‘ನಾವು ಈಗ ಕೊರೋನವೈರಸ್ ಅಥವಾ ಬಿಸಿಲಿನ ತಾಪಕ್ಕೆ ಹೆದರುವುದಿಲ್ಲ’
ಅವರ ವೇತನ ಸ್ಥಗಿತಗೊಂಡಿದೆ, ಆಹಾರ ದಾಸ್ತಾನುಗಳೆಲ್ಲಾ ತೀರಿಹೋಗಿವೆ, ಆದ್ದರಿಂದ ಈಗ ವಾರಣಾಸಿಯ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುತ್ತಿರುವ ಬಿಹಾರದ ಗಯಾ ಕಾರ್ಮಿಕರು ನಿಧಾನವಾಗಿ ತಮ್ಮ ಮನೆಯತ್ತ ಮುಖ ಮಾಡುತ್ತಿದ್ದಾರೆ. ಇನ್ನು ಉಳಿದ ಜಿಲ್ಲೆಗಳಿಂದ ಬಂದಿರುವ ಇತರ ಕಾರ್ಮಿಕರು ದೂರದ ತಮಿಳುನಾಡಿನಲ್ಲಿ ಸಿಲುಕಿಕೊಂಡಿದ್ದಾರೆ.