ನನ್ನ ಅಜ್ಜಿ, ಭಬಾನಿ ಮಹತೋ ಅವರ ಸ್ವಾತಂತ್ರ್ಯ ಹೋರಾಟವು ತನ್ನ ದೇಶವನ್ನು ಆಂಗ್ರೇಜ್ [ಬ್ರಿಟಿಷರು] ಆಡಳಿತದಿಂದ ಮುಕ್ತಗೊಳಿಸುವ ಹೋರಾಟದೊಂದಿಗೆ ಪ್ರಾರಂಭವಾಯಿತು. ನಾವು ಕೊನೆಗೂ ಅಪೇಕ್ಷಿತ ಸ್ವಾತಂತ್ರ್ಯವನ್ನು ಸಾಧಿಸಿದೆವು. ಅಂದಿನಿಂದಲೂ ನನ್ನ ಠಾಕುಮಾ ಭಬಾನಿ ಮಹತೋ (ಮೇಲಿನ ಫೋಟೋದಲ್ಲಿ ಮಧ್ಯದಲ್ಲಿ ಕುಳಿತಿರುವವರು) ಕಷ್ಟಪಟ್ಟು ಸಂಪಾದಿಸಿದ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುತ್ತಿದ್ದಾರೆ. (ಅವರ ಬಲಭಾಗದಲ್ಲಿ ಅವರ ಸಹೋದರಿ ಊರ್ಮಿಳಾ ಮಹತೋ ಮತ್ತು ಎಡಭಾಗದಲ್ಲಿ ಅವರ ಮೊಮ್ಮಗ ಪಾರ್ಥ ಸಾರಥಿ ಮಹತೋ ಕುಳಿತಿದ್ದಾರೆ.)

2024ರ ಸಾರ್ವತ್ರಿಕ ಚುನಾವಣೆಯೂ ಇದಕ್ಕೆ ಹೊರತಾಗಿಲ್ಲ. ಅವರಿಗೆ ಈಗ ಸುಮಾರು 106 ವರ್ಷ ವಯಸ್ಸಾಗಿದೆ, ಆರೋಗ್ಯ ದುರ್ಬಲವಾಗಿದೆ, ಆದರೆ ಮತದಾನದ ಹಕ್ಕಿನ ವಿಷಯಕ್ಕೆ ಬಂದಾಗ ಅವರ ಉತ್ಸಾಹದ ಮುಂದೆ ಇವೆಲ್ಲ ಲೆಕ್ಕಕ್ಕಿಲ್ಲ. ಅವಳು ಚೆನ್ನಾಗಿ ನೋಡಬಲ್ಲರು ಮತ್ತು ಕೇಳಬಲ್ಲರು, ಆದರೆ ಕೈಗಳು ಸಾಕಷ್ಟು ಬಲವಾಗಿಲ್ಲ. ಹೀಗಾಗಿ ಅವರು ಮತ ಚಲಾಯಿಸಲು ನನ್ನ ಸಹಾಯ ಪಡೆದರು. ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಮನ್ಬಜಾರ್ 1 ಬ್ಲಾಕಿನಲ್ಲಿರುವ ಚೆಪುವಾ ಗ್ರಾಮದಲ್ಲಿ ಮೇ 25ರಂದು ಚುನಾವಣೆ ನಡೆಯಲಿದೆ. ಆದರೆ 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಚುನಾವಣಾ ಆಯೋಗದ ಹೋಮ್ ವೋಟಿಂಗ್ ಸೌಲಭ್ಯದ ಅಡಿಯಲ್ಲಿ, ಅವರು ಇಂದು (ಮೇ 18, 2024) ಚೆಪುವಾದಲ್ಲಿನ ತಮ್ಮ ಮನೆಯಲ್ಲಿ ಮತ ಚಲಾಯಿಸಿದರು.

ಮತಗಟ್ಟೆ ಅಧಿಕಾರಿಗಳಿಂದ ಅಗತ್ಯ ಅನುಮೋದನೆಯೊಂದಿಗೆ, ನಾನು ಈ ಪ್ರಕ್ರಿಯೆಯಲ್ಲಿ ಅವರಿಗೆ ಸಹಾಯ ಮಾಡಿದೆ. ಮತದಾನ ತಂಡ ಹೊರಟ ಕೂಡಲೇ ಅವರು ಹಳೆಯ ದಿನಗಳನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದರು. ಬ್ರಿಟಿಷ್ ಆಳ್ವಿಕೆಯಲ್ಲಿ ದೇಶದ ಪರಿಸ್ಥಿತಿ ಹೇಗಿತ್ತು ಎಂದು ವಿವರಿಸುತ್ತಾ ಅವರು ಕತೆ ಪ್ರಾರಂಭಿಸಿದರು ಮತ್ತು ಕ್ರಮೇಣ ಆ ಕತೆ ಇಂದಿನವರೆಗೆ ಮುಂದುವರಿಯಿತು.

ಈ ಕಥೆಯನ್ನು ಕೇಳಿದ ನಂತರ ಮತ್ತೊಮ್ಮೆ ನನಗೆ ನನ್ನ ಠಾಕುಮಾ [ತಂದೆಯ ಅಜ್ಜಿ] ಕುರಿತು ಬಹಳ ಹೆಮ್ಮೆಯೆನ್ನಿಸಿತು.

ಕ್ರಾಂತಿಕಾರಿ ಭಬಾನಿ ಮಹತೋ ಕುರಿತು ಇನ್ನಷ್ಟು ಓದಲು, ಪಿ. ಸಾಯಿನಾಥ್ ಅವರು ಬರೆದಿರುವ ʼ ಕ್ರಾಂತಿಗೆ ಕೈತುತ್ತು ನೀಡಿದ ಭವಾನಿ ಮಹತೊ ʼ ಓದಿರಿ

ಮುಖಪುಟ ಚಿತ್ರ ಕೃಪೆ ಪ್ರಣಬ್ ಕುಮಾರ್ ಮಹತೋ.

ಅನುವಾದ: ಶಂಕರ. ಎನ್. ಕೆಂಚನೂರು

Partha Sarathi Mahato

ପାର୍ଥ ସାରଥୀ ମାହାତୋ ପଶ୍ଚିମବଙ୍ଗର ପୁରୁଲିଆ ଜିଲ୍ଲାରେ ଜଣେ ଶିକ୍ଷକ ଭାବରେ କାର୍ଯ୍ୟରତ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Partha Sarathi Mahato
Translator : Shankar N Kenchanuru

Shankar N Kenchanuru is a poet and freelance translator. He can be reached at [email protected]

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N Kenchanuru