ಉತ್ತರ ಪ್ರದೇಶ ರಾಜ್ಯ ದೇಶದ ಪ್ರಮುಖ ಆಹಾರ ಧಾನ್ಯ ಪೂರೈಕೆದಾರ ರಾಜ್ಯ. ಅಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಉತ್ತರ ಪ್ರದೇಶದ ಕೃಷಿಯ ಮೇಲೆ ಪರಿಣಾಮ ಬೀರುವ ಪ್ರಮುಖ ವಿಪತ್ತುಗಳಲ್ಲಿ ಬರವೂ ಒಂದು. ಮಧ್ಯಪ್ರದೇಶದ ಕೆಲವು ಭಾಗಗಳು ಸಹ ಹೀಗೆ ಬರ ಪರಿಸ್ಥಿತಿಯನ್ನು ಎದುರಿಸುತ್ತವೆ. ಕಳೆದ 29 ವರ್ಷಗಳಲ್ಲಿ ಇಲ್ಲಿನ 51 ಜಿಲ್ಲೆಗಳು ಹಲವಾರು ಬರಗಾಲಗಳನ್ನು ಕಂಡಿವೆ. ಈ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜೀವನೋಪಾಯಕ್ಕಾಗಿ ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಈ ಪುನರಾವರ್ತಿತ ಬಿಸಿಗಾಳಿ, ಅಂತರ್ಜಲ ಕುಸಿತ ಮತ್ತು ಮಳೆಯ ಕೊರತೆ ಈ ಪ್ರದೇಶಗಳಲ್ಲಿ ವಿನಾಶವನ್ನು ತಂದಿದೆ.

ಬರದ ಭೀಕರತೆ ಅದನ್ನು ಅನುಭವಿಸಿದವರಿಗೆ ಮಾತ್ರ ತಿಳಿದಿರುತ್ತದೆ. ನಗರವಾಸಿಗಳ ಪಾಲಿಗೆ ಈ ಬರವೆನ್ನುವುದು ಕೇವಲ ಇನ್ನೊಂದು ಸುದ್ದಿ. ಆದರೆ ವರ್ಷ ವರ್ಷವೂ ಈ ಭೀಕರತೆಯನ್ನು ಎದುರಿಸುವ ರೈತರ ಪಾಲಿಗೆ ಈ ಬರವೆನ್ನುವುದು ಸಾಕ್ಷಾತ್‌ ಯಮನಿದ್ದಂತೆ. ಮಳೆಗಾಗಿ ಕಾಯ್ದು ಒಣಗಿ ಹೋದ ಕಣ್ಣುಗಳು, ಬೆಂಕಿಯುಗುಳುವ ಬಿರುಕು ಬಿಟ್ಟ ನೆಲ, ಹಸಿವು, ಬತ್ತಿದ ಹೊಟ್ಟೆಯ ಮಕ್ಕಳು, ಜಾನುವಾರುಗಳ ಮೂಳೆ ರಾಶಿ, ನೀರು ಹುಡುಕಿಕೊಂಡು ಅಲೆಯುವ ಮಹಿಳೆಯರು – ಇವು ರಾಜ್ಯದ ಉದ್ದಕ್ಕೂ ಕಂಡು ಬರುವ ನೋಟಗಳು.

ಈ ಕವಿತೆಯು ಮಧ್ಯ ಭಾರತದ ಪ್ರಸ್ಥಭೂಮಿಗಳಲ್ಲಿ ನಾನು ಕಂಡ ಬರದ ಪ್ರತಿರೂಪ.

ಸೈಯದ್ ಮೆರಾಜುದ್ದೀನ್ ಅವರ ದನಿಯಲ್ಲಿ ಹಿಂದಿ ಮೂಲ ಕವಿತೆಯನ್ನು ಕೇಳಿ

ಕವಿತೆಯ ಇಂಗ್ಲಿಷ್‌ ಅನುವಾದವನ್ನು ಪ್ರತಿಷ್ಠಾ ಪಾಂಡ್ಯ ದನಿಯಲ್ಲಿ ಆಲಿಸಿ

सूखा

रोज़ बरसता नैनों का जल
रोज़ उठा सरका देता हल
रूठ गए जब सूखे बादल
क्या जोते क्या बोवे पागल

सागर ताल बला से सूखे
हार न जीते प्यासे सूखे
दान दिया परसाद चढ़ाया
फिर काहे चौमासे सूखे

धूप ताप से बर गई धरती
अबके सूखे मर गई धरती
एक बाल ना एक कनूका
आग लगी परती की परती

भूखी आंखें मोटी मोटी
हाड़ से चिपकी सूखी बोटी
सूखी साखी उंगलियों में
सूखी चमड़ी सूखी रोटी

सूख गई है अमराई भी
सूख गई है अंगनाई भी
तीर सी लगती है छाती में
सूख गई है पुरवाई भी

गड्डे गिर्री डोरी सूखी
गगरी मटकी मोरी सूखी
पनघट पर क्या लेने जाए
इंतज़ार में गोरी सूखी

मावर लाली बिंदिया सूखी
धीरे धीरे निंदिया सूखी
आंचल में पलने वाली फिर
आशा चिंदिया चिंदिया सूखी

सूख चुके सब ज्वारों के तन
सूख चुके सब गायों के थन
काहे का घी कैसा मक्खन
सूख चुके सब हांडी बर्तन

फूलों के परखच्चे सूखे
पके नहीं फल कच्चे सूखे
जो बिरवान नहीं सूखे थे
सूखे अच्छे अच्छे सूखे

जातें, मेले, झांकी सूखी
दीवाली बैसाखी सूखी
चौथ मनी ना होली भीगी
चन्दन रोली राखी सूखी

बस कोयल की कूक न सूखी
घड़ी घड़ी की हूक न सूखी
सूखे चेहरे सूखे पंजर
लेकिन पेट की भूक न सूखी

ಬರ

ಕಣ್ಣೀರು ಸುರಿಯುತ್ತದೆ ಈ ಕಣ್ಣುಗಳಿಂದ ದಿನವೂ
ನೇಗಿಲು ಜಾರುತ್ತದೆ ಕೈಯಿಂದ.
ಮೋಡಗಳು ಕೋಪಗೊಳ್ಳುತ್ತವೆ ಪ್ರತಿ ದಿನವೂ
ಮತ್ತೆ ಹೇಗೆ ಮಾಡುವೆ ಬೇಸಾಯ ಮರುಳ?

ಕಡಲು ಒಣಗಿದೆ, ಕೆರೆಯೂ ಒಣಗಿದೆ.
ಹೊಲಗಳು ಬಾಡಿವೆ, ನೆಲ ಬಾಯಿಬಿಟ್ಟಿದೆ
ದೇವರಿಗೆ ಹರಕೆ ಕೊಟ್ಟೆ, ಹಣೆ ಹಚ್ಚಿ ಬೇಡಿಕೊಂಡೆ
ಆದರೂ ಕರುಣೆ ತೋರಲಿಲ್ಲವೇಕೆ ಮಳೆಯೇ?

ಸೂರ್ಯನ ಸಿಟ್ಟಿಗೆ ನೆಲ ಹೋಗಿದೆ ಸುಟ್ಟು
ಇನ್ನು ಉಳಿಯದು ನೆಲ, ಊರಿಗೆ ಬರ ಬಂದಿದೆ
ಕಾಣುತ್ತಿಲ್ಲ ಎಲ್ಲೂ ಕಡೇ ಪಕ್ಷ ಹೊಟ್ಟು
ಪಾಳು ಬಿದ್ದಿದೆ ಭೂಮಿ ಸೂರ್ಯನ ಶಾಪಕ್ಕೆ ಸಿಕ್ಕು

ಹಸಿದ ಕಣ್ಣುಗಳು ಹೊರಬಿದ್ದಿವೆ
ಮೈಯಲ್ಲಿ ನೆಣವಿಲ್ಲದೆ ಹೊರ ಬಿದ್ದಿದೆ ಮೂಳೆ
ಒಣ ಚರ್ಮ, ಅಯ್ಯೋ ಬರವೇ!
ಒಣ ಬೆರಳುಗಳು ಒಣ ರೊಟ್ಟಿ ಮುರಿಯುತ್ತಿವೆ

ತೋಟ ಒಣಗಿದೆ
ಅಂಗಳವೂ ಒಣಗಿದೆ
ತೇವವಿಲ್ಲದ ನನ್ನೆದೆಯಂತೆ
ಬೇಸರದಿಂದ ಉಸಿರೆಳೆದುಕೊಂಡರೆ
ಬೀಸುವ ಗಾಳಿಯೂ ಬಿಸಿ

ಮಡಕೆ, ಕೊಡಪಾನಗಳು ಒಣಗಿವೆ
ಮರದ ಕಂಬ, ರಾಟೆ, ಮತ್ತೆ ಹಗ್ಗವೂ ಒಣಗಿದೆ
ಎಲ್ಲಿಂದ ತರುವುದು ನೀರನ್ನು?
ಭರವಸೆಯೇ ಕಾಣದೆ ಈಗ ಅವಳ ಗಂಟಲೂ ಬತ್ತಿದೆ

ಮೊದಲಿಗೆ ಕೆನ್ನೆಯ ಮೇಲಿನ ಗುಲಾಬಿ
ನಂತರ ಹಣೆಯ ಮೇಲಿನ ಕುಂಕುಮ
ಮತ್ತೆ ನಿಧಾನವಾಗಿ ನಿದ್ರೆ
ಹೀಗೆ ಎಲ್ಲವನ್ನೂ ಕಳೆದುಕೊಂಡಿದ್ದಾಳೆ ಬರದಿಂದಾಗಿ
ಇದೆಲ್ಲದರ ನಡುವೆ
ಹೊಟ್ಟೆಯೊಳಗೆ ಮೊಳೆತಿತ್ತು ಭರವಸೆಯೊಂದು
ಈಗ ಅದೂ ಕರಗಿ ಹೋಯಿತು ಹನಿ ಹನಿಯಾಗಿ

ಎತ್ತುಗಳ ಮೈ ಒಣಗಿದೆ
ಹಸುಗಳ ಕೆಚ್ಚಲು ಬತ್ತಿದೆ
ಎಲ್ಲಿದೆ ಬೆಣ್ಣೆ? ಎಲ್ಲಿದೆ ತುಪ್ಪ?
ಈಗ ಮನೆಯ ಪಾತ್ರೆಗಳೂ ಖಾಲಿ ಖಾಲಿ

ಕಾಲಕ್ಕೂ ಮೊದಲೇ ಹಣ್ಣುಗಳು ಒಣಗಿವೆ
ಹೂವಿನ ದಳಗಳೂ ಉದುರುತ್ತಿವೆ
ಹಸಿರಿದ್ದ ಮರವೂ ಒಣಗಿ ನಿಂತಿದೆ
ದಿನ, ಗಂಟೆಗಳೂ ಈಗ ಒಣಗಿದಂತೆ ಭಾಸ

ಹಬ್ಬ, ಸಂತೆ, ಮತ್ತು ಮೆರವಣಿಗೆಗಳು
ದೀಪಾವಳಿ, ಬೈಸಾಖಿ, ಛೌತ್‌, ಹೋಲಿ
ಚಂದನ ತಿಲಕವಿಲ್ಲ, ಕುಂಕುಮವಿಲ್ಲ
ಈ ಬಾರಿಯ ರಾಖಿಯೂ ಶುಷ್ಕ

ಆದರೆ ಕೋಗಿಲೆ ಈಗಲೂ ಹಾಡುತ್ತಿದೆ.
ನೋವು, ದುಃಖ ಎದೆಯಲ್ಲಿ ಇನ್ನೂ ಜೀವಂತವಿದೆ
ನೀರ್ಜೀವ ಮುಖ ಹಾಗೂ ಅಸ್ಥಿಪಂಜರದ ಹಿಂದೆ
ಒಲೆಯಲ್ಲಿ ಒಂದೇ ಸಮನೇ ಉರಿಯುತ್ತಿದೆ ಹಸಿವೆಯ ಬೆಂಕಿ


ಅನುವಾದ: ಶಂಕರ. ಎನ್. ಕೆಂಚನೂರು

Syed Merajuddin

سید معراج الدین ایک شاعر اور استاد ہیں۔ وہ مدھیہ پردیش کے آگر میں رہتے ہیں، اور آدھار شلا شکشا سمیتی کے شریک کار بانی ہیں۔ یہ تنظیم بے گھر کی گئی آدیواسی اور دلت برادریوں کے بچوں کے لیے ہائر سیکنڈری اسکول چلاتی ہے۔ اب وہ کونو نیشنل پارک کے کنارے رہتے ہیں۔

کے ذریعہ دیگر اسٹوریز Syed Merajuddin
Illustration : Manita Kumari Oraon

منیتا اوراؤں، جھارکھنڈ کی فنکار ہیں اور آدیواسی برادریوں سے متعلق سماجی و ثقافتی اہمیت کے موضوع پر مورتیاں اور پینٹنگ بناتی ہیں۔

کے ذریعہ دیگر اسٹوریز Manita Kumari Oraon
Editor : Pratishtha Pandya

پرتشٹھا پانڈیہ، پاری میں بطور سینئر ایڈیٹر کام کرتی ہیں، اور پاری کے تخلیقی تحریر والے شعبہ کی سربراہ ہیں۔ وہ پاری بھاشا ٹیم کی رکن ہیں اور گجراتی میں اسٹوریز کا ترجمہ اور ایڈیٹنگ کرتی ہیں۔ پرتشٹھا گجراتی اور انگریزی زبان کی شاعرہ بھی ہیں۔

کے ذریعہ دیگر اسٹوریز Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru