, rather than commute by boat.
PHOTO • Aakanksha
Sarpanch Baliram Thakur says, ‘If there were support for uplifting the quality [of the school] in our village then surely parents won’t leave’
PHOTO • Aakanksha

ಎಡ: ಶಿಕ್ಷಕ ರನ್ಯಾಕುವಾರ್ (ಮತ್ತು ಅವರ ಪತ್ನಿ ಸುರೇಖಾ) ದೋಣಿಯಲ್ಲಿ ಪ್ರಯಾಣಿಸುವ ಬದಲು ಘರಪುರಿಯಲ್ಲಿ ಬಾಡಿಗೆಗೆ ಸ್ಥಳವನ್ನು ಆಯ್ಕೆ ಮಾಡಿಕೊಂಡ ಕೆಲವರಲ್ಲಿ ಇವರು ಕೂಡ ಹೌದು. ಬಲ: ಸರಪಂಚ್ ಬಲಿರಾಮ್ ಠಾಕೂರ್ ಹೇಳುತ್ತಾರೆ, 'ನಮ್ಮ ಗ್ರಾಮದಲ್ಲಿ ಶಾಲೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರೋತ್ಸಾಹವಿದ್ದಿದ್ದರೆ, ಪೋಷಕರು ಖಂಡಿತವಾಗಿಯೂ ಬಿಡುತ್ತಿರಲಿಲ್ಲ '

ಬಲಿರಾಮ್ ಶಾಲೆ ಮುಂದುವರಿಸಲು ಒತ್ತಾಯಿಸಿದರು. “ಒಬ್ಬ ವಿದ್ಯಾರ್ಥಿ ಇದ್ದರೂ ಸಹ ನಾನು ಅದನ್ನು ಮುಚ್ಚಲು ಬಿಡುವುದಿಲ್ಲ. ನಮ್ಮ ಗ್ರಾಮವು ಎಲ್ಲಿದೆ ಹೇಳಿ ಮತ್ತು ಮೇಲಾಗಿ ಯಾವುದೇ ಹತ್ತಿರದ ಶಾಲೆಗಳಿಲ್ಲದೆ ನಮ್ಮ ಪ್ರಕರಣವು ವಿಭಿನ್ನವಾಗಿದೆ,” ಎಂದು ಅವರು ಹೇಳಿದರು. ಅವರು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ , 2009 ಅನ್ನು ಉಲ್ಲೇಖಿಸುತ್ತಾರೆ, ಇದು 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಒಂದು ಕಿಲೋಮೀಟರ್ ದೂರದಲ್ಲಿ ಮತ್ತು ಮೂರು ಕಿಲೋಮೀಟರ್‌ಗಳ ಒಳಗೆ ವಿದ್ಯಾರ್ಥಿಗಳಿಗೆ 8ನೇ ತರಗತಿಯವರೆಗೆ ಲಭ್ಯವಿರಬೇಕು ಎಂದು ಹೇಳುತ್ತದೆ.

"ಶಿಕ್ಷಣದ ಅಗತ್ಯವು ಇಲ್ಲಿ ಕುಟುಂಬಗಳನ್ನು ಬೇರು ಸಹಿತ ಕಿತ್ತು ಹಾಕಿದೆ, ಇದರಿಂದಾಗಿ ಅವರ ಮಕ್ಕಳು ಉರಾನ್‌ನಲ್ಲಿರುವ ಇತರ ಶಾಲೆಗಳಿಗೆ ಹೋಗಬಹುದು.ನಮ್ಮ ಹಳ್ಳಿಯಲ್ಲಿರುವ ಶಾಲೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರೋತ್ಸಾಹವಿದ್ದರೆ, ಖಂಡಿತವಾಗಿಯೂ ಪೋಷಕರು ಬಿಟ್ಟು ಹೋಗುತ್ತಿರಲಿಲ್ಲ.” ಎಂದು ಬಲಿರಾಮ್ ಹೇಳುತ್ತಾರೆ.

ದ್ವೀಪದ ವಿದ್ಯಾರ್ಥಿಗಳು ಬಹಳ ಹಿಂದಿನಿಂದಲೂ ಉರಾನ್ ತಾಲೂಕಿನ ಇತರ ಗ್ರಾಮಗಳಿಗೆ ಅಥವಾ ನವಿ ಮುಂಬೈಗೆ ಶಿಕ್ಷಣಕ್ಕಾಗಿ ವಲಸೆ ಹೋಗುತ್ತಿದ್ದಾರೆ.ಅಲ್ಲಿ ಕೆಲವರು ಸಂಬಂಧಿಕರೊಂದಿಗೆ ಇರುತ್ತಾರೆ, ಅಥವಾ ಇಡೀ ಕುಟುಂಬ ವಲಸೆ ಹೋಗಿ ಬಾಡಿಗೆ ಕೊಠಡಿಗಳಲ್ಲಿ ವಾಸಿಸುತ್ತದೆ. ಮುಂಬೈ ಕೂಡ ಹತ್ತಿರದಲ್ಲಿದೆ, ಆದರೆ ಇಲ್ಲಿ ಆಯ್ಕೆಗಳು ಘರಪುರಿಯ ಕುಟುಂಬಗಳಿಗೆ ತುಂಬಾ ದುಬಾರಿಯಾಗಿದೆ. ಅವರಲ್ಲಿ ಹೆಚ್ಚಿನವರು ಅಗ್ರಿ ಕೋಲಿ ಸಮುದಾಯದಿಂದ (ಒಬಿಸಿ ಎಂದು ಪಟ್ಟಿ ಮಾಡಲಾಗಿದೆ), ಬಂದವರಾಗಿದ್ದಾರೆ. ಅವರು ದ್ವೀಪದಲ್ಲಿ ಪ್ರವಾಸಿಗರಿಗೆ ಟೋಪಿಗಳು, ಸನ್ ಗ್ಲಾಸ್‌ಗಳು, ಸ್ಮರಣಿಕೆ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುವ ಸಣ್ಣ ಅಂಗಡಿಗಳ ಮೇಲೆ ಅವಲಂಬಿಸಿದ್ದಾರೆ ಅಥವಾ ಗುಹೆಗಳಲ್ಲಿನ ಇತರ ಪ್ರವಾಸೋದ್ಯಮ-ಸಂಬಂಧಿತ ಉದ್ಯೋಗಗಳ ಮೇಲೆ ಅವಲಂಬಿತರಾಗಿದ್ದಾರೆ.

"ಸ್ಥಳಾಂತರದ ವೆಚ್ಚಗಳು ಕೇವಲ ಶಾಲಾ ಶುಲ್ಕಗಳು ಮಾತ್ರವಲ್ಲದೆ ಠೇವಣಿ, ಬಾಡಿಗೆ ಮತ್ತು ಇತರ ಅಗತ್ಯತೆಗಳನ್ನು ಒಳಗೊಂಡಿರುತ್ತವೆ.ಜೊತೆಗೆ ಪೋಷಕರು ಉದ್ಯೋಗವನ್ನು ಹುಡುಕಬೇಕಾಗಿದೆ,” ಎಂದು ಔಚಿತ್‌ನ ತಾಯಿ 38 ವರ್ಷದ ವಿನಂತಿ ಮಾತ್ರೆ ಹೇಳುತ್ತಾರೆ.” ನಾವು ಸ್ಥಳಾಂತರಗೊಳ್ಳಲು ಸಾಧ್ಯವಿಲ್ಲ, ಆದರೆ ಈಗ ನಾವು ಹೇಗೆ ದುಡಿಮೆ ಗಳಿಸಬೇಕು ಹೇಳಿ? ಸಾಧ್ಯವಾದರೆ ಔಚಿತ್‌ನನ್ನು ಹಾಸ್ಟೆಲ್‌ಗೆ ಕಳುಹಿಸಲು ನಾನು ಬಯಸುತ್ತೇನೆ. ಇಲ್ಲಿರುವ ಪ್ರೌಢಶಾಲೆಯು ಮುಚ್ಚಲ್ಪಟ್ಟಿದೆ ಮತ್ತು ಲಾಕ್‌ಡೌನ್‌ನೊಂದಿಗೆ ನಮ್ಮ ಆದಾಯವು ತಿಂಗಳುಗಳ ಕಾಲ ಸ್ಥಗಿತಗೊಂಡಿದೆ” ಎಂದು ಅವರು ಹೇಳುತ್ತಾರೆ.

Several families have migrated to villages in Uran or to Navi Mumbai for schooling. But, says Vinanti Mhatre, Auchit’s mother, ‘We can’t shift, how will we earn?’
PHOTO • Aakanksha
Several families have migrated to villages in Uran or to Navi Mumbai for schooling. But, says Vinanti Mhatre, Auchit’s mother, ‘We can’t shift, how will we earn?’
PHOTO • Aakanksha

ಹಲವಾರು ಕುಟುಂಬಗಳು ಶಾಲಾ ಶಿಕ್ಷಣಕ್ಕಾಗಿ ಉರಾನ್ ಅಥವಾ ನವಿ ಮುಂಬೈಗೆ ಹಳ್ಳಿಗಳಿಗೆ ವಲಸೆ ಹೋಗಿದ್ದಾರೆ. ಆದರೆ, ಔಚಿತ್‌ನ  ತಾಯಿ ವಿನಂತಿ ಮಾತ್ರೆ, ‘ನಾವು ಸ್ಥಳಾಂತರಗೊಳ್ಳಲು ಸಾಧ್ಯವಿಲ್ಲ, ನಾವು ಹೇಗೆ ದುಡಿಮೆ ಸಂಪಾದಿಸಬೇಕು ಹೇಳಿ?’ ಎಂದು ಕೇಳುತ್ತಾರೆ

ವಿನಂತಿ ಮತ್ತು 42 ವರ್ಷದ ಅವರ ಪತಿ ನೀತಿನ್, ಜೆಟ್ಟಿಯಿಂದ ಎಲಿಫೆಂಟಾ ಗುಹೆಗಳಿಗೆ ಹೋಗುವ 120 ಮೆಟ್ಟಿಲುಗಳ ಸಾಲಿನಲ್ಲಿ ತಾತ್ಕಾಲಿಕ ಅಂಗಡಿಯನ್ನು ನಡೆಸುತ್ತಾರೆ. ಮಾರ್ಚ್ 2020ರಲ್ಲಿ ಲಾಕ್‌ಡೌನ್ ಪ್ರಾರಂಭವಾಗುವ ಮೊದಲು, ಅವರು ಪ್ರತಿ ತಿಂಗಳು 6,000-7,000 ರೂ.ಗಳನ್ನು ಸಂಪಾದಿಸುತ್ತಿದ್ದರು. ಪ್ರವಾಸಿಗರ ಸಂಖ್ಯೆ ಕುಸಿದಂತೆ ಮಾರಾಟವು ಕುಸಿಯಿತು ಮತ್ತು ಈಗ ಅವರು ಕೆಲವು ತಿಂಗಳುಗಳಲ್ಲಿ ಮಾತ್ರ ಅದೇ ಮೊತ್ತವನ್ನು ಗಳಿಸಬಹುದು. 2019ರಲ್ಲಿ, ಸ್ಮಾರಕವನ್ನು ಸ್ವಚ್ಛಗೊಳಿಸಲು ಗುತ್ತಿಗೆದಾರರು (ಗುಹೆಗಳನ್ನು ನಿರ್ವಹಿಸುವ ಭಾರತೀಯ ಪುರಾತತ್ವ ಸಮೀಕ್ಷೆಯೊಂದಿಗೆ ಸಂಬಂಧ ಹೊಂದಿದ್ದಾರೆ) ನೀತಿನ್ ಅವರನ್ನು ಮಾಸಿಕ 12,000 ರೂ. ಸಂಬಳದೊಂದಿಗೆ ನೇಮಕ ಮಾಡಿಕೊಂಡರು. ಆ ವರ್ಷ ಅವರ ಹಿರಿಯ ಮಗ, 18 ವರ್ಷದ ಆದಿತ್ಯ, ಹಳ್ಳಿಯ ಪ್ರೌಢಶಾಲೆಯಲ್ಲಿ 10 ನೇ ತರಗತಿಯನ್ನು ಪೂರ್ಣಗೊಳಿಸಿದನು ಮತ್ತು ನೀತಿನ್‌ನ ಸಂಬಳವು ಅವನಿಗೆ ಹೆಚ್ಚಿನ ಅಧ್ಯಯನಕ್ಕಾಗಿ ಉರಾನ್‌ಗೆ ತೆರಳಲು ಸಹಾಯವಾಗಿದೆ. (ಮಾರ್ಚ್ 2022ರಲ್ಲಿ, ಹಣದ ಪಾವತಿ ವಿಚಾರವಾಗಿ ನೀತಿನ್ ಕ್ಲೀನಿಂಗ್ ಕೆಲಸವನ್ನು ಕಳೆದುಕೊಂಡರು.)

ಆದಿತ್ಯ ಓದಿದ 8ರಿಂದ 10ನೇ ತರಗತಿಯ ಘರಾಪುರಿಯಲ್ಲಿ ಮರಾಠಿ ಮಾಧ್ಯಮ ಕೆಇಎಸ್ ಮಾಧ್ಯಮಿಕ ವಿದ್ಯಾಲಯವನ್ನು 1995ರಲ್ಲಿ ಲಾಭರಹಿತ ಕೊಂಕಣ ಎಜುಕೇಶನ್ ಸೊಸೈಟಿ ಪ್ರಾರಂಭಿಸಿತು. ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸುವರ್ಣಾ ಕೋಳಿ (40) ಅವರು ಪ್ರೌಢಶಾಲೆ ಆರಂಭವಾದಾಗಿನ ತಮ್ಮ ಸಂಭ್ರಮವನ್ನು ನೆನಪಿಸಿಕೊಳ್ಳುತ್ತಾರೆ:

"1992ರಲ್ಲಿ ನನ್ನ 7ನೇ ತರಗತಿ ನಂತರ ಮುಂದೆ ಹೋಗಲು ಯಾವುದೇ ಶಾಲೆ ಇರಲಿಲ್ಲ, ಹಾಗಾಗಿ ನಮ್ಮ ಪೋಷಕರಿಗೆ ನಮ್ಮ ಆಯ್ಕೆಗಳ ವಿಚಾರದಲ್ಲಿ ಮದುವೆ ಅಥವಾ ಅಂಗಡಿಯಲ್ಲಿ ಕೆಲಸ ಮಾಡುವುದಾಗಿತ್ತು.” ಎಂದು ಅವರು ಹೇಳುತ್ತಾರೆ. ಸುವರ್ಣ ಅವರ ತಾಯಿ ಹಳ್ಳಿಯ ಆಹಾರ ಮಳಿಗೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರೆ ಮತ್ತು ಅವರ ತಂದೆ ಕೃಷಿಕರಾಗಿದ್ದರು ಮತ್ತು ಅವರು ಸರಪಂಚ್‌ಗೆ ಸಹಾಯ ಮಾಡುತ್ತಿದ್ದರು. ಸುವರ್ಣಾ ಮೊದಲು ನರ್ಸ್ ಆಗಲು ಬಯಸಿದ್ದರು, ಆದರೆ ಅವರು ಆ ಗುರಿಯನ್ನು ತಲುಪಲು ಸಾಧ್ಯವಾಗದಿದ್ದರೂ, ನಗುತ್ತಾ ಅವರು ಹೇಳುವುದಿಷ್ಟು: “ಕನಿಷ್ಠ ನಾನು 10ನೇ ತರಗತಿಯನ್ನು 1998ರಲ್ಲಿ ಪೂರ್ಣಗೊಳಿಸಿದೆ," ಮತ್ತು ಅದು ಕೂಡ ಉನ್ನತ ಶ್ರೇಣಿಯ ಶ್ರೇಣಿಗಳೊಂದಿಗೆ ಎನ್ನುತ್ತಾರೆ.

