ಭಾರತದಲ್ಲಿ ನಡೆಯುವ ಜಾತ್ರಗಳಲ್ಲಿ ಕಂಡು ಬರುವ ಮನರಂಜನೆಯ ಆಟಗಳಲ್ಲಿ ಮೌತ್ ಕಾ ಕುಂವಾ ಅಥವಾ ಸಾವಿನ ಬಾವಿಯೂ ಒಂದು. ಈ ಪ್ರದರ್ಶನವನ್ನು ನೀಡುವ ಯುವಕರು ಗುರುತ್ವಾಕರ್ಷಣೆಯನ್ನು ಧಿಕ್ಕರಿಸಿ ಮಿಂಚಿನ ವೇಗದಲ್ಲಿ ಬಾವಿಯೊಳಗೆ ಚಲಿಸುತ್ತಾ, ಸಾವಿರಾರು ಕಣ್ಣುಗಳು ತಮ್ಮನ್ನ ಎವೆಯಿಕ್ಕದೆ ನೋಡುವಂತೆ ಮಾಡುತ್ತಾರೆ. ತ್ರಿಪುರಾದಲ್ಲಿ ನಡೆದ ದುರ್ಗಾ ಪೂಜಾ ಜಾತ್ರೆಯಲ್ಲಿನ ಪ್ರದರ್ಶನದ ಒಂದು ಸಣ್ಣ ಝಲಕ್ ಇಲ್ಲಿದೆ. ಇಲ್ಲಿ ಈ ಪ್ರದರ್ಶನ ಎಷ್ಟು ಜನ-ಮನ ಸೆಳೆಯಿತೆಂದರೆ ಆಯೋಜಕರು ಇದನ್ನು ಎರಡು ದಿನಗಳ ಕಾಲ ವಿಸ್ತರಿಸುವಷ್ಟು!
ಸಯನ್‌ದೀಪ್ ರಾಯ್ ತ್ರಿಪುರಾ ರಾಜ್ಯದ ಅಗರ್ತಲಾದ ಸ್ವತಂತ್ರ ಛಾಯಾಗ್ರಾಹಕರು. ಅವರು ಸಂಸ್ಕೃತಿ, ಸಮಾಜ ಮತ್ತು ಸಾಹಸದ ಕಥೆಗಳ ಕುರಿತು ಲೇಖನಗಳನ್ನು ಬರೆಯುತ್ತಾರೆ ಮತ್ತು ಬ್ಲಿಂಕ್‌ನ ಸಂಪಾದಕರು.
Editor
Sanviti Iyer
ಸಾನ್ವಿತಿ ಅಯ್ಯರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಕಂಟೆಂಟ್ ಸಂಯೋಜಕಿ. ಅವರು ಗ್ರಾಮೀಣ ಭಾರತದ ಸಮಸ್ಯೆಗಳನ್ನು ದಾಖಲಿಸಲು ಮತ್ತು ವರದಿ ಮಾಡುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸ ಮಾಡುತ್ತಾರೆ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.