ಕಳೆದ 23 ವರ್ಷಗಳಿಂದ,
47 ವರ್ಷದ ಪ್ರಫುಲ್ಲಾ ದೇಬನಾಥ್ ಅವರು ಸಾಮಾನ್ಯ ಸಮಾಬೆ ಕೃಶಿ ಉನ್ನಯನ್ ಸಮಿತಿ ಮಾರ್ಕೆಟ್ ನಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ (ಈಗ ಲಾಕ್ಡೌನ್ ನಿಂದಾಗಿ ಮುಚ್ಚಲಾಗಿದೆ). ಅವರು ಗ್ರಾಹಕರ ಮನೆಗಳಿಗೆ ತಲುಪಿಸಲು ಚೀಲಗಳನ್ನು ಒಯ್ಯುತ್ತಾರೆ ಮತ್ತು ವಾಹನಗಳಿಂದ ಅಂಗಡಿಗಳಿಗೆ ಸರಕುಗಳನ್ನು ಸಾಗಿಸುತ್ತಾರೆ. ಮತ್ತು ಅವರು ಇಡೀ ಮಾರುಕಟ್ಟೆಯಲ್ಲಿನ ಕಸ ಗೂಡಿಸುತ್ತಾರೆ. ಇದಕ್ಕಾಗಿ ಅವರು ಪ್ರತಿ ತರಕಾರಿ ವ್ಯಾಪಾರಿಗಳಿಂದ ದಿನಕ್ಕೆ 2 ರೂ. ಮತ್ತು ಇತರ ಅಂಗಡಿಯವರಿಂದ ದಿನಕ್ಕೆ 1 ರೂ. ಪಡೆಯುತ್ತಾರೆ. ಆದರೆ ಈಗ,
ಮಾರುಕಟ್ಟೆಯು ದತ್ತಾ ಪಾರಾದಲ್ಲಿನ ಕ್ಷೇತ್ರಕ್ಕೆ ಸ್ಥಳಾಂತರಗೊಂಡಿದ್ದರಿಂದ, ಅವರ ಕೇವಲ ಗಳಿಕೆ ಈಗ ಅರ್ಧದಷ್ಟು ಕಡಿಮೆಯಾಗಿದೆ, ಆದರೂ ಕೆಲವು ತರಕಾರಿ ವ್ಯಾಪಾರಿಗಳು ದೇಬನಾಥ್ಗೆ ಉಪಾಹಾರ ಮತ್ತು ಊಟಕ್ಕೆ ವ್ಯವಸ್ಥೆ ಮಾಡುತ್ತಾರೆ.”ನಾನು ಸ್ವಚ್ಚಗೊಳಿಸದಿದ್ದರೆ, ಮಾರುಕಟ್ಟೆ ಕೊಳಕು ಆಗುತ್ತದೆ"
ಎಂದು ಅವರು ಹೇಳುತ್ತಾರೆ.
"ನಾನು ಮಾರುಕಟ್ಟೆಯನ್ನು ಸ್ವಚ್ಚಗೊಳಿಸಿದರೆ ಎಲ್ಲರಿಗೂ ನನ್ನ ಹೆಸರು ಗೊತ್ತಾಗುತ್ತದೆ. ನನ್ನಂತೆ ಯಾರೂ ಕೆಲಸ ಮಾಡುವುದಿಲ್ಲ! " ಎಂದು ಅವರು ಹೇಳುತ್ತಾರೆ. ‘ಬಲಕ್ಕೆ: ಮಾರುಕಟ್ಟೆ ಕೆಲವೇ ಗಂಟೆಗಳವರೆಗೆ ತೆರೆದಿರುವುದರಿಂದ,
ಅನೇಕರು ಕಡಿಮೆ ಬೆಲೆಗೆ ಆಶಿಸುತ್ತಾ ಕೊನೆಯ ಗಳಿಗೆಯಲ್ಲಿ ಖರೀದಿಸುತ್ತಾರೆ. 50 ವರ್ಷದ ಖೋಕಾ ರಾಯ್ ವೃತ್ತಿಯಲ್ಲಿ ಮರಗೆಲಸದವರಾಗಿದ್ದು, ಇದರ ಜೊತೆಗೆ ಅವರು ಮನೆಯಿಂದ ಒಂದು ಸಣ್ಣ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದರು ಮತ್ತು ಲಾಕ್ಡೌನ್ನಿಂದಾಗಿ ಈಗ ಅವರು ಮಾರುಕಟ್ಟೆಗೆ ಹೋಗಿ ಮಾರುತ್ತಿದ್ದಾರೆ. ದಿನಕ್ಕೆ 400-500 ರೂ.ಗಳವರೆಗಿನ ಅವರ ಆದಾಯ ಈಗ 200-250.ರೂ.ಗಳಿಗೆ ಕುಸಿದಿದೆ.
"ಈಗ ಹೊರಗೆ ಪೊಲೀಸರು ಗಸ್ತು ತಿರುಗುವುದರಿಂದಾಗಿ,
ಜನರು ತಮ್ಮ ಮನೆಗಳನ್ನು ಬಿಟ್ಟು ಹೊರಗೆ ಬರುವುದಿಲ್ಲ. ಈಗ ನೀವೇ ಹೇಳಿ ನಾವು ತರಕಾರಿಗಳನ್ನೂ ಹೇಗೆ ಮಾರಾಟ ಮಾಡಬೇಕು?"
ಎಂದು ಅವರು ಪ್ರಶ್ನಿಸುತ್ತಾರೆ.