“ಕಸ ಉತ್ಪತ್ತಿ ಮಾಡುವವರು ನೀವಾಗಿರುವಾಗ ನಾನು ಹೇಗೆ “ಕಚರೇವಾಲಿ [ಕಸದವಳು]” ಆಗುತ್ತೇನೆ? ಹಾಗೆ ನೋಡಿದರೆ ನಾನು ನಗರವನ್ನು ಸ್ವಚ್ಛವಾಗಿಡುವವಳು. ಈ ಲೆಕ್ಕದಲ್ಲಿ ನಾಗರಿಕರೇ ʼಕಚರೇವಾಲೆಗಳುʼ ಅಲ್ಲವೆ?” ಎಂದು ಕೇಳುತ್ತಾರೆ ಸುಮನ್ ಮೋರೆ. ಇವರು ಪುಣೆ ಮೂಲದ ಓರ್ವ ಪೌರ ಕಾರ್ಮಿಕರು.
ಕಾಗದ್ ಕಾಚ್ ಪತ್ರ ಕಷ್ಟಕಾರಿ 1993ರ ಅಡಿಯಲ್ಲಿ ನಿಯೋಜಿತಗೊಂಡ ಕಸ ಸಂಗ್ರರಕಾರರಲ್ಲಿ ಸುಮನ್ ಕೂಡಾ ಒಬ್ಬರು. ಇಂದು ಈ ಮಹಿಳೆಯರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿದೆ. ಅವರು ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ತಮಗೆ ತಮ್ಮ ಕೆಲಸವನ್ನು ಅಧಿಕೃತಗೊಳಿಸಬಲ್ಲ ಗುರುತಿನ ಚೀಟಿಗಳನ್ನು ನೀಡಬೇಕೆನ್ನುವುದು ಅವರ ಬೇಡಿಕೆಯಾಗಿತ್ತು. 1996ರಲ್ಲಿ ಅವರ ಈ ಬೇಡಿಕೆ ಈಡೇರಿತು.
ಈ ಮಹಿಳೆಯರು ಈಗ ಪಿಎಂಸಿಗಾಗಿ ಕಸ ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರು ನಾವು ಮಹರ್ ಮತ್ತು ಮಾತಂಗ್ ಸಮುದಾಯಕ್ಕೆ ಸೇರಿದವರು. "ನಾವು ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ, ಹಸಿ ಕಸವನ್ನು ಕಸದ ಲಾರಿಗೆ ಕೊಡುತ್ತೇವ” ಎನ್ನುತ್ತಾರೆ ಸುಮನ್. ಮುಂದುವರೆದು ಅವರು “ಒಣ ಕಸದಿಂದಲೂ ನಮಗೆ ಅಗತ್ಯವಿರುವುದನ್ನು ಎತ್ತಿಕೊಂಡು ಉಳಿದಿದ್ದನ್ನು ಅದೇ ಕಸದ ಲಾರಿಗೆ ಕೊಡುತ್ತೇವೆ” ಎನ್ನುತ್ತಾರೆ.
ಈ ಮಹಿಳೆಯರು ಈಗ ಪಿಎಂಸಿ ಈ ಕೆಲಸವನ್ನು ಖಾಸಗಿ ಕಂಪನಿಗಳಿಗೆ ಅಥವಾ ಖಾಸಗಿ ಗುತ್ತಿಗೆದಾರರಿಗೆ ನೀಡಬಹುದೆನ್ನುವ ಆತಂಕದಲ್ಲಿದ್ದಾರೆ. ಮತ್ತು ಈ ಕುರಿತು ಅವರು ಹೋರಾಟಕ್ಕೂ ಸಿದ್ಧರಿದ್ದಾರೆ – “ನಾವು ನಮ್ಮ ಕೆಲಸವನ್ನು ಯಾರಿಗೂ ಕಿತ್ತುಕೊಳ್ಳಲು ಬಿಡುವುದಿಲ್ಲ” ಎನ್ನುತ್ತಾರೆ ಆಶಾ ಕಾಂಬ್ಳೆ.
ಈ ಸಾಕ್ಷ್ಯಚಿತ್ರ, मोल (ಮೌಲ್ಯ) ಈ ಕಸ ಸಂಗ್ರಹಿಸುವ ಮಹಿಳೆಯರ ಹೋರಾಟದ ಇತಿಹಾಸವನ್ನು ಅವರದೇ ದನಿಯಲ್ಲಿ ಹೇಳುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು