ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಮೂಲಕ ಗ್ರಾಮೀಣ ಮಹಾರಾಷ್ಟ್ರದ ಮಹಿಳೆಯರ ದೃಢತೆ ಮತ್ತು ಕಲಾತ್ಮಕತೆಯನ್ನು ನಮ್ಮ ವೆಬ್ಸೈಟ್ನಲ್ಲಿ ಅನಾವರಣಗೊಳಿಸಿದ ಹೆಮ್ಮೆ ನಮ್ಮದು. ಈ ಅದ್ಭುತ ಕಾರ್ಯಕ್ರಮದ ಆರಂಭವು ಮಾರ್ಚ್ 8, 2017ರಂದು ಅಂತರರಾಷ್ಟ್ರೀಯ ಮಹಿಳಾ ದಿನದ ಉದ್ದೇಶಕ್ಕೆ ಗೌರವ ಸಲ್ಲಿಸಿದಂತೆ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ.
ಗ್ರೈಂಡ್ಮಿಲ್ಸ್ ಹಾಡುಗಳ ದತ್ತಸಂಚಯವನ್ನು ಸಾಮಾಜಿಕ ಕಾರ್ಯಕರ್ತರು ಮತ್ತು ಪ್ರಖ್ಯಾತ ವಿದ್ವಾಂಸರೂ ಆಗಿರುವ ದಿವಂಗತ ಹೇಮಾ ರಾಯ್ಕರ್ ಮತ್ತು ಗೈ ಪೊಯಿಟ್ವಿನ್ ರೂಪಿಸಿದ್ದಾರೆ, ಅವರು ಪುಣೆಯಲ್ಲಿನ ಸಾಮಾಜಿಕ ವಿಜ್ಞಾನದ ಸಹಕಾರಿ ಸಂಶೋಧನಾ ಕೇಂದ್ರದ ಸಹ-ಸ್ಥಾಪಕರೂ ಆಗಿದ್ದು. ಒಟ್ಟಾಗಿ ಅವರು 20 ವರ್ಷಗಳ ಅವಧಿಯಲ್ಲಿ ಮಹಾರಾಷ್ಟ್ರದ 110,000ಕ್ಕೂ ಹೆಚ್ಚು ಜಾನಪದ ಗೀತೆಗಳನ್ನು ಸಂಗ್ರಹಿಸಿದ್ದಾರೆ.
ಫ್ರೆಂಚ್ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ನ ಕಂಪ್ಯೂಟೇಷನಲ್ ಸಂಗೀತಶಾಸ್ತ್ರಜ್ಞ ಮತ್ತು ಮಾಜಿ ಎಂಜಿನಿಯರ್ ಆಗಿರುವ ಬರ್ನಾರ್ಡ್ ಬೆಲ್ 1990ರ ದಶಕದ ಉತ್ತರಾರ್ಧದಲ್ಲಿ ಈ ಯೋಜನೆಯೊಡನೆ ಕೈ ಜೋಡಿಸಿದರು, ಅವರು ಪಠ್ಯಗಳು ಮತ್ತು ಟಿಪ್ಪಣಿಗಳ ಡೇಟಾಬೇಸ್ ಅನ್ನು ವಿನ್ಯಾಸಗೊಳಿಸಿ 120 ಗಂಟೆಗಳಿಗಿಂತ ಹೆಚ್ಚು ಸಂಯೋಜಿತ ಆಡಿಯೊವನ್ನು ರೆಕಾರ್ಡ್ ಮಾಡಿದರು. ಈ ಸಂಗ್ರಹವನ್ನು ಹರಿಯಾಣದ ಗುರ್ಗಾಂವ್ನಲ್ಲಿರುವ ಆರ್ಕೈವ್ಸ್ ಎಂಡ್ ರಿಸರ್ಚ್ ಸೆಂಟರ್ ಫಾರ್ ಎಥ್ನೊ ಮ್ಯೂಸಿಕಾಲಜಿ ನಿರ್ವಹಿಸುತ್ತಿತ್ತು. ನಂತರ ಇದನ್ನು ನಂತರ ಪ್ರೊ. ಬೆಲ್ ಅವರ ಸೌಜನ್ಯದೊಡನೆ ಫ್ರಾನ್ಸ್ನ ಐಕ್ಸ್ ಎನ್ ಪ್ರೊವೆನ್ಸ್ನಲ್ಲಿರುವ 'ಸ್ಪೀಚ್ ಅಂಡ್ ಲ್ಯಾಂಗ್ವೇಜ್ ಡಾಟಾ ರೆಪೊಸಿಟರಿಗೆ' ಕಳುಹಿಸಲಾಯಿತು. ನಂತರ, ಈ ಡೇಟಾಬೇಸ್ ಸಾರ್ವಜನಿಕವಾಗಿ ಆರ್ಕೈವ್ ಮಾಡುತ್ತಿರುವ ಅನೇಕ ಮಾಹಿತಿ ವ್ಯವಸ್ಥೆಗಳಿಗೆ ಮಾದರಿಯಾಗಿ ಹೊರಹೊಮ್ಮಿತು. ಅಲ್ಲದೆ, ಈ ಡೇಟಾಬೇಸ್ ಮಾನವಿಕ ಸಂಬಂಧಿತ ವಿಷಯಗಳಲ್ಲಿ ಕೆಲಸ ಮಾಡುವ ಡಿಜಿಟಲ್ ತಂತ್ರಜ್ಞಾನದ ಅಭಿವೃದ್ಧಿಯ ಹಾದಿಯಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತಾಯಿತು.
1993 ಮತ್ತು 1998ರ ನಡುವೆ, 'ಗ್ರೈಂಡ್ಮಿಲ್ ಸಾಂಗ್ಸ್ ಪ್ರಾಜೆಕ್ಟ್'ಗೆ ಯುನೆಸ್ಕೋ, ನೆದರ್ಲ್ಯಾಂಡ್ಸ್ ಅಭಿವೃದ್ಧಿ ಸಹಕಾರ ಸಚಿವಾಲಯ ಮತ್ತು ಸ್ವಿಟ್ಜರ್ಲ್ಯಾಂಡ್ನಲ್ಲಿನ' ಪ್ರೊಗ್ರೆಸ್ ಆಫ್ ಹುಮನ್ ಕೈಂಡ್ ಚಾರ್ಲ್ಸ್ ಲಿಯೋಪೋಲ್ಡ್ ಮೇಯರ್ ಫೌಂಡೇಶನ್' ಧನಸಹಾಯವನ್ನು ನೀಡಿದವು.
ಪ್ರೊ. ಬೆಲ್ ಹೇಳುತ್ತಾರೆ, "ನಾನು ಹೇಮಾ ರಾಯ್ಕರ್ ಮತ್ತು ಗೈ ಪೊಯಿಟ್ವಿನ್ ಅವರೊಂದಿಗೆ ವೈಯಕ್ತಿಕ ಬದ್ಧತೆಯನ್ನು ಹೊಂದಿದ್ದೆ, ಅದರ ಅಡಿಯಲ್ಲಿ ನಾನು 'ಗ್ರೈಂಡ್ ಮಿಲ್ ಸಾಂಗ್ಸ್' ಯೋಜನೆಯ ಪ್ರಕಟಣೆ / ದಾಖಲೀಕರಣ / ಭಾಷಾಂತರ ಮತ್ತು ಈ ಹಾಡುಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕಾಗಿತ್ತು. ಜನವರಿ, 2015ರಲ್ಲಿ, ನಾನು ಅಗತ್ಯವಾದ ಸಾಧನಗಳನ್ನು (ಉಪಕರಣಗಳನ್ನು ಒದಗಿಸಿದೆ ) ಪುಣೆಯಲ್ಲಿನ 'ಗ್ರೈಂಡ್ ಮಿಲ್ ಸಾಂಗ್ಸ್'ನಲ್ಲಿ ಕೆಲಸ ಮಾಡುವ ತಜ್ಞರ ತಂಡಕ್ಕೆ, ಇದು ಯೋಜನೆಗೆ ಹೊಸ ಹುರುಪನ್ನು ನೀಡಿತು. ಹಾಡುಗಳನ್ನು ಪ್ರಕಟಿಸಲು ನಾವು ಆರಂಭಿಕ ಸ್ವರೂಪದಲ್ಲಿಯೂ ಕೆಲಸ ಮಾಡಿದ್ದೇವೆ. ಡೇಟಾಬೇಸ್ ಬದಲಾವಣೆಗಳನ್ನು \ ದೇವನಾಗರಿಯ ಬಹು ಎನ್ಕೋಡಿಂಗ್ಗಳೊಂದಿಗೆ ಪಠ್ಯವನ್ನು ಮರುರೂಪಿಸಲು ಮತ್ತು ಟ್ರಾನ್ಸ್ಕೋಡ್ ಮಾಡಲು ಮಾಡಲು ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಸಂಗ್ರಹಿಸುವ ಅಗತ್ಯವಿತ್ತು”
ಈ ಅಭಿಯಾನದಲ್ಲಿ ʼಪರಿʼಯ ಪಾಲ್ಗೊಳ್ಳುವಿಕೆಯೊಂದಿಗೆ ಹಳೆಯ ಮತ್ತು ಹೊಸ ಸಹಯೋಗಿಗಳ ಸಹಾಯದಿಂದ ಯೋಜನೆ ಮತ್ತೊಮ್ಮೆ ಪ್ರಾರಂಭವಾಯಿತು. ಅನುವಾದವಾಗದಿರುವ 70,000 ಹಾಡುಗಳನ್ನು ಅನುವಾದಿಸುವ ಜವಾಬ್ದಾರಿಯನ್ನು ಪುಣೆಯ ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್ನ ಮಾಜಿ ದಾಖಲೀಕರಣ ಅಧಿಕಾರಿ ಆಶಾ ಒಗಲೆ ಮತ್ತು ಅವರ ಸಹೋದ್ಯೋಗಿಗಳಾದ ರಜನಿ ಖಲಡ್ಕರ್ ಮತ್ತು ಜಿತೇಂದ್ರ ಮೇಡ್ ವಹಿಸಿಕೊಂಡಿದ್ದಾರೆ. ಇವರೆಲ್ಲರ ಮರಾಠಿ ಭಾಷೆಯ ಜ್ಞಾನ ಮತ್ತು ಗ್ರಾಮೀಣ ಜೀವನದ ಬಗೆಗಿನ ಅವರ ತಿಳುವಳಿಕೆ ನಿಸ್ಸಂದೇಹವಾಗಿ ಅನುವಾದ ಪ್ರಯತ್ನದಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಲಿವೆ.
2016ರಲ್ಲಿ, ಹರಿಯಾಣದ ಸೋನಿಪತ್ನಲ್ಲಿರುವ ಅಶೋಕ್ ವಿಶ್ವವಿದ್ಯಾಲಯದೊಂದಿಗಿನ ನಮ್ಮ ಸಹಭಾಗಿತ್ವವನ್ನು ಸ್ಥಾಪಿಸಲಾಯಿತು. ಈ ಸಹಭಾಗಿತ್ವವನ್ನು ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ (ರಾಜಕೀಯ ವಿಜ್ಞಾನ) ಸಹಾಯಕ ಪ್ರಾಧ್ಯಾಪಕರಾದ ಜಿಲ್ ವರ್ನಿಯರ್ಸ್ ವಹಿಸಿದ್ದರು. ಯಂಗ್ ಇಂಡಿಯಾ ಫೆಲೋಶಿಪ್, 2016–17ರ ಮೂರು ಫೆಲೋಗಳಾದ, ಮೆಹರೀಶ್ ದೇವಕಿ, ಸ್ನೇಹ ಮಾಧುರಿ, ಮತ್ತು ಪೂರ್ಣಪ್ರಜ್ಞಾ ಕುಲಕರ್ಣಿ, ಅನುವಾದಗಳನ್ನು ಪರಿಶೀಲಿಸುತ್ತಾರೆ ಮತ್ತು ಆರ್ಕೈವ್ ಮಾಡಲು ಅಗತ್ಯವಾದ ಹೆಚ್ಚುವರಿ ಬೆಂಬಲವನ್ನು ಸಹ ನೀಡುತ್ತಾರೆ. ಪರಿಯ ವ್ಯವಸ್ಥಾಪಕ ಸಂಪಾದಕಿ ನಮಿತಾ ವಾಯ್ಕರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ (ಪರಿ) 'ಗ್ರೈಂಡ್ಮಿಲ್ ಸಾಂಗ್ಸ್ ಪ್ರಾಜೆಕ್ಟ್'ನ ಮುಖ್ಯಸ್ಥರಾಗಿದ್ದರೆ, ಅಮೆರಿಕನ್ ಇಂಡಿಯಾ ಫೌಂಡೇಶನ್ ಕ್ಲಿಂಟನ್ ಫೆಲೋ ಒಲಿವಿಯಾ ವೇರಿಂಗ್ ಸಹ ಡೇಟಾಬೇಸ್ ಕ್ಯುರೇಷನ್ಗೆ ಕೊಡುಗೆ ನೀಡುತ್ತಾರೆ..
ಈ ಯೋಜನೆಯಲ್ಲಿ ದೊಡ್ಡ ಪಾತ್ರ ವಹಿಸಿರುವ ಇನ್ನೂ ಕೆಲವರೆಂದರೆ, ಭೀಮಸೇನ್ ನಾನೆಕರ್ (ಸಂದರ್ಶಕ), ದತ್ತ ಶಿಂಧೆ (ಸಂಶೋಧನಾ ಸಹಯೋಗಿ), ಮಾಳವಿಕಾ ತಾಲ್ಲೂಡ್ಕರ್ (ಛಯಾಗ್ರಾಹಣ), ಲತಾ ಭೋರ್ (ಡೇಟಾ ಇನ್ಪುಟ್) ಮತ್ತು ಗಜ್ರಾಬಾಯಿ ದಾರೇಕರ್ (ಲಿಪ್ಯಂತರ).
ಯೋಜನೆಯ ಪ್ರಮುಖ ಕಲಾವಿದೆಯಾಗಿರುವ ಗಂಗುಬಾಯಿ ಅಂಬೋರ್ ಅವರ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳ ದಾಖಲೀಕರಣ ಆಂಡ್ರೀನ್ ಬೆಲ್ ಅವರದು.
ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಈ ಇತ್ತೀಚಿನ ಆವೃತ್ತಿಗೆ ನಿಮ್ಮನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ನೀವು ಇಲ್ಲಿನ ಸಂಗ್ರದಲ್ಲಿನ ಹಾಡುಗಳನ್ನು ಆಸ್ವಾದಿಸಬೇಕೆನ್ನುವುದು ನಮ್ಮ ಬಯಕೆ. ಮುಂಬರುವ ದಿನಗಳಲ್ಲಿ ಈ ಸಂಗ್ರಹಕ್ಕೆ ಮತ್ತಷ್ಟು ಮಗದಷ್ಟು ಹಾಡುಗಳು ಸೇರಲಿವೆ. ಈ ಸಂದರ್ಭದಲ್ಲಿ ʼಪರಿʼ ʼಗ್ರೈಂಡ್ಮಿಲ್ ಸಾಂಗ್ಸ್ʼ ಪ್ರಾಜೆಕ್ಟ್ನ ಭಾಗವಾಗಿರುವ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತದೆ. ವಿಶೇಷವಾಗಿ ಗ್ರಾಮೀಣ ಮಹಾರಾಷ್ಟ್ರದ ಸಾವಿರಾರು ಮಹಿಳೆಯರ ಜೀವನ ಮತ್ತು ಸಾಧನೆಗಳನ್ನು ಗೌರವಿಸುತ್ತದೆ. ಅವರು ಇಲ್ಲದೆ ಈ ಹಾಡುಗಳು ಮತ್ತು ಡೇಟಾಬೇಸ್ ಅನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.