2023ರ ಪರಿಯ ಉತ್ತಮ ಕ್ಷಣಗಳು

ಜನಸಾಮಾನ್ಯರ ಬದುಕಿನ ವಿವರಗಳನ್ನು ದಾಖಲಿಸುವ ಕೆಲಸದಲ್ಲಿ ನಾವು 9ನೇ ವರ್ಷವನ್ನು ತಲುಪಿದ್ದೇವೆ. ಈ ವರ್ಷದ ಕೆಲವು ಉತ್ತಮ ಬರಹ ಹಾಗೂ ಇತ್ಯಾದಿ ಕೆಲಸಗಳ ವಿವರ ಇಲ್ಲಿದೆ

ಡಿಸೆಂಬರ್ 23, 2023 | ಪ್ರೀತಿ ಡೇವಿಡ್

2023ರ ಗೆರೆಗಳು, ಗದ್ಯ ಮತ್ತು ದನಿಗಳು

ಆರ್ಕೈವ್‌ ಪತ್ರಿಕೋದ್ಯಮವು ಕವಿತೆ ಮತ್ತು ಹಾಡುಗಳನ್ನು ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದಕ್ಕೆ ಉದಾಹರಣೆ ಇಲ್ಲಿದೆ. ಈ ಕವಿತೆ ಮತ್ತು ಹಾಡುಗಳು ಎಲ್ಲವೂ ಅಸ್ತವ್ಯಸ್ತಗೊಂಡ ಸಂದರ್ಭದಲ್ಲಿ ನಮ್ಮ ಜಗತ್ತು ಮತ್ತು ಜೀವನವನ್ನು ರೂಪಿಸುವ ಸ್ಥಿತಿಸ್ಥಾಪಕತ್ವ ಲಯಗಳಾಗಿ ಒದಗುತ್ತವೆ

ಡಿಸೆಂಬರ್ 24, 2023 | ಪ್ರತಿಷ್ಠಾ ಪಾಂಡ್ಯ , ಜೋಶುವಾ ಬೋಧಿನೇತ್ರ ಮತ್ತು ಅರ್ಚನಾ ಶುಕ್ಲಾ

ಪರಿ ಲೈಬ್ರರಿ: ಅಂಕಿ-ಸಂಖ್ಯೆಗಳಾಚೆಗಿನ ಲೋಕ

ಕಳೆದ 12 ತಿಂಗಳುಗಳಲ್ಲಿ ನೂರಾರು ವರದಿಗಳು ಮತ್ತು ಸಮೀಕ್ಷೆಗಳು, ಸಾವಿರಾರು ಪದಗಳನ್ನು ನಮ್ಮ ಲೈಬ್ರರಿಯಲ್ಲಿ ಆರ್ಕೈವ್ ಮಾಡಲಾಗಿದೆ ಮತ್ತು ಅವುಗಳಲ್ಲಿ ಪ್ರತಿಯೊಂದೂ ನ್ಯಾಯ ಮತ್ತು ಹಕ್ಕುಗಳ ಸಮಸ್ಯೆಗಳ ವಿರುದ್ಧದ ಹೋರಾಟವನ್ನು ಬೆಂಬಲಿಸುತ್ತದೆ ಮತ್ತು ಮೌಲ್ಯೀಕರಿಸುತ್ತದೆ

ಡಿಸೆಂಬರ್ 25, 2023 | ಪರಿ ಲೈಬ್ರರಿ

2023ರ ಸಂಪಾದಕರ ಆಯ್ಕೆಯ ಕೆಲವು ಪರಿ ಸಾಕ್ಷ್ಯಚಿತ್ರಗಳು

ಪಾರಂಪರಿಕ ಗ್ರಂಥಾಲಯಗಳಿಂದ ಹಿಡಿದು ನವೀಕರಿಸಬಹುದಾದ ಇಂಧನ, ಡೋಕ್ರಾ ಕಲೆ, ಅಲ್ಫೋನ್ಸ್ ಮಾವು ಬೆಳೆಗಾರರವರೆಗೆ, ನಾವು ನಮ್ಮ ಗ್ಯಾಲರಿ ವಿಭಾಗಕ್ಕೆ ವೈವಿಧ್ಯಮಯ ಚಲನಚಿತ್ರಗಳನ್ನು ಸೇರಿಸಿದ್ದೇವೆ. ಈ ವರ್ಷದ ಕೊನೆಯಲ್ಲಿ ಈ ವರ್ಷದ ಉತ್ತಮ ಚಿತ್ರಗಳನ್ನು ಒಂದೆಡೆ ಕಣ್ತುಂಬಿಸಿಕೊಳ್ಳಿ!

ಡಿಸೆಂಬರ್ 26, 2023 | ಶ್ರೇಯಾ ಕಾತ್ಯಾಯಿನಿ , ಸಿಂಚಿತಾ ಮಾಝಿ ಮತ್ತು ಊರ್ಜಾ

2023: ಪರಿಭಾಷಾ - ಜನರ ಭಾಷೆಗಳಲ್ಲಿ ಜನರ ಆರ್ಕೈವ್

ಪರಿ ತನ್ನ ವರದಿ ಹಾಗೂ ಲೇಖನಗಳನ್ನು 14 ಭಾರತೀಯ ಭಾಷೆಗಳಲ್ಲಿ ಪ್ರಕಟಿಸುತ್ತದೆ. ಕೆಲವೊಮ್ಮೆ ಏಕಕಾಲದಲ್ಲಿ ಅಷ್ಟೂ ಭಾಷೆಗಳಲ್ಲಿ ವರದಿಗಳನ್ನು ಪ್ರಕಟಿಸಲಾಗುತ್ತದೆ. ಇದೇ ಕಾರಣಕ್ಕಾಗಿ ನಮ್ಮ ಬಹುಮಾಧ್ಯಮ ವೇದಿಕೆ ಅನನ್ಯವೆನ್ನಿಸಿಕೊಳ್ಳುತ್ತದೆ. ಆದರೆ ಇದು ಪರಿಭಾಷಾ ತಂಡ ಮಾಡುವ ಕೆಲಸಗಳ ಒಂದು ಸಣ್ಣ ಝಲಕ್‌ ಮಾತ್ರ. ನಮ್ಮ ಪರಿಭಾಷಾ ತಂಡದ ಕೆಲಸಗಳ ಕುರಿತು ಇನ್ನಷ್ಟು ತಿಳಿದುಕೊಳ್ಳು ಮುಂದಕ್ಕೆ ಓದಿ

ಡಿಸೆಂಬರ್ 27, 2023 | ಪರಿಭಾಷಾ ತಂಡ

2023: ಕತೆ ಹೇಳುವ ಚಿತ್ರಗಳು

ಈ ವರ್ಷ ಪರಿಯಲ್ಲಿ ಸಾವಿರಾರು ಚಿತ್ರಗಳು ಕಾಣಿಸಿಕೊಂಡವು. ಅವುಗಳಲ್ಲಿ ಒಂದೊಂದೂ ಒಂದೊಂದು ಅದ್ಭುತ ಕತೆಯನ್ನು ಹೇಳುತ್ತವೆ. ನಮ್ಮನ್ನು ಗ್ರಾಮೀಣ ಭಾರತಕ್ಕೆ ಕರೆದೊಯ್ದು ಅಲ್ಲಿನ ಬದುಕಿನ ಕತೆಯನ್ನು ಹೇಳುವ ಕೆಲವು ಚಿತ್ರಗಳು ಇಲ್ಲಿವೆ

ಡಿಸೆಂಬರ್ 28, 2023 | ಬಿನೈಫರ್ ಭರೂಚಾ

2023: ಎಳವೆಯಲ್ಲೇ ಪತ್ರಿಕೋದ್ಯಮದ ಪಾಠ!

ಪರಿಯ ಕಥೆಗಳ ವಿಶಾಲ ಸಂಗ್ರಹವು ದೇಶಾದ್ಯಂತದ ತರಗತಿಗಳಲ್ಲಿ ಕಾಣಿಸಿಕೊಳ್ಳುವುದು 'ನಮ್ಮ ಕಾಲದ ಜೀವಂತ ಪಠ್ಯಪುಸ್ತಕ'ದ ರೂಪದಲ್ಲಿ. ಮತ್ತು ವಿದ್ಯಾರ್ಥಿಗಳು ಸಹ ಈ ಸಂಗ್ರಹಕ್ಕೆ ಕೊಡುಗೆ ನೀಡಲು ಬಯಸುತ್ತಾರೆ, ಅದೇ ಹುಮ್ಮಸ್ಸಿನಲ್ಲಿ ಅವರು ನಮ್ಮೊಂದಿಗೆ ತರಬೇತಿ ಪಡೆಯುತ್ತಲೇ ಗ್ರಾಮೀಣ ಸಮಸ್ಯೆಗಳ ಬಗೆಗಿನ ನಮ್ಮ ಸಂಗ್ರಹಕ್ಕೆ ಸಂದರ್ಶನ, ಛಾಯಾಚಿತ್ರ, ದಾಖಲೀಕರಣ ಇತ್ಯಾದಿ ಕೊಡುಗೆಗಳನ್ನು ನೀಡುತ್ತಾರೆ

ಡಿಸೆಂಬರ್ 29, 2023 | ಪರಿ ಎಜುಕೇಷನ್ ತಂಡ

ಪರಿ ಸೋಷಿಯಲ್‌ ಮೀಡಿಯಾ ಹ್ಯಾಂಡಲ್ಲುಗಳ ಸುತ್ತ ಒಂದು ಪಯಣ

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ನಮಗೆ ನಮ್ಮ ವರದಿಗಳನ್ನು ವಿವಿಧ ಜನರಿಗೆ ತಲುಪಿಸಲು ಸಾಧ್ಯವಾಗುತ್ತಿದೆ

ಡಿಸೆಂಬರ್ 30, 2023 | ಪರಿ ತಂಡ

2023: ಮುಖವೆಂದರೆ ಎದೆಯ ಕನ್ನಡಿಯಷ್ಟೇ ಅಲ್ಲ

ಬುಡಕಟ್ಟು ಜನರು, ಪಶ್ಚಿಮ ಬಂಗಾಳದ ಬಿರ್ಭೂಮ್‌ನ ರೈತರು, ಕೇರಳದ ಅಲಪ್ಪುಳದ ಕೋಯಾ ಸಂಗೀತಗಾರರ ಗುಂಪುಗಳು – ಹೀಗೆ ಈ ವರ್ಷ ನಮ್ಮ ಗ್ಯಾಲರಿಯು ಹತ್ತು-ಹಲವು ವೈವಿಧ್ಯಮಯ ಹೊಸ ಮುಖಗಳಿಂದ ತುಂಬಿತ್ತು

ಡಿಸೆಂಬರ್ 31, 2023 | ಪರಿ ತಂಡ

ಅನುವಾದ: ಶಂಕರ. ಎನ್. ಕೆಂಚನೂರು

PARI Team
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru