ಗ್ರಾಮೀಣ ಭಾರತೀಯರು ಸ್ವಾತಂತ್ರ್ಯ ಹೋರಾಟದ ಕಾಲಾಳುಗಳಾಗಿದ್ದರು ಮತ್ತು ಇದುವರೆಗೆ ಕಂಡ ಕೆಲವು ಶ್ರೇಷ್ಠ ವಸಾಹತು ವಿರೋಧಿ ದಂಗೆಗಳ ನಾಯಕರಾಗಿದ್ದರು. ಭಾರತವನ್ನು ಬ್ರಿಟಿಷ್ ಆಡಳಿತದಿಂದ ಮುಕ್ತಗೊಳಿಸಲು ಅವರಲ್ಲಿ ಅಸಂಖ್ಯಾತ ಜನರು ತಮ್ಮ ಪ್ರಾಣ ತ್ಯಾಗ ಮಾಡಿದರು. ಮತ್ತು ಸ್ವತಂತ್ರ ಭಾರತವನ್ನು ನೋಡಲು ಬಹಳ ಸಂಕಟಗಳನ್ನು ಎದುರಿಸಿ ಬದುಕಿದ್ದ ಅನೇಕರನ್ನು ಶೀಘ್ರದಲ್ಲೇ ಮರೆತುಬಿಡಲಾಯಿತು. 1990ರ ದಶಕದಿಂದ, ನಾನು ಕೊನೆಯ ಜೀವಂತ ಸ್ವಾತಂತ್ರ್ಯ ಹೋರಾಟಗಾರರ ಜೀವನದ ಕತೆಗಳನ್ನು ದಾಖಲಿಸಿದೆ. ಅವುಗಳಲ್ಲಿ ಐದು ಕಥೆಗಳನ್ನು ಇಲ್ಲಿ ನೀವು ಓದಬಹುದು:

Nuapada, Odisha
|MON, JUL 05, 2021
ಹತ್ತು ಸ್ವಾತಂತ್ರ್ಯದ ಕಥೆಗಳು
ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟ ಧೈರ್ಯ ಮತ್ತು ತ್ಯಾಗದ ಮರೆತುಹೋಗಿರುವ ಕಥೆಗಳನ್ನು ಇನ್ನೊಮ್ಮೆ ನೆನಪಿಸಿಕೊಳ್ಳುವ ಪ್ರಯತ್ನ
Author
Translator
10. ʼಸಾಲಿಹಾನ್ʼ ಬ್ರಿಟಿಷರ ಮೇಲೆರಗಿದ ಕತೆ
ಸ್ವಾತಂತ್ರ್ಯದ ಹತ್ತು ಕಥೆಗಳು-1: ಒಡಿಶಾದ ನುವಪಾಡಾದಲ್ಲಿ ದೇಮತಿ ದೇಯಿ ಸಬಾರ್ ಮತ್ತು ಅವರ ಸ್ನೇಹಿತರು ಬ್ರಿಟಿಷ್ ಅಧಿಕಾರಿಗಳ ಮೇಲೆ ಲಾಠಿ ಪ್ರಹಾರ ಮಾಡಿದ ಕತೆಯಿದು
9. ಪಾಣಿಮಾರದ ಸ್ವಾತಂತ್ರ್ಯದ ಕಾಲಾಳುಗಳು – 1
ಸ್ವಾತಂತ್ರ್ಯದ ಹತ್ತು ಕಥೆಗಳು - 2: ಬಡ ಒಡಿಯಾ ಗ್ರಾಮಸ್ಥರು ಸಂಬಲ್ಪುರ ನ್ಯಾಯಾಲಯವನ್ನು ನಡೆಸಲು ಪ್ರಯತ್ನಿಸಿದಾಗ
8. ಪಾಣಿಮಾರದ ಸ್ವಾತಂತ್ರ್ಯದ ಕಾಲಾಳುಗಳು – 2
ಸ್ವಾತಂತ್ರ್ಯದ ಹತ್ತು ಕಥೆಗಳು -3: ಒಡಿಶ್ಸಾದ ಸಣ್ಣ ಹಳ್ಳಿಯೊಂದು ʼಸ್ವಾತಂತ್ರ್ಯದ ಹಳ್ಳಿʼಯೆಂದು ಹೆಸರು ಪಡೆದ ಕತೆ
7. ಲಕ್ಷ್ಮಿ ಪಾಂಡಾ ಅವರ ಕೊನೆಯ ಯುದ್ಧ
ಸ್ವಾತಂತ್ರ್ಯದ ಹತ್ತು ಕಥೆಗಳು - 9: ಬಡ ಐಎನ್ಎ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದ ಅವರು ತನ್ನ ದೇಶದೆದುರು ಇಟ್ಟಿದ್ದು ಒಂದೇ ಬೇಡಿಕೆ. ಅದು ತಾನು ದೇಶಕ್ಕಾಗಿ ಮಾಡಿದ ತ್ಯಾಗವನ್ನು ಗುರುತಿಸಬೇಕೆನ್ನುವುದು. ಆ ಹೋರಾಟ ಸ್ವಾತಂತ್ರ್ಯ ಪಡೆದ ಆರು ದಶಕಗಳ ನಂತರವೂ ಮುಂದುವರೆದಿತ್ತು
6. ಅಹಿಂಸೆಯ ಒಂಬತ್ತು ದಶಕಗಳು
ಸ್ವಾತಂತ್ರ್ಯದ ಹತ್ತು ಕಥೆಗಳು - 10: ಬಾಜಿ ಮೊಹಮ್ಮದ್, ಅವರ ಅಹಿಂಸಾತ್ಮಕ ಹೋರಾಟ ಸ್ವಾತಂತ್ರ್ಯದ ನಂತರದ 60 ವರ್ಷಗಳವರೆಗೂ ಮುಂದುವರೆಯಿತು
ಇವುಗಳ ಜೊತೆಯಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಮೊದಲು ಪ್ರಕಟವಾದ ಐದು ಲೇಖನಗಳ ಒಂದು ಗುಚ್ಛವನ್ನು ಹೆಚ್ಚಿನ ಛಾಯಾಚಿತ್ರಗಳೊಂದಿಗೆ ಇಲ್ಲಿ ಮರು ಪ್ರಕಟಣೆ ಮಾಡಲಾಗಿದೆ. ಆ ‘ಮರೆತುಹೋದ ಸ್ವಾತಂತ್ರ್ಯ ಹೋರಾಟಗಳು’ ಸರಣಿಯು ದೊಡ್ಡ ದಂಗೆಗಳ ತೊಟ್ಟಿಲುಗಳಾಗಿದ್ದ ಹಳ್ಳಿಗಳ ಸುತ್ತಲೂ ಹೆಣೆಯಲ್ಪಟ್ಟಿದೆ. ಭಾರತೀಯ ಸ್ವಾತಂತ್ರ್ಯ ಹೋರಾಟವು ನಗರ ಗಣ್ಯರ ಗುಂಪಿನ ವಿಷಯವಲ್ಲ. ಗ್ರಾಮೀಣ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಒಂದಕ್ಕಿಂತ ಹೆಚ್ಚು ರೀತಿಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಉದಾಹರಣೆಗೆ, 1857ರ ಅನೇಕ ಹೋರಾಟಗಳು ಹಳ್ಳಿಗಳಲ್ಲಿ ಆರಂಭಗೊಂಡವು, ಅದೇ ಸಮಯದಲ್ಲಿ ಮುಂಬೈ ಮತ್ತು ಕೋಲ್ಕತ್ತಾದ ಗಣ್ಯರು ಬ್ರಿಟಿಷರ ಯಶಸ್ಸಿಗೆಂದು ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದರು. 1997ರಲ್ಲಿ, ಸ್ವಾತಂತ್ರ್ಯಕ್ಕೆ 50 ವರ್ಷಗಳು ತುಂಬಿದ ಸಮಯದಲ್ಲಿ, ಈ ಕಥೆಗಳಿಗಾಗಿ ನಾನು ಆ ಕೆಲವು ಹಳ್ಳಿಗಳಿಗೆ ತೆರಳಿದ್ದೆ:
5. ಶೇರ್ಪುರ: ದೊಡ್ಡ ತ್ಯಾಗ, ಸಣ್ಣ ನೆನಪು
ಸ್ವಾತಂತ್ರ್ಯದ ಹತ್ತು ಕಥೆಗಳು - 4: 1942ರಲ್ಲಿ ಉತ್ತರ ಪ್ರದೇಶ ಗ್ರಾಮವೊಂದು ಸ್ವಾತಂತ್ರ್ಯದ ಧ್ವಜವನ್ನು ಏರಿಸಿತು ಜೊತೆಗೆ ಅದಕ್ಕೆ ಬೆಲೆಯನ್ನೂ ತೆತ್ತಿತು
4. ಗೋದಾವರಿ: ಮತ್ತು ಪೊಲೀಸರು ಈಗಲೂ ದಾಳಿಯ ನಿರೀಕ್ಷೆಯಲ್ಲಿದ್ದಾರೆ
ಸ್ವಾತಂತ್ರ್ಯದ ಹತ್ತು ಕಥೆಗಳು - 5: ಅಲ್ಲೂರಿ ಸೀತಾರಾಮ ರಾಜು ವಸಾಹತುಶಾಹಿ ವಿರುದ್ಧ ಪ್ರಮುಖ ದಂಗೆಗೆಳಲ್ಲಿ ಒಂದನ್ನು ಆಂಧ್ರದ ರಂಪಾ ಎನ್ನುವಲ್ಲಿಂದ ಆರಂಭಿಸಿದ್ದರು
3. ಸೋನಾಖಾನ್: ವೀರ್ ನಾರಯಣ್ ಎರಡೆರಡು ಬಾರಿ ಮಡಿದಾಗ
ಸ್ವಾತಂತ್ರದ ಹತ್ತು ಕತೆಗಳು – 6: ಸ್ವಾತಂತ್ರ್ಯದ ಹತ್ತು ಕಥೆಗಳು - 6:ಛತ್ತೀಸ್ಗಢದಲ್ಲಿ, ವೀರ್ ನಾರಾಯಣ್ ಸಿಂಗ್ ಭಿಕ್ಷೆ ಬೇಡದೆ, ನ್ಯಾಯಕ್ಕಾಗಿ ಹೋರಾಡುತ್ತಾ ತನ್ನ ಪ್ರಾಣವನ್ನೇ ಕೊಟ್ಟರು
2. ಕಲ್ಲಿಯಶ್ಸೆರಿಯಲ್ಲಿ ಸುಮುಕನ್ ಅವರನ್ನು ಹುಡುಕುತ್ತಾ…
ಸ್ವಾತಂತ್ರ್ಯದ ಹತ್ತು ಕಥೆಗಳು - 7: ಬ್ರಿಟಿಷರು, ಸ್ಥಳೀಯ ಭೂಮಾಲೀಕರು ಮತ್ತು ಜಾತಿ ಸೇರಿದಂತೆ ಹೋರಾಟದ ಎಲ್ಲ ಮಜಲುಗಳನ್ನೂ ಕಂಡ ಗ್ರಾಮ
1. ಕಲ್ಲಿಯಶ್ಶೆರಿ: 50 ವರ್ಷಗಳ ನಂತರವೂ ಮುಂದುವರೆದಿರುವ ಹೋರಾಟ
ಸ್ವಾತಂತ್ರ್ಯದ ಹತ್ತು ಕಥೆಗಳು - 8: ಬೇಟೆಗಾರರ ದೇವರು ಕೇರಳದ ಕಮ್ಯುನಿಸ್ಟರಿಗೆ ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಆಶ್ರಯ ನೀಡಿದಾಗ
ʼಪರಿʼ ತಮ್ಮ 90ರ ಹರೆಯದಲ್ಲಿರುವ ಕೊನೆಯ ಕೆಲವು ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕುವ ಮತ್ತು ದಾಖಲಿಸುವ ಪ್ರಯತ್ನವನ್ನು ಮುಂದುವರಿಸಲಿದೆ.
ಅನುವಾದ: ಶಂಕರ ಎನ್. ಕೆಂಚನೂರು
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/ಹತ್ತು-ಸ್ವಾತಂತ್ರ್ಯದ-ಕಥೆಗಳು











