ಸಂಪಾದಕರ ಟಿಪ್ಪಣಿ:

ಮಾಜಿ ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಲಕ್ಷ್ಮೀನಾರಾಯಣ್ ರಾಮದಾಸ್ ಅವರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಗಣರಾಜ್ಯೋತ್ಸವದ ಮೆರವಣಿಗೆಗೆ ಅವಕಾಶ ನೀಡುವುದಲ್ಲದೆ ಅಂದಿನ ಪೆರೇಡ್‌ ಸಂಚಾರವನ್ನು ಸುಗಮಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರ ಮತ್ತು ಪ್ರತಿಭಟನಾಕಾರರಿಗಾಗಿ ನೀಡಲಾಗಿರುವ ಈ ವೀಡಿಯೊ ಸಂದೇಶದಲ್ಲಿ, ಇತ್ತೀಚಿನ ಜನಪ್ರಿಯವಲ್ಲದ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಅವರು ಕರೆ ನೀಡಿದ್ದಾರೆ. ಮತ್ತು "ಮೂರು ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ಒಪ್ಪಿದರೆ" ಮಾತ್ರ ರೈತರು ಪ್ರತಿಭಟನೆ ಕೈಬಿಡಬೇಕೆಂದು ಹೇಳಿದ್ದಾರೆ.

ರಾಷ್ಟ್ರವನ್ನು ಜಾಗೃತಗೊಳಿಸಿದ್ದಕ್ಕಾಗಿ ಪ್ರತಿಭಟನಾಕಾರರನ್ನು ಅಭಿನಂದಿಸುವಾಗ, ಹೆಚ್ಚು ಬಿರುದುಗಳಿಂದ ಅಲಂಕರಿಸಲ್ಪಟ್ಟ ಮತ್ತು ಪ್ರಖ್ಯಾತ ಸಶಸ್ತ್ರ ಪಡೆಗಳ ಅನುಭವಿ ಸೇನಾನಿ ಹೀಗೆ ಹೇಳುತ್ತಾರೆ: “ನೀವು ಮೈ ಮರಗಟ್ಟಿಸುವ ಚಳಿ ಮತ್ತು ಕಠಿಣ ಪರಿಸ್ಥಿತಿಯಲ್ಲಿ ಈ ಹಲವು ವಾರಗಳಲ್ಲಿ ಆದರ್ಶಪ್ರಾಯವಾದ ಶಿಸ್ತನ್ನು ತೋರಿಸಿದ್ದೀರಿ ಮತ್ತು ಶಾಂತಿಯನ್ನು ಕಾಪಾಡಿಕೊಂಡಿದ್ದೀರಿ. ನೀವು ಶಾಂತಿ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸುತ್ತೀರಿ ಎಂದು ನನಗೆ ವಿಶ್ವಾಸವಿದೆ.”

ವೀಡಿಯೋ ನೋಡಿ: ಅಡ್ಮಿರಲ್‌  ರಾಮದಾಸ್‌ - ʼನೀವು ಸಂಪೂರ್ಣ ದೇಶವನ್ನು ಜಾಗೃತಗೊಳಿಸಿದ್ದೀರಿ

ಅನುವಾದ - ಶಂಕರ ಎನ್. ಕೆಂಚನೂರು

Admiral Laxminarayan Ramdas

বীর চক্র খেতাবপ্রাপ্ত অ্যাডমিরাল লক্ষ্মীনারায়ণ রামদাস ভারতীয় নৌসেনার প্রাক্তন সেনাপ্রধান।

Other stories by Admiral Laxminarayan Ramdas
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru