“ನಾವು ಕೇವಲ ಲೈಂಗಿಕ ಕಾರ್ಯಕರ್ತೆಯರು ಎಂಬ ಕಾರಣಕ್ಕಾಗಿಯೇ ಎಲ್ಲದಕ್ಕೂ ಅವರು ನಮ್ಮ ದೇಹವನ್ನು ಹಣವೆಂದು ತಿಳಿದಿದ್ದರು,” ಎನ್ನುತ್ತಾರೆ, 2012ರಲ್ಲಿ ಉತ್ತರಪ್ರದೇಶದ ಫಾರುಖಾಬಾದ್‌ನಿಂದ ದಿಲ್ಲಿಗೆ ಆಗಮಿಸಿದ 30 ವರ್ಷ ಪ್ರಾಯದ ಮೀರಾ ಹೇಳುತ್ತಾರೆ. ಪತಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಬಲಿಯಾದ ನಂತರ ತನ್ನ ಮೂರು ಮಕ್ಕಳೊಂದಿಗೆ ಬದುಕುತ್ತಿದ್ದಾರೆ. ಅವರಲ್ಲಿ ಈಗ ಸಿಟ್ಟು ಮತ್ತು ಅಸಾಹಯಕತೆ ಸಮಾನವಾಗಿ ಮನೆಮಾಡಿದೆ.
“ನನಗೆ ನನ್ನ ಔಷಧ ನೀಡಬೇಕಾದರೆ ಅವರು ಇದನ್ನೆಲ್ಲ ಮಾಡುತ್ತಾರೆ,” ಎಂದು 39 ವರ್ಷದ ಅಮಿತಾ ತನ್ನ ಮುಖವನ್ನು ಜಿಗುಪ್ಸೆಯಿಂದ ತಿರುಗಿಸಿಕೊಂಡರು. ಆಸ್ಪತ್ರೆಯಲ್ಲಿರುವ ಪುರುಷ ಸಹಾಯಕರು ಮತ್ತು ವಾರ್ಡ್ ಸಹಾಯಕರು ಚುಂಬಿಸಿದ್ದು, ಆಕೆಯ ದೇಹವನ್ನು ಅಂಗೈ ಅವರಿಸಿದ್ದು ಎಲ್ಲವನ್ನು ನೆನಪಿಸಿಕೊಂಡರು. ಅವರು ಅವಮಾದಿಂದ ಭೀತಿಗೊಂಡರು, ಆದರೆ ಆರೋಗ್ಯ ತಪಾಸಣೆ ಮತ್ತು ಔ಼ಷಧಕ್ಕಾಗಿ ಮತ್ತೆ ಸಾರ್ವಜನಿಕ ಆಸ್ಪತ್ರೆಗೆ ಬರಬೇಕಾಗುತ್ತದೆ.
“ನಾವು ನಮ್ಮ ಎಚ್‌ಐವಿ ಪರೀಕ್ಷೆಗೆಂದು ಹೋದಾಗ, ನಾವು ಲೈಂಗಿಕ ಕಾರ್ಯಕರ್ತೆಯರು ಎಂಬುದು ಗೊತ್ತಾದ ಕೂಡಲೇ ನಮ್ಮ ಸಹಾಯಕ್ಕೆ ಬರುತ್ತಾರೆ. [ಹಿಂದಿನ ಬಾಗಿಲಿನಿಂದ ಬಾ, ನಿನಗೆ ಔಷಧ ಕೊಡುತ್ತೇನೆ,]” ಆ ನಂತರ ಅವರು ಅವಕಾಶವನ್ನು ಸದುಪಯೋಗಪಡಿಸಿಕೊಂಡು, ನಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಎಂದು 45 ವರ್ಷದ ಕುಸುಮ ಅಖಿಲ ಭಾರತ ಲೈಂಗಿಕ ಕಾರ್ಯಕರ್ತೆಯರ ಕಾರ್ಯಜಾಲ (ಎಐಎನ್‌ಎಸ್‌ಡಬ್ಲ್ಯು) ಇದರ ಮಾಜಿ ಅಧ್ಯಕ್ಷೆರೊಂದಿಗೆ ಹಲವಾರು ಒಪ್ಪಂದಗಳಿಗೆ ತಲೆಯಲ್ಲಾಡಿಸಿ ಹೇಳಿದರು. ಈ ಸಂಸ್ಥೆಯು 16 ರಾಜ್ಯಗಳ ಸಮುದಾಯದ ಸಂಸ್ಥೆಯಾಗಿದ್ದು, 4.5 ಲಕ್ಷ ಲೈಂಗಿಕ ಕಾರ್ಯಕರ್ತೆಯರನ್ನು ಪ್ರತಿನಿಧಿಸುತ್ತದೆ.
ವಾಯುವ್ಯ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿರುವ ಸಮುದಾಯದ ವಿವಾಸದಲ್ಲರುವ ಲೈಂಗಿಕ ಕಾರ್ಯಕರ್ತೆಯರ ಗುಂಪನ್ನು ಪಿಎಆರ್‌ಐ ಸಂಪರ್ಕಿಸಿತು, ಅದರಲ್ಲಿ ಹೆಚ್ಚಿನವರಿಗೆ ಸಾಂಕ್ರಾಮಿಕದ ಕಾರಣ ಕೆಲಸವಿರಲಿಲ್ಲ. ಚಳಿಗಾಲದ ಅಪರಾಹ್ನದಲ್ಲಿ ಬಿಸಿಗಾಗಿ ಮುದುಡಿಕೊಂಡು ಕುಳಿತಿದ್ದ ಅವರು ಮನೆಯಲ್ಲೇ ಬೇಯಿಸಿದ ತರಕಾರಿ, ದಾಲ್ ಮತ್ತು ರೋಟಿಯನ್ನು ಬುತ್ತಿಯಲ್ಲಿ ಕಟ್ಟಿಕೊಂಡು ಹಂಚಿ ತಿನ್ನುತ್ತಿದ್ದರು.













