ಲಕ್ಷಿಮಾ ದೇವಿಗೆ ಆ ಘಟನೆ ನಡೆದ ದಿನಾಂಕ ನೆನಪಿಲ್ಲ, ಆದರೆ ಆ ಚಳಿಗಾಲದ ರಾತ್ರಿಯಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ಕಣ್ಣಿಗೆ ಕಟ್ಟುವಂತೆ ನೆನಪಿದೆ. “ಜೋಳದ ಬೆಳೆ ಮುಂಗಾಲಿಗಿಂತ ಸ್ವಲ್ಪ ಮೇಲಕ್ಕೆ ಬೆಳೆದಿತ್ತು,” ನೀರು ಒಡೆತ ಕಾಣಿಸಿಕೊಳ್ಳುತ್ತಿದ್ದಂತೆ ಅವರು ಹೆರಿಗೆಗೆ ಸಜ್ಜಾದರು. “ಅದು ಅಂದಾಜು ಡಿಸೆಂಬರ್ ಅಥವಾ ಜನವರಿ ಇರಬಹುದು [2018/19],” ಎಂದು ಅವರು ಹೇಳಿದರು.
ಬಾರಾಗಾಂವ್ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲು ಅವರ ಮನೆಯವರು ಟೆಂಪೋವನ್ನು ಬಾಡಿಗೆಗೆ ತರಿಸಿದರು. ಉತ್ತರಪ್ರದೇಶದ ವಾರಣಸಿ ಜಿಲ್ಲೆಯ ಅಶ್ವಾರಿ ಗ್ರಾಮದಲ್ಲಿರುವ ಅವರ ಮನೆಯಿಂದು ಆರು ಕಿಲೋಮೀಟರ್ ದೂರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. “ನಾವು ಆರೋಗ್ಯ ಕೇಂದ್ರವನ್ನು ತಲುಪಿದಾಗ ನನಗೆ ಅತೀವ ನೋವು ಕಾಣಿಸಿಕೊಂಡಿತ್ತು,” ಎಂದು 30 ವರ್ಷ ಪ್ರಾಯದ ಲಕ್ಷಿಮಾ ಹೇಳಿದರು. ಅವರ 5 ರಿಂದ 11 ವರ್ಷ ಪ್ರಾಯದ ನಡುವಿನ ಮೂವರು ಹಿರಿಯ ಮಕ್ಕಳಾದ ರೇಣು, ರಾಜು ಮತ್ತು ರೇಶ್ಮಾ ಮನೆಯಲ್ಲಿದ್ದರು. “ಆಸ್ಪತ್ರೆಯ ಸಿಬ್ಬಂದಿ ನನ್ನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು. ಆತ ನಾನು ಗರ್ಭಿಣ ಅಲ್ಲ, ನನ್ನ ಹೊಟ್ಟೆ ಉಬ್ಬಿಕೊಂಡಿರುವುದು ಕಾಯಿಲೆಯ ಕಾರಣ ಎಂದ,”
ಲಕ್ಷಿಮಾ ಅವರ ಅತ್ತೆ ಹಿರಾಮಣಿಯವರು ದಾಖಲು ಮಾಡಿಕೊಳ್ಳುವಂತೆ ವಿನಂತಿಸಿದರು, ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ನಿರಾಕರಿಸಿದರು. ಅಂತಿಮವಾಗಿ ಲಕ್ಷಿಮಾ ಇಲ್ಲಿಯೇ ಮಗುವಿಗೆ ಜನ್ಮನೀಡಲಿದ್ದಾಳೆ, ಅವಳಿಗೆ ನೆರವಾಗುವುದಾಗಿ ಹಿರಾಮಣಿ ಹೇಳಿದರು. “ನನ್ನನ್ನು ಬೇರೆ ಕಡೆ ಸಾಗಿಸಲು ನನ್ನ ಪತಿ ಆಟೋ ಹುಡುಕತೊಡಗಿದರು,” ಎಂದು ಲಕ್ಷಿಮಾ ಹೇಳಿದರು. “ಆದರೆ ಆಗ ನನಗೆ ಬಹಳ ನಿಶ್ಯಕ್ತಿ ಇದ್ದ ಕಾರಣ ಅಲ್ಲಿಂದ ಚಲಿಸಲಾಗಲಿಲ್ಲ. ಆರೋಗ್ಯ ಕೇಂದ್ರದ ಹೊರಗಡೆ ಇದ್ದ ಮರದ ಕೆಳಗಡೆ ನಾನು ಕುಳಿತುಕೊಂಡೆ,”
60 ವರ್ಷ ಪ್ರಾಯದ ಹಿರಾಮಣಿ ಅವರು ಲಕ್ಷಿಮಾ ಅವರ ಪಕ್ಕದಲ್ಲಿ ಕುಳಿತುಕೊಂಡು ಆಕೆಯ ಕೈ ಹಿಡಿದು ಉಸಿರಾಟಕ್ಕೆ ನೆರವಾಗುತ್ತಿದ್ದರು. ಒಂದು ಗಂಟೆಯ ನಂತರ, ಮಧ್ಯರಾತ್ರಿ ಹತ್ತಿರವಾಗುವ ಹೊತ್ತಿಗೆ ಲಕ್ಷಿಮಾ ಮಗುವಿಗೆ ಜನ್ಮ ನೀಡಿದರು. ಅದು ಕಗ್ಗತ್ತಲು ಮತ್ತು ವಿಪರೀತಿ ಚಳಿಯಿಂದ ಕೂಡಿದ ರಾತ್ರಿಯಾಗಿತ್ತು ಎಂಬುದನ್ನು ಲಕ್ಷಿಮಾ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ. ಅಲ್ಲಿ ಏನು ನಡೆಯಿತು ಎಂಬುದನ್ನು ಊಹಿಸಿಕೊಳ್ಳುವಲ್ಲಿ ಲಕ್ಷಿಮಾ ಬಳಲಿದ್ದರು. “ಆ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ನನ್ನನ್ನು ಒಳಸೇರಿಸಿಕೊಂಡರು, ಮರುದಿನ ನನ್ನನ್ನು ಬಿಡುಗಡೆಗೊಳಿಸಿದರು,” ಎಂದು ಹೇಳಿದ ಅವರು, ಆ ರಾತ್ರಿ ತಾನು ಎಷ್ಟು ನಿಶ್ಯಕ್ತಿ ಮತ್ತು ಬಳಲಿದ್ದೆ ಎಂಬುದನ್ನು ಅವರು ನೆನಪಿಸಿಕೊಂಡರು, "ನಾನು ಬಯಸಿದ ಸಂದರ್ಭದಲ್ಲಿ ಅವರು ಗಮನಹರಿಸಿರುತ್ತಿದ್ದರೆ, ನನ್ನ ಮಗು ಬದುಕಿರುತ್ತಿತ್ತು,”
ಲಕ್ಷಿಮಾ ಅವರು ಮುಸಾಹರ್ ಸಮುದಾಯಕ್ಕೆ ಸೇರಿದವರು. ಉತ್ತರ ಪ್ರದೇಶದಲ್ಲಿ ಅತ್ಯಂತ ಸಮಾಜದ ಅಂಚಿನಲ್ಲಿರುವ ಮತ್ತು ಬಡ ದಲಿತ ಗುಂಪಗೆ ಸೇರಿದ ಮುಸಾಹರ ಸಮುದಾಯ ಹಲವಾರು ರೀತಿಯಲ್ಲಿ ತಾರತಮ್ಯವನ್ನು ಎದುರಿಸುತ್ತಿದೆ. “ನಮ್ಮಂಥ ಜನರು ಆಸ್ಪತ್ರೆಗಳಿಗೆ ಹೋದರೆ, ನಮ್ಮನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ,” ಎಂದು ಹೇಳಿದರು.
ಆ ರಾತ್ರಿ ಅವರು ಸ್ವೀಕರಿಸಿದ ಚಿಕಿತ್ಸೆ, ಅಥವಾ ಅದರಲ್ಲಿನ ಕೊರತೆ ಎಂಬುದು ಅವರಿಗೆ ಹೊಸತಾಗಿರಲಿಲ್ಲ, ಅಥವಾ ಅವರೊಬ್ಬರಿಗೆ ಮಾತ್ರವಾಗಿರಲಿಲ್ಲ.
ಅಶ್ವಾರಿಯಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ಮುಸಾಹರ್ ಬಸ್ತಿಯ ದಲ್ಲಿಪುರ್ ನಲ್ಲಿರುವ 36 ವರ್ಷದ ನಿರ್ಮಲಾ ಕೆಲಸದಲ್ಲಿ ಯಾವ ರೀತಿಯ ತಾರತಮ್ಯ ಮಾಡಲಾಗುತ್ತಿದೆ ಎಂಬುದನ್ನು ವಿವರಿಸಿದರು. “ನಾವು ಆಸ್ಪತ್ರೆಯನ್ನು ಪ್ರವೇಶಿಸಿದಾಗ ಅವರು ನಮಗೆ ಚಿಕಿತ್ಸೆ ನೀಡಲು ಮುಜುಗರದ ಭಾವದಿಂದ ಹಿಂದೆಮುಂದೆ ನೋಡುತ್ತಾರೆ,” ಎಂದರು. “ಸಿಬ್ಬಂದಿ ಅನಗತ್ಯವಾಗಿ ಹಣ ಕೇಳುತ್ತಾರೆ. ನಾವು ಪ್ರವೇಶಿಸಬಾರದು [ಸೌಲಭ್ಯ ಪಡೆಯಲು] ಎಂದು ತಮ್ಮಿಂದಾದ ರೀತಿಯಲ್ಲೆಲ್ಲ ಅಡ್ಡಿ ಮಾಡುತ್ತಿದ್ದರು, ನಾವು ಒಳಗೆ ಪ್ರವೇಶಿಸಿದರೆ, ನಮ್ಮನ್ನು ನೆಲದಲ್ಲಿ ಕುಳಿತುಕೊಳ್ಳಲು ಸೂಚಿಸುತ್ತಿದ್ದರು. ಬೇರೆಯವರಿಗೆ ಕುಳಿತುಕೊಳ್ಳಲು ಕುರ್ಚಿ ನೀಡುತ್ತಾರೆ ಮತ್ತು ಗೌರವದಿಂದ ಮಾತನಾಡಿಸುತ್ತಾರೆ,”
ಇದರಿಂದಾಗಿ ಮುಸಾಹರ್ ಮಹಿಳೆಯರು ಆಸ್ಪತ್ರೆಗೆ ಹೋಗಲು ಇಷ್ಟಡುತ್ತಿಲ್ಲ, ಎಂದು ವಾರಣಸಿ ಮೂಲದ ಮಾನವ ಹಕ್ಕುಗಳ ಬಗ್ಗೆ ಜನ ಜಾಗ್ರತಾ ಸಮಿತಿಯ ಹೋರಾಟಗಾರ 42 ವರ್ಷದ ಮಂಗಳ ರಾಜ್‌ಭಾರ್ ಹೇಳುತ್ತಾರೆ. “ಆಸ್ಪತ್ರೆಗೆ ಹೋಗಲು ನಾವು ಅವರ ಮನವೊಲಿಸಬೇಕಾಗಿತ್ತು, ಹೆಚ್ಚಿನವರು ಮನೆಯಲ್ಲೇ ಮಗುವನ್ನು ಹೆರಲು ಬಯಸುತ್ತಿದ್ದರು,” ಎಂದರು.
ಎನ್‌ಎಫ್‌ಎಚ್‌ಎಸ್-5 ಪ್ರಕಾರ ಉತ್ತರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ಶೇ. 81 ರಷ್ಟು ಮಹಿಳೆಯರು ಹೆರಿಗೆಗಾಗಿ ವೈದ್ಯಕೀಯ ಸೌಲಭ್ಯ ಬಯಸುತ್ತಾರೆ-ಇದು ರಾಜ್ಯದ ಒಟ್ಟು ಅಂಕಿಅಂಶಗಳ 2.4ರಷ್ಟು ಕಡಿಮೆ. ಇದು ಪರಿಶಿಷ್ಟ ಜಾತಿಯಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆ ಇದೆ
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಪ್ರಕಾರ ಪ್ರಕಾರ ಉತ್ತರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ಶೇ. 81 ರಷ್ಟು ಮಹಿಳೆಯರು ಹೆರಿಗೆಗಾಗಿ ವೈದ್ಯಕೀಯ ಸೌಲಭ್ಯ ಬಯಸುತ್ತಾರೆ-ಇದು ರಾಜ್ಯದ ಒಟ್ಟು ಅಂಕಿಅಂಶಗಳ 2.4ರಷ್ಟು ಕಡಿಮೆ.ಇದು ಪರಿಶಿಷ್ಟ ಜಾತಿಯಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆ ಇದೆ-ಮೊದಲ 28 ದಿನ ಪೂರ್ಣಗೊಳಿಸಿದ ಶಿಶುಗಳ ಸಾವಿನ ಪ್ರಮಾಣದಲ್ಲಿ ಏರಿಕೆ ಹೆಚ್ಚು-ಇದು ಇಡೀ ರಾಜ್ಯಕ್ಕೆ (35.7) ಹೊಲಿಸಿದರೆ ಪರಿಶಿಷ್ಟ ಜಾತಿ (41.6) ಯಲ್ಲಿ ಹ2022ರ ಜನವರಿಯಲ್ಲಿ ರಾಜ್‌ಭಾರ್ ಮುಸಾಹರ್‌ನ ಏಳು ಬಸ್ತಿಗಳಲ್ಲಿ ನಡೆಸಿದ ಸಮೀಕ್ಷೆಗಳಲ್ಲಿ 64 ಮಕ್ಕಳ ಜನನದಲ್ಲಿ 35 ಜನನ ಮನೆಯಲ್ಲೇ ನಡೆದಿತ್ತು.
2020ರಲ್ಲಿ ಲಕ್ಷಿಮಾ ಅವರು ಕಿರಣ್ ಜನನಕ್ಕಾಗಿ ಈ ಆಯ್ಕೆ ಮಾಡಿದ್ದರು. “ಈ ಹಿಂದೆ ಏನು ನಡೆದಿತ್ತು ಎಂಬುದನ್ನು ನಾನು ಮರೆತಿಲ್ಲ. ಮತ್ತೆ [ಪಿಎಚ್‌ಸಿಗೆ] ಹಿಂದಿರುಗುವ ಪ್ರಶ್ನೆಯೇ ಇಲ್ಲ,” ಎನ್ನುತ್ತಾರೆ. “ಆದ್ದರಿಂದ ನಾನು ಆಶಾ ಕಾರ್ಯಕತ್ತೆಯೊಬ್ಬರಿಗೆ ರೂ.500 ನೀಡಿದೆ. ಆಕೆ ನನ್ನ ಮನೆಗೆ ಬಂದು ಮಗುವಿನ ಹೆರಿಗೆ ಮಾಡಿಸಿದಳು, ಆಕೆ ಕೂಡ ದಲಿತೆ,”
ಅವರಂತೆಯೇ ರಾಜ್ಯದಲ್ಲಿ ಅನೇಕರು ಈ ರೀತಿ ಆಸ್ಪತ್ರೆಯಲ್ಲಿ ಅಥವಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ತಾರತಮ್ಯಕ್ಕೊಳಗಾಗಿರುತ್ತಾರೆ. ನವೆಂಬರ್ 2021ರಲ್ಲಿ ಆಕ್ಸ್‌ಫ್ಯಾಮ್ ಇಂಡಿಯಾ ಉತ್ತರ ಪ್ರದೇಶದಲ್ಲಿ ನಡೆಸಿದ ರೋಗಿಗಳ ಹಕ್ಕಿನ ಕುರಿತ ಕ್ಷಿಪ್ರ ಸಮೀಕ್ಷೆಯಲ್ಲಿ 472 ಜನರಲ್ಲಿ 52.44 ಪ್ರತಿಶತ ಜನರು ಆರ್ಥಿಕ ಸ್ಥಾನಮಾನದಲ್ಲಿ ತಾರತಮ್ಯಕ್ಕೊಳಗಾದವರು. 14.34 ರಷ್ಟು ಜನರು ಧರ್ಮದ ಆಧಾರದಲ್ಲಿ ತಾರತಮ್ಯಕ್ಕೊಳಗಾದರೆ, 18.68 ಪ್ರತಿಶತ ಜನ ಜಾತಿ ಆಧಾರದ ಮೇಲೆ ತಾರತಮ್ಯಕ್ಕೊಳಗಾಗಿದ್ದಾರೆ.
ಈ ರೀತಿಯ ತಾರತಮ್ಯ ದೂರಗಾಮಿ ಪರಿಣಾಮವನ್ನು ಬೀರಿದೆ-ವಿಶೇಷವಾಗಿ ರಾಜ್ಯದಲ್ಲಿ ವಿಶೇಷವಾಗಿ ಆರೋಗ್ಯ ನ್ಯಾಯ ನೀಡುವಾಗ 20.7 ಪ್ರತಿಶತ ಪರಿಶಿಷ್ಟ ಜಾರಿ ಮತ್ತು 19.3 ಪ್ರತಿಶತ ಮುಸ್ಲಿಮರಿಗೆ ಪರಿಣಾಮವಾಗಿದೆ. (2011ರ ಸಮೀಕ್ಷೆ).
ಈ ಕಾರಣಕ್ಕಾಗಿಯೇ ಕೋವಿಡ್-19 ಉತ್ತರ ಪ್ರದೇಶದಲ್ಲಿ ಹಬ್ಬಿದಾಗ ಅನೇಕರು ಕೊರೋನಾ ವೈರಸ್ ಪರೀಕ್ಷೆಯಲ್ಲಿ ಪಾಲ್ಗೊಂಡಿರಲಿಲ್ಲ. “ಕಳೆದ ವರ್ಷ ಅನೇಕ ಗ್ರಾಮದಲ್ಲಿ ಅನೇಕರು ಜ್ಬರಕ್ಕೆ ತುತ್ತಾಗಿದ್ದರು, ಆದರೆ ನಾವು ಮನೆಯಲ್ಲಿಯೇ ಉಳಿದುಕೊಂಡೆವು,” ಎಂದು 2021 ರ ಎರಡನೇ ಅಲೆಯನ್ನು ನೆನಪಿಸಿಕೊಂಡು ನಿರ್ಮಲಾ ನುಡಿದರು. “ನೀವು ಈಗಾಗಲೇ ವೈರಸ್‌ನಿಂದ ಆತಂಕಗೊಂಡಿರುವಾಗ ಅವಮಾನಕ್ಕೆ ಒಳಗಾಗುವುದನ್ನು ಯಾರು ಬಯಸುತ್ತಾರೆ?”
ಆದರೆ ಚಾಂದೌಳಿ ಜಿಲ್ಲೆಯ ಅಮ್ಧಾಹ ಚರ್ಣಾಪುರ ಗ್ರಾಮದ 55 ವರ್ಷದ ಸಲಿಮನ್ 2021ರ ಮಾರ್ಚ್‌ನಲ್ಲಿ ಕಾಯಿಲೆಗೆ ತುತ್ತಾದಾಗ ಮನೆಯಲ್ಲಿ ಉಳಿಯಲಿಲ್ಲ. “ನನಗೆ ಟೈಫಾಯ್ಡ್ ಕಾಣಿಸಿಕೊಂಡಿತ್ತು”, ಎಂದ ಅವರು, “ಆದರೆ ನಾನು ರಕ್ತಪರೀಕ್ಷೆಯ ಲ್ಯಾಬ್ (ಪೆಥಾಲಜಿ)ಗೆ ಹೋದಾಗ ಅಲ್ಲಿರುವ ವ್ಯಕ್ತಿ ರಕ್ತವನ್ನು ತೆಗೆಯಲು ಸೂಜಿಯನ್ನು ಚುಚ್ಚುವಾಗ ನನ್ನಿಂದ ಆದಷ್ಟು ದೂರ ಇರಲು ಯತ್ನಿಸುತ್ತಿದ್ದ. ಆತ ತನ್ನ ಕೈಯನ್ನು ಎಳೆಯುತ್ತಿದ್ದ. ಇದಕ್ಕಿಂತ ಮೊದಲು ನಿನ್ನಂಥ ಹಲವಾರು ವ್ಯಕ್ತಿಗಳನ್ನು ಕಂಡಿರುವೆ ಎಂದು ಆತನಿಗೆ ಹೇಳಿದೆ,”
ಲ್ಯಾಬ್ ಸಹಾಯಕನ ವರ್ತನೆ ಬಗ್ಗೆ ಸಲಿಮನ್‌ಗೆ ಬಹಳ ಚೆನ್ನಾಗಿ ಗೊತ್ತಿತ್ತು. “ತಬ್ಲಿಗಿ ಜಮಾತ್ ಘಟನೆಯ ಕಾರಣ ಇದು ನಡೆಯಿತು, ಏಕೆಂದರೆ ನಾನೊಬ್ಬ ಮುಸ್ಲಿಮ್,” ಎಂದು ಅವರು 2020ರ ಘಟನೆಯನ್ನು ಆಧಾರವಾಗಿಟ್ಟುಕೊಂಡು ಹೇಳಿದರು. ಆ ಸಂದರ್ಭದಲ್ಲಿ ಧಾರ್ಮಿಕ ಗುಂಪಿನ ಸದಸ್ಯರು ದಿಲ್ಲಿಯ ನಿಜಾಮುದ್ದೀನ್ ಮಾರ್ಕಜ್ ಧಾರ್ಮಿಕ ಸಭೆ ನಡೆಸಲು ಜಮಾಯಿಸಿದ್ದರು. ನಂತರ ಅವರಲ್ಲಿ ನೂರಾರು ಮಂದಿ ಕೋವಿಡ್-19 ರೋಗ ಲಕ್ಷಣ ಹೊಂದಿರುವುದು ಕಂಡು ಬಂತು ಬಳಿಕ ಆ ಕಟ್ಟಡವನ್ನು ಹಾಟ್‌ಸ್ಪಾಟ್ ಎಂದು ಘೋಷಿಸಲಾಯಿತು. ಆ ನಂತರ ವೈರಸ್ ಹರಡಲು ಮುಸ್ಲಿಮರೇ ಕಾರಣ ಎಂದು ಆಪಾದನೆಯ ಅಭಿಯಾನ ಮಾಡಲಾಯಿತು. ಇದು ಉತ್ತರ ಪ್ರದೇಶ ಮತ್ತು ದೇಶಾದ್ಯಂತ ಮುಸ್ಲಿಮರಿಗೆ ಹಲವು ರೀತಿಯ ಅವಮಾನಗಳನ್ನು ಎದುರಿಸಬೇಕಾಯಿತು.
ಅಂಥ ಪೂರ್ವಾಗ್ರಹಪೀಡಿತ ಚಿಕಿತ್ಸೆಗಳನ್ನು ತಡೆಯಲು 43 ವರ್ಷದ ಕಾರ್ಯಕರ್ತೆ ನೀತು ಸಿಂಗ್, ತಾವು ಭೇಟಿ ನೀಡಿದ ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ಈ ಅಂಶದ ಗಮನ ಸೆಳೆದಿರುವುದಾಗಿ ಹೇಳಿದ್ದಾರೆ. “ನಾನು ಇಲ್ಲೇ ಸುತ್ತ ಇರುತ್ತೇನೆಂಬುದು ಸಿಬ್ಬಂದಿಗೆ ಗೊತ್ತು, ಇದರಿಂದಾಗಿ ಅವರು ರೋಗಿಗಳ ವರ್ಗ, ಜಾತಿ ಅಥವಾ ಧರ್ಮವನ್ನು ನೋಡದೆ ಚಿಕಿತ್ಸೆ ನೀಡುತ್ತಾರೆ,” ಎಂದು ಅವರು ವಿವರಿಸಿದರು. “ಇಲ್ಲವಾದಲ್ಲಿ ತಾರತಮ್ಯ ಅಪಾರ ಪ್ರಮಾಣದಲ್ಲಿ ನಡೆಯುತ್ತದೆ,” ಎಂದು ಸಹಯೋಗ ಎನ್‌ಜಿಒ ಜತೆ ಇರುವ ಸಿಂಗ್ ಹೇಳಿದರು. ಅಮ್ಧಾಹ ಚರ್ಣಾಪುರದಲ್ಲಿರುವ ನೌಗ್ರಹ ಬ್ಲಾಕ್‌ನಲ್ಲಿರುವ ಮಹಿಳಾ ಆರೋಗ್ಯದ ಪ್ರಕರಣಗಳ ಬಗ್ಗೆ ಕೆಲಸ ಮಾಡುತ್ತಾರೆ.
ಸಲಿಮನ್ ಅಪಾರ ಅನುಭವಗಳನ್ನು ಕಂಡಿದ್ದಾರೆ. 2021ರ ಫೆಬ್ರವರಿಯಲ್ಲಿ ಅವರ ಮಗಳು 22 ವರ್ಷದ ಶಮ್ಸುನಿಸಾ ಹೆರಿಗೆಯ ಸಂದರ್ಭದಲ್ಲಿ ಸಂಕಷ್ಟಗಳನ್ನು ಎದುರಿಸಿದ್ದರು. “ರಕ್ತ ಸ್ರಾವ ನಿಲ್ಲುತ್ತಿಲ್ಲ. ಆಕೆ ದುರ್ಬಲಗೊಂಡಿದ್ದಳು,” ಎನ್ನುತ್ತಾರೆ ಸಲಿಮನ್. “ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಆಕೆಯನ್ನು ನೌಗರ್ ನಗರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಸೂಚಿಸಿದರು,”
ನೌಗರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಮ್ಸುನಿಸಾ ಅವರನ್ನು ಪರೀಕ್ಷೆ ಮಾಡುತ್ತಿದ್ದ ಸಹಾಯಕ ಸೂಲಗಿತ್ತಿ ನರ್ಸ್ ಅವಳ ಒಂದು ಹೊಲಿಗೆಯನ್ನು ಹಾನಿ ಮಾಡಿದಳು. “ನಾನು ನೋವಿನಲ್ಲಿ ಚೀರಾಡಿದೆ,” ಎಂದು ಶಮ್ಸುನಿಸಾ ಹೇಳಿದರು. “ನನಗೆ ಹೊಡೆಯಲು ಆಕೆ ತನ್ನ ಕೈಯನ್ನು ಎತ್ತಿದಳು, ಆದರೆ ನನ್ನ ಅತ್ತೆ ಆಕೆಯನ್ನು ಹಿಡಿದು ತಡೆದರು,”
ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಆಕೆಗೆ ಆರೈಕೆ ನೀಡಲು ನಿರಾಕರಿಸಿದರು ಮತ್ತು ಬೇರೆ ಆಸ್ಪತ್ರೆ ನೋಡಿಕೊಳ್ಳುವಂತೆ ಮನೆಯವರಿಗೆ ಸೂಚಿಸಿದರು. “ನಾವು ನೌಗರ್‌ನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ಹೋದೆವು, ಅಲ್ಲಿ ನಮಗೆ ವಾರಣಸಿಗೆ ಹೋಗಲು ಸೂಚಿಸಿದರು,” ಎನ್ನುತ್ತಾರೆ ಸಲಿಮನ್. “ನನಗೆ ಆಕೆಯದ್ದೇ ಚಿಂತೆ, ರಕ್ತ ಸ್ರಾವ ನಿಲ್ಲುತ್ತಿಲ್ಲ ಮತ್ತು ಹೆರಿಗೆಯಾಗಿ ಒಂದು ದಿನ ಕಳೆದರೂ ನಮಗೆ ಆಕೆಗೆ ಚಿಕಿತ್ಸೆ ನೀಡಲಾಗಲಿಲ್ಲ,”
ಒಂದೇ ದಿನ ಕುಟುಂವು ದಾಲ್ ಮತ್ತು ತರಕಾರಿ ಅಡುಗೆ ಮಾಡುವುದನ್ನು ನಿಲ್ಲಿಸಿತು. 'ಅನ್ನ ಮತ್ತು ರೋಟಿಯ ಜೊತೆ ಅದು ಒಂದೇ ಆಗಿರುತ್ತದೆ,' ಎನ್ನುತ್ತಾರೆ ಸಲಿಮನ್. 'ಅದು ಎರಡರಲ್ಲಿ ಒಂದು ಅಥವಾ ಬೇರೆ. ಇಲ್ಲಿರುವ ಪ್ರತಿಯೊಬ್ಬರದ್ದೂ ಇದೇ ಪರಿಸ್ಥಿತಿ. ಅನೇಕ ಜನರು ಕೇವಲ ಉಳಿವಿಗಾಗಿ ಹಣ ತರುತ್ತಾರೆ'
ಅಂತಿಮವಾಗಿ ನೌಗರ್‌ನಲ್ಲಿರುವ ಇನ್ನೊಂದು ಆಸ್ಪತ್ರೆಯಲ್ಲಿ ಆಕೆಯನ್ನು ಮರುದಿನ ದಾಖಲಿಸಲಾಯಿತು. “ಅಲ್ಲಿಯ ಸಿಬ್ಬಂದಿಗಳಲ್ಲಿ ಕೆಲವರು ಮುಸ್ಲಿಮರಿದ್ದರು, ಅವರು ನಮಗೆ ಪುನರ್ ಭರವಸೆ ನೀಡಿದರು. ವೈದ್ಯರು ಮುಂದಿನ ಕೆಲವು ದಿನಗಳ ಕಾಲ ಚಿಕಿತ್ಸೆ ನೀಡಿದರು,” ಎಂದು ಸಲಿಮನ್ ಹೇಳಿದರು.
ಒಂದು ವಾರದ ನಂತರ ಶಮ್ಸುನಿಸಾ ಅವರನ್ನು ಬಿಡುಗಡೆ ಮಾಡಿದಾಗ, ಅವರ ವೈದ್ಯಕೀಯ ವೆಚ್ಚ ರೂ. 35,000ಕ್ಕೆ ಏರಿತ್ತು. “ನಾವು ನಮ್ಮಲ್ಲಿದ್ದ ಆಡುಗಳನ್ನು ರೂ. 16,000 ಕ್ಕೆ ಮಾರಿದೆವು,” ಎನ್ನುತ್ತಾರೆ ಸಲಿಮನ್. “ನಾವು ಅವುಗಳನ್ನು ತರಾತುರಿಯಲ್ಲಿ ಮಾರದೇ ಇರುತ್ತಿದ್ದರೆ ಅವುಗಳಿಗೆ ಕನಿಷ್ಠ 30,000 ರೂ. ಸಿಗುತ್ತಿತ್ತು, ನಮ್ಮ ಮಗ ಫಾರೂಖ್ ಸ್ವಲ್ಪ ಹಣವನ್ನು ಉಳಿತಾಯ ಮಾಡಿದ್ದ, ಅದರಿಂದ ಉಳಿದ ವೆಚ್ಚವನ್ನು ನಿಭಾಯಿಸಲು ಸಾಧ್ಯವಾಯಿತು,”
ಶಮ್ಸುನಿಸಾ ಅವರ ಪತಿ 25 ವರ್ಷದ ಫಾರೂಖ್ ಪಂಜಾಬ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೂವರು ಕಿರಿಯ ಸಹೋದರರು ಕೂಡ. ಕಷ್ಟಟ್ಟು ದುಡಿಯುತ್ತದ್ದ ಅವರು ಸ್ವಲ್ಪ ಹಣವನ್ನು ಮನೆಗೆ ಕಳುಹಿಸುತ್ತಿದ್ದರು. “ಫಾರೂಖ್‌ಗೆ ತನ್ನ ಮಗು ಗುರ್ಫಾನ್ ಜೊತೆ ಕಾಲ ಕಳೆಯಲು ಸಮಯವೂ ಇರಲಿಲ್ಲ.” ಎಂದ ಶಮ್ಸುನಿಸಾ “ನಾವಾದರೂ ಏನು ಮಾಡುವುದು? ಇಲ್ಲಿ ಯಾವುದೇ ಕೆಲಸ ಇಲ್ಲ,”
“ನನ್ನ ಗಂಡು ಮಕ್ಕಳು ಹಣ ಗಳಿಸುವುದಕ್ಕಾಗಿ ವಲಸೆಹೋದರು,” ಎನ್ನುತ್ತಾರೆ ಸಲಿಮನ್, ನೌಗರ್‌ನಲ್ಲಿ ಟೊಮೆಟೋ ಮತ್ತು ಮೆಣಸು ಬೆಳೆಯುತ್ತಾರೆ. ಫಾರೂಖ್ ಮತ್ತು ಅವರ ಸಹೋದರರಂತ ಭೂಮಿ ರಹಿತ ಕೆಲಸಗಾರರು ದಿನವಿಡೀ ಕೆಲಸ ಮಾಡಿದರೆ ಗಳಿಸುವುದು ರೂ. 100 ಮಾತ್ರ. “ಇದರ ಜೊತೆಯಲ್ಲಿ ಅರ್ಧ ಕೆಜಿ ಟೊಮೆಟೋ ಅಥವಾ ಮೆಣಸು ವಾರದಲ್ಲಿ ಎರಡು ಬಾರಿ ಇದರೊಂದಿಗೆ ಸಿಗುತ್ತದೆ, ಅದು ಯಾವುದಕ್ಕೂ ಸಾಲದು,” ಫಾರೂಖ್ ಒಂದು ದಿನ ಕೂಲಿ ಮಾಡಿದರೆ 400 ರೂ. ಗಳಿಸುತ್ತಾನೆ. ಆದರೆ ಆತನಿಗೆ ವಾರದಲ್ಲಿ ಕೆಲಸ ಸಿಗುವುದು 2-3 ದಿನಗಳು ಮಾತ್ರ. “ಕೋವಿಡ್-19 ಹರಡಿದಾಗಿನಿಂದ ನಾವು ಬದುಕಿ ಉಳಿಯಲು ಶಕ್ತರಾದೆವು. ಆವಾಗ ನಮಗೆ ಸಾಕಾಗುವಷ್ಟು ತಿನ್ನಲೂ ಇರಲಿಲ್ಲ,”
ಒಂದೇ ದಿನ ಕುಟುಂವು ದಾಲ್ ಮತ್ತು ತರಕಾರಿ ಅಡುಗೆ ಮಾಡುವುದನ್ನು ನಿಲ್ಲಿಸಿತು. “ಅನ್ನ ಮತ್ತು ರೋಟಿಯ ಜೊತೆ ಅದು ಒಂದೇ ಆಗಿರುತ್ತದೆ,” ಎನ್ನುತ್ತಾರೆ ಸಲಿಮನ್. “ಅದು ಎರಡರಲ್ಲಿ ಒಂದು ಅಥವಾ ಬೇರೆ. ಇಲ್ಲಿರುವ ಪ್ರತಿಯೊಬ್ಬರದ್ದೂ ಇದೇ ಪರಿಸ್ಥಿತಿ. ಅನೇಕ ಜನರು ಕೇವಲ ಉಳಿವಿಗಾಗಿ ಹಣ ತರುತ್ತಾರೆ.”
ಉತ್ತರ ಪ್ರದೇಶದ ಒಂಬತ್ತು ಜಿಲ್ಲೆಗಳ ಹೆಚ್ಚಿನ ಎಲ್ಲ ಗ್ರಾಮಗಳಲ್ಲಿ ಸಾಂಕ್ರಮಿಕ ಹರಡಿದ ಮೊದಲ ಮೂರು ತಿಂಗಳುಗಳಲ್ಲಿ ( ಏಪ್ರಿಲ್-ಜೂನ್ 2020) ಜನರ ಸಾಲದ ಪ್ರಮಾಣ ಶೇ.83ರಷ್ಟು ಹೆಚ್ಚಾಗಿದೆ. ಈ ಅಂಕಿಅಂಶವು ಕಲೆಕ್ಟ್ (COLLECT) ಎಂಬ ತಳಮಟ್ಟದ ಸಂಘಟನೆಗಳ ಸಂಗ್ರಹ. ಈ ಸಂಸ್ಥೆಯ ದಾಖಲೆಗಳ ಪ್ರಕಾರ 2020ರ ಜುಲೈ-ಸೆಪ್ಟೆಂಬರ್ ಮತ್ತು ಅಕ್ಟೋಬರ್-ಡಿಸೆಂಬರ್ ನಡುವೆ ಸಾಲದ ಏರಿಕೆಯು ಅನುಕ್ರಮವಾಗಿ ಪ್ರತಿಶತ 87 ಮತ್ತು 80 ಆಗಿರುತ್ತದೆ.