Anganwadi worker Survana Koli (standing, extreme right), was excited when a high school (right, foreground) opened here in the '90s. But that too shut down in 2020
PHOTO • Courtesy: Suvarna Koli
PHOTO • Aakanksha

ಅಂಗನವಾಡಿ ಕಾರ್ಯಕರ್ತೆ ಸುರ್ವಣ ಕೋಳಿ (ಬಲಗಡೆ ನಿಂತಿರುವವರು), 90ರ ದಶಕದಲ್ಲಿ ಇಲ್ಲಿ ಪ್ರೌಢಶಾಲೆಯನ್ನು (ಬಲಗಡೆ, ಮುಂಭಾಗ) ತೆರೆದಾಗ ಉತ್ಸುಕರಾಗಿದ್ದರು. ಆದರೆ ಅದು ಕೂಡ 2020ರಲ್ಲಿ ಸ್ಥಗಿತಗೊಂಡಿತು

ಅದರ ಉತ್ತುಂಗದಲ್ಲಿ, ಶುಲ್ಕರಹಿತ ಕೆಇಎಸ್ ಮಾಧ್ಯಮಿಕ ವಿದ್ಯಾಲಯದಲ್ಲಿ ನಾಲ್ವರು ಶಿಕ್ಷಕರು ಸುಮಾರು 30 ವಿದ್ಯಾರ್ಥಿಗಳಿಗೆ ಕಲಿಸಿದರು. ಅವರಲ್ಲಿ ನವನೀತ ಕಾಂಬಳೆ ಕೂಡ ಇದ್ದರು. ಅವರು ಘರಾಪುರಿಯಲ್ಲಿ ಕಲಿಸಿದ ಒಟ್ಟು 12 ವರ್ಷಗಳಲ್ಲಿ ಆರು ವರ್ಷಗಳ ಕಾಲ ಅವರು ಹಳ್ಳಿಯಲ್ಲಿಯೇ ಇದ್ದರು. ಅವರು ಮದುವೆಯಾದ ನಂತರ, ಅವರು ಉರಾನ್‌ನಿಂದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. "ಜಿಲ್ಲಾ ಪರಿಷತ್ ಶಾಲೆಯಲ್ಲಿನ ಅವರ ಅಸ್ಥಿರವಾದ ಶಾಲಾ ಶಿಕ್ಷಣದ ನಂತರ ಎಂಟನೇ ತರಗತಿಗೆ ಸೇರಿದ ವಿದ್ಯಾರ್ಥಿಗಳು ಅಧ್ಯಯನವನ್ನು ಕಂಡುಕೊಳ್ಳಲು ಹೆಣಗಾಡುತ್ತಾರೆ ಮತ್ತು ಅನೇಕರಿಗೆ ಆಗಲೇ ನಿರಾಸಕ್ತಿ ಬಂದಿರುತ್ತದೆ” ಎಂದು ಅವರು ಹೇಳುತ್ತಾರೆ.

ಕ್ರಮೇಣವಾಗಿ ಪ್ರೌಢಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಖ್ಯೆಯು ಕುಸಿಯಲಾರಂಭಿಸಿತು. ಶಾಲೆಯು ಹಣಕಾಸಿನ ನೆರವಿಗಾಗಿ ಹೆಣಗಾಡಿತು ಮತ್ತು ವರ್ಷಕ್ಕೆ ಒಂದೊಂದು ತರಗತಿಯನ್ನು ಮುಚ್ಚಲು ಪ್ರಾರಂಭಿಸಿತು - 2018ರಲ್ಲಿ 8ನೇ ತರಗತಿ, 2019ರಲ್ಲಿ 9ನೇ ತರಗತಿ, ಮತ್ತು ಅಂತಿಮವಾಗಿ 2020ರಲ್ಲಿ 10ನೇ ತರಗತಿಯನ್ನು ಸ್ಥಗಿತಗೊಳಿಸಲಾಯಿತು.

ಪ್ರೌಢಶಾಲೆ ಮತ್ತು  ಈಗ ಅಷ್ಟೇನೂ ಇಲ್ಲದ ಜಿಲ್ಲಾ ಪರಿಷತ್ ಶಾಲೆಯ ಮುಚ್ಚುವಿಕೆಯು Annual Status of Education Report (Rural ) (October 2020) ವರದಿ ನೀಡಿರುವ ಶಿಫಾರಸುಗಳಿಗೆ ವಿರುದ್ಧವಾಗಿರುವ ದಿಕ್ಕಿನಲ್ಲಿ ಬದಲಾವಣೆಯಾಗುತ್ತಿದೆ. ಶಿಫಾರಸ್ಸಿನ ಅನ್ವಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹಿಂದುಳಿದ ಹಿನ್ನಲೆಯನ್ನು ಹೊಂದಿರುವ ಮಕ್ಕಳಿಗೆ ಲಾಕ್‌ಡೌನ್ ನಂತರ ಹೆಚ್ಚಿನ ಸಹಾಯದ ಅಗತ್ಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಸುರ್ವಣ ಕೋಳಿ ಮತ್ತು ಸಹೋದ್ಯೋಗಿ ಘರಪುರಿಯಲ್ಲಿ 40 ವರ್ಷ ವಯಸ್ಸಿನ ಮಕ್ಕಳಿಗೆ 0-6 ವರ್ಷ ವಯಸ್ಸಿನ ಮಕ್ಕಳಿಗೆ ಅಂಗನವಾಡಿ ತರಗತಿಗಳನ್ನು ನಡೆಸುತ್ತಿದ್ದರೆ, 6-14 ವರ್ಷದೊಳಗಿನ 21 ಮಕ್ಕಳಲ್ಲಿ ಯಾರೂ ಈಗ ದ್ವೀಪದ ಜಿಲ್ಲಾ ಪರಿಷತ್ ಶಾಲೆಗೆ ದಾಖಲಾಗಿಲ್ಲ (ಈ ವಿದ್ಯಾರ್ಥಿ ಸಂಖ್ಯೆಗಳನ್ನು ಕೋಲಿ ಮತ್ತು ರನ್ಯಾಕುವಾರ್ ಮತ್ತು ಅವರ ಪತ್ನಿ ಸುರೇಖಾ ಅವರು ಪ್ರತ್ಯೇಕ ಸಮೀಕ್ಷೆಗಳಲ್ಲಿ ಸಂಗ್ರಹಿಸಿದ್ದಾರೆ). ಜಿಲ್ಲಾ ಪರಿಷತ್ ಶಾಲೆಯ ಅವನತಿಯನ್ನು ನೋಡಿ ಮತ್ತು ಅದನ್ನು ಮುಚ್ಚುವ ನಿರೀಕ್ಷೆಯಲ್ಲಿ, ಘರಪುರಿಯಲ್ಲಿನ ಪೋಷಕರು ತಮ್ಮ ಮಕ್ಕಳನ್ನು ಉರಾನ್‌ನ ಇತರ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

When the high school closed, for students still studying in the ZP school it meant moving from Gharapuri right after Class 7, as did Kalpesh Mhatre (left), who eventually found work as a ‘kursiwallah’ (right) at Elephanta caves
PHOTO • Aakanksha
When the high school closed, for students still studying in the ZP school it meant moving from Gharapuri right after Class 7, as did Kalpesh Mhatre (left), who eventually found work as a ‘kursiwallah’ (right) at Elephanta caves
PHOTO • Aakanksha

ಹೈಸ್ಕೂಲ್ ಮುಚ್ಚಿದಾಗ, ಇನ್ನೂ ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 7ನೇ ತರಗತಿಯ ನಂತರ ಘರಾಪುರಿಯಿಂದ ಸ್ಥಳಾಂತರಗೊಳ್ಳುವುದು ಎಂದರ್ಥ, ಕಲ್ಪೇಶ್ ಮಾತ್ರೆ (ಎಡಕ್ಕೆ) ಅವರು ಅಂತಿಮವಾಗಿ ಎಲಿಫೆಂಟಾ ಗುಹೆಗಳಲ್ಲಿ 'ಕುರ್ಸಿವಾಲಾ' (ಬಲಕ್ಕೆ) ಕೆಲಸವನ್ನು ಕಂಡುಕೊಂಡರು

ಹೈಸ್ಕೂಲ್ ಮುಚ್ಚಿದಾಗ, ಇನ್ನೂ ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 7ನೇ ತರಗತಿಯ ನಂತರ ಘರಪುರಿಯಿಂದ ಸ್ಥಳಾಂತರಗೊಳ್ಳುವುದು ಎಂದರ್ಥ, 16 ವರ್ಷದ ಕಲ್ಪೇಶ್ ಮಾತ್ರೆ ಅವರು ನ್ಹಾವಾ ಎನ್ನುವ ಹಳ್ಳಿಯ ಶಾಲೆಗೆ ಸ್ಥಳಾಂತರಗೊಂಡ, ನಂತರ ಅದನ್ನು ಮಧ್ಯದಲ್ಲಿಯೇ ತೊರೆದ. "ಬಸ್, ನಹಿ ಹೋ ರಹಾ ಥಾ [ನನಗೆ ನಿರ್ವಹಿಸಲು ಸಾಧ್ಯವಾಗಲಿಲ್ಲ]," ಎಂದು ಅವನು ಹೇಳುತ್ತಾನೆ. ನಂತರ ಕಲ್ಪೇಶ್ ದ್ವೀಪದಲ್ಲಿ ಕುರ್ಸಿವಾಲಾ ಆಗಿ ಕೆಲಸ ಮಾಡಲು ಪ್ರಾರಂಭಿಸಿದ -ಅವರು ಮತ್ತು ಇತರ ಮೂವರು ಪ್ರವಾಸಿಗರನ್ನು ಮರದ ಕುರ್ಚಿಯ ಮೇಲೆ ಗುಹೆಗಳವರೆಗೆ ಸಾಗಿಸಿಸುತ್ತಿದ್ದರು.ನಾಲ್ಕು ಜನರ ತಂಡವು ದಿನಕ್ಕೆ 3-4 ಸುತ್ತುಗಳನ್ನು ಸುತ್ತುತ್ತದೆ, ಆ ಮೂಲಕ ಅವರು ಪ್ರತಿ ಸುತ್ತಿಗೆ 300-500 ರೂ.ಸಂಪಾದಿಸುತ್ತಾರೆ.

ಘರಾಪುರಿಯಲ್ಲಿ ಕೆಲವು ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಅಧ್ಯಯನದಲ್ಲಿ ಯಶಸ್ವಿಯಾಗಿದ್ದಾರೆ. ಗೌರಿಯ ಅಕ್ಕ ಭಾವಿಕಾ ಮಾತ್ರೆ 2016ರಲ್ಲಿ ಗ್ರಾಮದ ಪ್ರೌಢಶಾಲೆಯಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿದರು, ನಂತರ ಪನ್ವೇಲ್‌ನಲ್ಲಿ ಬಿಎ ಪದವಿ ಪಡೆದರು. ಆದರೆ 2020ರ ಆರಂಭದಲ್ಲಿ ಆಕೆಯ ಪೋಷಕರು ನಿಧನರಾದ ನಂತರ, ಅವರು ಘರಾಪುರಿಗೆ ಮರಳಿದರು, ಅಲ್ಲಿ ಅವರು ತಿಂಡಿಗಳು ಮತ್ತು ಆಭರಣಗಳನ್ನು ಮಾರಾಟ ಮಾಡುವ ತಮ್ಮ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಗೌರಿ ಈಗ ಪನ್ವೇಲ್‌ನಲ್ಲಿ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾರೆ, ಅಲ್ಲಿ ಅವರು 8ನೇ ತರಗತಿಗೆ ಹಾಜರಾಗುತ್ತಿದ್ದಾರೆ.

“ಆಯಿ ಮತ್ತು ಬಾಬಾ [ತಾಯಿ ಮತ್ತು ತಂದೆ] ನಮ್ಮನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದರು. ಆಯಿ 8ನೇ ತರಗತಿಯವರೆಗೆ ಓದಿದ್ದರು, ಅವರು ಮುಂದೆ ಓದಲು ಬಯಸಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ, ಮತ್ತು ಬಾಬಾ ನೌಕಾಪಡೆಗೆ ಸೇರಲು ಬಯಸಿದ್ದರು ಆದರೆ ಅವರ ತಂದೆ ನಿಧನರಾದರು. ಆದ್ದರಿಂದ ಅವರು ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡರು,” ಎಂದು 20 ವರ್ಷದ ಭಾವಿಕಾ ಹೇಳುತ್ತಾರೆ. “ಹಿಂದಿ, ಗಣಿತ ಕಲಿಸಲು ನಮ್ಮೊಂದಿಗೆ ಕುಳಿತು ಎಲ್ಲವನ್ನೂ ಕಲಿಯಲು ಹೇಳುತ್ತಿದ್ದರು. ಅವರು ಸ್ವಯಂ ಕಲಿತ ಚಿತ್ರಕಲಾವಿದರಾಗಿದ್ದರು, ಅಷ್ಟೇ ಅಲ್ಲದೆ ಅವರು ಹಳ್ಳಿಯ ಮದುವೆಗಳಲ್ಲಿ ಡಿಜೆ ಕೂಡ ಆಗಿದ್ದರು. ಅವರು ನನ್ನನ್ನು ಟೈಲರಿಂಗ್, ಟೈಪಿಂಗ್ ನಂತಹ ಇತರ ತರಗತಿಗಳಿಗೆ ಸೇರಿಸಿದ್ದರು,ನಾವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬೇಕು ಮತ್ತು ಐಎಎಸ್‌ಗೆ ಅರ್ಜಿ ಸಲ್ಲಿಸಬೇಕು ಅಥವಾ ವಕೀಲರಾಗಬೇಕು ಎಂದು ಅವರು ಬಯಸಿದ್ದರು.

PHOTO • Aakanksha
PHOTO • Aakanksha

ಬಿಎ ಪದವಿ ಪಡೆದಿರುವ ಭಾವಿಕಾ ಮಾತ್ರೆ (ಎಡ) ಯವರಂತೆ ಕೆಲವರು ಮಾತ್ರ ಹೆಚ್ಚಿನ ಅಧ್ಯಯನದಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಹೋದರಿ ಗೌರಿ (ಬಲ) ಜಿಲ್ಲಾ ಪರಿಷತ್ ಶಾಲೆಯಲ್ಲಿ ಉಳಿದಿರುವ ಎರಡನೇ ಕೊನೆಯ ವಿದ್ಯಾರ್ಥಿನಿ

ಆದರೆ ಘರಾಪುರಿಯಲ್ಲಿ ಶಿಕ್ಷಣದ ಹಾದಿಯಲ್ಲಿನ ಅನೇಕ ಅಡಚಣೆಗಳು ಭಾವಿಕಾ ಅವರಂತಹ ಕೆಲವರು ಮಾತ್ರ ಮುಂದೆ ಅಧ್ಯಯನ ಮಾಡಬಹುದು ಎಂದು ಖಚಿತಪಡಿಸುತ್ತದೆ. The Household Social Consumption on Education (NSS 75 ನೇ ಸುತ್ತು, 2017-18) ವರದಿಯು 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಗ್ರಾಮೀಣ ಭಾರತದಲ್ಲಿ ಕೇವಲ ಶೇ 5.7 ರಷ್ಟು ವಿದ್ಯಾರ್ಥಿಗಳು ಪದವಿ ಅಥವಾ ಅದಕ್ಕಿಂತ ಹೆಚ್ಚಿನವರೆಗೆ ಅಧ್ಯಯನ ಮಾಡಿದ್ದಾರೆ ಎಂದು ತೋರಿಸುತ್ತದೆ. ಗ್ರಾಮೀಣ ಮಹಾರಾಷ್ಟ್ರದಲ್ಲಿ, ಈ ಸಂಖ್ಯೆಯು ಸ್ವಲ್ಪ ಉತ್ತಮವಾಗಿದೆ, ಶೇ 12.5ರಷ್ಟು ವಿದ್ಯಾರ್ಥಿಗಳು ಪದವಿ ಮಟ್ಟದಲ್ಲಿ ಅಥವಾ ನಂತರ ಓದುತ್ತಿದ್ದಾರೆ ಆದರೆ ಇದು ಇನ್ನೂ ಕಡಿಮೆ ಎಂದೇ ಹೇಳಬಹುದು. ಶಿಕ್ಷಣದಲ್ಲಿ ಆಸಕ್ತಿಯ ಕೊರತೆ, ಅಧ್ಯಯನ ಅಥವಾ ಬೋಧನಾ ಮಾಧ್ಯಮವನ್ನು ನಿಭಾಯಿಸಲು ಇರುವ ಅಸಾಮರ್ಥ್ಯ, ಶಾಲೆಗೆ ಇರುವ ದೂರ, ಆರ್ಥಿಕ ನಿರ್ಬಂಧಗಳು ಮತ್ತು ದೇಶೀಯ ಅಥವಾ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ತ್ಯಜಿಸುತ್ತಾರೆ ಎಂದು ಸಮೀಕ್ಷೆಯು ಹೇಳುತ್ತದೆ.

ಅವರಲ್ಲಿ ಘರಾಪುರಿಯಲ್ಲಿರುವ ಸೋನಾಲ್ ಮಾತ್ರೆ, ಅವರಿಗೆ 23 ವರ್ಷ ವಯಸ್ಸು, ಅವರು 2016ರಲ್ಲಿ ಉರಾನ್‌ನಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದರು, ಸಂಬಂಧಿಕರೊಂದಿಗೆ ಅಲ್ಲಿಯೇ ಇದ್ದರು.ಅವರ ಕುಟುಂಬವು ಸಣ್ಣ ಆದಾಯದಲ್ಲಿ ನಡೆಯುತ್ತಿದೆ. ಅವರ ತಾಯಿ ಚಿಪ್ಸ್ ಮಾರುವ ಅಂಗಡಿಯನ್ನು ಇಟ್ಟುಕೊಂಡಿದ್ದರೆ ಮತ್ತು ಅವರ ತಂದೆ ಯುರಾನ್‌ನಲ್ಲಿ ದೋಣಿಯಲ್ಲಿ ಕೆಲಸ ಮಾಡುತ್ತಾರೆ, ಆ ಮೂಲಕ ಇದರಿಂದ ಅವರಿಗೆ ಪ್ರತಿ ತಿಂಗಳಿಗೆ 5,000 ರೂಗಳ ಸಂಪಾದನೆಯಾಗುತ್ತದೆ. ಹೀಗಾಗಿ ಅವರು ಅನಿರ್ವಾರ್ಯವಾಗಿ ಘರಾಪುರಿಗೆ ವಾಪಸ್ಸಾಗಬೇಕಾಯಿತು.

ವಿನಯ್ ಕೋಲಿ ಕೂಡ 2019ರಲ್ಲಿ 12ನೇ ತರಗತಿಯ ನಂತರ ಉರಾನ್‌ನಲ್ಲಿ ತಮ್ಮ ಅಧ್ಯಯನವನ್ನು ತೊರೆದರು; ಅವರು ಭಾಗಶಃ ಮರಾಠಿ ಮಾಧ್ಯಮದಲ್ಲಿ ಕಾಮರ್ಸ್ ಕಲಿಯುತ್ತಿದ್ದರು, ಅಲ್ಲಿ ಅಕೌಂಟ್ಸ್ ಕೋರ್ಸ್ ಇಂಗ್ಲಿಷ್‌ನಲ್ಲಿತ್ತು. "ಬರೆದಿರುವುದನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯ ಹಿಡಿಯಿತು" ಎಂದು ಅವರು ಹೇಳುತ್ತಾರೆ. ಜನವರಿ 2020ರಲ್ಲಿ, ಅವರು ಎಲಿಫೆಂಟಾ ಗುಹೆಗಳಲ್ಲಿ ಮಾಸಿಕ ಸಂಬಳ 9,000.ರೂ.ಗೆ ಗುತ್ತಿಗೆ ಆಧಾರದ ಮೇಲೆ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.

PHOTO • Aakanksha
PHOTO • Aakanksha

ದ್ವೀಪದ ಅನೇಕ ಕುಟುಂಬಗಳು ಜೆಟ್ಟಿಯ ಸಮೀಪವಿರುವ ಸಣ್ಣ ಅಂಗಡಿಗಳನ್ನು ಮತ್ತು ಗುಹೆಗಳಿಗೆ ಬರುವ ಪ್ರವಾಸಿಗರನ್ನು ಅವಲಂಬಿಸಿವೆ. ಬಲ : ಆಯ್ದ ಜಿಲ್ಲಾ ಪರಿಷತ್ ಗಳನ್ನು ನವೀಕರಿಸಲು ಮಹಾರಾಷ್ಟ್ರ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳಲ್ಲಿ ಪ್ರಮುಖವಾಗಿ ಅರ್ಹತೆಯ ಅವಶ್ಯಕತೆಗಳಲ್ಲಿ 'ಉತ್ತಮ ರಸ್ತೆ ಸಂಪರ್ಕ'ವನ್ನು ಒಳಗೊಂಡಿರಬೇಕು. ಆದರೆ ಇದನ್ನೂ ನೋಡಿದಾಗ ಘರಾಪುರಿ ಸ್ಪಷ್ಟವಾಗಿ ಈ ಅರ್ಹತೆ ಹೊಂದಿಲ್ಲ ಎನ್ನುವುದು ತಿಳಿಯುತ್ತದೆ

ಘರಾಪುರಿಯ ಕೆಲವು ವಿದ್ಯಾರ್ಥಿಗಳು 12ನೇ ತರಗತಿಯ ನಂತರ ಒಂದು ವರ್ಷ ಅಥವಾ ಎರಡು ವರ್ಷಗಳ ಕಾಲ ವೃತ್ತಿಪರ ಕೋರ್ಸ್‌ಗಳನ್ನು ಆರಿಸಿಕೊಳ್ಳುತ್ತಾರೆ, ಎಲೆಕ್ಟ್ರಿಷಿಯನ್, ಪ್ಲಂಬರ್‌ಗಳು, ವೆಲ್ಡರ್‌ಗಳು, ಟರ್ನರ್‌ಗಳು ಮತ್ತು ಇತರ ರೀತಿಯ ಉದ್ಯೋಗಗಳಿಗೆ ತರಬೇತಿ ನೀಡುತ್ತಾರೆ. ಅಹಮದ್‌ನಗರ ಮೂಲದ ಶಿಕ್ಷಣ ಕಾರ್ಯಕರ್ತ ಮತ್ತು ಶಿಕ್ಷಕ ಭೌಸಾಹೇಬ್ ಚಸ್ಕರ್ ಅವರು "ಇಂತಹ ಕೋರ್ಸ್‌ಗಳು 'ಬ್ಲೂ ಕಾಲರ್' ಉದ್ಯೋಗಗಳಿಗೆ ಕಾರಣವಾಗಬಹುದು. ಉನ್ನತ ಶಿಕ್ಷಣದ ಹಾದಿಯನ್ನು ಪ್ರವೇಶಿಸಲು ಸಾಧ್ಯವಾಗದವರು ಸಾಮಾನ್ಯವಾಗಿ ಶೋಷಿತ ಸಮುದಾಯಗಳಿಂದ ಬಂದವರಾಗಿರುತ್ತಾರೆ” ಎಂದು ಹೇಳುತ್ತಾರೆ.

ಘರಾಪುರಿ ದ್ವೀಪದಲ್ಲಿ, ಪ್ರಾಥಮಿಕ ಶಿಕ್ಷಣದ ಮಾರ್ಗವು ಕೂಡ ಈಗ ಮುಚ್ಚಲ್ಪಟ್ಟಿದೆ.

ಸೆಪ್ಟೆಂಬರ್ 2021ರಲ್ಲಿ, ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿನ ಸುಮಾರು 500 ಜಿಲ್ಲಾ ಪರಿಷತ್ ಶಾಲೆಗಳನ್ನು ಉನ್ನತೀಕರಿಸಿದ, ಮೂಲಸೌಕರ್ಯ, ಬೋಧನೆ ಮತ್ತು ಇತರ ಕ್ರಮಗಳೊಂದಿಗೆ 'ಮಾದರಿ ಶಾಲೆ'ಗಳಾಗಿ ಪರಿವರ್ತಿಸಲಾಗುವುದು ಎಂದು ಘೋಷಿಸಿತು. ಆದರೆ ಇದಕ್ಕೆ ಅರ್ಹತೆಯ ಅವಶ್ಯಕತೆಗಳು ಇವೆ: "ಶಾಲಾ ಸ್ಥಳ ವು ಕೇಂದ್ರ ಮಟ್ಟದಲ್ಲಿರಬೇಕು ಮತ್ತು ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿರಬೇಕು." ಎಂದು ಹೇಳಲಾಗುತ್ತದೆ.

ಆದರೆ ಘರಪುರಿ ಸ್ಪಷ್ಟವಾಗಿ ಈ ಅರ್ಹತೆಯನ್ನು ಹೊಂದಿಲ್ಲ, ಇನ್ನು ಔಚಿತ್ ಈ ವರ್ಷ 7ನೇ ತರಗತಿಯನ್ನು ಪೂರ್ಣಗೊಳಿಸುವುದರೊಂದಿಗೆ ಮತ್ತು ಬೇರೆ ಯಾವುದೇ ವಿದ್ಯಾರ್ಥಿಯು ಆ ಶಾಲೆಗೆ ಹೋಗದಿರುವುದರಿಂದ, ದ್ವೀಪದಲ್ಲಿರುವ ಜಿಲ್ಲಾ ಪರಿಷತ್ ಶಾಲೆಯು ಏಪ್ರಿಲ್‌ನಿಂದ ಮುಚ್ಚಲ್ಪಡುತ್ತದೆ.‌

ಅನುವಾದ: ಮಂಜುನಾಥ್‌ ಎನ್‌ .

Aakanksha

Aakanksha is a reporter and photographer with the People’s Archive of Rural India. A Content Editor with the Education Team, she trains students in rural areas to document things around them.

Other stories by Aakanksha
Translator : N. Manjunath