
SANGUR, PUNJAB
|WED, JUL 23, 2025
ಲೋಕಸಭಾ ಚುನಾವಣೆ 2019: ಗ್ರಾಮೀಣ ಮತಗಳು
ಗ್ರಾಮೀಣ ಭಾರತದ ಮತದಾರರು ಮತ ಹಾಕುವ ಮೊದಲು ಯಾವ ವಿಷಯಗಳನ್ನು ಪರಿಗಣಿಸುತ್ತಾರೆ? ದೇಶದ ಗ್ರಾಮೀಣ ಭಾಗದ ಮತದಾರರು ಪರಿಗಣಿಸುವ ಕೆಲವು ಮುಖ್ಯ ವಿಷಯಗಳೆಂದರೆ ಕೃಷಿ ಬಿಕ್ಕಟ್ಟು, ಸಾಲ ಮನ್ನಾ, ಆರೋಗ್ಯ ಸೇವೆ, ರಸ್ತೆ, ಶಾಲೆ, ಉದ್ಯೋಗ, ಉತ್ತಮ ವೇತನ ಮತ್ತು ಘನತೆಯ ಬದುಕು. ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರಾಖಂಡ ರಾಜ್ಯದ ಹಲವು ಊರುಗಳಲ್ಲಿ ತಿರುಗಾಡಿ ಪರಿ ಈ ವಿಷಯವನ್ನು ಕಂಡುಕೊಂಡಿದೆ. ಕೆಲವೆಡೆ ನಿರ್ಧಿಷ್ಟ ಗುಂಪುಗಳ ನಿಯಮಗಳು ಮೇಲುಗೈ ಸಾಧಿಸಿದ್ದರೆ, ಇನ್ನೂ ಹಲವೆಡೆ ಜನರ ನೆಲ ಮತ್ತು ನೀರಿನ ಹಕ್ಕನ್ನು ಕಸಿದುಕೊಳ್ಳುತ್ತಿರುವ ಉದ್ಯಮಗಳು ಮತ್ತು ಯೋಜನೆಗಳ ಕುರಿತ ಆಕ್ರೋಶವನ್ನು ಕಾಣಬಹುದು. ಇದರ ಜೊತೆಗೆ ದೀರ್ಘಕಾಲೀನ ಬೇಡಿಕೆಗಳ ಬಗೆಗಿನ ನಿರ್ಲಕ್ಷ್ಯದ ಕುರಿತಾಗಿಯೂ ಈ ಜನರಲ್ಲಿ ಸಿಟ್ಟಿದೆ.
Author
Translator
4. ತೂತುಕುಡಿಯ ಚುನಾವಣೆಯಲ್ಲಿ ರಫೇಲ್ ಮೇಲೆ ಸ್ಟೆರ್ಲೈಟ್ ಸವಾರಿ
ತಮಿಳುನಾಡಿನ ಕುಮರೆಡ್ಡಿಯಪುರಂ ಗ್ರಾಮದಲ್ಲಿ ಏಪ್ರಿಲ್ 18 ಚುನಾವಣೆ ಮತದಾನ ದಿನ - ಆದರೆ ಮೇ 22, 2018ರಲ್ಲಿ ಸ್ಟೆರ್ಲೈಟ್ ತಾಮ್ರ ಸ್ಥಾವರವನ್ನು ವಿರೋಧಿಸಿದ ಪ್ರತಿಭಟನಾಕಾರರನ್ನು ಪೋಲೀಸ್ಸರು ಗುಂಡಿಟ್ಟು ಕೊಂದ ಕರಾಳ ಘಟನೆ ಮತದಾರರನ್ನು ತೀವ್ರವಾಗಿ ಕಾಡುತ್ತಿದೆ
3. ತುಮಕೂರಿನ ಪೌರ ಕಾರ್ಮಿಕರು: ಚುನಾವಣೆ ಮತ್ತು ಅದರ ನಂತರದ ನಿರೀಕ್ಷೆಗಳು
ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಅತಿ ಹೆಚ್ಚು ಮ್ಯಾನುಯಲ್ ಸ್ಕ್ಯಾವೆಂಜರ್ಗಳನ್ನು (ಮಲ ಹೊರುವವರು) ಹೊಂದಿದೆ. ಅವರಲ್ಲಿ ಅನೇಕರಿಗೆ ತಮ್ಮ ರಾಜಕೀಯ ನಾಯಕರ ಮೇಲೆ ಹೆಚ್ಚಿನ ನಂಬಿಕೆ ಇಲ್ಲದಿದ್ದರೂ ಉತ್ತಮ ಬೆಳವಣಿಗೆಯ ಆಶಯದಲ್ಲಿ ಏಪ್ರಿಲ್ 18ರಂದು ಮತ ಚಲಾಯಿಸುತ್ತೆವೆ ಎಂದು ಹೇಳುತ್ತಾರೆ
2. ಅನಂತಪುರ ಚುನಾವಣೆಯಲ್ಲಿ ಭಯ ಮತ್ತು ಗುಂಪುಗಾರಿಕೆ
ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿ, ಚುನಾವಣೆಗಳು ಸಮಸ್ಯೆಗಳಿಗಿಂತ ಹೆಚ್ಚಾಗಿ ಬಣ ರಾಜಕೀಯದ ಮೇಲೆ ನಡೆಯುತ್ತವೆ. ಇಂದು ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಜನ ಮತ ಚಲಾಯಿಸಲಿದ್ದಾರೆ
1. ತೆಂಭರೆ ಗ್ರಾಮದಲ್ಲಿ ಮತದಾನದ ಕುರಿತು ಚರ್ಚೆ
ಟಿವಿಯಲ್ಲಿನ ಚರ್ಚೆಗಳು ಮತ್ತು ಪಕ್ಷಗಳ ನಡುವಿನ ಸ್ಪರ್ಧೆಯ ಗದ್ದಲದಿಂದ ದೂರವಿದ್ದು, ಮಹಾರಾಷ್ಟ್ರದ ಗ್ರಾಮಾಂತರದ ಥಾಣೆ ಜಿಲ್ಲೆಯ ನಾಗರಿಕರು ಆರೋಗ್ಯ, ರಸ್ತೆಗಳು, ಶಾಲೆಗಳು, ಸಾಲ ಮನ್ನಾ, ಉದ್ಯೋಗಗಳು ಮತ್ತು ಇತರ ಹಲವು ಸಮಸ್ಯೆಗಳನ್ನು ಯಾರು ಪರಿಹರಿಸಬಲ್ಲರು ಎಂಬ ಗೊಂದಲದಲ್ಲಿದ್ದಾರೆ
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/elections-2019-village-votes-kn





