“ಈ ಆಟ ಇಲ್ಲಿನ ಹಲ್ಬಿ ಮತ್ತು ಗೊಂಡಿ ಭಾಷೆಯಲ್ಲಿ ಘೋಡೋಂಡಿ ಎಂದೇ ಪರಿಚಿತ. ಇದರ ಅರ್ಥ ಕುದುರೆ ಸವಾರಿ. ಈ ಕೋಲಿನ ಮೇಲೆ ನಡೆಯುವಾಗ ನಿಮಗೆ ಕುದುರೆ ಸವಾರಿ ಮಾಡುತ್ತಿರುವಷ್ಟೇ ಸಂತೋಷವಾಗುತ್ತದೆ.” ಎನ್ನುತ್ತಾರೆ ಇಲ್ಲಿನ ಯುವ ಶಿಕ್ಷಕ ಕಿಬಾಯ್‌ಬಲೆಂಗ ನಿವಾಸಿ ಗೌತಮ್‌ ಸೇಥಿಯಾ. (ಜನಗಣತಿಯಲ್ಲಿ ಕಿವಾಯ್‌ಬಲೇಗಾ ಎಂದು ಪಟ್ಟಿ ಮಾಡಲಾಗಿದೆ.)

ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಕೊಂಡಗಾಂವ್ ಜಿಲ್ಲೆಯ ಕೊಂಡಗಾಂವ್ ಬ್ಲಾಕ್‌ನಲ್ಲಿರುವ ಈ ಗ್ರಾಮದ ಜಗದಾಹಿನ್‌ಪಾರಾ ಹಾಡಿಯಲ್ಲಿ, ಹದಿಹರೆಯ ಪೂರ್ವದ ಹುಡುಗರು ಈ ಆಟ ಆಡುತ್ತಾರೆ. ಆದರೆ ಘೋಡೊಂಡಿ ಆಟವಾಡುವ ಯಾವುದೇ ಹುಡುಗಿಯರನ್ನು ನಾನು ಇಲ್ಲಿ ನೋಡಿಲ್ಲ - ಹರೇಲಿ ಅಮಾವಾಸ್ಯೆಯ ಶುಭ ದಿನದಂದು ಕೋಲಿನ ಸವಾರಿ ಪ್ರಾರಂಭಿಸುತ್ತಾರೆ (ಜುಲೈ-ಆಗಸ್ಟ್ ಸುಮಾರಿಗೆ). ಆಗಸ್ಟ್-ಸೆಪ್ಟೆಂಬರ್‌ ತಿಂಗಳಿನಲ್ಲಿ ಗಣೇಶ್ ಚತುರ್ಥಿಯ ನಂತರ ನಯಖಾನಿ (ಅಥವಾ ಛತ್ತೀಸ್‌ಗಢದ ಇತರ ಭಾಗಗಳಲ್ಲಿನ ನವಾಖಾನಿ)ಯವರೆಗೆ ಸವಾರಿಗಳು ಮತ್ತು ಆಟಗಳು ಮುಂದುವರಿಯುತ್ತವೆ.

ವೀಡಿಯೋ ವೀಕ್ಷಿಸಿ – ಘೊಂಢೋಡಿ: ಬಸ್ತಾರ್‌ನ ಸಂಭ್ರಮದ ಕುದುರೆ ಕಾಲು (ಸಮತೋಲನ ಕಾಯ್ದುಕೊಳ್ಳುವ) ಆಟ

“ನಾವು ಕೂಡ ಬಾಲ್ಯ ಈ ಆಟವನ್ನು ಬಹಳವಾಗಿ ಆಡುತ್ತಿದ್ದೆವು” ಸ್ಥಳೀಯವಾಗಿ ತಯಾರಿಸಿದ ಆಟಿಕೆ-ಕೋಲಿನ ಕುರಿತು ಹೇಳುತ್ತಾ ಗೌತಮ್‌ ತಮ್ಮ ಬಾಲ್ಯವನ್ನು ನೆನಪಿಸಿಕೊ‍ಳ್ಳುತ್ತಾರೆ, ಇದನ್ನು ಛತ್ತೀಸ್‌ಗಢದ ಇತರ ಭಾಗಗಳಲ್ಲಿ ಮತ್ತು ಒಡಿಶಾದಲ್ಲಿ ಗೆಡಿ ಎಂದೂ ಕರೆಯುತ್ತಾರೆ. "ನಾವು ಅದನ್ನು ಸ್ವತಃ [ಸಾಮಾನ್ಯವಾಗಿ ಸಾಲ್ ಅಥವಾ ಕಾರಾ ಮರದಿಂದ] ತಯಾರಿಸುತ್ತೇವೆ."

ಕಾಲನ್ನು ಇರಿಸಿಕೊಳ್ಳಲು ಕವೆಯನ್ನು ಮಕ್ಕಳ ಕಾಲು ಮತ್ತು ಅವರ ಸಮತೋಲನ ಕಾಯ್ದುಕೊಳ್ಳುವ ಕೌಶಲವನ್ನು ಆಧರಿಸಿ ಇರಿಸಲಾಗಿರುತ್ತದೆ. ಮಗುವಿನ ಗಾತ್ರ ಮತ್ತು ಕೌಶಲ್ಯವನ್ನು ಅವಲಂಬಿಸಿ, ಅವರು ಸಮತೋಲನ ಗಳಿಸುವುದನ್ನು ಬೀಳುವ ಮತ್ತು ಏಳುವ ಮೂಲಕ ಮತ್ತು ಇತರರು ಅಥವಾ ಸ್ಥಳೀಯ ನರ್ತಕರು ಈ ಕೋಲುಗಳನ್ನು ಬಳಸಿ ಪ್ರದರ್ಶನ ನೀಡುವುದನ್ನು ನೋಡುವ ಮೂಲಕ ಕಲಿಯುತ್ತಾರೆ.

ನಯಾಖಾನಿಯ ಎರಡನೇ ದಿನ ಇಲ್ಲಿನ ಜನರು ಘೋಡೊಂಡಿಯ ಸಾಂಕೇತಿಕ ದೇವತಾ ರೂಪವನ್ನು ಪೂಜಿಸುತ್ತಾರೆ. ನಂತರ ಸ್ಥಳೀಯ ಆಚರಣೆಯ ಭಾಗವಾಗಿ ಎಲ್ಲ ಕೋಲುಗಳನ್ನು ಒಂದೆಡೆ ಇರಿಸಿ ಮುರಿದು ಹಾಕುತ್ತಾರೆ.

ಅನುವಾದ: ಶಂಕರ ಎನ್. ಕೆಂಚನೂರು

Purusottam Thakur

পুরুষোত্তম ঠাকুর ২০১৫ সালের পারি ফেলো। তিনি একজন সাংবাদিক এবং তথ্যচিত্র নির্মাতা। বর্তমানে আজিম প্রেমজী ফাউন্ডেশনে কর্মরত পুরুষোত্তম সমাজ বদলের গল্প লেখায় নিযুক্ত আছেন।

Other stories by পুরুষোত্তম ঠাকুর
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru