“ನಾನು ಇದಕ್ಕೆ ಗೋಲ್ಡ್ ಬಾರ್ಡರ್ ಇಟ್ಟು ನಂತರ ನೆರಿಗೆ ಇಡುತ್ತೇನೆ. ಜೊತೆಗೆ ತೋಳಿನ ಬಳಿ ಒಂದಷ್ಟು ಕಟೌಟ್ ಕೂಡ ಸೇರಿಸಬಹುದು. ಆದರೆ ಅದಕ್ಕೆ 30 ರೂಪಾಯಿ ಹೆಚ್ಚಿಗೆ ಕೊಡಬೇಕು.”
ಇವು ಶಾರದ ಮಕ್ವಾನಾ ತನ್ನ ಗ್ರಾಹಕರೊಂದಿಗೆ ನಡೆಸುವ ವಾಡಿಕೆಯ ಮಾತುಕತೆಗಳು. ಅವರಲ್ಲಿ ಕೆಲವರು ಶಾರದ ತೋಳಿನ ಉದ್ದ, ರವಿಕೆ ಕಟ್ಟುವ ಲೇಸ್ಗಳ ದಾರದ ತುದಿಯ ಕುಚ್ಚಿನ ಭಾರದ ವಿಷಯದಲ್ಲಿ ಬಹಳ ಅಚ್ಚುಕಟ್ಟು ಎನ್ನುತ್ತಾರೆ. “ನಾನು ಬಟ್ಟೆಯಿಂದ ಹೂಗಳನ್ನು ತಯಾರಿಸಿ ಅಲಂಕಾರಕ್ಕಾಗಿ ಬಳಸಬಲ್ಲೆ” ಎನ್ನುತ್ತಾರೆ ಶಾರದ.ತಮ್ಮ ಕೌಶಲದ ಕುರಿತು ಹೆಮ್ಮೆಯಿಂದ ಮಾತನಾಡುವ ಅವರು ತಾನು ಅದನ್ನು ಹೇಗೆ ಮಾಡುತ್ತೇನೆ ಎನ್ನುವುದನ್ನು ತೋರಿಸಿದರು.
ಶಾರದ ಮತ್ತು ಅವರಂತಹ ಇತರ ಸ್ಥಳೀಯ ಸೀರೆ ರವಿಕೆ ಟೈಲರುಗಳು ಕುಶಾಲಢ ಮಹಿಳೆಯರ ನೆಚ್ಚಿನ ಫ್ಯಾಷನ್ ಸಲಹೆಗಾರರು. ಸೀರೆಗಳನ್ನು ಧರಿಸುವ ಎಲ್ಲಾ ವಯಸ್ಸಿನ ಬಹುತೇಕ ಎಲ್ಲಾ ಯುವತಿಯರು ಮತ್ತು ಮಹಿಳೆಯರಿಗೆ, 80 ಸೆಂ.ಮೀ ಬಟ್ಟೆಯನ್ನು ವಿವಿಧ ರೀತಿಯಲ್ಲಿ ರೀತಿ ವಿನ್ಯಾಸಗೊಳಿಸಬೇಕು.
ಸಾರ್ವಜನಿಕ ಸಭೆಗಳಲ್ಲಿ ಮಹಿಳೆಯರಿಗೆ ಧ್ವನಿ ಸಿಗದ ಆಳವಾದ ಪಿತೃಪ್ರಧಾನ ಸಮಾಜದಲ್ಲಿ, ಮತ್ತು ಜನನದ ಸಮಯದಲ್ಲಿ ಲಿಂಗ ಅನುಪಾತವು 1,000 ಪುರುಷರಿಗೆ 879 ಮಹಿಳೆಯರು ಎನ್ನುವುದು ಆತಂಕಕಾರಿಯಾಗಿದೆ (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ, ಎನ್ಎಫ್ಎಚ್ಎಎಸ್ -5), ಮಹಿಳೆಯರು ತಮ್ಮ ಉಡುಪುಗಳ ಮೇಲೆ ಕಾಳಜಿ ವಹಿಸುತ್ತಾರೆ.
ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಈ ಸಣ್ಣ ಪಟ್ಟಣವು ಟೈಲರಿಂಗ್ ಅಂಗಡಿಗಳಿಂದ ತುಂಬಿದೆ. ಇಲ್ಲಿನ ಪುರುಷರ ಬಟ್ಟೆಗಳನ್ನು ಹೊಲಿಯುವ ದರ್ಜಿಗಳನ್ನು ಶರ್ಟ್ ಮತ್ತು ಪ್ಯಾಂಟ್ ಹೊಲಿಗೆ ಮಾಡುವವರು ಮತ್ತು ಮದುಮಗನಿಗೆ ಕುರ್ತಾ ಮತ್ತು ಕೋಟ್ಗಳಂತಹ ಮದುವೆಯ ಉಡುಪನ್ನು ತಯಾರಿಸುವವರೆಂದು ವಿಂಗಡಿಸಲಾಗಿದೆ. ಇವೆರಡೂ ಏಕತಾನತೆಯ ವ್ಯವಹಾರಗಳಾಗಿವೆ, ಇವುಗಳ ಬಣ್ಣಗಳು ಕೆಲವೊಮ್ಮೆ ತಿಳಿ ಗುಲಾಬಿ ಅಥವಾ ಕೆಂಪು ಬಣ್ಣವನ್ನು ಮೀರಿ ಹೋಗುವುದಿಲ್ಲ.










