ಒಂದಾನೊಂದು ಕಾಲದಲ್ಲಿ ಒಂದಾನೊಂದು ದೇಶದಲ್ಲಿ ಗುಜರಾಜ ಎನ್ನುವ ರಾಜನು ತನ್ನ ಕಬ್ಬಿಣ ಮುಷ್ಟಿಯಲ್ಲಿಟ್ಟು ದೇಶವನ್ನು ಆಳುತ್ತಿದ್ದನು. ಜನರೆಲ್ಲರೂ ಅವನ ಮೋಡಿಗೆ ಒಳಗಾಗಿದ್ದರು. ರಾಜನು ತಾನು ಉಣ್ಣುತ್ತಿರಲಿಲ್ಲ ಮತ್ತು ಇತರರಿಗೆ ಉಣ್ಣುವುದಕ್ಕೆ ಬಿಡುತ್ತಿರಲಿಲ್ಲ. ಅವನು ಬಹಳ (ಅ)ದಕ್ಷನಾಗಿದ್ದನು. ಹಾಗಿದ್ದರೆ ತೊಂದರೆ ಏನಿತ್ತು? ತನ್ನ ಸಾಮ್ರಾಜ್ಯವನ್ನು ಪಶ್ಚಿಮದ ಮಾತಗೌ ನಿದಾಅ ಎನ್ನುವವನಿಗೆ ಹರಾಜು ಹಾಕಿದ್ದನು.
ಹೀಗಿರುವಾಗ ಒಂದು ದಿನ ರಾಜನ ಪಾದ್ರಿಯಾದ ಶಮಿತ್ ಹಶಾ ಎನ್ನುವವನಿಗೆ ಕನಸೊಂದು ಬಿತ್ತು. ಆ ಕನಸಿನಲ್ಲಿ ರಾಜ ತನ್ನ ಸಿಂಹಾಸನವನ್ನು ಕಳೆದುಕೊಂಡಿದ್ದ. ಅದೊಂದು ಭಯಾನಕ ಶಕುನವಾಗಿತ್ತು. ರಾಜನ ದೇಶದ ಜನರು ಪ್ರಜಾಪ್ರಭುತ್ವ ಮತ್ತು ಇತ್ಯಾದಿ ದುಷ್ಟ ಆಚರಣೆಗಳನ್ನು ಆಚರಿಸುವ ಅನಾಗರಿಕ ಜನಾಂಗದವರಾಗಿದ್ದರು. ಆತುರಾತುರವಾಗಿ ಮಾಂತ್ರಿಕರ ಮಂಡಳಿ ಸಭೆ ಸೇರಿತು, ಆ ಸಭೆಯಲ್ಲಿ ಮಾಂತ್ರಿಕ ಪರಿಹಾರವೊಂದನ್ನು ಕಂಡುಕೊಳ್ಳಲಾಯಿತು. ಪರಿಹಾರವೆಂದರೆ ಗೋತಾಮಾ ದೇವತೆಯ ದಿವ್ಯ ಸಗಣಿಯಿಂದ ಬಾಂಡ್ ದೇವತೆಗೆ 108 ಅಡಿ ಉದ್ದದ ಪರಿಮಳದ ಅಗರಬತ್ತಿಯನ್ನು ತಯಾರಿಸಬೇಕು.
ಆಗಿನಿಂದ ಗೋತಾಮ ಸಗಣಿಯನ್ನು ಒಟ್ಟುಗೂಡಿಸಲು ಪ್ರಾರಂಭಿಸಲಾಯಿತು. ಅಗತ್ಯವಾದ ಬಾಂಡುಗಳನ್ನು ಸಂಗ್ರಹಿಸಲಾಯಿತು. ಕೊನೆಗೆ ಅಗರಬತ್ತಿ ತಯಾರಿಸಿ ಬೆಳಗಿಸಲಾಯಿತು. ಆಹಾ! ಎಂತಹ ಸುವಾಸನೆ! ಸುಮಧುರ ಪರಿಮಳ, ರೈತ-ದ್ವೇಷಿ ಪರಿಮಳವು ಹಸಿದ ಆಗಸದಲ್ಲಿ ಪಸರಿಸುತ್ತಿದ್ದ ಹಾಗೆ ರಾಜ ಗುಜರಾಜ ಮತ್ತು ಶಮಿತ್ ಹಶಾ ನೃತ್ಯ ಮಾಡತೊಡಗಿದರು. ಬಹುಶಃ ಅಪಶಕುನ ಹೊರಟು ಹೋಯಿತು, ಅಥವಾ ಹೋಗದೆಯೂ ಇದ್ದಿರಬಹುದು ಯಾರಿಗೆ ಗೊತ್ತು? ಅಂದಿನಿಂದ ಆ ದೇಶದ ಜನರು (ಅ)ಸಂತೋಷದಿಂದ ಬಾಳತೊಡಗಿದರು.
ದೀರ್ಘಾಯುಷಿಯಾಗು ರಾಜ!
1)
ಕೆಲಸದಿಂದ
ಯಾರ ಕವನ ಸಿಗುತ್ತದೆ, ಹೆಸರಿನಿಂದ ಗುಂಡು ಬರುತ್ತದೆಯೇ?
ಒಂದು
ಪದ್ಯ? ನೋವಿನ ಹಾಡು?
ಹಾಸ್ಯ ಕವಿತೆ?
ಅವೆಲ್ಲವೂ
ಸೆಗಣಿ,
ಇವಿಎಂ
ಮೇಲೆ ನಿಂತಿರುವ,
ನೂರೆಂಟು
ಅಡಿಯ ಅಗರಬತ್ತಿ, ನರಕ ಸದೃಶವಾಗಿ ಉರಿಯುತ್ತಿದೆ.
2)
ಕೋಟಿ
ಕೋಟಿ ಅಯೇ-ಗಳು, ಕೈತುಂಬಾ ನಯೇ-ಗಳು
ಇದು
ನಲವತ್ತೈದು ದಿನಗಳ ವರೆಗೆ ಉರಿಯುತ್ತದೆ,
ಉರಿಯುತ್ತಲೇ ಇರುತ್ತದೆ
ಕಾಣದ
ದೇವರಿಗೆ,
ಪರಿಶುದ್ಧ
ನಂಬಿಕೆಯ ಜೊತೆಗೆ
ಆ
ಶಂಭೂಕ ಮಾತ್ರ ಎಂದೆಂದಿಗೂ ಶಿರಚ್ಛೇದಗೊಳ್ಳುತ್ತಿರುತ್ತಾನೆ.
3)
ಬಾಬ್ರಿಯ
ಸಮಾಧಿಯ ಮೇಲೆ ಚಕ್ರವರ್ತಿ ಬೆಳೆಯುತ್ತಾನೆ,
ಜೊತೆಗೆ
ವಾಟ್ಸಾಪ್, ಗೋವುಗಳು ಮತ್ತು ಬಜರಂಗದಳದ
ಬ್ರೋಗಳು,
ಆದ್ರೆ, ಆ ವಾಸನೆ ಯಾವುದು?
ಸ್ವರ್ಗದ್ದಾ, ಇಲ್ಲಾ ನರಕದ್ದಾ?
ಕೇಳಿ, ಓಹ್ ಕೇಳಿ ಇಲ್ಲಿ,
ನೇಶನ್ ವಾಂಟ್ಸ್ ಟು ನೋ!
4)
ನೂರೆಂಟು
ಅಡಿಯ ಕೇಸರಿ ರಾಡುಗಳು-
ನಾವು
ಮತ ಹಾಕಿದ್ದು ಒಬ್ಬ ರಾಜನಿಗೆ, ವಂಚಕನಿಗೆ
ಅಲ್ಲ.
ಇವ
ಮೊಸಳೆ ಸಾಕಿದ್ದ,
ಕ್ಯಾಮರ
ಇಟ್ಟುಕೊಂಡಿದ್ದ, ಸಿದ್ಧರಾಗಿ!
ನೂರೆಂಟು
ಅಡಿಯ ಕೊಬ್ಬಿದ ಶರೀರ.
5)
ಹಸಿದಿರುವ
ರೈತರು, ಫತ್ವಾಗಳು ಮತ್ತು
ಶ್ರೇಷ್ಟವಾದ
ಲಾಲಾಲ್ಯಾಂಡ್ ನಲ್ಲಿ ಎದ್ದಿರುವ ಗಲಭೆಗಳು,
ಅಗರ್
ಮತ್ತು ಬತ್ತಿ —
ಮನೆಗಳ
ಮೇಲೆ ಬುಲ್ಡೋಜರ್ —
ಅರ್ಥವಾಗದ
ಕಾಮ್ಮಿ ಮತ್ತು ಕಾಂಗಿಗಳು.
ಅನುವಾದ : ಶಂಕರ ಎನ್. ಕೆಂಚನೂರು