ಅಂತರ್ಜಾಲದ ಯುಗದಲ್ಲಿ, ಕೆಂಪು ಅಂಚೆ ಪೆಟ್ಟಿಗೆಯು ಸಂಭ್ರಮಕ್ಕೆ ಕಾರಣವಾಗಬಹುದೇ? ಉತ್ತರಾಖಂಡದ ಪಿತೌರಾಗಢ್‌ನಲ್ಲಿನ 6 ಜಿಲ್ಲೆಗಳಲ್ಲಿನ ಜನರು ಕೆಲವೊಮ್ಮೆ ಟಪಾಲನ್ನು ಪಡೆಯಲು 70 ಕಿ. ಮೀ. ಪ್ರಯಾಣಿಸುತ್ತಿದ್ದು, ʼಪರಿʼಯಲ್ಲಿನ ಜೂನ್ ತಿಂಗಳ ಒಂದು ವರದಿಯು ಇಲ್ಲಿ, ಅಂಚೆ ಕಚೇರಿಯೊಂದರ ಸ್ಥಾಪನೆಯನ್ನು ತ್ವರಿತಗೊಳಿಸಿತಲ್ಲದೆ, ಊರಿನ ಜನರು ಸಿಹಿಯನ್ನು ಹಂಚುವುದರ ಮೂಲಕ ಅಂಚೆ ಪೆಟ್ಟಿಗೆಯನ್ನು ಸ್ವಾಗತಿಸಿದರು
ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು shailaja1.gp@gmail.com ಇ-ಮೈಲ್ ಮೂಲಕ ಸಂಪರ್ಕಿಸಬಹುದು.
Author
Arpita Chakrabarty
Arpita Chakrabarty is a Kumaon-based freelance journalist and a 2017 PARI fellow.