ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯಲ್ಲಿನ ಮಡಿಯಾ ಸಮುದಾಯದ ಮಹಿಳೆಯರ ಪಾಲಿಗೆ ಮುಟ್ಟಿನ ಕುರಿತಾದ ಮೂಢನಂಬಿಕೆಯು ಕಂಟಕವಾಗಿ ಪರಿಣಮಿಸಿದೆ. ಇದು ಮಹಿಳೆಯರನ್ನು ʼಕುರ್ಮಾ ಘರ್ʼ ಎಂದು ಕರೆಯಲಾಗುವ ಕೊಳಕಾದ ಹಾಗೂ ಈಗಲೋ ಅಗಲೋ ಕುಸಿದು ಬೀಳುವಂತಿರುವ ಗುಡಿಸಲುಗಳಲ್ಲಿ ಉಳಿಯುವಂತೆ ಮಾಡುವುದರ ಜೊತೆಗೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮಬೀರುತ್ತಿದೆ