ಸಂಕಷ್ಟದ ಪರಿಸ್ಥಿತಿಯು ಲಕ್ಷಿಮಾ ಅವರನ್ನು ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುವುದಕ್ಕೆ ದೂಡಲ್ಪಟ್ಟಿತು. 2021ರ ಡಿಸೆಂಬರ್ ಕೊನೆಯ ವಾರದಲ್ಲಿ ಮಗುವಿಗೆ ಜನ್ಮನೀಡಿದ ಅವರು ಕೇವಲ 15 ದಿನಗಳಲ್ಲೇ ದುಡಿಮೆಗೆ ಇಳಿಯುವಂತಾಯಿತು. “ಉದ್ಯೋಗದಾತ ನಮ್ಮ ಪರಿಸ್ಥಿತಿಯನ್ನು ನೋಡುತ್ತಾರೆಂಬ ನಂಬಿಕೆ ಇದೆ ಮತ್ತು ಆಹಾರಕ್ಕಾಗಿ ಹೆಚ್ಚುವರಿ ಹಣ ನೀಡಬಹುದೆಂಬ ನಂಬಿಕೆ ಇದೆ,” ಎಂದು ಮಗುವಿನ ತೊಟ್ಟಿಲನ್ನು ತೂಗುತ್ತ ಹೇಳಿದರು. ಆಕೆ ಮತ್ತು ಆಕೆಯ ಪತಿ 32 ವರ್ಷದ ಸಂಜಯ್ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡಿ ದಿನಕ್ಕೆ 350ರೂ. ಗಳಿಸುತ್ತಾರೆ. ಈ ಇಟ್ಟಿಗೆ ಗೂಡು ಇವರ ಗ್ರಾಮದಿಂದ ಆರು ಕಿಲೋಮೀಟರ್ ದೂರದಲ್ಲಿರುವ ದೇವ್‌ಚಂದ್‌ಪುರದಲ್ಲಿದೆ.
ಈ ಬಾರಿ ಗರ್ಭಧರಿಸಿರುವ ಲಕ್ಷಿಮಾ ಅವರಿಗೆ ಮನೆಯಲ್ಲೇ ಹೆರಿಗೆ ಬೇಡ ಎಂದು ಮಂಗಳ ರಾಜ್‌ಭಾರ್ ಸಲಹೆ ನೀಡಿದರು. “ಆಕೆಯನ್ನು ಒಪ್ಪಿಸುವುದು ಅಷ್ಟು ಸುಲಭವಾಗಿರಲಿಲ್ಲ, ಅದಕ್ಕಾಗಿ ಆಕೆಯನ್ನು ದೂರುವುದಿಲ್ಲ,” ಎನ್ನುತ್ತಾರೆ ರಾಜ್‌ಭಾರ್.” ಅಂತಿಮವಾಗಿ ಆಕೆ ಒಪ್ಪಿಕೊಂಡಿದ್ದಾರೆ,”
ಲಕ್ಷಿಮಾ ಮತ್ತು ಹಿರಾಮಣಿ ಈ ಬಾರಿ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದರು. ಸಿಬ್ಬಂದಿ ಲಕ್ಷಿಮಾ ಅವರ ದಾಖಲಾತಿಗೆ ನಿರಾಕರಿಸಿದಾಗ ರಾಜ್‌ಭಾರ್ ಅವರನ್ನು ಕರೆಯುವುದಾಗಿ ಎಚ್ಚರಿಸಿದರು. ಸಿಬ್ಬಂದಿ ಸೋತರು. ಮೂರು ವರ್ಷಗಳ ಹಿಂದೆ ಯಾವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತನ್ನ ಮಗುವನ್ನು ಕಳೆದುಕೊಂಡರೋ ಅದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದರು. ಕೊನೆಯಲ್ಲಿ ಆ ಕೆಲವು ಮೀಟರ್‌ಗಳು ಈ ಎಲ್ಲ ವ್ಯತ್ಯಾಸಕ್ಕೆ ಕಾರಣವಾಗಿತ್ತು.
ಪಾರ್ಥ್ ಎಂ . ಎನ್ ಇವರು ಠಾಕೂರ್ ಫ್ಯಾಮಿಲಿ ಫೌಂಡೇಶನ್ ಇದರ ದೇಣಿಗೆಯ ಮುಖೇನ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಹಕ್ಕುಗಳ ಕುರಿತು ವರದಿ ಮಾಡುತ್ತಾರೆ . ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ಸಂಪಾದನೆಯಲ್ಲಿ ಯಾವುದೇ ನಿಯಂತ್ರಣವನ್ನು ಹೊಂದಿರುವುದಿಲ್ಲ .
ಅನುವಾದ: ಸೋಮಶೇಖರ ಪಡುಕರೆ